Tuesday, November 25, 2008

ಹೊಸ ವರಸೆಯಲ್ಲಿ ಭಯೋತ್ಪಾದನೆ ಸಮರ್ಥಕರು!

ನ.೨೬ರ ವಿಜಯಕರ್ನಾಟಕದಲ್ಲಿ ಘನತೆವೆತ್ತ ನ್ಯಾಯಮೂರ್ತಿಗಳಾದ ಎಂ. ರಾಮಾಜೋಯಿಸ್ ಅವರ ಭಯೋತ್ಪಾದನೆಯೋ, ಪ್ರತೀಕಾರವೋ? ಎಂಬ ಅಗ್ರಲೇಖನ ಪ್ರಕಟಗೊಂಡಿದೆ. ಇದನ್ನು ವರದಿಯೆನ್ನಬೇಕೋ, ವಿಶ್ಲೇಷಣೆಯೆನ್ನಬೇಕೋ, ಲೇಖನವೆನ್ನಬೇಕೋ ಎಂಬ ಗೊಂದಲದಲ್ಲಿಯೇ ಅಗ್ರಲೇಖನ ಎಂಬ ಪದ ಬಳಸಿದ್ದೇವೆ.
ಸಾಧಾರಣವಾಗಿ ಪತ್ರಿಕೆಗಳ ಮುಖಪುಟದಲ್ಲಿ ವರದಿಗಾರರು ತಮ್ಮ ಬೈಲೈನ್‌ನೊಂದಿಗೆ ಬರೆಯುತ್ತಾರೆ. ಆದರೆ ಎಸ್.ಎಲ್. ಭೈರಪ್ಪ, ರಾಮಾಜೋಯಿಸ್ ತರಹದವರು ಇದ್ದಕ್ಕಿದ್ದಂತೆ ವರದಿಗಾರರ ಹಾಗೆ ವಿಜಯಕರ್ನಾಟಕದ ಮುಖಪುಟದಲ್ಲಿ ಪ್ರತ್ಯಕ್ಷರಾಗುತ್ತಾರೆ. ಇದನ್ನೂ ಒಂದು ಪ್ರಯೋಗ ಎಂದು ಒಪ್ಪಿಕೊಳ್ಳೋಣ ಬಿಡಿ.
ವಿಷಯಕ್ಕೆ ಬರುವುದಾದರೆ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿದ್ದ, ರಾಜ್ಯಪಾಲರಾಗಿದ್ದ ಈಗ ಬಿಜೆಪಿ ಕೃಪೆಯಿಂದ ರಾಜ್ಯಸಭಾ ಸದಸ್ಯರಾಗಿರುವ ರಾಮಾಜೋಯಿಸ್ ಅವರು ನಿರ್ಲಜ್ಜೆಯಿಂದ ಮಾಲೇಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಭಯೋತ್ಪಾದನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅದನ್ನು ವಿ.ಕ ಯಥಾವತ್ತಾಗಿ ಪ್ರಕಟಿಸುವ ಮೂಲಕ ತಾನೂ ಸಹ ಈ ಸಮರ್ಥನೆಯಲ್ಲಿ ಭಾಗವಾಗಿದೆ.
