ಬುಧವಾರ ರಾತ್ರಿ ಬಂದೂಕಿನ ಸದ್ದು ಕೇಳುತ್ತಿದ್ದಂತೆಯೇ, ಮಾಧ್ಯಮಗಳು ಎಚ್ಚರಗೊಂಡವು. ನೋಡ ನೋಡುತ್ತಿದ್ದಂತೆಯೇ ಹಿರಿಯ ಪೊಲೀಸರು ಕಣ್ಣು ಮುಚ್ಚಿದರು. ಪತ್ರಕರ್ತರಿಗೆ 'ಇದು ಸದ್ಯಕ್ಕೆ ಮುಗಿಯುವ ಕತೆಯಲ್ಲ' ಎಂದು ತಿಳಿಯಿತು. ಬೆಳಗಿನ ಹೊತ್ತಿಗೆ ಎನ್ ಡಿಟಿವಿ ಬರ್ಕಾ ದತ್, ಸಿಎನ್ಎನ್ ಐಬಿಎನ್ ರಾಜದೀಪ್ ಸರದೇಸಾಯಿ..ಎಲ್ಲರೂ ದೆಹಲಿಯಿಂದ ಮುಂಬೈಗೆ ದೌಡಾಯಿಸಿದರು. ತಾಜ್ ಹೊಟೇಲ್, ಟ್ರೈಡೆಂಟ್ ಹೊಟೇಲ್ಗಳ ಮುಂದೆ ಮೈಕ್ ಹಿಡಿದು ನಿಂತರು.
ಮುಂಬೈಕರ್ ರಾಜದೀಪ್ ತುಸು ಭಾವುಕರಾದರು. ಎಂದಿನಂತೆ ಬರ್ಕಾ ತನ್ನ ಸುತ್ತಲ ಚಿತ್ರಣವನ್ನು ನೋಡುಗರಿಗೆ ಕಟ್ಟಿಕೊಡುವಲ್ಲಿ ಯಶಸ್ವಿಯಾದರು. ಟೈಮ್ಸ್ ನೌ ಆರ್ನಾಬ್ ಗೋಸಾಮಿ ಬಿಡದೆ ಸ್ಟುಡಿಯೋದಲ್ಲಿಯೇ ಕೂತರು. ಸಣ್ಣಪುಟ್ಟ ಚಾನೆಲ್ ಗಳೂ ಇದಕ್ಕಿಂತ ಹೊರತಾಗಿರಲಿಲ್ಲ. ಕನ್ನಡದ ಟಿವಿ೯ ಬೆಂಗಳೂರಿನಿಂದ ಲಕ್ಷಣ ಹೂಗಾರ್ ಹಾಗೂ ದೆಹಲಿಯಿಂದ ಶಿವಪ್ರಸಾದರನ್ನು ಮುಂಬೈಗೆ ರವಾನಿಸಿತ್ತು. ಶಿವಪ್ರಸಾದ್ ಹರಸಾಹಸ ಪಟ್ಟು ವರದಿ ಮಾಡಿದ್ದು ಎಲ್ಲರಿಗೂ ಗೊತ್ತು. ಈ ಮಧ್ಯೆ ಕನ್ನಡದ್ದೇ ಇನ್ನೊಂದು ಚಾನೆಲ್ ಸುವರ್ಣ ಮುಂಬೈ ಸುದ್ದಿ ಕೊಡುವಲ್ಲಿ ತೀವ್ರವಾಗಿ ಹಿಂದುಳಿಯಿತು.
ಅದೇನೆ ಇರಲಿ, ಮುಂಬೈನಲ್ಲಿ ಹಟಕ್ಕೆ ಬಿದ್ದವರಂತೆ ಸಾವಿಗೂ ಅಂಜದೆ ವರದಿ ಮಾಡಿದರಲ್ಲ ಅವರಿಗೆ ಹ್ಯಾಟ್ಸ್ ಆಫ್. 'ಹೇಳಿದ್ದೇ ಹೇಳ್ತಾರೆ', 'ತಪ್ಪೇ ಹೇಳ್ತಾರೆ', 'ಅವನಿಗೆ ಭಾಷೆನೇ ಗೊತ್ತಿಲ್ಲ'..ಎಂದೆಲ್ಲಾ ಕಾಮೆಂಟ್ ಮಾಡುತ್ತಿದ ನೋಡುಗರು ವರದಿಗಾರರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಿದ್ರೆ ಇಲ್ಲದೆ, ನೀರಿಲ್ಲದೆ ಅವರು ಗುಂಡಿನ ಕಾಳಗ ವರದಿ ಮಾಡುವುದೆಂದರೆ ಸುಮ್ಮನೇನಾ?
