ಅನುಮತಿ ಇಲ್ಲದೆ ತಾರಿಣಿ ಬರಹ ಪ್ರಕಟ
ಎಲ್. ಕೊಡಸೆಯವರು ಎರಡು ದಿನಗಳ ಹಿಂದೆ ಒಂದು ಪ್ರತಿಕ್ರಿಯೆ ನೀಡಿ ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕರು ಕುವೆಂಪು ಮಗಳು ತಾರಿಣಿಯವರ ಪುಸ್ತಕದಿಂದ ಒಂದು ಬರಹವನ್ನು ಮತಾಂತರ ಸಂವಾದಕ್ಕೆ ಬಳಸಿಕೊಂಡಿರುವುದರ ಬಗ್ಗೆ ಸುದ್ದಿಮಾತು ಗಮನ ಸೆಳೆದಿದ್ದರು. ಲೇಖನ ಪ್ರಕಟಿಸುವ ಮುನ್ನ ತಾರಿಣಿಯವರ ಅನುಮತಿ ಪಡೆದಿರಲಾರರು ಎಂದು ಸಂಶಯ ವ್ಯಕ್ತಪಡಿಸಿದ್ದರು. ಅವರ ಸಂಶಯ ನಿಜವಾಗಿದೆ.
ಅನುಮತಿ ಇಲ್ಲದೆ ತಮ್ಮ ಲೇಖನ ಪ್ರಕಟಿಸಿರುವ ಬಗ್ಗೆ ತಾರಿಣಿಯವರು ಗರಂ ಆಗಿದ್ದಾರೆ. ವಿಕ ಸಂಪಾದಕರಿಗೆ ಒಂದು ಪತ್ರ ಬರೆದು ತಮ್ಮ ಬೇಸರ ತೋಡಿಕೊಂಡಿದ್ದಾರೆ. ತಮ್ಮ ಪತ್ರವನ್ನು ಮತಾಂತರ ಸಂವಾದ ಪುಟದಲ್ಲಿಯೇ ಪ್ರಕಟಿಸ ಬೇಕೆಂದು ಒತ್ತಾಯಿಸಿದ್ದಾರೆ.
ಸಂಪಾದಕರು ಅನುಮತಿಯಿಲ್ಲದೆ ಬರಹವನ್ನು ಪ್ರಕಟಿಸಿದ್ದು ಮೊದಲನೆ ಪ್ರಮಾದ. ನಂತರ ತಾರಿಣಿಯವರ ಪತ್ರವನ್ನು ಪ್ರಕಟಿಸದೆ ಪತ್ರಿಕೋದ್ಯಮಕ್ಕೆ ಅಪಚಾರ ಎಸಗಿದ್ದಾರೆ. ಇದೇ ಸಂಪಾದಕರು ಕೆಲ ದಿನಗಳ ಕಾಲ ಪತ್ರಿಕೋದ್ಯಮ ಹೇಳಿಕೊಟ್ಟದ್ದೂ ಉಂಟು!!!
ತಾರಿಣಿಯವರ ಪತ್ರ ಪೂರ್ಣ ಪಾಠ ಇಲ್ಲಿದೆ...
ಸಂಪಾದಕರು
ವಿಜಯ ಕರ್ನಾಟಕ
ಸನ್ಮಾನ್ಯರೇ,
’ಮತಾಂತರ - ಒಂದು ಸಂವಾದ್’ ಕ್ಕೆ ಸಂಬಂಧಿಸಿದಂತೆ ಪರ-ವಿರೋಧಗಳು, ವಾದ ವಿವಾದಗಳನ್ನು ನೋಡುತ್ತಿದ್ದೇನೆ. ಆದರೆ ಇಂದು ಬೆಳಗ್ಗೆ ತಮ್ಮ ಪತ್ರಿಕೆಯಲ್ಲಿ ಪ್ರಕಟವಾಗಿರುವ ನನ್ನ ಹೆಸರಿನ ಲೇಖನ ಕಂಡು ಆಶ್ಚರ್ಯ, ನೋವು, ಬೇಸರ ಒಟ್ಟಿಗೆ ಆಯಿತು.
ಮೊದಲನೆಯದಾಗಿ ನಾನು ವಯಕ್ತಿಕವಾಗಿ ಈ ಪ್ರತಿಕ್ರಿಯೆಯಲ್ಲಿ ಭಾಗಿಯಾಗಿಲ್ಲ. ತಮ್ಮ ಪತ್ರಿಕೆಯಲ್ಲಿ ಮೇಲಿನ ಶೀರ್ಷಿಕೆಯಲ್ಲಿ ಈ ಭಾಗವನ್ನು ಪ್ರಕಟಿಸಿ ಎಂದು ಬರೆದುಕೊಂಡದ್ದಂತೂ ಇಲ್ಲವೇ ಇಲ್ಲ. ಹೀಗಿರುವಾಗ ನನ್ನನ್ನು ಅನಾವಶ್ಯಕವಾಗಿ ಈ ಸಂವಾದದಲ್ಲಿ ಎಳೆದಿದ್ದೀರಿ.
