Monday, November 24, 2008

‘ಒಡ್ಡು ಒಡ್ಡಾಗಿ ಅಂದ್ರೆ ಏನು ರಂಗಣ್ಣಾ?

‘ಪವಾಡ ಸದೃಶ ಸಾಧನೆ ಎಂಬ ನ.೨೫ರ ಕನ್ನಡಪ್ರಭ ಸಂಪಾದಕೀಯ ಗಮನಿಸಿ:“ಕೆಲವೇ ವರ್ಷಗಳ ಹಿಂದೆ, ಒಡ್ಡು ಒಡ್ಡಾಗಿ ವರ್ತಿಸುತ್ತಾ ಮೈದಾನಕ್ಕಿಳಿದು ಒಂದು ರೀತಿಯಲ್ಲಿ ತಂಡದ ದೃಷ್ಟಿ ಬೊಟ್ಟಿನಂತೆ ಇದ್ದ ಮಹೇಂದ್ರ ಸಿಂಗ್ ಈಗ ತನ್ನ ವಿಚಿತ್ರ ಕೇಶಾಲಂಕಾರವನ್ನು ಬದಲಾಯಿಸಿಕೊಂಡು ಒಬ್ಬ ಸಂಭಾವಿತ-ಗಂಭೀರ ನಾಯಕರಾಗಿ ಬೆಳೆದು ನಿಂತಿದ್ದಾರೆ.ನೇರವಾಗಿ ಕನ್ನಡಪ್ರಭ ಸಂಪಾದಕರಿಗೆ ಪ್ರಶ್ನೆ ಕೇಳೋಣ: ಇಲ್ಲಿ ಬಳಸಿರುವ ‘ಒಡ್ಡು ಒಡ್ಡಾಗಿ ಅಂದ್ರೆ ಏನು ರಂಗಣ್ಣಾ?ಒಡ್ಡರು, ವಡ್ಡರು ಅಂದ್ರೆ ಅದೊಂದು ಜಾತಿ, ಸಾಧಾರಣವಾಗಿ ಕಲ್ಲು ಒಡೆಯುವ ಶ್ರಮಿಕ ಜನವರ್ಗ ಇದು. ಪರಿಶಿಷ್ಟಜಾತಿಗಳ ಪಟ್ಟಿಯಲ್ಲಿ ಈ ಜಾತಿಯ ಹೆಸರೂ ಇದೆ. ಈ ಸಮುದಾಯವನ್ನು ಬೋವಿ ಎಂದೂ ಸಹ ಕರೆಯುತ್ತಾರೆ. ಬಿರುಬಿಸಿಲಿನಲ್ಲಿ ಶ್ರಮದ ಕೆಲಸ ಮಾಡುವ ಜನ ಇವರಾದ್ದರಿಂದ ಸೂಟು, ಬೂಟು ಹಾಕಿಕೊಳ್ಳುವುದು ಸಾಧ್ಯವೆ? ಶಾಂಪೂವಿನಿಂದ ಕೂದಲು ತೊಳೆದುಕೊಂಡು ನೀಟಾಗಿ ಕ್ರಾಪ್ ಬಿಟ್ಟುಕೊಳ್ಳುವುದು ಸಾಧ್ಯವೆ? ಮುಖಕ್ಕೆ ಫೇರ್ ಅಂಡ್ ಲವ್ಲೀ, ಪಾಂಡ್ಸ್ ಪೌಡರ್ ಹಚ್ಚಿಕೊಂಡು ಕುಳಿತು ಕಲ್ಲು ಒಡೆಯುವುದು ಸಾಧ್ಯವೆ? ಇನ್ನು ಬಾಡಿ ಡಿಯೋಡರೆಂಟು, ಸೆಂಟು ಇತ್ಯಾದಿಗಳ ಕತೆ ಹೇಳುವ ಅವಶ್ಯಕತೆ ಇಲ್ಲ ಅನಿಸುತ್ತೆ.