ಕೆಲವು ಸಾಲುಗಳನ್ನು ಗಮನಿಸಿ: ...ಇಂಥ ಘಟನೆಗಳಿಂದ ದೇಶಭಕ್ತ ಜನರು ಉದ್ರೇಕಗೊಳ್ಳದೇ ಇರಲು ಸಾಧ್ಯವೆ? ಸಾಮಾನ್ಯ ಜನರ ಮನಸ್ಸಿಗೆ ಅಪಾರ ನೋವುಂಟಾಗಿರಲಿಲ್ಲವೆ? ಅದರಲ್ಲಿ ಕೆಲವರು ಉದ್ರೇಕಗೊಂಡು ಪ್ರತೀಕಾರಕ್ಕೆ ಮುಂದಾದರೆ ಮತ್ತು ಅದೇ ಭಾವನೆಯಿಂದ ಭಯೋತ್ಪಾದನೆಯನ್ನು ತಮಗೆ ತಿಳಿದ ರೀತಿಯಲ್ಲಿ ಮಾಡಿದರೆ ಅದು ಭಯೋತ್ಪಾದನೆಗೆ ಪ್ರತೀಕಾರವೇ ವಿನಹ ಭಯೋತ್ಪಾದನೆಯಲ್ಲ. ಈ ರೀತಿ ಕೆಲವರು ಮಾಡಿರುವ ಭಯೋತ್ಪಾದಕ ಕೃತ್ಯವನ್ನು ಹಿಂದೂ ಭಯೋತ್ಪಾದನೆ ಎಂದು ಹೆಸರಿಸಿ ಸಮಗ್ರ ಹಿಂದೂ ಸಮಾಜಕ್ಕೆ ಮಸಿ ಬಳಿಯುವುದು ದೇಶದ್ರೋಹಿಗಳು ಮಾಡುವ ಭಯೋತ್ಪಾದನೆಯಿಂದುಂಟಾಗುವ ಹಾನಿಗಿಂತಲೂ ಭೀಕರ. ಅದರ ದುಷ್ಪರಿಣಾಮಗಳು ಭಯಾನಕಒಬ್ಬ ನ್ಯಾಯಮೂರ್ತಿ ಆಡಬಹುದಾದ ಮಾತುಗಳೇ ಇವು ಎಂದು ಗಂಭೀರವಾಗಿ ಚಿಂತಿಸಬೇಕಾಗಿದೆ.
ದೇಶದಲ್ಲಿ ಪಾಕ್ ಪ್ರೇರಿತ ಭಯೋತ್ಪಾದನೆ ಆರಂಭಗೊಂಡಾಗಿನಿಂದ ದೇಶಭಕ್ತರು ನೊಂದುಕೊಂಡಿದ್ದರು. ಈ ದೇಶಭಕ್ತರು ಸಿಟ್ಟಿನಿಂದ ಮಾಲೇಗಾಂವ್ ಸ್ಫೋಟದಂತಹ ಕೃತ್ಯಕ್ಕೆ ಇಳಿದಿದ್ದಾರೆ. ಹೀಗಾಗಿ ಇದು ಭಯೋತ್ಪಾದನೆಯಲ್ಲ, ಪ್ರತೀಕಾರ ಅಷ್ಟೆ.
ರಾಮಾಜೋಯಿಸ್‌ಗೆ ಒಂದು ಸರಳ ಪ್ರಶ್ನೆ ಕೇಳೋಣ:ಬಾಬರಿ ಮಸೀದಿ ವಿವಾದಕ್ಕೂ ಮುನ್ನ ಭಾರತದಲ್ಲಿ ಬಾಂಬ್ ಸ್ಫೋಟಗಳು ನಡೆದಿರಲಿಲ್ಲ. ಗುಜರಾತ್ ಹಿಂಸೆಗೂ ಮುನ್ನ ಇಷ್ಟು ತೀವ್ರ ಸ್ವರೂಪದಲ್ಲಿ ಭಯೋತ್ಪಾದಕ ಸಂಘಟನೆಗಳು ಚಟುವಟಿಕೆ ನಡೆಸುತ್ತಿರಲಿಲ್ಲ. ಅರ್ಥಾತ್ ಬಾಬರಿ ಮಸೀದಿ ಧ್ವಂಸ ಹಾಗು ಗುಜರಾತ್ ನರಮೇಧಗಳಿಂದ ರೊಚ್ಚಿಗೆದ್ದ ಕೆಲ ಮುಸ್ಲಿಮ್ ಯುವಕರು ಮಾಡುವ ಭಯೋತ್ಪಾದನೆಯನ್ನೂ ಪ್ರತೀಕಾರ ಅಥವಾ ಪ್ರತಿಕ್ರಿಯೆ ಎಂದು ಕರೆಯಬಹುದಲ್ಲವೆ?
ರಾಮಾಜೋಯಿಸ್ ತಮ್ಮ ಲೇಖನದಲ್ಲಿ ಮಾಲೇಗಾಂವ್ ಸ್ಪೋಟದ ರೂವಾರಿ ಎಂಬ ಆರೋಪ ಹೊತ್ತಿರುವ ಸಾಧ್ವಿ ಮತ್ತವಳ ಸಹಚರರನ್ನು ಭಗತ್ ಸಿಂಗ್, ಸುಖದೇವ್, ಮದನ್ ಲಾಲ್ ಧಿಂಗ್ರಾ, ಚಂದ್ರಶೇಖರ್ ಆಜಾದ್ ಮತ್ತಿತರರಿಗೆ ಹೋಲಿಸಿದ್ದಾರೆ! ಭಲೇ ಜೋಯಿಸರೇ, ಭಲೇ ವಿ.ಕ.
ರಾಮಾಜೋಯಿಸರ ಲೇಖನದ ಟೋನ್ ಹೇಗಿದೆಯೆಂದರೆ ಮಾಲೇಗಾಂವ್ ಸ್ಫೋಟದ ತನಿಖೆ ಮಾಡುತ್ತಿರುವ ಎಟಿಎಸ್, ಸ್ಫೋಟದಲ್ಲಿ ಹಿಂದೂಗಳು ಭಾಗಿಯಾಗಿದ್ದಾರೆ ಎಂಬುದು ಗೊತ್ತಾದ ತಕ್ಷಣ ತನಿಖೆಯನ್ನೇ ಮುಚ್ಚಿಹಾಕಬೇಕಿತ್ತು! ಸಾಧ್ವಿ ಮತ್ತಿತರರನ್ನು ಮೋಕಾದಡಿಯಲ್ಲಿ ಬಂಧಿಸಿದ್ದೇ ಸರಿಯಲ್ಲ ಎಂದು ವಾದಿಸಿರುವ ಜೋಯಿಸರ ಮಾತುಗಳನ್ನು ಗಮನಿಸಿದರೆ ಈ ದೇಶದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು, ದಲಿತರು ಮಾಡುವ ತಪ್ಪುಗಳಿಗೆ ಮಾತ್ರ ಶಿಕ್ಷೆಯಿರಬೇಕು, ಮೇಲ್ಜಾತಿಯ ಹಿಂದೂಗಳು ತಪ್ಪು ಮಾಡಿದರೆ ಅವರನ್ನು ಕ್ಷಮಿಸಿಬಿಡಬೇಕು ಎಂಬ ಅಪ್ಪಣೆಯ ಭಾವ ಕಂಡುಬರುತ್ತದೆ.
ಸಾಧ್ವಿ ನಿಜಕ್ಕೂ ತಪ್ಪು ಮಾಡಿದ್ದರೂ ಆಕೆ ದೇಶಭಕ್ತಿಯಿಂದ ಮಾಡಿದ್ದಾಳೆ ಎಂದು ಒಬ್ಬ ನಿವೃತ್ತ ನ್ಯಾಯಮೂರ್ತಿಯೇ ಸಮರ್ಥಿಸಿಕೊಂಡರೆ ನಿಜಕ್ಕೂ ಆಘಾತವಾಗಬೇಕಿರುವುದು ನ್ಯಾಯಾಂಗವ್ಯವಸ್ಥೆಯನ್ನು ನಂಬಿಕೊಂಡು ಕುಳಿತಿರುವ ದೇಶವಾಸಿಗಳಿಗೆ.
