ಸುದ್ದಿಮಾತಿನ ಬಹುಪರಾಕುಗಳಿಗೆ, ಅನೇಕ ಪ್ರತಿಕ್ರಿಯೆಗಳು ಬಂದಿವೆ. ಓದುಗರು ತಮ್ಮ ತಮ್ಮ ವೈಚಾರಿಕ ಮಟ್ಟಕ್ಕೆ ತಕ್ಕಂತೆ ಪ್ರತಿಕ್ರಿಯಿಸಿದ್ದಾರೆ. ಅವರ ಪದ ಬಳಕೆ, ವಿಚಾರ ಮಂಡನೆ ಅವರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ.
ಸುದ್ದಿಮಾತು ವಿಜಯ ಕರ್ನಾಟಕ ವನ್ನು ಹೊಗಳಿದಾಕ್ಷಣ ಇವರೂ ಡೀಲ್ ಆಗಿ ಹೋದರು, ಟ್ರಾಕ್ ಬದಲಾಯಿತು, ಯುಊ-ಟರ್ನ್ ತೆಗೆದುಕೊಂಡರು...ಹೀಗೆ ಅನೇಕ ಅಭಿಪ್ರಾಯಗಳಿವೆ.
ಇಲ್ಲಿ ನಮ್ಮ ಮಾತನ್ನು ಸ್ಪಷ್ಟಪಡಿಸುತ್ತೇವೆ. ವಿಜಯ ಕರ್ನಾಟಕವನ್ನು ಹೊಗಳಿದ್ದು - ವಿಷಯಾಧಾರಿತ. ಅದು ಚರ್ಚೆಯ ಹಾದಿಯಲ್ಲಿ ಅಗ್ನಿ ಶ್ರೀಧರ್, ಚಂಪಾ, ಬರಗೂರು ರಾಮಚಂದ್ರಪ್ಪನಂತಹವರಿಗೆ ಅವಕಾಶ ಮಾಡಿಕೊಟ್ಟದ್ದಕ್ಕಾಗಿ. ವಿಕ ಚರ್ಚೆ ಆರಂಭಿಸಿದ ಧಾಟಿ (ಭೈರಪ್ಪನ ಲೇಖನದಿಂದ), ಅದನ್ನು ಮುಂದುವರೆಸಲು ಪತ್ರಿಕೆಯಲ್ಲೇ ದುಡಿಯುವ ಕೆಲವರು ಬೇರೆ ಹೆಸರಲ್ಲಿ ಬರೆದದ್ದನ್ನಾಗಲಿ, ಶತಾವಧಾನಿ ಗಣೇಶ್ ಎನ್ನುವವರು ಮುಊರು ದಿನಗಳ ಕಾಲ ಬರೆದದ್ದನ್ನಾಗಲಿ, ಪ್ರಗತಿಪರರು ಬರೆದಿರುವುದನ್ನು ಟೀಕಿಸಲೆಂದೇ ಕೆಲ ಲೇಖನಗಳನ್ನು ಸೃಷ್ಟಿಸಿದ್ದನ್ನಾಗಲಿ ಸುದ್ದಿಮಾತು ಯಾವತ್ತಿಗೂ ಟೀಕಿಸುತ್ತದೆ. ಭೈರಪ್ಪನ ಲೇಖನಕ್ಕೆ ಸುದ್ದಿಮಾತು ಪ್ರಕಟಿಸಿದ ಲೇಖನ, ಅದರಲ್ಲಿ ಮಂಡನೆಯಾದ ವಿಚಾರಗಳಿಗೆ ಇಂದಿಗೂ ಬದ್ಧ, ಮುಂದೆಯುಊ.. ಆ ವಿಚಾರದಲ್ಲಿ 'ಡೀಲ್ ಆಗುವ' ಪ್ರಶ್ನೆಯೇ ಇಲ್ಲ!
