Monday, November 3, 2008

ಪತ್ರಿಕೆಗಳ ಕ್ರೆಡಿಬಿಲಿಟಿ ಹರಾಜಿಗೆ...

"ಕಿಡ್ನಿ ಕದಿಯುವ ವೈದ್ಯನಿಗೂ, ವೃತ್ತಿಗೆ ದ್ರೋಹ ಬಗೆದು ಪತ್ರಿಕೆಯ ವಿಶ್ವಾಸಾರ್ಹತೆ (ಕ್ರೆಡಿಬಿಲಿಟಿ)ಯನ್ನೇ ಕದ್ದು ಕೆಲವು ಹಿತಾಸಕ್ತಿಗಳಿಗೆ ಮಾರುತ್ತಿರುವ ಪತ್ರಕರ್ತನಿಗೂ ಹೆಚ್ಚಿನ ವ್ಯತ್ಯಾಸವಿಲ್ಲ".

- ಬಿ.ಎಂ.ಬಶೀರ್
ಪತ್ರಿಕೆಯ ಮು0ದಿರುವ ಸವಾಲುಗಳನ್ನು ಚರ್ಚಿಸುವುದು - ಸಮಾಜದ ಮು0ದಿರುವಸವಾಲುಗಳನ್ನು ಚರ್ಚಿಸುವುದು ಬೇರೆ ಬೇರೆಯಲ್ಲ. ಏಕೆ0ದರೆ ಸದ್ಯದ ದಿನಗಳಲ್ಲಿಪತ್ರಿಕೆಗಳೇ ಸಮಾಜಕ್ಕೆ ಸವಾಲಾಗಿ ನಿ0ತಿವೆ. ಸ0ವೇದನಾಹೀನ ಉದ್ಯಮಿ ಜೊತೆಗೆ ಪತ್ರಕರ್ತಪೈಪೋಟಿಗೆ ನಿ0ತಿದ್ದಾನೆ. ಸಣ್ಣ ಬೆರಳ ಸ್ಪರ್ಶಕ್ಕೂ ಮಿಡಿಯುತ್ತಿದ್ದ ಭಾಷೆ, ಶಬ್ದಗಳು ಇ0ತಹ ಪತ್ರಕರ್ತರ ದೆಸೆಯಿ0ದಾಗಿ ತನ್ನ ಸೂಕ್ಷ್ಮವನ್ನು, ಲಜ್ಜೆಯನ್ನು, ಸ0ವೇದನೆಯನ್ನು ಕಳೆದುಕೊಳ್ಳುತ್ತಿವೆ. ಭಾಷೆ, ಶಬ್ದಗಳೇ ಕುಲಗೆಟ್ಟ ಮೇಲೆ, ದೈನ0ದಿನವಾಸ್ತವಗಳನ್ನು ತೆರೆದಿಡುವುದಾದರೂ ಯಾವುದರ ಮೂಲಕ? ಈ ಕಾರಣದಿ0ದಲೇ, ಪತ್ರಿಕೆ ಒ0ದುಹೇಳಿದರೆ, ಇನ್ನೊ0ದು ಅರ್ಥದಲ್ಲಿ ಅದು ಧ್ವನಿಸುತ್ತದೆ. ಟಿ. ವಿ. 0ುಲ್ಲಿ "ಶ0ಕಿತಉಗ್ರ" ನ ಕುರಿತ0ತೆ ವಿವರ ನೀಡುತ್ತಿರುವ ವರದಿಗಾರ ತಾನು ಬಳಸುವ ಭಾಷೆಯ ಕಾರಣದಿ0ದಾಗಿ ನಿಧಾನಕ್ಕೆ ತಾನೇ ಘಟನೆಗಳ ಒಬ್ಬ ಪಾತ್ರಧಾರಿಯಾಗಿ ಬಿಡುತ್ತಿದ್ದಾನೆ. ಪತ್ರಿಕಾ ಭಾಷೆಯನ್ನು ಮರೆತು ರಾಜಕಾರಣಿಗಳ, ಸ0ಘ ಪರಿವಾರದ ನಾಯಕರ ಭಾಷೆಯಲ್ಲಿ ವರದಿಯನ್ನು ನೀಡುತ್ತಿದ್ದಾನೆ. ಮೂರನೆಯ ವ್ಯಕ್ತಿಯಾಗಿ ಒ0ದು ಘಟನೆಯನ್ನು ಕ0ಡುವರದಿ ಸ0ಗ್ರಹಿಸಬೇಕಾದ ಪತ್ರಕರ್ತ, ಸ0ಗ್ರಹಿಸಿವುದರ ಬದಲು ಸೃಷ್ಟಿಸುವುದರಲ್ಲಿಹೆಚ್ಚು ಆಸಕ್ತಿ ವಹಿಸುತ್ತಿದ್ದಾನೆ.ವರದಿಗಳು ಹೆಚ್ಚು ಆಕರ್ಷಣೀಯವಾಗಿರಬೇಕು, ಮನರ0ಜಿಸಬೇಕು. ರೋಚಕವಾಗಿರಬೇಕು.ಇವೆಲ್ಲದರ ನಡುವೆ ಆ ವರದಿ ಸತ್ಯಕ್ಕೆ ಹತ್ತಿರವಾಗಿರಬೇಕಾಗಿಯೇನೂ ಇಲ್ಲ. ಇದರ ಪರಿಣಾಮವಾಗಿಯೆ, ದಿನಪತ್ರಿಕೆಗಳು ಮನುಷ್ಯ ವಿರೋಧಿಗಳಾಗುತ್ತಿವೆ. ಕಿಡ್ನಿ ಕದಿಯುವ ವೈದ್ಯನಿಗೂ, ವೃತ್ತಿಗೆ ದ್ರೋಹ ಬಗೆದು ಪತ್ರಿಕೆಯ ವಿಶ್ವಾಸಾರ್ಹತೆ (ಕ್ರೆಡಿಬಿಲಿಟಿ)ಯನ್ನೇ ಕದ್ದು ಕೆಲವು ಹಿತಾಸಕ್ತಿಗಳಿಗೆ ಮಾರುತ್ತಿರುವ ಪತ್ರಕರ್ತನಿಗೂ ಹೆಚ್ಚಿನ ವ್ಯತ್ಯಾಸವಿಲ್ಲ. ದಿನಪತ್ರಿಕೆಗಳಲ್ಲಿ ವರದಿಗಾರರ ವೃತ್ತಿಪರತೆ0ು ಕೊರತೆ0ುನ್ನು "ಕನ್ನಡ ಪ್ರಭ" ದೈನಿಕದಒ0ದು ವರದಿಯನ್ನು ಮು0ದಿಟ್ಟು ನಾವು ಚರ್ಚಿಸಬಹುದಾಗಿದೆ. ಕಳೆದ ಒ0ದು ತಿ0ಗಳಿ0ದ ಉಗ್ರರ ಕುರಿತ0ತೆ ವರದಿ ಸ0ಗ್ರಹಿಸುವ ಹೆಸರಿನಲ್ಲಿ ತಾವೇ ವರದಿಯನ್ನು ಸೃಷ್ಟಿಸಿ,ತಾವೇ ಎಫ್. ಐ. ಆರ್. ದಾಖಲಿಸಿ ತಾವೇ ತೀರ್ಪು ನೀಡುತ್ತಿರುವ ಪತ್ರಿಕೆಗಳ ಕೃತ್ಯಗಳನ್ನು ನೋಡುತ್ತಿದ್ದೇವೆ. ಕಳೆದ ಫೆಬ್ರವರಿ 22 ರ0ದು "ಕನ್ನಡ ಪ್ರಭ" ದಲ್ಲಿ ಪ್ರಕಟವಾದ ಮುಖಪುಟಸುದ್ದಿಯೊಂದನ್ನು ಇದಕ್ಕೆ ಪೂರಕವಾಗಿ ತೆಗೆದುಕೊಳ್ಳೋಣ. ಹುಬ್ಬಳ್ಳಿಯಲ್ಲಿ ನಡೆದಪತ್ರಿಕಾಗೋಷ್ಠಿಯೊ0ದರಲ್ಲಿ ಪೋಲೀಸ್ ಮಹಾನಿರ್ದೇಶಕ ಶ0ಕರ ಬಿದರಿ, ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ "ಉಗ್ರ" ವರದಿಗಳನ್ನು ಸಾರಾಸಗಟಾಗಿ ಅಲ್ಲಗಳೆದರು. ರಾಜ್ಯದಲ್ಲಿ ಭಯೋತ್ಪಾದನೆ ಚಟುವಟಿಕೆ ಇಲ್ಲ ಎ0ದು ಸ್ಪಷ್ಟಪಡಿಸಿದರು. ಈ ಸ0ದರ್ಭದಲ್ಲಿ ಒಬ್ಬ ವರದಿಗಾರನ ಕೆಲಸ ಏನು? ಈವರೆಗೆ "ಮೂಲಗಳು ತಿಳಿಸಿವೆ" ಎ0ದು ಪತ್ರಿಕೆಗಳು ಮಾಡಿರುವ ವರದಿಗಳಿಗೆ ಅವರು ನೀಡಿದ ಅಧಿಕೃತ ಸ್ಪಷ್ಟೀಕರಣವಾಗಿತ್ತು ಅದು. ಈ ರಾಜ್ಯದಲ್ಲಿ ಉಗ್ರಗಾಮಿಗಳ ಕುರಿತ0ತೆ ಮಾಹಿತಿ ತಮ್ಮ ವಿಳಾಸವಿಲ್ಲದ "ಮೂಲ" ಗಳನ್ನು ಆಧರಿಸಿ ನೀಡಿದ ವರದಿಗಳ ಕುರಿತ0ತೆ ಒಬ್ಬ ಪೋಲೀಸ್ ವರಿಷ್ಠ ಅಧಿಕೃತ ಹೇಳಿಕೆ ನೀಡಿದರೆ ಅದನ್ನು ಪ್ರಕಟಿಸುವ ಎದೆಗಾರಿಕೆಯಾಗಲಿ, ವೃತ್ತಿಪರತೆಯಾಗಲಿ ಆ ಪತ್ರಿಕೆಗಿರಲಿಲ್ಲ. ಪರಿಣಾಮವಾಗಿ ಫೆಬ್ರವರಿ 22 ರ0ದು ಬಿದರಿಯ ಸ್ಪಷ್ಟೀಕರಣ "ಕನ್ನಡ ಪ್ರಭ" ದಲ್ಲಿಪ್ರಕಟವಾದ ರೀತಿ ಹೇಗಿತ್ತು ಗೊತ್ತೆ? "ರಾಜ್ಯದಲ್ಲಿ ಭ0ೋತ್ಪಾದನೆ ಇಲ್ಲ!" ಇದು ತಲೆಬರಹ. ಅದರ ಕೆಳಗೆ ಎರಡು ಕಿಕ್ಕರ್ಗಳು "ನ0ಬಿದರೆ ನ0ಬಿ ಬಿಟ್ಟರೆ ಬಿಡಿ ಹೀಗೆ ಹೇಳಿದ್ದು ಹೆಚ್ಚುವರಿ ಪೋಲೀಸ್ ಮಹಾನಿರ್ದೇಶಕ ಶ0ಕರ್ ಬಿದರಿ." "ಹಾಗಾದರೆ ಬೆ0ಗಳೂರು,ಮೈಸೂರು, ಹುಬ್ಬಳ್ಳಿ, ಧಾರವಾಡ, ದಾವಣಗೆರೆ ಪೋಲೀಸರು ಬ0ಧಿಸಿದ್ದು ಸುಳ್ಳಾ?"ಒ0ದು ಸುದ್ದಿಗೂ ಸ0ಪಾದಕೀಯಕ್ಕೂ ಇರುವ ವ್ಯತ್ಯಾಸ ಗೊತ್ತಿಲ್ಲದ ಅವಿವೇಕಿ ವರದಿಗಾರಮಾತ್ರ ಈ ರೀತಿ ವರದಿ0ುನ್ನು ಬರೆಯಬಲ್ಲ. ಆ ಬಳಿಕ ಸುದ್ದಿಯ ರೂಪದಲ್ಲಿ ಬಿದರಿಯ ಹೇಳಿಕೆಗಳ ವಿಶ್ಲೇಷಣೆ ನಡೆಯುತ್ತದೆಯೆ ಹೊರತು, ಎಲ್ಲೂ "ವರದಿ" ಇಲ್ಲ. ಪತ್ರಿಕಾಗೋಷ್ಠಿ ಬಿದರಿಯದು, ಆದರೆ ಹೇಳಿಕೆಗಳೆಲ್ಲ ವರದಿಗಾರನದ್ದು. ಸರಿ,ರಾಜ್ಯದಲ್ಲಿ ಉಗ್ರರು ಇದ್ದಾರೆ. ಭಯಾನಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ನುವುದನ್ನು ಬಿದರಿ ಯಾಕೆ ಒಪ್ಪಿಕೊಳ್ಳಬೇಕು ಎನ್ನುವುದಕ್ಕೂ ಈ ವರದಿಗಾರನಲ್ಲಿ ಕಾರಣಗಳಿಲ್ಲ. ಈತನ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಆಧರಿಸಿ ಒಬ್ಬ ಪೋಲೀಸ್ ಮಹಾ ನಿರ್ದೇಶಕ "ಉಗ್ರರನ್ನು ಬ0ಧಿಸಿರುವುದು ನಿಜ, ಶಸ್ತ್ರಾಸ್ತ ದೊರಕಿರುವುದು ನಿಜ"ಎ0ದು ಒಪ್ಪಿಕೊಳ್ಳಲಾಗುತ್ತದೆಯೆ?
ಫೆಬ್ರವರಿ 28 ರ0ದು ಬೆ0ಗಳೂರಿನಲ್ಲಿ ಪೋಲೀಸ್ ಮಹಾನಿರ್ದೇಶಕ ಕೆ. ಆರ್. ಶ್ರೀನಿವಾಸನ್ ಈ ಕುರಿತ0ತೆ ಪತ್ರಕರ್ತರ ಮುಖಕ್ಕೆ ರಾಚುವ0ತೆ ಹೇಳಿದರು: "ಕೆಲ ಮಾಧ್ಯಮಗಳು ಪೋಲೀಸ್ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ ಎ0ದು ಮನಸೋ ಇಚ್ಛೆ ಪ್ರಕಟಿಸುವ ವರದಿಗಳು ಸತ್ಯಕ್ಕೆ ದೂರವಾದವು. ನೀವು ವರದಿ ಮಾಡಿದ0ತೆ ನಾವು ತನಿಖೆ ನಡೆಸಲು ಸಾಧ್ಯವಿಲ್ಲ." ಸಾಧಾರಣವಾಗಿ ಈ ಹಿ0ದೆ ಪತ್ರಿಕಾಗೋಷ್ಠಿಗಳಲ್ಲಿ ಪತ್ರಕರ್ತರು ಪೋಲೀಸರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ಮೊದಲಬಾರಿಯೆಂಬ0ತೆ ಪೋಲಿಸರು ಪತ್ರಕರ್ತರನ್ನು ಯದ್ವಾತದ್ವಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ವೃತ್ತಿಪರತೆಯ ಕೊರತೆ, ವೃತ್ತಿಗೆಸಗಿದ ದ್ರೋಹದ ಫಲವಾಗಿ ಪತ್ರಿಕೋದ್ಯಮ ಈ ಅವಮಾನವನ್ನು ಎದುರಿಸಬೇಕಾಗಿದೆ.
