Tuesday, September 1, 2009

ನಿರ್ಗಮಿಸುವ ಮುನ್ನ...

ಸುದ್ದಿಮಾತು ವಿದಾಯ ಹೇಳುವ ಇಂಗಿತ ವ್ಯಕ್ತ ಪಡಿಸಿದ ಮೇಲೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಕೆಲವರಿಗೆ ಸಂತೋಷವಾಗಿದೆ. ಸಾಕು ಮುಚ್ಚರಯ್ಯ ಬಾಯಿ ಎಂಬ ಧಾಟಿಯಲ್ಲಿ ಕೆಲವರು ಮಾತನಾಡಿದರೆ, ಮತ್ತೆ ಕೆಲವರು ಬ್ಲಾಗ್ ಬಗ್ಗೆ ಪ್ರೀತಿಯಿಂದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದೇ ಉಮ್ಮೇದಿಯಲ್ಲಿ ಒಬ್ಬರು ಮಾತು ಈ ಬ್ಲಾಗ್ ಬಂದ್ ಎಂದು ಘೋಷಿಸಿ ನಮ್ಮ ಜವಾಬ್ದಾರಿಯನ್ನು ಹಗುರ ಮಾಡ ಹೊರಟಿದ್ದಾರೆ. ಅವರೆಲ್ಲರಿಗೂ ನಾವು ಅಭಾರಿಗಳು. ಇಲ್ಲಿ ಕೆಲವು ಪ್ರತಿಕ್ರಿಯೆಗಳಿವೆ. ಒಮ್ಮೆ ಕಣ್ಣು ಹಾಯಿಸಿ...




ಶ್ಯಾಮಸುಂದರ್ (ದಟ್ಸ್ ಕನ್ನಡದಲ್ಲಿ)
- ಕನ್ನಡದಲ್ಲಿ ಬ್ಲಾಗ್ ಪರಂಪರೆ ಬೆಳೆಯಬೇಕು, ಯಾವ ಬ್ಲಾಗೂ ಕಣ್ಮುಚ್ಚಬಾರದು.
ಅವಧಿಯಲ್ಲಿ ಪ್ರಕಟಗೊಂಡದ್ದು... (ಬೈಲೈನ್ ಇಲ್ಲದ ಕಾರಣ ಇದನ್ನೂ ಅನಾಮಧೇಯ ಕಮೆಂಟ್ ಎಂದು ಗ್ರಹಿಸಲು ಓದುಗ ಸ್ವತಂತ್ರ.)

‘ಸುದ್ದಿಮಾತು’ ಬ್ಲಾಗ್ ತನ್ನ ಚಟುವಟಿಕೆಗಳನ್ನು ಬಂದ್ ಮಾಡಿದೆ. ತಾನು ಬ್ಲಾಗ್ ಆರಂಭಿಸಿದ ಕಾಲದ ಉದ್ದೇಶಕ್ಕೂ ನಂತರ ಬ್ಲಾಗ್ ಲೋಕ ಪಡೆದ ತಿರುವುಗಳಿಗೂ ಕೊಂಡಿ ಹಾಕಿ ‘ಬೇಸತ್ತು’ ಇನ್ನು ಪ್ರಕಟಣೆ ಇಲ್ಲ ಎಂದಿದ್ದಾರೆ. ‘ಸುದ್ದಿಮಾತು’ ಸಹಾ ಅನಾಮಿಕ ಬ್ಲಾಗ್. ವಿಮರ್ಶೆ ಮಾಡುವವರು ಹೆಸರಿಲ್ಲದೆ ವಿಮರ್ಶೆ ಮಾಡಿದರೆ ಅದಕ್ಕೆ ಹೆಚ್ಚೇನೂ ಮೌಲ್ಯ ಇರುವುದಿಲ್ಲ. ಇದನ್ನು ಅರಿತ ‘ಸುದ್ದಿಮಾತು’ ಬಳಗಕ್ಕೆ ಥ್ಯಾಂಕ್ಸ್.
ಅದೇ ಸಮಯದಲ್ಲಿ ‘ಸುದ್ದಿಮಾತು’ ಯಾರದ್ದು ಎನ್ನುವ ಪ್ರಶ್ನಾರ್ಥಕ ಚಿಹ್ನೆ ಹಾಗೇ ಉಳಿದಿದೆ. ಅವರದ್ದು, ಇವರದ್ದು ಇಲ್ಲಾ ನಿಮ್ಮದೇ ಎನ್ನುವ ಊಹಾಪೋಹಗಗಳನ್ನು ಬದಿಗೊತ್ತೋಣ. ಈ ಬ್ಲಾಗ್ ಇಂತಹವರದ್ದೆ ಎಂದು ಹೇಳುವ ಪುರಾವೆ ಇದ್ದರೆ ಅದನ್ನು ಬಹಿರಂಗಪಡಿಸಲು ನಮಗೂ ಇಷ್ಟ. ಕೇವಲ ಈ ಬ್ಲಾಗ್ ಗೆ ಮಾತ್ರ ಅಲ್ಲ ಯಾವುದೇ ಅನಾಮಿಕ ಬ್ಲಾಗ್ ಬಗ್ಗೆ ಪುರಾವೆ ಸಹಿತ ವಿವರ ನೀಡಿದರೆ ಪ್ರಕಟಿಸಲು ಸಿದ್ಧ.
Delete
Blogger
surya said...

ವೈಯಕ್ತಿಕ ನಿಂದೆಯ ಕೆಲ ಆಪಾದನೆಗಳ ನಡುವೆಯೂ ಸಮಕಾಲೀನ ಪತ್ರಿಕೋದ್ಯಮ ರಾಜಕಾರಣ ಕುರಿತು ಅರ್ಥಪೂರ್ಣ ಟೀಕೆ ಟಿಪ್ಪಣಿ ಒಳನೋಟಗಳನ್ನು ನೀಡಿದ ಸುದ್ದಿಮಾತು ಅನಾಮಿಕ ಎಂಬ ಕಾರಣಕ್ಕಾಗಿ ನೇಪಥ್ಯಕ್ಕೆ ಸರಿಯಬೇಕಾಗಿರುವ ಸನ್ನಿವೇಶ ಸೃಷ್ಟಿಯಾಗಿರುವುದು ಆರೋಗ್ಯಕರ ಅಲ್ಲ.
ಡಿ.ಉಮಾಪತಿ
ನವದೆಹಲಿ.


NiTiN Muttige said...

ಎಲ್ಲರ ಮಧ್ಯೆ ನಿಮ್ಮದು ವಿಭಿನ್ನವಾಗಿ ವೈಯಕ್ತಿಕವಾಗಿ ಅಷ್ಟೇಲ್ಲಾ ಕೆರಚು ಎರಚದೆ ಸುದ್ದಿಮನೆಯಲ್ಲಿನ ವಿವರ ಕೊಡುತ್ತಿದ್ರಿ.ಉಳಿದವರು ನೇರವಾಗಿ ವೈಯಕ್ತಿಕವಾಗೇ ದಾಳಿ ಆರಂಭಿಸಿದ್ದು ಬ್ಲಾಗ್ ಗಳ ದುರ್ಧೈವ.ಯಾರೋ ಹೇಳಿದರು ಅಂತ ಈ ತೀರ್ಮಾನ ಯಾಕೆ?.Delete


Blogger Sahana said...

It is not a good decision.
Please continue..
Your blog will help full to media persons & society. In the public interest you should continue to post. I hope you will do.

August 25, 2009 8:49 PM

Delete
Blogger ಎಚ್.ಎನ್. ಈಶಕುಮಾರ್ said...

ಅನಾಮಿಕರ ಸುದ್ದಿಮಾತು ಮುಂದುವರೆಯಲಿ ಎಂಬುದು ನಮ್ಮ ಬಯಕೆ ಆದರು ನಿಮ್ಮ ಸ್ವತಂತ್ರಕ್ಕೆ ಅಡ್ಡಿ ಪಡಿಸೋದು ಬೇಡ ನಿಮ್ಮ ನಿರ್ಧಾರ ಸಮಯೋಚಿತವಾಗಿದೆ.ಯಾರು ಏನನ್ನು ಬದಲಾವಣೆ ಮಾಡಲು ಸಾದ್ಯವಿಲ್ಲ ಅನ್ನೋದು ನಮ್ಮ ದೇಶದ ಅಘೋಷಿತ ಸತ್ಯ ಮನಪೂರ್ವಕ ವಿದಾಯಗಳು ಸುದ್ದಿಮಾತು ಪ್ರವರ್ತಕರೆ.......

Anonymous parasurama kalal said...

ದೂರ ಹೋಗುವ ಬಯಕೆ..ಯಾಕೇ ಯಾಕೇ ಇದು ನನ್ನ ಪ್ರಶ್ನೆ.

Jadi G said...

ಇತ್ತೀಚಿನ ದಿನಗಳಲ್ಲಿ ನೆಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದಾಗ ನೀವು ಬ್ಲಾಗ್ ಬರೆಯುವದನ್ನು ಅಂದ್ರೆ ಈ ಸುದ್ದಿ ಮಾತನ್ನು ನಿಲ್ಲಿಸುವುದ ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯ.

Delete
Anonymous Kruttike said...

ತಪ್ಪು ತೋರಿಸಿಕೊಟ್ಟಾಗ ಹೆಸರುವಾಸಿಯಾದವರಿಗೆ ಮುಖಭಂಗವಾಗುವುದು ಸಹಜವೆ. ಆ ಕಾರಣಕ್ಕಾಗಿ ನೀವೇಕೆ ದೂರಹೋಗಬೇಕು. ಖಂಡಿತ ಮುಂದುವರೆಸಿ. ನಾನಂತೂ ನಿಮ್ಮ ಬ್ಲಾಗ್ ತಪ್ಪದೆ ಓದುವವರಲ್ಲಿ ಒಬ್ಬಳು.

Blogger heggere said...

ಸುದ್ದಿ ಮಾತುಗಾರರೇ
ಸತ್ಯ ಹೇಳುವುದೇ ಈಗಿನ ಕಾಲದ ಅತಿ ದೊಡ್ಡ ತಪ್ಪು ಎನ್ನುವ ಮಂದಿ ಇಲ್ಲಿದ್ದಾರೆ. ನಿಮ್ಮ ಬ್ಲಾಗ್‌ನ ವಿದಾಯದ ಮಾತುಗಳು ನನಗೆ ಇಷ್ಟವಾಗಲಿಲ್ಲ.

Anonymous Anonymous said...

ರೀ, ಬ್ಲಾಗ್ ನಿಲ್ಸಿದ್ರೆ ಹುಷಾರ್! ಅದೇನ್ ಅಷ್ಟು ಸುಲಭ ಅಂದ್ಕೊಂಡ್ರಾ? ಸುಮ್ನೆ ಏನೂ ಕಾರಣ ಹೇಳ್ದೆ continue ಮಾಡಿ.ಅಷ್ಟೆ!

Don't yield to any pressure. That is not good character of a good journalist.August 30, 2009 10:46 AM

Delete
Blogger surya said...

ವೈಯಕ್ತಿಕ ನಿಂದೆಯ ಕೆಲ ಆಪಾದನೆಗಳ ನಡುವೆಯೂ ಸಮಕಾಲೀನ ಪತ್ರಿಕೋದ್ಯಮ ರಾಜಕಾರಣ ಕುರಿತು ಅರ್ಥಪೂರ್ಣ ಟೀಕೆ ಟಿಪ್ಪಣಿ ಒಳನೋಟಗಳನ್ನು ನೀಡಿದ ಸುದ್ದಿಮಾತು ಅನಾಮಿಕ ಎಂಬ ಕಾರಣಕ್ಕಾಗಿ ನೇಪಥ್ಯಕ್ಕೆ ಸರಿಯಬೇಕಾಗಿರುವ ಸನ್ನಿವೇಶ ಸೃಷ್ಟಿಯಾಗಿರುವುದು ಆರೋಗ್ಯಕರ ಅಲ್ಲ.
ಡಿ.ಉಮಾಪತಿ
ನವದೆಹಲಿ.

August 31, 2009 10:09 AM

Tuesday, August 25, 2009

ದೂರ ಹೋಗುವ ಬಯಕೆ. ನೀವೇನಂತೀರಿ?

ಇನ್ನು ಕೆಲವೇ ದಿನಗಳಲ್ಲಿ 'ಸುದ್ದಿಮಾತು'ಗೆ ಒಂದು ವರ್ಷದ ಸಂಭ್ರಮ. ಆ ಆಚರಣೆಗೆ ಮುನ್ನವೇ ನಾವು ನಿಮ್ಮಿಂದ ವಿದಾಯ ಬಯಸುತ್ತಿದ್ದೇವೆ. ವಿದಾಯ ಎಂದಾಕ್ಷಣ ನಿಮ್ಮಲ್ಲಿ ಹಲವು ಆಲೋಚನೆಗಳು ಒಮ್ಮೆಲೆ ನುಗ್ಗಿ ಬಂದಿರಬಹುದು. ಇವರ ಮೇಲೆ ಯಾರೋ ಕೇಸು ಹಾಕಿರಬೇಕು, ಇಲ್ಲ ಯಾರೋ ಇವರೇ ಮಾಡ್ತಿರೋದು ಅಂತ ಗೊತ್ತಾಗಿ ಧಮಕಿ ಹಾಕಿರಬೇಕು - ಹೀಗೆ ನಿಮ್ಮಲ್ಲಿ ಅನೇಕ ಐಡಿಯಾಗಳು ಹೊಳೆದಿರಲೂ ಸಾಕು.
ಆದರೆ ಅದಾವುದೂ ಅಲ್ಲ.
ಒಂದು ವರ್ಷದ ಹಿಂದೆ ಹೀಗೆ ಯಾವುದೋ ಪತ್ರಿಕಾ ವರದಿಗೆ ಸ್ಪಂದಿಸುವ ನೆವದಲ್ಲಿ ಬ್ಲಾಗ್ ಹುಟ್ಟಿಕೊಂಡಿತು. ನಿನ್ನೆ ಒಂದು ಪೋಸ್ಟ್ ಮಾಡಿದಿವಿ, ಇಂದೂ ಒಂದು ಮಾಡಿದರೆ ಹೇಗೆ.... ಹೀಗೆ ಸುದ್ದಿಮಾತು ಒಂದು ರೂಪ ಪಡೆದುಕೊಂಡಿತು. ಆ ನಂತರ ಮಾಧ್ಯಮ ಕ್ಷೇತ್ರದ ಬೆಳವಣಿಗೆಗಳನ್ನು ಗಮನಿಸುತ್ತಾ, ಪ್ರತಿಕ್ರಿಯಿಸುತ್ತಾ ಸಾಗಿದೆವು. ಕೆಲವೊಮ್ಮೆ ಉತ್ತಮ ಬರಹಗಳನ್ನು ಹೆಕ್ಕಿ ಹಾಕಿದೆವು. ಆರಂಭದಲ್ಲಿ ಬಂದ ಪ್ರತಿಕ್ರಿಯೆಯಿಂದ ಹಿಗ್ಗಿದೆವು. ನಮಗೆ 'ನಾವು ಯಾರು' ಎಂದು ಹೇಳಿಕೊಳ್ಳುವುದಕ್ಕಿಂತ, ನಮ್ಮ ವಿಚಾರವನ್ನು ಹೇಗೆ ಬ್ಲಾಗ್ ಓದುಗ ಸಮುಊಹ ಸ್ವೀಕರಿಸುತ್ತದೆ ಎಂಬುದರ ಬಗ್ಗೆ ಕುತೂಹಲವಿತ್ತು. ಕೆಲವರು 'ನೀವು ಕಾಂಗ್ರೆಸ್ಸಿನವರು' ಎಂದು ಟೀಕಿಸಿದರೆ, ಇನ್ನು ಕೆಲವರು 'ನೀವು ಎಡಪಂಥೀಯರು' ಎಂದು ಮುಊದಲಿಸಿದರು.
ಪ್ರಜಾವಾಣಿ ಪತ್ರಿಕೆಯನ್ನು ಒಟ್ಟಾರೆಯಾಗಿ ಒಪ್ಪಿಕೊಳ್ಳುತ್ತಲೇ, ಅದರ ಕೆಲ ಧೋರಣೆಗಳನ್ನು ಟೀಕಿಸಿದೆವು. ಆ ಪತ್ರಿಕೆ 60ನೇ ವರ್ಷಾಚರಣೆ ಸಂದರ್ಭದಲ್ಲಿ ಬರೆದ ಸಂಪಾದಕೀಯದಲ್ಲಿ ತಪ್ಪುಗಳನ್ನು ಹುಡುಕಿ ಬರೆದ ಲೇಖನ ಉತ್ತಮ ಪ್ರತಿಕ್ರಿಯೆ ತಂದಿತ್ತು. ಹಾಗೆಯೇ ವಿಜಯ ಕರ್ನಾಟಕ ಪಕ್ಕಾ ಚೆಡ್ಡಿಯಾಗಿ ವರ್ತಿಸಿದಾಗ ಟೀಕಿಸಲೇ ಬೇಕಾಯ್ತು. ಆದರೆ ಯಾರ ಮೇಲೂ ವೈಯಕ್ತಿಕ ಆರೋಪ ಮಾಡಲಿಲ್ಲ. ವಿಚಾರದ ನೆಲಗಟ್ಟಿನಲ್ಲೇ ನಮ್ಮ ಟೀಕೆ ಇತ್ತು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ ಎಂದೇ ನಮ್ಮ ನಂಬುಗೆ.
ಈ ಮಧ್ಯೆ ನಮ್ಮ ಓದುಗರು ಸುದ್ದಿಮಾತುಗಾರರನ್ನು ಅನೇಕರಲ್ಲಿ ಹುಡುಕಿದರು. ಜಿ.ಎನ್ ಮೋಹನ್, ದಿನೇಶ್.. ಹೀಗೆ ಪತ್ರಿಕಾ ಜಗತ್ತಿನ ಅನೇಕ ಹೆಸರುಗಳು ಹರಿದಾಡಿದವು. ಕೆಲವರಂತೂ, 'ಅವರು ನಮ್ಮ ಹುಡುಗರೇ ಕಣೋ' ಎಂದು ಸುಖಾ ಸುಮ್ಮನೆ ಎಲ್ಲರ ಮುಂದೆ ಒಂಥರಾ ಸ್ಕೋಪ್ ತೆಗೊಳೋಕೆ ಹೇಳಿಕೊಂಡಿದ್ದ ಉದಾಹರಣೆಗಳೂ ಉಂಟು.
ಮೊದಲು ಒಂದು ವಿಚಾರವನ್ನು ಸ್ಪಷ್ಟ ಪಡಿಸುತ್ತೇವೆ. ನಾವು ಯಾರು ಎನ್ನುವುದು ಮುಖ್ಯವೇ ಅಲ್ಲ. ಕಾರಣ ಇಲ್ಲಿ ಯಾರೂ ಮುಖ್ಯರಲ್ಲ! ಅದೇ ಹೊತ್ತಿಗೆ ಇನ್ನೊಂದು ಮಾತು - ನೀವು ಸಂಶಯ ಪಡುತ್ತಿರುವ ಯಾರೂ ನಮ್ಮ ತಂಡದಲ್ಲಿಲ್ಲ. ಜಿ.ಎನ್ ಮೋಹನ್ ನಮ್ಮ ತಂಡದಲ್ಲಿ ಇದ್ದಿದ್ದರೆ, ಅವರಿಗೆ ಪ್ರಶ್ನೆ ಕೇಳುವ ಪ್ರಮೇಯವೇ ಬರುತ್ತಿರಲಿಲ್ಲ.
ಹೆಸರಿಲ್ಲದೆ ಬರೆದರೆ ಏನೆಲ್ಲಾ ಪ್ರತಿಕ್ರಿಯೆ ಬರಬಹುದು, ಎಂಬ ಸಣ್ಣ ಕುತೂಹಲದಿಂದ ಬ್ಲಾಗ್ ಮುಂದುವರಿಸಿದೆವು. ಇಲ್ಲಿಯವರೆಗೂ ಬಂದು ನಿಂತಿದ್ದೇವೆ. ಹೆಸರು ಹೇಳದಿದ್ದರೂ, ನಾವು ದಾರಿ ತಪ್ಪಲಿಲ್ಲ ಎಂದು ನಂಬುತ್ತೇವೆ. ಯಾರಿಗೂ ಮುಜುಗರಕ್ಕೆ ಈಡು ಮಾಡುವಂತಹ ಬರಹಗಳನ್ನು ಹಾಕಲಿಲ್ಲ. ನಿಜ. ಒಂದೆರಡು ಕಾಮೆಂಟ್ ಗಳನ್ನು ಪಬ್ಲಿಷ್ ಮಾಡುವಾಗ ಎಡವಿದೆವೇನೋ ಎನ್ನಿಸುತ್ತಿದೆ. ಅದು ಆ ಕ್ಷಣ wrong judgement. ಅಂತಹ ಕಾಮೆಂಟ್ ಗಳಿಂದ ಬೇಸರ ಆಗಿರುವವರಿಗೆ ಕ್ಷಮೆ ಕೋರುತ್ತೇವೆ.
ಇನ್ನು ವಿದಾಯದ ಮಾತುಗಳೇಕೆ?
ನಾವು ಹೆಸರು ಹೇಳದೆ ಬ್ಲಾಗ್ ನಡೆಸಿದ ಕಾರಣಕ್ಕೆ, ಹೆಸರಿಲ್ಲದೆ ಬರೆಯುವುದನ್ನು ಬೆಂಬಲಿಸುತ್ತೇವೆ ಎಂದಲ್ಲ. ಹೆಸರಿಲ್ಲದೆ ಉಳಿಯುವುದು ನಿಜವಾಗಿಯುಊ ಸ್ವಾತಂತ್ರ್ಯವೇ. ಆದರೆ ಅದನ್ನೇ ಸ್ವೇಚ್ಛೆಯಾಗಿಸಿಕೊಂಡವರ ಬಗ್ಗೆ ನಮಗೆ ಬೇಸರವಿದೆ. ಆ ಸ್ವಾತಂತ್ರ್ಯ ಆರೋಗ್ಯವಂತ ಚರ್ಚೆಗೆ ಪ್ರೇರಣೆ ಆಗದೆ, ವೈಯಕ್ತಿಕ ನಿಂದನೆಯ ಹಾದಿ ಹಿಡಿಯುತ್ತಿರುವುದು ದು:ಖದ ಸಂಗತಿ. ಸುದ್ದಿಮಾತು ಆರಂಭವಾದಾಗ ಮಾಧ್ಯಮಗಳ ಬಗ್ಗೆ ಬರೆಯುತ್ತಿದ್ದ ಬ್ಲಾಗ್ ಗಳು ಅಷ್ಟಾಗಿ ಕಾಣಲಿಲ್ಲ. ಇತ್ತೀಚೆಗೆ ಅವುಗಳ ಸಂಖ್ಯೆ ಹೆಚ್ಚಿದೆ. ಕೆಲವು ದಿನಗಳ ಹಿಂದೆ 'ಸುದ್ದಿ ಮನೆ ಕತೆ' ಯಾದವರು ಈಗ 'ಸ್ಫೋಟಕ ಸುದ್ದಿ' ಯಾಗಿ ಹಾಜರಾಗಿದ್ದಾರೆ. ಆ ಮಹಾನುಭಾವ ಮೋಹನ್ ಮತ್ತು ದಿನೇಶ್ ಒಂದೇ ದಿನ ಕಾಮೆಂಟ್ ಹಾಕಿದ್ರಂತೆ, ಆ ಕಾರಣಕ್ಕೆ ಇದು ಅವರದೇ ಬ್ಲಾಗ್ ಎಂದು ಫರ್ಮಾನು ಹೊರಡಿಸಿಬಿಟ್ಟ. ಇನ್ಯಾರೋ ಒಬ್ಬ ಪತ್ರಿಕೋದ್ಯಮದ ವಿದ್ಯಾರ್ಥಿ ಎಂದು ಹೇಳಿಕೊಂಡು ಬರೆಯುತ್ತಿದ್ದಾನೆ. ಈ ಮಧ್ಯೆ ಕಾರ್ಗಿಲ್ ವೀರ ಶಿವಪ್ರಸಾದ್, ಇಂತಹ ಬ್ಲಾಗರ್ಸ್ ಮಧ್ಯೆ ಸುದ್ದಿಮಾತು ವನ್ನೂ ಸೇರಿಸಿ ಸಾರಾಸಗಟಾಗಿ ತೀರ್ಪು ಕೋಡುತ್ತಾರೆ.
ಇಂತಹ ಕಲುಷಿತ ವಾತಾವರಣದಿಂದ ದೂರ ಇರಬೇಕೆಂಬುದು ನಮ್ಮ ಬಯಕೆ. ನೀವೇನಂತೀರಿ?

Thursday, August 13, 2009

ಸುವರ್ಣ ಬಿಟ್ಟು ಹೊರಟ ಭಟ್ಟರ ವಿದಾಯದ ನುಡಿಗಳು

ಹಿರಿಯ ಪತ್ರಕರ್ತ ಶಶಿಧರ ಭಟ್ ಸುವರ್ಣ ತೊರೆದಿದ್ದಾರೆ.
ಸುವರ್ಣ ನ್ಯೂಸ್ ಬಿಡುವುದಕ್ಕೂ ಮುನ್ನ ಅವರು ತಮ್ಮ ಕುಮ್ರಿ ಬ್ಲಾಗ್‌ನಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ.
ಸುದ್ದಿಮಾತು ಓದುಗರಿಗಾಗಿ ಭಟ್ಟರ ಮನದಾಳದ ಮಾತುಗಳು ಇಲ್ಲಿವೆ

ಕಳೆದ ಫೆಬ್ರವರಿ ತಿಂಗಳಿನ ನಂತರ ನಾನು ಬ್ಲಾಗ್ ನಲ್ಲಿ ಏನನ್ನೂ ಬರೆದಿಲ್ಲ. ಚಾನಲ್ ನ ಕೆಲಸದ ನಡುವೆ ಬ್ಲಾಗ್ ಬರೆಯುವುದಿರಲಿ ನೋಡುವುದು ನನಗೆ ಸಾಧ್ಯವಾಗುತ್ತಿರಲಿಲ್ಲ. ವಾಹಿನಿಯನ್ನು ಕಟ್ಿ ಬೆಳೆಸುವ ಕೆಲಸ ಇದೆಯಲ್ಲ ಅದೇ ಹಾಗೆ. ಈ ಕೆಲಸದ ನಡುವೆ ನನ್ನ ಓದು ಕುಂಠಿತವಾಯಿತು. ಒಂದು ನಿಮಿಷ ಎಲ್ಲವನ್ನೂ ಬಿಟ್ಟು ನಿರಾಳವಾಗಿ ಇರದಂತಾಯಿತು. ನಾನು ವಾಹಿನಿಯಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದೆ. ಎಲ್ಲದಕ್ಕೂ ಒಂದು ಬಿಡುಗಡೆಯ ಕಾಲ ಅಂತ ಇರುತ್ತೆ. ಬಿಡುಗಡೆ ಅನ್ನುವುದೇ ನಮ್ಮ ಮನಸ್ಸನ್ನು ಪ್ರಫುಲ್ಲಿತವನ್ನಾಗಿ ಮಾಡುತ್ತದೆ. ಬಹುತೇಕ ಸಂದರ್ಭದಲ್ಲಿ ನಾವು ಬಿಡುಗಡೆಗಾಗಿ ಯತ್ನ ನಡೆಸುತ್ತ ಮತ್ತಷ್ಟು ಬಂಧನಕ್ಕೆ ಒಳಗಾಗಿರುತ್ತೇವೆ.
ಈಗ ನನಗೆ ಬಿಡುಗಡೆಯ ಸಮಯ ಬಂದಿದೆ. ನನ್ನ ವಾಹಿನಿಯನ್ನು ಇದ್ದಲ್ಲಿ ಇದ್ದ ಹಾಗೆ ಬಿಟ್ಟು ಮುಂದಕ್ಕೆ ನಡೆದು ಬಿಡುವ ಸಮಯ. ಈ ಸಮಯ ಮುಂದಕ್ಕೆ ಹೋಗುವಾಗ ಹಿಂದಕ್ಕೆ ನೋಡುವ ಸಮಯ ಕೂಡ. ಈ ಸುದ್ದಿ ವಾಹಿನಿಯನ್ನು ಪ್ರಾರಂಭಿಸಿದಾಗ,ಕೆಲಸಕ್ಕೆ ಬರಲು ಯಾರೂ ಸಿದ್ಧರಿರಲಿಲ್ಲ. ಎಲ್ಲರಿಗೂ ಈ ವಾಹಿನಿ ಉಳಿಯಬಹುದೇ ಎಂಬ ಆತಂಕ. ಇಂಥಹ ಸ್ಥಿತಿಯಲ್ಲಿ ಬಂದ ಹುಡುಗರನ್ನು ಕಟ್ಟಿಕೊಂಡು ವಾಹಿನಿಯನ್ನು ಪ್ರಾರಂಭಿಸಿದೆವು. ಕ್ರೆಡಿಬಿಲಿಟಿಗೆ ಹೆಚ್ಚಿನ ಮಹತ್ವ ಕೊಡಬೇಕು ಎಂದುಕೊಂಡೆವು. ಹಾಗೆ ತುಂಬಾ ವಿಭಿನ್ನವಾಗಿ ಸುದ್ದಿಯನ್ನು ನೀಡುವುದಕ್ಕೆ ಯತ್ನ ನಡೆಸಿದೆವು. ಜಿ ಇ ಸಿ ಚಾನಲ್ಲಿನಲ್ಲಿ ಸುದ್ದಿ ಬರುವಾಗ ಒಳ್ಳೆ ರೇಟಿಂಗ್ ಕೂಡ ಇತ್ತು. ಇದನ್ನು ಗಮನಿಸಿ ನಾವು ಸುದ್ದಿ ವಾಹಿನಿಯನ್ನು ಪ್ರಾರಂಭಿಸಿದೆವು. ಸಣ್ಣದಾಗಿದ್ದ ನಮ್ಮ ಕುಟುಂಬ ದೊಡ್ದದಾಯಿತು. ಮನೆಗೆ ಬಂದವರು ಮನೆಯವರಾಗಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಒಂದು ಕುಟುಂಬದ ಯಜಮಾನನಂತೆ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗಬೇಕು ಎಂದು ನಾನು ಅಂದುಕೊಂಡೆ. ಅದರಂತೆ ಕೆಲಸ ನಿರ್ವಹಿಸಲು ಯತ್ನ ನಡೆಸಿದೆ. ಆದರೆ ಎಲ್ಲೋ ತಪ್ಪಾಗಿತ್ತು. ನನಗೆ ಆ ತಪ್ಪು ತಿಳಿದಿರಲಿಲ್ಲ. ನನಗೆ ಸುದ್ದಿ ಮತ್ತು ವಾಹಿನಿಯ ಬದ್ಧತೆ ಬಿಟ್ಟು ಬೇರೆ ಇರಲಿಲ್ಲ. ಈ ಕಾರಣದಿಂದಾಗಿ ಸಹೋದ್ಯೋಗಿಗಳಿಗೆ ಕೆಲವೊಮ್ಮೆ ರೇಗಿದ್ದು ಉಂಟು ಬೈದಿದ್ದು ಉಂಟು.
ನಮ್ಮ ಬದುಕಿನಲ್ಲಿ ಎಲ್ಲ ಕನಸುಗಳೂ ನನಸಾಗುವುದಿಲ್ಲ. ಅದಕ್ಕಾಗಿಯೇ ಬದುಕಿಗೆ ಒಂದು ಆಕರ್ಷಣೆ ಇದೆ. ನಾನೆಂದುಕೊಂಡಿದ್ದನ್ನು ನಾನು ಮಾಡಲು ಸಾಧ್ಯವಾಗಲಿಲ್ಲ. ನನ್ನ ಸ್ನೇಹ ಶೀಲ ಪ್ರವೃತ್ತಿ ದೌರ್ಬಲ್ಯ ಎಂಬಂತೆ ಪ್ರತಿಬಿಂಬಿತವಾಯಿತು. ಮನುಷ್ಯನ ಬದಲಾವಣೆಯಲ್ಲಿ ನಂಬಿಕೆ ಇಟ್ಟ ನಾನು ಎಲ್ಲರೂ ಬದಲಾಗುತ್ತಾರೆ ಎಂದು ನಂಬಿಕೊಂಡಿದ್ದೆ. ಆದರೆ ಬದಲಾಗಬೇಕಾದ ನಮ್ಮ ಸಹೋದ್ಯೋಗಿಗಳು ಬದಲಾಗಲಿಲ್ಲ. ಬದಲಾಗಿ ಈ ಮೇಲ್ ಗಳಲ್ಲಿ ದೂರುಗಳಲ್ಲಿ ನೀಡುವುದರಲ್ಲಿ ಸಮಯವನ್ನು ವ್ಯಯಿಸತೊಡಗಿದರು. ಇದೆಲ್ಲ ನನ್ನ ಮನಸ್ಸಿಗೆ ತುಂಬಾ ನೋವನ್ನು ಕೊಡುತ್ತಿತ್ತು. ನನ್ನ ಹುಡುಗರು ಹೀಗೆ ಮಾಡುತ್ತಾರಲ್ಲ ಎಂದು ಬೇಸರವಾಗುತ್ತಿತ್ತು. ಆದರೆ ಎಷ್ಟೆಂದರೂ ನನ್ನ ಹುಡುಗರು ತಾನೆ ಎಂದು ನಾನು ಸುಮ್ಮನಾಗುತ್ತಿದ್ದ್ವೆ. ಎಂದೂ ಯಾರ ವಿರುದ್ಧವೂ ನಾನು ದೂರಲಿಲ್ಲ. ದೂರು ನೀಡಲಿಲ್ಲ.
ಈಗ ನಾನು ಹೊಸ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಹೊರಟು ನಿಂತಿದ್ದೇನೆ. ಹೊಸ ಸವಾಲು ನನ್ನ ಮುಂದಿದೆ. ಕಳೆದ ಎರಡು ಮೂರು ವರ್ಷಗಳಿಂದ ನನ್ನ ಜೊತೆ ಕೆಲಸ ಮಾಡಿದ ನನ್ನ ಹುಡುಗರಿಗೆ ಬೈಯಲು ನಾನಿರುವುದಿಲ್ಲ .ತಪ್ಪು ಎಂದು ಅನ್ನಿಸಿದ್ದನ್ನು ಹೇಳಲು ನಾನು ಇರುವುದಿಲ್ಲ. ನಾನು ಕಟ್ಟಿದ ವಾಹಿನಿಯ ಮೆಟ್ಟಿಲುಗಳನ್ನು ಇಳಿದು ಹೊರಟು ಬಿಡುತ್ತೇನೆ. ಈ ಹೊಣೆಗಾರಿಕೆಯನ್ನು ನಿರ್ವಹಿಸಲು ಬೇರೆಯವರು ಬರುತ್ತಾರೆ.
ನಾನು ನಮ್ಮ ಹಿರಿಯ ಸಹೋದ್ಯೋಗಿಗಳ ಜೊತೆ ಮಾತನಾಡುತ್ತ ಒಂದು ಮಾತು ಹೇಳಿದೆ. "ನೀವೆಲ್ಲ ಒಂದು ತಂಡವಾಗಿ ಕೆಲಸ ಮಾಡಿದ್ದರೆ ಇಂದು ನಮ್ಮ ವಾಹಿನಿ ನಂಬರ್ ಒನ್ ವಾಹಿನಿಯಾಗುತ್ತಿತ್ತು. ಆದರೆ ಅದು ಆಗಲಿಲ್ಲ. ನಿಮಗೆಲ್ಲ ನನ್ನ ಬಗ್ಗೆ ಭಯವಿತ್ತು. ನನ್ನ ಸಲಹೆಗಳನ್ನು ಸ್ವೀಕರಿಸುವ ಮುಕ್ತ ಮನಸ್ಸು ಇರಲಿಲ್ಲ. ಇಗೋ ನಿಮ್ಮನ್ನು ಬಂಧಿಸಿತ್ತು. ಇದಕ್ಕಾಗಿ ಗುಂಪುಗಾರಿಕೆ ಮಾಡುವವರು ನನ್ನನ್ನೂ ಗುಂಪುಗಾರಿಕೆ ಮಾಡುವವ ಎಂದು ಪ್ರತಿಬಿಂಬಿಸಲು ಯತ್ನ ನಡೆಸಿದಿರಿ. ಆದರೆ ನನಗೆ ಅಂಟಿಕೊಂದು ಇರುವುದು ಗೊತ್ತಿದೆ. ಹಾಗೆ ಎಲ್ಲವನ್ನು ಬಿಟ್ಟು ತಿರುಗಿ ನೋಡದೇ ಹೋಗುವುದಕ್ಕೂ ಗೊತ್ತಿದೆ. "
ಹಾಗೆ ತಿರುಗಿ ನೋಡದೇ ಹೋಗಿ ಬಿಡುವುದು ಯಾವಾಗಲೂ ಸಂತೋಷವನ್ನು ನೀಡುತ್ತದೆ. ನಾನು ಹಲವಾರು ಪತ್ರಿಕೆಗಳಲ್ಲಿ, ವಾಹಿನಿಗಳಲ್ಲಿ ಕೆಲಸ ಮಾಡಿ ಹಾಗೆ ಹೊರಟು ಬಂದಿದ್ದೇನೆ. ಬರುವಾಗ ನಾನೆಲ್ಲಿ ತಪ್ಪು ಮಾಡಿದೆ ಎಂದು ಧ್ಯಾನಿಸುತ್ತ ಕುಳಿತುಕೊಳ್ಳುತ್ತೇನೆ. ಕೆಲವೊಮ್ಮೆ ನನ್ನ ತಪ್ಪುಗಳು ನನಗೆ ಅರಿವಾಗುತ್ತದೆ. ಕೆಲವೊಮ್ಮೆ ತಪ್ಪುಗಳು ಎದುರಿಗೆ ಬರುವುದೇ ಇಲ್ಲ. ಈ ಎಲ್ಲ ಅನುಭವಗಳ ನಡುವೆಯೂ ನಾನು ಮನುಷ್ಯರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿಲ್ಲ. ಕಳೆದುಕೊಳ್ಳುವುದಿಲ್ಲ. ಯಾಕೆಂದರೆ ಮನುಷ್ಯರ ಮೇಲಿನ ನಂಬಿಕೆಯನ್ನು ಕಳೆದುಕೊಂಡ ದಿನ ಬದುಕಿನ ಹಾದಿಗೆ ತೆರೆ ಬೀಳುತ್ತದೆ, ಹೀಗೆ ಮನುಷ್ಯರನ್ನು ನಂಬುತ್ತಲೇ ನಮ್ಮಲ್ಲೆರ ಸಣ್ಣತನ, ಗುಂಪುಗಾರಿಕೆಯ ಬಗ್ಗೆ ಸಣ್ನಕ್ಕೆ ನಕ್ಕು ಬಿಡುತ್ತೇನೆ. ಶಶಿಧರ್ ಭಟ್ಟಾ ಇದು ನಿನಗೆ ಇನ್ನೊಂದು ಅನುಭವ ಎಂದು ನನಗೆ ನಾನೇ ಹೇಳಿಕೊಳ್ಳುತ್ತೇನೆ.
ಈಗ ಇನ್ನೊಂದು ಜವಾಬ್ದಾರಿಯನ್ನು ನಾನು ಒಹಿಸಿಕೊಳ್ಳಲು ಹೊರಟಿದ್ದೇನೆ. ಮತ್ತೆ ದ್ರುಶ್ಯ ಮಾಧ್ಯಮಕ್ಕೆ ನಾನು ಬರುತ್ತೇನೆಯೋ ಇಲ್ಲವೋ ನನಗೆ ತಿಳಿಯದು. ಮಹಾಯುದ್ಧ, ನ್ಯೂಸ್ ಅಂಡ್ ಯೂಸ್, ನಿಗೂಢ ಜಗತ್ತಿನಂತಹ ಕಾರ್ಯಕ್ರಮಗಳನ್ನು ಮತ್ತೆ ಮಾಡುತ್ತೇನೆಯೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಒಂದು ಮಾತನ್ನು ನಾನು ನಿಮಗೆ ಹೇಳಲೇ ಬೇಕು. ಸುವರ್ಣ ನ್ಯೂಸ್ ನನ್ನ ಮಗು. ಯಾರು ಒಪ್ಪಲಿ ಬಿಡಲಿ ಈ ಮಗುವಿನ ಹೆರಿಗೆ ನೋವನ್ನು ನಾನು ಅನುಭವಿಸಿದ್ದೇನೆ. ಇದು ರಚ್ಚೆ ಹಿಡಿದಾಗ ಸಮಾದಾನ ಮಾಡಿದ್ದೇನೆ. ಮುದ್ದು ಮಾಡಿದ್ದೇನೆ. ಹಾಗೆ ಮಗು ನನಗೆ ಒದ್ದಾಗ ಪ್ರೀತಿಯಿಂದ ತಲೆ ನೇವರಿಸಿದ್ದೇನೆ. ಈ ಮಗುವನ್ನು ಬಿಟ್ಟು ಹೋಗುವ ಘಳಿಗೆಯಲ್ಲಿ ಸ್ವಲ್ಪ ಬೇಸರವಾಗುವುದು ಸಹಜ. ಆದರೆ ಈ ಮಗುವಿನ ಬಗ್ಗೆ ನಿಮಗೆ ಪ್ರೀತಿ ಇರಲಿ. ನಿಮ್ಮ ಮಡಿಲಲ್ಲಿ ಹಾಕಿರುವ ಮಗುವನ್ನು ಪ್ರೀತಿಯಿಂದ ನೋಡಿಕೊಳ್ಳಿ.