ಬಹುತೇಕ ಚಾನೆಲ್ ಗಳು ಎರಡು ದಿನಗಳ ಕಾಲ ಜಾಹಿರಾತುಗಳಿಗೆ ಮೊರೆ ಹೋಗದೆ ಸುದ್ದಿ ನೀಡಿದವು.
ಒಂದಂತೂ ಸತ್ಯ. ಮುಊರು ದಿನಗಳ ಕಾಲ ಮುಂಬೈ ಘಟನೆಗಳನ್ನು ವರದಿ ಮಾಡಿದವರು ಮರೆಯಲಾಗದ ಅನುಭವಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಮತ್ತಷ್ಟು ಕಾಲ ಆ ಅನುಭವ ಅವರನ್ನು ಪತ್ರಿಕೋದ್ಯಮದೆಡೆಗಿನ ಸೆಳೆತವನ್ನು ಕಾಯ್ದುಕೊಂಡಿರುತ್ತೆ ಎನ್ನುವುದು ಮಾತ್ರ ಸತ್ಯ.
Sunday, November 30, 2008
Subscribe to:
Post Comments (Atom)
21 comments:
ಇಲ್ಲಿ ವರದಿಗಾರರ ನಿಷ್ಠೆಯ ಬಗ್ಗೆ ಎರಡು ಮಾತಿಲ್ಲ. ಆದರೆ ಇಂಥ ಘಟನೆಗೆ ಅಷ್ಟು "ರೋಚಕತೆ" ಬೇಕಾ?
sಸಿಎನ್ಎನ್ ಐಬಿಎನ್ನ ಸುಹಾಸಿನಿ ಹೈದರ್ ಹಾಗು ಸಾಗರಿಕಾ ಘೋಷ್ ಅವರಿಗೆ ಹೋಲಿಸಿದರೆ ಬರ್ಖಾ ದತ್ ತೀರಾ ಡಲ್ ಆದಂತಿತ್ತು. ಬರಬರುತ್ತ ಬರ್ಖಾ ಗಂಟಲು ಕಟ್ಟಿಹೋಗಿತ್ತು ಎಂಬ ಕಾರಣಕ್ಕೆ ಈ ಮಾತು ಹೇಳುತ್ತಿಲ್ಲ.
ಬರ್ಖಾ ಇತ್ತೀಚಿಗೆ ತೀರಾ ನಾಟಕೀಯವಾಗಿ ಮಾತನಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.
ಎಂಥ ಸಂದರ್ಭದಲ್ಲೂ ಖಚಿತವಾಗಿ ಮಾತನಾಡುತ್ತ ಅತಿಥಿಗಳನ್ನು ಗ್ರಿಲ್ ಮಾಡುವವರು ಸುಹಾಸಿನಿ ಮತ್ತು ಸಾಗರಿಕಾ. ಬಹುಶಃ ರಾಜದೀಪ್ ಅವರ ಇಡೀ ತಂಡವೇ ಹೀಗೆ ಇದೆ ಅನಿಸುತ್ತದೆ.
ಎನ್ಡಿಟಿವಿಯಲ್ಲಿ ಆಗಾಗ ಪ್ರಣಬ್ ರಾಯ್ ಕಾಣಿಸಿಕೊಂಡರಾದರೂ ಅವರ ನಿಧಾನಗತಿಯ ಮಾತುಗಳು ಇಂಥ ಸಂದರ್ಭದಲ್ಲಿ ಪ್ರಯೋಜನಕ್ಕೆ ಬಾರದೇ ಹೋಯಿತು.
ಇನ್ನು ಟೈಂಸ್ ನೌನಲ್ಲಿ ಅರ್ನಾಬ್ ಗೋಸ್ವಾಮಿ ತನ್ನ ಚಿತ್ರವಿಚಿತ್ರ ಹಾವಭಾವ ಬಿಟ್ಟಂತೆ ಕಂಡರೂ ಒಂದು ವಾಕ್ಯವನ್ನು ಎರಡೆರಡು ಬಾರಿ ಹೇಳುತ್ತ, ತೊದಲುತ್ತ, ಅಲ್ಲಲ್ಲೇ ನಿಲ್ಲಿಸುತ್ತ ಗೊಂದಲಕ್ಕೆ ಈಡಾದರು.