ಈ ಹಿಂದೆ, ಅನಂತಮುಊರ್ತಿಯವರು ಭೈರಪ್ಪನ ಬರಹದ ಬಗ್ಗೆ ಪ್ರತಿಕ್ರಿಯಿಸಿದ್ದನ್ನು ವಿಜಯ ಕರ್ನಾಟಕ ಪ್ರಸ್ತುತ ಪಡಿಸಿದ ಪರಿ ಓದುಗರಿಗೆ ನೆನಪಿರಬಹುದು. ಎಸ್ಎಂಎಸ್ ಮುಊಲಕ ಅಭಿಪ್ರಾಯ ಸಂಗ್ರಹಿಸಿದರು. ಕೇವಲ ಒಂದು ತೆರನ ಅಭಿಪ್ರಾಯಗಳಿಗೆ ಮಣೆ ಹಾಕಿದರು. ಬೇಸತ್ತು ಮುಊರ್ತಿಯವರು ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡುವುದೇ ಬೇಡ ಎಂಬ ನಿರ್ಧಾರಕ್ಕೆ ಬಂದುಬಿಟ್ಟರು. ಮತಾಂತರ ಚರ್ಚೆ ಸಂದರ್ಭದಲ್ಲೂ ವಿಕ ಹಾಗೆ ಮಾಡಲಿಲ್ಲ ಎಂಬುದೇ ಸಮಾಧಾನ. ಅಗ್ನಿ ಶ್ರೀಧರ್ ತಮ್ಮ ಬರಹದ ಕೊನೆಯಲ್ಲಿ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳೇನೇ ಇದ್ದರೂ, ವಿಕ ಸಂಪಾದಕರು ಚರ್ಚೆಗೆ ಅನುವು ಮಾಡಿಕೊಟ್ಟದ್ದಕ್ಕೆ ಅಭಿನಂದಿಸಿದ್ದಾರೆ. ಸುದ್ದಿಮಾತಿನ ಅಭಿನಂದನೆಗಳು ಕೂಡಾ ಅಷ್ಟಕ್ಕೇ.
ಚರ್ಚೆ ಹಾದಿಯಲ್ಲಿ, ಬೌದ್ಧ ಧರ್ಮ ಭಾರತದಲ್ಲಿ ಬಹಳ ಕಾಲ ಉಳಿಯದಿರಲು ಯಾರ ಹುನ್ನಾರ ಕಾರಣ, ಯಾರ ಹಿಕಮತ್ತಿನಿಂದ ದಲಿತರು ಸಾವಿರಾರು ವರ್ಷಗಳ ಕಾಲ ಶೋಷಣೆಗೆ ಒಳಗಾದರು; ದಲಿತರು ನಿಜವಾಗಿಯುಊ ಹಿಂದುಗಳೇ, ಅವರು ಮತಾಂತರಗೊಂಡರೆ, ಅದನ್ನು ಮತಾಂತರ ಎನ್ನುವುದು ಸರಿಯೇ..ಎನ್ನುವ ವಿಚಾರಗಳೆಲ್ಲ ಹೊರಬಂದಿವೆ. ಕೆಲ ಓದುಗರಿಗಾದರೂ, ಸತ್ಯ ತಿಳಿದಂತಾಯಿತು.