ಇಂಥ ಆತ್ಮಘಾತಕತನದ ಬರಹವನ್ನು ವಿ.ಕ. ಪ್ರಕಟಿಸಿರುವ ರೀತಿಯೇ ನಿಜಕ್ಕೂ ಅಸಹ್ಯಕರ. ಭಯೋತ್ಪಾದನೆ ಹಿಂದೂಗಳು ಮಾಡಲಿ, ಮುಸ್ಲಿಮರು ಮಾಡಲಿ ನ್ಯಾಯವ್ಯವಸ್ಥೆ ಒಂದೇ ಕ್ರಮದಲ್ಲಿ ಶಿಕ್ಷಿಸುವಂತಾಗಬೇಕು ಎಂದು ಹೇಳಲು ಸಾಧ್ಯವಿಲ್ಲದ ಇಂಥ ಮನಸ್ಸುಗಳು ದೇಶದ ಪಾಲಿಗೆ ಗಂಡಾಂತರಕಾರಿ.
ಮಾಲೇಂಗಾಂವ್ ಸ್ಫೋಟದಲ್ಲಿ ಹಿಂದೂಗಳು ಪಾಲ್ಗೊಂಡಿರುವುದು ಬಯಲಿಗೆ ಬರುತ್ತಿದ್ದಂತೆ ಫ್ಯಾಸಿಸ್ಟ್ ಶಕ್ತಿಗಳು ತಮ್ಮ ನಿಜಬಣ್ಣದೊಂದಿಗೆ ಪ್ರತ್ಯಕ್ಷವಾಗುತ್ತಿವೆ. ಆದರೆ ಈ ಪಟ್ಟಿಯಲ್ಲಿ ನ್ಯಾಯಪಾಲಕ ವ್ಯವಸ್ಥೆಯಲ್ಲಿ ಇದ್ದವರೇ ಕಾಣಿಸಿಕೊಂಡಿರುವುದು ಮಾತ್ರ ಆಘಾತಕರ.
ಇಂದಿರಾಗಾಂಧಿ ಹತ್ಯೆಯ ನಂತರ ನಡೆದ ಸಿಕ್ ನರಮೇಧವನ್ನು ರಾಜೀವ್‌ಗಾಂಧಿಯವರು ಹೀಗೇ ಸಮರ್ಥಿಸಿಕೊಂಡಿದ್ದರು. ಬಾಬರಿ ಮಸೀದಿ ಧ್ವಂಸವನ್ನು ಅಡ್ವಾನಿ ಸಮರ್ಥಿಸಿಕೊಂಡಿದ್ದೂ ಹೀಗೆ. ನಂತರ ಗುಜರಾತ್ ನರಮೇಧವನ್ನು ನರೇಂದ್ರ ಮೋದಿ ಕ್ರಿಯೆಗೆ ಪ್ರತಿಕ್ರಿಯೆ ಎಂದೇ ಸಮರ್ಥಿಸಿಕೊಂಡಿದ್ದರು. ಇದೀಗ ರಾಮಾಜೋಯಿಸ್ ಮತ್ತು ವಿಜಯ ಕರ್ನಾಟಕ ಮಾಲೇಗಾಂವ್ ಸ್ಫೋಟವನ್ನೂ ಸಮರ್ಥಿಸಿರುವುದೂ ಇದೇ ಧ್ವನಿಯಲ್ಲಿ.
ಗಲೀಜು, ಕೊಚ್ಚೆಯಲ್ಲಿ ಬಿದ್ದಿರುವ ಜನರು ಆ ವಾಸನೆಯನ್ನೇ ಆಘ್ರಾಣಿಸಿಕೊಂಡು ಸುಖ ಪಡುತ್ತಿದ್ದರೆ ಅದಕ್ಕೆ ಏನನ್ನುವುದು?