ಪತ್ರಿಕೆಯಲ್ಲಿ ಪ್ರಕಟಿಸಿರುವ ಭಾಗವು ನನ್ನ ’ಮಗಳು ಕಂಡ ಕುವೆಂಪು’ ಕೃತಿಯಲ್ಲಿ ಬರೆದದ್ದು. ಆ ಭಾಗವನ್ನು ತಾವು ನನ್ನ ಕೃತಿಯಿಂದ ತೆಗೆದುಕೊಂಡಿದ್ದೀರಿ ಮತ್ತು ನಾನೇ ತಮಗೆ ಬರೆದು ಸದರಿ ಸಂವಾದಕ್ಕೆ ನನ್ನ ಲೇಖನ ಪ್ರಕಟಿಸಲು ಕೋರಿದೆನು ಎಂಬ ಭಾವನೆ ಸಾರ್ವಜನಿಕರಲ್ಲಿ ಉಂಟಾಗುವಂತೆ ಮಾಡಿದ್ದೀರಿ.
ತಾವು ಎಲ್ಲಿಂದಲೋ ತೆಗೆದ ಯಾವುದನ್ನೇ ಬೇಕಾದರೂ ಈ ಸಂವಾದದಲ್ಲಿ ಪ್ರಕಟಿಸಬಹುದೇ? ಇದು ಮುಊಲ ಲೇಖನದ ಬರವಣಿಗೆಯ ಆಶಯವನ್ನು ತಿರುಚಿದಂತಾಗುವುದಿಲ್ಲವೇ? ಮತ್ತು ಅಪಚಾರವಲ್ಲವೇ?
ಕುವೆಂಪು ಅವರ ಬಳಿಗೆ ಯಾವುದೇ ಧರ್ಮದ ಮತ ಪ್ರಚಾರಕರು ಬಂದಾಗಲೂ ಕೂಡಾ ಅವರು ಹೇಳಿ ಕಳುಹಿಸುತ್ತಿದ್ದುದು ಇದನ್ನೇ. ಅಂದು ಬಂದ ಮತ ಪ್ರಚಾರಕರ ನಡವಳಿಕೆ ಬಗೆಗೆ ಹೇಳದಿರುವುದು ಮತ್ತು ದೊಡ್ಡದು ಮಾಡದೇ ಇರುವುದು ಉತ್ತಮ.
ನೀವು ಉದ್ಧರಿಸಿರುವ ನನ್ನ ಬರವಣಿಗೆಯನ್ನು ಕೆಲವರು ವಾದದ ಪರವೆಂದೂ, ಕೆಲವರು ವಾದದ ವಿರೋಧವೆಂದೂ ಗ್ರಹಿಸಿ ನನಗೆ ಫೋನ್ ಮಾಡುತ್ತಿದ್ದಾರೆ. ಇವೆರಡೂ ಅಲ್ಲವೆಂದು ಕುವೆಂಪು ಅವರನ್ನು ಚೆನ್ನಾಗಿ ಬಲ್ಲವರು ಮತ್ತು ನನ್ನ ಪುಸ್ತಕದ ಕಿರು ಅಧ್ಯಾಯವನ್ನು ಓದಿದವರಿಗೆ ತಿಳಿಯುತ್ತದೆ.
ಏನೇ ಆದರೂ ಅನುಮತಿ ಇಲ್ಲದೆ ನನ್ನ ಪುಸ್ತಕದ ಈ ಭಾಗವನ್ನು ತಾವು ಈ ಸಂವಾದದಲ್ಲಿ ಬಳಸಿಕೊಂಡಿರುವುದು ವಯಕ್ತಿಕವಾಗಿ ನನಗೆ ನೋವು ಮತ್ತು ಬೇಸರ ತಂದಿದೆ. ಆದುದರಿಂದ ತಾವು ಪತ್ರಿಕೆಯ ಇದೇ ಕಲಮಿನಲ್ಲಿ ನನ್ನ ಈ ಪತ್ರವನ್ನು ಪ್ರಕಟಿಸಬೇಕೆಂದು ಕೋರುತ್ತೇನೆ.
- ತಾರಿಣಿ ಚಿದಾನಾಂದ
Wednesday, November 12, 2008
Subscribe to:
Post Comments (Atom)
25 comments:
It is really unfortunate to use Kuvempu views for some unwanted controversy. VK should have published Mrs Tarini's letter and tender apology for the blunder committed against Kuvempu.
ಇದು ನಿಜಕ್ಕೂ ಬೇಸರದ ಸಂಗತಿ. ವಿಕ ಏನೇ ಜಾತ್ಯತೀತದ ಸೋಗು ಹಾಕಿದರೂ ಅದು ತನ್ನ ಬುದ್ದಿ ಬಿಡುವುದಿಲ್ಲ ಎನ್ನುವುದನ್ನು ತೋರಿಸಿದೆ.ಬೈರಪ್ಪನವರು ತಮ್ಮ ನಿಲುವಿಗೆ ತಕ್ಕಂತೆ ಇತಿಹಾಸ ಬದಲಿಸುವಂತೆ, ತನ್ನ ವಾದವನ್ನು ಸಮರ್ಥಿಸಿಕೊಳ್ಳಲು ವಿಕ ಕೆಲವರ ನಿಲುವನ್ನೇ ತಿರುಚುತ್ತಿದೆ.
ಸುದ್ದಿಮಾತು ಇದನ್ನು ಹೆಕ್ಕಿ ತೆಗೆದಿದ್ದಕ್ಕೆ ಬೆನ್ನು ತಟ್ಟಬೇಕು. ವಿಕ ಜತೆ ಡೀಲ್ ಆಯಿತು ಎಂದು ಬೊಬ್ಬೆ ಹೊಡೆದುಕೊಂಡವರಿಗೆ ಇದು ಉತ್ತರ.
ಈ ಸುದ್ದಿ ನೋಡಿ ಸಹಿಸಿದವರು ಡೀಲ್ ಕುದರಲಿಲ್ಲ ಅಂತಾ ಕೂಗಾಡಬಹುದು. ಹಾಗಾದರೂ ಅಚ್ಚರಿ ಇಲ್ಲ.
ಸುದ್ದಿಮಾತಿಗೆ ಮತ್ತೊಮ್ಮೆ ಭೇಷ್ ಎನ್ನುತ್ತೇನೆ.
ವಿಜಯ ಕರ್ನಾಟಕ ಹೀಗೆ ಲೇಖಕರ ಸಮ್ಮತಿ ಇಲ್ಲದೆ ಲೇಖನ ಪ್ರಕಟಿಸುವುದು ಮತ್ತು ತನ್ನ ನಿಲುವಿಗೆ ವಿರುದ್ಧವಾಗಿ ಬಂದ ಅಭಿಪ್ರಾಯಗಳನ್ನು ಪ್ರಕಟಿಸದೇ ಇರುವುದು ಇದೇ ಮೊದಲಲ್ಲ. ಹಿಂದೊಮ್ಮೆ ಎಚ್.ಎಸ್.ರಾಘವೇಂದ್ರ ರಾವ್ ಅವರು ಗಂಗಾಧರ ಚಿತ್ತಾಲರ ಕವನದ ಬಗ್ಗೆ ಮಾಡಿದ ವಿಮರ್ಶೆ ವಿ.ಕ ದಲ್ಲಿ ಪ್ರಕಟವಾಗಿತ್ತು. ಅಭಿನಂದಿಸಲು ಫೋನ್ ಮಾಡಿದಾಗ ಅವರಿಗೆ ಅಚ್ಚರಿ. ಅವರನ್ನು ಕೇಳದೇ”ಕೆಂಡಸಂಪಿಗೆ” ಯಲ್ಲಿ ಪ್ರಕಟವಾದ ಲೇಖನವನ್ನು ಹಾಗೇ ಎತ್ತಿ ಹಾಕಿಕೊಂಡಿತ್ತು ವಿ.ಕ.
ಯಾವುದೋ ಒಂದು ನಿಲುವಿಗೆ ಬದ್ಧರಾಗಿರುವ ಲೇಖಕರಿಗೆ ಇದರಿಂದ ನೋವಾಗುವುದು ಸಹಜ. ಏನೇ ಇದ್ದರೂ ಲೇಖಕರನ್ನು ಕೇಳದೇ ಪ್ರಕಟಿಸುವುದು ಯಾವ ರೀತಿಯಿಂದ ನೋಡಿದರೂ ತಪ್ಪೇ.
