Friday, November 7, 2008

ವಿಜಯ ಕರ್ನಾಟಕಕ್ಕೆ ಬಹುಪರಾಕ್!

ವಿಜಯ ಕರ್ನಾಟಕ ಪ್ರಶಂಸೆಗೆ ಅರ್ಹ.
ಮತಾಂತರ ಸುದ್ದಿ ಭುಗಿಲೆದ್ದಾಗ ವಿಕ ವಸ್ತುನಿಷ್ಠವಾಗಿ ಕೆಲಸ ನಿರ್ವಹಿಸಿತು ಎಂದು ಹೇಳಲಾಗದು. ಆದರೆ ನಂತರದ ದಿನಗಳು ಹಾಗಾಗಲಿಲ್ಲ. ಮತಾಂತರ ಕುರಿತಂತೆ ಚರ್ಚೆಗೆ ವೇದಿಕೆ ಒದಗಿಸಿತು.
ಭೈರಪ್ಪನವರ ಲೇಖನ ತನ್ನ ಅನೇಕ ಅಸಂಬದ್ಧ, ಅಸಂಗತ ವಾದಗಳಿಂದ ಸಂವಾದಕ್ಕೆ ಸದೃಢ ನೆಲೆ ನೀಡಿತು. ಆ ಹೊತ್ತಿಗೆ ಪತ್ರಿಕೆ ಭೈರಪ್ಪರಂತಹ ಕೋಮುವಾದಿಗಳಿಗೆ ವೇದಿಕೆ ಆಗಿಬಿಡ್ತಾ ಎಂದು ಸಂದೇಹ ಓದುಗರಲ್ಲಿ ಮೂಡಿದ್ದು ಸಹಜ.
ತಕ್ಷಣ ಪತ್ರಿಕೆ ತಾನು ವೇದಿಕೆ ಮಾತ್ರ ಎಂದು ಸ್ಪಷ್ಟಪಡಿಸಿತು.
ಮುಕ್ತವಾಗಿ ಎಲ್ಲರೂ ಒಪ್ಪಿಕೊಳ್ಳಲೇ ಬೇಕಾದ ಸಂಗತಿ ಎಂದರೆ, ಆರಂಭದ ಕೆಲ ಲೇಖನಗಳನ್ನು ಹೊರತು ಪಡಿಸಿ, ಉಳಿದೆಲ್ಲ ಸಂದರ್ಭದಲ್ಲಿ ಪತ್ರಿಕೆ ವೇದಿಕೆಯಾಗಿಯೇ ಕಾರ್ಯನಿರ್ವಹಿಸಿದೆ.
ಧೋರಣೆಯಲ್ಲಿ ವಿಕದಿಂದ ಸದಾ ಮಾರು ದೂರದಲ್ಲಿ ನಿಲ್ಲುವ ಅಗ್ನಿ ಶ್ರೀಧರ್ ಗೂ ಅವಕಾಶ ಕೊಟ್ಟಿದ್ದು ಅಚ್ಚರಿ ಮೂಡಿಸಿತ್ತು.
ಶ್ರೀಧರ್ ತಮ್ಮ ಆಳವಾದ ಸಂಗ್ರಹಯೋಗ್ಯ ಲೇಖನದಿಂದ ಓದುಗರನ್ನು ಗೆದ್ದರು. ನಂತರದಲ್ಲಿ ಬರಗೂರು ರಾಮಚಂದ್ರಪ್ಪ, ಎನ್. ಎಸ್. ಶಂಕರ್, ಜಿ.ಕೆ. ಗೋವಿಂದರಾವ್, ಪೇಜಾವರ ಶ್ರೀ, ಎನ್.ಕೆ ಹನುಮಂತಯ್ಯ, ಬಿ.ಎಲ್ ವೇಣು, ಚಂಪಾ, ಜೆಡಿಎಸ್ ಶಾಸಕ ವೈ.ಎಸ್.ವಿ ದತ್ತ ಅನೇಕರು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ಸದ್ಯ ಮತಾಂತರದ ವಿಭಿನ್ನ ಮಜಲುಗಳು, ಜಾತಿ ಸಂಘರ್ಷ, ವರ್ಣಾಶ್ರಮ ಪದ್ಧತಿ ಎಲ್ಲವೂ ಚರ್ಚೆಗೆ ಒಳಪಟ್ಟಿವೆ. ಇಂತಹದೊಂದು ಚರ್ಚೆ ಅಗತ್ಯವಿತ್ತು.
ಇಂದಿನ ಸ್ಪರ್ಧಾತ್ಮಕ ಪತ್ರಿಕೋದ್ಯಮದಲ್ಲಿ ಒಂದು ಪುಟವನ್ನು ಚರ್ಚೆಗೆಂದೇ ಮೀಸಲಿಟ್ಟು, ಅದರ ಚರ್ಚೆಯ ಗಂಭೀರತೆಯನ್ನು ಕಾಪಾಡಿಕೊಂಡಿ ಬರುವುದು ಸಾಮಾನ್ಯ ಕೆಲಸವಲ್ಲ. ಈ ಕಾರಣಕ್ಕೆ ವಿಶ್ವೇಶ್ವರ ಭಟ್ ರಿಗೆ, ಅವರ ಉತ್ಸಾಹಿ ತಂಡಕ್ಕೆ ಅಭಿನಂದನೆಗಳು.