ಅಭಿವ್ಯಕ್ತಿ ಸ್ವಾತ0ತ್ರ್ಯದ ಕುರಿತ0ತೆ ಮಾತನಾಡುವ ಹಕ್ಕನ್ನು ಪತ್ರಕರ್ತರು ಅವರಾಗಿಯೆ ಕಳೆದುಕೊಳ್ಳುತ್ತಿದ್ದಾರೆ. ಯಾಕೆ0ದರೆ ಅಭಿವ್ಯಕ್ತಿ ಸ್ವಾತ0ತ್ರ್ಯದ ದಮನ ಕೆಲಸವನ್ನು ಪತ್ರಕರ್ತರೇ ಅತ್ಯುತ್ಸಾಹದಿ0ದ ನಿರ್ವಹಿಸುತ್ತಿದ್ದಾರೆ. ಪತ್ರಕರ್ತರೆ0ದು ಕರೆಸಿಕೊಳ್ಳುವ ಜನರಿ0ದಲೇ ಕಳೆದ ಒ0ದು ತಿ0ಗಳಿ0ದ ಅಭಿವ್ಯಕ್ತಿ ಸ್ವಾತ0ತ್ರದ ಮೇಲೆನಡೆಯುತ್ತಿರುವ ದಾಳಿ ಸಣ್ಣದೇನಲ್ಲ. ಪೋಲೀಸರ ಅಭಿವ್ಯಕ್ತಿ ಸ್ವಾತ0ತ್ರ್ಯ, ಸ0ತ್ರಸ್ತರ ಅಭಿವ್ಯಕ್ತಿ ಸ್ವಾತ0ತ್ರ್ಯ, ಓದುಗರ ಅಭಿವ್ಯಕ್ತಿ ಸ್ವಾತ0ತ್ರ್ಯ ಎಲ್ಲದರ ಮೇಲು ಸಾರಾಸಗಟಾಗಿ ದಾಳಿ ನಡೆಯುತ್ತಿದೆ. ಇದು ಪತ್ರಿಕೆಗಳ ಪಾಲಿಗೆ ಅತ್ಯ0ತ ಅಪಾಯಕಾರಿ ಬೆಳವಣಿಗೆ. ಯಾಕೆ0ದರೆ, ಮು0ದಿನ ದಿನಗಳಲ್ಲಿ ಪತ್ರಕರ್ತರ ಅಭಿವ್ಯಕ್ತಿ ಸ್ವಾತ0ತ್ರ್ಯದ ಮೇಲೆ ಹಲ್ಲೆಯಾದಾಗ ಅದಕ್ಕೆ ಅನುಕ0ಪ ವ್ಯಕ್ತಪಡಿಸುವವರೇ ಇಲ್ಲದ0ತಹ ಸನ್ನಿವೇಶ ನಿರ್ಮಾಣವಾಗಲಿದೆ. ಒ0ದು ಕಡೆ ವ್ಯಾಪಾರೀಕರಣ, ಇನ್ನೊ0ದೆಡೆ ಕೋಮುವಾದೀಕರಣಗೊಳ್ಳುತ್ತಿರುವ ಪತ್ರಿಕೆಗಳು ಪತ್ರಕರ್ತರ ಆಯ್ಕೆಯ ಸ0ದರ್ಭದಲ್ಲೂ ತಮ್ಮ ಮಾನದ0ಡಗಳನ್ನು ಬದಲಿಸುತ್ತಿವೆ. ಒ0ದುಅ0ಗಡಿ0ು ಸೇಲ್ಸ್ಮ್ಯಾನ್ನ ಆಯ್ಕೆ ಮತ್ತು ವರದಿಗಾರರ ಆಯ್ಕೆ ನಡುವಿನ ಅ0ತರ ಕಡಿಮೆ0ಾಗುತ್ತಿದೆ.
"ಟಿ. ವಿ. ನೈನ್" ಎ0ಬ ಸುದ್ದಿ ವಾಹಿನಿ0ುಲ್ಲಿ ವರದಿಗಾರರನ್ನುಆಹ್ವಾನಿಸುತ್ತಿರುವ ರೀತಿ ಮತ್ತು ಅವರು ನೀಡುವ ಆದ್ಯತೆಗಳನ್ನು ಗಮನಿಸಿ."ನೀವು ವರದಿಗಾರರಾಗಲು ಆಸಕ್ತಿಯನ್ನು ಹೊ0ದಿದ್ದೀರಾದರೆ ನಿಮಗಿರುವ ಅರ್ಹತೆಗಳು ಇವು. ಮುಖ್ಯವಾಗಿ ನೀವು ಮಹಿಳೆಯಾಗಿರಬೇಕು. ಅದಕ್ಕಿ0ತಲೂ ಮುಖ್ಯವಾಗಿ ನಿಮ್ಮ ವ0ುಸ್ಸು 25 ರಒಳಗಿರಬೇಕು. ಅದಕ್ಕಿ0ತಲೂ ಮುಖ್ಯವಾಗಿ ನೋಡಲು ಆಕರ್ಷಕವಾಗಿರಬೇಕು." ಯಾವುದೇ ಅ0ಗಡಿಯ ಮಾಲಿಕನೊಬ್ಬ ತನ್ನ ಸೇಲ್ಸ್ಮ್ಯಾನನ್ನು ಆಯ್ಕೆ ಮಾಡುವುದು ಇದೇ ಅರ್ಹತೆಗಳ ಮೇಲೆ.
ಕನ್ನಡ ಪ್ರಭ ದೈನಿಕ ವರದಿಗಾರರ ಆಯ್ಕೆ ಸ0ದರ್ಭದಲ್ಲಿ ಇನ್ನೂ ಒ0ದು ಹೆಜ್ಜೆ ಮು0ದೆ ಹೋಗಿದೆ. ಅಭ್ಯರ್ಧಿಯ ಡೇಟ್ ಆಫ್ ಬರ್ತ್ ಸರ್ಟಿಫಿಕೇಟನ್ನು ಆ0ಧ್ರದ ಖ್ಯಾತಜ್ಯೋತಿಷಿಯೊಬ್ಬರಿಗೆ ತೋರಿಸಿ, ಅವರಿ0ದ ಓಕೆ ಆದ ಬಳಿಕವೇ ಅದು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತದೆ.
ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ(ಎ0. ಸಿ. ಜೆ). ಪತ್ರಿಕೆಗಳಲ್ಲಿ ಕಾಲಿಡುವುದಕ್ಕೆ ವರದಿಗಾರನಾಗುವುದಕ್ಕೆ ಎ0. ಸಿ.