ಇಂದಿನ ’ಪ್ರಜಾಪ್ರಭುತ್ವ’ದ ಹೆಸರಿನಲ್ಲಿ ಇರುವ ಬಂಡವಾಳಶಾಹಿ ಸಮಾಜದಲ್ಲಿ ಉದ್ದೇಶಪೂರ್ವಕ ಅಡಗಿಸಲಾದ ಧ್ವನಿಗಳಿಗೆ ದನಿ ನೀಡುತ್ತಿರುವ ನಿಮಗೆ ಅಭಿನಂದನೆಗಳು!
Such blunders are often in VK. Recently there was a big display of opinions by veterans on VK's early effort to give maximum information on Pt Bhimsen Joshi on his selection to Bharatratna award. There was one entry by U R Anantha Murthy praising VK on its coverage. Dr UR A later sent a letter to VK denying that he praised VK. But that letter also did not published.
ಮೈಸೂರಿನ ಪತ್ರಿಕಾ ಸಂಪಾದಕರೊಬ್ಬರು ತಮ್ಮ ಪತ್ರಿಕೆಯಲ್ಲಿ ಪ್ರಕಟವಾದ ಜಾಹಿರಾತನ್ನು ವಿಕ ಕದ್ದು ಪ್ರಕಟಿಸಿದೆ ಎಂದು ವಿಕ ದ ಪ್ರಾರಂಭದ ದಿನಗಳಲ್ಲಿ ಆರೋಪಿಸಿದ್ದರು. ಲೋಕಲ್ ಪತ್ರಿಕೆಗಳ ಜಾಹೀರತುದಾರನ್ನು ಸೆಳೆಯುವುದು ವಿಕ ದ ಉದ್ದೇಶವಾಗಿತ್ತು. ಇಂತಹ ಕೆಲಸಗಳಲ್ಲಿ ವಿಕ ಖಂಡಿತ ನಂಬರ್ ೧ ಬಿಡಿ....
ಸಂಪಾದಕರೆ ಈ ರಾಮಚಂದ್ರ shenoy ಯಾರು ಅನ್ನೋದಕ್ಕೆ ಉತ್ತರ ಇಲ್ಲಿ ಸಿಕ್ಕಿದೆ ನೋಡಿ. ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನೋ ಹಾಗೆ ಬರೆದವರಿಗೆ ತಮ್ಮ ಬರಹದ ಮೇಲೂ ಏನು ಪ್ರೀತಿಯೋ...
=================================
ರವಿ ಬೆಳಗೆರೆ ನೀಡಿದ ಉತ್ತರ, ಅವರಿಗೆ ದೊರೆತ ಪ್ರತ್ಯುತ್ತರ
Oct 21st, 2008 by Pratap Simha
http://pratapsimha.com/others/%e0%b2%b0%e0%b2%b5%e0%b2%bf-%e0%b2%ac%e0%b3%86%e0%b2%b3%e0%b2%97%e0%b3%86%e0%b2%b0%e0%b3%86-%e0%b2%a8%e0%b3%80%e0%b2%a1%e0%b2%bf%e0%b2%a6-%e0%b2%89%e0%b2%a4%e0%b3%8d%e0%b2%a4%e0%b2%b0-%e0%b2%85/
ಸುದ್ದಿಮನೆಯವರೆ, ವಿಕಗೆ ಬರೆದ ತಾರಿಣಿಯವರ ಪತ್ರ ನಿಮ್ಗೆ ಹೇಗೆ ಸಿಕ್ಕಿತು? ದಯವಿಟ್ಟು ನಮಗೆ ತಿಳಿಸಿ.
ಇದು ನಿಜವೇ ಆಗಿದ್ದಲ್ಲಿ, ಸುದ್ದಿಮನೆಗೆ ತುಂಬಾ ಧನ್ಯವಾದಗಳು.
ವಿಜಯ ಕರ್ನಾಟಕದ ಮತ್ತೊಂದು ಮುಖವಾಡ ಕಳಚಿಬಿದ್ದಿದೆ. ಹಾಗೆ ವಿಭಟ್ಟನ ನೀಚತನ ಕೂಡಾ...ಅವರದೇ ಪತ್ರಿಕೆಯಲ್ಲಿ ಬಂದಿರುವ ಇಂದೂದರ ಹೊನ್ನಾವರರ ಲೇಖನವನ್ನು ಭಟ್ಟರು(ಅವರು ಈ ಲೇಖನಗಳನ್ನು ಓದುತ್ತಿರುವ ಬಗ್ಗೆ ಸಂಶಯವಿದೆ) ಮತ್ತವರ ಹಿಂದೂ ಕೋಮುವಾದಿ ಬಳಗ ದಯವಿಟ್ಟು ಓದಿ ಆತ್ಮ ವಿಮರ್ಷೆ ಮಾಡಿಕೊಳ್ಳಲಿ . ಬೈರಪ್ಪನನ್ನು ಬೆಂಬಲಿಸುವವರು ಇನ್ನಾದರೂ ಯೋಚಿಸುವಂತಾಗಲಿ
shame for v.k.