ಹೀಗಾಗಿ ಮುಂಬೈ ದಾಳಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದ್ದು ಕಡೆಗೂ ರಾಜ್ದೀಪ್ ಅವರ ಟೀಮೇ.
'ಇಂಥ' ಸಂದರ್ಭದಲ್ಲಿ ವರದಿಗಾರನ ಪ್ರಜ್ಞೆ ಕೆಲಸ ಮಾಡಬೇಕು. ಆದರೆ 24 ತಾಸುಗಳ ಕಾಲವೂ ಬ್ರೇಕಿಂಗ್ ನ್ಯೂಸ್ ಕೊಡುತ್ತಲೇ ಇರುವ ಕನ್ನಡದ ಒಂದು ಚಾನೆಲ್, ತನ್ನ ದೆಹಲಿ ಪ್ರತಿನಿಧಿಯನ್ನು ಮುಂಬೈಗೆ ಕರೆಸಿಕೊಂಡಿತು. ಆತ ತನ್ನ ಕೆಲಸ ನಿಭಾಯಿಸುವಲ್ಲಿ ಯಶಸ್ವಿಯೂ ಆದ. ಆದರೆ ಬೆಂಗಳೂರಿನ ರಾಜಕೀಯ ವರದಿಗಾರನೊಬ್ಬನನ್ನು ಆ ಚಾನೆಲ್ ಏಕೆ ಕಳಿಸಿತೋ?! ನಿರುಪಯುಕ್ತ ವಿಷಯದ (ವಿಷಯ ಇಲ್ಲದಿದ್ದರೂ) ಅರ್ಧ ಗಂಟೆ ಕಾಲ ವಟ ವಟಗುಟ್ಟುವ ಈ ವರದಿಗಾರ, ಮುಂಬೈನಲ್ಲೂ ತನ್ನ ಚಾಳಿ ಬಿಡಲಿಲ್ಲ. ಸದಾ ಎಡಗೈ ಆಡಿಸುತ್ತಲೇ, ತನಗೆ ಬೇಕಾದ್ದನ್ನು ವದರಿದ. ಹೀಗಾಗಿ ಆತನನ್ನು ವರದಿಗಾರ ಎನ್ನುವುದಕ್ಕಿಂತ 'ವದರುಗಾರ' ಎನ್ನುವುದೇ ಒಳಿತು!
& & & & & & & &
ನಿಜ,ವರದಿಗಾರರೇನೋ ಆ ಮೂರು ದಿನಗಳಿಂದ ತುಂಬಾ ತಿಳಿದುಕೊಂಡಿದ್ದಾರೆ. ಆದರೆ ನಮ್ಮ ಕನ್ನಡ ನ್ಯೂಸ್ ಚಾನೆಲ್ನವರಿಗೆ ಇನ್ನೂ ಬುದ್ಧಿ ಬರಲಿಲ್ಲ. ಒಂದೆಡೆ ವಟವಟ ಎಂದು ವದರುವ ಸನ್ಮಾನ್ಯ ಹೂಗಾರ್ ಮುಂಬೈಗೆ ತೆರಳಿದ್ದು. ಇನ್ನೊಂದು ಸುವರ್ಣ ಚಾನಲ್ನ ವರದಿಗಾರನ ತಲೆಹರಟೆ ಪ್ರಶ್ನೆಗಳು. ಅಂದು ಸಂದೀಪ್ ಪಾರ್ಥಿವ ಶರೀರದ ಮುಂದೆ ಮಾಧ್ಯಮದವರು , ಜನತೆ , ಗಣ್ಯರು , ಕುಟುಂಬದವರು ಎಲ್ಲರೂ ನಿಂತಿದ್ದರು. ಯಡಿಯೂರಪ್ಪ ಬಂದಿದ್ದೇ ಸಂದೀಪ್ಗೆ ಅಂತಿಮ ನಮನ ಸಲ್ಲಿಸಿ ಹೊರ ನಡೆದರು. ನಾವೆಲ್ಲ ಅವರ ಹಿಂದೆ ಹೋಗಿ ಯಡಿಯೂರಪ್ಪ ಅವರು ಹೇಳಲಿರುವ ಸಂತಾಪ ಮತ್ತು ಮೃತರ ಕುಟುಂಬಕ್ಕೆ ನೀಡಬಹುದಾದ ಪರಿಹಾರದ ಬಗ್ಗೆ ಕೇಳಲು ನಿಂತೆವು. ಆದರೆ ಸುವರ್ಣ ಚಾನಲ್ನ ಮೂರುವರೆ ಅಡಿ ಉದ್ದದ ವರದಿಗಾರನೊಬ್ಬ ಏಕಾಏಕಿ ಯಡಿಯೂರಪ್ಪನವರನ್ನು ಟ್ರಾನ್ಸ್ಫರ್ಗಳ ಬಗ್ಗೆ ಕೇಳಿದ. ಸಿಡಿಮಿಡಿಗೊಂಡ ಯಡ್ಡಿ ದಾರಿ ಬಿಡ್ರಿ ಎಂದು ಉಗಿದು ಹೋದ. ಸುದ್ದಿ ಎಲ್ಲರಿಗೂ ಬೇಕು. ಆದರೆ ವರದಿಗಾರರರು ಸಂಯಮ ಕಾಯ್ದುಕೊಳ್ಳಲಿ. ಅದಕ್ಕೆ ಏನೋ ಪಾಪ ಆ ಚಾನಲ್ನಲ್ಲಿ ತಲೆ ದಂಡವಾಗಿದೆ.