13 comments:

jomon varghese said...

ಒಳ್ಳೆಯ ವಿಶ್ಲೇಷಣೆ.

Anonymous said...

suddimaatu is idiot

Anonymous said...

ಜೊಯಿಸರ ಲೇಖನ ಓದಿ ಗೆಳೆಯ ಕಲಾಲ್ ತಕ್ಷಣ ಪ್ರತಿಕ್ರಿಯಿಸಿದ್ದು, ’ಈ ಮನುಷ್ಯ ನ್ಯಾಯಾಧೀಶನಾಗಿದ್ದಾಗ ಎಷ್ಟು ಜನ ಮುಸ್ಲಿಂರನ್ನು ಗಲ್ಲಿಗೇರಿಸರಬಹುದು’ ಎಂದು. ನನಗನಿಸುತ್ತಿದೆ. ಜೊಯಿಸರು ತಮ್ಮ ಅವಧಿಯಲ್ಲಿ ಗಲ್ಲಿಗೆರಿಸದಿದ್ದರೂ ಈ ನಾಡಿನ ಕಾನೂನು ಮತ್ತು ಸಂವಿಧಾನಗಳನ್ನು (ಸಮಯಸಾಧಿಸಿ) ದುರ್ಬಳಿಕೆ ಮಾಡಿಕೊಂಡಿರಲೇಬೇಕು. ಇವರ ವಾದ ಹೇಗಿದೆ ಎಂದರೆ ಹಿಂದೂ ಒಬ್ಬ ಮುಸ್ಲಿಂ ಯುವತಿಯ ಮೇಲೆ ಅತ್ಯಾಚಾರ ಮಾಡಿದರೂ ಆತ ದೇಶಭಕ್ತಿಗಾಗಿಯೇ ಮಾಡಿರಬೇಕು. ಮುಸ್ಲಿಂರು ಶಿಕ್ಷೆ ಅನುಭವಿಸುವುದಕ್ಕಾಗಿಯೇ ಹುಟ್ಟಿದವರು ಎಂಬಂತಿದೆ. ನೀಚತನದ ಪರಮಾವಧಿ ಇದು. ಇವರು ನ್ಯಾಯಾಧೀಶರಾಗಿದ್ದರೂ ಎನ್ನುವುದೇ ಕಂಪನ ಹುಟ್ಟಿಸುತ್ತದೆ. ಸೇನೆ, ನ್ಯಾಯಾಂಗ, ಆಡಳಿತದ ಆಯಕಟ್ಟಿನ ಹುದ್ದೆಯಲ್ಲಿ ಇದ್ದು ಇಂತಹವರ ಸಂತತಿ ಈ ದೇಶಕ್ಕೆ ಯಾವ ಪರಿ ವಿದ್ರೋಹವೆಸುಗುತ್ತದೆ ಎನ್ನುವುದನ್ನು ಕಲ್ಪಿಸಿಕೊಂಡರೆ ನಾಗರೀಕ ಸಂಘರ್ಷದ ದಿನಗಳು ಜಾರಿಯಲ್ಲಿವೆ ಎನಿಸುತ್ತಿದೆ.
ಸಿಟ್ಟಿನಿಂದ ಒಂದು ಮಾತು ಹೇಳುತ್ತಿದ್ದೇನೆ. ಇವೆಲ್ಲವೂ ಹಿಟ್ಲರ್‌ನ ಮುಷ್ಠಿಮೈಥುನಕ್ಕೆ ಹುಟ್ಟಿದ ಬಚ್ಚಲ ಹುಳುಗಳು.
- ಪೀರ್

Anonymous said...

ರಾಮಾ ಜೊಯಿಸ್ ಅವರ ಲೇಖನ, ಅದನ್ನು ಪ್ರಕಟಿಸಿರುವ ವಿಕ. ಇಬ್ಬರೂ ಭಯೋತ್ಪಾದನೆಯ ಬೆಂಬಲಿಗರು. ನಕ್ಸಲಿಯರ ಬೆಂಬಲಿಗರು ಎಂದು ಪ್ರಗತಿಪರರನ್ನು ಬಂಧಿಸುವಂತೆ ಚೀರಾಡುವ ಜನರು ಈ ಹಿಂದೂ ಭಯೋತ್ಪಾದಕರನ್ನು ಕೂಡಲೇ ಬಂಧಿಸುವುದಕ್ಕೆ ಕರೆ ನೀಡುವರೇ?
ಸಾಧ್ವಿ ಪ್ರಗ್ಯಾ ಸೇನಾಧಿಕಾರಿ ಮತ್ತವರೂ ಗುಂಪಿಗಿಂತ ದೊಡ್ಡ ಭಯೋತ್ಪಾದಕರು ಈ ವಿಕ ಭಟ್ಟ, ಜೊಯಿಸ್, ಭೈರಪ್ಪ, ಚಿಮೂ ಇವರೆಲ್ಲಾ ಆಗಿದ್ದಾರೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಾ, ಅದಕ್ಕೊಂದು ಸೈದ್ಧಾಂತಿಕ ಲೇಪನ ನೀಡುವ ಅಕ್ಷರಲೋಕದ ಈ ಭಯೋತ್ಪಾದಕರು ಮಧ್ಯಕಾಲಕ್ಕೆ ಭಾರತವನ್ನು ಕೊಂಡೊಯ್ಯಲಿದ್ದಾರೆ. ಸಂಘ-ಪರಿವಾರದ ಈ ಥಿಂಕ್ ಟ್ಯಾಂಕ್‌ಗಳು. ಹಿಟ್ಲರ್‌ನ ಮರಿಗಳು.
ಸಂಘ-ಪರಿವಾರದ ವಿರುದ್ಧ ಹೋರಾಟವೆಂದರೆ ಈ ಥಿಂಕ್ ಟ್ಯಾಂಕನ್ನು ಸ್ಪೋಟಿಸುವುದೇ ಆಗಿದೆ. ಸುದ್ದಿಮಾತು ಬ್ಲಾಗಿಗೆ ಈ ಅರ್ಥದಲ್ಲಿ ಅಭಿನಂದನೆಗಳು
-ಪರುಶುರಾಮ ಕಲಾಲ್