Monday, August 10, 2009

ಇದು ಇಂದಿನ ಪತ್ರಿಕಾರಂಗ!

ಎಲ್ಲಾ ಪತ್ರಿಕೆ ಮಾಲೀಕರಿಗೆ ಕನ್ನಡ ಪ್ರಭ ರಂಗನಾಥ್ ಒಂದು ಪಾಠ ಕಲಿಸಿದ್ದಾರೆ. ಆ ಪಾಠ ಇಷ್ಟೆ 'ಯಾರು, ಎಷ್ಟೇ ಪ್ರತಿಭಾನ್ವಿತನಾಗಿದ್ದರೂ ಸಂಪೂರ್ಣ ಸ್ವಾತಂತ್ರ್ಯ ಕೂಡಬಾರದು!!' ಪತ್ರಿಕೆ ಮಾಲೀಕರ ಪೈಕಿ, ಈ ಪಾಠ ಹೆಚ್ಚು ತೀವ್ರವಾಗಿ ತಾಕಿರುವುದು ಮಿಸ್ಟರ್ ಸೋಂತಾಲಿಯಾಗೆ.
ರಂಗನಾಥ್, 90 ರ ದಶಕದಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟವರ ಮಧ್ಯೆ ರಂಗ ಎಂದೇ ಪರಿಚಿತ. ಅವರು ಕ್ರೈಮ್ ಬೀಟ್ ನಲ್ಲಿದ್ದುದರಿಂದ 'ಕ್ರೈಮ್ ರಂಗ' ಎಂಬ ಆರೋಪ ರೂಪದ ಬಿರುದು ಅವರಿಗುಂಟು. ಅವರು ತಮ್ಮ ವರದಿಗಳಿಗಿಂತ ಪೊಲೀಸ್ ಇಲಾಖೆಯಲ್ಲಿ ಇರುವ ಸಂಪರ್ಕಗಳಿಗಾಗಿ ಹೆಸರಾದವರು. ಸುದ್ದಿ ಹೆಕ್ಕುವ ಕಲೆ ಸಿದ್ಧಿಸಿತ್ತು. ಆ ಕಾರಣ ವೃತ್ತಿಯಲ್ಲಿ ಬೇಗನೇ ಮೇಲೆ ಬಂದರು. ಮುಖ್ಯವರದಿಗಾರ ಹಾಗೇ ಸಂಪಾದಕರೂ ಆದರು. ಸಂಪಾದಕರಾಗಿ ಕನ್ನಡ ಪ್ರಭಕ್ಕೆ ಹೊಸತನ ತಂದರು. ರಾಜಕುಮಾರ್ ತೀರಿಕೊಂಡಾಗ ಕನ್ನಡ ನಾಡೇ ಹುಬ್ಬೇರಿಸುವಂತೆ ಹದಿನಾರು ಪುಟಗಳ ಶ್ರದ್ಧಾಂಜಲಿಯನ್ನು ಅರ್ಧದಿನಕ್ಕೇ ಸಿದ್ಧಪಡಿಸಿದ್ದು ಶ್ಲಾಘನೀಯ. ಇತರ ಪತ್ರಿಕೆಗಳ ಸಂಪಾದಕರು ಯೋಚಿಸುವದಕ್ಕಿಂತ, ಯೋಜಿಸುವುದಕ್ಕಿಂತ ಒಂದು ಹೆಜ್ಜೆ ಮುಂದೆ ಹೋದದ್ದು ರಂಗನಾಥ್ ವೈಶಿಷ್ಟ್ಯ. ವರ್ಷದ ಕನ್ನಡಿಗ ಎಂಬ ಯೋಜನೆ ಕೂಡಾ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ತೀರಾ ಇತ್ತೀಚೆಗೆ ಸಂಪಾದಕೀಯ ಪುಟದಲ್ಲಿ ಪ್ರೊಯೋಗ ಮಾಡಿ ಓದುಗರನ್ನು ಸೆಳೆದದ್ದು ಸಾಮಾನ್ಯವೇನಲ್ಲ.
ಕೆಲವೊಮ್ಮೆ ಅತಿರೇಕ ಇದ್ದದ್ದು ಢಾಳಾಗಿ ಕಾಣುತ್ತಿತ್ತು. ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಸಾರಿ ಹೇಳಿದ್ದು ಕನ್ನಡಪ್ರಭ. ಆದರೆ ಇವರ ಸಹೋದರ ಪತ್ರಿಕೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಅಂತಹ ನಿಲುವು ತಾಳಲಿಲ್ಲ. ಪ್ರವೀಣ್ ಸೂದ್ ಮೈಸೂರಿನಲ್ಲಿ ಕಮೀಷನರ್ ಆಗಿದ್ದಾಗ ಫೇಕ್ ಎನ್ ಕೌಂಟರ್ (ಮುಖಾಮುಖಿ ಅಷ್ಟೆ. ಎನ್ ಕೌಂಟರ್ ಎಂದಾಕ್ಷಣ ಸಾಯಲೇಬೇಕಿಲ್ಲ) ಪ್ರಕರಣದ ವರದಿಯನ್ನು ಮಿಸ್ಟರ್ ರಂಗನಾಥ್ ಆ ಘಟನೆ ಆಗುವ ಮುನ್ನವೇ ಬರೆದಿಟ್ಟಿದ್ದರು ಎಂಬ ಸುದ್ದಿ ಇದೆ.
ಇಷ್ಟೆಲ್ಲಾ ಪ್ರಯೋಗಗಳು, ಅತಿರೇಕಗಳು ಸಾಧ್ಯವಾಗಿದ್ದು ಸೋಂತಾಲಿಯ ರಂಗನಾಥರ ಮೇಲಿಟ್ಟಿದ್ದ ವಿಶ್ವಾಸದಿಂದ. ಹಾಗೂ ಅವರು ಕೊಟ್ಟ ಸ್ವಾತಂತ್ರ್ಯದಿಂದ!
ಕೆಲವೇ ದಿನಗಳಲ್ಲಿ 'ಕನ್ನಡ ಪ್ರಭ' ಮತ್ತು 'ರಂಗನಾಥ್' ಎಂಬ ಎರಡು ಪದಗಳು ಒಂದೇ ಆಗಿಬಿಟ್ಟವು. ರಂಗ ಎಂದರೆ ಕನ್ನಡಪ್ರಭ ಮತ್ತು ವೈಸ್ ವರ್ಸಾ. ರಂಗನಾಥ್ ಮೊದಲು ವಕ್ರದೃಷ್ಟಿ ಬೀರಿದ್ದು ಪತ್ರಿಕೆಯಲ್ಲಿ ಬಹಳ ಕಾಲದಿಂದ ದುಡಿಯುತ್ತಿದ್ದ ಹಲವರ ಮೇಲೆ. ಅವರೆಲ್ಲರಿಗೂ ಹೊಸ ಹೊಸ ಸಾಫ್ಟ್ ವೇರ್ ಗಳನ್ನು ಕಲಿಯಲು ಡೆಡ್ ಲೈನ್ ನೀಡಿದರು. ಆಗದೇ ಹೋದರೆ ಮನೆಗೆ ನಡೆಯಿರಿ ಎಂದರು. ಬೇಸತ್ತು ಕೆಲವರು ಮನೆಗೆ ಹೋಗುವ ನಿರ್ಧಾರಕ್ಕೆ ಬರುವಂತೆ ಮಾಡಿದರು. ಕೇವಲ ಯುವಕರಿಂದ ತಾನು ಪತ್ರಿಕೆ ಮಾಡುತ್ತೇನೆ. ಹಳಬರೆಲ್ಲ ಸುಮ್ಮನೇ ದಂಡಕ್ಕೆ ಇರುವುದು ಎಂಬ ಮಾತುಗಳನ್ನಾಡುತ್ತಾ ಹಿರಿಯ ಜೀವಗಳು ವಿನಾಕಾರಣ ಗಿಲ್ಟ್ ನಿಂದ ಬೇಯುವಂತೆ ಮಾಡಿದ ಕೀರ್ತಿ ರಂಗನಾಥ್ ಗೆ ಸೇರಬೇಕು.
ರಂಗನಾಥ್ ಪತ್ರಿಕೆಗೆ ಏನೇ ಹೊಸತನ್ನು ತುಂಬಿದ್ದರೂ, ಆತ ಮಾಡದೇ ಹೋದದ್ದು ಏನೆಂದರೆ, ಪತ್ರಿಕೆಗೊಂದು ಭವಿಷ್ಯ ಕೊಡಲಿಲ್ಲ. ವರ್ತಮಾನಕಷ್ಟೆ ಅವರ ಕೊಡುಗೆ. ಈಗ ಅವರ ನಂತರ ಯಾರು ಎಂಬ ಪ್ರಶ್ನೆ ಬಂದಾಗ ಪತ್ರಿಕಾಲಯದಲ್ಲಿ ಯಾರೂ ಕಾಣುವುದಿಲ್ಲ. ಅವರ ಸಮಾನಕ್ಕೆ ಬೆಳೆದ ರವಿ ಹೆಗಡೆ ಕೂಡಾ ಹೊರಟು ನಿಂತಿದ್ದಾರೆ. ಒಂದಿಷ್ಟು ಕೆಲಸ ಕಲಿತಿದ್ದ ಕೆಲವರು ರಂಗನಾಥ್ ಕರೆದರೆ ಹೋಗಲು ತಾವೂ ರೆಡಿ ಎನ್ನುತ್ತಿದ್ದಾರೆ. ಸೋಂತಾಲಿಯಾಗೆ ಈಗ ತಪ್ಪಿನ ಅರಿವಾಗಿದೆ. ಏಕಾಏಕಿ ರಂಗನಾಥ್ ಹೊರಟು ನಿಂತಾಗ, ಅವರ ಸ್ಥಾನದಲ್ಲಿ ಯಾರನ್ನು ಕೂರಿಸಿವುದು?
ಕನ್ನಡ ಪತ್ರಿಕಾ ಇತಿಹಾಸವನ್ನು ಗಮನಿಸಿದರೆ ಮೊದಲ ಹಂತದಲ್ಲಿ ಉತ್ತಮ ಸಾಹಿತಿ ಬರಹಗಾರರು ಸಂಪಾದಕರಾಗಿ ದುಡಿದಿದ್ದಾರೆ. ಅವರಿಗೆ ಹೇಗೆ ಹೇಳುತ್ತೇವೆ, ಎನ್ನವುದಕ್ಕಿಂತ ಏನನ್ನು ಹೇಳುತ್ತೇವೆ ಎಂಬುದರ ಬಗ್ಗೆ ತೀವ್ರ ಆಸ್ಥೆ. ಮುಖ್ಯವಾಹಿನಿ ಮತ್ತು ಟ್ಯಾಬ್ಲಾಯ್ಡ್ ಕ್ಷೇತ್ರದಲ್ಲೂ ಹೀಗೇ ಆದದ್ದು. ನಂತರದ ದಿನಗಳಲ್ಲಿ, ಬರಹಗಾರರು ಹಿಂದಕ್ಕೆ ಸರಿದು, ಪತ್ರಿಕೋದ್ಯಮವನ್ನು ಅಕಡೆಮಿಕ್ ಶಿಸ್ತಾಗಿ ಓದಿಕೊಂಡವರು ಪತ್ರಿಕೆಗಳ ಸಾರಥ್ಯ ವಹಿಸಿದರು. ಅವರ ಪಾಲಿಗೆ ಪತ್ರಿಕೆ ಸಂವಹನಕ್ಕೆ ಒಂದು ಮಾಧ್ಯಮ ಅಷ್ಟೆ. ಇಂತಹವರು ಬಹುಬೇಗನೆ ಪತ್ರಿಕಾ ಮಾಲೀಕರ ಅಗತ್ಯ, ಜಾಹಿರಾತುದಾರರ ಮರ್ಜಿ ಮತ್ತು ವಿತರಕರ ಹಿತಾಸಕ್ತಿಗಳಿಗೆ ಮಣಿಯುತ್ತಿದ್ದರು. ಕಾರಣ ಇಷ್ಟೆ, ಅವರು ಕಲಿತು ಬಂದ ಪತ್ರಿಕೋದ್ಯಮ ಪಾಠದ ಪ್ರಕಾರ ಹೆಚ್ಚು ಸರ್ಕ್ಯುಲೇಶನ್ ಯಶಸ್ವೀ ಸಂವಹನದ ಸಂಕೇತ. ಜತೆಗೆ ಅವರಿಗೆ ಆಡಳಿತದಲ್ಲಿ ಹಿಡಿತ ಸಿದ್ಧಿಸಿತ್ತು. ತಮ್ಮ ಕೈ ಕೆಳಗಿನವರಿಂದ ಕೆಲಸ ತೆಗೆಯುವ ಕಲೆ ಗೊತ್ತು. ಆದರೆ ಉತ್ತಮ ಪತ್ರಕರ್ತರನ್ನು ಸೃಷ್ಟಿಸುವ ಜರೂರು ಇವರಿಗಿಲ್ಲ. ರಂಗನಾಥ್ ಅನೇಕರಿಗೆ ಕೆಲಸ ಕೊಟ್ಟು ಪತ್ರಕರ್ತರನ್ನಾಗಿ ಮಾಡಿರಬಹುದು.
ಆದರೆ ಅದೇ ಪತ್ರಿಕೆಯಲ್ಲಿ ಬಹಳ ಕಾಲ ದುಡಿದ ಸೂ. ರಮಾಕಾಂತ್ ಹಲವು ಆರೋಗ್ಯವಂತಹ ಮನಸ್ಸುಗಳಿಗೆ ಪ್ರೇರಕರಾಗಿದ್ದರು. ದೇವನೂರು ಮಹದೇವ ತನಗೆ ಸಮಾಜವಾದದ ದೀಕ್ಷೆ ಕೊಟ್ಟಿದ್ದೇ ಸೂ.ರಮಾಕಾಂತ್ ಎಂದು ಹೇಳಿಕೊಂಡಿದ್ದಾರೆ. ಒಮ್ಮೆ ಯೋಚಿಸಿ, ಇಂದಿನ ಪತ್ರಿಕೋದ್ಯಮದಲ್ಲಿ ಇಂತಹದೊಂದು ದೀಕ್ಷೆ ಕೊಡಬಲ್ಲವರು ಎಷ್ಟು ಜನರಿದ್ದಾರೆ? (ಬೇಕಾದ್ರೆ ಕೋಮುವಾದದ ದೀಕ್ಷೆ ಕೊಡಲು ಬೇಕಾದಷ್ಟು ಜನರಿದ್ದಾರೆ!) ಅಬ್ಬಬ್ಬಾ ಅಂದರೆ ರಂಗನಾಥ್ ತನಗೆ ಗೊತ್ತಿರುವ ಹಿರಿಯ ಅಧಿಕಾರಿಗೆ ಕಿರಿಯ ವರದಿಗಾರನನ್ನು ಪರಿಚಯಿಸಿ ಸುದ್ದಿ ತರಲು ಸಹಾಯ ಮಾಡಬಹುದು.
ಇದೆಲ್ಲಾ ಏಕೆ ಹೇಳಬೇಕಾಯಿತು ಎಂಬುದು ಈ ಬ್ಲಾಗ್ ಓದುಗರಿಗೆ ಗೊತ್ತಿದೆ. ರಂಗನಾಥ್ ಮತ್ತು ರವಿ ಹೆಗಡೆ ತಮ್ಮ ಕೆಲ ಗೆಳೆಯರ ಸಂಗಡ ಸುವರ್ಣ ಚಾನೆಲ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿದೆ. ಕಳೆದ ವಾರ ಅವರು ರಾಜೀನಾಮೆ ನೀಡಿದರು ಎನ್ನುವ ಸುದ್ದಿ ಜಗಜ್ಜಾಹೀರು. ಪತ್ರಿಕೆಗೆ ಯಾರೂ ಅನಿವಾರ್ಯರಲ್ಲ. ಆದರೆ ಆಯಕಟ್ಟಿನ ಜಾಗೆಯಲ್ಲಿದ್ದವರೆಲ್ಲಾ ಗುಳೇ ಹೊರಟರೆ ಪತ್ರಿಕೆ ಸುಧಾರಿಸಿಕೊಳ್ಳಲು ಸಮಯ ಬೇಕಾಗುತ್ತದೆ.

Tuesday, July 28, 2009

ರಿಯಾಕ್ಷನ್ ಪಾರ್ ರಿಯಾಕ್ಷನ್ ಜರ್ನಲಿಸಂ..!

ಎಲೆಕ್ಟ್ರಾನಿಕ್ ಮಾಧ್ಯಮಗಳ ಸುದ್ದಿಹಸಿವು, ಅದಕ್ಕಾಗಿ ಅವರು ಆಯ್ದುಕೊಳ್ಳುವ ಮಾರ್ಗಗಳ ಕುರಿತಂತೆ ಸ್ವತಃ ಎಲೆಕ್ಟ್ರಾನಿಕ್ ಮೀಡಿಯಾ ಒಂದರ ದೆಹಲಿ ಪ್ರತಿನಿಧಿಯಾಗಿರುವ ಶ್ರೀನಿವಾಸಗೌಡ ತಮ್ಮ ಖಾಸಗಿ ಡೈರಿಯಲ್ಲಿ ಬರೆದಿದ್ದಾರೆ.
ಸುದ್ದಿಯನ್ನು ಸೃಷ್ಟಿಸುವ ಚಾಳಿ ಇತ್ತೀಚಿಗೆ ಈ ಮಾಧ್ಯಮಗಳಲ್ಲಿ ವ್ಯಾಪಕವಾಗಿದೆ. ರಿಯಾಕ್ಷನ್ ಫಾರ್ ರಿಯಾಕ್ಷನ್ ಜರ್ನಲಿಸಂ ಹೊಸ ತಲೆಮಾರಿನ ಪತ್ರಕರ್ತರನ್ನು ಹೇಗೆ ದಿಕ್ಕುತಪ್ಪಿಸಿದೆ ಎಂಬುದಕ್ಕೆ ಈ ಲೇಖನದಲ್ಲಿ ಒಳನೋಟಗಳಿವೆ. ಸುದ್ದಿ ಮಾತು ಓದುಗರಿಗಾಗಿ ಶ್ರೀನಿವಾಸಗೌಡರು ಬರೆದ ಲೇಖನ ಇಲ್ಲಿದೆ.

ಲೋಕಸಭಾ ಚುನಾವಣೆಗಳು ನಡೆಯುತ್ತಿದ್ದವು.ಡೆಲ್ಲಿ ಅನ್ನೊ ನಗರಿ ಚುನಾವಣಾ ಬಿಸಿಯಿಂದ ಕೊತ, ಕೊತ ಅಂತ ಕುದಿಯುತ್ತಿತ್ತು. ಅಧಿಕಾರ ಹಿಡಿಯುವ ಹಪಹಪಿಯಿಂದ ರಾಜಕೀಯ ನಾಯಕರು ಕೆಸರೆರಚಾಟ, ಮಾತಿನ ಧಾಳಿ (ಬೈಟ್ ದಾಳಿ) ಮಾಡುತ್ತಿದ್ದರು. ನಾರ್ಥ್ ಇಂಡಿಯಾದ (ನ್ಯಾಷನಲ್ ಮೀಡಿಯಾದವರು) ಮಾದ್ಯಮಗಳು ರಾಜಕೀಯ ನಾಯಕರ ಹೇಳಿಕೆಗಳನ್ನ ರಾಷ್ಟ್ರೀಯ ಸುದ್ದಿಮಾಡುತ್ತಿದ್ದರು. ತಮಗೆ ಸಿಕ್ಕಿದ್ದೆಲ್ಲವನ್ನು ಎಕ್ಸ್ಲೂಸಿವ್ ಅಂತ ತೋರಿಸೊರು. ನ್ಯಾಷನಲ್ ಮಿಡಿಯಾಗಳಲ್ಲಿ ಪಸ್ಟ್ ಇನ್ ಸಿಎನ್‌ಎನ್ ಐಬಿಎನ್, ಪಸ್ಟ್ ಇನ್ ಟೈಮ್ಸ್ ನೌ, ಪಸ್ಚ್ ಇನ್ ಆಜ್ ತಕ್ ,ಅಂತ ಪ್ರೋಮೋ ಹಾಕಿಕೊಂಡು ರಾಜಕೀಯ ನಾಯಕರ ಸಂದರ್ಶನಗಳು, ಸುದ್ದಿಗಳು ಬರುತ್ತಿದ್ದವು.

ರಾಜಕೀಯ ನಾಯಕರ ಸಂದರ್ಶನ ಸಿಕ್ಕಿದ್ದೆ ಜೀವಮಾನದ ಸಾಧನೆ ಅಂಥ ಟೆಲಿವಿಷನ್ ಪತ್ರಕರ್ತರು ರೋಮಾಂಚನಕ್ಕೆ ಒಳಗಾಗಿದ್ದರು. ದಿನ ಬೆಳಾಗಾದರೆ 'ಲಾಲೂ ಹೀಗೆ ಅಂದವ್ರೆ ನೀವು ಏನ್ ಹೇಳ್ತಿರಿ', 'ಅಮರ್ ಸಿಂಗ್ ಹಿಂಗೆ ಹೇಳವ್ರಲ್ಲಾ ನೀವು ಏನಂತೀರಿ', 'ವರುಣ್ ಗಾಂಧಿ ಹೇಳಿಕೆಗೆ ನಿಮ್ಮ ರಿಯಾಕ್ಷನ್ ಏನು', 'ಮಾಯಾವತಿ ಹಿಂಗೆ ಹೇಳವ್ರಲ್ಲಾ ಅದಕ್ಕೆ ನೀವೆಂಗೆ ಹೇಳ್ತೀರಿ', ಅಂತ ಬೈಟ್ ತೆಗೆದುಕೊಳ್ಳೊದು ಆಯಾ ಬೀಟ್ ನಲ್ಲಿರೋ ಕೆಲಸ. ಇದಕ್ಕೆ ರಾಜಕೀಯ ಪಕ್ಷಗಳ ಸಹಕಾರ ಹೇಗಿದೆಯಪ್ಪಾ ಅಂದರೆ, ದಿನಾ ಸಾಯಂಕಾಲ ಎಲ್ಲಾ ಪಕ್ಷಗಳ ಕಚೇರಿಯಲ್ಲೂ ಪ್ರೆಸ್ ಕಾನ್ಪರೆನ್ಸ್ ಕರೆಯುತ್ತಾರೆ. ಅವರು ಹೇಳಿದ್ದಕ್ಕೆ ಇವರು, ಇವರು ಹೇಳಿದ್ದಕ್ಕೆ ಅವರು ಉತ್ತರ ಕೊಡುತ್ತಾರೆ.

ನೇರವಾಗಿ ಯಾರೂ ಕಚ್ಚಾಡಲ್ಲಾ, ಮೀಡಿಯಾ ರಾಜಕೀಯ ಪಕ್ಷಗಳಿಗೆ ಮೀಡಿಯೇಟರ್ ಇದ್ದ ಹಾಗೆ. ಚಾನಲ್ ಗಳಿಗೆ ಬೇಕಾಗಿದ್ದು ಏನು ಅಂತ ಅವರಿಗೊ ಅರ್ಥ ಆಗಿಹೊಗಿದೆ. ಅದಕ್ಕಾಗಿಯೇ ರಾಜಕೀಯ ಪಕ್ಷಗಳೂ ವರ್ಣರಂಜಿತವಾಗಿ ಮಾತಾಡೋರನ್ನ ಪಕ್ಷದ ವಕ್ತಾರರನ್ನಾಗಿ ನೇಮಿಸಿದ್ದಾರೆ.ಅವರಲ್ಲಿ ಬಹುತೇಕರು ಸುಪ್ರಿಂ ಕೋರ್ಟ್ ಲಾಯರ್ ಗಳು, ಇಲ್ಲಾ ಹಳೇ ಜರ್ನಲಿಸ್ಟ್ ಗಳು. ಪಾಟಿ ಸವಾಲಿಗೆ ಉತ್ತರಿಸಲು ಇವರಿಗೇ ಅಲ್ಲ ಗೊತ್ತಿರೋದು. ಅವರ ಕೆಲಸ ಏನಪ್ಪಾ ಅಂದರೆ ದಿನಪೂರ್ತಿ ಚಾನಲ್ ಗಳಿಗೆ ಬೈಟ್ ಕೋಡೋದು. ಪತ್ರಿಕೆಗಳಿಗೆ ಮಾತಾಡೋದು. ರಿಯಾಕ್ಷನ್ ಪಾರ್ ರಿಯಾಕ್ಷನ್ ಅದು ಅವರ ಕೆಲಸ ಯಾವ ಪಕ್ಷವೂ ಇದರಲ್ಲಿ ಹಿಂದೆ ಬಿದ್ದಿಲ್ಲ ಬಿಡಿ.

ಅವತ್ತು ಏನಾಯ್ತು ಅಂದರೆ ಬಿಜೆಪಿ ಕಚೇರಿಯಲ್ಲಿದ್ದೆವು. ಯಾರೋ ಎಲಕ್ಟ್ರಾನಿಕ್ ಮೀಡಿಯಾದ ವರದಿಗಾರ್ತಿ ಯೊಬ್ಬಳಿಗೆ ಅರುಣ್ ಶೌರಿ ಸಿಕ್ಕಾಪಟ್ಟೆ ರೇಗ್ತಾ ಇದ್ದರು. ನಾನು ಕುತೂಹಲಕ್ಕೆ ಅಂತ ಹತ್ತಿರ ಹೋದೆ.
'ಡೋಂಟ್ ಡೂ ದಿಸ್ ಬ್ಲಡಿ ಜರ್ನಲಿಸಂ, ದಿಸ್ ಈಸ್ ಕಾಲ್ಡ್ ಬೈಟ್ ಜರ್ನಲಿಜಂ. ವೈ ಶುಡ್ ಐ ರಿಯಾಕ್ಟ್ ಪಾರ್ ಸಂ ಒನ್ಸ್ ಸ್ಟೇಟ್ ಮೆಂಟ್. ಗೋ ಗೋ, ಲರ್ನ್ ವಾಟ್ ಈಸ್ ಜರ್ನಲಿಜಂ' ಅಂದರು .
ಒಂದು ರಿಯಾಕ್ಷನ್ ಬೈಟ್ ಕೇಳಿದ ಕಾರಣಕ್ಕೆ ಆ ರಿಪೋರ್ಟರ್ ಸಿಕ್ಕಾಪಟ್ಟೆ ಬೈಸಿಕೊಂಡು ಹ್ಯಾಪ ಮೊರೆ ಹಾಕಿಕೊಂಡು ಕಣ್ಣೀರಾಗುತ್ತಿದ್ದಳು. ಅಷ್ಟೇನು ಅನುಭವಿ ಅಲ್ಲದ ಆಕೆ ಸಿಎನ್‌ಇಬಿ ಎಂಬ ಹಿಂದಿ ಚಾನಲ್ಲಿನ ವರದಿಗಾರ್ತಿ, ಆಕೆ ಮಾಡಿದ ತಪ್ಪೇನಪ್ಪಾ ಅಂದರೆ, ಲಾಲೂ ಪ್ರಸಾದ್ ಯಾದವ್ ಅರುಣ್ ಗಾಂಧಿ ಕುರಿತು ಕೊಟ್ಟಿದ್ದ ಹೇಳಿಕೆಗೆ ಅರುಣ್ ಶೌರಿ ರಿಯಾಕ್ಷನ್ ಕೇಳಿ ಮೈಕ್ ಮುಂದಿಟ್ಟುಕೊಂಡಿದ್ದಳು. ಮೊದಲೇ ಪೈರ್ ಬ್ರಾಂಡ್ ಅರುಣ್ ಶೌರಿ, ಅವಳು ಚಿಕ್ಕ ಹುಡುಗಿ ಅನ್ನೊದನ್ನ ಮರೆತು ಝಾಡಿಸಿಬಿಟ್ಟಿದ್ದಾರೆ, ಹಿಂದೊಮ್ಮೆ ಪರ್ತಕರ್ತನಾಗಿದ್ದ ಶೌರಿ ಅವರಿಗೆ ಈಗಿನ ಎಲೆಕ್ಟ್ರಾನಿಕ್ ಮಾದ್ಯಮಗಳ ಕಾರ್ಯವೈಖರಿ ಬಗ್ಗೆ ಸಿಕ್ಕಾಪಟ್ಟೆ ಅಸಹನೆ ಇದ್ದ ಹಾಗೆ ಕಾಣುತ್ತಿತ್ತು. ಪಾಪ ಆ ಹುಡುಗಿ ದಿನಾ ಮಾಡೋದನ್ನೆ ಶೌರಿ ಮುಂದೆ ಮಾಡಿದಾಳೆ ಅವಳದೇನು ತಪ್ಪು....!

ಅವಳನ್ನು ನಿಯಂತ್ರಿಸೋ ಡೆಸ್ಕ್ ಇಂಚಾರ್ಜ್ ಅದನ್ನೇ ಬೇಕು ಅಂತ ಕೇಳಿರ್ತಾನೆ. 'ಗೆಟ್ ಸಮ್ ರಿಯಾಕ್ಷನ್ ಪಾರ್ ವರುಣ್ ಲಾಲೂ ಸ್ಟೇಟ್ ಮೆಂಟ್ 'ಅಂತ. ಅದಕ್ಕಂತ ಆಯಮ್ಮ ಸ್ವಲ್ಪಾನು ಯೋಚಿಸದೇ ಎದುರು ಸಿಕ್ಕ ಬೆಜೆಪಿ ನಾಯಕ ಅರುಣ್ ಶೌರಿ ಬೈಟ್ ಕೇಳಿದ್ದಾಳೆ.
ಅದೇ ರವಿಶಂಕರ್ ಪ್ರಸಾದ್, ಅರುಣ್ ಜೇಟ್ಲಿ, ವೆಂಕಯ್ಯನಾಯ್ಡು, ಅನಂತ್ ಕುಮಾರ್ ಅಂತ ಮೀಡಿಯಾ ಸೇವಿ ನಾಯಕರ ಹತ್ತಿರ ಬೈಟ್ ಕೇಳಿದ್ರೆ ಬರೇ ಬೈಟ್ ಯಾಕೆ ಸಂದರ್ಶನವೇ ಸಿಕ್ಕಿರೋದು...!

ಆದರೆ ವಾಸ್ತವ ಏನಪ್ಪಾದನ್ನ ಅರುಣ್ ಶೌರಿ ಸಿಟ್ಟಿನಲ್ಲಿ ಗಂಬೀರವಾದ ಅರ್ಥ ಇದೆ. ಇಂಡಿಯಾದ ಎಲೆಕ್ಟ್ರಾನಿಕ್ ಮಾದ್ಯಮ ಪ್ರಾಕ್ಟೀಸ್ ಮಾಡ್ತಾ ಇರೋ ವರದಿಗಾರಿಕೆ ಸರೀನಾ ಅನ್ನೊದು. ಯಾಕಂದರೆ ಇವತ್ತು ಪೊಲಟಿಕಲ್ ವರದಿಗಾರಿಕೆ ಅಂದರೆ ಏನು..? ರಾಜಕೀಯ ನಾಯಕರಿಂದ ಬೈಟ್ ತೆಗೆದುಕೊಂಡು ಬರೋದು, ಅದು ಎಂತಾ ಬೈಟು ಬೇಕು ಅಂದರೆ, ಅದಕ್ಕೆ ವಿರೋಧಿಪಕ್ಷದವನು ಕೆರಳಿ ಪ್ರತಿಕ್ರಿಯೆ ನೀಡುವಸ್ಟು ಸ್ಟ್ರಾಂಗ್ ಆಗಿರಬೇಕು. ಇಲ್ಲಾ ಅಂದರೆ ಅದು ಉಪಯೋಗಕ್ಕೆ ಬರಲ್ಲ ಅನ್ನೊದು ಈಗಿನ ನ್ಯೂ ಜರ್ನಲಿಸಂ.