- ಘಟನೆ ಸಾಕ್ಷಿ
ಲಕ್ಷ್ಮಣ್ ಹೂಗಾರ್ ಮತ್ತು ಶಿವಪ್ರಸಾದ್ ಟಿವಿ೯ಗೆ ಆ ವಾಹಿನಿಯ ಲಿಮಿಟೇಷನ್ಗಳಲ್ಲಿ ಅತ್ಯುತ್ತಮವಾಗೇ ಕಾರ್ಯ ನಿರ್ವಹಿಸಿದರು.
ಹೂಗಾರ್ ಇಂಟೆಗ್ರೆಟಿಯ ಬಗ್ಗೆ ಎರಡು ಮಾತಿರಲು ಸಾಧ್ಯವೇ ಇಲ್ಲ. ಟಿವಿ೯ನಲ್ಲಿ ಗಂಟೆಗಟ್ಟಲೆ ಮಾತನಾಡುತ್ತಲೇ ಇರಬೇಕಾದ ಅನಿವಾರ್ಯತೆ ಇರುವುದರಿಂದ ಒಮ್ಮೊಮ್ಮೆ ರಿಪೀಟಾಗಿ ಮಾತನಾಡುತ್ತಾರೆ ಅನಿಸಬಹುದು.
ಆದರೆ ನಿಜಕ್ಕೂ ಟಿವಿ೯ಗೆ ಘನತೆ ಗೌರವ ತಂದಿರುವವರು ಹೂಗಾರ್, ಹಮೀದ್ ತರಹದವರೇ ಎಂಬುದನ್ನು ಮರೆಯುವಂತಿಲ್ಲ.
ಕಂಗ್ರಾಜುಲೇಷನ್ಸ್ ಹೂಗಾರ್ ಮತ್ತು ಶಿವಪ್ರಸಾದ್ ಅವರಿಗೆ.
ಸಿನಿಕರಿರುವುದೇ ಟೀಕೆ ಮಾಡುವುದಕ್ಕೆ, ಅವರ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ
-ಮಲೆನಾಡು ಹುಡುಗ
ಟಿವಿ9 ರಾಜಕೀಯ ವರದಿಗಾರ ಲಕ್ಷ್ಮಣ್ ಬಗ್ಗೆ ಪ್ರತಿಕ್ರಿಯೆ ನಿಜ. ಅವರು ಅದೇನು ಮಾಹಿತಿ ಕೊಡುತ್ತಾರೋ ಕೇಳಲಾಗದು. ಇದಕ್ಕೆ ಹೋಲಿಸಿದರೆ ದೆಹಲಿ ಪ್ರತಿನಿಧಿ ಶಿವಪ್ರಸಾದ್ ಪ್ರತಿ ವಿಷಯವನ್ನು ಆಕಷಕ ಶೈಲಿಯಲ್ಲಿ ಗಂಟೆ ಗಮಟ್ಟಲೆ ನೀಡಬಲ್ಲರು. ಅಷ್ಟೇ ಅಲ್ಲ, ರಾಜಕಾರಿಣಿಗಳ ವಿರುದ್ದ ಕನಾಟಕದಲ್ಲಿ ಒಂದು ಅಭಿಪ್ರಾಯ, ಕಮಾಂಡೋಗಳ ಪರ ಗೌರವ ಮೂಡುವಂತೆ ಮಾಡಲು ಮೊದಲ ದಿನದಿಂದಲೇ ಪ್ರಯತ್ನ ನಡೆಸಿದ್ದರು. ಅವರ ವರದಿಗೆ ಬಂದ ಪ್ರತಿಕ್ರಿಯೆ ಅದ್ಭುತ. ನಮ್ಮ ಬೆಂಗಳೂರಿನಲ್ಲೂ ಬರಿ ಇಂಗ್ಲೀಷ್ ಚಾನೆಲ್ ನೋಡುವವರೂ ಸಹ ಟಿವಿ9 ಮುಂದೆ ಕುಳಿತಿದ್ದರು. ಅದಕ್ಕಾಗಿಯೇ ಟಿವಿ9 ಶಿವಪ್ರಸಾದ್ ರನ್ನು ಧಿಡೀರನೆ ಮುಂಬಗೆ ಕರೆಸಿಕೊಂಡು ರಿಪೋಟರ್ ಪ್ರೋಗ್ರಾಂ ನಡೆಸಿ, ಸಾರ್ವಜನಿಕರ ಜೊತೆ ಚಚೆ ನಡೆಸುವಂತೆ ಮಾಡಿತು. ಆ ಕಾಯಕ್ರಮದಲ್ಲಿಯೂ ಶಿವಪ್ರಸಾದ್ ಮಾತನಾಡಿದ ಶೈಲಿ, ಅವರ ವಿಚಾರ, ಯೋಧರ ಬಗ್ಗೆ ಭಾವುಕರಾಗಿ ಮಾತನಾಡಿ ಕಾಯಕ್ರಮದಲ್ಲಿಯೇ ಕಣ್ಣೀರು ಹಾಕಿದ್ದು ನೋಡುಗರ ಕಣ್ಣಲ್ಲೂ ನೀರು ಬರಿಸಿತ್ತು. ಇಡೀ ರಾಜ್ಯದಲ್ಲಿ ಅಭಿಪ್ರಾಯ ಮೂಡಿಸುವಲ್ಲಿ ಟಿವಿ9 ಯಶಸ್ವಿಯಾಗಿದೆ.
ಹೇಳಿದರೆ ಒಂದು ಚಾನೆಲ್ ಗಳು, ಇಲ್ಲಾಂದ್ರೆ ಬರೀ ಪತ್ರಿಕೆಗಳು.
ಮಾಧ್ಯಮ ಅಂದ ಮಾತ್ರಕ್ಕೆ ಬರೀ ಟಿವಿ ಅಷ್ಟೇನಾ?
ಸ್ಫೋಟದ ಮರುದಿನ ೆಷ್ಟೋ ಪತ್ರಿಕೆಗಳು ಸತ್ತೇ ಹೋಗಿದ್ದವು.
ನಿಜಕ್ಕೂ ಅಭಿನಂದನೀಯ ಕೆಲಸ ಮಾಡಿದ್ದು ಕನ್ನಡ ಪ್ರಭ.
ಬಹುಷಃ ಅದೊಂದೆ ಪತ್ರಿಕೆ ಈ ರೀತಿಯ ಪ್ರಯೋಗ ಸಾಧ್ಯತೆಯನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದೆ.
ಪತ್ರಿಕೆಗಳು ವಾಹಿನಿಗಳಿಗಿಂತ ಹೆಚ್ಚು limitation ಗಳಿವೆ.
ತೀರಾ update news ಕೊಡೋದು ತುಂಬಾ ಕಷ್ಟ.
ಎಲ್ಲರಿಗೂ ಗೊತ್ತಾಗಿರುವ ಸುದ್ದಿಯನ್ನೇ ಒಂದು ಪರಿಣಾಮಕಾರಿ ವಿಧಾನದಲ್ಲಿ ಪ್ರಸ್ತುತಪಡಿಸದಿದ್ದರೆ, its nothing but waste.
'ಒಡ್ಡ' ಪದವನ್ನೇ ಎತ್ತಿ ಹಿಡಿದವರಿಗೆ ಇಷ್ಟು ದೊಡ್ಡ ವಿಷಯ ಕಾಣಲಿಲ್ವಾ?
ಬಹುಷಃ ಮತ್ತೇನೋ ಟೀಕೆ ಮಾಡುವ ುದ್ದೇಶವುಳ್ಳ ನಿಮಗೆ ಒಳ್ಳೆಯ ಅಂಶಗಳು ಕಾಣುವುದೇ ಇಲ್ಲ ಅನ್ಸುತ್ತೆ.
ಇನ್ನೂ ಒಂದು observation ಹೇಳಲೇಬೇಕೆಂದರೆ, ಇತ್ತೀಚೆಗೆ ನಿಮ್ಮ ಬ್ಲಾಗ್ ನಲ್ಲಿ ಚಚೆಱಯಾಗುವ ವಿಷಯಗಳಿಗಿಂತಲೂ, ಅದರಲ್ಲಿನ comment ಓದಲು ಬರುವವರ ಸಂಖ್ಯೆಯೇ ಜಾಸ್ತಿ ಅನಿಸುತ್ತೆ.
Eshto varadigaararige holisidare hoogar uttama varadigaarareno nija. aadare kelavomme avaru agatyakkinta hechchu prashnegalannu keli nodugarige talenovaaguvante maaduttaare. Udaaharanege: Ullaladalli by-election nadedu phalitaamsha bandaaga aaga taane geddu mata enikaaa kendradinda horabarutidda MLA U T Farooq avarannu enilla andaru ondu 20 rind 30 prashne kelidaru namma hoogar. Innoo geddu onderadu nimishagalaagilla. Antavaralli abbabba andare sampradaayikavaagi ondu nalkaidu prashne. Adoo agatya illa bidi. Farooq eno samyamadinda mattu bahala praudime ya moolakave prashnegalannu nibhaayisidaru. Aadare Hoogar maatra teera baalishaaagi kandaru: prashnegala sankhye mattu prashnegala vishaya eradaraloo.
Bahusha illi vyaktavaagiruva abhipraayagalannu avaru sinikatanada maatu endu tilidukollade, tamma varadigaarikeyannu nodugarige sahyavaaguvante badalaayisikolluttaare embudaagi aashsisona
nanage ondu doubt........ nivu nimma hesarannu muchchittu e blognalli barithiralla nimmannu hidiyuvudu kasta na......
We can accept that tv9 breaks first (in kannada news )mumbai terror news. But from 27th morning itself another 24 hour news channel suvarna news channel breaks news faster then tv9 even without a exclusive reporter.
on 27th night suvarna news channel didn't stop it's news brocasting.
on 27th midnight suvarna news channel broadcasts IMRAAN BAARBAR's recorded hidden phono