ಯಾರಾದರೂ ಗಲೀಜಾಗಿ ಕಂಡ್ರೆ ನಮ್ಮ ಸೋಕಾಲ್ಡ್ ಸಭ್ಯ ಜನರು ವಡ್ರಂಗೆ ಇದ್ದಾನೆ ನೋಡು ಎನ್ನುತ್ತಾರೆ. ವಡ್ಡರು ಗಲೀಜು ಜನ ಅನ್ನೋದು ಇಂಥವರ ಅಭಿಪ್ರಾಯ. ಹೀಗೆ ಇಂಥ ಜನವರ್ಗಗಳು ಗಲೀಜು ಮಾಡಿಕೊಳ್ಳದೆ ಹೋಗಿದ್ದರೆ, ಕೆಲಸ ಮಾಡದೆ ಇದ್ದರೆ ಈ ಜಗತ್ತು ಹೇಗಿರುತ್ತಿತ್ತು ಎನ್ನುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂಬುದನ್ನು ಈ ಸಭ್ಯರು ಮರೆಯುತ್ತಾರೆ.ಆದರೆ ರಂಗಣ್ಣಾ ನಿಮ್ಮ ಪತ್ರಿಕೆಯ ಸಂಪಾದಕೀಯದಲ್ಲೇ ಯಾಕೆ ಈ ಪ್ರಯೋಗ ಬಂತು?ನೀವು ಮೇಲೆ ಹೇಳಿದ ಸಭ್ಯರ ಪೈಕಿ ಅಲ್ಲ ಅಂತ ನಮಗೆ ಗೊತ್ತು. ಗುಣ-ಅವಗುಣ ಹೇಳಲು ಜಾತಿಯ ಹೆಸರನ್ನು ಬಳಸಿಕೊಳ್ಳಲೇಬೇಕಾ? ಅದು ಅಮಾನವೀಯ ಅಲ್ಲವೆ? ಬಳಕೆಯಲ್ಲಿ ಬಂದಿದೆ ಕಣ್ರೀ ಅಂತ ಕೆಲವರು ಇಂಥದ್ದನ್ನು ಸಮರ್ಥಿಸಿಕೊಳ್ಳುತ್ತಾರೆ. ಇವತ್ತಿನ ಆಧುನಿಕ ಯುಗದಲ್ಲೂ ಬಳಕೆಯಲ್ಲಿ ಬಂದಿದೆ ಎಂಬ ಕಾರಣಕ್ಕೆ ಇಂಥ ಅಸಹ್ಯಗಳನ್ನೆಲ್ಲ ಮುಂದುವರೆಸಿಕೊಂಡು ಹೋಗಬೇಕಾ? ಇಂಥ ತಪ್ಪುಗಳನ್ನು ತಿದ್ದಿಕೊಳ್ಳುವಿರಾ ರಂಗಣ್ಣಾ?