Anonymous said...

suddimatina nijabanna enu annodu guttagenu ulidilla. ondo jatiya vishaya illandre alpasankyatara tushtikarana mado vishaya etti charche... sorry aa pada (charche) sukthavalla... goddu vaada mundiduvudu hosadenalla bidi. ರಾಮಾಜೋಯಿಸ್‌ಗೆ ಒಂದು ಸರಳ ಪ್ರಶ್ನೆ ಕೇಳೋಣ:ಬಾಬರಿ ಮಸೀದಿ ವಿವಾದಕ್ಕೂ ಮುನ್ನ ಭಾರತದಲ್ಲಿ ಬಾಂಬ್ ಸ್ಫೋಟಗಳು ನಡೆದಿರಲಿಲ್ಲ. ಗುಜರಾತ್ ಹಿಂಸೆಗೂ ಮುನ್ನ ಇಷ್ಟು ತೀವ್ರ ಸ್ವರೂಪದಲ್ಲಿ ಭಯೋತ್ಪಾದಕ ಸಂಘಟನೆಗಳು ಚಟುವಟಿಕೆ ನಡೆಸುತ್ತಿರಲಿಲ್ಲ. ಅರ್ಥಾತ್ ಬಾಬರಿ ಮಸೀದಿ ಧ್ವಂಸ ಹಾಗು ಗುಜರಾತ್ ನರಮೇಧಗಳಿಂದ ರೊಚ್ಚಿಗೆದ್ದ ಕೆಲ ಮುಸ್ಲಿಮ್ ಯುವಕರು ಮಾಡುವ ಭಯೋತ್ಪಾದನೆಯನ್ನೂ ಪ್ರತೀಕಾರ ಅಥವಾ ಪ್ರತಿಕ್ರಿಯೆ ಎಂದು ಕರೆಯಬಹುದಲ್ಲವೆ?
Gujarath naramedhakku modalu bayothpadane nadedilla antira..
manehalu mado vishayagallanne eee blognali baritiralla nachike aglva nimge.. thu...

abhivykthi said...

ramajois ra hinnale rss. hagagi avarininda ade karmatad neetigallannu, hiden ajenda astannu bittare bere innenau nirikshisisidare navu murkharaguteve. samaja kattuva prakriyealli avra patra yenu ill. este adru avrobba pratigami allave.

cmariejoseph.blogspot.com said...

ನಾನು ವಿಜಯಕರ್ನಾಟಕ ಓದೋದಿಲ್ಲ. ಅದರಲ್ಲಿ ನಿವೃತ್ತ ನ್ಯಾಯಮೂರ್ತಿ ರಾಮಾಜ್ಯೋಯಿಸರು ಭಯೋತ್ಪಾದನೆಯನ್ನು sanctify ಮಾಡಿದ್ದಾರೆಂಬುದನ್ನು ತಿಳಿದು ಖೇದವಾಯಿತು. ಇವರು, ಚಿದಾನಂದಮೂರ್ತಿಗಳು, ಶ್ರೀನಿವಾಸ ಹಾವನೂರ ಇವರಿಗೆಲ್ಲ ಏನು ದೊಡ್ಡರೋಗ ಬಡಿದಿದೆಯೋ ಏನೋ? ಅಲ್ಲ ಸ್ವಾಮಿ ಇವರೆಲ್ಲ ಓದಿಕೊಂಡಿರೋರು, ದೊಡ್ಡ ದೊಡ್ಡ ವಿದ್ವಾಂಸರು, ಜ್ಞಾನಿಗಳು ಅಂದ್ಕೊಂಡಿದ್ದೆ, ದೇಸದಲ್ಲಿರೋ ಯಾವ ಪೆದ್ದನ್ನ ಕೇಳಿದರೂ ಭಯೋತ್ಪಾದನೇನ ಭಯೋತ್ಪಾದನೆ ಅನ್ತಾನೇ ಹೇಳ್ತಾನೆ, ಅಂಥದ್ರಲ್ಲಿ ಇದ್ಯಾವುದಪ್ಪ ಹೊಸ ವರಸೆ.ಬಹುಶಃ ಇವೆಲ್ಲ ಬರಲಿರುವ ಭಯಾನಕ ಭವಿಷ್ಯದ ಮುನ್ಸೂಚನೆ ಅನ್ಸುತ್ತೆ. ನಮ್ ದೇಶಾನ ಅದ್ಯಾವ ದೇವರು ಕಾಪಾಡ್ಬೇಕೋ ತಿಳೀವಲ್ದು.