(a terror holds OBEROY-TRIDENT hotel hostages) twice. I didn't accept your view that suvarna news channel for behind in bradcasting mumbai terror attack news.
ಸುಗಂಧಿಯವರಿಗೆ ಕೇವಲ ನ್ಯಾಷನಲ್ ಚಾನೆಲ್ ಗಳು ಮಾತ್ರ ಕಾಣುತ್ತವೇನೋ? ನಮ್ಮ ಟಿವಿ9, ಸುವಣದಂತಹ ಚಾನೆಲ್ ಗಳು ಯಾವುದೇ ರೀತಿಯ ಮೂಬೂತ ಸೌಲಭ್ಯವಿಲ್ಲದಿದ್ದರೂ ವರದಿಗಾರಿಕೆ ಂಆಡಿದ್ದು ಕಾಣುತ್ತಿಲ್ಲವೇ? ಅಲ್ಲಿ ನ್ಯಾಷನಲ್ ಚಾನೆಲ್ ಗಳ ರಾಜ್ ದೀಪ್, ಬರ್ಕಾ ಇವರೆಲ್ಲಾ ಪಕ್ಕದಲ್ಲೇ ಇರುವ ಎ.ಸಿ. ಕಾರಿನಲ್ಲಿ ಕೂತು ಕೂಲ್ ಡ್ರಿಂಕ್ ಹೀರುತ್ತಾ, ಲೈವ್ ಬಂದಾಗ ಮೇಕಪ್ ಟಚ್ ಮಾಡಿಸಿಕೊಂಡು ಬಂದು ವಿಶ್ಲೇಷಣೆ ಮಾಡುವುದು ರಹಸ್ಯವೇನಲ್ಲ. ಇವರು ಒಂದೊಂದು ಸ್ಥಳದಲ್ಲೂ 3-4 ಜನ ರಿಪೋಟರ್ಗಳು, 8-10 ಓ.ಬಿ.ಗಳನ್ನು ಇಟ್ಟುಕೊಂಡು ಪ್ರಸಾರ ಮಾಡಿದ್ದಾರೆ. ಅವರಿಗೆ ಊಟ, ನೀರು ಸಿಗರೇಟುನಿಂದ ಹಿಡಿದು ಎಲ್ಲವನ್ನೂ ಸರಬರಾಜು ಮಾಡಲು ಸಹಾಯದಿಂದ ಹಿಡಿದು ಎಲ್ಲವನ್ನೂ ಸರಬರಾಜು ಮಾಡಲು ಇರುತ್ತಾರೆ. ಪ್ರತಿ ನಿಮಿಷದ ಫೀಡ್ ಬ್ಯಾಕ್ ಅವರಿಗೆ ಸಿಗುತ್ತಿರುತ್ತದೆ. ಸುದ್ದಿ ಬೇಕಿದ್ದಲ್ಲಿ ಅವರು ನೇರವಾಗಿ ಪ್ರಧಾನಿಯನ್ನು ಸಂಪರಕಿಸುವ ಮಟ್ಟಿಗೆ ಬಲಿಷ್ಟರು. ಆದರೆ ನಮ್ಮ ಸ್ಥಳೀಯ ಚಾನೆಲ್ ಗಳಿಗೆ ಅಲ್ಲಿಂದ ಸುದ್ದಿ ಕಳುಹಿಸಲೇ ವ್ಯವಸ್ಥೆ ಇಲ್ಲ. ನೆಟ್ಟಗೆ ಉಳಿಯಲು ವವ್ಯಸ್ಥೆ ಇಲ್ಲ. ಇನ್ನು ಒಂದೊಂದು ಸ್ಥಳದಲ್ಲಿ 2-3 ಜನ ರಿಪೋಟರ್ ಗಳು ಇರುವುದು ಆಗದ ಮಾತು. ಹೀಗಾಗಿ ಶಿವಪ್ರಸಾದ್, ಹೂಗಾರ್ ಇಂಥಹವರ ಕಾಂಟ್ರಿಬ್ಯೂಷನ್ ಮುಖ್ಯವಾಗುತ್ತದೆ. ದಯವಿಟ್ಟು ಹೈದರ್ ಹಾಗೂ ಸಾಗರಿಕಾ, ಬರ್ ಕಾ, ರಾಜ್ ದೀಪ್ ಅವರನ್ನು ಹೊಗಳು ಬುದ್ದಿ ಜೀವಿಗಳ ಸಾಲಿಗೆ ನೀವೂ ಸೇರಬೇಡಿ. ನಮ್ಮ ಹುಡುಗರು ಏನು ಸಾಹಸ ಮಾಡಿದ್ದಾರೆ ಎಂದು ಟಿವಿ9 ನೋಡಿದವರಿಗೆ ಗೊತ್ತು. ಅದರಲ್ಲಿ ಶಿವಪ್ರಸಾದ್ ಸತತ 65-70 ಗಂಟೆಗಳ ಕಾಲ ವರದಿ ಮಾಡಿದ್ದೂ ಸಹ ಕನ್ನಡದ ಮಟ್ಟಿಗೆ ಒಂದು ದಾಖಲೆಯೇ. ಹೀಗಾಗಿಯೇ ಅನಾಮಿಕನೊಬ್ಬ ಇಲ್ಲಿ ಕಮೆಂಟಿಸಿರುವಂತೆ ಶಿವಪ್ರಸಾದ್ ಇಡೀ ರಾಜ್ಯದಲ್ಲಿ ಒಂದು ಅಭಿಪ್ರಾಯ ಮೂಡಿಸುವಲ್ಲಿ, ವ್ಯವಸ್ಥೆಯ ವಿರುದ್ದ ಕಿಚ್ಚು ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಮಾತನಾಡುವುದು ಕೇಳಲೆಂದೆ ಟಿವಿ9 ಮುಂದೆ ಕೂತವರಿದ್ದಾರೆ. ಅವರಲ್ಲಿ ನಾನೂ ಒಬ್ಬ. ಅವರ ಮಾತು ಕೇಳಿದಾಗ ನನಗೂ ಆಕ್ರೋಶ ಉಕ್ಕಿ ಬಂದಿದೆ. ರಿಪೋಟರ್ ವಿಶೇಷ ಕಾರ್ಯಕ್ರಮದಲ್ಲೂ ಅವರು ನೀಡಿದ ಉತ್ತರಗಳು ಮೆಚ್ಯುರುಟಿಯಿಂದ ಕೂಡಿದ್ದವು.