ಇನ್ನು ಚರ್ಚೆ ಅಂತ್ಯ ಕಂಡಿಲ್ಲ. ಆರಂಭದಂತೆ ಅಂತ್ಯವನ್ನೂ ಭೈರಪ್ಪನಿಂದಲೇ ಮಾಡಿಸುವುದಾದರೆ, ಚರ್ಚೆ ಎಲ್ಲಿ ಆರಂಭವಾಗಿತ್ತೋ ಅಲ್ಲಿಗೇ ಬಂದು ನಿಂತಂತಾಗುತ್ತದೆ. ಯಾವ ರೀತಿಯ ವೈಚಾರಿಕ ಪ್ರಗತಿಯುಊ ಸಾಧ್ಯವಾಗುವುದಿಲ್ಲ. ಚರ್ಚೆ ಹಾದಿಯಲ್ಲಿ ಬಂದ ಎಲ್ಲಾ ಬರಹಗಳನ್ನು ಭಟ್ಟರು ಸೂಕ್ಷ್ಮವಾಗಿ ಓದಿದ್ದೇ ಆದರೆ, ಸತ್ಯ, ಸಮಾನತೆ, ಸೌಹಾರ್ದ ಮನಸ್ಸು ಯಾವ ಬರಹದಲ್ಲಿದೆ ಎಂಬುದು ಅರ್ಥವಾಗಿರುತ್ತದೆ. ಆದರೆ ಅವೆಲ್ಲವನ್ನೂ ಒಪ್ಪಿಕೊಳ್ಳುವ ಮನಸ್ಸು ಭಟ್ಟರಲ್ಲಿ ಇಲ್ಲ ಎನ್ನುವುದು ಈಗಾಗಲೇ ಸಾಬೀತಾದ ಸಂಗತಿ. ಏನು ಮಾಡುತ್ತಾರೋ ಕಾದು ನೋಡೋಣ.
Sunday, November 9, 2008
Subscribe to:
Post Comments (Atom)
11 comments:
ಏಕಪಕ್ಷೀಯ ಅಭಿಪ್ರಾಯವನ್ನು ಬಹುಜನರ ಅಭಿಪ್ರಾಯ ಎಂಬಂತೆ ಬಿಂಬಿಸುತ್ತಿದ್ದೀರಿ. ಅದಕ್ಕೆ ತಕ್ಕಂತೆ ಓದುಗರು ಪ್ರತಿಕ್ರಿಯೆ ನೀಡಿದ್ದಾರೆ, ಅಷ್ಟೇ.
’ಕೆಲವರ’ ಅಭಿಪ್ರಾಯಕ್ಕೆ ನೀವು ತಲೆ ಕೆಡಿಸಿಕೊಳ್ಳಬೇಡಿ. ನೀವು ತೆಗೆದುಕೊಂಡ ನಿಲುವು ಈ ದೇಶದ ಬಹುಸಂಖ್ಯಾತರ ನಿಲುವೂ ಒಂದೇ ಆಗಿದೆ. ಸಮಾನತೆ, ಜಾತ್ಯತೀತತೆ ಬಗ್ಗೆ ಮಾತಾಡಿದಾಗಲೆಲ್ಲಾ ಇಂತಹ ಪ್ರತಿಕ್ರಿಯೆಗಳು ಸಹಜ. ಇಂತಹ ಮನಸ್ಸುಗಳು ಇರುವವರೆಗೆ ನಿಮ್ಮಂತಹ ಇನ್ನೂ ಕೋಟಿ ಕೋಟಿ ಜನ ಮತ್ತು ಕೋಟಿ ಕೋಟಿ ಬ್ಲಾಗ್ ಅತ್ಯಗತ್ಯ.
ಸುದ್ದಿಮಾತುಗೆ ಅಭಿನಂದನೆಗಳು. ವಿಕನ ಹೊಗಳಿದ್ದಕ್ಕಲ್ಲ. ಆದರೆ ಮತಂತರದ ಬಗ್ಗೆ ಒಂದು ವೇದಿಕೆಯನ್ನು ಕೊಟ್ಟ ವಿಕೆಯ ಪ್ರಯತ್ನವನ್ನು ಪ್ರಶಂಸಿದ್ದಕ್ಕೆ. ನೆನ್ನೆ ಬರೆದ ನಿಮ್ಮ ಅಭಿಪ್ರಾಯವನ್ನು ಸುದ್ದಿಮಾತು ಓದುಗರು ಟಿಕಿಸಿದ್ದಕ್ಕೆ ಇಂದು ಅವರಿಗೆ ಉತ್ತರ ಸಿಕ್ಕಂತಾಗಿದೆ. ಸುದ್ದಿಮಾತು ಹೀಗೆ ಆರೋಗ್ಯಕರವಾದ ಚರ್ಚೆಯಲ್ಲಿ ಮುಂದುವರಿಯಲಿಯಂದು ಆಶಿಸುವ
ರಾಕೇಶ್ ಜೋಶಿ.