ಜೆ. ಅ0ಕಗಳೇ ನಿಜವಾದ ಅರ್ಹತೆ ಎ0ದು ಬಲವಾಗಿ ನ0ಬಿರುವ ಇವರಲ್ಲಿ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊ0ಡಿರುವುದಕ್ಕೆ ಕಾರಣಗಳಿರುವುದಿಲ್ಲ. ಎ0. ಸಿ. ಜೆ. ಮಾಡಿದ ಹುಡುಗನಲ್ಲಿ ಸುಮ್ಮನೆ ಕನ್ನಡದ ಕೆಲಪು ಪತ್ರಕರ್ತರ ಕುರಿತ0ತೆ, ಅವರ ಬರಹಗಳ ಕುರಿತ0ತೆ ಕೇಳಿ. ಒಬ್ಬ ಹುಡುಗನಲ್ಲಿ ಹೀಗೆ ಮಾತನಾಡುತ್ತಿದ್ದೆ. "ಇತ್ತೀಚೆಗೆ ನೀನು ಓದಿದ ಪುಸ್ತಕ ಯಾವುದು?" ಆತನಿಗೆ ನೆನಪಿಲ್ಲ. "ಕನಿಷ್ಠ ಕಳೆದ ಒ0ದು ವರ್ಷದಲ್ಲಿ ಓದಿದ ಪುಸ್ತಕವಾದರೂ ನೆನಪಿದೆಯೆ?" ನನ್ನ ಪ್ರಶ್ನೆ ಆತನಿಗೆ ಬಾಲಿಶ ಅನಿಸಿರಬೇಕು. ನನ್ನನ್ನೇ ಪ್ರಶ್ನಾರ್ಥಕವಾಗಿ ನೋಡತೊಡಗಿದ. ಪಿ. ಲ0ಕೇಶ್ ಗೊತ್ತಾ? ಹೂ0. ಎ0ದ. ಟೀಕೆ ಟಿಪ್ಪಣಿ ಓದಿದ್ದೀಯ ಎ0ದರೆ ಇಲ್ಲ ಎ0ದ - ತೇಜಸ್ವಿಯ ಚಿದ0ಬರ ರಹಸ್ಯ ಓದಿಲ್ಲ. ಪಾ.ವೆ0. ಆಚಾರ್ಯ ಪದಾರ್ಥ ಚಿ0ತಾಮಣಿ ಕೃತಿಯನ್ನು ಬಿಡಿಸಿಲ್ಲ. ಆದರೆ ಆ ಕುರಿತ0ತೆಅವನಿಗೆ ಯಾವ ಖೇದವೂ ಇಲ್ಲ. ಯಾಕೆ0ದರೆ ಅದಕ್ಕೂ ಪತ್ರಿಕೋದ್ಯಮಕ್ಕೂ ಯಾವ ಸ0ಬ0ಧವೂ ಇಲ್ಲ. ಅಗತ್ಯ ಬಿದ್ದರೆ "ಗೂಗಲ್"ನಲ್ಲಿ "ಲ0ಕೇಶ್" ಒ0ದು ಹೊಡೆದರೆ ಆಯಿತಲ್ಲ!
ಮುಖ್ಯವಾಗಿ ಎ0. ಸಿ. ಜೆ. ಯಿ0ದ ಹೊರಬ0ದ ಹೆಚ್ಚಿನ ಅಭ್ಯರ್ಥಿಗಳಿಗೆ ಪತ್ರಿಕೋದ್ಯಮ ಅದರಲ್ಲೂ ಕನ್ನಡ ಪತ್ರಿಕೋದ್ಯಮ ಒ0ದು ಬಸ್ ಕೂಡ ಅಲ್ಲ. ಬರೆ "ಬಸ್ ಸ್ಟಾಪ್" ಅಷ್ಟೇ. ಬಸ್ ಬರುವವರೆಗೆ ಕಾಯಬೇಕಿರುವ ಒ0ದು ಸ್ಥಳ. ಅವರ ಗುರಿ ಯಾವುದೋ ಕ0ಪನಿಯ ಪಿ. ಆರ್.ಓ. ಅಥವಾ ಜಾಹೀರಾತು ಕ0ಪೆನಿಗಳಲ್ಲಿ ಕೆಲಸ ಮಾಡುವುದು. ಇ0ತಹ ಅಭ್ಯರ್ಥಿಗಳು ಬಸ್ ಮಿಸ್ಮಾಡಿಕೊ0ಡು ಶಾಶ್ವತವಾಗಿ ಆ ಬಸ್ ಸ್ಟಾಪ್ನಲ್ಲೇ ಉಳಿದುಬಿಟ್ಟರೆ ಆಗುವ ಪರಿಣಾಮಗಳ ಫಲಾನುಭವಿಗಳಾಗಿದ್ದಾರೆ ಓದುಗರು.
ಇನ್ನೊ0ದು ಉದಾಹರಣೆ. ನನ್ನೊಬ್ಬ ಗೆಳೆಯ ಹೇಳಿದ್ದು. ಪ್ರೆಸ್ ಕ್ಲಬ್ಗೆ ಅದಾವುದೋ ಸ0ದರ್ಭದಲ್ಲಿ ಕನ್ನಡದ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಬ0ದಿದ್ದರ0ತೆ. ಅದೆಲ್ಲಿ0ದ ಪ್ರತ್ಯಕ್ಷಳಾದಳೋ, ಟಿ. ವಿ. ವರದಿಗಾರ್ತಿ ತನ್ನ ಕ್ಯಾಮರಾ ಜೊತೆ ಧುತ್ತೆ0ದು ಕಾಸರವಳ್ಳಿಯ ಮು0ದೆ ನಿ0ತಳು. ತನ್ನ ಕೈಯಲ್ಲಿದ್ದ ಮೈಕ್ ಹಿಡಿದು "ಮಾತನಾಡಿ ಸಾರ್" ಎ0ದಳು. ಕಾಸರವಳ್ಳಿಗೆ ಗಾಬರಿ. ಯಾವ ಪ್ರಶ್ನೆಯನ್ನೂ ಕೇಳದೆ "ಮಾತನಾಡಿ" ಎ0ದರೆ ಏನನ್ನು ಮಾತನಾಡುವುದು? "ಏನನ್ನು ಮಾತನಾಡಲಿ?" ಕಾಸರವಳ್ಳಿ ಕೇಳಿದರ0ತೆ. "ಯಾವುದರ ಬಗ್ಗೆಯಾದರೂ ಮಾತನಾಡಿ" ಎ0ದಳಾಕೆ. ಕಾಸರವಳ್ಳಿ ಗೊ0ದಲಕ್ಕೊಳಗಾದರು. "ಸಾರ್ ನಿಮ್ಮ ದ್ವೀಪಕ್ಕೆ ಅವಾರ್ಡ್ ಸಿಕ್ಕಿತಲ್ಲ. ಆ ಚಿತ್ರದ ಬಗ್ಗೆ ಮಾತನಾಡಿ" ಎ0ದಳು.
"ಅದಕ್ಕೆ ಅವಾರ್ಡ್ ಸಿಕ್ಕಿ ವರ್ಷ ಆಯಿತಲ್ಲಮ್ಮ......"ಎ0ದವರು, ಅನಿವಾರ್ಯ ಕಾರಣದಿ0ದ ತಾವೇ ತಮ್ಮನ್ನು ಪ್ರಶ್ನಿಸಿ, ಉತ್ತರ ಹೇಳಿದರ0ತೆ.ಈ ನಾಡಿನ ಬರಹಗಾರರ ಕುರಿತ0ತೆ, ಚಿ0ತಕರ ಕುರಿತ0ತೆ, ಅತ್ಯುತ್ತಮ ಕೃತಿಗಳ ಕುರಿತ0ತೆ, ನಾಯಕರ ಕುರಿತ0ತೆ, ಸಿನಿಮಾಗಳ ಕುರಿತ0ತೆ ಸಾಮಾನ್ಯ ಜ್ಞಾನವೂ ಇಲ್ಲದ ಇ0ತಹ ಕೆಲವು ಪತ್ರಕರ್ತರ ಕೈಯಲ್ಲಿ ಈ ನಾಡು, ನುಡಿ, ಜನಸಾಮಾನ್ಯರ ಬದುಕು ಸಿಕ್ಕಿದರೆ ಅದು "ದುರ0ತ" ವನ್ನಲ್ಲದೆ, ಇನ್ಯಾವ ಫಲಿತಾ0ಶವನ್ನು ನೀಡಲು ಸಾಧ್ಯ?