- jayaprakash
ಮತಾಂತರ ಸಂವಾದದ ಮೂಲಕ ವಿಜಯಕರ್ನಾಟಕದ ಹಲವಾರು ಹುಳುಕುಗಳು ಹೊರಬಿದ್ದಿವೆ. ತಾರಿಣಿ ಚಿದಾನಂದ ಅವರ ಬರಹ ಅವರ ಪುಸ್ತಕದಿಂದ ಕದ್ದದ್ದು. ಇನ್ನೊಂದು ವಿಚಾರ ನಿಮಗೆ ಗೊತ್ತಿರಲಿಕ್ಕಿಲ್ಲ : ಅದೇ ದಿನ ಅದೇ ಬರಹದ ಕೆಳಗೆ ಪ್ರಕಟವಾದ ಎಂ.ಆರ್.ದತ್ತಾತ್ರಿ ಅವರ ಲೇಖನ ಕೂಡ ಅವರು ಈ ಸಂವಾದಕ್ಕಾಗಿ ಬರೆದದ್ದಲ್ಲ. ಸೂಕ್ಷ್ಮ ಬರಹಗಾರಿಕೆಗೆ ಹೆಸರಾದ ಅವರು ಈ ಸಂವಾದದಲ್ಲಿ ಕೈಹಾಕಿ ಹೆಸರು ಕೆಡಿಸಿಕೊಳ್ಳುವವರಲ್ಲ. ಅಂತರ್ಜಾಲ ತಾಣವೊಂದರಲ್ಲಿ ಪ್ರಕಟಿಸಿದ ಅವರ ಈ ಲೇಖನವನ್ನು ಅವರ ಅಪ್ಪಣೆ ಪಡೆಯದೆ ಯಥಾವತ್ ಎತ್ತಿಕೊಳ್ಳಲಾಗಿದೆ. ಪ್ರಕಟಿಸಿದ ಮೇಲೆ ಸಂಬಂಸಿದ ಲೇಖಕರಿಗೆ ತಿಳಿಸುವುದಾಗಲಿ, ಗೌರವಧನ ನೀಡುವುದಾಗಲಿ ವಿಕ ಮಾಡಿಲ್ಲ. ಪ್ರಕಟಿಸಿದ್ದೇವೆ ಎಂಬುದು ಕೂಡ ಅವರಿಗೆ ತಿಳಿಸದೆ ಉದ್ಧಟತನ ಮೆರೆದಿದೆ.
- ನವನೀತ ಕುಮಾರ
ರವಿ ಬೆಳಗೆರೆ ಪ್ರತಿಕ್ರಿಯೆಗೆ ಪ್ರತಿಕ್ರಿಯಿಸಿದ ರಾಮಚಂದ್ರ ಶೆಣೈ ಎಂಬಾತ ಯಾರು ಎಂಬುದನ್ನು ತಿಳಿಯಲು ಸಂಶೋಧನೆ ಮಾಡಬೇಕಾದ ಅಗತ್ಯವೇನಿಲ್ಲ. ಯಾರ್ಯಾರನ್ನೋ ತನ್ನ ಅಪ್ಪ ಎಂದು ಹೇಳಿಕೊಳ್ಳುವುದು ಪ್ರತಾಪ್ಸಿಂಹನ ಹಳೆಯ ಕೆಟ್ಟ ಚಾಳಿ. ಇದು ಆತನದೇ ಛದ್ಮವೇಷವಲ್ಲದೆ ಬೇರೆಯಲ್ಲ. ಆದರೆ ಇದನ್ನು ಬರೆಸಿರುವುದು ವಿಷಭಟ್ಟರು. ಅದೇ ಮಜಾ ನೀಡುವ ವಿಷಯ ! ಯಾಕೆ ಎಂಬ ಕುತೂಹಲವೇ ? ಪುಸ್ತಕ ಪ್ರಕಟಣೆಯಲ್ಲಿ ಹಾಗೂ ಜನಪ್ರಿಯತೆಯಲ್ಲಿ ತನ್ನ ಸಮಕಾಲೀನನಾದ ರವಿ ಬೆಳಗೆರೆ ತನಗಿಂತ ಮೇಲೆ ಹೋಗಿರುವುದೇ ಭಟ್ಟರ ಹೊಟ್ಟೆಯುರಿಗೆ ಕಾರಣ. ಆತನೊಂದಿಗೆ ಮೇಲ್ನೋಟಕ್ಕೆ ಭಟ್ಟರು ಸ್ನೇಹಿತರಾಗಿರುವಂತೆ ತೋರಿಸಿಕೊಂಡರೂ, ಒಳಗೊಳಗೆ ಈ ಹುಣ್ಣು ಕಾಡುತ್ತಲೇ ಇದೆ. ಅದಕ್ಕಾಗಿ ಪ್ರತಾಪ್ಸಿಂಹನನ್ನು ಛೂ ಬಿಟ್ಟಿದ್ದಾರೆ. ಇದೊಂಥರಾ, ತಮಗಾಗದವರು ಬಂದಾಗ ಮನೆಯೊಳಗೇ ಕುಳಿತು ನಾಯಿ ಬಿಡುತ್ತಾರಲ್ಲ ಹಾಗೆ.
