Tuesday, November 18, 2008

ವಿಕದಲ್ಲಿ ತಾರಿಣಿ ಪತ್ರ, ಸಮಜಾಯಿಷಿ

ಯೆಸ್. ವಿಜಯ ಕರ್ನಾಟಕ ಸಂಪಾದಕರು ತಾರಿಣಿ ಚಿದಾನಂದ ಅವರ ಪತ್ರವನ್ನು ಪ್ರಕಟಿಸಿದ್ದಾರೆ. ಅದರೊಂದಿಗೆ ತಾವು ಲೇಖನವನ್ನು ಪ್ರಕಟಿಸಿದ್ದಕ್ಕೆ ಸಮಜಾಯಿಷಿ ನೀಡಿದ್ದಾರೆ. ಓದುಗರೊಬ್ಬರು ಗಮನಕ್ಕೆ ತಂದರು ಎಂಬ ಕಾರಣಕ್ಕೆ ಇವರು ಏಕಾಏಕಿ ಮುಊಲ ಲೇಖಕರ ಒಪ್ಪಿಗೆ ಇಲ್ಲದೆ ಪ್ರಕಟಿಸುವುದು ಎಷ್ಟು ಸರಿ? ಲೇಖನ ಒಂದು ಕೃತಿಯಿಂದ ಆಯ್ಕೆಮಾಡಿಕೊಂಡಿದ್ದು. ಇಡೀ ಕೃತಿಗೆ ಒಂದು ಬಂಧ ಇರುತ್ತೆ. ಅಲ್ಲಿಯ ಬರಹಗಳನ್ನು ಬಿಡಿಯಾಗಿ ಓದಿ, ಯಾವುದೋ ಒಂದು ವಿಚಾರದ ಬಗ್ಗೆ ಕುವೆಂಪು ಧೋರಣೆ ಇಂತಹದಿತ್ತು ಎಂದು ಒಂದು ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ.
ಬ್ರಿಟಿಷರು ಈ ಭಾರತಕ್ಕೆ ಬರದೇ ಇದ್ದಿದ್ದರೆ ತಾವು ಯಾವುದೋ ಮನೆಯಲ್ಲಿ ಸಗಣಿ ಬಾಚುವ ಕೆಲಸಕ್ಕೆ ಸೀಮಿತಗೊಳ್ಳಬೇಕಿತ್ತು ಎಂಬುದನ್ನೂ ಕುವೆಂಪು ಮತ್ತೊಂದು ಸಂದರ್ಭದಲ್ಲಿ ಹೇಳುತ್ತಾರೆ. ಹಾಗಂತ ಅದೊಂದೆ ವಾಕ್ಯವನ್ನು ಹಿಡಿದುಕೊಂಡು, ಕುವೆಂಪು ವಸಾಹತುಶಾಹಿ ಪರವಾಗಿದ್ದರು ಎಂದು ಹೇಳಲಾಗುವುದಿಲ್ಲ.
ಇದೆಲ್ಲಕ್ಕಿಂತ ಮುಖ್ಯವಾಗಿ, ತಾರಿಣಿಯವರಿಗೆ ಮತಾಂತರ ಚರ್ಚೆಯಲ್ಲಿ ತಮ್ಮ ಬರಹ ಪ್ರಕಟವಾಗಿದ್ದರ ಬಗ್ಗೆಯೇ ಬೇಸರ ಇದೆ. ಅನೇಕರಿಗೆ, ಒಂದು ಪತ್ರಿಕೆ, ಒಂದು ಸಂವಾದದ ಜೊತೆ ಗುರುತಿಸಿಕೊಳ್ಳಲು ವಿರೋಧ ಇರುತ್ತದೆ. ಸಂಪಾದಕರಾದವರು ಅಂತಹ ಭಾವನೆಗಳಿಗೆ ಬೆಲೆ ಕೊಡಬೇಕಾಗುತ್ತದೆ. ಯಾರೋ ಓದುಗರು ಗಮನಕ್ಕೆ ತಂದರು ಎಂದು ಬರಹವನ್ನು ಪ್ರಕಟಿಸಿಬಿಟ್ಟರೆ? ತಾರಿಣಿಯವರೇನು ಯಾವುದೋ ದೂರದ ದೇಶದಲ್ಲಿದ್ದರೆ? ಮೈಸೂರಿನ ಉದಯರವಿಯಲ್ಲಿದ್ದಾರೆ. ಒಂದು ದೂರವಾಣಿ ಕರೆ ಮಾಡಿ ಒಪ್ಪಿಗೆ ಕೇಳಬಹುದಿತ್ತು. ಸಂಪಾದಕರಿಗೆ ಲೇಖಕರ ಬಗ್ಗೆ ಇರುವ ಈ taken- for -granted ವರ್ತನೆಯ ಬಗ್ಗೆಯೇ ಅನೇಕರಿಗೆ ಬೇಸರ ಇದೆ.