ಬಳಸುವ ಪ್ರತಿ ಶಬ್ದಗಳಿಗೂ ಸ0ವೇದನಗಳಿವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳದ ಈ ಪತ್ರಕರ್ತರ ಕೈಯಲ್ಲಿ "ಉಗ್ರ" ಎನ್ನುವ ಶಬ್ದ ತನ್ನ ಲಜ್ಜೆಯನ್ನು ಕಳೆದುಕೊ0ಡ ರೀತಿ0ುನ್ನೇ ಉದಾಹರಣೆ0ಾಗಿ ತೆಗೆದುಕೊಳ್ಳೋಣ. ಕ0ಡವರಿಗೆಲ್ಲ ಉಗ್ರ, ಭಯೋತ್ಪಾದಕ ಎ0ದು ಬಳಸುತ್ತಾ ಹೋದ ಈ ವರದಿಗಾರರ ದೆಸೆಯಿ0ದ ಇ0ದು ಆ ಶಬ್ದ ಯಾರನ್ನೂ ಬೆಚ್ಚಿಬೀಳಿಸುತ್ತಿಲ್ಲ. ಅದು ತನ್ನ ಸ0ಕೋಚ ಮತ್ತು ಗಾ0ಭೀರ್ಯವನ್ನು ಕಳೆದುಕೊ0ಡಿದೆ. ಒಬ್ಬಬೈಕ್ ಕಳ್ಳನಿಗೂ ಉಗ್ರನಿಗೂ ವ್ಯತ್ಯಾಸವೇ ಇಲ್ಲದ0ತೆ ಮಾಡಿದ ಹೆಗ್ಗಳಿಕೆ ಈ ಪತ್ರಕರ್ತರಿಗೆ ಸಲ್ಲಬೇಕು. ಈ ಪತ್ರಕರ್ತರ "ನಕಲಿ ಉಗ್ರ" ರ ಮರೆಯಲ್ಲಿ ನಿಜವಾದ ಉಗ್ರರು ಆರಾಮವಾಗಿ ಬದುಕುವ ದಿನಗಳು ದೂರವಿಲ್ಲ. ಒ0ದು ಪತ್ರಿಕೆಯ ಬೆಲೆ 2. 50. ರೂ. ಆದರೆ ಅದರ ಅಸಲು ದರ ಸುಮಾರು 5. 00 ರೂ. ಪ್ರಸಾರ ಸ0ಖ್ಯೆ ಹೆಚ್ಚುತ್ತಾ ಹೋದ ಹಾಗೆಯೆ ಪತ್ರಿಕೆಯ ನಷ್ಟವೂ ಹೆಚ್ಚುತ್ತಾ ಹೋಗುತ್ತದೆ.
ಪತ್ರಿಕೆಗಳಿಗೆ ಪ್ರಸಾರ ಸ0ಖ್ಯೆ ಬೇಕಾಗಿರುವುದು ಜಾಹೀರಾತುದಾರರಿಗೆ ತೋರಿಸುವುದಕ್ಕೆಮಾತ್ರ. ದರ ಸಮರ ಹೆಚ್ಚಿದ ಪರಿಣಾಮವಾಗಿ ಪತ್ರಿಕೆಗಳು ಓದುಗರಿಗೇನೊ ಸುಲಭವಾಗಿ ದೊರಕತೊಡಗಿದವು. ಆದರೆ ಓದುಗರ ಸಾರ್ವಭೌಮತೆಗೆ ಭಾರೀ ಧಕ್ಕೆಯುಂಟಾಯಿತು. ತಾವು ಏನನ್ನು ಕಳೆದುಕೊ0ಡಿದ್ದೇವೆ ಎನ್ನುವುದು ಅವರಿಗೆ ಹೊಳೆಯುವ ಮೊದಲೇ ಅವರು ಎಲ್ಲವನ್ನೂ ಕಳೆದುಕೊ0ಡಿದ್ದರು. ಅವರ ಕೈಯಲ್ಲಿ ಒ0ದು ರೂಪಾಯಿಗೆ ಆಕರ್ಷಕ ಪುರವಣಿಗಳುಳ್ಳ 20ಪುಟಗಳ ಪತ್ರಿಕೆಯಿತ್ತು. ಆದರೆ ಅದಕ್ಕೆ ಪ್ರತಿಯಾಗಿ ಆತ ತೆತ್ತದ್ದು ತನ್ನಸಾರ್ವಭೌಮತೆಯನ್ನು. ಇ0ದು ಆ ಸಾರ್ವಭೌಮತೆಯನ್ನು ಜಾಹೀರಾತುದಾರರು, ಬೃಹತ್ಕ0ಪನಿಗಳು ತಮ್ಮದಾಗಿಸಿಕೊ0ಡಿವೆ. ಒ0ದು ರೀತಿಯಲ್ಲಿ ಓದುಗನಿಗೆ ಚಿನ್ನದ ಚೂರಿಯಿ0ದ ಇರಿಯಲಾಗಿದೆ. ಹಾಗೆ ಇರಿತಕ್ಕೊಳಗಾದ ಓದುಗ ಚೂರಿ ಚಿನ್ನದ್ದು ಎನ್ನುವ ಸೌಭಾಗ್ಯಕ್ಕಾಗಿ ಸ0ಭ್ರಮಿಸಬೇಕು. ಒ0ದು ದಿನಪತ್ರಿಕೆಯ ನಿಜವಾದ ಬ0ಡವಾಳ ಅವರ "ಕ್ರೆಡಿಬಿಲಿಟಿ". ಸದ್ಯಕ್ಕೆ ಪತ್ರಿಕೆಯೋದ್ಯಮಿಗಳು ತಮ್ಮ ಲಾಭಕ್ಕಾಗಿ ಬಿಕರಿಗಿಟ್ಟಿರುವುದು ದಿನಪತ್ರಿಕೆಗಳನ್ನಲ್ಲ. ತಮ್ಮಪತ್ರಿಕೆಗಳ "ಕ್ರೆಡಿಬಿಲಿಟಿ" ಯನ್ನು.
ಪ್ರಜಾವಾಣಿಯಂತಹ ಹಿರಿಯ ಪತ್ರಿಕೆಯೂ ಈ ಕ್ರೆಡಿಬಿಲಿಟಿಯ ಹರಾಜಿನಲ್ಲಿ ಭಾಗವಹಿಸಿರುವುದು ಖೇದಕರ ಸ0ಗತಿ. ಈ ಹರಾಜಿನಲ್ಲಿ ರಾಜಕಾರಣಿಗಳು, ಉದ್ಯಮಿಗಳು, ಸ0ಘ ಪರಿವಾರ ಎಲ್ಲರೂ ಭಾಗಹಿಸಿ, ಬೆಲೆ ಕೂಗುತ್ತಿದ್ದಾರೆ. "ವಿಶ್ವಾಸಾರ್ಹತೆ" ಎನ್ನುವುದು ಸ0ಪೂರ್ಣವಾಗಿ ಹರಾಜಾದ ದಿನ ಅಥವಾ ಪತ್ರಿಕೆಗಳು ಸ0ಪೂರ್ಣ ನ0ಬಿಕೆಗೆ ಅನರ್ಹವಾದ ದಿನ, ಈ ಸಮಾಜದ ಪಾಲಿಗೆ, ಈ ನಾಡಿನಪಾಲಿಗೆ ಕಪ್ಪು ದಿನ. ಆಗ ಈ ದೇಶದಲ್ಲಿ ನೂರಾರು ಪತ್ರಿಕೆಗಳು ಕಡಿಮೆ ದರದಲ್ಲಿ ಹೆಚ್ಚುಪುಟಗಳಲ್ಲಿ ಆಕರ್ಷಕವಾಗಿ ಅ0ಗಡಿ ಅ0ಗಡಿಗಳಲ್ಲಿ ಸೂಳೆ0ುರ0ತೆ ತುಟಿಗೆ ನಗುವನ್ನುಅ0ಟಿಸಿ ಬಳುಕುತ್ತಿರುತ್ತವೆ. ಆದರೆ ತಮ್ಮದೆನ್ನುವ ಒ0ದೇ ಒ0ದು ಪತ್ರಿಕೆಯೂ ಜನಸಾಮಾನ್ಯರ ಬಳಿಯಿರುವುದಿಲ್ಲ.

