ನಿರೀಕ್ಷಿಸಿದಂತೆ ಭೈರಪ್ಪನಿಂದ ಮತಾಂತರ ಸಂವಾದಕ್ಕೆ ಉಪಸಂಹಾರವಾಗಿದೆ. ವಿಶ್ವೇಶ್ವರ ಭಟ್ಟರು ಎಂದಿನಂತೆ ತಮ್ಮ ಬುದ್ಧಿಯನ್ನು ತೋರಿಸಿದ್ದಾರೆ. ಭೈರಪ್ಪನ ಆರಂಭದ ಬರಹಕ್ಕೆ ಅನೇಕರು ಪ್ರತಿಕ್ರಿಯೆ ವ್ಯಕ್ತಪಡಿಸಿ ಸಂವಾದದಲ್ಲಿ ಭಾಗವಹಿಸಿದ್ದರು. ಅವರಲ್ಲಿ ಅನೇಕರ ಪ್ರಶ್ನೆಗಳನ್ನು, ಆಲೋಚನೆಗಳನ್ನು 'ದೂರು ದಾಖಲಿಸಿಕೊಳ್ಳುವ ಪೊಲೀಸರ ಮಾತಿಗೆ' ಹೋಲಿಸಿ ಎಂದಿನಂತೆ ತಮ್ಮ ವಿತಂಡವಾದವನ್ನು ಮುಂದುವರಿಸಿದ್ದಾರೆ. ಪ್ರಗತಿಪರ ಲೇಖಕರು ಸಂವಾದದ ಹಾದಿಯಲ್ಲಿ ಎತ್ತಿದ ಬಹುಮುಖ್ಯ ಪ್ರಶ್ನೆ - ದಲಿತರು ಹಿಂದೂ ಧರ್ಮದ ಭಾಗವೇ ಅಲ್ಲದಿರುವಾಗ, ಅವರು ಕ್ರೈಸ್ತ ಧರ್ಮ ಅಪ್ಪಿಕೊಂಡರೆ ಅದು ಮತಾಂತರವಾಗುವುದು ಹೇಗೆ? ಭೈರಪ್ಪನ ಸುದೀರ್ಘ ಉಪಸಂಹಾರದಲ್ಲಿ ಈ ಪ್ರಶ್ನೆಗೆ ಉತ್ತರವಿಲ್ಲ.
ಭೈರಪ್ಪನನ್ನೂ ಒಳಗೊಂಡು ಹಿಂದೂ ಧರ್ಮದ ಕಟ್ಟಾಳುಗಳು ಎಂಬಂತೆ ವರ್ತಿಸುತ್ತಿರುವ ಬಹುತೇಕರು - ಯಾರು ಮುಸಲ್ಮಾನರಲ್ಲವೋ, ಯಾರು ಕ್ರೈಸ್ತರಲ್ಲವೋ, - ಅವರನ್ನೆಲ್ಲ ಹಿಂದುಗಳೆಂದು ಸಾರುತ್ತಾರೆ. (ಜೈನ, ವೀರಶೈವ, ಬೌದ್ಧ ಧರ್ಮಗಳನ್ನೂ ಹಿಂದೂ ಧರ್ಮದ ಅಂಗಗಳೆಂದೇ ಇವರ ವಾದ. ಈ ಆಲೋಚನೆಯನ್ನು ಪ್ರಶ್ನಿಸುವುದು ಭೈರಪ್ಪನವರ ಪ್ರಕಾರ ಅನೈತಿಕ.)
ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾದ ಸಂಗತಿ ಎಂದರೆ, ಇಂಡಿಯಾದಲ್ಲಿ ತಮ್ಮನ್ನು ಹಿಂದುಗಳೆಂದು ಒಪ್ಪಿಕೊಂಡವರು . ಅವರು ವರ್ಣಾಶ್ರಮ ಪದ್ಧತಿಯಲ್ಲಿ ನಂಬಿಕೆ ಇದ್ದವರು. ಈ ದೇಶದ ಬುಸಂಖ್ಯಾತ ಶೂದ್ರರ ಮೇಲೆ -
'ಹಿಂದೂ'ಗಳೆಂಬ ಆರೋಪವನ್ನು ವ್ಯವಸ್ಥಿತವಾಗಿ ಹೇರಲಾಗಿದೆ.