14 comments:

ತಿಳಿಗಣ್ಣ said...

೩. punk (ನಾ) 1) ಒಂದು ಬಗೆಯ ಒರಟು ರಾಕ್ ಸಂಗೀತ 2) ರಾಕ್ ಸಂಗೀತದ ಪ್ರೇಮಿ 3) ಪುಂಡ, ಪೋಕರಿ, ರೌಡಿ, ಒರಟ, ವಡ್ಡ

ಎಂದು ಪ್ರೊ.ಜಿ.ವೆಂಕಟಸುಬ್ಬರನವರ ನಿಘಂಟು ತಿಳಿಸುವುದು.

’ವಡ್ಡೊಡ್ಡಾಗಿರು’ ಅಂದರೆ ಬಲು ಒರಟಾಗಿರು ಎಂದು ಬಳಕೆಯಲ್ಲಿ ಅರ್ಥ.

Anonymous said...

ranganna ge bareyalu barolla.. avanoo lancha kottu editor aagiddaane. aata baree maataadtaane. baree bogale bidtaane. avana jote 10 nimish idre 100 sullu kelabahudu

Anonymous said...

Kannada Prabha office nalli Ranganna nige Burude Ranganna antaane kareyodu, gottilvaa?

Anonymous said...

nimage jaatiya bhoota hididide swamee. Eno Oddu Oddaagi androo nimage Vadrange antane kaanisuttade. Bahuteka mandige haagondu aa pada prayogakke jaatiya nantide anta gottiralaaradu. Swataha Vaddara jaatiyavarige gottiralaaradu. Eegantu avaralli bahalashtu mandi elite kooda aagiddare bidi. Antoo alliruva jaati soochakavannu neevu jagajaaheeru golisiddeeri. Neevu sari illaari...

Anonymous said...

dear friends,
Some commentators are taking extreme positions on Ranganath, editor of KP.
friends, let us not jump into the act of passing judgements on any editor for the mistake of using a word in his editorial. he may be biased in his stands on several issues or inclined to blow up issues out of proportion, but those acts do not deserve a comment calling him ' Ranga does not know how to write'.
I hope a few months ago there was his column. every week he used to interview one person. his questions were to the point and crisp. he is basically a good writer, a good reporter and because of that he is a good editor.
i bet no reader spends more time on any Kannada paper than he spends reading Kannada Prabha. He gives readable stuff. we should accept it. every development is added with readability.
Coming to the issue of Vaddaru, it is a mistake on the part of the editor and the paper. it is understood that the writer (generally the editor does not write all editorials) was not intended to insult any caste in his write-up. this fact clearly shows that names of some castes, particularly those find presence in lower strata of society, have become synonymous with all qualities that no one wants to imbibe. recently honorable lokayukta used the word Hajama. Often the word - Kuruba - is referred to mean a fool fellow. 'Gowda' is one such word where one wants to convey that so and so is not 'uncivilized'. Why we never use Brahmana, Lingayata, Baniya, Thakur or any other upper caste as synonymous with these above qualities?
what I feel that people in Suddimaatu are trying to convey that by sheer practice, without thinking before using the word, people have the tendency to insult some sections of society. This should be criticised in strong words, no matter whoever does the mistake. so that at least in future people will be careful before taking name of any community or caste.
- Illama Prabhu

Anonymous said...

Illama Prabhu,
Ranganna ninage yeshtu haftaa kodtaane? Neenenu avana chelaana?Ranganna nige bareyalu baruttaa? aata baree maataadtaane. maha jaativaadi aata, ninage gottaa?

Anonymous said...

If Kanndaprabha is soooooo good as our annonymous friend claims, why its circulation is not even 1 lakh? Of course, circulation figure is not only the yard stick. But, because of KP's usage of languge, jumping to conclusion instead of presenting the news in a non passive manner and writing the things as if no one know better than they, KP has lost its credibility. Thats why readers do not read it. It has circulation only in city area. But, compared with other leading dailies in Kannada, KP is not at all popular.
But KP editors and many a staff behave as if they are the top journalists and writers. This ego makes them use such language and words, which hurt many.

Anonymous said...

ಜಾತಿ ಸೂಚಕ ಹೆಸರುಗಳನ್ನು ದೂಷಣೆಯ ಗುಣವಾಚಕಗಳನ್ನಾಗಿ ಬಳಸುವುದು ತಪ್ಪು. ಇದು ಸರಿಯೋ ತಪ್ಪೋ ಎನ್ನುವ ಜಿಜ್ಞಾಸೆಯಲ್ಲಿ ತೊಡಗಬೇಕಾದ ಪರಿಸ್ಥಿತಿ ಇರುವುದು ನಮ್ಮ ದೇಶದಲ್ಲಿ ಮಾತ್ರ ಇರುವ ದುರಂತ ಎನಿಸುತ್ತದೆ. ಜಾತಿಯ ಹೆಸರೇ ಅಪಮಾನಕರ ಗುಣವಾಚಕವಾಗುವ ಪರಿಸ್ಥಿತಿ.