ಬೈಟ್ ನಲ್ಲಿ ಏನಿರಬೇಕು ಬೈಗುಳ ಬೇಕು, ಮತ್ತೊಬ್ಬರನ್ನ ಅವಮಾನಿಸಬೇಕು, ಕೆರಳಿಸಬೇಕು, ಇಲ್ಲಾ ತೆಗಳಬೇಕು, 'ಇಲ್ಲಾರಿ ನಾನು ಮತ್ತೊಬ್ಬರ ಬಗ್ಗೆ ಮಾತಾಡಲ್ಲಾ ರೀ ಅಂದರೆ' ಆ ನಾಯಕ ವೇಸ್ಟ್, ಟಿಆರ್ ಪಿ ತಂದುಕೊಡದ ಪುರಾಣ, ಹರಿಕತೆ. ಒಳ್ಳೇ ಯೋಚನೆ, ಅಭಿವೃದ್ದಿ ಕೆಲಸ ಯಾವುದೂ ಬೇಡ ಬೇಕಿರೋದು ಸ್ಪೈಸಿ ಬೈಟ್ .
.
ಬೈಟ್ ಯಾವಾಗಲೂ ಸಮ್ ಥಿಂಗ್ ಸ್ಪೈಸಿ ಇರಬೇಕು...

ಪತ್ರಕರ್ತರನ್ನ ಅರ್ಥ ಮಾಡಿಕೊಂಡು ಸಿಕ್ಕಾಪಟ್ಟೆ ಕಾಂಟ್ರೋವಸಿ ಬೈಟ್ ಕೊಡುವ ರಾಜಕೀಯ ವ್ಯಕ್ತಿ ಗಳು ಅಂದ್ರೆ ಜರ್ನಲಿಸ್ಟ್ ಗಳಿಗೂ ಖುಷಿ. ಅವರ ಹಿಂದೆ ದಿನಾಲೂ ಬೀಟ್, ಅವರು ಹೇಳಿದ್ದೆಲ್ಲಾ ನ್ಯೂಸ್.
ಅದೇ ಬೈಟ್ ಕೊಟ್ಟ ವ್ಯಕ್ತಿ, ನಾಳೆ ನಾನು ಹಾಗೆ ಹೇಳಿಲ್ಲಾ ಅದೆಲ್ಲಾ ಮಾದ್ಯಮದವರ ಸೃಷ್ಠಿ ಅಂದರೂ ಬೇಜಾರಿಲ್ಲಾ. ಹಳೇ ಬೈಟ್ ಮತ್ತು ಹೊಸ ಬೈಟ್ ಸೇರಿಸಿ ಮಾಸಾಲ ಅರೆದರೆ ಒಳ್ಳೇ ಟಿಆರ್ ಪಿ ಬರುತ್ತೆ ಚಾನಲ್ಲಿಗೆ. ಬೈಟ್ ಜರ್ನಲಿಸಂ ಅಂದ್ರೆ ಸುಳಿವು ಸಿಕ್ಕಿತಲ್ಲಾ.

ಅದು ಬಿಡಿ ಸದ್ಯಕ್ಕೆ ಚಾಲ್ತಿಯಲ್ಲಿರೊ ಇನ್ನೊಂದು ಜರ್ನಲಿಸಂ ಇದೆ ಅದು ಇನ್ವಸ್ಟಿಗೇಟೀವ್ ಜರ್ನಲಿಸಂ. ಹಾಗಂದ್ರೆ ಹೊಸ ಅರ್ಥನೇ ಇದೆ.
ಈಗ ಇನ್ವೆಸ್ಚಿಗೇಟೀವ್ ಜರ್ನಲಿಸಂ ಅಂದರೆ ಏನಪ್ಪಾ ಅಂದರೆ ರಾಜಕಾರಣಿಗಳು, ಉದ್ಯಮಿಗಳು, ಮತ್ತಿತರ ಒತ್ತಡ ಗುಂಪುಗಳು ತಮಗೆ ಆಗದವರ, ತಮ್ಮ ವಿರೋಧಿಗಳ ಬಗ್ಗೆ ಖುದ್ದು ಮಾಹಿತಿ, ಸಿಡಿ, ದಾಖಲೆ, ಕಡೆಗೆ ಒಂದು ಬೈಟು ಎಲ್ಲಾ ಅವರೇ ಒದಗಿಸಿದರೆ. ಅದು ಇನ್ವೆಸ್ಟಿಗೇಶನ್ ರಿಪೋರ್ಟ್.

ಬಹುಶ ಅರುಣ್ ಶೌರಿ ಆರ್ಕೋಶ ಎಲಕ್ಟಾನಿಕ್ ಮಾದ್ಯಮ ತೀರಾ ದಾರಿತಪ್ಪಿದ ಸ್ಥಿತಿಗೆ ತಲುಪಿದ್ದಕ್ಕೆ ಸಿಕ್ಕ ಪ್ರತಿರಕ್ರಿಯೆ . ಮಿಡಿಯಾಗಳು ದಾರಿತಪ್ಪಿವೆ ಅನ್ನೊದು ಗೋಚರಿಸ್ತಾ ಇದೆ, ಆದರೂ ಕೆಲವು ಚಾನಲ್ ಗಳು ಕಾಲನ ಹೊಡೆತಕ್ಕೆ ಸಿಕ್ಕಿಯೂ ಬದುಕಿವೆ. ಮಾದ್ಯಮ ಬೀಡುಬೀಸಾಗಿ ಬೆಳೆಯುತ್ತಿದೆ ಯಾರ್ಯಾರ ಕೈಲೋ ಸಿಕ್ಕಿ ನಲುಗುತ್ತಿವೆ. ಅದಕ್ಕೆ ಸದ್ಯಕ್ಕೆ ಅಂತ್ಯ ಇದ್ದಂತೆ ಕಾಣುತ್ತಾ ಇಲ್ಲ. ಕನ್ಟ್ರಕ್ಚೀವ್ ಮಾದ್ಯಮ ಅನ್ನೊ ಕಲ್ಪನೆ ಇಲ್ಲಿಗೆ ಇಲ್ಲಿಗೆ ಇನ್ನೂ ಬಂದಂತೆ ಕಾಣೊಲ್ಲ.
ಬೇರೆ ಬೇರೆ ದೇಶಗಳ ಮಾದ್ಯಮಗಳು ಈಗಾಗಲೇ ಆ ಸ್ಥಿತಿ ತಲುಪಿ ಆಚೆ ಬಂದಿವೆ ಈಗ ಬಿಬಿಸಿಯನ್ನಾಗಲಿ, ಸಿಎನ್‌ಎನ್ ಆಗಲಿ, ಆಸ್ಟ್ರೇಲಿಯಾ ನ್ಯೂಸ್ ಆಗಲಿ ನೋಡಿದರೆ ಅಲ್ಲಿ ನಮ್ಮಂತೆ ಇಲ್ಲ, ಅಲ್ಲಿ ಟೀವಿ ಅ?ಯಂಕರ್ ಗಳು ನಮ್ಮವರ ಹಾಗೆ ಕಿರುಚುವುದಿಲ್ಲ, ಸಂದರ್ಶನಗಳಲ್ಲಿ ಗಲಾಟೆ ಇರಲ್ಲ.

ಕಾರ್ಯಕ್ರಮಕ್ಕೆ ರೋಚಕತೆ ಬೇಕಿಲ್ಲ, ಸೀರಿಯಸ್ ನೆಸ್ ಬೇಕು ಅಲ್ಲಿನ ರಾಜಕೀಯ ನಾಯಕರೂ ಯಾರೂ ನಮ್ಮವರಂತೆ ಬೈಟ್ ಕೊಡಲ್ಲ. ನಾವೆಲ್ಲ ಈಗ ಅದನ್ನೆಲ್ಲಾ ಯೋಚಿಸಬೇಕಿದೆ, ಜನಕ್ಕೆ ಟಿವಿ ನ್ಯೂಸ್ ನಲ್ಲಿ ಸೆಕ್ಸ್ ಪಿಲ್ಂ ಬೇಕು ಅಂತ ಅನ್ನಿಸಿದರೆ ಕೊಡೋಕೆ ಸಾದ್ಯನಾ. ಅದರಿಂದ ಟಿಆರ್ ಪಿ ಬರುತ್ತಲ್ಲಾ.

ಜನಕ್ಕೆ ಏನು ಬೇಕೋ ಅದನ್ನ ಕೊಡ್ತಿವಿ ಅನ್ನೊ ವಾಧದಲ್ಲಿ ಹುರುಳಿಲ್ಲ, ಜನ ಅದನ್ನೇ ನೊಡ್ತಾರಲ್ರೀ ಅದಕ್ಕೆ ಬೆಲೆ ಇರೋದು ಅಂದ್ರೆ ತಪ್ಪಾಗುತ್ತೆ, ಜನಕ್ಕೂ ಒಂದು ದಿನ ಎಲ್ಲಾ ಅರ್ಥ ಆಗುತ್ತೆ. ಕಾಯಬೇಕು ಅಷ್ಟೇ...


Thursday, July 23, 2009

ಕೇಶಿರಾಜರು ಮತ್ತು ಕನ್ನಡ ಪತ್ರಿಕೋದ್ಯಮ!

ಕೆಲವರಲ್ಲಿ ಒಂದು ಕಲ್ಪನೆ ಇದೆ. ಅದೇನೆಂದರೆ, ವ್ಯಾಕರಣ ದೋಷವಿಲ್ಲದೆ ಬರೆಯುವವರೆಲ್ಲಾ ಉತ್ತಮ ಪತ್ರಕರ್ತರಾಗಬಹುದು! ಮತ್ತು ಅದೇ ನಂಬಿಕೆಯ ಮುಂದುವರಿದ ಭಾಗ - ಭಾಷೆ, ವ್ಯಾಕರಣ ತಿಳಿಯದವನು ಪತ್ರಕರ್ತನಾಗಲಾರ ಮತ್ತು ಪತ್ರಕರ್ತನಾಗಕೂಡದು!
ಹೀಗೆ ಯೋಚಿಸುವವರು, ಮುಲಾಜೇ ಬೇಡ, ಅವರು ಬೇರಾರೂ ಅಲ್ಲ - ಭಾಷೆ, ವ್ಯಾಕರಣಗಳನ್ನು ಮಾತ್ರ ಕಲಿತು ಈ ಕ್ಷೇತ್ರಕ್ಕೆ ಬಂದವರು. ಪ್ರತಿಷ್ಠಿತ ಪತ್ರಿಕೆಗಳ ಆಯಕಟ್ಟಿನ ಜಾಗಗಳಲ್ಲಿ ಕುಳಿತಿರುವವರಿಗೆ ಪುಟದಲ್ಲಿ ಹೀಗೆ ತಪ್ಪುಗಳನ್ನು ಹೆಕ್ಕಿ ತೆಗೆಯುವುದೇ ಮುಖ್ಯವಾಗಿಬಿಟ್ಟಿದೆ. "ಅಯ್ಯೋ, ಇದು ಬ್ಲಂಡರ್. ಯಾವನ್ರೀ ಅವನು, 'ಚಳವಳಿ'ಯನ್ನು 'ಚಳುವಳಿ' ಅಂತ ಬರೆದವನು. ಕನ್ನಡ ಬರದವರೆಲ್ಲ ಪತ್ರಿಕೋದ್ಯಮಕ್ಕೆ ಬಂದರೆ ಹೀಗೆ ಆಗೋದು. ಅವನನ್ನು ಕರೆದು ಸ್ವಲ್ಪ ಬುದ್ಧಿ ಹೇಳಿ." - ಹೀಗೊಂದು ಫರ್ಮಾನು ಹೊರಡುತ್ತದೆ. ಅದರಂತೆ ಆ ವಿಭಾಗದ ಮುಖ್ಯಸ್ಥರು ಸಂಬಂಧಪಟ್ಟ ವರದಿಗಾರನನ್ನೊ, ಉಪಸಂಪಾದಕನನ್ನೋ ಝಾಡಿಸುತ್ತಾರೆ.
ವಿಭಾಗದ ಮುಖ್ಯಸ್ಥರು ಎನಿಸಿಕೊಂಡ ಅನೇಕರಿಗೆ ತಮ್ಮ ಕೆಳಗಿನವರ ವರದಿಗಳಲ್ಲಿ ಇಂತಹ ತಪ್ಪುಗಳನ್ನು ಹುಡುಕಿ 'ಸುದ್ದಿ ಮಾಡುವುದೇ' ಚಾಳಿ. ಹಾಗೆ ಸುದ್ದಿ ಮಾಡುವ ಮುಊಲಕ ತಾವು ಶಬ್ದಮಣಿದರ್ಪಣದ ಕೇಶಿರಾಜನೋ, ರಾಣಿಯೋ ಎಂಬಂತೆ ಪೋಸು ಕೊಡುತ್ತಾರೆ.
ಇತ್ತೀಚೆಗೆ ಇಂತಹ ಅನೇಕ ಕೇಶಿರಾಜರಲ್ಲಿ ಒಬ್ಬರು ಪ್ರಮುಖ ಕಾರ್ಯಕ್ರಮದ ವರದಿಗೆಂದು ಹೊರದೇಶಕ್ಕೆ ಹೋಗಿದ್ದರು. ಅಲ್ಲಿಂದ ಅವರು ಕಳುಹಿಸಿದ ವರದಿಗಳು ಇಂದು ಕಚೇರಿಯ ತುಂಬಾ, ಅಷ್ಟೇಕೆ ಅನೇಕ ಪತ್ರಿಕಾಲಯಗಳಲ್ಲಿ ಪ್ರಮುಖ ಸುದ್ದಿ. ಅವರ ವರದಿಗಳಲ್ಲಿ ಪದೇ ಪದೇ ಕಾಣಿಸಿಕೊಂಡ ಪದ 'ಪರಿಸರ ಮಾಲಿನ್ಯ ಸಂರಕ್ಷಣೆ'!!! ಅಂದಹಾಗೆ ಅವರು ಬರೆಯುತ್ತಿದ್ದುದು ಹವಾಮಾನ ವೈಪರೀತ್ಯದ ಬಗ್ಗೆ. Climate Change ಎಂದರೆ ಪರಿಸರ ಮಾಲಿನ್ಯ ಎಂದುಕೊಂಡೇ ಅವರು ಮೊದಲ ಎರಡು ದಿನ ವರದಿ ಮಾಡಿದ್ದರು! ವಿಶಿಷ್ಟ ಅಂದರೆ ಆ ವರದಿಗಳನ್ನು ಪತ್ರಿಕಾಲಯದ ನೊಟೀಸ್ ಬೋರ್ಡ್ ನಲ್ಲಿ ಅಂಟಿಸಿ, ಅಲ್ಲಿದ್ದ ತಪ್ಪುಗಳನ್ನು ಕೆಂಪು ಶಾಯಿಯಲ್ಲಿ ಗುರುತಿಸಲಾಗಿತ್ತು ಎಂಬ ಸುದ್ದಿಯುಊ ಹೊರಬಿದ್ದಿದೆ.
ಅದು ಒತ್ತಟ್ಟಿಗಿರಿಲಿ..
ಭಾಷೆಗೆ ಮಹತ್ವ ಕೊಡಲಿ. ಆದರೆ ಭಾಷೆಗಿಂತ ವಿಚಾರ, ಆಲೋಚನೆ, ಹೊಸ ದೃಷ್ಟಿಕೋನ ಮುಖ್ಯ ಅಲ್ಲವೆ?
ಅದೆಷ್ಟೋ ದಶಕಗಳ ಕಾಲ ಕನ್ನಡ ಪತ್ರಿಕೋದ್ಯಮ ಒಂದು ವರ್ಗಕ್ಕಷ್ಟೇ ಸೀಮಿತವಾಗಿದ್ದು ಇದೇ ಕಾರಣಕ್ಕೆ. 'ಅವರ' ಹೊರತಾಗಿ ಇತರರಿಗೆ ಭಾಷೆ ಜ್ಞಾನ ಅಷ್ಟಾಗಿ ಇರೋಲ್ಲ ಎಂಬ ಕುರುಡು ನಂಬಿಕೆಗೆ ಕನ್ನಡ ಪತ್ರಿಕೋದ್ಯಮ ಬಲಿಯಾಯಿತು.
ಹಾಗೆ ಸುಮ್ಮನೆ ಕನ್ನಡ ಪತ್ರಿಕೋದ್ಯಮದ ಇತಿಹಾಸ ಗಮನಿಸಿದರೆ, ಪ್ರಜಾವಾಣಿ ಹೊರತಾಗಿ ಬೇರೆ ಪ್ರಮುಖ ಪತ್ರಿಕೆಗಳು ನಮ್ಮ ನಾಡಿನ ಸಾಹಿತ್ಯಕ, ಸಾಂಸ್ಕೃತಿಕ ಬದಲಾವಣೆಗಳಿಗೆ ತೆರೆದುಕೊಳ್ಳಲಿಲ್ಲ. ಕಾರಣ ಇಷ್ಟೆ - ಆ ಪತ್ರಿಕೆಗಳಲ್ಲಿ ವಿಭಿನ್ನ ದೃಷ್ಟಿಕೋನ, ಬಹುಮುಖಿ ಆಲೋಚನೆಯ ಮನಸ್ಸುಗಳಿಗೆ ಕೊರತೆ ಇತ್ತು. ಅವುಗಳಲ್ಲಿ ಕೆಲಸ ಮಾಡುವ ಬಹುತೇಕರು ಒಂದೇ ವರ್ಗಕ್ಕೆ ಸೀಮಿತವಾಗಿದ್ದರು. ಪ್ರಜಾವಾಣಿಯಲ್ಲಿಯುಊ ಆಯಕಟ್ಟಿನ ತಾಣಗಳಲ್ಲಿ ಅವರೇ ಇದ್ದರೂ, ಸಾಂಸ್ಥಿಕವಾಗಿ ಪತ್ರಿಕೆಗೆ ಬೇರೆಯದೇ ಚೌಕಟ್ಟು, ಶಿಸ್ತು ಸಿದ್ಧಿಸಿತ್ತು. ಆ ಕಾರಣ 'ದಲಿತರು ಬಂದರು ದಾರಿಬಿಡಿ' ಎಂಬಂತಹ ತಲೆಬರಹ ಮುಖಪುಟದಲ್ಲಿ ಕಾಣಲು ಸಾಧ್ಯವಾಯಿತು. ಕರ್ನಾಟಕ ಪತ್ರಿಕೋದ್ಯಮಕ್ಕೆ ಪ್ರಜಾವಾಣಿ ಸೇರ್ಪಡೆಗೊಳ್ಳದೇ ಹೋಗಿದ್ದರೆ, ಇಲ್ಲಿನ ಪತ್ರಿಕೋದ್ಯಮ ಇಂದಿಗೂ ಅಗ್ರಹಾರದ ಆಚೆಗೆ ಹಬ್ಬುತ್ತಿರಲಿಲ್ಲ.

Friday, July 17, 2009

ಪ್ರಶ್ನೆಗಳಿರುವುದು ಜಿ.ಎನ್ ಮೋಹನ್ ಗೆ!!

ಇದು ಸಂತಸದ ಸಂಗತಿ. ಪತ್ರಿಕೋದ್ಯಮದ ಗಿರಣಿಯಲ್ಲಿ ಹಲವು ವರ್ಷಗಳಿಂದ, ನಾನಾ ರೂಪಗಳಲ್ಲಿ ತೊಡಗಿಸಿಕೊಂಡಿರುವ ಜಿ.ಎನ್ ಮೋಹನ್ ಈಗ ಮಿಡಿಯಾ ಮೆಣಸಿನಕಾಯಿ (ಮಿಡಿಯಾ ಮಿರ್ಚಿ) ಕಿವುಚಲು ಅಣಿಯಾಗಿದ್ದಾರೆ. ವಿಜಯ ಕರ್ನಾಟಕದ ಶನಿವಾರದ ಆವೃತ್ತಿಯಲ್ಲಿ ಪ್ರತಾಪ ಸಿಂಹನ ಅಂಕಣದೊಂದಿಗೆ ಮೋಹನ್ ಅಂಕಣ ಪ್ರಕಟವಾಗುವುದು ವಿಶೇಷ.
ಒಂದು ಪತ್ರಿಕೆ ಹೀಗೆ ಪತ್ರಿಕೋದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಕುರಿತು ಚರ್ಚೆಗೆ ವೇದಿಕೆ ಒದಗಿಸುವುದು ವಿಶಿಷ್ಟ ಬೆಳವಣಿಗೆ. ವಿಜಯ ಕರ್ನಾಟಕ ಸಂಪಾದಕ ವಿಶ್ವೇಶ್ವರ ಭಟ್ ಇಂತಹದೊಂದು ತೀರ್ಮಾನಕ್ಕೆ ಬರಲು ಏನೆಲ್ಲಾ ಕಾರಣಗಳು, ಒತ್ತಡಗಳಿದ್ದವು ಎಂಬುದು ನಿಗೂಢ. ಅದೇನೇ ಇದ್ದರೂ ಇದು ಒಂದು ಉತ್ತಮ ಪ್ರಯೋಗವೇ.
ಒಂದು ವಾರದ ಹಿಂದೆ ಸನ್ಮಾನ್ಯ ಭಟ್ಟರು ಇಂತಹದೊಂದು ಅಂಕಣದ ಬಗ್ಗೆ ಕ್ಲೂ ಕೊಟ್ಟಾಗ, ಬರೆಯುವವರ್ಯಾರು ಎಂಬ ಸಂಗತಿಯನ್ನು ಬಚ್ಚಿಟ್ಟಿದ್ದರು. ಅದು ಈಗ ಬಹಿರಂಗವಾಗಿದೆ. ಮೋಹನ್ ಈ ಕೆಲಸಕ್ಕೆ ಸಮರ್ಥರು ಎಂದು ಒಪ್ಪಿಕೊಳ್ಳುವ ಅನೇಕ ಮಂದಿ, ವಿಜಯ ಕರ್ನಾಟಕದ ಆಯ್ಕೆ ಇವರು ಆಗಿರಲಿಕ್ಕಿಲ್ಲ ಎಂದೇ ಭಾವಿಸಿದ್ದರು.
ಕಾರಣ ಇಷ್ಟೆ. ಮೋಹನ್ ಒಂದು ಭಜರಂಗಿಗಳ ಅಡ್ಡೆಯಲ್ಲಿ ಅಂಕಣಕಾರರಾಗುತ್ತಾರ? ನಾಡಿನ ಬಹಳಷ್ಟು ಮಂದಿ ಇಂದಿಗೂ ಮೋಹನ್ ರನ್ನು ಗುರುತಿಸುವುದು 'ನನ್ನೊಳಗಿನ ಹಾಡು ಕ್ಯೂಬಾ' ಎಂಬ ಪ್ರವಾಸ ಕಥನದಿಂದ, ಡೆಂಕಲ್ ಪ್ರಸ್ತಾವನೆ ಕುರಿತಂತೆ ಬರೆದ ಕಿರು ಹೊತ್ತಗೆಯಿಂದ. ಆ ಮುಊಲಕ ಅವರ ಎಡ ಪಂಥೀಯ ಧೋರಣೆಯ ಮನುಷ್ಯ ಎಂಬುದು ಅನೇಕರ ಲೆಕ್ಕಾಚಾರ. ಇತ್ತೀಚೆಗೆ ಅವರು ಈಟಿವಿ ಮೂಲಕ, ಅವಧಿ ಮುಊಲಕ, ಮೇಫ್ಲವರ್ ಮಿಡಿಯಾ ಹೌಸ್ ಮುಊಲಕ ಕಾಣಿಸಿಕೊಳ್ಳುತ್ತಿದ್ದಾರೆ. ಅದರಂತೆ ಅವರನ್ನು ಗ್ರಹಿಸುವ ರೀತಿಗಳೂ ಬದಲಾಗಿವೆ. ಅವರ ಸುತ್ತ ಒಂದಿಷ್ಟು ಬ್ಲಾಗ್ ಹುಡುಗರು ಆಗಾಗ ಕಾಣಿಸಿಕೊಳ್ಳುತ್ತಾರೆ. ಅವರು ಬರೆದದ್ದನ್ನು ಇವರು ಗಂಭೀರವಾಗಿ ಓದಿ, ಪ್ರತಿಕ್ರಿಯಿಸುವವರಂತೆ ನಟಿಸುತ್ತಾರೆ. ಸಿಕ್ಕ ಸಿಕ್ಕವರಿಗೆಲ್ಲಾ ಬ್ಲಾಗ್ ಮಾಡ್ರಿ ಅಂತ ಬ್ಲಾಗ್ ಹುಚ್ಚು ಹಿಡಿಸುತ್ತಾರೆ. ಇವೆಲ್ಲದರ ಮಧ್ಯೆ, ಎಡಪಂಧೀಯ ಹೋರಾಟದಿಂದ ರೂಪುಗೊಂಡ ದೇಶದ ಕತೆಯನ್ನೇ ತನ್ನೊಳಗಿನ ಹಾಡನ್ನಾಗಿಸಿಕೊಂಡ ಮೋಹನ್ ಮರೆಯಾಗಿದ್ದಾರೆ, ಅಥವಾ ಮಸುಕಾಗಿದ್ದಾರೆ.
ಹಾಗಂತ, ಅವರು ಅದೆಲ್ಲಕ್ಕೂ ತಿಲಾಂಜಲಿ ಇಟ್ಟಿದ್ದಾರೆ ಎಂದಲ್ಲ. ಹೊಸ ಓದುಗ ಸಮುಊಹ, ಭಿನ್ನ ಆಲೋಚನೆಯ ಗುಂಪನ್ನು ತನ್ನ ಪರಿಧಿಯೊಳಗೆ ತಂದುಕೊಳ್ಳುವ ಪ್ರಯತ್ನ ಇರಬಹುದು. ಈಗ ವಿಜಯಕರ್ನಾಟಕ ಪತ್ರಿಕೆಗೆ ಅಂಕಣ ಬರೆಯಲು ಒಪ್ಪಿಕೊಂಡಿರುವುದು ಅಂತಹದೇ ಒಂದು ಹೆಜ್ಜೆಯಾ?
ಕಾದು ನೋಡಬೇಕು...
ಇನ್ನು ವಿಜಯ ಕರ್ನಾಟಕ. ಓದುಗರನ್ನು ದಿಕ್ಕುತಪ್ಪಿಸುವ ಕಾರ್ಯದಲ್ಲಿ ಸದಾ ಮುಂದು. ಮತಾಂತರ ಕುರಿತಂತೆ ಚರ್ಚೆ ಆರಂಭಿಸಿ, ಎಲ್ಲರಿಗೂ ಬರೆಯಲು ಅವಕಾಶ ನೀಡಿ, ತಾವೇನೋ ಉದಾರವಾದಿಗಳು ಎಂಬಂತೆ ಪೋಸು ಕೊಟ್ಟವರು ಆ ಪತ್ರಿಕೆಯ ಮುಖ್ಯಸ್ಥರು. ಆದರೆ ಆ ಎಲ್ಲಾ ಚರ್ಚೆಗೆ ಭೈರಪ್ಪನಿಂದಲೇ ಉತ್ತರ ಕೊಡಿಸಿ, ಎಲ್ಲರಿಗೂ ಟೋಪಿ ಇಟ್ಟರು. ಪ್ರತಾಪ ಸಿಂಹ ತನಗೆ ಗೂಗಲ್ ನಲ್ಲಿ ಸಿಕ್ಕಿದ್ದನೆಲ್ಲಾ ಅಧಿಕೃತ ಮಾಹಿತಿ ಎಂದು ಬರೆದು ಒಂದು ವರ್ಗವನ್ನು ದಿಕ್ಕುತಪ್ಪಿಸಿದ್ದು ಸುಳ್ಳಲ್ಲ. ಅಡ್ವಾನಿ ಇನ್ನುಮುಂದೆ ಪ್ರಧಾನಿ ಆಗುವುದೇ ಎಲ್ಲ ಎಂಬ ಸತ್ಯ ಅರಿವಾದಾಗ ಭಟ್ಟರು ತಮ್ಮ ಅಂಕಣದ ತುಂಬಾ ಕಣ್ಣೀರು ಹರಸಿದ್ದು ಇನ್ನೂ ಹಸಿರಾಗಿಯೇ ಇದೆ. ಓದುಗರ ಪತ್ರ ನೋಡಿಕೊಳ್ಳುವ ಸಿಂಹ, ಆಗಾಗ ತಾನೇ ಕಾಪು, ಸುಳ್ಯ, ಕರ್ಜೆ ಎಂಬ ಕೆಲ ಊರುಗಳಲ್ಲಿರುವ ಓದುಗನಾಗಿ ಪತ್ರ ಬರೆದುಕೊಂಡದ್ದೂ ಜಗಜ್ಜಾಹೀರು. ಅನಂತಮುಊರ್ತಿ ಭೈರಪ್ಪನನ್ನು 'ಒಬ್ಬ ಚರ್ಚಾಪಟು' ಎಂದು ಮುಊದಲಿಸಿದ್ದಕ್ಕೆ ಎಸ್ ಎಂ ಎಸ್ ಚಳವಳಿ ಮಾಡಿದ ಭೂಪರಲ್ಲವೇ ಇವರು.
ಮೊನ್ನೆ ಮೊನ್ನೆ ತಾನೆ ವಿಜಯಾ ಕಾಲೇಜಿನ ಕೆಮಿಸ್ಟ್ರಿ ಉಪನ್ಯಾಸಕರೊಬ್ಬರ ಟ್ರಿಕ್ ಗೆ ಬಲಿಯಾದದ್ದು ಇದೇ ಪತ್ರಿಕೆ. ತಾನೂ ಒಬ್ಬ ಪ್ರಖ್ಯಾತ ಜ್ಯೋತಿಷ್ಯ ಶಾಸ್ತ್ರಜ್ಞ ತನ್ನದೂ ಒಂದು ಬರಹ ಪ್ರಕಟಿಸಿ ಎಂದು ಅವರು ಪತ್ರಿಕೆಗೆ ಸುಮ್ಮನೇ ಒಂದು ಲೇಖನ ಕಳುಹಿಸಿದರಂತೆ. ನೋಡು, ಈ ಪತ್ರಿಕೆ ಮಂದಿಗೆ ತಲೆಯೇ ಇರೋಲ್ಲ ಯಾವನು ಏನು ಬರೆದರೂ ಹಾಕ್ತಾರೆ ಎಂದು ಸ್ನೇಹಿತರೊಬ್ಬರ ಜೊತೆ ಬೆಟ್ ಕಟ್ಟಿ ಹಾಗೆ ಲೇಖನ ಕಳುಹಿಸಿದರು. ಆ ಲೇಖನವೂ ಪ್ರಕಟವಾಯಿತು.
ಈ ಪತ್ರಿಕೆಗೆ ಬರೆಯುವ ಕೆಲವು ಅಂಕಣಕಾರರು ಈ ನೆಲದ ಬಹುಜನರಿಗೆ ಮಾಡಿರುವ ದ್ರೋಹ ಅಷ್ಟಿಷ್ಟಲ್ಲ. ಪ್ರತಿ ಅಕ್ಷರದಲ್ಲೂ ಕೋಮುವಾದವನ್ನೇ ಉಸುರುವ ಬರಹಗಳು ಇಲ್ಲಿ ಮಾತ್ರ ಬರಲು ಸಾಧ್ಯ.
- ಇದೆಲ್ಲವೂ ಜಿ.ಎನ್ ಮೋಹನ್ ಗೆ ಚೆನ್ನಾಗಿ ಗೊತ್ತು. ಹಾಗಾದರೆ, ಇನ್ನು ಮುಂದೆ ಅವರ ಅಂಕಣ ಬರಹಗಳು ಹೇಗಿರುತ್ತವೆ? ಅವರು ಟೀಕೆಗೆ ನಿಲ್ಲುವುದಾದರೆ, ಮೊದಲು ಟೀಕಿಸಬೇಕಾದ್ದು ಆ ಪತ್ರಿಕೆಯ ಧೋರಣೆಗಳನ್ನೇ. ಮೋಹನ್ ನೇರವಾಗಿ ಅನ್ನಿಸಿದ್ದನ್ನು ಹೇಳಬಲ್ಲರು. ಇತ್ತೀಚೆಗೆ ಜೋಗಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಿಖರವಾಗಿ ಮಾತನಾಡಿದ್ದು ಅವರು ಮಾತ್ರ. ಜೋಗಿ ಮಾರುಕಟ್ಟೆಗಾಗಿ ಬರೆಯುತ್ತಾರೆ. ಅವರ ಕಥಾವಸ್ತುವಿಗೂ, ಟಿ.ಎನ್ ಸೀತಾರಂ ಅವರ ಜನಪ್ರಿಯ ಧಾರಾವಾಹಿಗೂ ವ್ಯತ್ಯಾಸಗಳಿಲ್ಲ ಎಂದು ಹೇಳಿದರು. ಅಂತಹದೊಂದು ಛಾತಿ ಅವರಿಗಿದೆ. ಆದರೆ, ಅದೇ ಧಾಟಿಯ ಮಾತುಗಳನ್ನು ಸಹಿಸಿಕೊಳ್ಳುವ ತಾಳ್ಮೆ ವಿಜಯ ಕರ್ನಾಟಕಕ್ಕೆ ಇದೆಯಾ?
ಅಂಥಹದೊಂದು ಸಂಘರ್ಷಕ್ಕೆ ಅನುವು ಮಾಡಿಕೊಡದಂತೆ ಬರೆಯುವ ಕೆಲಯುಊ ಮೋಹನ್ ಗೆ ಗೊತ್ತು. ಹಾಗಾದಲ್ಲಿ ಅವರು ರಾಜಿ ಆಗುತ್ತಾರ? ಬಹಳ ಕಾಲ ಅಂಕಣ ಉಳಿಯಲೆಂದು ವಿಜಯ ಕರ್ನಾಟಕದ ಬಗ್ಗೆ ಮಾತನಾಡದೇ ಸುಮ್ಮನಿರುತ್ತಾರಾ? ಧೋರಣೆ, ನಂಬಿ ಬಂದಿದ್ದ ಸಿದ್ಧಾಂತ ಎಲ್ಲವನ್ನು ಬದಿಗಿಟ್ಟು ಪಕ್ಕಾ ಅಕಡೆಮಿಕ್ ಶೈಲಿಗೆ ಒಗ್ಗಿಕೊಳ್ಳುತ್ತಾರ?
- ಈ ಪ್ರಶ್ನೆಗಳಿರುವು ಜಿ.ಎನ್ ಮೋಹನ್ ಗೆ!

Thursday, June 25, 2009

ಉತ್ತಮ ಸಮಾಜಕ್ಕಾಗಿ...!!!