ಊರ ಮುಂದಿನ ಮಾರಮ್ಮ, ಗುಡ್ಡದ ಮೇಲಿನ ವೀರಭದ್ರ, ಮಲೆಯ ಮಹದೇಶ್ವರ..ಹೀಗೆ ಸ್ಥಳೀಯ ಆರಾಧ್ಯ ದೈವಗಳಿಗೆ ನಡೆದುಕೊಂಡು ಬರುತ್ತಿದ್ದ ಶೂದ್ರರನ್ನೆಲ್ಲ ಕಾಲಾನುಕ್ರಮದಲ್ಲಿ ಹಿಂದೂಗಳೆಂದು ಕರೆಯಲಾಯಿತು. ಅವರಿಗೆ ವರ್ಣಾಶ್ರಮ, ಅದರ ಹಿಂದಿನ ಹುನ್ನಾರಗಳು ಅರ್ಥವಾಗಲೇ ಇಲ್ಲ. ಅದೆಲ್ಲವೂ ಅರ್ಥವಾಗದಿರಲೆಂದು ಅಕ್ಷರ ಜ್ಞಾನವನ್ನು ನಿರಾಕರಿಸಿದರು. ಹಾಗಾಗಿ ಯಾವುದೇ ಶೂದ್ರ ಕ್ರೈಸ್ತ ಧರ್ಮ ಸ್ವೀಕರಿಸಿದರೆ, ಅದು ಮತಾಂತರವಾಗುವುದಿಲ್ಲ. ಹಾಗಾಗಿ ಭೈರಪ್ಪನ ವಾದದ ಮುಊಲ ಆಧಾರವೇ ಶಿಥಿಲಗೊಳ್ಳುತ್ತದೆ.
ಭೈರಪ್ಪ ತಮ್ಮ ಉಪಸಂಹಾರದಲ್ಲಿ ಅಸ್ಪೃಶ್ಯತೆ ಕುರಿತು ಮಾತನಾಡಿದ್ದಾರೆ. ಅನಿಷ್ಟ ಪದ್ಧತಿ ವಿರುದ್ಧ ಮೇಲ್ವರ್ಗದ ಜನತೆಯೇ ಬಹಳವಾಗಿ ಹೋರಾಡಿದ್ದಾರಂತೆ. ಸಂವಿಧಾನದಲ್ಲಿ ಅಸ್ಪೃಶ್ಯತೆ ವಿರುದ್ಧದ ಕಾನೂನಿಗೆ ಅಂಬೇಡ್ಕರ್ ಗಿಂತ ಮೇಲ್ವರ್ಗದವರ ಪಾತ್ರವೇ ದೊಡ್ಡದು ಎಂಬರ್ಥದಲ್ಲಿ ಮಾತನಾಡಿದ್ದಾರೆ. ಮಾತು ಮುಂದುವರೆಸಿ, ಸದ್ಯ ಅಸ್ಪೃಶ್ಯತೆ ಕೇವಲ ಗ್ರಾಮೀಣ ಮಟ್ಟದಲ್ಲೆಲ್ಲೋ ಸಣ್ಣದಾಗಿ ಚಾಲ್ತಿಯಲ್ಲಿದ್ದು, ಅದನ್ನು ವಿದ್ಯಾವಂತ ದಲಿತರು ಉತ್ಪ್ರೇಕ್ಷೆ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಈ ಮಾತಿನಿಂದ ಸ್ಪಷ್ಞವಾಗುವ ಒಂದು ಅಂಶವೆಂದರೆ, ಭೈರಪ್ಪನಿಗೆ ವಾಸ್ತವ ಜ್ಞಾನ ಕಡಿಮೆ.