ಅಲ್ಪಸಂಖ್ಯೆಯಲ್ಲಿದ್ದೂ ಇಡೀ ವ್ಯವಸ್ಥೆಯನ್ನು ಹಿಡಿತದಲ್ಲಿಟ್ಟುಕೊಂಡಿದ್ದ, ಅಕ್ಷರವನ್ನು ತಮಗೆ ಮಾತ್ರ ಮೀಸಲಾಗಿಟ್ಟುಕೊಂಡಿದ್ದ, ತಾವೇ ಬರೆದು ತಾವೇ ಓದಿಕೋಳ್ಳುತ್ತಿದ್ದ ಮನಸ್ಥಿತಿಯಲ್ಲೇ ಈಗಲೂ ಬಹಳಷ್ಟು ಜನ ಪದ ಬಳಕೆ ಮಾಡುತ್ತಾರೆ. ಒಂದೇ ರೀತಿಯ ಜನ ಒಂದೆಡೆ ಕಲೆತು ಮತನಾಡುವಾಗ ಬೇರೆ ರೀತಿಯ(ವರ್ಣ, ವರ್ಗ, ಜಾತಿ, ಜನಾಂಗ ಇತ್ಯಾದಿ)ಜನರ ಬಗ್ಗೆ ಅವಹೇಳನಕಾರಿ ಅಪಮಾನಕಾರಿ ಶಬ್ದಗಳನ್ನು ಬಳಸುವುದು ಸಾಮಾನ್ಯ. ಇಂಥ ಮನಸ್ಥಿತಿ ಆರೋಗ್ಯಕರವಲ್ಲದಿದ್ದರೂ ಅವರವರೊಳಗೇ ಓಕೆ. ಆದರೆ ಬ್ರಿಟೀಷರ ಆಡಳಿತದ ನಂತರ ಅವರೇ ಬರೆಯುವವರು ಅವರೇ ಓದವವರು ಎನ್ನುವ ಸಾವಿರಾರು ವರ್ಷಗಳಿಂದ ಕಾಪಾಡಿಕೊಂಡಿದ್ದ ಪರಿಸ್ಥಿತಿ ಇಂದು ಬದಲಾಗಿದೆ.

ಆದ್ದರಿಂದ ಪತ್ರಿಕೆಗಳಲ್ಲಿ ಸಂಪಾದಕೀಯ ಬರೆಯುವವರು ಕಂಡೆಮ್ ಮಾಡುವಂಥ ಪದಗಳನ್ನು ಬಳಸುವಾಗ ಪ್ರಜ್ಙಾಪೂರ್ವಕವಾಗಿಯೇ ಎಚ್ಚರದಿಂದಿರಬೇಕಾಗುತ್ತದೆ. ಅದರಲ್ಲೂ ದೂಷಣೆ, ಹೀನಾರ್ಥಗಳಿಗಾಗಿ ಜಾತಿಸೂಚಕ ಪದಗಳನ್ನು ಬಳಸುವುದಂತೂ ಬೇಜವ್ಬ್ದಾರಿತನದ ಹೈಟ್. ಸಾವಿರಾರು ವರ್ಷಗಳಿಂದ ಇದ್ದ ನಾಲಿಗೆ ಕಿವಿಗಳಿಗೆ ಕಾದ ಸೀಸ ಹುಯ್ಯುವ ಪರಿಸ್ಥಿತಿ ಈವತ್ತು ಇಲ್ಲ. ಓದುವವರು ನಮ್ಮವರು ಮಾತ್ರವಲ್ಲ. ಎಲ್ಲರೂ ಓದುತ್ತಾರೆ ಎಂಬ ಅರಿವು ಇದ್ದರೆ ಇಂಥ ಬೇಜವ್ಬ್ದಾರಿ ಪ್ರಮಾದಗಳಾಗುವುದಿಲ್ಲ.

Anonymous said...