Anonymous said...

Rama Joisara prakara hindoo bhayotpaadane hindoogala prateekaara...nimma prakara (parokshavaagi neevu soochisuvante) muslim bhayotpaadane muslimara prateekaara (babri masjid ge mattu gujarath naramedhakke)...

Rama Joisara mattu Suddiaatu lekahakara jate yochisidarare bhayotpaadane eshotondu sarala allave?....

Anonymous said...

ಭಯೋತ್ಪಾದನೆ ಹಿಂದೂಗಳು ಮಾಡಲಿ, ಮುಸ್ಲಿಮರು ಮಾಡಲಿ ನ್ಯಾಯವ್ಯವಸ್ಥೆ ಒಂದೇ ಕ್ರಮದಲ್ಲಿ ಶಿಕ್ಷಿಸುವಂತಾಗಬೇಕು ಎಂದು ಹೇಳಲು ಸಾಧ್ಯವಿಲ್ಲದ ಇಂಥ ಮನಸ್ಸುಗಳು ದೇಶದ ಪಾಲಿಗೆ ಗಂಡಾಂತರಕಾರಿ.
ಸುದ್ದಿಮಾತು ಸರಿಯಾಗಿ ಬರೆದಿದೆ.

Rakesh S Joshi said...

Good comment. But I wonder when Amam Singh gave aid to the Blast suspects, why the Suddimatu was mum???
Please find the link: http://ibnlive.in.com/news/amar-singh-offers-legal-aid-to-delhi-blasts-suspects/75255-3.html?from=rssfeed

Is that because blast suspects were minority???

Anonymous said...

Leftist mindsets setting aside everything. They dont know the problem of terrorism and they dont understand the difference between the words creating the terror and response to the terror.......
When they do not thing independently they just accept what the commentators said. They just doesnot bother about the people dead in thousands.... but they cry for the few.....Intention of the act is more important than the occurance you people must understand that. when your blood did not become hot what the others can do..

Anonymous said...

noodi swamy, babri masidi bidda mele bamb spotagalu aadavu annuvavarige swalpa buddi maathu. idu hegideyandre modala mahayuddadalli anvastra(nuclear weapon) balasallila embanthide. bayotpadanege jathi beda. anthavarannu galligerisuva kaanunu maduvanthe othayisi. afjal guru vige kooda beega galligerisuvanthe rajakiya paksha(including bjp)galannu othayisi. adee deshaprema andre.

Anonymous said...

ಮಹಾ ಜನಗಳೇ ನೀವಾರೂ ಉದ್ಧಾರವಾಗಲ್ಲ. ಯಾಕೆಂದ್ರೆ ನೀವುಗಳು ಕೂಡ ಅದೇ ಕೆಲಸ ಮಾಡುವವರು. ನಿಮಗೆ ದುಡ್ಡು ಮಾಡಲು ಆಗಲಿಲ್ಲ. ಅದಕ್ಕೆ ಸಿದ್ಧಾಂತ ಅದು ಇದು ಮಣ್ಣು ಮಸಿ ಅಂತ ಬರೀತೀರಿ. ಗೊತ್ತಿಲ್ವಾ ಸೋ ಕಾಲ್ಡ್ ಬುದ್ಧಿಜೀವಿಗಳ ಹಣೆಬರಹ.