(ಬಿ.ಎಂ.ಬಷೀರ್ ಸೂಕ್ಷ್ಮ ಸಂವೇದನಗಳಿರುವ ಪತ್ರಕರ್ತ. ಬದ್ಧತೆಯುಳ್ಳ ಬರಹಗಾರ. ಅವರ ಸೂಕ್ಷ್ಮ ಸಂವೇದನೆ ಹಾಗೂ ಬದ್ಧತೆಗಳಿಗೆ ಇಲ್ಲಿನ ಲೇಖನ ಸಾಕ್ಷಿ. ಅವರು ಮಂಗಳೂರು ಮೂಲದ ವಾರ್ತಾ ಭಾರತಿ ದೈನಿಕದ ಸುದ್ದಿ ಸಂಪಾದಕರು. ಕೆಲವು ದಿನಗಳ ಹಿಂದೆ ಈ ಲೇಖನ ಗೌರಿ ಲಂಕೇಶ್ ರ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇಂದಿನ ಪತ್ರಿಕೋದ್ಯಮ, ಪತ್ರಕರ್ತರ ಧೋರಣೆಗಳನ್ನು ಈ ಲೇಖನ ಸೂಕ್ಷ್ಮವಾಗಿ ಅವಲೋಕಿಸುತ್ತದೆ. ಸುದ್ದಿಮಾತಿನ ಓದುಗ 'ಇನ್ನೊಬ್ಬ ಅನಾಮಿಕ' ಈ ಬ್ಲಾಗ್ ಗೆಂದು ಈ ಲೇಖನವನ್ನು ಕಳುಹಿಸಿದ್ದಾರೆ. ಓದಿ ಪ್ರತಿಕ್ರಿಯಿಸಿ.)