- ಎನ್ಕೆ
ನೋಡುತ್ತಾ ಇರಿ, ಈ ಸಂವಾದವನ್ನು ವಿಷ ಭಟ್ಟರು ಪುನಃ ಭೈರಪ್ಪನವರಿಂದಲೇ ಕೊನೆಗೊಳಿಸುತ್ತಾರೆ. ಅವರು ಮತ್ತೆ ಚಾತುರ್ವರ್ಣದ ಭಜನೆ ಮಾಡಿ, ವಿಕ ಓದುಗರಿಗೆ ಖಾಕಿ ಚಡ್ಡಿ ತೊಡಿಸಿ, ಕ್ರೈಸ್ತರಿಗೂ ಮುಸ್ಲಿಮರಿಗೂ ಸೇರಿ ಬಡಿದುಹಾಕುವ ದೀಕ್ಷೆಯನ್ನು ಆರೆಸ್ಸೆಸ್ ಬೈಠಕ್ ಥರಾ ಕೊಡದೆ ಇದ್ದರೆ ಕೇಳಿ !
- ಎನ್.ಕುಮಾರ
E Pratap Sinhana tale kettide. allade etanige savira appandiru iruvante kanutte. Tane ellavannu baredu yaryayara hesaru hakuttane. atana innobba appa visha bhatta anatiyante e tara yaryara hesarinalli baritane. Eta sulegintalu neecha manushya. E visha brahmana varga iruva varege e deshakke sadgati ella...]
-Ramesh Pandit
suddimaatu exclusive report thumbha chennagide.
heege nimma kaggathala kranthi munduvareyali...
yes gowda
nimge aa letter hege sigtu antaloo swalpa bareeri swamee...neevu yaake vk yante kannumuchaale aaduvudu...kanishta neevadaroo swalpa transparent aaagi iri
vk e riti maduvudu patrikodyamakke madida apachara. vbhatta intaha kutatra nillisali.
ತಾರಿಣಿ ಅವರ ಅನುಮತಿ ಇಲ್ಲದ್ರೆ ವಿಕದಲ್ಲಿ ಪ್ರಕಟಿಸಿದ್ದು ಖಂಡಿತಾ ತಪ್ಪು.
ಆದರೆ ಕುವೆಂಪು ಮತಾಂತರದ ವಿರುದ್ಧ ಧೈರ್ಯವಾಗಿ ಮಾತನಾಡಿದ್ದಾರೆ. ಅದನ್ನು ಅವರ ಮಗಳು ದಾಖಲಿಸಿದ್ದಾರೆ.
ಈ ಲೇಖನಕ್ಕೂ ಕುವೆಂಪುಗೆ ಜನಿವಾರ ಹಾಕಕ್ಕೂ ಏನು ಸಂಬಂಧ ಅಂತ ತಿಳಿಯಲಿಲ್ಲ! ಯಾಕೋ ನೀವು ಓದುಗರ ದಾರಿ ತಪ್ಪಿಸುತ್ತಿದ್ದೀರಾ ಅಂತ ಅನಿಸಿತು. ಸುಮ್ಮನೆ ಜಾತಿವಿವಾದ ಸೃಷ್ಟಿ ಮಾಡಬೇಡಿ. ಬ್ರಾಹ್ಮಣ ಅಥವಾ ಇನ್ಯಾವುದೇ ಜಾತಿಯನ್ನು ದ್ವೇಶಿಸುವುದು ಒಳ್ಳೆಯ ಪತ್ರಕರ್ತನ ಲಕ್ಷಣ ಅಲ್ಲ.
-ಶಶಾಂಕ್, ನ್ಯೂ ಜೆರ್ಸಿ.