12 comments:

Anonymous said...

ಶಭಾಶ್,
ನಿಮಗೆ ಹೊಗಳುವುದಕ್ಕೂ ಬರತ್ತೆ. ಸಂತೋಷ. ಆದರೆ ಕೆಲವೆ ದಿನಗಳಲ್ಲಿ ಧೋರಣೆಯಲ್ಲಿ ಇಂಥಾ ಬದಲಾವಣೆ ನೋಡಿದ್ರೆ ಆಶ್ಚರ್ಯ-ಸಂಶಯ ಎರಡೂ ಬರ್ತಿವೆ. "ಇಂತಹದೊಂದು ಚರ್ಚೆ ಅಗತ್ಯವಿತ್ತು.
ಇಂದಿನ ಸ್ಪರ್ಧಾತ್ಮಕ ಪತ್ರಿಕೋದ್ಯಮದಲ್ಲಿ ಒಂದು ಪುಟವನ್ನು ಚರ್ಚೆಗೆಂದೇ ಮೀಸಲಿಟ್ಟು, ಅದರ ಚರ್ಚೆಯ ಗಂಭೀರತೆಯನ್ನು ಕಾಪಾಡಿಕೊಂಡಿ ಬರುವುದು ಸಾಮಾನ್ಯ ಕೆಲಸವಲ್ಲ." ಅಂತ ಬರೆದಿದ್ದೀರಿ. ಗುಡ್... ಹೊಲಸು ಕಾರಿಕೊಂಡ ಭೈರಪ್ಪ ಎಂಬ ನಿಮ್ಮ ಪೋಸ್ಟನ್ನೂ, ಅದಕ್ಕಾಗಿ ಒಂದೂವರೆ ಪುಟ ಮೀಸಲಿಟ್ಟದ್ದಕ್ಕಾಗಿ ಭಟ್ಟರನ್ನು ಏಕವಚನದಲ್ಲಿ ಬೈದ ಪೋಸ್ಟಗಳನ್ನೂ ಮತ್ತೊಮ್ಮೆ ಓದಿಕೊಂಡೆ.
ನಗೆಯು ಬರುತಿದೆ ಎನಗೆ....

Unknown said...

ಅಲ್ಲಾ ಸ್ವಾಮಿ..
ಮತಾ೦ತರ ಮಾಡುವವರು ಮತ್ತು ಮತಾ೦ತರ ಹೊ೦ದುವವರು ಇಬ್ಬರು ಸುಮ್ಮನಿರುವಾಗ ನಿಮ್ಮದು ಇದು ಎ೦ತಹ ರಗಳೆ,