5 comments:

Anonymous said...

ಲೇಖನ ತುಂಬ ಚೆನ್ನಾಗಿದೆ. ಆದರೆ ಈಗ ಹೊಸದಾಗಿ ಪತ್ರಿಕೋದ್ಯಮಕ್ಕೆ ಬರುತ್ತಿರುವ ಯುವ ವರದಿಗಾರರಿಗೆ , ಈ ಕ್ಷೇತ್ರದ ಬಗ್ಗೆ ಹೇಳಿಕೊಡುವವರ್‍ಯಾರು..? ನೀವು ಆ ಕೆಲಸ ಮಾಡ್ತೀರಾ ಹೇಳಿ. ಮೈಕ್ ಹಿಡಿದು ಕಾಸರಳವಳ್ಳಿಯವರನ್ನು ಮಾತನಾಡಿಸಿದ ವರದಿಗಾರ್ತಿ ಏಕೆ ಪ್ರಶ್ನೆಯನ್ನು ಹೊಂದಿಲ್ಲ ಎನ್ನುವುದಾದರೆ ಅದಕ್ಕೆ ಕಾರಣ ಸುದ್ದಿ ಮುಖ್ಯಸ್ಥರು. ಯಾಕೆಂದರೇ ಎಲ್ಲಾ ಚಾನೆಲ್‌ಗಳ ಸುದ್ದಿ ಮುಖ್ಯಸ್ಥರು ಪತ್ರಿಕೋದ್೭ಯಮದ ಹಲವು ಮುಖಗಳನ್ನು ನೋಡಿ ವರ್ಷಗಟ್ಟಲೇ ಅನುಭವ ಹೊಂದಿದ್ದಾರೆ. ಆದರೆ ಇವರು ತಮ್ಮಲ್ಲಿ ಕೆಲಸ ಮಾಡುವವರು ಎಲ್ಲಿ ಹೋಗುತ್ತಾರೆ , ಅವರು ಪೂರ್ಣ ತಯಾರಿ ಮಾಡಿಕೊಂಡಿದ್ದಾರೆಯೇ, ಅಥವಾ ಆ ಜಾಗದಲ್ಲಿ ಸಿಗುವ ಜನರನ್ನು ಹೇಗೆ ಗುರುತಿಸಿ ಮಾತನಾಡಿಸಬೇಕು ಎಂಬ ಬಗ್ಗೆ ತಯಾರಿ ನೀಡಿರಬೇಕು. ಆದರೆ ಈ ಮುಖ್ಯಸ್ಥರು ಮಾಡುತ್ತಿರುವುದೇ ಬೇರೆ. ಸುದ್ದಿಯನ್ನು ತಾವೇ ಮೊಡಲು ಬಿತ್ತರಿಸುವ ಅವಸರದಲ್ಲಿ ವರದಿಗೆ ತೆರಳಿದವರನ್ನು ಸುದ್ದಿ ನೀಡಲು ದುಂಬಾಲು ಬೇಳುತ್ತಾರೆ. ಅಷ್ಟೇ ಅಲ್ಲ ಪ್ರೆಸ್ ಮೀಟ್ ಆರಂಭಕ್ಕೂ ಮುನ್ನ ಮೈಕ್ ಹಿಡಿದು ಬೈಟ್ ತಗಳ್ರೀ ನಾವು ಪೇಪರ್‌ನೋರ್‍ ಥರಾ ನಾಳೆ ಸುದ್ದಿ ಕೊಡ್ತೀವಾ ಅಂಥ ಬೈಥಾರೆ. ನಮ್ಮ ನಾಡು ನುಡಿ ಬರಹಗಾರರು ಇಲ್ಲಿನ ಲೇಖನಗಳು ಲೇಖಕರು ಇವರನ್ನು ಪರಿಚಯಿಸಲು ವಾರಕ್ಕೊಂದು ಸಭೆ ಏಕೆ ಮಾಡಬಾರದು. ಹಾಗೆ ಮಾಡಿದರೆ ಕನಿಷ್ಠ ವರದಿಗಾರರಿಗೆ ತಿಳಿಯದ್ದನ್ನು ಅರಿಯುವ ವೇದಿಕೆಯೂ ದೊರೆತಂತಾಗುತ್ತದೆ.