ಕೆಲ ದಿನಗಳ ಹಿಂದಿನಿಂದ ಇಂತಹದೊಂದು ಸುದ್ದಿ ಹರಿದಾಡುತ್ತಿದೆ. ಟಿವಿ9 ಸುದ್ದಿ ವಾಹಿನಿ ವರದಿಗಾರನೊಬ್ಬ ಇತ್ತೀಚೆಗೆ ತಾನೆ ಪದವಿ ಕಳೆದುಕೊಂಡ ಮಂತ್ರಿಯೊಬ್ಬರೊಂದಿಗೆ ವ್ಯವಹಾರ ನಡೆಸಿ ಸರಿಸುಮಾರು ಒಂದು ಕೋಟಿ ರೂಗಳಷ್ಟು ಹಣ ಸಂಗ್ರಹಿಸಿದ್ದಾನೆ. 'ಉತ್ತಮ ಸಮಾಜ ನಿರ್ಮಾಣ'ದ ಹೊಣೆಹೊತ್ತಿರುವ ವಾಹಿನಿಗೆ ಕಳಂಕ ತರುವಂತಹ ಸುದ್ದಿ ಇದು. ಸ್ವತಃ ಆ ರಾಜಕಾರಣಿಯೇ ಈ 'ಸತ್ಯ'ವನ್ನು ಹೊರಹಾಕಿದ್ದಾರೆ!
ಆ ವರದಿಗಾರ ತನ್ನ ಆಫೀಸಿನ ಮುಖ್ಯಸ್ಥ, ಮುಖ್ಯ ವರದಿಗಾರ.. ಹೀಗೆ ಎಲ್ಲರಿಗೂ ಹಣ ನೀಡಬೇಕು ಎಂದೆಲ್ಲಾ ಹೇಳಿ ಆ ರಾಜಕಾರಣಿಯಿಂದ ಹಣ ಪಡೆದಿದ್ದಾನೆ ಎನ್ನುವುದು ಸುದ್ದಿ. ಆ ಬೃಹತ್ ಮೊತ್ತ ನೀಡಿ ಒಂದು ಸುದ್ದಿ ವಾಹಿನಿಯೊಂದರ 'ಒಲವ'ನ್ನು ಗಳಿಸಿಕೊಳ್ಳುವಂತಹ ಅನಿವಾರ್ಯತೆ ಆ ರಾಜಕಾರಣಿಗೆ ಯಾಕಿತ್ತು ಎನ್ನುವುದು ಕೇಳಲೇಬೇಕಾದ ಪ್ರಶ್ನೆ. ಒಂದಂತೂ ಸತ್ಯ, ಆ ಹಣ 'ಕೃಷ್ಣನ ಲೆಕ್ಕ'ಕ್ಕೆ ಸೇರಿದ್ದು. ಆ ಕಾರಣ ಅವರು ಯಾರಲ್ಲಿಯೂ ಬಹಿರಂಗವಾಗಿ ದೂರುವಂತಿಲ್ಲ.
ಈ ಸುದ್ದಿ ಮುಖ್ಯಸ್ಥರಿಗೆ ಗೊತ್ತಾಗುತ್ತಿದ್ದಂತೆಯೇ ಆ ವರದಿಗಾರನನ್ನು ಮನೆಗೆ ಕಳುಹಿಸಿದ್ದಾರೆ. ಪತ್ರಿಕೋದ್ಯಮದ 'ಓಂ' ಕಾರ ಕಲಿಯುತ್ತಿರುವಾಗಲೇ ಇಷ್ಟು ಹಣ ಮಾಡಿಕೊಂಡ ಮೇಲೆ ಕೆಲಸ ಹೋದರೇನಂತೆ?
ಇತ್ತ ಆ ರಾಜಕಾರಣಿ ದುಡ್ಡಿನ ಆಸೆಯನ್ನೂ ಬಿಟ್ಟಿದ್ದಾರೆ. ತಿರುಪತಿ ಹುಂಡಿಗೆ ಹಾಕಿದೆ ಎಂದುಕೊಂಡು ಸುಮ್ಮನಾದರೂ ಅಚ್ಚರಿಯಿಲ್ಲ.
ಟಿವಿ9 ಬೆಂಗಳೂರಿನಲ್ಲಿ ಬೇರು ಬಿಟ್ಟಾಗಿನಿಂದ ಹಲವು ಕುಟುಕು ಕಾರ್ಯಾಚರಣೆಗಳನ್ನು ಮಾಡಿ, ಲಂಚ ಬಾಕರನ್ನು ವೀಕ್ಷಕರಿಗೆ ತೋರಿಸಿದೆ. ಆದರೆ ತಮ್ಮ ಮನೆಯಲ್ಲಿಯೇ ಇದ್ದವನನ್ನು ಹುಡಕಲಾಗಲಿಲ್ಲ. ಇನ್ನು ಅದರ ಬಗ್ಗೆ ಸುದ್ದಿ ಮಾಡುವುದಂತೂ ದೂರದ ಮಾತು.
ಮಾಧ್ಯಮ ಕ್ಷೇತ್ರದಲ್ಲಿ ಭ್ರಷ್ಟಾಚಾರ ತೀರಾ ಸಾಮಾನ್ಯ ಎನ್ನುವ ಮಾತುಗಳು ಹೆಚ್ಚೆಚ್ಚು ಕೇಳಿ ಬರುತ್ತಿವೆ. ನಿಜ. ಭ್ರಷ್ಟರಿದ್ದರು, ಇದ್ದಾರೆ ಹಾಗೆಯೇ ಮುಂದೆಯುಊ ಇರಬಹುದು. ಆದರೆ ಪರಿಸ್ಥಿತಿ ಈ ಮಟ್ಟಿಗೆ ಹಾಳಾಗುತ್ತಿದೆ ಎಂದಾಕ್ಷಣ ಎಚ್ಚೆತ್ತುಕೊಳ್ಳಬೇಕಿರುವುದು ಸುದ್ದಿ ಸಂಸ್ಥೆಗಳ ಜವಾಬ್ದಾರಿ. ಇಂದು ಟಿವಿ9 ಬಗ್ಗೆ ಮಾತನಾಡಲು ಒಂದಿಷ್ಟು ಸರಕು ಸಿಕ್ಕಿರಬಹುದು. ಹಾಗಂತ ಬೇರೆ ಸುದ್ದಿವಾಹಿನಿಗಳಲ್ಲಿ, ಪತ್ರಿಕೆಗಳಲ್ಲಿ ಇರುವವರೆಲ್ಲ ಸಭ್ಯರು ಎಂದಲ್ಲ. ದುಡ್ಡಿಗಾಗಿ ಸಂಸ್ಥೆಯ ಹೆಸರು, ತಮ್ಮ ಮಾನವನ್ನು ಮಾರಿಕೊಳ್ಳುವವರ ಸಂಖ್ಯೆ ಒಟ್ಟು ಪತ್ರಕರ್ತರ ಸಂಖ್ಯೆಗೆ ಹೋಲಿಸಿದರೆ ತೀರಾ ಕಡಿಮೆಯೆ. ಆದರೂ ಅಂತಹವರ ಕಾರಣ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು.
ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಿದಂತೆ ಕ್ರಮೇಣ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಎದುರು ಪತ್ರಕರ್ತ ತೀರಾ ಸಣ್ಣವನಾಗುತ್ತಾನೆ. ಸುದ್ದಿ ಕೇಳಲು ಹೋದರೆ ಒಂದಿಷ್ಟೂ ಮರ್ಯಾದೆ ಕೊಡದೆ ನಡೆಸಿಕೊಳ್ಳಬಹುದು. "ನೀವೇನ್ರಿ, ಒಂದಿಷ್ಟು ದುಡ್ಡು ಬಿಸಾಕಿದ್ರೆ ನನ್ನ ಮನೆ ಮುಂದೆ ನಾಯಿ ತರಹ ಬಿದ್ದಿರ್ತೀರಿ ಎಂದು" ದಬಾಯಿಸ ಬಹುದು. ಈ ಕಾರಣಗಳಿಗಾಗಿ ಸುದ್ದಿ ಸಂಸ್ಥೆಗಳು ಎಚ್ಚರ ವಹಿಸುವ ಅಗತ್ಯವಿದೆ. ವೃತ್ತಿಗೆ ಬದ್ಧರಾಗಿ, ನಿಯತ್ತಿನಿಂದ ದುಡಿಯುವ ಮನಸ್ಸುಗಳು ಬೇಕಾದಷ್ಟಿವೆ. ಅವರಿಗೆ ಅವಕಾಶ ದೊರಕಬೇಕು.
ಆದರೆ, ಸುದ್ದಿ ಸಂಸ್ಥೆ ಮುಖ್ಯಸ್ಥರೇ ಕೈ ಒಡ್ಡಿ ನಿಂತರೆ - ಧರೆಯೇ ಹತ್ತಿ ಉರಿದಂತೆ! ಹಾಗಾಗದಿರಲಿ.

Tuesday, June 16, 2009

ನಾಗ್ತಿಹಳ್ಳಿ ಲೆಕ್ಕಾಚಾರ; ಪ್ರೇಕ್ಷಕನಿಗೆ ಮೋಸ!

ಕೆಲ ವರ್ಷಗಳ ಹಿಂದಿನ ಘಟನೆ. ನೀನಾಸಂನ ಸಂಸ್ಕೃತಿ ಶಿಬಿರದಲ್ಲಿ ಸಮಕಾಲೀನ ಸಿನಿಮಾ ಕುರಿತು ಸಂವಾದ ಏರ್ಪಟ್ಟಿತ್ತು. ಕವಿತಾ ಲಂಕೇಶ್ ಮತ್ತು ಗಿರೀಶ್ ಕಾಸರವಳ್ಳಿ ಸಭೆಯಲ್ಲಿದ್ದರು. ಯುವಕನೊಬ್ಬ ಕೇಳಿದ ಪ್ರಶ್ನೆ ಹೀಗಿತ್ತು - 'ಸಾರ್ವಜನಿಕರು ತಮಗೆ ಯಾವುದೇ ವಸ್ತು ಕೊಂಡಾಗ ಮೋಸವಾದರೆ ಅದನ್ನು ಗ್ರಾಹಕರ ಹಕ್ಕು ಅಧಿನಿಯಮದ ಅಡಿ ಪ್ರಶ್ನಿಸಲು ಅವಕಾಶವಿದೆ. ಅದೇ ರೀತಿ, ಉತ್ತಮ ಚಿತ್ರ, ಮನೆಮಂದಿಯೆಲ್ಲ ಕೂತು ಸಂಭ್ರಮ ಪಟ್ಟು ನೋಡಬಹುದಾದ ಸಿನಿಮಾ ಎಂದೆಲ್ಲಾ ಪ್ರಚಾರ ಮಾಡಿ ಪ್ರೇಕ್ಷಕರನ್ನು ಥಿಯೇಟರಿಗೆ ಸೆಳೆದ ಚಿತ್ರವೊಂದು ಎಲ್ಲಾ ಭರವಸೆಗಳನ್ನು ಹುಸಿ ಮಾಡಿದರೆ, ಅದೇ ಗ್ರಾಹಕರ ಕಾಯ್ದೆ ಅಡಿ ಪರಿಹಾರ ಕೇಳಬಹುದೇ?'
ನಾಗ್ತಿಹಳ್ಳಿ ಚಂದ್ರಶೇಖರ್ ಅವರ ಲೇಟೆಸ್ಟ್ ಸಿನಿಮಾ 'ಒಲವೇ ಬದುಕಿನ ಲೆಕ್ಕಾಚಾರ' ನೋಡಿದಾಗಿನಿಂದ ಆ ಯುವಕನ ಪ್ರಶ್ನೆ ಮತ್ತೆ ಮತ್ತೆ ನೆನಪಾಗುತ್ತಿದೆ. ಹಾಗಂತ ನಾಗ್ತಿಹಳ್ಳಿ ಚಿತ್ರದ ಬಗ್ಗೆ ಭಾರೀ ಭರವಸೆ ಇಟ್ಟುಕೊಂಡು ಹೋಗಿದ್ದೆವು ಎಂದೆಲ್ಲ. ಮುಊಲತಃ ಕತೆಗಾರ, ಮಾಡಿದರೆ ವಿಭಿನ್ನ ಚಿತ್ರವನ್ನೇ ಮಾಡುತ್ತಾರೆ ಎಂಬ ಸಣ್ಣ ನಿರೀಕ್ಷೆ ಕೂಡಾ ಹುಸಿಯಾಯಿತು. ನಾಗ್ತಿಹಳ್ಳಿ ಮಾತಿನಲ್ಲಿಯೇ ಹೇಳುವುದಾದರೆ, ಅವರ ಸಿನಿಮಾದ ಬಗ್ಗೆ ನಮಗಿದ್ದ ಲೆಕ್ಕಾಚಾರ ತಪ್ಪಾಗಿತ್ತು.
ಲೋಪದೋಷಗಳನ್ನು ಪಟ್ಟಿ ಮಾಡುತ್ತಾ ಕೂತರೆ ದೊಡ್ಡ ಪಟ್ಟಿಯೇ ಆಗಿಬಿಡುತ್ತದೆ. ಅದು ಒತ್ತಟ್ಟಿಗಿರಲಿ. ನಾಗ್ತಿಹಳ್ಳಿ ಈ ಸಿನಿಮಾ ಮುಊಲಕ ಹೇಳಲು ಹೊರಟಿರುವುದು ಏನನ್ನು ಎನ್ನುವುದು ಮುಖ್ಯ ಪ್ರಶ್ನೆ. ಜುಬ್ಬಾಧಾರಿಗಳು ಅಲಿಯಾಸ್ ಬುದ್ಧಿಜೀವಿಗಳು ಢೋಂಗಿಗಳು, ಮಾರ್ಕ್ಸ್, ಲೆನಿನ್, ಚೆ, ಫಿಡೆಲ್ ಕಾಸ್ಟ್ರೋ ಎಂದೆಲ್ಲಾ ಮಾತನಾಡುವವರು ಮುಊಲತಃ ಲಂಪಟರು, ಹೊಟೇಲ್ ನಲ್ಲಿ ಚಮಚ ಕದಿಯುವ ಸಣ್ಣ ಮನುಷ್ಯರು, ಹೆಣ್ಣನ್ನು ಕೀಳಾಗಿ ಕಾಣುವವರು ಎಂದು ಬಿಂಬಿಸುವುದರ ಹಿಂದಿನ ಉದ್ದೇಶ ಏನು?
ಇತ್ತೀಚಿನ ದಿನಗಳಲ್ಲಿ ಬುದ್ಧಿಜೀವಿ ಎನ್ನುವ ಪದ ತೀವ್ರ ಅಪಮಾನಕ್ಕೆ ಈಡಾಗುತ್ತಿದೆ. ಒಂದು ಪಟ್ಟಭದ್ರರ ಗುಂಪು ಇಂತಹದೊಂದು ಪ್ರಪಾಗಾಂಡದಲ್ಲಿ ತೊಡಗಿದೆ. ಅವರ ಪ್ರಕಾರ ಜಗತ್ತಿನ ಎಲ್ಲಾ ಬುದ್ಧಿಜೀವಿಗಳು 'ಹುಸಿ ಜಾತ್ಯತೀತವಾದಿಗಳು'. ಕೆಲ ದಿನಗಳ ಹಿಂದೆ ಲೇಖಕ, ಪತ್ರಕರ್ತ ಜೋಗಿ ಒಂದು ಕಾದಂಬರಿ ಬರೆದು ಬಿಡುಗಡೆ ಮಾಡಿದರು. ಅದರ ಮುಖ್ಯ ಪಾತ್ರ ಇಂತಹದೇ ಒಂದು ಬುದ್ಧಿಜೀವಿ. ಆ ಜೀವಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸುತ್ತದೆ. ಪ್ರಶಸ್ತಿಗೆ ನಾನಾ ರೀತಿಯ ಲಾಬಿ ನಡೆಸಿರುತ್ತಾರೆ. ಅವರ ಸುತ್ತಲೇ ಆ ಕಾದಂಬರಿ ಸುತ್ತುತ್ತದೆ, ಆ ಮುಊಲಕ ಒಂದು ವಿಚಾರವಾದಿ ಸಮುಊಹ ಮತ್ತು ಬುದ್ಧಿಜೀವಿ ಗುಂಪನ್ನು ಅದು ವ್ಯಂಗ್ಯದಿಂದಲೇ ಕಾಣುತ್ತದೆ.
ಆ ಕಾದಂಬರಿ ಸಾಧಿಸಲು ಹೊರಟಿದ್ದನ್ನೇ ನಾಗ್ತಿಹಳ್ಳಿ ತನ್ನ ಸಿನಿಮಾ ಮುಊಲಕ ನಿರೂಪಿಸಲು ಶ್ರಮಿಸಿದ್ದಾರೆ. ಅಂದಹಾಗೆ ಅವರ ಪ್ರಯತ್ನಕ್ಕೆ ಜೋಗಿಯವರ ಸಹಕಾರ ಕೂಡ ಇದೆ (ಚಿತ್ರಕತೆಯಲ್ಲಿ ಜೋಗಿಯದು ಮುಖ್ಯ ಪಾತ್ರ). ಉಪನ್ಯಾಸಕನ ಪಾತ್ರ ಶುರುವಾಗುವುದೇ ಕೆಂಪು ಕರವಸ್ತ್ರದಿಂದ ಮುಊಗನ್ನು ಒರೆಸಿಕೊಳ್ಳುವುದರ ಮುಊಲಕ. ಈ ಧೋರಣೆ ಚಿತ್ರದುದ್ದಕ್ಕೂ ಮುಂದುವರೆಯುತ್ತದೆ. ಕಾಲೇಜಿನಲ್ಲಿ ಅರ್ಥಶಾಸ್ತ್ರ ಬೋಧಿಸಬೇಕಾದ ಅವರು ಕ್ರಾಂತಿ ಮಾತನಾಡುತ್ತಾರೆ. ಮನೆಯಲ್ಲಿ ದಿನಕ್ಕೊಬ್ಬ ಹುಡುಗಿಯ ಸಂಗ, ರಾತ್ರಿಯಾದರೆ ಹುಡುಗರೊಟ್ಟಿಗೆ ಡಾಬಾ, ಲೈವ್ ಬ್ಯಾಂಡ್, ಬಿಲ್ ಕೊಡದೆ ಗಲಾಟೆ ಮತ್ತು ಚಮಚ ಕದಿಯುವುದು. ಮದುವೆ ಮತ್ತು ಹುಡುಗಿಯರ ಬಗ್ಗೆ ತೀರಾ ಅಹಸ್ಯ ಎನಿಸುವ ಹೇಳಿಕೆಗಳು ಆತನಿಂದ ಹೊರಬರುತ್ತವೆ. (ಈ ಕಾರಣಕ್ಕೆ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದ್ದು!)
ಮೇಷ್ಟ್ರು ತಮ್ಮ ಅಂಕಪಟ್ಟಿ ಸುಟ್ಟು ಹಾಕಿದ ಪ್ರಕರಣದಿಂದಲೇ ಅವರು ಢೋಂಗಿ ಎನ್ನುವುದು ಹುಡುಗರಿಗೆ ಸಾಬೀತಾಗಿರುತ್ತದೆ. ಆದರೂ ಬಾಲಚಂದ್ರ (ಕಿಟ್ಟಿ) ಅವರ ಕ್ರಾಂತಿಗೆ ಮರುಳಾಗುತ್ತಾನೆ? ಅವರು ಹೇಳಿದ್ದೆಲ್ಲಾ ವೇದವಾಕ್ಯ ಎಂದು ನಂಬುತ್ತಾನೆ. ಪ್ರೀತಿಸಿದ ಹುಡುಗಿಗೆ ಮೋಸ ಮಾಡುತ್ತಾನೆ. ಅವಳಿಂದ ಹಣ ತಂದು ಮೇಷ್ಟ್ರಿಗೆ ಹೆಂಡ ಕುಡಿಸುತ್ತಾನೆ. ಕೊನೆಗೆ ಓಡಿಹೋಗಿ ಇನ್ನೊಬ್ಬ ಢೋಂಗಿ ಜುಬ್ಬಾಧಾರಿ ಬುದ್ಧಿಜೀವಿಯಾಗುತ್ತಾನೆ.
ಕರ್ನಾಟಕದ ಬಹುದೊಡ್ಡ ಬುದ್ಧಿಜೀವಿ ಸಮುದಾಯಕ್ಕೆ ಆಶ್ರಯ ಕೊಟ್ಟ ಮಹಾರಾಜ ಕಾಲೇಜಿನಲ್ಲಿ ಈ ಚಿತ್ರದ ಕಾಲೇಜು ಸನ್ನಿವೇಶಗಳು ಚಿತ್ರೀಕರಣಗೊಂಡಿವೆ. ನಾಗ್ತಿಹಳ್ಳಿಗೆ ಗೊತ್ತಿರಬಹುದು, ಆ ಕಾಲೇಜಿನಲ್ಲಿ ಪಾಠ ಮಾಡಿದ ಕುವೆಂಪು ಇಂದಿನ ಅದೆಷ್ಟೋ ವಿಚಾರವಾದಿಗಳಿಗೆ ಮುಊಲ ಬೇರು. ವಿಚಾರಕ್ರಾಂತಿಗೆ ಕರೆ ನೀಡಿದವರು ಅವರು. ಕನ್ನಡ ಸಾಹಿತ್ಯ ಚಳವಳಿಗಳು ಹುಟ್ಟಿಕೊಂಡದ್ದು ಅಲ್ಲಿಯೇ. ಈಗ್ಗೆ ಕೆಲ ವರ್ಷಗಳ ಹಿಂದಿನ ತನಕ ಅಲ್ಲಿಯೇ ಪಾಠ ಮಾಡುತ್ತಿದ್ದ ಪ್ರೊ.ಕೆ. ಎಸ್. ಭಗವಾನ್, ಕೆ. ರಾಮದಾಸ್ ಚ. ಸರ್ವಮಂಗಳ ಇರತರು 'ಯಾವುದನ್ನೂ ಪ್ರಶ್ನೆ ಮಾಡದೆ ಒಪ್ಪಬೇಡಿ' ಎಂಬ ಪರಂಪರೆಯನ್ನು ಬಹುಕಾಲ ಮುಂದುವರೆಸಿದವರು. ಒಂದಂತೂ ಸತ್ಯ ಪ್ರೊ. ಕೆ. ರಾಮದಾಸ್ ಮಾತು ಕೇಳಿದವನು ಜಾತಿವಾದಿಯಾಗಿರುತ್ತಿರಲಿಲ್ಲ, ಕೋಮುವಾದಿಯಾಗಿರುತ್ತಿರಲಿಲ್ಲ. ಇಂತಹದೊಂದು ಪರಂಪರೆ ಕನ್ನಡದ ಸಂದರ್ಭದಲ್ಲಿ ಸದಾ ಜಾಗೃತವಾಗಿದೆ. ಇದೆಲ್ಲದರ ಸ್ಪಷ್ಟ ಅರಿವು ನಾಗ್ತಿಹಳ್ಳಿಗೂ ಇದೆ. ಆದರೆ ಅವರ ಚಿತ್ರದಲ್ಲಿ ಅದಾವುದೂ ಇಲ್ಲ. ಯಾವ ವಿಚಾರದಲ್ಲೂ ಸಭ್ಯನಲ್ಲದ ಒಂದು ಪಾತ್ರ ಸೃಷ್ಟಿಸಿ ಅದನ್ನು ಬುದ್ಧಿಜೀವಿ, ವಿಚಾರವಾದಿ, ಮಾರ್ಕ್ಸ್ ವಾದಿಗಳಿಗೆ ಸಮೀಕರಿಸುವ ಪ್ರಯತ್ನ ಮಾಡಿದ್ದು ದುರಂತ.
ಈ ಸಿನಿಮಾ ಜಡ (inert). ಅದು ಬೆಳೆಯುವುದೇ ಇಲ್ಲ. ಮೊದಲಾರ್ಧದಲ್ಲಿ ಹುಡುಗರಿಗೆ ಸುಳ್ಳುಹೇಳಿ, ಯಾರದೋ ದುಡ್ಡಲ್ಲಿ ಹೆಂಡ ಕುಡ್ಕೊಂಡು, ಹೆಣ್ಣಿನ ಸಂಗ ಮಾಡ್ಕೊಂಡು ಜೀವನ ಮಾಡ್ತಿದ್ದ ಮೇಷ್ಟ್ರು, ದ್ವಿತೀಯಾರ್ಧ್ಲದಲ್ಲಿ ಜನರಿಗೆ ಸುಳ್ಳುಗಳ 'ಬ್ರಹ್ಮಾಂಡ' ಸೃಷ್ಟಿಸಿ ಮೋಸ ಮಾಡಿ, ವರದಕ್ಷಿಣೆ ಹಣದಲ್ಲಿ ಮಜಾ ಮಾಡುತ್ತಾ ಜೀವನ ಮಾಡ್ತಾರೆ.
ಆ ಪಾತ್ರ ಬದಲಾಗುವುದೇ ಇಲ್ಲ. ಆದರೆ ಚಿತ್ರಕತೆ ಮಾತ್ರ ಮೇಷ್ಟ್ರು ಬದಲಾದರು ಎನ್ನುವಂತೆ ಬಿಂಬಿಸುವ ಪ್ರಯತ್ನ ಮಾಡುತ್ತದೆ. ಮಗು ಮತ್ತು ಪತ್ನಿಯೊಂದಿಗೆ ದೇವಸ್ಥಾನದಿಂದ ಹೊರ ಬರುವ ಮೇಷ್ಟ್ರನ್ನು ನೋಡಿದಾಗ ಬಾಲಚಂದ್ರನ ಪ್ರತಿಕ್ರಿಯೆಯಲ್ಲಿ ಇದನ್ನು ಕಾಣಬಹುದು. ಬಾಲಚಂದ್ರನ ಪ್ರಕಾರ ಮೇಷ್ಟ್ರು 'ನಮಗೆಲ್ಲ ಕ್ರಾಂತಿ ಕ್ರಾಂತಿ ಅಂತ ಬೋಧಿಸಿ, ಈಗ ಮದುವೆ ಮಾಡ್ಕೊಂಡು ಸುಖವಾಗಿದ್ದಾರೆ' ಎಂದು ಭಾವಿಸುತ್ತಾನೆ. ಆ ಮುಊಲಕ ತನ್ನ ಪ್ರೇಯಸಿಯನ್ನು ಹುಡುಕಲು ಮುಂದಾಗುತ್ತಾನೆ. ಇದೇ ವಿಚಿತ್ರ. ಮೇಷ್ಟ್ರು ಮೊದಲು ಹೇಗಿದ್ದರೋ, ಈಗಲೂ ಹಾಗೇ ಇದ್ದಾರೆ. ಹಾಗಿರುವಾಗ ಅವರಲ್ಲಿನ ಯಾವ ಬದಲಾವಣೆ ಅವನನ್ನು ಪ್ರಭಾವಿಸಲು ಸಾಧ್ಯ?
ನಾಗ್ತಿಹಳ್ಳಿಯನ್ನು ತೀವ್ರ ಟೀಕೆಗೆ ಗುರಿಪಡಿಸಬೇಕಾಗಿರುವುದು ಅವರು ಮಹಿಳೆಯರ ಬಗ್ಗೆ ಹೊರಹೊಮ್ಮಿಸುವ ಅಭಿಪ್ರಾಯಗಳಿಗಾಗಿ. ಉದಾಹರಣೆಗೆ ಬಾಲಚಂದ್ರ ತನ್ನ ಕಾಲೇಜಿನ ಮಹಿಳಾ ಸಹೋದ್ಯೋಗಿಗಳನ್ನು ಪರಿಚಯಿಸುವ ಪರಿಯನ್ನು ಒಮ್ಮೆ ಜ್ಞಾಪಿಸಿಕೊಳ್ಳಿ. ಜಿಯೋಗ್ರಾಫಿ ಲೆಕ್ಚರರ್ ಭೂಗೋಳವೇ ಸರಿ ಇಲ್ವಂತೆ. ಇಂಗ್ಲಿಷ್ ಉಪನ್ಯಾಸಕಿ ಮುಖ ಕರೆದ ಬೋಂಡವಂತೆ! ಜಗತ್ತಿನಲ್ಲಿ ಇರುವವರು ಎರಡೇ ಜಾತಿಯ ಹುಡುಗಿಯರು - ಕೆಟ್ಟ ಹುಡುಗಿಯರು, ಅತೀ ಕೆಟ್ಟ ಹುಡುಗಿಯರು! ಅದೇ, ಜೋಗಿ/ನಾಗ್ತಿಹಳ್ಳಿ ಚಿತ್ರಕತೆಯಲ್ಲಿ ಯಾವುದೇ ಗಂಡಸಿನ ಬಗ್ಗೆ ಇಂತಹದೊಂದು ಕಾಮೆಂಟ್ ಪಾಸ್ ಮಾಡುವುದಿಲ್ಲ.
ಈ ಚಿತ್ರದಲ್ಲಿ ಬಂದು ಹೋಗುವ ಹೆಣ್ಣಿನ ಪಾತ್ರಗಳ ಮೇಲೆ ಒಂದು ಕಣ್ಣು ಹಾಯಿಸಿ - ಅಪ್ಪನಿಂದ ಹಿಂಸೆಗೆ ಒಳಪಟ್ಟು, ಪ್ರೀತಿಸಿದ ಹುಡುಗನಿಂದ ಮೋಸ ಹೋದ ರುಕ್ಮಿಣಿ; ತಮ್ಮನ ಒಳಿತಿಗಾಗಿ ತನ್ನ ದೇಹವನ್ನು ಅರ್ಪಿಸಲು ಸಿದ್ಧವಿರುವ 'ಅವಳು'; ಮಗನಿಗಾಗಿ ಒಮ್ಮೆ ತಡಕಾಡಿ ಹಳ್ಳಿಗೆ ಹಿಂತಿರುಗುವ ಅಮ್ಮ ಮತ್ತು ಗಡಿಯಲ್ಲಿರುವ ಗಂಡ ಹಾಗೂ ಆತನ ಸಹಚರರ ಒಳಿತಿಗಾಗಿ ಒಂದು ದಿನ ಉಪವಾಸ ಮಾಡುವ ಕಂಪೂಟರ್ ಸೈನ್ಸ್ ಉಪನ್ಯಾಸಕಿ! ಚಿತ್ರದಲ್ಲಿ ಯಾವ ಹೆಣ್ಣು ಪಾತ್ರವೂ ಗಟ್ಟಿಯಾಗಿ ನಿಲ್ಲುವುದಿಲ್ಲ. ಡೈಸಿ ಬೋಪಣ್ಣನ ಪಾತ್ರ ಸವಕಲು. ಆ ಪಾತ್ರ ಬಾಲಚಂದ್ರನಲ್ಲಿ ಬದಲಾವಣೆಗೆ ಕಾರಣವಾಯಿತು ಎಂದು ಹೇಳಲು ಒಂದು ಸನ್ನಿವೇಶ ಸೃಷ್ಟಿಯಾಗಿದೆ. ಆದರೆ ಅದರಲ್ಲಿ ಹೊಸತನ, ಗಟ್ಟಿತನ ಇಲ್ಲ.
ತಾಂತ್ರಿಕ ಅಂಶಗಳಲ್ಲೂ ಚಿತ್ರ ಗಟ್ಟಿಯಾಗಿ ನಿಲ್ಲುವುದಿಲ್ಲ. ಮೊದಲಾರ್ಧದ ಸನ್ನಿವೇಶ ನಡೆಯುವುದು ಹಳ್ಳಿಯಲ್ಲೋ, ಪಟ್ಟಣದಲ್ಲೋ ಗೊತ್ತಾಗುವುದೇ ಇಲ್ಲ. ಅಲ್ಲಿ ಪದವಿ ಕಾಲೇಜಿದೆ, ಲೈವ್ ಬ್ಯಾಂಡ್ ಇರುವ ಬಾರ್ ಇದೆ. ರಿಲಯನ್ಸ್ ಫ್ರೆಶ್ ನೆನಪಿಸುವ ಅಂಗಡಿ ಇದೆ. ಅದೇ ಊರಲ್ಲಿ ಒಂದು ಹಳ್ಳಿಯಲ್ಲಿ ಇರಬಹುದಾದ ಒಂದು ಸಾಮಾನ್ಯ ರೈಲ್ವೇ ನಿಲ್ದಾಣ ಇದೆ ಮತ್ತು ಥಟ್ಟನೆ ಹಳ್ಳಿಯನ್ನು ನೆನಪಿಸುವ 'ರಾತ್ರಿಯಾದರೆ ಬೇಟೆಗೆಂದು ರೈಫಲ್ ಹಿಡಿದು ಹೊರಡುವ' ಅಪ್ಪನ ಸನ್ನಿವೇಶಗಳಿವೆ. ಹಾಗಾದರೆ ಆ ಪ್ರದೇಶ ಯಾವುದು?
ಇನ್ನು ಕ್ಲೈಮಾಕ್ಸ್. ಅದೊಂದು ಸರ್ಕಸ್. ಎರಡು ಕನಸು ಮತ್ತು ಒಂದು ನಿಜ - ಹೀಗೆ ಮುಊರು ಕ್ಲೈಮಾಕ್ಸ್ ಗಳಿವೆ. ರುಕ್ಮಣಿ, ಬಾಲಚಂದ್ರನ ಗೆಳೆಯನನ್ನೇ ಮದುವೆಯಾಗಿರುತ್ತಾಳೆ. ಇದು ಅಚ್ಚರಿ. ಬಾಲಚಂದ್ರ ಮೋಸ ಮಾಡಿ ಅವಳನ್ನು ರೈಲು ನಿಲ್ದಾಣದಲ್ಲಿ ಏಕಾಂಗಿಯಾಗಿ ಬಿಟ್ಟು ಹೋದಾಗ, ಅವಳ ಅಪ್ಪ ಮತ್ತು ಅವಳನ್ನು ಮದುವೆಯಾಗುವ ಕನಸು ಕಾಣುತ್ತಿರುವ (ನೀನಾಸಂ ಅಶ್ವತ್ಧ್) ಅವಳನ್ನು ಹಿಡಿದುಕೊಳ್ಳುತ್ತಾರೆ. ಅಲ್ಲಿಂದ ಅವಳ ಕತೆ ಏನಾಯ್ತು ಗೊತ್ತಿಲ್ಲ. ಆದರೆ ಅಂತ್ಯದ ಹೊತ್ತಿಗೆ, ಬಾಲಚಂದ್ರನ ಗೆಳೆಯನನ್ನೇ ಮದುವೆಯಾಗಿ ಒಂದು ಮಗುವನ್ನು ಹೆತ್ತಿರುತ್ತಾಳೆ. ಇದೆಲ್ಲಾ ಹೇಗಾಯ್ತು ಸ್ವಾಮಿ?
ಅದಕ್ಕೇ ಕೇಳಿದ್ದು ನಾಗ್ತಿಹಳ್ಳಿ ಲೆಕ್ಕಾಚಾರದಲ್ಲಿ ಪ್ರೇಕ್ಷಕನಿಗೆ ಮೋಸವಾಗಿದೆ, ಗ್ರಾಹಕರ ಕಾಯಿದೆ ಅಡಿ ಪರಿಹಾರಕ್ಕೆ ಅರ್ಜಿ ಹಾಕಬಹುದೆ?

Tuesday, June 9, 2009

ಬಿಜೆಪಿ ಸೋತಿದ್ದೇಕೆ? ಸುಧೀಂದ್ರ ಕುಲಕರ್ಣಿಯನ್ನು ಒಮ್ಮೆ ಕೇಳಿ ನೋಡಿ...