ಕಳೆದ ಒಂದು ವಾರದಿಂದ "ಸುದ್ದಿ" ಯಿಲ್ಲದೆ ಸದ್ದು ಮಾಡದ "ಸುದ್ದಿ"ಮಾತು. ವರದಿಗಾರರು ಮಾಯವಾಗಿದ್ದಾರೆ...!!!???
ನಿಮ್ಮ ಬ್ಲಾಗಿನಲ್ಲಿ ಬಳಸಿರುವ ಕೆಲವು ಪದಗಳನ್ನು ಉದಾಹರಣೆಗೆ: “ಮುದಿಬ್ರಾಹ್ಮಣ” “ಕುವೆಂಪುಗೆ ಜನಿವಾರ” ಓದಿದಮೇಲೆ ನೀವು “ಬ್ರಾಹ್ಮಣ ದ್ವೇಶಿ” ಅಂತ ಅನ್ನಿಸುತ್ತಾ ಇದೆ.
ಈ ಪತ್ರ ಮತ್ತು ಅದಕ್ಕೆ ಸಂಪಾದಕರ ಉತ್ತರ , ಇಂದಿನ ವಿ ಕ ದಲ್ಲಿ ಪ್ರಕಟವಾಗಿದೆ .
ವಿಜಯಕರ್ನಾಟಕದಲ್ಲಿ ಈ ಲೇಖನ ಪ್ರಕಟವಾಗಿದೆ.
ಸುದ್ದಿಮಾತು ಸಂಪಾದಕರು ಈಗ ವಿಶ್ವೇಶ್ವರಭಟ್ಟರ ಕಾಲುಹಿಡಿದು ಕ್ಷಮೆ ಕೇಳಬೇಕು.
ವಿಷ ಭಟ್ಟರ ಕಾಲು ಹಿಡಿದು ಕ್ಷಮೆ ಕೇಳಬೇಕು ಅಂತಿರಲ್ಲ ಮೂರ್ಖರೆ ಸುದ್ದಿಮಾತಿನಲ್ಲಿ ಪ್ರಕಟವಾದ ಮೇಲೆ ಇಂದು ವಿಕದಲ್ಲಿ ತಾರಿಣಿ ಅವರು ಬರೆದ ಪತ್ರ ಪ್ರಕಟಿಸಲಾಗಿದೆ. ಅಲ್ಲದೆ, ವಿಷ ಭಟ್ಟರಿಗೆ ಸುದ್ದಿಮಾತಿನ ಅನೇಕ ಓದುಗರು ಬಟ್ಟೆಸುತ್ತಿ ಮೆಟ್ಟಿನಲ್ಲಿ ಹೊಡೆದ ಮೇಲೆ ಪ್ರಕಟಿಸಿದ್ದಾರೆ. ಅಂತಹ ಪ್ರಾಮಾಣಿಕ ಪತ್ರಕರ್ತರಾಗಿದ್ದರೆ ತಾರಿಣಿ ಅವರು ಕಳುಹಿಸಿದ ತಕ್ಷಣ ಪ್ರಕಟಿಸಬಹುದಿತ್ತಲ್ಲ. ಸುದ್ದಿ ಮಾತು ಬೈಯುವ ಮೊದಲು ಒಮ್ಮೆ ಯೋಚಿಸಿ ಮೂರ್ಖರೆ. ನೀವು ಮಾಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಸುದ್ದಿ ಮಾತು ಸಂಪಾದಕರೇ. ಗುಡ್ ಲಕ್ ಸುದ್ದಿ ಮಾತು. ನಿಮ್ಮ ಈ ಕುಟುಕು ಕಾರ್ಯಚರಣೆ ಇದೇ ರೀತಿ ಮುಂದುವರಿಯಲಿ.