8 comments:

Anonymous said...

It is an irresponsible explanation by an editor of a reputed daily.

Anonymous said...

yaav seemeya reputed editor bidri. namma kannada daily editorgalige reputation yellide? kannada prabha editorge kumarswmi chela aago bharate, jds paalige kp pamplet. prajavani editorge bjp mouthpiece aago bayake.kp andre planted journalistagalinda tumbi hogide. bhattaru helikeli sangh parivarad hogalu bhattaru.aa bagge chatche madode waste.

Anonymous said...

ಈ ಕಮಂಗಿ ಭಟ್ಟನ ಕಿತಾಪತಿಗಳು ಒಂದೆರಡಲ್ಲ.

Anonymous said...

what a nonsense debate is going on here. I think you dont have better things to do
_ Padmanabha H.L.

Anonymous said...

Yaakralaa, karubutteeri? Nimage bere kasubu ilvaa? bahala cheap rated debate naditaa ide. Shame to you.

Anonymous said...

Somyere

idu kurubava prashne alla. javaabdaariyuta sthaanadalliro patrike heege maadabaradittu. Adara bagge charche aadre adara bagge 'whats going on here..shame' ityaadi yaake helabeko artha aagthaa illa. Haagene kelavaru 'kamangi, kithaapathi, tarle' ityaadi pada balasi charcheya mattavannu keelugolisddaare endu oppikolluttene. Aadare charche nadeyuttiruvudu ondu mukhya vichaarada bagge...Tamage anukoolavaaguva niluvannu prathipaadisalu patrikegalu lekhakara anumathi illade avara abhipraaya prakatisuvudu sanna tappenalla...

Unknown said...

ಎಲ್ಲೋ ಯಾರೋ ಎಸ್ಎಂಎಸ್ ಕಳಿಸಿದವರ ಹೆಸರನ್ನೆಲ್ಲಾ ಹಾಕಿ ಪುಟಗಟ್ಟಲೆ ಬರೆಯುವ ಭಟ್ಟರು, ತಾರಿಣಿ ಪುಸ್ತಕದ ಪತ್ರ ಕಳಿಸಿದ ಓದುಗ ಮಹಾಶಯರ ಹೆಸರನ್ನೇಕೆ ಹಾಕಿಲ್ಲ? ಕನಿಷ್ಠ ಆ ಲೇಖನದ ಕೆಳಗಾದರೂ ಪ್ರಕಟಿಸಬಹುದಿತ್ತಲ್ಲ? ಇಲ್ಲೇ ಇರೋದು ವಿಷಯ. ಅದು ಓದುಗರು ಕಳಿಸಿದ್ದಲ್ಲ, ಬದಲಾಗಿ ಭಟ್ಟರ ಸಖ ಸಿಂಹನ ಕಿತಾಪತಿ ಎಂಬುದಕ್ಕೆ ಇದಕ್ಕಿಂತ ನಿದರ್ಶನ ಇನ್ನೇನು ಬೇಕು ಅಲ್ಲವೆ?

Anonymous said...

ಲಂಕೆಶ್ ಪತ್ರಿಕೆಯಲ್ಲಿಯೂ ಭಟ್ಟರಿಗೆ ಸರಿಯಾಗಿ ಉಗಿದಿದ್ದಾರೆ. ಮಾನ ಹೋದ ಮೇಲೆ ಈ ಪತ್ರ ಪ್ರಕಟವಾಗಿದೆ.