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದು ಏಕೆ? ಈ ಪ್ರಶ್ನೆಗೆ ವಿವರವಾಗಿ ಮತ್ತು ನಿಖರವಾಗಿ ಉತ್ತಿರಿಸಿರುವವರು ಅದೇ ಬಿಜೆಪಿ ಜತೆ ಗುರುತಿಸಿಕೊಂಡಿರುವ ಸುಧೀಂದ್ರ ಕುಲಕರ್ಣಿ. ಅವರ ಉತ್ತರ ಕಟ್ಟರ್ ಬಿಜೆಪಿಗಳಿಗೆ ಸರಿ ಕಂಡಿಲ್ಲ. "ಅದು ಅವರ ವೈಯಕ್ತಿಕ ಅಭಿಪ್ರಾಯ" ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಈ ಹೊತ್ತಿನಲ್ಲಿ ಸುಧೀಂದ್ರ ಕುಲಕರ್ಣಿ ಎತ್ತಿರುವ ಗಂಭೀರ ಪ್ರಶ್ನೆಗಳನ್ನು ಕುರಿತು ಬಿಜೆಪಿ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.
143 ಸ್ಥಾನಗಳಷ್ಟು ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ನಾಲ್ಕು ರಾಜ್ಯಗಳಲ್ಲಿ ಇನ್ನೂ ಬಿಜೆಪಿಗೆ ನೆಲೆಯುಊರಲು ಸಾಧ್ಯವೇ ಆಗದಿರುವಾಗ, ಆ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಸುಲಭದ ಮಾತಲ್ಲ. ದೇಶದ ಜನಸಂಖ್ಯೆಯಲ್ಲಿ ಹಿಂದು ಮತಬ್ಯಾಂಕ್ ಸೃಷ್ಟಿಸಿ ಅದರ ಆಧಾರದ ಮೇಲೆ ಅಧಿಕಾರ ಹಿಡಿಯ ಹೊರಟವರಿಗೆ, ಆ 'ಮತಬ್ಯಾಂಕ್' ತೀರಾ ಚಿಕ್ಕದು ಎಂಬುದರ ಅರಿವಾಗಿದೆ. ಹಿಂದು ಸಮುದಾಯದ ಒಂದು ಸಣ್ಣ ಗುಂಪು ಮಾತ್ರ ಬಿಜೆಪಿಗೆ ಬೆನ್ನುಲುಬಾಗಿ ನಿಂತಿದೆಯೇ ಹೊರತು, ಬಹುಸಂಖ್ಯಾತರು ಇತರ ಪಕ್ಷಗಳ ಒಲವು-ನಿಲುವುಗಳಲ್ಲಿ ಹರಿದು ಹಂಚಿಹೋಗಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವ ಕಾರಣಕ್ಕೆ ಒಂದು ಪಕ್ಷಕ್ಕೆ ಮತ ನೀಡಬೇಕು ಎಂದು ಆಲೋಚಿಸುವ ಮನಸುಗಳ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ. ಈಗಾಗಲೇ ಮುಸ್ಲಿಂ ಹಾಗೂ ಕ್ರೈಸ್ತರ ವಿರೋಧ ಕಟ್ಟಿಕೊಂಡಾಗಿದೆ. ಗುಜರಾತ್ ಗಲಭೆ ಮತ್ತು ಇತ್ತೀಚಿನ ಚರ್ಚ್ ದಾಳಿಯಂತಹ ಪ್ರಕರಣಗಳು ಈ ವಿರೋಧವನ್ನು ಮತ್ತಷ್ಟು ಸದೃಢಗೊಳಿಸಿವೆ. ಪರಿಸ್ಥಿತಿ ಹೀಗಿರುವಾಗ ಬಿಜೆಪಿ ತನ್ನ ಕೋಮುವಾದಿ ಸಿದ್ಧಾಂತದ ನೆಲೆಯಿಂದ ಹೊರಬಂದು ಯೋಚಿಸಬೇಕಿದೆ. ಇದನ್ನೇ ಸುಧೀಂಧ್ರ ಕುಲಕರ್ಣಿ ತಮ್ಮ ತೆಹಲ್ಕಾ ಲೇಖನದಲ್ಲಿ ಹೇಳಿದ್ದು.
ಅವರು ಸಾಚಾರ್ ಸಮಿತಿ ವರದಿಗೆ ಬಿಜೆಪಿ ನಾಯಕರು ನೀಡಿದ ಪ್ರತಿಕ್ರಿಯೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಆ ವರದಿ ಭಾರತದಲ್ಲಿನ ಮುಸಲ್ಮಾನರ ದೈನೇಸಿ ಸ್ಥಿತಿಯನ್ನು ತೋರಿಸುತ್ತದೆ. ಕಾಂಗ್ರೆಸ್ ಇಷ್ಟು ದಿನ ಆಡಳಿತ ಮಾಡಿದರೂ, ಅವರ ಏಳಿಗೆ ಸಾಧ್ಯವಾಗಿಲ್ಲ ಎನ್ನುವ ವಿಚಾರ ಮುಂದೆ ಮಾಡಿ ವಾದ ಮಾಡುವುದನ್ನು ಬಿಟ್ಟು, ಬಿಜೆಪಿ ಇಡೀ ವರದಿಯನ್ನೇ ಸಾರಾಸಗಟಾಗಿ ತಿಸ್ಕರಿಸಿ ತಪ್ಪು ಮಾಡಿತು ಎನ್ನುತ್ತಾರೆ ಕುಲಕರ್ಣಿ. ಮುಸಲ್ಮಾನರ ಏಳಿಗೆಗಾಗಿ ಸರಕಾರ ಕೈಗೊಳ್ಳುವ ಯಾವುದೇ ಕಾರ್ಯಕ್ರಮ ಬಿಜೆಪಿ ಮನಸ್ಸುಗಳಿಗೆ 'ಓಲೈಕೆ' ಯಾಗಿ ಕಾಣುತ್ತದೆ. ಈ ನಿಟ್ಟಿನಲ್ಲಿ ಆರ್ ಎಸ್ ಎಸ್ ಮತ್ತು ಬಿಜೆಪಿ ಎರಡು ತಮ್ಮ ಹಿಂದುತ್ವವನ್ನು ಪುನರ್ ವಿಶ್ಲೇಷಿಸಬೇಕು. ಹಾಗೂ ಆ ಮುಊಲಕ ಪಕ್ಷದ ಕಾರ್ಯಕರ್ತರಲ್ಲಿ 'ಹಿಂದುತ್ವ'ದ ಬಗ್ಗೆ ಇರುವ ಗೊಂದಲಗಳನ್ನು ನಿವಾರಿಸಬೇಕುವ ಅಗತ್ಯವಿದೆ ಎಂದಿದ್ದಾರೆ.
ಸೋಲು ಅನಾಥ ಎಂಬ ಮಾತಿದೆ. ಆದರೆ, ಸುದೀಂಧ್ರ ಕುಲಕರ್ಣಿ ಬಿಜೆಪಿ ಸೋಲಿನಲ್ಲಿ ನನ್ನದೂ ಸ್ವಲ್ಪ ಪಾತ್ರವಿದೆ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ಈ ಬಾರಿ ಚುನಾವಣೆ ವೇಳೆಯಲ್ಲಿ ಟಿವಿ ಚಾನೆಲ್ ಗಳ ಟಾಕ್ ಶೋಗಳಲ್ಲಿ ಬಿಜೆಪಿ ಪ್ರತಿನಿಧಿಯಾಗಿ ಕಾಣಿಸಿಕೊಂಡರು. ಅಡ್ವಾನಿಯನ್ನು ಸಮರ್ಥಿಸಿಕೊಳ್ಳುವ ಕೆಲ ಸಂದರ್ಭಗಳಲ್ಲಿ ಅವರು ತೀರಾ ಪೇಲವವಾಗಿ ಕಂಡರು. ಈ ಹಿಂದೆ ಅಡ್ವಾನಿ ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ನೀಡಿದ ಜಿನ್ನಾ ಪರ ಅಭಿಪ್ರಾಯಕ್ಕೆ ಸುದೀಂಧ್ರ ಕುಲಕರ್ಣಿಯೇ ಕಾರಣ ಎಂಬ ಮಾತು ರಾಜಕೀಯ ವಲಯದಲ್ಲಿದೆ. ಅಂದು ಅಡ್ವಾನಿಯ ಬಾಯಿಂದ ಅಂತಹ ಅಭಿಪ್ರಾಯ ಹೇಳಿಸಿ ಪಕ್ಷದ ನಾಯಕರ ವಿರೋಧಕ್ಕೆ ಗುರಿಯಾಗಿದ್ದ ಈ ಮಾಜಿ ಪತ್ರಕರ್ತ ಈಗ ತಮ್ಮ ಲೇಖನದಿಂದ ಮತ್ತೆ ಪಕ್ಷದ ನೇತಾರರಿಂದ ಟೀಕೆಗೆ ಗುರಿಯಾಗಿದ್ದಾರೆ.
ಕನ್ನಡಿಗ
ಅಂದಹಾಗೆ ಕುಲಕರ್ಣಿ ಕನ್ನಡಿಗರು. ಧಾರವಾಡದವರು. ಬಾಂಬೆಯ Indian Institute of Technology ಯಿಂದ ಬಿ-ಟೆಕ್ ಪದವಿ ಪಡೆದರು. ನಂತರ ಪತ್ರಿಕೋದ್ಯಮ ಕ್ಷೇತ್ರ ಆಯ್ಕೆ ಮಾಡಿಕೊಂಡು ಬಾಂಬೆಯ Daily ಮತ್ತು Blitz ಪತ್ರಿಕೆಗಳಿಗೆ ದುಡಿದರು. ಆಗ ಮಾರ್ಕ್ಸ್ ಮತ್ತು ಲೆನಿನ್ ರನ್ನು ಆಳವಾಗಿ ಓದಿಕೊಂಡು ಸ್ನೇಹಿತರ ಮಧ್ಯೆ ಎಡಪಂಥೀಯ ಚಿಂತಕನೆಂದೇ ಪರಿಚಿತರು. ಕ್ರಮೇಣ ಬದಲಾದರು. ಕಾರ್ಪೊರೇಟ್ ಜಗತ್ತಿಗೆ ಹೊಂದಿಕೊಂಡರು. ಅಡ್ವಾನಿಗೆ ಆಪ್ತರಾದರು. ಅವರ ರಥಯಾತ್ರೆಯಲ್ಲಿ ಪಾಲ್ಗೊಂಡರು. ವಾಜಪೇಯಿ ಪ್ರಧಾನಿಯಾದಾಗ ಅವರ ಭಾಷಣಗಳನ್ನು ಬರೆದುಕೊಡುವ ಕಾಯಕಕ್ಕೆ ನಿಯುಕ್ತಿಯಾದರು. ನಂತರ ಬಿಜೆಪಿಯಲ್ಲಿ ಕಾರ್ಯದರ್ಶಿ ಸ್ಥಾನ ಸಿಕ್ಕತು. ಜಿನ್ನಾ ಹೇಳಿಕೆ ನಂತರ ಪಕ್ಷದ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಇಂದಿಗೂ ಅಡ್ವಾನಿಗೆ ಆಪ್ತರು. ಕೆಲವೇ ತಿಂಗಳುಗಳ ಹಿಂದಿನವರೆಗೂ ಪ್ರಜಾವಾಣಿಗೆ ಅಂಕಣ ಬರೆಯುತ್ತಿದ್ದರು. ಇನ್ನೊಂದು ವಿಚಾರ, ಇವರ ಕಿರಿಯ ಸಹೋದರ ಡಾ. ಸಂಜೀವ್ ಕುಲಕರ್ಣಿ ಧಾರವಾಡದ ಪ್ರಸಿದ್ಧ ವೈದ್ಯ. ಮಾದರಿಯಾದ ಒಂದು ಶಾಲೆಯನ್ನೂ ನಡೆಸುತ್ತಿದ್ದಾರೆ.

Friday, June 5, 2009

'ದೆಹಲಿ ನೋಟ'ದ ಕಣ್ಣುಗಳೀಗ ಬೆಂಗಳೂರಿನಲ್ಲಿ...

ಕ್ರಿಕೆಟಿಗರಿಗೆ ಇಂಗ್ಲೆಂಡ್ ನ ಲಾರ್ಡ್ಸ್ ಮೈದಾನದಂತೆ, ಇಲ್ಲಿನ ಪತ್ರಕರ್ತರಿಗೆ ದೆಹಲಿ! ವೃತ್ತಿ ಬದುಕಿನಲ್ಲಿ ಕೆಲ ವರ್ಷಗಳ ಮಟ್ಟಿಗಾದರೂ ಅಲ್ಲಿ ಕೆಲಸ ಮಾಡಿ ಬರಬೇಕೆಂಬ ಬಯಕೆ ಅನೇಕರದು. ಕೆಲವರ ಬಯಕೆ ಇಡೇರುವುದುಂಟು. ಅಂತಹ ಕೆಲವರಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ, ತಮ್ಮ ಸುದ್ದಿಸಂಸ್ಥೆಯ ಮತ್ತು ಓದುಗರ/ನೋಡುಗರ ನಿರೀಕ್ಷೆಗೆ ತಕ್ಕುದಾಗಿ ಕರ್ತವ್ಯ ನಿರ್ವಹಿಸಬಲ್ಲರು. ಆ ಕೆಲವೇ ಕೆಲವು ಮಂದಿಯಲ್ಲಿ ಮೊದಲಿಗರಾಗಿ ನಿಲ್ಲುವವರು ಪ್ರಜಾವಾಣಿಯ ದಿನೇಶ್ ಅಮಿನ್ ಮಟ್ಟು. ಪತ್ರಕರ್ತರ ಲಾರ್ಡ್ಸ್ ನಲ್ಲಿ ಸತತ ಸೆಂಚುರಿಗಳನ್ನೇ ಬಾರಿಸಿ ಇದೀಗ ಬೆಂಗಳೂರಿಗೆ ಮರಳಿದ್ದಾರೆ.
ದಿನೇಶ್ ಸತತ ಒಂಭತ್ತು ವರ್ಷಗಳ ಕಾಲ ಪ್ರಜಾವಾಣಿ ಓದುಗರಿಗೆ ದೆಹಲಿ ತೋರಿಸಿದವರು. ಚುನಾವಣೆ ಸಂದರ್ಭಗಳಲ್ಲಿ ದೇಶದ ಉದ್ದಗಲಕ್ಕೂ ಅಲೆದಾಡಿ ವಿಶ್ಲೇಷಣೆ ಬರೆದರು. ಪಶ್ಚಿಮ ಬಂಗಾಳದಲ್ಲಿ ಸುದೀರ್ಘ ಅವಧಿಗೆ ಎಡರಂಗ ಆಡಳಿತ ನಡೆಸಲು ಸಾಧ್ಯವಾಗಿದ್ದು ಏತಕ್ಕೆ ಎನ್ನುವುದು ಅವರ ಬರಹಗಳ ಮುಊಲಕ ಸ್ಪಷ್ಟವಾಯಿತು. ಓರಿಸ್ಸಾದ ಪಪ್ಪು ಪಾಸ್ ಹೋಗಯಾ, ಎನ್ನುವಾಗಲೂ ಪಪ್ಪುವಿನ (ನವೀನ್ ಪಟ್ನಾಯಕ್ ನ) ಮುಂದಿನ ನಡೆ ಬಗ್ಗೆ ಸಂಶಯ ಇಟ್ಟುಕೊಂಡೇ ಬರೆಯುತ್ತಾರೆ.
ಮುಂದಿನ ಪ್ರಧಾನಿ ಯಾರಾಗಬಹುದು ಎಂಬ ಬರಹದಲ್ಲಿ, 'ಇಷ್ಟೆಲ್ಲಾ ಸಾಧ್ಯತೆಗಳಿವೆಯಾ?' ಎಂದು ಓದುಗರಲ್ಲಿ ಅಚ್ಚರಿ ಮುಊಡಿಸಿದ್ದುಂಟು. ಈಗ್ಗೆ ಕೆಲವು ತಿಂಗಳುಗಳ ಹಿಂದೆ, ಗುಜರಾತ್ ಅಭಿವೃದ್ಧಿ ವಿಚಾರದಲ್ಲಿ ದೇಶದಲ್ಲಿಯೇ ಮುಂದಿದೆ ಎಂದು ಎಲ್ಲಾ ಮಾಧ್ಯಮಗಳು ಬೀಗುತ್ತಿದ್ದ ಕಾಲದಲ್ಲಿ ದಿನೇಶ್, ಆ ರಾಜ್ಯ ಹಿಂದುಳಿದಿರುವುದೆಲ್ಲಿ ಎನ್ನುವುದನ್ನು, ಅಂಕಿ ಅಂಶ ಸಹಿತ ವಿವರಿಸಿದ್ದರು.
ಕರ್ನಾಟಕದಲ್ಲಿ ಜೆಡಿಎಸ್-ಬಿಜೆಪಿ ಸರಕಾರ ಮುರಿದು ಬಿದ್ದಾಗ, ಜೆಡಿಎಸ್ ಪಕ್ಷದ ಮೇಲೆ ವಚನ ಭ್ರಷ್ಟತೆ ಆರೋಪ ಹೊರಿಸಲಾಯಿತು. ಅದೇ ಹೊತ್ತಿಗೆ ದಿನೇಶ್ ಬಿಜೆಪಿ ದೇಶಾದ್ಯಂತ ಹೀಗೆ ಎಷ್ಟು ಪಕ್ಷಗಳನ್ನು 'ವಚನ ಭ್ರಷ್ಟರನ್ನಾಗಿ' ಮಾಡಿದೆ ಎಂದು ಅಂಕಣ ಬರೆದರು. ಮಾರನೇ ದಿನ ಕುಮಾರಸ್ವಾಮಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, ಆ ಅಂಕಣದ್ದೇ ಸುದ್ದಿ. ವಿಚಿತ್ರ (ವಿಶಿಷ್ಷ) ಅಂದರೆ, ಜೆಡಿಎಸ್ ಆ ಅಂಕಣದ ಭಾಗಗಳನ್ನೇ ತನ್ನ ನಡೆಯ ಸಮರ್ಥನೆಗಾಗಿ ಇತರ ಪತ್ರಿಕೆಗಳಲ್ಲಿ ಜಾಹೀರಾತಿನ ರೂಪದಲ್ಲಿ ಬಳಸಿಕೊಂಡಿತು.
ಈ ವಾರ ದೆಹಲಿ ಹವಾಗುಣದ ಬಗ್ಗೆ ಒಂದು ಚಂದದ ಬರಹ ಬರೆದು ದೆಹಲಿಗೆ ವಿದಾಯ ಹೇಳಿದ್ದಾರೆ. ದಿನೇಶ್ ರ ಈ ಬರಹದಲ್ಲಿ 'ಸೂರ್ಯ' ಮತ್ತೆ ಮತ್ತೆ ಕಾಣಸಿಗುತ್ತಾನೆ. ಅವರಿಗೆ ದೆಹಲಿಯ ಸಂಸದರನ್ನು ಕಂಡಾಗಲೆಲ್ಲ "ಯಾಕೋ ನೆತ್ತಿಮೇಲೆ ಸುಡುತ್ತಿರುವ ಸೂರ್ಯನೇ ನೆನಪಾಗುತ್ತಿದ್ದ. ಕಣ್ಣೆತ್ತಿ ನೋಡುವ ಹಾಗಿಲ್ಲ. ಸಮೀಪ ಹೋದರೆ ಸುಟ್ಟುಬಿಡುವಂತೆ ಧಗ ಧಗ ಉರಿಯುತ್ತಿರುವ ಅಧಿಕಾರದ ಬೆಂಕಿ". ಅಧಿಕಾರವನ್ನು ಬೆಂಕಿಗೆ ಹೋಲಿಸುತ್ತಾರೆ. ತರುಣ ಪತ್ರಕರ್ತರಿಗೆ ಇಲ್ಲೊಂದು ಕಿವಿಮಾತು ಎಂದು ತಿಳಿದರೆ ತಪ್ಪಿಲ್ಲ. ಸೆಪ್ಟಂಬರ್-ಅಕ್ಟೋಬರ್ ತಿಂಗಳ ಸೂರ್ಯನನ್ನು ಅವರು, ಅಧಿಕಾರದಲ್ಲಿಲ್ಲದ ಪಕ್ಷದ ಸಂಸದರಿಗೆ ಹೋಲಿಸುತ್ತಾರೆ. ಆ ತಿಂಗಳಲ್ಲಿ ಸೂರ್ಯ ಇದ್ದೂ ಇಲ್ಲದ ಹಾಗೆ.
ದೆಹಲಿಯಲ್ಲಿ ಬಿಸಿಲ ಝಳ ಕಡಿಮೆಯಾಗುವ ಹೊತ್ತಿನಲ್ಲಿ ದಿನೇಶ್ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅಂದಹಾಗೆ 'ದಿನೇಶ್' ಕೂಡಾ ಸೂರ್ಯನ ಇನ್ನೊಂದು ಹೆಸರು. ಪ್ರಜಾವಾಣಿ ಓದುಗರ ಪಾಲಿಗೆ ದಿನೇಶ್ ಅಮಿನ್ ಮಟ್ಟು 'ದೆಹಲಿಯ ಸೆಪ್ಟಂಬರ್-ಅಕ್ಟೋಬರ್ ತಿಂಗಳ' ಸೂರ್ಯನಾಗದಿರಲಿ ಎಂಬುದೇ ಸುದ್ದಿಮಾತು ಆಶಯ.

Saturday, May 23, 2009

ಸತ್ಯ ಮತ್ತು ದೇಶದ ಪರ ಇರಬೇಕು

"ಪತ್ರಿಕೆಯೋ ಅಥವಾ ಚಾನಲ್ಲೊ ಅಥವಾ ನಿಮ್ಮಂಥಹ ಯಾವದೋ ಒಂದು ಬ್ಲಾಗೋ ಎಲ್ಲರಿಗೂ ಅವರದೇ ಆದ ಒಂದು ಮುಖ ಅಂಥಾ ಇರುತ್ತದೆ. ನಿಮ್‌ ಮುಖಾನೇ ಕಾಣ್ತಿಲ್ಲ..ಯಾಕಂದ್ರೆ ನೀವು ಯಾವ ಸಮಯದಲ್ಲಿ ಯಾರ ಪರವಾಗಿ ಇರ್ತಿರೋ ಅಥವಾ ವಿರುದ್ಧವಾಗಿರ್ತಿರೋ ಹೇಳೋಕೆ ಆಗಲ್ಲ.ಒಟ್ಟಾರೆ ನೀವು ಬಿಜೆಪಿ ವಿರೋಧಿಗಳು ಅನ್ನೋದಂತೂ ಸ್ಪಷ್ಟ..ಯಾಕಂದ್ರೆ ತತ್ವ ಸಿದ್ದಾಂತ..ಪಕ್ಷಗಳಿಗಷ್ಟೇ ಅಲ್ಲ ಮಾದ್ಯಮಕ್ಕೂ ಇರಬೇಕು ಅಂತ ವಾದ ಮಾಡೋನು ನಾನು..ನಿಮಗಂತೂ ಯಾವದೂ ಇಲ್ಲ ಬಿಡಿ..ನೀವು ಲೆಫ್ಟೂ ಅಲ್ಲ ಇತ್ತ ರೈಟೂ ಅಲ್ಲ..ಎಡಬಿಡಂಗಿ ಆದ್ರೆ ಭಾರೀ ಕಷ್ಟ ಸ್ವಾಮಿ...."

ಚಾಣಾಕ್ಯ ಎನ್ನುವವರು ಇಂತಹದೊಂದು ಕಾಮೆಂಟ್ ಮಾಡಿದ್ದಾರೆ. ನಮ್ಮ ಬ್ಲಾಗ್ ನ ಈ ಹಿಂದಿನ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಅವರು ಹೀಗೆ ಅಭಿಪ್ರಾಯ ಪಟ್ಟಿದ್ದಾರೆ. ಅವರಿಗೆ ಮೊದಲು ನಮ್ಮ ವಂದನೆಗಳು. ಅವರು ಮೊದಲು 'ನಮ್ಮ ಮುಖ' ಕಾಣುತ್ತಿಲ್ಲ ಎಂದು ದೂರಿದ್ದಾರೆ. ಮುಂದುವರೆಸಿ, ನೀವು ಯಾವ ಸಮಯ ಯಾರ ಪರ ಇರ್ತಿರೋ ಗೊತ್ತಿಲ್ಲ, ಆದರೆ ನೀವಂತೂ ಬಿಜೆಪಿ ವಿರೋಧಿಗಳು ಎನ್ನುವುದಂತೂ ಸ್ಪಷ್ಟ - ಎಂದಿದ್ದಾರೆ.

ಇವರ ಮಾತಿಗೆ ನೇರ, ದಿಟ್ಟ ವಾಗಿ ಹೇಳುವುದಾದರೆ, ಸ್ವಂತ ಪ್ರಜ್ಞೆ ಇರುವವನು ಮತ್ತು ಸಮಾಜದ ಹಿತ ಮುಖ್ಯ ಎಂದುಕೊಂಡ ಎಂಥವನೇ ಆಗಲಿ ಅವನು ಬಿಜೆಪಿ ವಿರೋಧಿಯಾಗಿರುತ್ತಾನೆ. ಅದರ ತತ್ವದಲ್ಲಿಯೇ ಎಡವಟ್ಟುಗಳಿವೆ. ನೂರಾರು ಜಾತಿ, ಜನಾಂಗ, ಭಾಷೆ ಒಳಗೊಂಡಿರುವ ಒಂದು ದೇಶವನ್ನು ಒಂದು ಧರ್ಮದ ಕಣ್ಣುಗಳಿಂದ ನೋಡುವವರನ್ನು ದೇಶಭಕ್ತರೆನ್ನಬೇಕೆ? ಪಕ್ಕದ ಮನೆಯ ಅನ್ಯಧರ್ಮೀಯನನ್ನು ಶತ್ರುವಿನಂತೆ ಕಾಣುವ ಮನೋಧರ್ಮ ಹುಟ್ಟುಹಾಕಿದ ಪಕ್ಷವನ್ನು ಆರಾಧಿಸಬೇಕೆ? ಒಂದು ನಂಬಿಕೆ ಇತ್ತು, ವಿದ್ಯಾವಂತರೆಲ್ಲ ಬಿಜೆಪಿ ಜತೆ ಇದ್ದಾರೆ. ಈ ಮಾತು ಕೇಳಿದಾಗೆಲ್ಲ, ಅವರೆಲ್ಲಾ ಎಷ್ಟರ ಮಟ್ಟಿಗೆ ವಿದ್ಯಾವಂತರು ಎಂಬ ಸಂಶಯ ಮುಊಡುತ್ತಿತ್ತು.

ವಿಜಯ ಕರ್ನಾಟಕ ಸಂಪಾದಕ ವಿಶ್ವೇಶ್ವರ ಭಟ್, ಕಳೆದವಾರದ ತಮ್ಮ ಅಂಕಣದಲ್ಲಿ ಕಣ್ಣೀರು ಇಡುವುದೊಂದು ಬಾಕಿ. ಅಡ್ವಾನಿ ಕರ್ಣನಂತೆ. ಯುದ್ಧದಲ್ಲಿ ಗೆಲ್ಲುವ ಸಾಮರ್ಥ್ಯ ಇತ್ತಂತೆ, ಆದರೂ ಗೆಲ್ಲಲಿಲ್ಲ. ಗಾಂಧಿನಗರದ ಜನ ಅಡ್ವಾನಿಯನ್ನು ಗೆಲ್ಲಿಸಿದ ಅಂತರವನ್ನು ಸ್ವಲ್ಪ ಗಮನಿಸಿ. ಹಿಂದಿನ ಚುನಾವಣೆಗಿಂತ ಈ ಬಾರಿ ಅವರ ಜನಪ್ರಿಯತೆ ಕಡಿಮೆ ಆಗಿದೆ. ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ್ದರೂ, ಅವರ ಜನಪ್ರಿಯತೆ ಹೆಚ್ಚಲಿಲ್ಲ. ಗಾಂಧಿನಗರದಲ್ಲಿಯೇ ನಡೆಯದ್ದಿದುದು ಬೇರೆಲ್ಲಿ ನಡೆದೀತು?

ಭಟ್ ತಮ್ಮ ಅಂಕಣದಲ್ಲಿ ಅಡ್ವಾನಿಯನ್ನು ಕಳಂಕ ರಹಿತ ವ್ಯಕ್ತಿ ಎಂದಿದ್ದಾರೆ. ಅವರ ವ್ಯಕ್ತಿತ್ವದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎಂದೆಲ್ಲಾ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಒಮ್ಮೆ ಅಡ್ವಾನಿಯ ಇತಿಹಾಸ ಗಮನಿಸಿ. ಅವರ ವ್ಯಕ್ತಿತ್ವ ಪೂರ್ತಿ ಕಪ್ಪುಮಯ. ಬಾಬರಿ ಮಸೀದಿ ಧ್ವಂಸ ದೇಶ ಕಂಡ ಘೋರ ಕೃತ್ಯ. ಅದರ ನೇತೃತ್ವ ವಹಿಸಿದ್ದು ಯಾರು ಸ್ವಾಮಿ? ದೇಶದ ಉದ್ದಗಲಕ್ಕೂ ಅಡ್ಡಾಡಿ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ತೇವೆ ಎಂದು ಬೊಬ್ಬೆ ಹೊಡೆಯುತ್ತ ಓಟು ಕೇಳಿದ್ದು ಪ್ರಶಂಸಾರ್ಹ ಕೆಲಸವೇ? ಇಂದಿನ ನರೇಂದ್ರ ಮೋದಿ, ವರುಣ್ ಗಾಂಧಿಯಂತಹವರಿಗೆ ಮುಊಲ ಪ್ರೇರಣೆಯೇ ಈ ಅಡ್ವಾನಿ. ಅಡ್ವಾನಿ ಪ್ರಧಾನಿಯಾಗದೇ ಹೋದದ್ದಕ್ಕೆ ಪಕ್ಷ ಇವರೀರ್ವರನ್ನು ಹೊಣೆ ಮಾಡುವ ಮುನ್ನು ಇದನ್ನೆಲ್ಲಾ ಪಕ್ಷ ಯೋಚಿಸಬೇಕಿದೆ.

ಪತ್ರಿಕೆಗಳು ನಿಷ್ಟಕ್ಷಪಾತಿಯಾಗಿರಬೇಕು ಎನ್ನವುದು ಎನ್ನುವುದನ್ನು ಕೇಳಿ ಕೇಳಿ ಸಾಕಾಗಿ ಹೋಗಿದೆ. ನಮ್ಮ ಪ್ರಕಾರ ಪತ್ರಿಕೆಗಳು ಸತ್ಯ ಮತ್ತು ದೇಶದ ಪರ ಇರಬೇಕು. ಅದರರ್ಥ ಸತ್ಯವನ್ನು ತಿರುಚಿ, ದೇಶದ ವೈವಿಧ್ಯತೆಗೆ ಭಂಗ ತರುವವರ ವಿರುದ್ಧ ಇರುಬೇಕು. ವಿನೋದ್ ಮೆಹ್ತಾ ಮಾತಿನಲ್ಲಿ ಹೇಳುವುದಾದರೆ "journalist is not an ideological eunuch". ಹಾಗೂ ಯಾರಾದರೂ ತಾನು ಸೈದ್ಧಾಂತಿಕವಾಗಿ ನಪುಂಸಕ ಎಂದು ಭಾವಿಸುವುದಾದರೆ ಅಂತಹವನನ್ನು ಗಂಭಿರವಾಗಿ ಪರಿಗಣಿಸುವ ಅಗತ್ಯವೇ ಇಲ್ಲ ಎನ್ನುತ್ತಾರೆ ಮೆಹ್ತಾ. ಈ ಮಾತಿನೊಂದಿಗೆ ಇಂದಿನ ನಮ್ಮ ಮಾತು ಮುಗಿಸುತ್ತೇವೆ.

Monday, May 18, 2009

ಅಡ್ಡ-ವಾಣಿಯೇ ಅಡ್ಡವಾಯಿತು ಅಡ್ವಾನಿಗೆ...

ಸೋತು ಸುಣ್ಣವಾದ ಮೇಲೆ ಅಡ್ವಾನಿ ಸೋನಿಯಾ ಗಾಂಧಿ ಮತ್ತು ಮನಮೋಹನ ಸಿಂಗ್ ರಿಗೆ ಫೋನ್ ಹಚ್ಚಿದ್ದರಂತೆ. "ನೀವು ಗೆದ್ದದ್ದೀರಿ. ಶುಭಾಶಯಗಳು" ಎಂದು ಇಬ್ಬರಿಗೂ ಶುಭ ಕೋರಿದ್ದಾರೆ. ಪ್ರತಿಯಾಗಿ ಸೋನಿಯಾ ಮತ್ತು ಮನಮೋಹನ್ ಅಡ್ವಾನಿಗೆ 'ಧನ್ಯವಾದ' ಹೇಳಿದ್ದಾರೆ. ಅವರು ಥ್ಯಾಂಕ್ಸ್ ಹೇಳಿದ್ದು, ಕೇವಲ ಶುಭಾಶಯಕ್ಕೆ ಪ್ರತಿಯಾಗಿ ಅಲ್ಲ. ಕಾಂಗ್ರೆಸ್ ಗೆಲುವಿನಲ್ಲಿ, ಅಡ್ವಾನಿ ಮತ್ತು ಅವರ ಪಡೆಯ ಹುಡುಗರ ಪಾತ್ರ ಬಹುದೊಡ್ಡದಿತ್ತು, ಹಾಗಾಗಿ ಯುಪಿಎ ಅಧ್ಯಕ್ಷೆ ಅಡ್ವಾನಿಗೆ ವಿಶೇಷ ಧನ್ಯವಾದ ಹೇಳಿದ್ದಾರೆ.
ಮೊದಲು ಮನಮೋಹನ್ ಸಿಂಗ್ ದುರ್ಬಲ ಪ್ರಧಾನಿ ಎಂದು ಅಡ್ವಾನಿ ಅಡ್ಡ-ದನಿಯಲ್ಲಿ ಮಾತು ಆರಂಭಿಸಿದರು. ಪ್ರತಿ ನಿರ್ಧಾರಕ್ಕೂ ಪ್ರಧಾನಿ 10 ಜನಪಥ್ ದ ಒಪ್ಪಿಗೆ ಪಡೆಯಬೇಕು ಎಂದು ಟೀಕಿಸಿದರು. ನರೇಂದ್ರ ಮೋದಿ ಇದನ್ನೇ ಮುಂದುವರಿಸಿದರು. ರಾಜ್ಯ ಮಟ್ಟದ ಕಾಂಜಿ-ಪಿಂಜಿ ನಾಯಕರೆಲ್ಲ ಇದೇ ಮಂತ್ರ ಪಠಿಸಲು ಮುಂದಾದರು.
ಕಳೆದ ಬಾರಿ ಚುನಾವಣೆಯಿಂದ ಬಿಜೆಪಿ ಪಾಠ ಕಲಿಯಲಿಲ್ಲ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ. 2004 ರಲ್ಲಿ ಸೋನಿಯಾ ವಿದೇಶಿ, ವಿದೇಶಿ ಮುಊಲದವಳು ಪ್ರಧಾನಿಯಾಗುವುದು ಸರಿಯೇ ಎಂದೆಲ್ಲಾ ಪ್ರಚಾರ ಮಾಡಿದರು. (ಕನ್ನಡದ ಪತ್ರಿಕೆಯೊಂದು, ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದಾಗ ಸೋನಿಯಾ ಗಾಂಧಿ ಪ್ರಧಾನಿಯಾಗುತ್ತಾಳೆ, ಇದು ದೇಶಕ್ಕೆ 'ನಾಚಿಕಗೇಡಿನ' ಎಂದು ಮುಖಪುಟದಲ್ಲಿ ಸಂಪಾದಕೀಯ ಬರೆಯಿತು.) ಆದರೆ ಆ ಯಾವ ಆರೋಪಗಳೂ ಪಕ್ಷಕ್ಕೆ ನೆರವಾಗಲಿಲ್ಲ. ಈ ಬಾರಿಯುಊ ಇಂತಹದೇ ತಪ್ಪು ಮಾಡಿದರು. 'ದುರ್ಬಲ ಪ್ರಧಾನಿ' ಎಂದಷ್ಟೂ, ಸಿಂಗ್ ಸಬಲರಾಗುತ್ತಾ ಬೆಳೆದರು.
ವರುಣ್ ಗಾಂಧಿ ಕೂಡಾ ಕಾಂಗ್ರೆಸ್ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಫಿಲಿಬಿಟ್ ನಲ್ಲಿ ಮಾತನಾಡುತ್ತಾ, ಅದ್ಯಾವಾಗ ಅಲ್ಪಸಂಖ್ಯಾತರನ್ನು ಕತ್ತರಿಸುವ ಮಾತನಾಡಿದರೋ, ಆಗಲೇ ದೇಶದ ಮುಊಲೆ ಮುಊಲೆಗಳಲ್ಲಿ ಬಹುದೊಡ್ಡ ಮೊತ್ತದ ಮತಗಳು ಕಾಂಗ್ರೆಸ್ ಬುಟ್ಟಿಗೆ ಖಾತ್ರಿಯಾದವು.
ಮಂಗಳೂರಿನಲ್ಲಿ ಒಂದಿಷ್ಟು ಪುಂಡರು, ಚರ್ಚ್ ಮೇಲೆ, ಪಬ್ ಮೇಲೆ ದಾಳಿ ನಡೆಸಿದರಲ್ಲ, ಅವರಿಗೆಲ್ಲಾ ಕಾಂಗ್ರೆಸ್ ಒಂದು "thanks giving" ಸೆರೆಮನಿ ಇಟ್ಟುಕೊಂಡರೂ ತಪ್ಪಿಲ್ಲ. ಅವರು ಬಿಜೆಪಿ ಪಕ್ಷದ ಮುಖವಾಡವನ್ನು ಕಳಚಿ, ಅದರ ನಿಜ ಸ್ವರೂಪವನ್ನು ದೇಶಕ್ಕೆ ತೋರಿಸಿದ ನಿಜ ಮನುಜರು!
ಗಾಂಧಿನಗರದಲ್ಲಿ ಅಡ್ವಾನಿ, ಫಿಲಿಬಿಟ್ ನಲ್ಲಿ ವರುಣ್, ಮಂಗಳೂರಿನಲ್ಲಿ ಬಿಜೆಪಿ ಗೆದ್ದಿರಬಹುದು. ಆದರೆ ದೇಶದಲ್ಲಿ ಸೋಲುಣ್ಣಲು ಅವರ ಪಾತ್ರ ಕಡಿಮೆ ಏನಿಲ್ಲ.

Monday, May 11, 2009

ಶೃತಿ ವಿಚ್ಛೇದನ ಮತ್ತು ಪಕ್ಷದ ಶಿಸ್ತು...