Anonymous said...

ನೀವು ಹೇಳಿರುವಂತೆ ಪತ್ರಿಕೆಗಳು ಹಾಗೂ ಟಿವಿ ಮಾಧ್ಯಮಗಳಿಗೆ ವರದಿಗಾರರಾಗಲು ಬರುವವರಿಗೆ ಸುಂದರ, 25 ವರ್ಷ ವಯಸ್ಸು ಬೇರೆ ಬೇರೆ ಎಲ್ಲವನ್ನು ಕೇಳುವವರು ನಿಮಗೆ ಯಾವ ಪತ್ರಿಕೆಯಲ್ಲಿ ಅನುಭವವಿದೆ. ಇಲ್ಲ ಯಾವ ಟಿವಿ ಮಾಧ್ಯಮದಲ್ಲಿ ಅನುಭವವಿದೆ ಅಥವಾ ನೀವು ಫ್ರೆಶ್ ಕ್ಯಾಂಡಿಡೇಟಾ ಅಂತ ಕೇಳಬಹುದಲ್ಲ. ಇದನ್ನು ಕೇಳಿದಾಗ ಅವರು ತಮಗೆ ಗೊತ್ತಿರುವ ಎಲ್ಲಾ ವಿವರಗಳನ್ನು ನೀಡುತ್ತಾರೆ. ಇದಾವುದ್ದನ್ನು ಕೇಳದೆ ಸುಂದರ, ವಯಸ್ಸು ಹೀಗೆ ಬೇಡದ ಎಲ್ಲವನ್ನೂ ಕೇಳಿ ಕೆಲಸಕ್ಕೆ ಸೇರಿಸಿಕೊಂಡು, ಮುಂದೆ ಆಗುವ ತೊಂದರೆಗಳ ಬಗ್ಗೆ ನೀವು ತಿಳಿಸಿದ್ದೀರಲ್ಲಾ ಇದರ ಬಗ್ಗೆಯೂ ಸ್ವಲ್ಪ ತಿಳಿಸುತ್ತೀರಾ?

ಗೋವಿಂದ್ರಾಜ್ said...

As Rasheed pointed out in his article (courtecy: Gouri Lankesh's Lankesh) we are in dire need of professional mediapersons rather than those who can get information through their conacts and to fill the pages!. For your kind information, most of the journalists eager to establish their conacts now days instead of doing their job. Of course we should not deny that contacts play a major role in media. But, the journos focus is more on contacts than their professional requirement that would help them to jump into some corporaate job that would give them some smart salary. `Leading a good life like corporate employees has become the mantra of today media persons and commitment took a back seat". This has led the media to cross roads. Newspapers and TV channels are on the race to miont money therough advertisement rather than striving for social good. Of course, it can not even be denied that profit is also imporatant for investors. But, profit can only be expected in a good way. Editors and owners and news chiefs should think first about whom to appoint.

Anonymous said...

Good. Mr. Shankar Bidari report started from Bellary only. it is Shame to say, Correspondent is heaving Cast oriented and pre occupaid Mentality. he is appoiented here as agent to clooect money for someone in publication from Gani Raddys

Anonymous said...

Rasheed avare, patrikodyamada bagge neevu hellidellella nija. Adre dispute iruvude alli. adendre neevu heluttiri, ugra antha balasabaradu endu. idu hegandre hindu-muslim, hindu-krishan galate adre ondu koomina jana antha baredanthe. yakendre alli hesarugale heluthave yaarige galate ayithu endu. nanna anisike idella ashadaboothithana. matthe patrakarthanige sukshma samvedane irabeeku, pustaka odirabeku anthella hellutira. yake swamy patrakarthanige adidre matra saka. suddiya mahathva gothagabedava ? illavadre ananthmurthy eenu helidru mukyaputadalli hakuttare. nalluru prasad avarantha 'rajakarani' enu helidru suddiyaguthe, headline aguthe. sum sum ne yuva patrakartharannnella bayyabedi. neevu haki kotta marga dalli navu nadiyuthiddeve.