ದಿನೇಶ್ ಕುಮಾರ್ ಅವ್ರೆ,
ನೀವು ಹೇಳಿದಂತೆ ವಿಜಯ ಕರ್ನಾಟಕದೋರು ತಾರಿಣಿಯವರ ಲೇಖನವನ್ನು ಅನುಮತಿಯಿಲ್ಲದೆ ಉಪಯೋಗಿಸಿಕೊಂಡಿದ್ದು ತಪ್ಪೇ ಇರಬಹುದು. ನೀವು ಕೇವಲ ಆ ಒಂದು ವಿಚಾರವನ್ನೇ ಇಲ್ಲಿ ಬರೆದಿದ್ದೀರಾ ಹೊರತು ಮುಖ್ಯ ವಿಷಯವಾದ ಮತಾಂತರ ಬಗ್ಗೆ ಕುವೆಂಪು ಅವರ ಅಭಿಪ್ರಾಯ ಏನಿತ್ತು ಎಂಬುದರ ಬಗ್ಗೆ ಏಕೆ ಮರೆಮಾಚುತ್ತಿದ್ದೀರಾ? ನಿಮ್ಮ ಅನೇಕ ಲೇಖನಗಳು ವಿಶ್ವೇಶ್ವರಭಟ್ಟರನ್ನು ಹೀಯಾಳಿಸಲೆಂದೇ ಬರೆದದ್ದಾಗಿವೆ. ಬೀದಿಗಳಲ್ಲಿ ಒಬ್ಬರಮೇಲೆ ಇನ್ನೊಬ್ಬರು ಕಲ್ಲು ಎಸೆದು ಹೊಡೆದಾಡುವುದಕ್ಕಿಂತ ಮಾತುಕತೆ, ಚರ್ಚೆಗಳ ಮೂಲಕ ಬಗೆಹರಿಸುವುದು ಒಳ್ಳೆಯದಲ್ಲವೇ? ಅಂತಹಾ ಒಂದು ಚರ್ಚೆಗೆ ವಿಜಯಕರ್ನಾಟಕ ವೇದಿಕೆ ಒದಗಿಸಿ ಸಾಮಾಜಿಕ ಜವಾಬ್ದಾರಿಯನ್ನು ಮೆರೆದಿದೆ.
ಮತ್ತೊಬ್ಬರನ್ನು ಬಯ್ಯುವುದನ್ನೇ ಮುಖ್ಯ ಉದ್ದೇಶವಾಗಿ ಹೊಂದಿದ ಲೇಖನಗಳಿಂದ ಯಾವುದೇ ಉಪಯೋಗ ಇಲ್ಲ. ಅದು ವಿಷಯ ಸಮರ್ಥನೆಯೂ ಅಗುವುದಿಲ್ಲ.
-ಶಶಾಂಕ್, ನ್ಯೂ ಜೆರ್ಸಿ.
ಸನ್ಮಾನ್ಯ ಶಶಾಂಕ್ ನ್ಯೂ ಜೆರ್ಸಿಯವರೆ,
ನೀವು ಯಾವ ದಿನೇಶ್ ಕುಮಾರ್ರನ್ನು ಉದ್ದೇಶಿಸಿ ಬರೆದಿದ್ದೀರೋ ಗೊತ್ತಾಗಲಿಲ್ಲ. ಅದು ನಾನೇ ಇದ್ದಿರಬಹುದು ಅನಿಸಿ ಈ ಪ್ರತಿಕ್ರಿಯೆ ನೀಡುತ್ತಿದ್ದೇನೆ. ನಾನು ಈಗಾಗಲೇ ಸ್ಪಷ್ಟಪಡಿಸಿದಂತೆ ಸುದ್ದಿಮಾತುಗೂ ನನಗೂ ಸಂಬಂಧವಿಲ್ಲ.
ಸುದ್ದಿಮಾತನ್ನು ನಾನು ಓದುತ್ತೇನೆ, ಆಗಾಗ ಪ್ರತಿಕ್ರಿಯಿಸುತ್ತೇನೆ, ಅಷ್ಟನ್ನು ಬಿಟ್ಟರೆ ಅದರ ಕುರಿತಾಗಿ ಹೆಚ್ಚೇನೂ ನನಗೆ ಗೊತ್ತಿಲ್ಲ.
ನನ್ನ ಬ್ಲಾಗ್ ದೇಸೀಮಾತು. ಅಲ್ಲಿನ ಲೇಖನಗಳ ಕುರಿತು ಅಲ್ಲೇ ಚರ್ಚೆ ಮಾಡಬಹುದು. ಅವಕಾಶವಾದಾಗ ಬನ್ನಿ.
ಇನ್ನು ತಾರಿಣಿಯವರ ಪತ್ರವನ್ನು ಅನುಮತಿಯಿಲ್ಲದೆ ಬಳಸಿಕೊಂಡ ವಿಜಯಕರ್ನಾಟಕ ಧೋರಣೆ ತಪ್ಪು. ಇಂಥದ್ದನ್ನು ಯಾರು ಮಾಡಿದರೂ ಅದು ತಪ್ಪೇ. ಹೀಗಾಗಿ ಸುದ್ದಿಮಾತು ಅಭಿಪ್ರಾಯಗಳಿಗೆ ನನ್ನ ಸಹಮತವಿದೆ.
Sariyaagi barediddeeri. Oppide. Idannu saarvajanikara gamanakke tandaddakke neevu abhinandaneeyaru. Patrikegala mele inthahaddondu haddina kannu beku.
Aadare ee lekhanada headline maatra nimma manassalliruva kolakannu horagedahuttide anthaloo anisittu
Post a Comment