ನಟಿ ಶೃತಿ ಸುದ್ದಿಯಲ್ಲಿದ್ದಾಳೆ. ಪತಿ ಮಹೇಂದರ್ ನಿಂದ ದೂರವಾಗಲು ಬಯಸಿ ವಿಚ್ಛೇದನಕ್ಕೆ ಮುಂದಾಗಿದ್ದಾಳೆ. ನಟ, ನಟಿಯರ ದಾಂಪತ್ಯ ಸುದ್ದಿಮಾಧ್ಯಮಗಳಿಗೆ ಸದಾ ಬಹುಬೇಡಿಕೆಯ ಸರಕು. ಕೆಲವು ಟ್ಯಾಬ್ಲಾಯ್ಡ್ ಗಳಿಗೆ ಈ ಬೆಳವಳಿಗೆ ಸೆಂಟರ್ ಪೇಜೆ ಸೆನ್ಸೇಷನ್!
ಇದೇ ಸಮಯಕ್ಕೆ ಕಾದು ಕೂತಿದ್ದವರಂತೆ ಬಿಜೆಪಿಯ ಕೆಲ ನಾಯಕ, ನಾಯಕಿಯರು ಜಾಗೃತರಾಗಿದ್ದಾರೆ. ಬಿಜೆಪಿ ಶಿಸ್ತಿಗೆ ಹೆಸರಾದ ಪಕ್ಷ. ಶೃತಿ ವಿಚ್ಛೇದನ ಕೋರುವ ಮುಊಲಕ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದ್ದಾಳೆ ಎಂಬುದು ಅವರ ದೂರು. ಆ ಕಾರಣ ಶೃತಿಯನ್ನು ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕೆಂದು ಸದಾನಂದಗೌಡರ ಬೆನ್ನು ಬಿದ್ದಿದ್ದಾರೆ. ಆಕೆಯನ್ನು ಪದಚ್ಯುತಗೊಳಿಸಲು ಒತ್ತಾಯ ಮಾಡುವುದೆಂದರೆ, ತಮಗೇ ಆ ಸ್ಥಾನ ಕೊಡಿ ಎಂದು ಬೇಡಿಕೆ ಮುಂದಿಡುವುದು ಎಂದರ್ಥ. ಪ್ರಮೀಳಾ ನೇಸರ್ಗಿ ಮತ್ತಿತರರು ಇಂತಹ ಪ್ರಯತ್ನದಲ್ಲಿದ್ದಾರೆ.
ಸದಾನಂದ ಗೌಡರು ಸೋಮವಾರ ಪತ್ರಿಕೆಗಳಿಗೆ ಮಾತನಾಡಿ, ತಾನು ಮಹೇಂದರ್, ಶೃತಿ ಜೋಡಿಯನ್ನು ಒಂದು ಗೂಡಿಸಲು ಪ್ರಯತ್ನಮಾಡಿ ಸೋತೆ. ಆಕೆಯನ್ನು ಅಧ್ಯಕ್ಷ ಹುದ್ದೆಯಿಂದ ತೆಗೆಯುವ ವಿಚಾರವನ್ನು ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು. ಅವರ ಮಾತುಗಳಲ್ಲೇ ಹೇಳುವುದಾದರೆ, ಬಿಜೆಪಿ ಶಿಸ್ತಿಗೆ ಹೆಸರಾದ ಪಕ್ಷ. ಶೃತಿಯ ಇಂತಹ ನಡವಳಿಕೆಯಿಂದ ಪಕ್ಷಕ್ಕೆ ಮುಜುಗರವಾಗಿದೆ.
ಶಿಸ್ತಿನ ಪಕ್ಷ ಎಂದರೇನು?
ಹಾಗಾದರೆ ಪಕ್ಷದ ಕಾರ್ಯಕರ್ತೆ ಗಂಡನಿಂದ ಬೇಸತ್ತು ಬೇರೆ ಗಂಡಸಿನೊಂದಿಗೆ ಜೀವನ ಮಾಡುವ ಉದ್ದೇಶದಿಂದ ವಿಚ್ಛೇದನ ಕೋರಿದರೆ, ಅದು ಪಕ್ಷದ ಶಿಸ್ತಿನ ಉಲ್ಲಂಘನೆಯೆ? ಬಿಜೆಪಿ ಆಂತರಿಕ ಸಂವಿಧಾನ ಹಾಗೆ ಹೇಳುತ್ತದೆಯೆ? ವೈಯಕ್ತಿಕ ಜೀವನದಲ್ಲಿ ಬೇಸತ್ತು ಬೇರೆ ಆಯ್ಕೆಯ ಮೊರೆ ಹೋದರೆ, ಪಕ್ಷಕ್ಕೆ ಮುಜುಗರ ಆಗುವುದೆ?
ಬಿಜೆಪಿಗೆ ಶಿಸ್ತಿನ ಪಕ್ಷ ಎಂಬ ಹಣೆಪಟ್ಟಿ ಬರಲು ಇರುವ ಕಾರಣ, ಆ ಪಕ್ಷದಲ್ಲಿರುವ ಅನೇಕರು ಆರ್ ಎಸ್ ಎಸ್ ಮುಊಲದವರು. ಮೊದಲು ಅಲ್ಲಿ ಕೋಲು ಹಿಡಿದು ವ್ಯಾಯಾಮ ಮಾಡಿದವರು. ಇಂತಿಷ್ಟು ಹೊತ್ತಿಗೆ ಎದ್ದು, ಪೂಜೆ ಪುನಸ್ಕಾರಗಳನ್ನು ಮಾಡಿಕೊಂಡಿದ್ದ ಕಾರಣ ಅವರನ್ನು ಶಿಸ್ತಿನ ಸಿಪಾಯಿಗಳು, ಅವರು ಇರುವ ಪಕ್ಷ ಶಿಸ್ತಿನ ಪಕ್ಷ ಎಂದು ಅವರೇ ಪ್ರಚಾರ ಮಾಡಿದರು. ಆದರೆ ಅವರಿಗೆ ಎಂದಿಗೂ ಬಹುಮುಖೀ ಸಂಸ್ಕೃತಿ ದೇಶವನ್ನು ಗ್ರಹಿಸುವ ಕಲೆಯನ್ನು ಆ ಶಿಸ್ತು ಕಲಿಸಲೇ ಇಲ್ಲ. ಆ ಕಾರಣ ಒಬ್ಬ ಮಹಿಳೆ ವಿಚ್ಛೇದನಕ್ಕೆ ಅರ್ಜಿ ಹಾಕಿದರೆ, ಅದನ್ನು ಪಕ್ಷಕ್ಕಾದ ಮುಜುಗರ ಎನ್ನುತ್ತಾರೆ.
ಹಾಗಾದರೆ, ಬಿಜೆಪಿಯಲ್ಲಿದ್ದಾಕ್ಷಣ, ಗಂಡ ಎಷ್ಟೇ ಕಷ್ಟ ಕೊಟ್ಟರೂ ಯಾವ ಮಹಿಳೆಯೂ ವಿಚ್ಛೇದನ ಪಡೆಯದೇ ಇರಬೇಕೇನು?
ಒಂದು ಕ್ಷಣ ಬಿಜೆಪಿಯ 'ಅಪ್ರತಿಮ ಪ್ರತಿಭೆ' ರೇಣುಕಾಚಾರ್ಯನನ್ನು ನೆನಪು ಮಾಡಿಕೊಳ್ಳಿ. ಜಯಲಕ್ಷ್ಮಿ ಎಂಬ ನರ್ಸ್ ಜೊತೆ ರಾದ್ಧಾಂತ ಮಾಡಿಕೊಂಡ ಆಸಾಮಿ. ಆಕೆಗೆ ನಾನಾ ಆಮಿಷ ಒಡ್ಡಿ, ಮೋಸ ಮಾಡಿದನೆಂಬ ಆರೋಪಗಳಿವೆ. ಆಕೆ ಹಲವು ಬಾರಿ ಆತ್ಮಹತ್ಯೆಗೂ ಯತ್ನಿಸಿದ್ದುಂಟು. ಪತ್ರಿಕಾಗೋಷ್ಪಿಯೊಂದನ್ನು ಕರೆದು, ರೇಣುಕಾಚಾರ್ಯನ ಲೀಲೆಗಳನ್ನು ಜಗಜ್ಜಾಹೀರು ಮಾಡಿದಳು.
ನೆನಪಿರಲಿ, ಆಗ ಈ ಸೊಕಾಲ್ಡ್ ಶಿಸ್ತಿನ ಪಕ್ಷಕ್ಕೆ ಮುಜುಗರವಾಗಲಿಲ್ಲ, ಅದರ ಶಿಸ್ತು ಉಲ್ಲಂಘನೆ ಆಗಲಿಲ್ಲ!! ಅದೇ ವ್ಯಕ್ತಿ ಶಾಸಕನಾಗಿ ಮುಂದುವರಿಯುತ್ತಾನೆ. ಮುಂದೆ ಹಟ್ಟಿ ಚಿನ್ನದ ಗಣಿಗೆ ಅಧ್ಯಕ್ಷನಾಗುತ್ತಾನೆ.
ಅದೇ ಪತ್ರಿಕಾಗೋಷ್ಟಿಯಲ್ಲಿ ಯಡಿಯುಊರಪ್ಪ ಮತ್ತು ಪಕ್ಷದ ಇನ್ನೊಬ್ಬ ಪ್ರಮುಖ ನಾಯಕಿ ಮಧ್ಯೆ ಮಧುರ ಬಾಂಧವ್ಯ ಇದೆ ಎಂದು ಜಯಲಕ್ಷ್ಮಿ ಸಾರಿದಳು. ಅವರ ಸಂಬಂಧವೇ ತಮ್ಮ ಮತ್ತು ರೇಣುಕಾಚಾರ್ಯರ ಸಂಬಂಧಕ್ಕೆ ಪ್ರೇರಣೆ ಎಂದೂ ಹೇಳಿದಳು. ಆಗ ಪಕ್ಷಕ್ಕೆ ಮುಜುಗರ ಆಗಲಿಲ್ಲವೇ ಮಿಸ್ಟರ್ ಸದಾನಂದಗೌಡರೆ?
ಟಿವಿ9 ರ ಸಂದರ್ಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಶೃತಿ ಹೇಳಿದ್ದು "ಸದಾನಂದ ಗೌಡರ ಹೆಂಡತಿ ಅವರಿಂದ ಡೈವೋರ್ಸ್ ಪಡೆಯಲು ಅರ್ಜಿ ಹಾಕಿದ್ದರೆ, ಅವರಿಗೆ ಮುಜುಗರ ಆಗಬೇಕಿತ್ತು. ನಾನು ನನ್ನ ಗಂಡನಿಂದ ವಿಚ್ಛೇದನ ಕೋರಿದರೆ ಅವರಿಗೇಕೆ ಮುಜುಗರ?"
ಉತ್ತರ ಸರಿಯಾಗಿಯೇ ಇತ್ತು. ಶೃತಿಯ ನಿರ್ಧಾರ ಏನೇ ಇರಲಿ. ಅದರ ಪರಿಣಾಮಗಳನ್ನು ಆಕೆ ಎದುರಿಸುತ್ತಾಳೆ.

Monday, May 4, 2009

ಈಗ ಮಾಡಬೇಕಾದ್ದು...

ಏಪ್ರಿಲ್ - ಮೇ ಬಂತೆಂದರೆ ಪ್ರೆಸ್ ಕ್ಲಬ್ ನಲ್ಲಿ ಪ್ರೊಮೊಷನ್, ಹೈಕ್, ಟ್ರಾನ್ಸ್ ಫರ್..ಗಳದ್ದೇ ಸುದ್ದಿ. ಸಹೋದ್ಯೋಗಿಗಳ ಮಧ್ಯೆ ಈರ್ಷ್ಯೆ, ಇಗೋ, ಜಿದ್ದುಗಳೆಲ್ಲವೂ ಜಾಗೃತಗೊಳ್ಳುವ ಕಾಲವೂ ಇದೇ. ಅವನಿಗೆ "ಒಟ್ಟಿಗೆ ಎರಡೆರಡು ಇಂಕ್ರಿಮೆಂಟ್, ನನಗೋ ಒಂದೇ" - ಎಂದು ಕೊರಗುವವರು ಕೆಲವರಾದರೆ, ಮತ್ತೆ ಕೆಲವರದು "ಅವರದು ಜಾತಿ ರಾಜಕೀಯ. ನಾವು ಎಷ್ಟೇ ಕೆಲಸ ಮಾಡಿದರೂ ಗುರುತಿಸೋಲ್ಲ" ಎಂಬ ಗೊಣಗಾಟ. "ಏನೋ ದಿಕ್ಕು ತಪ್ಪಿ ಇಲ್ಲಿಗೆ ಬಂದ್ಬಿಟ್ವಿ. ಆದಷ್ಟು ಬೇಗ ಕಳಚಕೋಳೋದು ಒಳ್ಳೇದು" - ಎಂದು ನಿಟ್ಟುಸಿರು ಬಿಡುವವರದು ಇನ್ನೊಂದು ಗುಂಪು. - ಇದು ಪ್ರತಿವರ್ಷ ಏಪ್ರಿಲ್-ಮೇ ದಿನಗಳ ಬೆಳವಣಿಗೆಗಳು.
ಆದರೆ ಈ ವರ್ಷ ಹಾಗಿಲ್ಲ.
ನಿಜ. ಹಿಂದಿನಂತಿಲ್ಲ ಈ ವರ್ಷ. ಪತ್ರಕರ್ತರು ಪ್ರೊಮೊಷನ್ಸ್ ಬಗ್ಗೆ ಮಾತನಾಡುತ್ತಿಲ್ಲ. ಯಾಕೆಂದರೆ ಇರೋ ಪೊಸಿಷನ್ ಉಳಿದರೆ ಸಾಕು ಎನ್ನುವ ಸ್ಥಿತಿ ಅವರದು. ಹೈಕ್ ಬಗ್ಗೆ ಚಕಾರ ಎತ್ತುತ್ತಿಲ್ಲ. ಕಾರಣ, ಅವರು ಇರೋ ಸಂಬಳ ಕಟ್ ಆಗದಿದ್ರೆ ಅದೇ ಸಮಾಧಾನ ಎನ್ನುವ ಹಂತ ತಲುಪಿದ್ದಾರೆ. ಜಾಗತಿಕ ಆರ್ಥಿಕ ಕುಸಿತ ಪತ್ರಕರ್ತರನ್ನು ಇಂತಹ ಸ್ಥಿತಿ ತಂದು ನಿಲ್ಲಿಸಿದೆ. ಟೈಮ್ಸ್ ಆಫ್ ಇಂಡಿಯಾದಂತಹ ಪತ್ರಿಕೆ ತನ್ನ ಉದ್ಯೋಗಿಗಳ ಜೇಬಿಗೆ ಕತ್ತರಿ ಹಾಕಿತು. ಡೆಕ್ಕನ್ ಕ್ರಾನಿಕಲ್ ದೊಡ್ಡ ಸಂಬಳ ಕೊಟ್ಟು ಕರೆದುಕೊಂಡು ಬಂದಿದ್ದವರಿಗೆ ನಿರಾಸೆ ಮಾಡಿದೆ ಎಂಬ ಸುದ್ದಿ ಹೊರಬಿದ್ದಿದೆ.
ಮೊನ್ನೆ ಮೊನ್ನೆ ಇಂಡಿಯನ್ ಎಕ್ಸ್ ಪ್ರೆಸ್ ಸಂಪಾದಕ ಶೇಖರ್ ಗುಪ್ತಾ ಬೆಂಗಳೂರಿನಲ್ಲಿದ್ದರು. ಐಐಜೆಎನ್ಎಂ ಘಟಿಕೋತ್ಸವದಲ್ಲಿ ಮಾತನಾಡುತ್ತ, ಆರ್ಥಿಕ ದುಸ್ಥಿತಿ ನಂತರದ ದಿನಗಳು ಪತ್ರಿಕೋದ್ಯಮದ ಪಾಲಿಗೆ ಸುವರ್ಣ ಯುಗ ಕಲ್ಪಿಸಲಿವೆ ಎಂದರು. ಕೇವಲ ವೃತ್ತಿ ನೈಪುಣ್ಯ ಉಳ್ಳವರು ಕ್ಷೇತ್ರದಲ್ಲಿ ಉಳಿಯಲು ಸಾಧ್ಯ. ಆಗ ಪತ್ರಿಕೋದ್ಯಮ ಉತ್ತಮ ಏಳಿಗೆ ಸಾಧಿಸಲು ಸಾಧ್ಯ ಎಂದರು.
ಅವರ ಮಾತುಗಳು, ಪತ್ರಕರ್ತರೆಲ್ಲರು ನಾವು ನಿಜಕ್ಕೂ ಈ ಕ್ಷೇತ್ರದಲ್ಲಿ ಉಳಿಯಲು ಅರ್ಹರೇ ಎಂಬುದನ್ನು ಯೋಚಿಸುವಂತೆ ಮಾಡುತ್ತವೆ. ಹಾಗೆ ಸ್ವ ವಿಮರ್ಶೆಗೆ ತೊಡಗುವ ಪತ್ರಕರ್ತ ನಿಜಕ್ಕೂ ಒಳ್ಳೆಯ ಪತ್ರಕರ್ತನಾಗುವತ್ತ ಹೆಜ್ಜೆ ಹಾಕುತ್ತಾನೆ. ನಮ್ಮ ಪತ್ರಕರ್ತರು ಈಗ ಮಾಡಬೇಕಾದ್ದು ಅದನ್ನೇ.

Sunday, May 3, 2009

ಆ ಕರಾಳ ದಿನಗಳು

ಗುರುದ್ವಾರದ ಎರಡನೇ ಮಹಡಿಯಿಂದ ಒಂದು ಮುಖ ಇಣುಕುತ್ತಿದೆ. ಕೆಳಗೆ ಭೀಕರ ಹಿಂಸೆ. ಅಂದು ಆಡಳಿತದಲ್ಲಿದ್ದ ನೇತಾರರು, ಅವರ ಚೇಲಾಗಳು ಕಬ್ಬಿಣದ ರಾಡುಗಳಿಂದ ಮೊದಲು ಒಬ್ಬನಿಗೆ ಬಾರಿಸಿದರು. ದಿಗಿ ದಿಗಿ ಉರಿಯುತ್ತಿದ್ದ ಟೈರ್ ಒಂದನ್ನು ಅವನ ಕತ್ತಿಗೆ ನೇತುಹಾಕಿ, ಅವನ ದೇಹದ ಇಂಚಿಂಚು ಬೆಂಕಿಗೆ ಆಹುತಿಯಾಗಿ ಸಾಯುವುದನ್ನು ನೋಡಿ ಆನಂದಿಸಿದರು. ಹೀಗೆ ಹತನಾದ ವ್ಯಕ್ತಿಯ ಸಹೋದರ, ಗುರುದ್ವಾರದ ಎರಡನೇ ಮಹಡಿಯಿಂದ ಎಲ್ಲವನ್ನೂ ನೋಡುತ್ತಿದ್ದ. ತನ್ನೆದುರಿಗೆ ಸಹೋದರ ಸಾಯುವುದನ್ನು ನೋಡಲಾಗದೆ ಚೀತ್ಕರಿಸಿದ.
ತೀರಾ ಆಪ್ತರು ಎದುರಿಗೆ ಸಾಯುತ್ತಿರುವಾಗ, ಅವರನ್ನು ಬದುಕಿಸಲು ಸಾಧ್ಯವಾಗದ ಅಸಹಾಯಕತೆ ಇದೆಯಲ್ಲ, ಅದಕ್ಕಿಂತ ಹಿಂಸೆ ಮತ್ತೊಂದಿಲ್ಲ. ಹೀಗೆ ಆಗ ದಿಲ್ಲಿಯಲ್ಲಿ ಎಷ್ಟೋ ಮಂದಿ ಸತ್ತು ಹೋದರು. ಎಷ್ಟೋ ಮಕ್ಕಳು ತಮ್ಮ ಪೋಷಕರ ಹತ್ಯೆಗೆ ಮುಊಕ ಸಾಕ್ಷಿಗಳಾದರು. ಅಂದಹಾಗೆ ಅವು 1984 ರ ದಿಲ್ಲಿ ದಿನಗಳು. ಇಂದಿರಾ ಗಾಂಧಿ ಹತ್ಯೆ ನಂತರ ಸಿಖ್ ರ ಮಾರಣ ಹೋಮಕ್ಕೆ ಕಾಂಗ್ರೆಸ್ ನಾಯಕರು ನೇತೃತ್ವ ವಹಿಸಿದ್ದರು.
ತೆಹಲ್ಕಾದ ಹಿಂದಿನ ವಾರದ ಸಂಚಿಕೆಯನ್ನು ತಿರುವಿ ಹಾಕುತ್ತಿದ್ದಾಗ ಅಂದಿನ ದಿನಗಳು ಕಣ್ಣ ಮುಂದೆ ಹಾದು ಹೋದವು. ಆಳವಾದ ತನಿಖೆ, ಅಧ್ಯಯನದಿಂದ ಕೂಡಿದ ಲೇಖನಗಳನ್ನು ತೆಹಲ್ಕಾ ಪ್ರಕಟಿಸಿದೆ. ಅದರಲ್ಲಿ ಒಂದು ಲೇಖನವನ್ನು ಇಲ್ಲಿ ನಿಮಗಾಗಿ. ಇತರೆ ಲೇಖನಗಳಿಗಾಗಿ ಇಲ್ಲಿ ಭೇಟಿ ಕೊಡಿ.
In A Blind Alley
HARINDER BAWEJA Editor, News and Investigations
THE SKYLINE was a dark, uncomfortable grey as I stood at the window of my office in Delhi’s Connaught Place area, watching plumes of thick smoke spiralling skywards. Word had spread that Indira Gandhi had been shot dead by her Sikh bodyguards and a motley crowd of angry protestors had started burning taxis. The phones rang incessantly, each call bringing news of an unfolding carnage.
One such call was from my father, an Indian Air Force officer. He had left his office in Lutyen’s Delhi, the political heart of the Capital, at about 7 pm as he did daily, but that day — 31 October, 1984 — the proud uniformed officer cowered in fear. He had tried making his way home on his Vespa scooter but by then, mobs had already started searching for anyone in a turban.
My father had discarded his turban and worn a helmet to reach home, an act that left a deep wound in his psyche. Another relative hid inside a water tank overnight, after being chased by a mob in South Extension, a posh Delhi locality. The tank water that November night was cold, but he trembled in sheer fright as he described how he ran for dear life.
But the next three days were about death. Every morning, I turned the key of a huge padlock — my family secure within the precincts of the house — and went about my job as a young reporter. I have lost count of the number of times my taxi was stopped by blood-lusting lumpens. They were looking for Sikhs everywhere, anywhere. Under the seat, inside the boot. Several times, they ordered the driver to open the petrol tank and thrusting a rubber pipe in, simply sucked petrol out, preparing for the next kill.
The streets of India’s political capital were littered with burning vehicles, burning houses, burning gurdwaras, burning men. Death was in naked display; turbaned Sikhs easy prey. For three days and nights bonfires raged as the mobs freely slaughtered. Helpless women and children sat around burnt corpses and wailed in Mongolpuri, in Palam, in Bhogal. Faceless colonies now etched in aff idavit after meaningless affidavit.
My father had discarded his turban and worn a helmet to reach home, an act that left a deep wound in his psyche
Police vehicles drove past hapless women in Mongol puri. We waved desperately for them to stop. Help us, help us, the women pleaded, looking in turns at us and the passing vehicle. Why were the cops not stopping? The women pointed us to a nallah, a drain running through Mongolpuri and adjacent Sultanpuri where burnt bodies had been dumped. ‘Stop, stop,’ the women and I screamed in unison when another police car drove by. It slowed for a moment as one of its occupants said, “Hamari duty khatam ho chukki hai.”
They were past their duty hour. So what if mobs were still on the rampage. So what if these widows knew the names of their husbands’ killers? So what if a young innocent, barely in her 20s, was holding her dead four-year-old son to her chest?
Everyone in Mongolpuri revealed the truth as they saw it — Sajjan Kumar, the Congress MP, had freely distributed kerosene bottles and hundred rupee notes, Sajjan Kumar’s men moved around with voters lists in their hands, Sajjan Kumar’s men first beat the men with iron rods, then forced them to cut their hair and then burnt them alive.
Revisiting 1984 is a painful memory; the denial of justice a second stab in the hearts of wretched survivors. 1984 is still about the dead and the living.
WRITER’S EMAILshammy@tehelka.com

Saturday, May 2, 2009

ಚುನಾವಣಾ ಆರ್ಭಟ ಮತ್ತು ಸಮೀಕ್ಷೆ

ರಾಜ್ಯದಲ್ಲಿ ಚುನಾವಣಾ ಬಿಸಿ ತಣ್ಣಗಾಗಿದೆ. ಒಮ್ಮೆ ಹಿಂದಿನ ದಿನಗಳ ಪತ್ರಿಕೆಗಳನ್ನು ತಿರುವಿ ಹಾಕಿದರೆ ಕಣ್ಣಿಗೆ ರಪ್ಪನೆ ರಾಚುವುದು ನಮ್ಮ ರಾಜಕಾರಣಿಗಳ ಆರ್ಭಟ. ಒಬ್ಬರು ಕೈ ಕಡಿಯುವ ಮಾತನಾಡಿದರೆ, ಮತ್ತೊಬ್ಬರು ತೀರಾ ತಲೆಗೆ ಕೈ ಹಾಕಿದರು. ಕೆಲವರು ಇನ್ನೂ ಮುಂದೆ ಹೋಗಿ ತಿಥಿ ಮಾಡುತ್ತೇವೆ ಎಂದರು. ಇವರೆಲ್ಲ ನಮ್ಮನ್ನು ಆಳುವವರು!
ಕಳೆದ ವಿಧಾನಸಭಾ ಚುನಾವಣೆ ಸಂದರ್ಭವನ್ನು ನೆನಪು ಮಾಡಿಕೊಂಡರೆ ಎರಡು ಭಿನ್ನ ಘಟನೆಗಳು ನೆನಪಾಗುತ್ತವೆ. ಒಂದು ಚುನಾವಣಾ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಮಹಿಮಾ ಪಟೇಲ್ ಉಪವಾಸಕ್ಕೆ ಕೂತರು. ತನ್ನ ಉಪವಾಸದ ಮುಊಲಕ ಜನತೆಯ ಮೇಲೆ ಪ್ರಭಾವ ಬೀರಲು ಯತ್ನಿಸಿದರು.
ಇನ್ನೊಂದು ಪ್ರಯೋಗ - ರವಿ ಕೃಷ್ಣಾರೆಡ್ಡಿಯದು. ಜನರಿಂದಲೇ ಹಣ ಸಂಗ್ರಹಿಸಿ, ಅದೇ ದುಡ್ಡನ್ನು ಪ್ರಚಾರಕ್ಕೆ ವೆಚ್ಚ ಮಾಡಿದರು. ನಿಜ. ಚುನಾವಣೆಯಲ್ಲಿ ಇಬ್ಬರೂ ಸೋತರು. ಮೇಲ್ನೋಟಕ್ಕೆ ಈ ಪ್ರಯತ್ನಗಳು ತೀರಾ ಅಸಹಜ ಎನ್ನುವಂತೆ ಕಂಡುಬಂದರೂ, ಬದಲಾವಣೆಯೆಡೆಗೆ ನಡೆದ ಪ್ರಯತ್ನಗಳು ಎಂದು ನೋಡಬೇಕಿದೆ. ಈ ಬಾರಿ ಇಂತಹದೇ ಪ್ರಯತ್ನಕ್ಕೆ ಕೈ ಹಾಕಿದವರು ರೈತಸಂಘದ ಪುಟ್ಟಣ್ಣಯ್ಯ. ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿ ಮಂಡ್ಯದಿಂದ ಸ್ಪರ್ಧಿಸಿದ್ದಾರೆ. ಅವರ ಪರ ಪ್ರಚಾರಕ್ಕೆ ಉತ್ತರ ಕರ್ನಾಟಕ ಜಿಲ್ಲೆಗಳಿಂದ ಅನೇಕ ರೈತ ಕುಟುಂಬಗಳು ರೊಟ್ಟಿ ಕಟ್ಟಿಕೊಂಡು ಮಂಡ್ಯಕ್ಕೆ ಬಂದಿದ್ದಾರೆ.
ಮಹಿಮಾ ಪಟೇಲ್, ರೆಡ್ಡಿ, ಪುಟ್ಟಣ್ಣಯ್ಯ ಗೆಲ್ಲುವುದಕ್ಕಿಂತಲೂ, ಒಂದು ಚುನಾವಣೆಯನ್ನು ಹೀಗೂ ಸ್ಪರ್ಧಿಸಬಹುದು ಎನ್ನುವುದನ್ನು ಜನತೆಗೆ ತೋರಿಸಿಕೊಟ್ಟರಲ್ಲ. ಆಗಾಗ ಇಂತಹ ಪ್ರಯತ್ನಗಳಾಗದಿದ್ದರೆ, ಬದಲಾವಣೆ ಸಾಧ್ಯ ಎನ್ನುವುದೇ ನಮ್ಮ ಜನರಿಗೆ ಮರೆತು ಹೋಗಿಬಿಡುತ್ತದೆ.
ಈ ಚುನಾವಣೆಯಲ್ಲಿ ಕನ್ನಡ ಪತ್ರಿಕೆಗಳು ನಿರ್ವಹಿಸಿದ ಪಾತ್ರ ಒಂದು ಗಂಭೀರ ಅಧ್ಯಯನಕ್ಕೆ ಯೋಗ್ಯ. ಒಂದು ಪತ್ರಿಕೆಯಂತೂ, ರಾಷ್ಟ್ರೀಯ ಪಕ್ಷವೊಂದರ ಮುಖವಾಣಿಯಂತೆ ವರ್ತಿಸಿತು. ಕೆಲ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಲೇಬೇಕೆಂದು ಅದರ ಸಂಪಾದಕರು ಪತ್ರಿಕೆ ಮುಖೇನ ಶಿಫಾರಸ್ಸು ಮಾಡಿದರು. ನಂತರ ಅವರನ್ನು ಗೆಲ್ಲುವ ಕುದುರೆ ಎಂದು ಬಿಂಬಿಸುವ ಮುಊಲಕ ಅಭ್ಯರ್ಥಿಯ ಬೆನ್ನಿಗೆ ನಿಂತರು.
ಸಮೀಕ್ಷೆಗಳು:
ಚುನಾವಣೆ ವರದಿಗಳಿಗೆ ಸಂಬಂಧಿಸಿದಂತೆ ಒಂದಿಷ್ಟು ನಿಷ್ಪಕ್ಷಪಾತಿಯಾಗಿ ವರ್ತಿಸಿದ್ದು ಪ್ರಜಾವಾಣಿ ಮತ್ತು ಕನ್ನಡಪ್ರಭ. ಈ ಎರಡೂ ಪತ್ರಿಕೆಗಳು ಯಾರ ಪರವೂ ನಿಲ್ಲಲಿಲ್ಲ. ಆದರೆ ವಿಜಯ ಕರ್ನಾಟಕ ಮಾತ್ರ ಹಾಗೆ ಕಾಣಲಿಲ್ಲ. ಈ ಪತ್ರಿಕೆ ನಡೆಸಿದ ಬಹುತೇಕ ಕ್ಷೇತ್ರ ಸಮೀಕ್ಷೆಗಳಲ್ಲಿ ಬಿಜೆಪಿ ಗೆಲ್ಲುವುದೆಂದೇ ಬರೆದರು. ಓದುಗ ಸಮುದಾಯ ಒಂದು ಪತ್ರಿಕೆಯನ್ನು ಒಂದು ಪಕ್ಷಕ್ಕೆ ಸಮೀಕರಿಸಿ ನೋಡುತ್ತಾನೆಂದರೆ, ಅದು ಆ ಮಟ್ಟಿಗೆ ಪತ್ರಿಕೆ ಸಮುದಾಯದ ಪ್ರತಿನಿಧಿಯಾಗುವಲ್ಲಿ ಸೋತಿದೆ ಎಂದೇ ಅರ್ಥ.
ಎಲ್ಲಾ ಪತ್ರಿಕೆಗಳು ಸಮೀಕ್ಷೆಗಳನ್ನು ಪ್ರಕಟಿಸಿದರು. ಹಾಗಾದರೆ ಇವರ ವರದಿಗಾರರು ಸಮೀಕ್ಷೆ ನಡೆಸಿದ ಪರಿ ಯಾವುದು? ಒಂದು ಕ್ಷೇತ್ರದ ಒಂದಿಷ್ಟು ಹಳ್ಳಿ, ನಗರ ಪ್ರದೇಶಗಳಲ್ಲಿ ಕೆಲವರನ್ನು ಮಾತನಾಡಿಸುತ್ತಾರೆ. ಅವರ ಒಲವು ನಿಲುವುಗಳನ್ನು ಕೇಳಿ ಪಡೆಯುತ್ತಾರೆ. ಆ ಮುಊಲಕ ಒಂದು ಅಭಿಪ್ರಾಯಕ್ಕೆ ವರದಿಗಾರ (ಸಮೀಕ್ಷಕ) ಬರುತ್ತಾನೆ. ಅದನ್ನೇ ತನ್ನ ಸಮೀಕ್ಷೆಯಲ್ಲಿ ಬರೆಯುತ್ತಾನೆ. ಆದರೆ ಯಾವ ಪತ್ರಿಕೆಯುಊ ತನ್ನ ಸಮೀಕ್ಷೆಗಾಗಿ ವೈಜ್ಞಾನಿಕ ಮಾದರಿಯನ್ನು ಅನುಸರಿಸಿಲ್ಲ. ಜಾತಿ ಲೆಕ್ಕಾಚಾರ, ಅಭ್ಯರ್ಥಿಯ ವರ್ಚಸ್ಸು, ಬೆಂಬಲಕ್ಕೆ ನಿಂತಿರುವ ಪಕ್ಷ... ಇಂತಹ ವಿವರಗಳ ಜೊತೆ ಆಡ ಆಡುವುದೇ ಸಮೀಕ್ಷೆ.
ಈ ನಿಟ್ಟಿನಲ್ಲಿ ಪತ್ರಿಕಾಲಯಗಳು, ವರದಿಗಾರರು ಯೋಚಿಸುವುದು ಸೂಕ್ತ.

Wednesday, April 1, 2009

ಕಟ್ಟಾ ಜಗದೀಶುಡು ತೋರಿದ ರಾಯಲಸೀಮಾ ಪರಾಕ್ರಮಮು..