ಭೈರಪ್ಪನಿಗೆ ಅಸ್ಪೃಶ್ಯತೆ ಎಲ್ಲಿ ಹೆಚ್ಚು ಚಾಲ್ತಿಯಲ್ಲಿದೆ ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿ ಇದ್ದರೆ, ತಮ್ಮ ದೀರ್ಘ ಲೇಖನವನ್ನು ಪ್ರಕಟಮಾಡಿದ ವಿಜಯ ಕರ್ನಾಟಕ ಕಚೇರಿಯನ್ನೊಮ್ಮೆ ಭೇಟಿ ನೀಡಲಿ. ಅಲ್ಲಿ ಯಾವ ಜಾತಿಯವರಿಗೆ ಹೆಚ್ಚಿನ ಮಾನ್ಯತೆ ಇದೆ, ಅಲ್ಲಿರುವ ದಲಿತರ ಸಂಖ್ಯೆ ಎಷ್ಟು ಎಂಬ ಸಂಗತಿಗಳನ್ನು ಕೊಂಚ ವಿಚಾರಿಸಲಿ. ಹಾಗೆಯೇ ಎಲ್ಲಾ ಪತ್ರಿಕಾಲಯಗಳಿಗೆ ಹೋಗಿ ಬನ್ನಿ, ಆಯಕಟ್ಟಿನ ಜಾಗಗಳಲ್ಲಿರುವವರ್ಯಾರು? ಅವರ ಜಾತಿ ಯಾವುದು? ಸ್ವತಂತ್ರ ಬಂದು ಇಷ್ಟು ವರ್ಷವಾದರೂ, ಒಬ್ಬೇ ಒಬ್ಬ ದಲಿತ ಮುಖ್ಯವಾಹಿನಿ ಪತ್ರಿಕೆಯ ಸಂಪಾದಕ ಹುದ್ದೆಗೆ ಏರಲು ಏಕೆ ಸಾಧ್ಯವಾಗಿಲ್ಲ ಎಂಬುದರ ಬಗ್ಗೆ ಯೋಚಿಸಿ ನೋಡಿ, ಆಗ ಕ್ರೂರವಾಗಿ ಚಾಲ್ತಿಯಲ್ಲಿರುವ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಗೋಚರಿಸಬಹುದು.
ಮುಖ್ಯವಾಗಿ, ವಿಜಯ ಕರ್ನಾಟಕದಲ್ಲಿ ಚರ್ಚೆ ಎಲ್ಲಿ ಆರಂಭವಾಗಿತ್ತೋ ಅಲ್ಲಿಗೆ ಬಂತು ನಿಂತಂತಾಗಿದೆ. ಹಾಗೆ ನೋಡಿದರೆ, ಇಡೀ ಚರ್ಚೆಗೆ ಉಪಸಂಹಾರವಾಗಬಲ್ಲ ಲೇಖನ ಬರೆದದ್ದು ಚಂದ್ರಶೇಖರ ಪಾಟೀಲರು. ಎಲ್ಲಾ ಜಾತಿಯವರು ಸದ್ಯ ಮಾಡಬೇಕಿರುವುದೇನು ಎಂಬುದನ್ನು ಸೂಚಿಸಿ ತಮ್ಮ ಲೇಖನ ಮುಗಿಸಿದ್ದರು. ಅದರೊಂದಿಗೆ ಸಂವಾದವೂ ಕೊನೆಗೊಂಡಿದ್ದರೆ, ಒಂದು ಅರ್ಥ ಇರುತ್ತಿತ್ತು. ಈಗ ಭೈರಪ್ಪನವರ ಮೊದಲ ಲೇಖನಕ್ಕೆ ಪ್ರತಿಕ್ರಿಯೆ ನೀಡಿದವರನ್ನು ಟೀಕಿಸಲು ಭೈರಪ್ಪನಿಗೆ ಒಂದು ಅವಕಾಶ ದೊರಕಿತು. ಆದರೆ ಭೈರಪ್ಪನ ಉಪಸಂಹಾರದಲ್ಲಿ ಎತ್ತಿದ ಅಂಶಗಳಿಗೆ ಪ್ರತಿಕ್ರಿಯಿಸಲು ಸಂವಾದದಲ್ಲಿ ಪಾಲ್ಗೊಂಡ ಇತರರಿಗಿಲ್ಲ.
Thursday, November 20, 2008
Subscribe to:
Post Comments (Atom)
22 comments:
I am neither a follower of Bhairappa nor a fan of VK. That said, it seems increasingly that this blog deserves to INGNORED as much as Bhairappa's views...I do not think i need to give reasons after reading this and some other posts..It has disappointed me very badly after raising a lot of hope in the beginning...
Yaako nimma chintane koncha daari tappida haage anista ide. Hinduvadigalu heluva 'hindu' padavannu sandehadinda nodabeke horatu ottaareyaagi hindu emba padada meleye sandeha taaluvudu sari endu nanaganisuvudilla. Nanaganisuva haage hindu emba pada 'pradeshavaachi'ye horatu 'janaangavaachi'yalla.