Patrikodyamada hulukugalige nimma barahagalu kannadi hididantide. Nimage abhinandanegalu.......
Adarottige innodashtannu heluvudide. Avakasha sigabahuda?
ವಿಕದ ಬಗ್ಗೆ ನೀವು ಮೆಚ್ಚುಗೆ ವ್ಯಕ್ತಪಡಿಸಿದ್ದು ಸರಿ ಆದ್ರೆ, ’ಬಹುಪರಾಕ್’ ಎಂಬ ಶಬ್ಧ ಅನಗತ್ಯ ಬಳಕೆ ಅನ್ನಿಸಿತು.ಯಾಕೆಂದ್ರೆ ಸಂವಾದಕ್ಕೆ ವೇದಿಕೆ ಒದಗಿಸಿದ ಮೇಲೆ ಎಲ್ಲರ ಅಭಿಪ್ರಾಯ ಪ್ರಕಟಿಸುವುದು ಅವರ ಜವಾಬ್ದಾರಿ. ಯಾಕೋ ನೀವು ಶಭ್ಧದ ಬಳಕೆಯಲ್ಲಿ ತಪ್ಪಿದ ಹಾಗೆ ಅನ್ನಿಸ್ತು... ಅಷ್ಟಕ್ಕೂ ಬಹುಪರಾಕ್ ಹೇಳಿಸಿಕೊಳ್ಳುವ ಘನಂದಾರಿ ಕೆಲಸವನ್ನೇನೂ ವಿಕ ಮಾಡಿಲ್ಲ
Charche praarambhisida barahagaararannu innoo ekavachanadindale sambhodisuttiruvudu nimma vyaktitvakke mattu nimma vaichaarika mattakke hidida kannadadi anta nanna bhaavane. Ishtu heliddakke naanu aa lekhakara para genetically deal aadavara paiki obba/lu anta neevu tilkondre adu nimma vyaktivada innondu mukha adeetu. anyway, innondu mini lankesh/hi bengalooru/agni suddimaatina (kelavomme buddhimaatu anta annisutte) huttikondide...
VK published an article by Tarini Chidananda in todays' Samvada. It appears as if she is responding to the present ongoing discussion on SL Byrappa's views. By projecting Kuvempu's view criticising missionaries tricks to impress the masses, it indirectly supports Byrappa's views which was not the view of Kuvempu. This episode of Kuvempu is a chapter in Magalu Kanda Kuvempu (by Tarini). It was wrongly used to support Byrappas' views, in the process causing irreparable damage to Kuvempu views. It is fair journalism?
What the Kodase said is 100 percent correct.
- Navaneetha Kumara
letter to the editor vibhaga dalli pratapa simha anno RSS dwaja irovaga yava letter publish aadeethu swami...? Jothege eetha Bhattra manasaputra bere.... Oodugara letterge uppu khara serisi tanna vaiyaktika dweshanoo theeriso ee punyatma uooorigella budhdhi heltane adre manege bandu----------?
Vi Ka Bhatta ella reetiya chintanegaligenu avakasha kottiddu nija. Idu anivaryavagi kottaddu saha nijane. eta pragatipara chintanegalige eshtu avakasha needidaru, ata tanna chaddi patrakartarige matra kadivana hakalara. ekendare ivana brahmanyada pravartaneyalli e chaddi patrakartara sahayanu beke beku. hagagiye pratap simha, vinayak bhat murur, mangalorina photographer sudhakar ermal ellaru Vi Ka dalli vipareetavagi beledaddu. Ivaru sadhisiddu enu illa. Adre samajavannu odeyuvalli matra gananeeya seve neediddare. Hegu komuvadi sarkara rajyadalli astitvadallide. idenadru hosadagi samaja odeyuvavarige enadru prashastiyannu stapisidare, modalige Visha Bhattanige. (Anantu Banadalli iddare anta sigalikkilla). Matte e ulida muvarige khanditavagi siguttade...
- Ramesh Bhat
Post a Comment