ನಿನ್ನೆ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ತೆಲುಗರ ಸಮಾವೇಶ ನಡೆಸುತ್ತಿದ್ದ ವೆಂಕಯ್ಯ ನಾಯ್ಡು ಮತ್ತು ಬಳಗದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಪೊಲೀಸರಿಂದ-ಬಿಜೆಪಿ ಕಾರ್ಯಕರ್ತರಿಂದ ಏಟು ತಿಂದ ಪ್ರಕರಣದ ವರದಿಯನ್ನು ಪತ್ರಿಕೆಗಳಲ್ಲಿ ನೀವು ಗಮನಿಸಿರಬಹುದು. ಆದರೆ ಪತ್ರಿಕೆಗಳಲ್ಲಿ ಪ್ರಕಟವಾಗದ ಒಂದೆರಡು ಫೋಟೋಗಳು ಸುದ್ದಿಮಾತು ಕೈಗೆ ಸಿಕ್ಕಿವೆ.
ಇಲ್ಲಿ ಕರವೇ ಕಾರ್ಯಕರ್ತನೋರ್ವನನ್ನು ಜಾಡಿಸಿ ಒದೆಯುತ್ತಿರುವಾತ ಬೇರೆ ಯಾರೂ ಅಲ್ಲ. ವಾರ್ತಾ, ಅಬಕಾರಿ, ಐಟಿಬಿಟಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಸುಪುತ್ರ, ರಾಜಕೀಯ ಉತ್ತರಾಧಿಕಾರಿ ಕಟ್ಟಾ ಜಗದೀಶ್. ಈ ಕಟ್ಟಾ ಜಗದೀಶ್‌ನ ಗೂಂಡಾಗಿರಿಯನ್ನು ತಡೆಯಲು ಯತ್ನಿಸಲು ಅದೆಷ್ಟು ಮಂದಿ ಹರಸಾಹಸ ಮಾಡುತ್ತಿದ್ದಾರೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ಜಗದೀಶ್ ತೋರಿದ ರಾಯಲಸೀಮಾ ಪರಾಕ್ರಮವನ್ನು ತಣ್ಣಗಾಗಿಸಲು ಆರ್.ವಿ.ಹರೀಶ್ ಆದಿಯಾಗಿ ಎಲ್ಲರೂ ಯತ್ನಿಸುತ್ತಿದ್ದಾರೆ.
ಮತ್ತೊಂದು ಚಿತ್ರದಲ್ಲಿ ಅರಿಭಯಂಕರ ಕಟ್ಟಾ ಜಗದೀಶ್‌ರನ್ನು ಡಿಸಿಪಿ ರಮೇಶ್, ಮಫ್ತಿಯಲ್ಲಿರುವ ಪೊಲೀಸರು ದೂರಕ್ಕೆ ಕೊಂಡೊಯ್ದಿದ್ದಾರೆ. ಆದರೂ ಆತನ ಆವೇಶ ತಣ್ಣಗಾದಂತೆ ಕಾಣುತ್ತಿಲ್ಲ.
ಕರ್ನಾಟಕದ ತೆಲುಗರು ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ತೆಲುಗರು ತಮ್ಮನ್ನು ತಾವು ಕನ್ನಡಿಗರೆಂದೇ ಹೇಳಿಕೊಳ್ಳುತ್ತಾರೆ. ಕನ್ನಡಿಗರ ಜತೆ ಯಾವತ್ತೂ ಸಂಘರ್ಷಕ್ಕೆ ಬಿದ್ದವರಲ್ಲ. ತಮಾಶೆಯೆಂದರೆ ಸಾಕಷ್ಟು ಮಂದಿ ಕನ್ನಡ ಹೋರಾಟಗಾರರ ಮಾತೃಭಾಷೆಯೂ ತೆಲುಗು.
ಹೀಗಿರುವಾಗ ಬೆಂಗಳೂರಿನಲ್ಲಿ ತೆಲುಗು ಮಾಫಿಯಾವೊಂದನ್ನು ಕಟ್ಟುವ ಕೆಲಸ ಇತ್ತೀಚಿಗೆ ಸದ್ದುಗದ್ದಲವಿಲ್ಲದೆ ನಡೆಯುತ್ತಿದೆ. ಆಂಧ್ರದಿಂದ ವಲಸೆ ಬಂದ ಬಿಲ್ಡರ್‌ಗಳು, ರಿಯಲ್ ಎಸ್ಟೇಟ್ ಕುಳಗಳು ಇದಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಇವರಿಗೆಲ್ಲ ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿ ಎರಡು ಬಾರಿ ಆಯ್ಕೆಯಾಗಿರುವ ವೆಂಕಯ್ಯ ನಾಯ್ಡು ಕೃಪಾಶೀರ್ವಾದವಿದೆ. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ವೆಂಕಯ್ಯನವರ ಕಟ್ಟಾ ಬೆಂಬಲಿಗ ಎಂದು ಯಾರಿಗೂ ನೆನಪಿಸಬೇಕಾಗಿಲ್ಲ.
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಎದೆಗೆ ಒದೆಯುವಷ್ಟು ಸಾಹಸವನ್ನು ಈ ಮಂದಿ ಪ್ರದರ್ಶಿಸುತ್ತಿದ್ದಾರೆ ಎಂದರೆ ಇದು ಅಷ್ಟು ಸಣ್ಣ ವಿಷಯವೇನೂ ಅಲ್ಲ. ಹಿಂದೆ ತಮಿಳು ಭಾಷಾಂಧರಿಂದ ಬೆಂಗಳೂರು ಸಾಕಷ್ಟು ನರಳಿದೆ. ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ ಎಂದು ಅಬ್ಬರಿಸುವಷ್ಟು ಅವರು ಮಿತಿಮೀರಿದ್ದರು. ಬೆಂಗಳೂರಿನ ಹೃದಯಭಾಗದಲ್ಲಿರುವ ಶ್ರೀರಾಮಪುರದಲ್ಲಿ ದಾರಿಯಲ್ಲಿ ಕನ್ನಡದಲ್ಲಿ ಮಾತನಾಡಿಕೊಂಡು ಹೋದರೆ, ಚಾಕು, ಬ್ಲೇಡಿನಲ್ಲಿ ಕುರ್ಪು (ಗಾಯ) ಬೀಳುತ್ತಿದ್ದ ಕಾಲವೂ ಇತ್ತು. ಕಾಲಾಂತರದಲ್ಲಿ ಇದೆಲ್ಲವೂ ಒಂದಷ್ಟು ನಿಯಂತ್ರಣಕ್ಕೆ ಬಂದಿವೆ.
ಈಗ ತಮ್ಮ ರಾಜಕೀಯ ತಿಕ್ಕಲು, ತೆವಲಿಗೆ ಬಿಜೆಪಿಯವರು ತೆಲುಗರನ್ನು ಕನ್ನಡಿಗರಿಂದ ಬೇರೆ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಬಿಜೆಪಿಯವರು ಯಾವತ್ತಿಗೂ ನಾಡಪ್ರೇಮಿಗಳಾಗಿರಲಿಲ್ಲ ಎಂಬುದಕ್ಕೆ ಇದು ಸಾಕ್ಷಿ.
ಕೊನೆ ಗುಟುಕು: ಕಟ್ಟಾ ಜಗದೀಶರ ಪರಾಕ್ರಮಗಳೆಲ್ಲ ಪತ್ರಿಕಾ ಛಾಯಾಗ್ರಾಹಕರ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದವು. ಆದರೆ ಜಗದೀಶ ಕಾಡಿ ಬೇಡಿ, ತಮ್ಮ ಚಿತ್ರಗಳನ್ನು ಪ್ರಕಟಿಸದಂತೆ ತಡೆದಿದ್ದಾರೆ. ಆದರೆ ಸುದ್ದಿಮಾತುಗೆ ಈ ಚಿತ್ರಗಳು ಸಿಕ್ಕಿವೆ. ಪತ್ರಕರ್ತರಿಗೆ ಈ ಚಿತ್ರಗಳು ಮುಂದೆ ಬೇಕಾಗಬಹುದು. ಎಷ್ಟೇ ಆದರೂ ಭಾವಿ ಶಾಸಕರ ಚಿತ್ರಗಳಲ್ಲವೆ?

Tuesday, March 31, 2009

ವಿಶ್ವೇಶ್ವರ ಭಟ್ಟರ ದ್ವಂದ್ವ ನೀತಿ!

ಅಮೆರಿಕದಿಂದ ಬಂದ ಜನಾರ್ಧನ ಸ್ವಾಮಿ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಅವರ ಬಗ್ಗೆ ತಮ್ಮ ಅಂಕಣದಲ್ಲಿ ಹೀಗೆ ಬರೆಯುವ ವಿಶ್ವೇಶ್ವರ ಭಟ್ಟರು ಅದೇ ಅಂಕಣದಲ್ಲಿ, ಅಮೆರಿಕದಿಂದ ಬಂದು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ರವಿ ಕೃಷ್ಣಾರೆಡ್ಡಿ ಕುರಿತು ಮತ್ತೊಂದು ರೀತಿ ಬರೆಯುತ್ತಾರೆ. ಮಾರ್ಚ್ 29ರ ಭಾನುವಾರದ ಜನಗಳ ಮನ ಅಂಕಣ ನೋಡಿ.


Thursday, March 26, 2009

ಹೊಸ ವರ್ಷ ಇವರಿಗೆ ಸಹಬಾಳ್ವೆ ಕಲಿಸಲಿ...

ಒಂದು ವಾರದ ಅಂತರದಲ್ಲಿ ಇಬ್ಬರು ಬಿಜೆಪಿ ಹುರಿಯಾಗಳು "ನನಗೆ ಒಂದೇ ಒಂದು ಮುಸಲ್ಮಾನನ ಮತ ಬೇಡ" ಎಂದಿದ್ದಾರೆ. ಉತ್ತರ ಪ್ರದೇಶದ ಪಿಲಿಭಿಟ್ ನಿಂದ ಸ್ಪರ್ಧೆ ಮಾಡುತ್ತಿರುವ ವರುಣ್ ಗಾಂಧಿ ಈ ಮಾತುಗಳು ನನ್ನವಲ್ಲ ಎಂದು ಹೇಳಿದ್ದಾನೆ. ಆತ ಆ ಹೇಳಿಕೆ 'ನನ್ನದಲ್ಲ' ಎಂದು ಸಾಬೀತು ಪಡಿಸಲು ಇನ್ನೂ ಸಾಧ್ಯವಾಗಿಲ್ಲ. ಇದೇ ಮಾತು ಹೇಳಿದ ಮತ್ತೊಬ್ಬ ಕರ್ನಾಟಕದ ಅನಂತಕುಮಾರ್ ಹೆಗಡೆ. ಉತ್ತರ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಹೆಗಡೆ ಆ ಮಾತುಗಳು ನನ್ನವಲ್ಲ ಎಂದು ವರುಣ್ ತರಹ 'ಸುಳ್ಳು' ಹೇಳಿಲ್ಲ.
ಮುಸಲ್ಮಾನರು ಅತೀ ಕಡಿಮೆ ಸಂಖ್ಯೆಯಲ್ಲಿರುವ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿರುವ ಇಬ್ಬರು, ಆ ಸಮುದಾಯದ ಮತಗಳಿಲ್ಲದೆಯೂ ತಾವು ಗೆಲ್ಲಬಲ್ಲೆವು ಎಂಬ ದಾಷ್ಟ್ಯದಿಂದ ಈ ಮಾತುಗಲನ್ನಾಡಿದ್ದಾರೆ. ಮತ್ತು ಆ ಮೂಲಕ, ಹಿಂದೂಗಳೆಲ್ಲ ಒಟ್ಟಾಗಿ ತಮಗೇ ಮತಹಾಕಬೇಕು ಎಂಬ ಸಂದೇಶವನ್ನೂ ಸಾರುತ್ತಿರುವುದು ಸ್ಪಷ್ಟ.
ದೇಶ ಅಪ್ಪಿಕೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಮೂಲಕ ಪ್ರತಿನಿದಿಗಳನ್ನು ಆಯ್ಕೆಮಾಡುವುದು ಪದ್ಧತಿ. ವರುಣ್ ಮತ್ತು ಹೆಗಡೆಯವರಿಗೆ ಈ ವ್ಯವಸ್ಥೆಯ ಬಗ್ಗೆಯೇ ಅಪನಂಬಿಕೆ ಇದೆ. ಒಂದು ಸಮುದಾಯದವರು ಮತ ಹಾಕದಿದ್ದರೂ ತಾನು ಗೆಲ್ಲುತ್ತೇನೆ ಎನ್ನುವುದಾದರೆ, ಗೆದ್ದ ಮೇಲೆ ಆ ಸಮುದಾಯಕ್ಕೆ ತಾನು ಪ್ರತಿನಿಧಿಯಾಗಿರಲಾರೆ ಎಂದು ಹೇಳಿದಂತೆ.
ಅವರ ಕ್ಷೇತ್ರದ ಮುಸಲ್ಮಾನ ಪ್ರಜೆ ಸಂಕಷ್ಟದಲ್ಲಿದ್ದಾಗ, ಈ ಪ್ರತಿನಿಧಿ ತನಗೂ, ಆತನ ಸಮಸ್ಯೆಗೂ ಸಂಬಂಧವಿಲ್ಲದವನಂತೆ ಇದ್ದು ಬಿಡುತ್ತಾನೆ. ಅಲ್ಪಸಂಖ್ಯಾತ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡರೆ, ಅದು ಪ್ರತಿನಿಧಿಯ ಮನಸ್ಸನ್ನು ಘಾಸಿಗೊಳಿಸುವುದಿಲ್ಲ. ಅಲ್ಪಸಂಖ್ಯಾತ ಸಮುದಾಯದವರ ಮಕ್ಕಳು ಶಾಲೆಗೆ ಹೋಗದಿದ್ದರೆ, ಇವರ ಪಾಲಿಗೆ ಅದು ಮುಖ್ಯವಲ್ಲ. ಮುಸಲ್ಮಾನರ ಓಣಿಗೆ ಕುಡಿವ ನೀರು ತಲುಪದಿದ್ದರೆ, ಮೋರಿ ಸ್ವಚ್ಛಗೊಳ್ಳದಿದ್ದರೆ, ಸಾಮೂಹಿಕ ಶೌಚಾಲಯ ವ್ಯವಸ್ಥೆ ಇಲ್ಲದಿದ್ದರೆ...ಊಹ್ಞುಂ ಅದಾವುದೂ ಇವರಿಗೆ ಸಮಸ್ಯೆಯೇ ಅಲ್ಲ. Muslims just do not exist for them. ಏಕೆಂದರೆ ಅವರ ಮತ ಇಲ್ಲದಿದ್ದರೂ ಗೆದ್ದುಬಂದರಲ್ಲ!
ಕೆಲ ಇಂಗ್ಲಿಷ್ ಪತ್ರಿಕೆಗಳಲ್ಲಿ ಒಂದು ಧೋರಣೆ ಇದೆ. ಕೂಲಿ ಕಾರ್ಮಿಕನ ಮಗಳು ಅಥವಾ ಬಡ ರೈತನ ಮಗಳು ಅತ್ಯಾಚಾರಕ್ಕೆ ಒಳಗಾದರೆ ಈ ಪತ್ರಿಕೆಗಳಿಗೆ ಅದು ಸುದ್ದಿಯೇ ಅಲ್ಲ. "ಅಯ್ಯೋ, ಆ ಜನ 3ರೂಪಾಯಿ ಕೊಟ್ಟು ನಮ್ ಪೇಪರ್ ಓದ್ತಾರಾ?" ಎಂದು ಆ ಸುದ್ದಿಯನ್ನು ಮೂಲೆಗುಂಪು ಮಾಡುತ್ತಾರೆ. ಆದರೆ ಅದೇ ಐಟಿ ಉದ್ಯೋಗಿ ಅಥವಾ ಶ್ರೀಮಂತ ಕುಟುಂಬದ ಹೆಣ್ಣುಮಗಳಾದರೆ ಅದು ದೊಡ್ಡ ಸುದ್ದಿ. ಕಾರಣ ಅವರು ದುಡ್ಡುಕೊಟ್ಟು ಪೇಪರ್ ಓದ್ತಾರಲ್ಲ?
ಈ ದೇಶದ ಜನಪ್ರತಿನಿಧಿಗಳಾಗಲು ಚುನಾವಣೆಗೆ ನಿಲ್ಲುತ್ತಿರುವ ಆ ಇಬ್ಬರದೂ, ಇಂಗ್ಲಿಷ್ ಪತ್ರಿಕೆ ಮಾಲಿಕರದೂ ಒಂದೇ ಧೋರಣೆ. ದುಡ್ಡು ಕೊಟ್ಟು ಪೇಪರ್ ಓದುವುದಿಲ್ಲ ಎಂಬ ಕಾರಣಕ್ಕೆ ಬಹುದೊಡ್ಡ ಸಮುದಾಯ ಪತ್ರಿಕಾ ಜಗತ್ತಿನಿಂದ ಹೊರಗುಳಿಯುವಂತೆ, ನಿಮ್ಮ ಓಟು ಬೇಡವೆಂದು ಅಲ್ಪಸಂಖ್ಯಾತ ಸಮುದಾಯವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಿಂದಲೇ ಹೊರಗಿಡುವ ಹುನ್ನಾರ ಈ ಕೋಮುವಾದಿ ರಾಜಕಾರಣಿಗಳದು? ಸಮಾಜದ ಒಂದು ಅಂಗವನ್ನೇ ಹೊರಗಿಡುವ ಮಾತನಾಡುತ್ತಿರುವವರನ್ನು ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸುತ್ತಿರುವ ಪಕ್ಷಕ್ಕೆ ಒಂದಿಷ್ಟು ನಾಚಿಕೆ ಇಲ್ಲವೆ?
ಯುಗಾದಿ ಇವರಿಗೆ ಬುದ್ಧಿ ಕೊಡಲಿ. ಅಂದಹಾಗೆ ನಿಮಗೆಲ್ಲರಿಗೂ ಯುಗಾದಿ ಶುಭಾಶಯಗಳು.

Wednesday, March 25, 2009

ಒಳ್ಳೆಯ ಪ್ರಯತ್ನ, ಒಳ್ಳೆಯದಾಗಲಿ...

ದಿನಕ್ಕೆರಡು ಅಸೈನ್ಮೆಂಟ್, ಎರಡು ಪ್ರೆಸ್ ನೋಟ್ಸ್, ಅದರ ಮೇಲೆ ಪ್ರೆಸ್ ಕ್ಲಬ್ ನ ಬ್ಲಾಕ್ ಟೀ, ರಾತ್ರಿಯಾದರೆ ಮಂದಬೆಳಕಿನಲ್ಲಿ ಮತ್ತೇರಿಸುವ ಪಾನೀಯ... ಅದೆಷ್ಟೋ ಪತ್ರಕರ್ತರಿಗೆ ಇಷ್ಟೇ ಬದುಕು. ಒಂದೇ ಒಂದು ಕೆಲಸ ಹೆಚ್ಚಾದರೂ ಕಿರಿಕಿರಿ. ಇಷ್ಟೆಲ್ಲದರ ಮಧ್ಯೆ ಸಾಮಾಜಿಕ ಸಂಗತಿಗಳ ಬಗ್ಗೆ ಚಿಂತನೆ ಮಾಡಲು, ಚರ್ಚಿಸಲು ಪತ್ರಕರ್ತರಿಗೆ ಸಮಯ, ಸಂಯಮ ಇದೆ ಎನ್ನುವುದೇ ಅಚ್ಚರಿ.

ಮೇಲ್ನೋಟಕ್ಕೆ 'ಸಂವಹನ' ಎಂಬ ಸಂಘಟನೆ ಇದಕ್ಕೆ ಹೊರತಾದ್ದು ಎನಿಸುತ್ತಿದೆ. ಮೀಡಿಯಾದಲ್ಲಿ ತೊಡಗಿಸಿಕೊಂಡಿರುವ ಕೆಲ ಉತ್ಸಾಹಿ ಯುವಕರೇ ಸೇರಿಕೊಂಡು ಈ ಸಂಘಟನೆಗೆ ಚಾಲನೆ ನೀಡಿದ್ದಾರಂತೆ. ದಿನಕ್ಕೆ ಹತ್ತಾರು, ನೂರಾರು ಹೊಸ ಬ್ಲಾಗ್ ಗಳು ಕಣ್ತೆರೆಯುತ್ತವೆ. ಇಂತಹ ಬ್ಲಾಗ್ ಗಳ ಮಧ್ಯೆ ಸಂವಹನದ ಬ್ಲಾಗ್ ವಿಭಿನ್ನವಾಗಿ ಕಂಡುಬಂತು. ಸಮಾನತೆ, ಸಾಮಾಜಿಕ ನ್ಯಾಯ - ಎನ್ನುವ ಪದಗಳು ಆಧುನಿಕ ನಿಘಂಟುವಿನಿಂದ ಕಣ್ಮರೆಯಾಗುತ್ತಿರುವ ಈ ಹೊತ್ತಿನಲ್ಲಿ, ಇದೇ ಆಶಯಗಳನ್ನು ಹೊತ್ತುಕೊಂಡು ಹೊಸದೊಂದು ಸಂಘಟನೆ ಹುಟ್ಟಿಕೊಂಡಿದೆ ಎಂದು ಬ್ಲಾಗರ್ಸ್ ಹೇಳಿಕೊಳ್ಳುತ್ತಿದ್ದಾರೆ.

ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಲೇಖನಗಳು ಬ್ಲಾಗ್ ನಲ್ಲಿವೆ. ಸಂವಹನ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಕುರಿತಂತೆ ಏಪ್ರಿಲ್ 5ರಂದು ಒಂದು ವಿಚಾರಗೋಷ್ಠಿ ಹಮ್ಮಿಕೊಂಡಿದೆ. ಹಿರಿಯ ಲೇಖಕ ಯು.ಆರ್ ಅನಂತಮೂರ್ತಿ ಮತ್ತಿತರರು ಭಾಗವಹಿಸುತ್ತಿದ್ದಾರೆ. ಪತ್ರಕರ್ತರು ಇಂತಹ ಪ್ರಯತ್ನಕ್ಕೆ ಕೈ ಹಾಕಿರುವುದು ವಿಶೇಷ. ಆದರೆ, ಎಷ್ಟು ದಿನಗಳವರೆಗೆ ಇವರ ಉತ್ಸಾಹ, ಉಮ್ಮೇದಿ ಹಾಗೇ ಉಳಿದಿರುತ್ತೋ ನೋಡೋಣ.




Tuesday, March 24, 2009

ಬಸವಣ್ಣ ಯಡಿಯೂರಪ್ಪನ ಖಾಸಗಿ ಸ್ವತ್ತು!

ಸುಖಾ ಸುಮ್ಮನೆ ಕೇಳಿದ್ದನ್ನು, ನೋಡಿದ್ದನ್ನು ಎಲ್ಲವನ್ನೂ ಹಾಗೇ ಬರೆದು ಬಿಡಬೇಕು ಎಂಬ ಉಮ್ಮೇದಿ ಅನೇಕ ಪತ್ರಕರ್ತರದು. ಬರೆಯುವ ಮುನ್ನ, ಮೆದುಳಿಗೆ ಒಂದಿಷ್ಟು ಕೆಲಸ ಕೊಟ್ಟರೆ, ಬರೆಯುತ್ತಿರುವುದು ಸೂಕ್ತವೇ, ಅದಕ್ಕೊಂದು ಅರ್ಥವಿದೆಯೇ ಎನ್ನುವ ಪ್ರಶ್ನೆಗಳು ಏಳುತ್ತವೆ.
ಕೆಲ ದಿನಗಳ ಹಿಂದೆ ಬೆಳಗಾವಿಯಲ್ಲಿ ಸುರೇಶ್ ಅಂಗಡಿ ಭಗವಾಧ್ವಜ ಹಾರಿಸಬೇಕೆಂದು ಪಟ್ಟು ಹಿಡಿದರು. ರಾಜ್ಯಾದ್ಯಂತ ಪ್ರತಿಭಟನೆ ವ್ಯಕ್ತವಾಯಿತು. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮಾತನಾಡುತ್ತ "ಬಿಜೆಪಿಯವರು ಅಡ್ವಾನಿಯನ್ನು ಪ್ರಧಾನಿ ಮಾಡಲು ರಾಜ್ಯದ ಗಡಿಯನ್ನೂ ಮಾರಾಟ ಮಾಡಲು ಸಿದ್ಧರಿದ್ದಾರೆ" ಎಂದು ಟೀಕಿಸಿದರು.
ಈ ಮಾತಿನಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುವಂತಹ ಮಾತು ಏನಿತ್ತು, ಆ ದೇವರೇ ಬಲ್ಲ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕ್ರಿಯಿಸಿ, ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ ಎಂದರು. ಆದರೆ, ಮುಖ್ಯಮಂತ್ರಿ ಮಾತು ವರದಿ ಮಾಡಿದ ಪತ್ರಕರ್ತರು, ಆ ಹೇಳಿಕೆ ಅದ್ಹೇಗೆ ನೀತಿ ಸಂಹಿತೆ ಉಲ್ಲಂಘಿಸುತ್ತದೆ ಎನ್ನುವುದನ್ನು ಕೇಳುವ ಗೋಜಿಗೆ ಹೋಗಲಿಲ್ಲ.
ಇಂತಹದೇ ಇನ್ನೊಂದು ಘಟನೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ದಾವಣೆಗೆರೆ ಸಮಾವೇಶದಲ್ಲಿ, ಮಾತನಾಡುತ್ತ ಬಸವಣ್ಣನ ನಾಡಿನಲ್ಲಿ, ಜಾತಿಗಳ ಮಧ್ಯೆ, ಕೋಮುಗಳ ಮಧ್ಯೆ ದ್ವೇಷದ ಬೀಜ ಬಿತ್ತಿ ಸಾಮರಸ್ಯ ಕದಡುವ ಪ್ರಯತ್ನವನ್ನು ರಾಜ್ಯದ ಬಿಜೆಪಿ ಸರಕಾರ ಮಾಡುತ್ತಿದೆ ಎಂದು ದೂರಿದರು.
ಯಡಿಯೂರಪ್ಪನಿಗೆ ಸಹಿಸಲಾಗಲಿಲ್ಲ. ಬಸವಣ್ಣನ ಹೆಸರು ಬಳಸಿಕೊಂಡು ಸೋನಿಯಾ ಚುನಾವಣಾ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ದೂರಿದರು. ಇದಪ್ಪಾ ತಮಾಷೆ ಅಂದರೆ, ಬಸವಣ್ಣ ಯಡಿಯೂರಪ್ಪನ ಖಾಸಗಿ ಸ್ವತ್ತೆ? ಸೋನಿಯಾ ಬಸವಣ್ಣನ ಹೆಸರು ಉಲ್ಲೇಖಿಸಿದ್ದೇ ತಪ್ಪೆ?
ಭುಜಗಳಿಗೆ ರೆಕ್ಕೆ ಕಟ್ಟಿಕೊಂಡವರಂತೆ ರಾಜ್ಯದ ಉದ್ದಗಲಕ್ಕೂ ಅಲೆದಾಡಿ ಮುಖ್ಯಮಂತ್ರಿ ತಮ್ಮ ಬೌದ್ಧಿಕ ದಿವಾಳಿತಕ್ಕೆ ಹತ್ತಿರವಾಗುತ್ತಿದ್ದಾರೆ. ಈ ಮೇಲಿನ ಅರ್ಥವಿಲ್ಲದ ಹೇಳಿಕೆಗಳು, ಅವರ ಮಾನಸಿಕ ಸ್ಥಿತಿಯನ್ನು ಪುಷ್ಟೀಕರಿಸುತ್ತವೆ. ಆದರೆ ಪತ್ರಕರ್ತರಿಗೂ ಅದೇ ಚಾಳಿ ಅಂಟಿಕೊಂಡರೆ!!

Monday, March 23, 2009

Nehru's Turning In His Grave

'ನೆಹರು ಘೋರಿಯಲ್ಲಿ ಮಗ್ಗಲು ಬದಲಿಸಿದ್ದಾರೆ' - ನೆಹರು ಸಂಬಂಧಿ ನಯಾಂತರ ಸಹಗಲ್ ಔಟಲುಕ್ ವಾರಪತ್ರಿಕೆಗಾಗಿ ಬರೆದ ಲೇಖನವನ್ನು ನಮ್ಮ ಓದುಗರಿಗಾಗಿ ನೀಡುತ್ತಿದ್ದೇವೆ. ಸಹಗಲ್ ಗೆ ವರುಣ್ ಮಾತುಗಳಲ್ಲಿ ಅಚ್ಚರಿ ಕಾಣುತ್ತಿಲ್ಲ. ಕಾರಣ ಅವನು ರಾಹುಲ್, ಪ್ರಿಯಾಂಕರಂತೆ ಗಾಂಧಿ ಮನೆತನ ಸಂಪಕರ್ಕಕ್ಕೆ ಬರಲೇ ಇಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಅಮ್ಮನೊಂದಿಗೆ ಬೇರೆ ಹೋದ. ಗಾಂಧಿ ಮನೆತನದ ಮೌಲ್ಯಗಳು ಗೊತ್ತಾಗಲೇ ಇಲ್ಲ. ಹಾಗಾಗಿ ಅವನೊಬ್ಬ ಕೇವಲ ಬಿಜೆಪಿ ಕಾರ್ಯಕರ್ತ. ಅವರ ಪಕ್ಷಕ್ಕೆ ತಕ್ಕಂತೆ ಅವನು ಮಾತನಾಡಿದ್ದೇನೆ ಎನ್ನುತ್ತಾರೆ ಸಹಗಲ್.

Why harp on Varun's lineage when he has abandoned its ideals?
Nayantara Sahgal
There's only one word for the speech that Varun Gandhi gave in Pilibhit last fortnight—disgraceful. It's horrifying that anybody could speak like that, doubly so when it happens to come from someone who is even remotely connected with the Nehru-Gandhi family. I say "remotely connected" with deliberation, because, while Varun is no doubt a fourth-generation descendant of the family, let us not forget that both he and his mother, Maneka, made an open break with the family.

Varun may have only been a toddler when Maneka severed her ties with the family, but he struck out just as irrevocably when he joined the BJP some five years ago. His break with the family and its ideals was just as decisive as his mother's. He owes his allegiance to the Bharatiya Janata Party (BJP) now, and his connection to the Nehru-Gandhi family is now completely irrelevant.Which is why I am a little surprised at the way the media has been reporting Varun's speech, constantly referring in the same breath to his Nehru connection.

The point is that Varun Gandhi is a member of the BJP. What else do you expect any member of the BJP to say? After all, the BJP is the party that has divided the country on the basis of religion. It's also the party that destroyed the Babri Masjid, the party whose role model is Narendra Modi, on the strength of a massacre in Gujarat. Varun now belongs in the camp that is taking India back to the Middle Ages.India has a long and ancient history that has demonstrated that Hinduism has an awe-inspiring resilience, which has enabled it to survive through the ages.

It does not need all these self-appointed guardians, like the BJP, the Shiv Sena—or any other kind of sena—to safeguard Hinduism. Parties like these are a danger to India. Not just Nehru, even Feroze Gandhi, Varun's grandfather, must be turning in his grave at some of the things he is saying.The difference between Varun and his cousins, Rahul and Priyanka, is that while they were nurtured on the family's secular ideals, he was simply not there. He may have kept up with his cousins and his aunt, Sonia, but having not been brought up within the family, he lost out on his family inheritance, both the ideology and the training.

I had my differences with Indira Gandhi, of course. But we were on the same side on many things, especially secularism. Whatever differences I had with her were because I was speaking and writing in defence of Nehru and what he stood for, and I felt the path she took was going ultimately towards the Emergency—which she herself recognised as a mistake. We were never in divergence on ideology, but on the fact that I felt she was departing from Nehru's own ideals.The Congress, whatever its sins, is dedicated to secularism and the unity of India. These religion-based parties aren't.

Priyanka and Rahul grew up with these ideals. Varun did not. So what if he bears the family name? Many people bear that name: it's neither here nor there. And if the BJP picked him because of his name, that's the BJP's problem, not the family's. I haven't seen Varun since he was a child. But to hear what he is saying now makes me very angry. Even if I were to meet him now, there is nothing I could say to him. He and I don't speak the same language.

There are two languages being spoken in India today: one is Hindutva, and this is finding its own defendants, like Varun and so many others. It's a language that should be severely condemned and punished so that it doesn't damage India any further. From what I have read in the papers, his inflammatory remarks have already led to small riots in Maharashtra. The Ayodhya issue is being raked up and some CDs called 'Ayodhya Chalo' are being circulated. The other language is secularism and peace and equal respect for all religions.That is the language I speak, and that is the language of the Congress. It would be interesting to know why Varun Gandhi has turned his back so squarely against everything his name stands for.
(Nayantara Sahgal is Jawaharlal Nehru's niece.) as told to Sheela Reddy. ಚಿತ್ರ, ಲೇಖನ - ಔಟಲುಕ್.

Thursday, March 19, 2009

ಕ್ಷಮಿಸಬೇಕಂತೆ!!!!

ಪ್ರಜಾವಾಣಿ: ಅಪರಾಧ ವರದಿ ಪುಟ 4; 'ಕ್ಷಮೆ' ಮುಖಪುಟಕ್ಕೆ!!!
ಪಾರ್ಲಿಮೆಂಟ್ ಮೇಲೆ ಭಗವಾಧ್ವಜ ಹಾರಿಸಲು ಹೊರಟವರು ಈಗ ಕ್ಷಮೆಯ ಮಾತನಾಡುತ್ತಿದ್ದಾರೆ. ಭಗವಾಧ್ವಜವನ್ನು ಹಿಂದೂ ರಾಷ್ಟ್ರ ಸಂಕೇತ ಎಂದು ಭಾವಿಸಿ ಹಾಗೆ ಹೇಳಿಕೆ ಕೊಟ್ಟಿದ್ದೆವು. ನಾಡಿನ ಹಿರಿಯರು, ಅದರಲ್ಲೂ ಮುಖ್ಯವಾಗಿ ಚಿದಾನಂದ ಮೂರ್ತಿಯಂತಹವರು ಬೇಸರ ವ್ಯಕ್ತಪಡಿಸಿದ್ದರಿಂದ ಕ್ಷಮೆ ಕೇಳಿದರಂತೆ.

ಈ 'ಕ್ಷಮೆ' ನಾಟಕದಿಂದ ಅವರಿಗೇನೂ ಲಾಭವಿಲ್ಲ. ಪಕ್ಷದ ಇತರರ ಒತ್ತಡಕ್ಕೆ ಮಣಿದು ಕ್ಷಮೆಯ ಮಾತನಾಡಿದ್ದಾರೆ. ಅವರು ಆಳದಲ್ಲಿ ಈ ಹೊತ್ತಿಗೂ ಅವರ ಹೇಳಿಕೆಗೆ ಬದ್ಧರು. ಮೇಲಾಗಿ ಪತ್ರಕರ್ತರ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸದೆ, ಜಾರಿಕೊಂಡ ಕಾರಣ ಇದು ಕೇವಲ 'ನಾಟಕ' ಎಂಬ ಸಂದೇಶವನ್ನು ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಆ ಮೂಲಕ ಮರಾಠಿ ಭಾಷಿಕರಿಗೆ ರವಾನಿಸಿದ್ದಾರೆ.

ನಾಡಿನ ಮುಖ್ಯಮಂತ್ರಿ ಮೊದಲು ಬೆಳಗಾವಿ ಘಟನೆ ಬಗ್ಗೆ ತನಗೆ ಮಾಹಿತಿಯೇ ಇಲ್ಲ. ಮಾಹಿತಿ ತರಿಸಿಕೊಂಡು ಪ್ರತಿಕ್ರಿಯಿಸುತ್ತೇನೆ ಎಂದರು. ನಂತರ ಪಕ್ಷದ ಅಧ್ಯಕ್ಷರು ಉತ್ತರಿಸುತ್ತಾರೆ ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸಿದರು. ಕನ್ನಡ ಪರ ಸಂಘಟನೆಗಳು ಸುರೇಶ್ ಅಂಗಡಿಗೆ ಟಿಕೆಟ್ ಕೊಡಬೇಡಿ ಎಂದಾಗ, 'ಅದು ನಮ್ಮ ಪಕ್ಷದ ವಿಚಾರ. ಅದನ್ನು ಕೇಳೋಕೆ ಅವರ್ಯಾರು?' ಎಂದು ಪ್ರಶ್ನೆ ಹಾಕಿದರು.

"ಆಯ್ತು ಸ್ವಾಮಿ. ಆತ ನಿಮ್ಮ ಪಕ್ಷದ ನಾಯಕ. ನೀವು ಟಿಕೆಟ್ ಕೊಟ್ಟಿದೀರಿ. ನೀವೇ ಓಟು ಹಾಕಿ ಗೆಲ್ಲಿಸಿ. ಈ ನಾಡಿನ ಜನತೆಯನ್ನು ಓಟಿಗಾಗಿ ಅಂಗಲಾಚಬೇಡಿ'' ಎನ್ನಬೇಕಾಗುತ್ತದೆ. ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬೆಲೆ ಇಲ್ಲದ ಮುಖ್ಯಮಂತ್ರಿ ಮಾತ್ರ ಹೀಗೆ ಮಾತನಾಡಬಲ್ಲ. ಕನ್ನಡ ಪರ ಸಂಘಟನೆಗಳು ಸುರೇಶ್ ಅಂಗಡಿಯನ್ನು ಅಭ್ಯರ್ಥಿ ಕಣದಿಂದ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿವೆ. ಇಲ್ಲವಾದಲ್ಲಿ ನಾಡಿನ ಎಲ್ಲೆಡೆ ಬಿಜೆಪಿ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕೆಗಳು:

ಈ ಸಂದರ್ಭದಲ್ಲಿ ಪತ್ರಿಕೆಗಳು ವಹಿಸಿದ ಪಾತ್ರವನ್ನು ನೆನಸಿಕೊಳ್ಳಲೇಬೇಕು. ಅಂಗಡಿ ಕ್ಷಮೆ (ನಾಟಕವಾದರೂ) ಕೇಳುವಂತೆ ಮಾಡುವಲ್ಲಿ ಕನ್ನಡ ಪ್ರಭ, ವಿಜಯ ಕರ್ನಾಟಕ, ಉದಯವಾಣಿ ಉತ್ತಮ ಪಾತ್ರ ನಿರ್ವಹಿಸಿದವು. ಸತತ ನಾಲ್ಕುದಿನಗಳ ಕಾಲ ಕನ್ನಡ ಪ್ರಭ, ಸುರೇಶ್ ಅಂಗಡಿ ಹಾಗೂ ಬಿಜೆಪಿ ನಾಯಕರಿಗೆ ಬಿಸಿ ಮುಟ್ಟಿಸಿತು.