Neevu Bhairappanavara vaadavannu oppada haage naanu oppuvudilla. Adare adannu virodhisuttiruva nimma chintaneyalli khachitate kanuttilla.
pada balake sariyalla
pada balake sariyalla
ಹಿಂದೂ ಧರ್ಮದ ಹೆಸರಲ್ಲಿ ವೈದಿಕಶಾಹಿ ಶತ- ಶತಮಾನಗಳಿಂದ ದೇಶದ ಶೇ.80ರಷ್ಟು ಜನರನ್ನು ವಿದ್ಯೆ, ಸಾಮಾಜಿಕ ಸ್ಥಾನಮಾನ, ರಾಜಕೀಯ ಅಧಿಕಾರ, ಕೊನೆಗೆ ಸಾಹಿತ್ಯ, ಪತ್ರಿಕೋದ್ಯಮದಂತಹ ವಲಯಗಳಲ್ಲಿ ಕೂಡ ಅನೂಚಾನವಾಗಿ ತಮ್ಮ ಅಡಿಯಾಳುಗಳನ್ನಾಗಿ ಮಾಡಿಕೊಂಡುಬಂದಿರುವ ಜನರಿಗೆ ಆ ಧರ್ಮದ ಬಗ್ಗೆ ವಸ್ತುನಿಷ್ಠವಾಗಿ ನೋಡುವುದು ಹೇಗೆ ಸಾಧ್ಯ ಬಿಡಿ. ತನ್ನ ಪತ್ರಿಕೆಯಲ್ಲಿ ಕೆಲಸಕ್ಕೆ ತೆಗೆದುಕೊಳ್ಳುವಾಗ ಕೂಡ ಜಾತಿಯನ್ನೇ ಅದರಲ್ಲೂ ಹವ್ಯಕ ಬ್ರಾಹ್ಮಣರೇ ಬೇಕು ಎನ್ನುವ ಭಟ್ಟರ ಮೈ- ಮನ ಇಂಚಿಂಚೂ ಜಾತಿ ಮತ್ತು ಧರ್ಮದ ದುರ್ಗಂಧವೇ ತುಂಬಿಕೊಂಡಿರುವಾಗ ಇಂತಹದ್ದೆಲ್ಲ ಸಹಜವೇ ಬಿಡಿ. ನಮ್ಮ ಗೆಳೆಯರು ಹಲವರು ಈ ಸಂವಾದದಲ್ಲಿ ಸಾಕಷ್ಟು ಬ್ರಾಹ್ಮಣಶಾಹಿ ವಿರೋಧಿ ದನಿಗಳಿಗೆ ಅವಕಾಶ ನೀಡಿದ್ದನ್ನೇ ಏನೋ ಮಹಾ ಬದಲಾವಣೆ ಎಂದುಕೊಂಡಿದ್ದವರಿಗೆ ಈಗ ಭಟ್ಟರ ನಿಜವಾದ ವರಸೆ ಗೊತ್ತಾಗಿದೆ ಅಷ್ಟೆ. ಈ ಸಂವಾದದಲ್ಲಿ ಬಂದ ಮತಾಂತರ ವಿರೋಧಿ ಮತ್ತು ಹಿಂದೂ ಧರ್ಮದ ವರ್ಣಾಶ್ರಮ ಪದ್ಧತಿ ಪರ ಅಭಿಪ್ರಾಯಗಳನ್ನೇ ಮುದ್ರಿಸಿ ಒಂದು ಕಿರುಹೊತ್ತಿಗೆ ಮಾಡಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ಅದನ್ನೆಲ್ಲಾ ಕಾನೂನು ಮಾಡಲು ಕೇಳಿದರೂ ಈಗ ಅಚ್ಚರಿಯಿಲ್ಲ! ಕಾದು ನೋಡಿ...
ನಿರೀಕ್ಷಿಸಿದಂತೆಯೇ ವಿಕದ ಭಟ್ಟರು ಬೈರಪ್ಪನವರ ಬೈರಿಗೆಯಿಂದಲೇ ಸಂವಾದವನ್ನು ಕೊನೆಗೊಳಿಸಿದ್ದಾರೆ.ಸಂಪಾದಕರೇ ಸಮನ್ವಯಕಾರರಾಗಿ ಉಪಸಂಹಾರ ಮಾಡಬಹುದಿತ್ತು . ಏನೇ ಆದರೂ ಬೈರಪ್ಪನವರನ್ನು ಭಟ್ಟರು ಹೇಗೆ ಬಿಟ್ಟುಕೊಟ್ಟಾರು?... ಪತ್ರಿಕೋದ್ಯಮವನ್ನು ಹರಾಜಿಗಿಟ್ಟವರಿಂದ ಯಾವ ಮೌಲಿಕ , ನೈತಿಕ ಪತ್ರಿಕೋದ್ಯಮ ನಿರೀಕ್ಷಿಸಲು ಸಾದ್ಯ ಅಲ್ವೆ?