""" ಸಾಯುವ ಮೊದಲು ಜ್ಞಾನಪೀಠ ಗಿಟ್ಟಿಸಲೇಬೇಕೆಂದು ಹೆಣಗಾಡುತ್ತಿರುವ ಎಸ್.ಎಲ್.ಬೈರಪ್ಪನ ಭೈರಿಗೆ ಕೊರೆತ ಆರಂಭವಾಗಿದೆ. ವಿಜಯಕರ್ನಾಟಕದ ಅಕ್ಟೋಬರ್ ೧೬ರ ಸಂಚಿಕೆಯ ಒಂದೂವರೆ ಪುಟವನ್ನು ಭೈರಪ್ಪ ಸ್ವಾಹಾ ಮಾಡಿದ್ದಾನೆ. ಮತಾಂತರ ವಿಷಯ ಬೆಳೆಯುತ್ತಿದ್ದಾಗ ವಿ.ಕ. ಎಸ್‌ಎಂಎಸ್ ಪೋನ್ ಇತ್ಯಾದಿ ಮಣ್ಣು ಮುಸುಡಿ ಆರಂಭಿಸಬೇಕಿತ್ತು. ತಡವಾಗಿಯಾದರೂ ವಿ.ಕ ತನ್ನ ಟ್ರಾಕಿಗೆ ಬಂದಿದೆ. ಅಭಿನಂದನೆಗಳು ವಿ.ಭಟ್ಟರೇ. ಭೈರಪ್ಪ ಕರ್ನಾಟಕದ ನರೇಂದ್ರ ಮೋದಿಯಾಗಲು ಹೊರಟಿದ್ದಾನೆ. ಹಾಗಾಗಿ ಅವರ ಸಂಶೋಧನಾ ಲೇಖನದಲ್ಲಿ ಮೋದಿ ಮಾತುಗಳೇ ಕೇಳಿಸುತ್ತವೆ....""" ...........ಎ೦ಬ೦ತ ಮಾತುಗಳನ್ನು ಈ ಮೊದಲು ತಮ್ಮ ಅ೦ಕಣ ದಲ್ಲಿ ಬರೆದಿದ್ದೀರಿ. ಭೈರಪ್ಪನವರಿಗೆ ಏಕ ವಚನದಲ್ಲಿ ಪ್ರಶ್ನಿಸಿದ್ದೀರಿ. ಕಳೆದ ತಿ೦ಗಳಿನ ತಮ್ಮ ಬ್ಲಾಗ್ ಗಳಲ್ಲಿ ಇದೇ ವಿಕ ಗೆ ಮತ್ತು ವಿಶ್ವೇಶ್ವರ ಭಟ್ ಗೆ ತಾವೆಲ್ಲರೂ ಸೇರಿ ಜರೆದಿದ್ದೀರಿ. ಇನ್ನಾ ಮತಾ೦ತರದ ವಿಷಯ ಸರಿಯಾಗಿ ಇತ್ಯರ್ಥ ಆಗಿಲ್ಲದ ಸ೦ದರ್ಭದಲ್ಲಿ ನೀವು ಆಗಲೇ ಪತ್ರಿಕೆಯ ಬಗ್ಗೆ ಮತ್ತು ಅದರ ಸಂಪಾದಕರ ಬಗ್ಗೆ ಇ೦ತಹ ಒ೦ದು ಮೃದು ಧೋರಣೆ ತಳೆದಿರುವುದು ಎಷ್ಟು ಸರಿ??

ನಿಮ್ಮ ನೀತಿ ನೊಡಿದರೆ " ಆರು ಕೊಟ್ಟರೆ ಅತ್ತೆ ಕಡೆ ಮೂರು ಕೊಟ್ಟರೆ ಸೊಸೆ ಕಡೆ" ಎನ್ನುವ ಕನ್ನಡ ನಾಣ್ಣುಡಿ ನೆನಪಿಗೆ ಬರುತ್ತಿದೆ

Justice should be equal to every body....

"ಚಕ್ರವರ್ತಿ"

Anonymous said...

ಅವತ್ತು ಹ೦ಗೆ.. ಇವತ್ತು ಹಿ೦ಗೆ
ಹಿ೦ಗಾದ್ರೆ ಹೆ೦ಗೆ????

Anonymous said...

ಏನ್ ಗುರೂ, ಉಲ್ಟಾ ಹೊಡೆದ್ರೀ... ಭಟ್ಟರ ಅಮೇಧ್ಯ ನೀವು ತಿಂದಿರುವ ವಾಸನೆ ಇಲ್ಲೀ ತನಕ ಬರ್ತಿದೆ...
ವ್ಯಾಕ್... ನಾಚಿಗ್ಗೇಡು...

Anonymous said...

Let me not judge your motives and what seems to be self-righteousness at this moment like the others who have reacted here, i will wait. but why have you posted that champa's article in particular? To me he seems such a hypocrite: when Kannada R... Vedike takes law into its hands this man gives such a right-wing, fascist call that non-Kannadigas' bones should be pulped using police methods and here he quotes Basava and Marx as if he is the champion of a liberal ideology. People like him are the biggest curse on Kannada and India just as Chimoo and Bhairappa....Look at his dirty language reflecting his dirty mind and confused ideology...It was his failure as president of Kannada Sahitya Parishat that has handed over the task of protecting kannada to a bunch of street rowdies....Bhootada Baayalli Bhagavadgeete...adakke nimmadondashtu prachaara.....haudu nanagoo nageyu barutide

Anonymous said...