ಆದರೆ ವಿಚಿತ್ರ ನೋಡಿ, ಭಗವಾಧ್ವಜ ಹಾರಿಸಬೇಕು ಎಂದು ಹೇಳಿಕೆ ನೀಡಿ ಅಪರಾಧ ಎಸಗಿದ್ದನ್ನು ನಾಲ್ಕನೇ ಪುಟದಲ್ಲಿ ಯಾವುದೋ ಸಾಮಾನ್ಯ ಘಟನೆ ಎಂಬಂತೆ ನಿರ್ಲಕ್ಷಿಸಿದ್ದ ಪ್ರಜಾವಾಣಿ, ಆತ ಕ್ಷಮೆ ಕೇಳಿದ್ದನ್ನು ಮಾತ್ರ ಮುಖಪುಟದಲ್ಲಿ ಪ್ರಕಟಿಸಿದೆ! ಇದೂ ಪತ್ರಿಕೋದ್ಯಮ!?

Sunday, March 15, 2009

ಆಯಾಮ ನಾಲ್ಕು, ಪ್ರಶ್ನೆ ಎರಡು

ಪ್ರಜಾವಾಣಿ ಪದ್ಮರಾಜ ದಂಡಾವತಿ ಅಂಕಣ ಆರಂಭಿಸಿದ್ದಾರೆ. ಕಳೆದ ನಾಲ್ಕುವಾರಗಳಿಂದ 'ನಾಲ್ಕನೇ ಆಯಾಮ' ಪ್ರಕಟವಾಗುತ್ತಿದೆ. ಮೊದಲ ಅಂಕಣದಲ್ಲಿ ಯಡಿಯೂರಪ್ಪನ ಆಡಳಿತ ವೈಖರಿಯನ್ನು ಝಾಡಿಸಿದ್ದರು. ಎರಡನೆ ವಾರ 'ಇದು ಚುನಾವಣಾ ಸಮಯ' ಎನ್ನುವ ಧಾಟಿಯಲ್ಲಿ ಒಂದು ಬರಹವಿತ್ತು. ಕಳೆದ ವಾರ ಮಾಧ್ಯಮಗಳನ್ನು ಹಿಗ್ಗಾ ಮುಗ್ಗಾ ಟೀಕಿಸಿದರು. ಮಾಧ್ಯಮಗಳಿಗೆ ಒಂಬುಡ್ಸಮ್ಯಾನ್ ಇದ್ದರೆ ತಪ್ಪೇನು ಎಂದು ವಾದಿಸಿ, ಗೃಹ ಮಂತ್ರಿ ಆಚಾರ್ಯರ ದನಿಗೆ ತಮ್ಮ ದನಿ ಸೇರಿಸಿದ್ದರು.
ಈ ಬಾರಿ ಅವರು ಆಯ್ಕೆ ಮಾಡಿಕೊಂಡಿರುವ ವಿಚಾರ ಕಾಂಗ್ರೆಸ್. ವಯಸ್ಸು, ಒಗ್ಗಟ್ಟು ಹಾಗೂ ಹಣದ ವಿಚಾರಗಳಲ್ಲಿ ಕಾಂಗ್ರೆಸ್ ಇತರ ಪಕ್ಷಗಳಿಗಿಂತ ತೀರಾ ಹಿಂದುಳಿದಿದೆ ಎಂಬುದು ಅವರ ಒಟ್ಟಾರೆ ಅಭಿಪ್ರಾಯ. ಈ ಬರಹ ಓದಿದ ನಂತರ ಎದ್ದು ನಿಂತ ಎರಡು ಪ್ರಶ್ನೆಗಳನ್ನಷ್ಟೆ ಇಲ್ಲಿ ಪಟ್ಟಿ ಮಾಡುತ್ತಿದ್ದೇವೆ.

1. ದಂಡಾವತಿಯವರ ಪ್ರಕಾರ 'ಬಿಜೆಪಿಯಲ್ಲಿ ಯಡಿಯೂರಪ್ಪ ಅವರೊಬ್ಬರೇ 60 ದಾಟಿದವರು. ಉಳಿದವರೆಲ್ಲ ಕಾಂಗ್ರೆಸ್ ನ ಘಟಾನುಘಟಿ ನಾಯಕರ ಹಾಗೆ ವಯಸ್ಸಾದವರಲ್ಲ'. ಈ ಮಾತು ಒಪ್ಪತಕ್ಕದ್ದೇ? ಯಡಿಯೂರಪ್ಪನ ಪಕ್ಷದಲ್ಲಿರುವ ರಾಮಚಂದ್ರಗೌಡ (71), ಡಾ.ವಿ.ಎಸ್ ಆಚಾರ್ಯ (69), ಡಿ.ಎಚ್ ಶಂಕರಮೂರ್ತಿ (69), ಸಿ.ಎಂ ಉದಾಸಿ (70+) - ಇವರೆಲ್ಲರೂ ಇನ್ನೂ ಹದಿಹರೆಯದವರೆ? ಚುನಾವಣೆಗೆ ಸ್ಪರ್ಧಿಸುತ್ತಿರುವ ರೇವುನಾಯಕ ಬೆಳಮಗಿ, ಬೀದರ್ ನ ಗುರುಪಾದಪ್ಪ ನಾಗಮಾರಪಲ್ಲಿ ಇನ್ನೂ ಗೋಲಿ ಆಡುವ ಮಕ್ಕಳೆ? ಹೋಗಲಿ, ಬಿಜೆಪಿ ತನ್ನ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಿರುವ ಎಲ್ ಕೆ ಅಡ್ವಾನಿ (82) ಗೇನು ಕಡಿಮೆ ವಯಸ್ಸೆ?

2. ಕಾಂಗ್ರೆಸ್ ನಲ್ಲಿ ಒಗ್ಗಟ್ಟಿಲ್ಲ ಎಂಬುದು ಸತ್ಯ. ಖರ್ಗೆ ಕಂಡರೆ ಸಿದ್ದರಾಮಯ್ಯನಿಗೆ ಆಗುವುದಿಲ್ಲ. ಷರೀಫ್ ರನ್ನು ಕಂಡರೆ ಇಬ್ರಾಹಿಂಗೆ ಆಗುವುದಿಲ್ಲ. ಆದರೆ ಕಾಂಗ್ರೆಸ್, ಒಗ್ಗಟ್ಟಿನ ವಿಚಾರದಲ್ಲೂ ಇತರೆ ಪಕ್ಷಗಳಿಗೆ ಸಾಟಿಯಲ್ಲ ಎನ್ನುವಾಗಲಾದರೂ, ಅಂಕಣಕಾರರಿಗೆ ಮೊನ್ನೆ ಮೊನ್ನೆ ನಡೆದ ಬಿಜೆಪಿ ಬೀದಿ ಜಗಳ ನೆನಪಿಗೆ ಬರಲಿಲ್ಲವೆ?
ಪಕ್ಷದ ಅಧ್ಯಕ್ಷರನ್ನು ಹಾಗೂ ಮುಖ್ಯಮಂತ್ರಿಯನ್ನು ಮೂರು ಮಂದಿ ಹಾಲಿ ಸಂಸದರೇ (ಯತ್ನಾಳ್, ಮಲ್ಲಿಕಾರ್ಜುನಯ್ಯ, ಕೆ.ಬಿ ಶಾಣಪ್ಪ) ಸರ್ವಾಧಿಕಾರಿಗಳು ಎಂದು ದೂರಿ, 'ಬಿಜೆಪಿ ಉಳಿಸಿ' ಆಂದೋಲನದ ಮಾತುಗಳನ್ನಾಡಿದ್ದು ತೀರಾ ಕಡೆಗಣಿಸಬೇಕಾದ ಸಂಗತಿಯೆ? ಅನಂತಕುಮಾರ್ ಕೂಡಾ ಬಹಿರಂಗವಾಗಿ ಸದಾನಂದಗೌಡರನ್ನು ಟೀಕಿಸಿದ್ದು ಸುಳ್ಳೆ?
---
ಅಂಕಣ ಬರಹ ಒಂದು ಕಲೆ. ಬರಹವನ್ನು ಓದಿ ಮುಗಿಯುವ ಹೊತ್ತಿಗೆ ಓದುಗನಲ್ಲಿ ಒಂದು ಅಭಿಪ್ರಾಯ ಮೊಳಕೆ ಹೊಡೆಯಬೇಕು. ಅದು ಸಾಧ್ಯವಾಗುವುದು ಬರಹಗಾರ ತನ್ನ ನಿಲುವನ್ನು ಸೂಕ್ತ ಆಧಾರಗಳಿಂದ ಬೆಂಬಲಿಸಿದಾಗ ಮಾತ್ರ. ಅದು ಸಾಧ್ಯವಾಗದಿದ್ದಾಗ ಇಂತಹ ಪ್ರಶ್ನೆಗಳು ಏಳುತ್ತವೆ. ಅಂದಹಾಗೆ ಒಂದು ಅಭಿಪ್ರಾಯವನ್ನು ಮಂಡಿಸುವುದೇ ಅಂಕಣಕಾರನ ಏಕಮೇವ ಉದ್ದೇಶವೂ ಆಗಬೇಕಿಲ್ಲ. ಒಂದು ಘಟನೆ, ಬೆಳವಣಿಗೆಯನ್ನು ನಾನಾ ಕೋನಗಳಿಂದ ನೋಡುವುದು, ಆ ಮೂಲಕ ಹೊಸ ಹೊಳಹುಗಳನ್ನು ಓದುಗನಿಗೆ ತಲುಪಿಸಿದರೆ ಅಂಕಣ ಯಶಸ್ವಿಯಾಗುತ್ತದೆ ಅಲ್ಲವೆ?

Saturday, March 14, 2009

ಉತ್ತರ ಕುಮಾರನ ಪೌರುಷ...

ಬೆಂಗಳೂರಿನ ಪ್ರತಿಷ್ಠಿತ ಡೆಕ್ಕನ್ ಇಂಟರ್ ನ್ಯಾಷನಲ್ ಇತ್ತೀಚೆಗೆ ಶುಲ್ಕ ಹೆಚ್ಚಿಸಿದ್ದನ್ನು ವಿರೋಧಿಸಿ
ಪೋಷಕರು ಕೆಲದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಶನಿವಾರ ಪೋಷಕರು ಹೀಗೊಂದು ಘೋಷಣೆ ಹಿಡಿದು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಅಂದಹಾಗೆ ಆ ಶಾಲೆಯ ಮುಖ್ಯಸ್ಥರು, ಒಂದು ಪತ್ರಿಕೆಯ ಮಾಲೀಕರೂ ಹೌದು.
(ಫೋಟೋ ಕೃಪೆ: ಟೈಮ್ಸ್ ಆಫ್ ಇಂಡಿಯಾ)

Friday, March 13, 2009

ಸುದೀರ್ಘ ಬಿಡುವಿನ ನಂತರ...

ಕೆಲದಿನಗಳ ಮಟ್ಟಿಗೆ ನಾವು ಸುಮ್ಮನಿದ್ದೆವು. ಸುಖಾ ಸುಮ್ಮನೆ ಹೀಗೆ... ಏನನ್ನೂ ಬರೆಯದೆ. ಕೆಲವರು ಯಾಕ್ರಿ ಸುಮ್ಮನಾದ್ರಿ ಎಂದರು ವಿಚಾರಿಸಿಕೊಂಡರೆ, ಮತ್ತೆ ಕೆಲವರು 'ನಿಮ್ಮ ವಿರುದ್ಧ ಪೊಲೀಸ್ ಕೇಸು ದಾಖಲಾಗಿರೋ ಕಾರಣ ಸುಮ್ನಾದ್ರ?' ಎಂದು ಕೆಲವರು ತಲೆಗೆ ಹುಳು ಬಿಟ್ಟರು. ಇರಲಿ ಬಿಡಿ.
ಈ ಮಧ್ಯೆ ಒಂದಿಷ್ಟು ಉತ್ತಮ ಬೆಳವಣಿಗೆಗಳು ನಡೆದಿವೆ. ಪತ್ರಕರ್ತರಾದ ಜಿ.ಎನ್ ಮೋಹನ್ ಹಾಗೂ ರವಿ ಹೆಗಡೆ ಪ್ರಯತ್ನಗಳ ಪರಿಣಾಮ ಕನ್ನಡ ಪತ್ರಕರ್ತರ ವೆಬ್ ತಾಣವೊಂದು ಕ್ರಿಯಾಶೀಲವಾಗಿ ರೂಪುಗೊಂಡಿದೆ. ಪತ್ರಿಕೋದ್ಯಮದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಪ್ರಯೋಗಗಳು ಹಾಗೂ ಬದಲಾವಣೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಇಂತಹದೊಂದು ಪ್ರಯತ್ನ ಸ್ವಾಗತಾರ್ಹ. ಮುಂದಿನ ದಿನಗಳಲ್ಲಿಯೂ ಉತ್ತಮ ಚರ್ಚೆಗಳಿಗೆ ಈ ತಾಣ ವೇದಿಕೆಯಾಗಲಿ ಎಂದು ಸುದ್ದಿಮಾತು ಹಾರೈಸುತ್ತದೆ.
ಇದು ಚುನಾವಣಾ ಸಮಯ. Of course ಕಳೆದ ಒಂದು ವರ್ಷದಿಂದಲೂ ಚುನಾವಣಾ ಸಮಯ ಜಾರಿಯಲ್ಲಿದೆ. ಮೊದಲು ವಿಧಾನಸಭಾ ಚುನಾವಣೆ. ಅದರ ಬಿಸಿ ತಣ್ಣಾಗಾಗುವುದರಲ್ಲಿಯೇ ಆಪರೇಷನ್ ಕಮಲ. ಉಪಚುನಾವಣೆ. ಅದು ಮುಗೀತಲ್ಲ...ಉಸ್ಸಪ್ಪಾ.. ಎನ್ನುತ್ತಿರುವಾಗಲೇ ಲೋಕಸಭಾ ಚುನಾವಣೆ ಎದುರಿಗಿದೆ. ಉರಿ ಬಿಸಿಲಲ್ಲಿ, ಪದ್ಮನಾಭ ನಗರ, ರೇಸ್ ಕೋರ್ಸ್ ರಸ್ತೆ, ಕ್ವೀನ್ಸ್ ರಸ್ತೆ ಎಂದೆಲ್ಲಾ ಪತ್ರಕರ್ತರು ತಿರುಗಾಡಬೇಕು. ಮುಂದಿನ ಎರಡು ತಿಂಗಳು ಭಾರತ ಮಹತ್ತರ ರಾಜಕೀಯ ಚಟುವಟಿಕೆಗಳಿಗೆ ತನ್ನನ್ನು ತೆರೆದುಕೊಳ್ಳಲಿದೆ. ಅವುಗಳಿಗೆ ಸಾಕ್ಷಿಯಾಗಬೇಕಾದ ಜವಾಬ್ದಾರಿ ಪತ್ರಕರ್ತರದು.
ಎಲ್ಲರಿಗೂ ಒಳಿತಾಗಲಿ.

Thursday, February 26, 2009

ಬಳ್ಳಾರಿ ರೆಡ್ಡಿಗಳೂ, ವಿಮಾನ ನಿಲ್ದಾಣವೂ...

ಬಳ್ಳಾರಿ ಸಿರಿವಾರದ ಬಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸುವುದು ಸಚಿವ ಜನಾರ್ಧನ ರೆಡ್ಡಿಗೆ ಪ್ರತಿಷ್ಠೆಯ ವಿಷಯ ಯಾಕಾಗಿದೆ? ಒಂದು ಸಾವಿರ ಎಕರೆ ನೀರಾವರಿ ಕೃಷಿಭೂಮಿಯನ್ನು ಕಬಳಿಸಿ, ಈ ವಿಮಾನ ನಿಲ್ದಾಣ ನಿರ್ಮಿಸುವ ಅಗತ್ಯ ಏನಿದೆ?

ಪರಿಶೀಲನೆ ನಡೆಸುತ್ತಾ ಹೋದರೆ ಕರ್ನಾಟಕ ರಾಜ್ಯಕ್ಕಿಂತಲೂ ಆಂಧ್ರ ಪ್ರದೇಶಕ್ಕೆ ಈ ವಿಮಾನ ನಿಲ್ದಾಣದಿಂದ ಹೆಚ್ಚು ಲಾಭವಿದೆ ಎಂಬ ಅಂಶ ಬೆಳಕಿಗೆ ಬರುತ್ತದೆ. ಬಳ್ಳಾರಿ ಗಡಿಗೆ ಹೊಂದಿಕೊಂಡಿರುವ ಆಂಧ್ರ ಪ್ರದೇಶದಲ್ಲಿ ಬ್ರಹ್ಮಣಿ ಸ್ಟೀಲ್ ಉದ್ಯಮ ಸ್ಥಾಪಿಸಲು ಜನಾರ್ಧನ ರೆಡ್ಡಿ ಈಗಾಗಲೇ ನಿರ್ಧರಿಸಿದ್ದಾರೆ. ಕೋಟ್ಯಾಂತರ ರೂ. ಬಂಡವಾಳದ ಈ ಸ್ಟೀಲ್ ಉದ್ಯಮಕ್ಕೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಅವರ ಪುತ್ರನೂ ಪಾಲುದಾರನೆಂಬ ವರ್ತಮಾನಗಳಿವೆ. ಈ ಉದ್ಯಮಕ್ಕೆ ಅನುಕೂಲವಾಗಲೆಂದು ಸಮೀಪದಲ್ಲಿರುವ ಸಿರಿವಾರದ ಬಳಿ ವಿಮಾನ ನಿಲ್ದಾಣ ಸ್ಥಾಪಿಸಲಾಗುತ್ತಿದೆ ಎಂಬ ಆರೋಪಗಳು ನಿಜ ಎನ್ನುವಂತೆ ರೈತರ ಹೋರಾಟವನ್ನು ವಿರೋಧಿಗಳ ಕುತಂತ್ರ ಎಂದು ಜನಾರ್ಧನ ರೆಡ್ಡಿ ಪರಿವಾರ ಬಣ್ಣಿಸುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಸಹ ಅದೇ ಜಾಗದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವುದು ಶತಸಿದ್ಧ ಎಂದೇ ಹೇಳುತ್ತಿದ್ದಾರೆ.

ತುಂಗಾಭದ್ರಾ ನದಿಯಿಂದ ನೀರು ಪಡೆದು ಕೃಷಿ ಮಾಡುತ್ತಿರುವ ರೈತರು ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡರೆ ಹೆಚ್ಚುವರಿಯಾಗಿ ಉಳಿಯುವ ನೀರನ್ನು ಸಹ ಈ ಉದ್ಯಮಕ್ಕೆ ಬಳಸಿಕೊಳ್ಳಬಹುದು ಎಂಬ ಲೆಕ್ಕಾಚಾರವೂ ಇದೆ. ಎಲ್ಲಾ ಉದ್ಯಮಗಳೂ ಈಗಾಗಲೇ ತುಂಗಾಭದ್ರಾ ಜಲಾಶಯದ ನೀರನ್ನೇ ನೆಚ್ಚಿಕೊಂಡಿವೆ. ಇದಕ್ಕೆ ಜನಾರ್ಧನ ರೆಡ್ಡಿ ಅವರ ಉದ್ಯಮವೂ ಹೊರತಲ್ಲ. ಬಳ್ಳಾರಿಯಲ್ಲಿ ಈಗಾಗಲೇ ಒಂದು ವಿಮಾನ ನಿಲ್ದಾಣವಿದೆ. ತೋರಣಗಲ್ಲಿನಲ್ಲಿ ಜಿಂದಾಲ್ ಕಂಪನಿಯದೆ ಆದ ಖಾಸಗಿ ವಿಮಾನ ನಿಲ್ದಾಣವಿದೆ.

ಈ ಹಿಂದೆ ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಹಂಪಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಾಗೂ ಜಿಂದಾಲ್, ಕಿರ್ಲೋಸ್ಕರ್, ಕಲ್ಯಾಣಿ ಬೃಹತ್ ಉಕ್ಕು ಉದ್ಯಮಗಳ ಸ್ಥಾಪನೆಯ ಹಿನ್ನೆಲೆಯಲ್ಲಿ ಸರ್ವೇಕಾರ್ಯ ನಡೆದು ಬಳ್ಳಾರಿ-ಹೊಸಪೇಟೆ ನಡುವೆ ಬರುವ ಪಾಪಿನಾಯಕನಹಳ್ಳಿ ಬಳಿ ಈ ವಿಮಾನ ನಿಲ್ದಾಣ ಸೂಕ್ತ ಪ್ರದೇಶವೆಂದು ಗುರುತಿಸಲಾಗಿತ್ತು.

ಆದರೆ ಇದನ್ನೆಲ್ಲಾ ಬದಿಗಿರಿಸಿ, ಆಂಧ್ರಪ್ರದೇಶಕ್ಕೆ ಅನುಕೂಲವಾಗಲೆಂದು ಕನ್ನಡ ನೆಲದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸುತ್ತಿರುವ ಮುಖ್ಯಮಂತ್ರಿ, ಸಚಿವರ ವರ್ತನೆಯ ಬಗ್ಗೆ ನಮ್ಮ ಕನ್ನಡ ಸಂಘ, ಸಂಸ್ಥೆಗಳು ಯಾಕೋ ಏನೋ ಧ್ವನಿ ಎತ್ತುತ್ತಿಲ್ಲ. ಕನ್ನಡ ನೆಲ, ಜಲ ಈಗ ಯಾರ ಬಾಯಿಗೆ ಎನ್ನುವ ಪ್ರಶ್ನೆಯನ್ನು ಮಾಧ್ಯಮಗಳು ಕೇಳದಂತೆ ಅವರ ಬಾಯಿಗೆ ಲ್ಯಾಪ್‌ಟಾಪ್ ತುರುಕಲಾಗಿದೆ. ಕನ್ನಡ ಸಂಘಸಂಸ್ಥೆಗಳಾದರೂ ಬಾಯಿಬಿಡಬೇಕಲ್ಲವೆ?

Sunday, February 22, 2009

ಹಾಸ್ಯದ ಹೆಸರಲ್ಲಿ ಅಸಹ್ಯ!

ಈಗ್ಗೆ ಕೆಲವು ದಿನಗಳ ಹಿಂದಿನ ಮಾತು. ತಮ್ಮ ಗೆರೆಗಳ ಮೋಡಿಯಿಂದ ಖ್ಯಾತಿ ಗಳಿಸಿರುವ ಪ್ರಕಾಶ್ ಶೆಟ್ಟಿ ಮಾಸ ಪತ್ರಿಕೆಯೊಂದನ್ನು ಹೊರತಂದರು. ಹೆಸರು ವಾರೆಕೋರೆ. ಕಾರ್ಟೂನ್, ನಗೆ ಬರಹಗಳಿಗೆ ಸೀಮಿತವಾಗಿರುವ ಮಾಸಿಕ. ಬಿಡುಗಡೆ ಕಾರ್ಯಕ್ರಮ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮ ವಿಭಿನ್ನವಾಗಿರಬೇಕು ಎಂಬ ಕಾರಣಕ್ಕೆ ದೇವೇಗೌಡರ ಮುಖ ಹೋಲುವ ಮುಖವಾಡವೊಂದನ್ನು ವ್ಯಕ್ತಿಯೊಬ್ಬರ ಮುಖಕ್ಕೆ ಹಾಕಿ, ಅವರಿಂದ ಪತ್ರಿಕೆಯನ್ನು ಬಿಡುಗಡೆ ಮಾಡಿಸಿದರು. ಕಾರ್ಯಕ್ರಮದ ಉದ್ದಕ್ಕೂ ಆ ಮುಖವಾಡದ ವ್ಯಕ್ತಿಯನ್ನು ನಿದ್ರೇಗೌಡ, ಮುದ್ದೇಗೌಡ ಎಂದೇ ಕಾರ್ಯಕ್ರಮ ಸಂಯೋಜಕರು ಸಂಬೋಧಿಸಿದರು.
ಮುಖವಾಡದ ವ್ಯಕ್ತಿ ಸಭೆಯಲ್ಲಿ ಪದೇ ಪದೇ ನಿದ್ರೆಗೆ ಜಾರುತ್ತಿದ್ದರು. ಅವರನ್ನು ಎಚ್ಚರಗೊಳಿಸುವುದೇ ಬಹುದೊಡ್ಡ ಕೆಲಸವೆಂಬಂತೆ ಸಂಯೋಜಕರು ನಟಿಸಿದರು. ಆ ವ್ಯಕ್ತಿ ಪತ್ರಿಕೆಯನ್ನು ಬಿಡುಗಡೆ ಮಾಡಿದ ಮರುಕ್ಷಣವೇ ನಿದ್ರೆಗೆ ಜಾರಿದರು.
ಇಂತಹದೊಂದು ಪ್ರಯತ್ನ ಮೇಲ್ನೋಟಕ್ಕೆ ವಿಭಿನ್ನ, ಕ್ರಿಯೇಟೀವ್ ಎನ್ನಿಸಿಬಿಡಬಹುದು. ಆದರೆ ಇದು ನಿಜವಾಗಿಯುಊ ಸೃಜನಶೀಲವಾಗಿತ್ತೇ ಎಂಬುದು ಪ್ರಶ್ನೆ.
ದೇವೇಗೌಡರು ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಆದಾಗಿನಿಂದ ಅವರನ್ನು ನಿದ್ರೆಗೆ ಹಾಗೂ ಮುದ್ದೆಗೆ ಸಮೀಕರಿಸಿ ನೋಡುವ ಚಾಳಿ ಮಾಧ್ಯಮಗಳಿಗೆ ಅಂಟಿಕೊಂಡಿದೆ. ವಿಧಾನಸಭೆ, ಲೋಕಸಭೆ ಹಾಗೂ ಬಹಿರಂಗ ಸಭೆಗಳಲ್ಲಿ ದೇವೇಗೌಡರು ನಿದ್ರೆ ಮಾಡುತ್ತಾರೆ ಎಂಬರ್ಥದ ನೂರಾರು ಚಿತ್ರಗಳು, ವರದಿಗಳು, ಕಾರ್ಟೂನ್ ಗಳು ಮಾಧ್ಯಮದಲ್ಲಿ ಬಂದಿವೆ. ಪ್ರಕಾಶ್ ಶೆಟ್ಟಿಯೂ ಇದಕ್ಕೆ ಹೊರತಲ್ಲ. ತಮ್ಮ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾಡಿದ್ದು ಅದನ್ನೇ.
ಒಂದು ಕ್ಷಣ ಹೀಗೂ ಯೋಚನೆ ಮಾಡಿ ನೋಡಿ.
ದೇವೇಗೌಡರಿಗೆ ಈಗ 75 ದಾಟಿದೆ. 1960 ರ ದಶಕದಿಂದ ರಾಜಕಾರಣದಲ್ಲಿದ್ದಾರೆ. ಅನೇಕ ಬಾರಿ ಚುನಾವಣೆ ಗೆದ್ದಿದ್ದಾರೆ, ಹಾಗೆ ಸೋತಿದ್ದಾರೆ ಕೂಡಾ. ಮುಂದೆಯುಊ ಚುನಾವಣೆಗೆ ನಿಲ್ಲುವವರಿದ್ದಾರೆ. ಒಂದು ದಿನ ಬೆಂಗಳೂರಿನಲ್ಲಿದ್ದರೆ, ನಾಲ್ಕು ದಿನ ರಾಜ್ಯದ ವಿವಿಧ ಊರುಗಳಲ್ಲಿ ಅಲೆಯುತ್ತಿರುತ್ತಾರೆ. ಎರಡು ದಿನಗಳ ಹಿಂದೆ ಅವರು ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಿದರು. ಒಂದು ವಾರದ ಹಿಂದೆ ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಸಿದರು. ತೃತೀಯ ರಂಗ ಸ್ಥಾಪಿಸಲು ಸಮಾನ ಮನಸ್ಕ ಪಕ್ಷಗಳೊಂದಿಗೆ ಚರ್ಚೆ ನಡೆಸಿದರು.
ಕಳೆದ ಉಪ ಚುನಾವಣೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗಿದರು. ಪ್ರಚಾರ ಮುಗಿಸಿ ರಾತ್ರಿ 1 ಗಂಟೆಗೆ ಮನೆಗೆ ಮರಳಿದರೆ, ಮಾರನೆ ದಿನ 8 ಗಂಟೆಗೆ ಪತ್ರಿಕಾ ಗೋಷ್ಠಿ! ಅವರ ದಿನಚರಿ ಆರಂಭವಾಗುವುದು ಬೆಳಗ್ಗೆ ಐದು ಗಂಟೆಗೆ. ಪೂಜೆ ಮುಗಿಸಿಕೊಂಡು, ಒಂದು ರಾಶಿ ಮಾತ್ರೆಗಳನ್ನು ಗಂಟಲಿಗಿಳಿಸಿ ಕಾರು ಹತ್ತಿ ಹೊರಟುಬಿಡುತ್ತಾರೆ. ಈಗ ಹೇಳಿ ಅವರು ನಿಜ ನಿದ್ರೇಗೌಡರೆ?
'ಅವರು ರಾಜಕೀಯವನ್ನೇ ಊಟ ಮಾಡುತ್ತಾರೆ, ಉಸಿರಾಡುತ್ತಾರೆ. ಅವರು 24-ಗಂಟೆ ರಾಜಕಾರಣಿ' ಎಂದು ಮಾಧ್ಯಮದವರು ಕರೆಯುತ್ತಾರೆ. ಆದರೆ ಇದೇ ಮಾಧ್ಯಮ ಅವರನ್ನು ನಿದ್ರೇಗೌಡ ಎಂದೂ ಪದವಿ ನೀಡುತ್ತಾರೆ! 24-ಗಂಟೆ ರಾಜಕಾರಣಿ ನಿದ್ರಿಸುವುದುಂಟೆ?
ಆದರೆ ಇದೇ ಜನ, ವಾಜಪೇಯಿ ಅಥವಾ ಅಡ್ವಾನಿ ಸಭೆಗಳಲ್ಲಿ ಕಣ್ಣು ಮುಚ್ಚಿ ಕುಳಿತಿದ್ದರೆ, ಅದನ್ನು ಧ್ಯಾನ, ಆಲೋಚನೆ ಎಂದು ಬಿಂಬಿಸುತ್ತಾರೆ. ಮಾಧ್ಯಮ ಕೇಂದ್ರಗಳಲ್ಲಿ ಬಹಳ ಕಾಲದಿಂದ ಆಯಕಟ್ಟಿನ ತಾಣಗಳಲ್ಲಿ ಕುಳಿತಿರುವ ಒಂದು ವರ್ಗಕ್ಕೆ ಸೇರಿದ ಕೆಲವರು ಇಂತಹ ಸುಳ್ಳು ಧೋರಣೆಗಳನ್ನು ಸಾಮಾನ್ಯರ ಮನಸ್ಸಿನಲ್ಲಿ ಬಿತ್ತಲು ಕಾರಣವಾದರು.
ನಗೆ ಚಟಾಕಿ(?)
ಕೆಲವು ನಗೆ ಬರಹಗಾರರು ಪ್ರತಿ ವರ್ಷ ಡಿಸೆಂಬರ್ 25ರಂದು ಬೆಂಗಳೂರಿನಲ್ಲಿ ಹಾಸ್ಯ ಕಾರ್ಯಕ್ರಮ ನಡೆಸುತ್ತಾರೆ. ಅಲ್ಲಿ ಕೇಳಿ ಬರುವ ಸಾಕಷ್ಟು ನಗೆ ಚಟಾಕಿಗಳು ಪೂರ್ವಗ್ರಹದಿಂದ ತುಂಬಿಕೊಂಡಂತಹವೆ. ಒಂದು ಉದಾಹರಣೆ ಇಲ್ಲಿದೆ: (ಮಾಸ್ಟರ್ ಹಿರಣ್ಣಯ್ಯ ನಿರೂಪಿಸಿದ್ದು) "ಸೋನಿಯಾ ಗಾಂಧಿ ಗಂಡ ಸತ್ತ ಎಷ್ಟೋ ವರ್ಷಗಳ ನಂತರ ಬಳ್ಳಾರಿಗೆ ಬಂದು ಚುನಾವಣೆಗೆ ನಿಂತರು. ಪ್ರಚಾರ ಸಭೆಯಲ್ಲಿ ಹರಕು ಮುರುಕು ಕನ್ನಡದಲ್ಲಿ ಮಾತನಾಡುತ್ತ, 'ದೇಶಕ್ಕಾಗಿ ನನ್ನ ಅತ್ತೆಯನ್ನು ಕಳೆದುಕೊಂಡೆ. ಗಂಡನನ್ನೂ ಕಳೆದುಕೊಂಡೆ...ಈಗ ನೀವೇ ಗತಿ' ಎಂದು ನೆರೆದಿದ್ದ ಸಾವಿರಾರು ಗಂಡಸರನ್ನು ಕೋರಿಕೊಂಡರು. ಒಂದು ಹೆಣ್ಣು ಒಂದು ಗಂಡನನ್ನು ಸಂಭಾಳಿಸುವುದೇ ಕಷ್ಟ. ಹೀಗಿರುವಾಗ ಸಾವಿರಾರು ಗಂಡಸರನ್ನು...? ನಂತರ ಮಗಳು ಪ್ರಿಯಾಂಕ ಗಾಂಧಿ ಮಾತನಾಡಲು ಬಂದರು. ಅವರು 'ದೇಶಕ್ಕಾಗಿ ನಮ್ಮಜ್ಚಿ ಪ್ರಾಣ ತ್ಯಾಗ ಮಾಡಿದರು. ಅಪ್ಪ ಕೂಡ ಶತ್ರುಗಳಿಗೆ ಬಲಿಯಾದರು. ಈಗ ನಮ್ಮಮ್ಮನನ್ನು ಕರೆತಂದು ನಿಮ್ಮ ಮುಂದೆ ನಿಲ್ಲಿಸಿದ್ದೇನೆ. ಈಗ ನೀವೇ ಗತಿ.."
ಇದು ತುಂಬಿದ ಸಭೆಯಲ್ಲಿ ಹಿರಣ್ಣಯ್ಯ ಹೇಳಿದ ನಗೆ ಚಟಾಕಿ (?). ಇದನ್ನು ಅಶ್ಲೀಲ ಅನ್ನಬೇಕೋ, ವಿಕೃತ ಮನಸ್ಸಿನ ಅಭಿವ್ಯಕ್ತಿ ಎನ್ನಬೇಕೋ?
ಅದು ಕೇವಲ ನಗೆಹನಿ, ಅದಕ್ಕೆ ಅಷ್ಟು ಮಹತ್ವ ನೀಡುವ ಅಗತ್ಯವಿಲ್ಲ ಎಂದು ಮುಊದಲಿಸುವವರು ಅನೇಕರಿದ್ದಾರೆ.
ಇದೇ ಹಿರಣ್ಣಯ್ಯನ ಇನ್ನೊಂದು ಉದಾಹರಣೆ ನೋಡಿ - "ಈ ದೇಶದಲ್ಲಿ ಸರಕಾರ ಎಲ್ಲಿದೆ? ಪಾರ್ಲಿಮೆಂಟ್ ಭವನದ ಮೇಲೆ ದಾಳಿ ನಡೆಸಿದವನನ್ನ ಗಲ್ಲಿಗೇರಿಸಿ ಅಂತ ಸುಪ್ರಿಂಕೋರ್ಟ್ ಹೇಳಿದರೂ, ಒಬ್ಬನನ್ನ ಗಲ್ಲಿಗೇರಿಸೋಕೆ ಆಗಿಲ್ಲ. ಇನ್ನು ಸರಕಾರ ಎಲ್ಲಿದೆ. ಈಗ ಇಲ್ಲಿ ಮಾಲೆಗಾಂವ್ ಗೆ ಬಂದವ್ರೆ. ಪಾಪ ಆ ಸಾಧ್ವಿಯನ್ನ ಹಿಡಿಯೋಕೆ!"
ಪಾರ್ಲಿಮೆಂಟ್ ಮೇಲೆ ದಾಳಿ ಮಾಡಿದವನನ್ನು ಗಲ್ಲಿಗೇರಿಸಿಲ್ಲ ಎಂದು ಆರೋಪಿಸುವ ಹಿರಣ್ಣಯ್ಯ, ಮಾಲೆಗಾಂವ್ ಪ್ರಕರಣದಲ್ಲಿ ಸಾಧ್ವಿಯನ್ನು ಪಾಪ, ಅಮಾಯಕಿ ಎನ್ನುವ ಫರ್ಮಾನು ಹೊರಡಿಸುತ್ತಾರೆ. ಈಗ ಹೇಳಿ ಇವರೆಲ್ಲ ಪೂರ್ವಗ್ರಹ ಪೀಡಿತರಲ್ಲವೆ?