-
It's shame of part of journalism with VK editor not writing up any thing at all for the serious (?) debate in the recet times!As an editor, VK should have expressed its stand or should have upheld the newspaper's policy in the end. But, the editor remained mute giving all the rights to saffronist Bhyrappa. (Of course, readers already knoew that VK is the mouth piece of Hinduism). However, it once again proved what people think. It remained unchanged as far as the policy is concerned. Bhyrappa finally proved that he is good imaginator. The words he quoted (while giving reference as to how the reservation is being "misused" by Dalits) by an illiterate one are nothing but his own fabrications! He indirectly, considered Dalits as perpetrators in India and wanted them to be Hindus who they disagree from many a decades. Anyway let people like Bhyrappa hoarseBut, you people keep doing such things that would at least create some awareness among common people.
ನೀವೂ ಒಂದು ಸಂವಾದ ಪ್ರಾರಂಭಿಸಿ. ನಿಮಗೆ ಬೇಕಾದವರಿಂದಲೇ ಲೇಖನಗಳನ್ನು ಬರೆಸಿ. ಸುಮ್ಮನೆ ವಿಜಯ ಕರ್ನಾಟಕವನ್ನು ಟೀಕಿಸುವುದನ್ನೇ ಉದ್ಯೋಗ ಮಾಡಿಕೊಳ್ಳುವ ಬದಲು, ಉತ್ತಮ ಸಂವಾದ ಹೇಗಿರಬೇಕೆಂದು ಮಾಡಿ ತೋರಿಸಿಕೊಡಿ ನೋಡೋಣ. ತಾನೂ ಮಾಡುವುದಿಲ್ಲ, ಮಾಡುವವರನ್ನು ಬಿಡುವುದಿಲ್ಲ ಎಂಬಂತಿದೆ ನಿಮ್ಮ ಚಾಳಿ. ನಿಮ್ಮ ಬ್ಲಾಗಿನಲ್ಲೋ, ನಿಮ್ಮವರದೇ ಪತ್ರಿಕೆಗಳಾದ ವಿಕ್ರಾಂತ ಕರ್ನಾಟಕ, ಲಂಕೇಶ್ ಪತ್ರಿಕೆಯಲ್ಲೋ ಸಂವಾದ ನಡೆಸಬಹುದಲ್ಲಾ? ನಾನಂತೂ ಒಳ್ಳೆಯದು ಎಲ್ಲಿದ್ದರೂ ಬಂದು ಓದುತ್ತೇನೆ.
Nimdu lekhana bhaala chennaagaite saa..Tumbaane chenaaagaite. Eshtu chennagaite andre namma VK nalli Prapat Simma saar bareetarallaa ashte chennaagide. Simma saar saabarella kittodoru, bhayotpaadakaru anta bareetane iruttaare. Neevu Hindugalellaa kittoduru, shoshakaru, parama neecharu anta bareetaane irateeri saa. Nimma deptu aa Simaa saar avara deptu hechchu kadime onde saa. Ange bareetaane iri saa. Ee deshadalli ondu dodda kraanti aagtaiti saa..Obba Polisappa nimmange maataadtidru saa. Maatedare shatamaanagala shoshane antidru saa. Avara prateekaara manobhaava eshtittu andre kelavu ballla moolagala prakaara avara kaikelage hottepaadige dudiyo so called meljaatiyavara melella avara shatamaanada sedu saakashtu matti teersikondrante saar. chaaritrika nyaya nodi. adaralloo saakashtu hennu makkalu ee chaaritrika nyaalayadalli 'shikshe' padedrante saa. Ond dinaa enaaytandre saa chunaavane band bidtu. Namma polisappa rajeenaame