ನಿಜ. ರಂಗನಾಥ್ ಅವರ ವಿಷಯದಲ್ಲಿ ಇಲ್ಲಿ ಪ್ರತಿಕ್ರಿಯೆಗಳು ತೀರ ಕೆಳಮಟ್ಟದ್ದಾಗಿವೆ. ಸಣ್ಣತನದಿಂದ ಕೂಡಿದೆ.
ರಂಗನಾಥ್ ಅವರ ವರದಿಗಾರಿಕೆಯನ್ನು ಪತ್ರಿಕಾ ಬಳಗದಲ್ಲಿರುವವರು ಬಲ್ಲರು. ಅವರ ಇವತ್ತಿನ ಸ್ಥಾನ ಅವರ ಶ್ರಮ ಮತ್ತು ಸಾಮರ್ಥ್ಯದಿಂದ ಬಂದಿದ್ದು.
ಸುಮ್ಮನೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಸುಮ್ಮ ಸುಮ್ಮನೆ ಬೈಯ್ದಾಡಿ ಬರೆಯುವುದು ನಾಚಿಗೇಡಿಗಳ ಕೆಲಸ.

Anonymous said...

ಕತ್ತಲಲ್ಲಿ ನಿಂತು ಬಾಣ ಬಿಡುವ ಚಾಳಿ ನಿಮ್ಮ ಭಾಷೆ
ಶಕ್ತಿ ತೋರುತ್ತೆ....ಈ ರೀತಿ ಅಸಹ್ಯ ಪ್ರತಿಕ್ರಿಯೆಗಳಿಂದ ರಂಗನಾಥ್ ಅವರ ಬರವಣಿಗೆಗೆ ಕುತ್ತಾಗದು....ಇನ್ನು ಪ್ರಸಾರ ಸಂಖ್ಯೆಯಲ್ಲಿ ೫ನೇ ಸ್ಟಾನದಲ್ಲಿದ್ದ ಕನ್ನಡಪ್ರಭ ಈಗ ೩ನೇ ಸ್ಟಾನಕ್ಕೆರಿದೆ...ಏರುತ್ತಲೇ ಇದೇ.....ಇದು ABC ವರದಿ...ಇದಕ್ಕೆ ಕಾರಣ ಯಾರು?
ಉತ್ತರ ಬೇಕಿದ್ದರೆ ಕನ್ನಡಪ್ರಭ imprint ನೋಡಿ...

Anonymous said...

ಕಾಮೆಂಟುಗಳನ್ನು ನಿಗ್ರಹಿಸದೇ ಹೋದರೆ ಒಂದಲ್ಲ ಒಂದು ದಿನ ಜೈಲು ಸೇರುತ್ತೀರಿ ನೋಡುತ್ತಿರಿ. ನೀವು ನಿಮ್ಮ ಬ್ಲಾಗಿಗಷ್ಟೇ ಅಲ್ಲ, ಕಾಮೆಂಟಿಗೂ ಜವಾಬ್ದಾರರು. ನಿಮಗೆ ಸೈಬರ್ ಕಾನೂನು ಗೊತ್ತಿದೆಯೋ ಗೊತ್ತಿಲ್ಲ. ಹುಷಾರಾಗಿರಿ.

Anonymous said...

nan makla sumne yara bagge hige matadtiralla. sadane madodu sumne ellara kaiyallu Aglla. neevu bareda taxna ellavu sariyalla. rangannda enu anta avrnana Artha madkondavarige gottu

Anonymous said...

haage journalistsgala mane ride madodadre yar mane madbeku antha bangalore nalli charche bandre ranganath mattu v k bhatta antha joke chalthiyallide. Kelavu odugarige helalebekagiro vishaya andre bellagirodella halalla. Doorada betta yavatthu kannige nunnage. Kelasagaarara bagge aatha eshtu croori antha yarige gottiroke sadhya?

Anonymous said...

bere kelsa ilvaa?