ಇಷ್ಟು ದಿನ ನಿಮ್ಮ ಬರಹಗಳನ್ನು ಬಹುಪರಾಕ್ ಮಾಡಿದ್ದವರ ನೈಜ ಮುಖ ಈಗ ಬಯಲಾಗುತ್ತಿದೆ.ತೀರಾ ಅಸಹ್ಯಕರ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವುದು ಆಕ್ಷೇಪಣಾಹಱ.
ವಿಕ ದ ಗುಣಾತ್ಮಕ ಅಂಶಗಳನ್ನು ಕುರಿತು ಓದಿ ಬಾಯಿ ಚಪ್ಪರಿಸಿಕೊಂಡವರಿಗೆ, ಅದು ಒಂದು ಪತ್ರಿಕೆಯಾಗಿ ಒಂದು ಆರೋಗ್ಯಕರ ಚಚೆಱಗೆ ವೇದಿಕೆ ಮಾಡಿಕೊಟ್ಟದ್ದಲ್ಲದೆ, ಎಲ್ಲ ಕೋನಗಳ ಬರಹಗಳಿಗೆ ಆದ್ಯತೆ ನೀಡಿದ್ದರ ಬಗೆಗೆ ನೀವು ಮಾಡಿದ ಪ್ರಶಂಸೆ ಬಹುಶಃ ಅಸಹನೀಯವಾಗಿರಬೇಕು.
ಅಲ್ಪ ಸ್ವಲ್ಪ ತಿಳಿದವರೆನಿಸಿಕೊಳ್ಳುವವರ ಮನೋಭಾವವೇ ಹೀಗಿರಬೇಕು.
ಹೀಗೆ ಒಮ್ಮುಖ ಧೋರಣೆ ಇಟ್ಟುಕೊಂಡು,ಅವರದೇ ಆಲೋಚನೆವುಳ್ಳವರ ಕೂಟ ಕಟ್ಟಿಕೊಂಡು ಮೆರೆಯುತ್ತಿರುವವರಿಂದ ಎಂದೂ ಆರೋಗ್ಯಕರ ಸಮಾಜ ಸಾಧ್ಯವಾಗುವುದಿಲ್ಲ.
ಆರು ಕೊಟ್ಟರೆ ಅತ್ತೆಯ ಕಡೆಗೆ, ಮೂರು ಕೊಟ್ಟರೆ ಸೊಸೆಯ ಕಡೆಗೆ.......ಎಂದು ದೂರಿದವರಿಗೆ balanced ಮನೋಭಾವ ಯಾವತ್ತೂ ಅಥಱವಾಗುವುದಿಲ್ಲ.ಅರೆಬೆಂದ, ಅಪಕ್ವ, ಯೋಚನೆಗಳನ್ನು ಅಭಿವ್ಯಕ್ತಿ ಮಾಡಿದ ಅವರ ಧಾಷ್ಟ್ಯಱ ಮಾತ್ರ ಸೋಜಿಗ.

ಹರಿ

Anonymous said...

ವಿ.ಕ. ಭಟ್ಟರಿಗೆ ಹೊಗಳುಭಟ್ಟರು ದಕ್ಕಿದರು. ಛೀ, ನಾಚಿಗ್ಗೇಡು.

Anonymous said...

DEAL agogide guru..

Anonymous said...

ಆನೆ(bhaTTa) ಬೀದಿಲಿ ಬರಲು ಶ್ವಾನ ತಾ ಬೊಗಳುವುದು
ಶ್ವಾನದಂತಾನೆ ಬೊಗಳಿದರೆ ಆನೆಯ ಮಾನವೇ ಹಾನಿ ಸರ್ವಜ್ಞ

Shree said...

ಕೊನೆಗೂ ನಿಷ್ಪಕ್ಷಪಾತವಾದ, ಆರೋಗ್ಯಕರ ದೃಷ್ಟಿಕೋನ ಕಾಣಲು ಆರಂಭವಾಗಿದೆ ಇಲ್ಲಿ ಅಂತ ಅನಿಸುತ್ತಿದೆ, ಕೆಟ್ಟದ್ದನ್ನು ತೆಗಳಿದ ಹಾಗೆ ಒಳ್ಳೆಯದನ್ನು ಹೊಗಳಲೂ ಸಾಧ್ಯ ಅಂತಾಯಿತು, ಅಭಿನಂದನೆಗಳು.

Anonymous said...

nachike mana maryade ideya nimge. istu bega hondanike sri illa idu..........

Anonymous said...

champaa is a hypocrite? Yes he may be or he is but he is not the focus of the post, I think....