kotru saa. Ondashtu kosaraaadi matte avaru neera haravara manegondu haara hidkondu hogi haaravara palty nalli ticket gittsokondru saa. Sotru saa. Eeega haravaru dayapaalisida gootada kaariktondu aaraamavaagiddaare saa. Antooo avaru janataa nyaayalayadalle nyaaya padedru saa. Andange saa, haaravara palty navare yaake saa ee reserve constituency nalli ellaa gellodu...haravara paalty nalli ninta dalitrellaa henge saa general constituency aadroo electaagodu...tale ella kettogaite saa...ange namma siddaramanna ond kaalakke nimmange maatadtidru saa. Monne nodteeni Dharmastaladall hogi angi bichchi posu kodtaare saa. Ange mattondinaa Kumbalagodinalli Balannanange ondu dye hodthu bitru saa. Matte ange mysorigodaaga Deshikendrarigoo ondu salaam saa...tale kettogide saa. nijakkoo tale kettogide saa...avarigalla nange...neevu, ee simma saaru, ee polisappa, sidramannantorella seri ee deshaana elli oyteeri anta bhaya agthaite saaa...innoo bareeri saa..oh marte bitte saaa..namma sidling meshtru nodi saa. ondu kaalakke neevu blog bardange kavana bareetidru saa. naavella aa kavana odi saa maimele bhoota sanchaara aadange kranti eduru nodthaa iddevu saa....Adre aa polisappanante ond dina sidlinga meshtru gootada kaaratkondu hodoru kavana bidi saa ondu letter to the editoroo bareyolla eega...neevu bareeri saa...bareeri
ನೀವು ಹೇಳಿದ "ದಲಿತ" ವ್ಯಕ್ತಿಗಳು ಬೌದ್ಧಿಕವಾಗಿ ದಲಿತರೋ, ಜಾತಿ ಪದ್ಧತಿಯಂತೆ ದಲಿತರೋ ತಿಳಿಯಲಿಲ್ಲ.
ದಲಿತರೊಬ್ಬರು ಯಾವುದೋ ಯಶಸ್ವೀ ಪತ್ರಿಕೆಯ ಪ್ರಧಾನ ಸಂಪಾದಕರಾಗಲು ಸಾಧ್ಯವಾಗದು ಎಂಬ ಚಿಂತನೆ ಬದಿಗಿಟ್ಟು ತಾವೇ ಏಕೆ ಒಂದು ಯಶಸ್ವೀ ಪತ್ರಿಕೆ ಪ್ರಾರಂಭಿಸಬಾರದು?
ವಿ.ಕ. ಬಹಳ ಹಳೆಯ ಪತ್ರಿಕೆಯೇನಲ್ಲ. ಹತ್ತು ವರ್ಷಗಳೊಳಗೇ ಒಂದು ಗೌರವಯುತ ಸ್ಥಾನ ಪಡೆದುಕೊಂಡಿದೆ. ಈಗ ಒಬ್ಬ ದಲಿತ ವ್ಯಕ್ತಿ ಪತ್ರಿಕೆ ಆರಂಭಿಸಿದರೂ ಕೂಡ, ಸರಿಯಾಗಿ ಬೆಳೆಸಿದಲ್ಲಿ, ಇನ್ನು ಕೆಲವೇ ವರ್ಷಗಳಲ್ಲಿ ನಂ. ೧ ಪತ್ರಿಕೆಯಾಗಬಹುದು. ಪತ್ರಿಕಾ ಸ್ವಾತಂತ್ರ್ಯಕ್ಕಂತೂ ಭಾರತದಲ್ಲಿ ಬೆಲೆಯಿದ್ದೇ ಇದೆ.
ಯೋಚಿಸಿ ನೋಡಿ..
ದಲಿತರಿಗೆ ಪತ್ರಿಕೋದ್ಯಮದಲ್ಲಿ ಉನ್ನತ ಸ್ಥಾನ ವಂಚಿತರು ಎಂಬ ಸುದ್ದಿ ಮಾತಿನ ವಾದದಲ್ಲಿ ಆರ್ಥವಿದೆ ಹರೀಶ್.ಅಲ್ಲಿ ಜಾತಿಯಲ್ಲಿ ದಲಿರೋ, ಬೌಧ್ದಿಕತೆಯಲ್ಲಿ ದಲಿತರೋ ಎಂಬ ಪ್ರಶ್ನೆ ಎತ್ತಿದ್ದೀರಿ. ಅಷ್ಠರಲ್ಲೇ ನಿಮ್ಮ ಮನಸ್ತಿತಿ ಎಂತಹೆದೆಂಬುದು ಅರ್ಥವಾಗುತ್ತೆ.ದಲಿತ ಎಷ್ಠೇ ಬುದ್ದಿವಂತನಿದ್ದರೂ ಮೇಲ್ವರ್ಗ ಅದರಲ್ಲೂ ಬ್ರಾಹ್ಮಣರು ಯಾವ ರೀತಿ ಅತ್ಯಂತ ವ್ಯವಸ್ಥಿತವಾಗಿ ತುಳಿದಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಾಸ್ತವ .ಸತ್ಯವನ್ನು ಒಪ್ಪಿಕೊಳ್ಳುವ ಹೃದಯ ವೈಶಾಲ್ಯತೆಯನ್ನು ಮೊದಲು ಬೆಳೆಸಿಕೊಳ್ಳೋಣ.. ಪತ್ರಿಕೆ ಮಾಡಿ ದಲಿತರನ್ನು ಮುಖ್ಯಸ್ಥರನ್ನಾಗಿಸಿ ಎಂಬ ಉಚಿತ ಸಲಹೆ ಯಾಕೆ?
harish nimmadu kolaku brahmana manasthiti aste.
vk bhattara bagge yake istu tale kedisikollabeku? avara buddi hagu nade egagale janarige tilidide. ivattala nale janare avarige buddi heli komuvaditanadinda dura maduva kala barabahudu allave?
Let the ghosts of Suddimaatu start a newspaper and appoint a Dalit editor. Let's see how the ciculation of the new paper will be.
Instead of blaming VK for everything start your own paper..
ree swami dalitanobba editor aadre nantar brahmanare hallu ginjtare. baduko kale chennagi gottu. kolaku manasthiti bidi.
ಇಲ್ಲಿ ಅನೇಕ ಅನಾಮಿಕರಿದ್ದೀರಿ. ಯಾರು ಯಾರೆಂದು ತಿಳಿಯುತ್ತಿಲ್ಲ. ಇರಲಿ.. ಎಲ್ಲರಿಗೂ ಸೇರಿಸಿ ಈ ಉತ್ತರ ಬರೆದಿದ್ದೇನೆ:
ನಾನು ಕೇಳಿದ ಪ್ರಶ್ನೆಯ ಉದ್ದೇಶ ಬೇರೆಯದೇ. ಬೌದ್ಧಿಕವಾಗಿ ದಲಿತರಾಗಿದ್ದರೆ (ಅವರು "ಹಿಂದುಳಿದ" ವರ್ಗದವರಿರಬಹುದು ಅಥವಾ "ಮುಂದುವರಿದ" ವರ್ಗದವರಿರಬಹುದು, ಅಲ್ಪಸಂಖ್ಯಾತರಿರಬಹುದು ಅಥವಾ ಬಹುಸಂಖ್ಯಾತರಿರಬಹುದು) ಒಳ್ಳೆಯ ಸಂಪಾದಕತ್ವವನ್ನು ನಿರೀಕ್ಷಿಸುವುದು ತಪ್ಪಾಗುತ್ತದೆ. ಹಾಗಾಗಿ ಅವರಿಗೆ ಯಾರೂ ಸಂಪಾದಕ ಹುದ್ದೆ ಕೊಡಲಾರರು. ಅಂಥವರು ಆ ಹುದ್ದೆ ನಿರೀಕ್ಷಿಸುವುದೇ ಮೊದಲ ತಪ್ಪು.
ಇನ್ನು ನಮ್ಮ ಸಮಾಜದಲ್ಲಿ ಇರುವ ಜಾತಿಯ ದಲಿತರು ವಿ.ಕ.ದ ಬಗ್ಗೆ ಅಸಮಾಧಾನ ಹೊಂದಿದ್ದಲ್ಲಿ ತಾವೇ ಒಂದು ಪತ್ರಿಕೆ ಹೊರತರಬಹುದು. ಅವರಲ್ಲಿ ಆ ಸಾಮರ್ಥ್ಯವಿದ್ದರೆ ಖಂಡಿತ ಪತ್ರಿಕೆ ಯಶಸ್ಸು ಗಳಿಸುತ್ತದೆ. ಇಲ್ಲವಾದರೆ ಹತ್ತರಲ್ಲಿ ಹನ್ನೊಂದನೆಯದಾಗುತ್ತದೆ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒಂದು ಸ್ಥಾನವನ್ನು ನಮಗೆ ಇನ್ನೊಬ್ಬರು ಬಿಟ್ಟುಕೊಡಲಿ ಎಂದು ಕಾಯುತ್ತ ಕೂರುವುದು ಮೂರ್ಖತನವಾಗುತ್ತದೆ. ಅದರ ಬದಲು ತಾವೇ ಪತ್ರಿಕೆ ಆರಂಭಿಸುವುದು ಒಳ್ಳೆಯದು. ಇದು ಪುಕ್ಕಟೆ ಸಲಹೆ ಎನಿಸಿದರೆ ಬಿಟ್ಟುಬಿಡಿ. ಹೌದು ಎನಿಸಿದರೆ ಕಾರ್ಯಗತವಾಗಿಸಲು ಪ್ರಯತ್ನಿಸಿ. ಒಳ್ಳೆಯದಾಗಲಿ.
Well done Suddimathu.
-Navaneetha Kumara
harish vchar keli nagu barutte. alla swami v.bhattare patrike maaleekaru anno haagide. yavudannoo vaidikaru madodilla. kattida mane serodaste kelsa. ee brahmanar network hegirutee andre suvarna chanellnalli bhatta waakpath. ravi belegerege bhatta saath. bhattanige maryade bitt ravi haath. vk dalli vabba dalitanigu avakash illa. janapar think madorige gate pass torisi aagide. samaya bandag dalitar kaalu hididu hudde gittiso jayamaan kel bhrahmanaraddu. swami omme yochisi nodi.
disgusting, divisive, castiest, ugly discussion going on here; never thought this blog would turn like this...
Saara Abbobakkar kooda VK yalli tanna lekhana poorthi yagi prakatsilla antha aaropisiddare.
jatyatheetha blog antha thilkondidde adre ega ondu pangadada blog antha thiliyithu. neevu nammma samajavannu jathi adharadalli berpadisuttidiri swamy yochisi bareyiri
ಹರೀಶ್ ಅವರೇ, ಬೌದ್ಧಿಕ ದಲಿತರಿಂದ ಒಳ್ಳೆ ಪತ್ರಿಕೆ ನಿರೀಕ್ಷಿಸೋದು ತಪ್ಪು ಅಂತೀರಲ್ಲ, ಇಲ್ಲೇ ’ದಲಿತ’ ಅನ್ನೋ ಪದಕ್ಕೆ ಕೆಳಸ್ತರದ ರ್ಥ ನೀವು ನೀಡುತ್ತಿದ್ದೀರಿ. ದಲಿತ ಅನ್ನುವ ಪದ ಅಜ್ಞಾನದ ಸೂಚಕವಾಗಿ ಬಳಸೋದನ್ನು ನಾನು ವಿರೋಧಿಸುತ್ತೇನೆ. ಆ ಪದ ಜೊತೆಗೆ ಅಸೋಸಿಯೇಟ್ ಆಗಿರೋ ಸಾಮಾಜಿಕ ತಿಳುವಳಿಕೆಯನ್ನು ತೊಡೆದು ಹಾಕಲು ನೂರಾರು ವರ್ಷಗಳ ಪ್ರಯತ್ನ ನಡೆದಿದೆ. ಗಾಂಧಿ ತನ್ನನ್ನು ಒಬ್ಬ ದಲಿತನೊಂದಿಗೂ ಸಮೀಕರಿಸಿಕೊಂಡು ನೋಡಿದಂತೆ ನಾವು ನೋಡುವ ಅಗತ್ಯ ಇದೆ.
ಸುದ್ದಿಮಾತು ಗೆಳೆಯರೇ, ನಿಮ್ಮ ಯೋಚನೆ ಸರಿ ದಾರಿಯಲ್ಲೇ ಇದ್ದರೂ ನೀವು ಅದನ್ನು ಪ್ರಸ್ತುತ ಪಡಿಸೋಕೆ ಬಳಸುತ್ತಾ ಇರೋ ಭಾಷೆ ಪದಗಳು ಒಟ್ಟು ನಿಮ್ಮ ಚಿಂತನೆಯನ್ನೇ ನಿಮಗೆ ತಿಳಿಯದಂತೆ ಡೈವರ್ಟ್ ಮಾಡ್ತಾ ಇದೆ ಎಂದು ನನ್ನ ನಂಬಿಕೆ.
ಗೆಳೆಯರೇ, ನಾವೆಲ್ಲರೂ ಇಂದಿನ ಬಿಕ್ಕಟ್ಟಿನ ಸ್ಥಿತಿಯಲ್ಲಿ ಭಾಷೆಯನ್ನು ತುಂಬ ಸಂಯಮದಿಂದ, ಜವಾಬ್ದಾರಿಯಿಂದ ಬಳಸಬೇಕಾಗಿದೆ.
-ಭಾರತಿ ಜಗದೀಶ್
Post a Comment