ಇವರ ಸಾಧನೆಯನ್ನು ಸ್ವಲ್ಪ ನೋಡಿ ಸುಗಂಧಿಯವರೇ!
What vineet has said is right. Very few people know what real Hameed is. There are some journalists in Karnataka who afraid to speak against politicians. But this time the channels are going a step ahead. Even in Karnataka, TV9 seems to has launched a campaign against the politicians. Due to this many protests are going on Karnataka now.
Regarding print media, Kannada Prabha has done a very good job.
Edella Shivaprasada Emba Reporter (RSS Sarasanga Chalakana)na gang Avara paravagi barediddu Kanditha. Illadidre Ulidella reporter galu hinde Odaduthiruvaga tanobba nelada mele malagi Report maduva Agathya Enithu ? idakke uthara yarallu Illa.
ಅಯ್ಯೋ ದೇವ ಎಂಥ ದುರ್ದೈವ ಇದು .. ಮುಂಬೈ ದಾಳಿಯ ವಿರುದ್ದ ಹೋರಾಡಿದ ನಮ್ಮ ಸೇನೆ ,ಪೋಲಿಸ್ ಮತ್ತು ಭದ್ರತಾ ದಳದ ವೀರರ ಬಗ್ಗೆ ಪ್ರಶಂಸೆ ಮಾಡೋದು ಬಿಟ್ಟು ಈ ಮಾಧ್ಯಮದ ಮಂದಿನ ಹೊಗಳ್ತಾ ಇದ್ದೀರಲ್ಲ .
A Anonymous commented on Suvarna news.
i dont know what made him to tune Suvarna.boring newsreaders, bullshit questionair, Stolen footages,errors in the scrolls....is that what he is interested in?
still today they shamelessly use national news channels captured visuals of Mumbai incident.
Ofcourse not of one channel, Times now, 9X news....etc etc
you only mention that Suvarna news "BROADCASTED"!!! so many breaking news without a Exclusive reporter.
then where the hell they got the informations from?
I dont know Whether you noticed it or not, SUVARNA NEWS is the only channel who FIRST gave BREAKING NEWS on Operation cyclone's success in the world media.
that to, almost 2 hours before,
Even before the NSG chief official declaration!!!!
Great na???
i should really appreciate that anonymous commentors daring defending act on SUVARNA NEWS.
Anonymous ಅವರು Edella Shivaprasada Emba Reporter (RSS Sarasanga Chalakana)na gang Avara paravagi barediddu Kanditha. Illadidre Ulidella reporter galu hinde Odaduthiruvaga tanobba nelada mele malagi Report maduva Agathya Enithu ? idakke uthara yarallu Illa ಎಂದು ಬರೆದಿದ್ದಾರೆ. ಅಲ್ಲ, ಉಳಿದೆಲ್ಲ ವರದಿಗಾರರು ಓಡಿ ಹೋದರು ಎಂದು ಇವರೂ ಓಡಿ ಹೋಗಬೇಕಿತ್ತೇ? ಅದು ಆಯಾ ವರದಿಗಾರರಿಗೆ ಬಿಟ್ಟದ್ದು. ಇವರು ಅದನ್ನು ಟಿವಿ9ನಲ್ಲಿ ವಿವರಿಸಿದ್ದಾರೆ ಕೂಡಾ. ಕಮಾಂಡೋಗಳ ಕುರಿತು ಸುದ್ದಿ ಮಾಡಲು ಹೋದಾಗ ಗುಂಡಿನ ಚಕಮಕಿ ಆರಂಭವಾಗಿತ್ತು. ಆಗ ಅಲ್ಲಿ ಟ್ರಾಪ್ ಆಗಿದ್ದೆ. ನಾಲ್ಕು ನಿಮಿಷಗಳ ನಂತರ ಕಮಾಂಡೋಗಳು ಹಿಂದೆ ಹೋಗಿ ಎಂದಾಗ ಎದ್ದು ಹೊರಟೆ. ಆಗ ಫೈರಿಂಗ್ ಮತ್ತೆ ಶುರುವಾಯ್ತು ಎಂದು ವಿವರಿಸಿದ್ದಾರೆ. ಸಾಕ್ಷಿಯಾಗಿ ಅವರು ತೋರಿಸಿರೋ ವಿಡಿಯೋ ಸಹ ನೀವು ನೋಡಿರಬಹುದು. ಅದನ್ನು ಅಪ್ರಿಷಿಯೇಟ್ ಮಾಡಿ.
ಮೇಲಾಗಿ, ಮಾಲೆಗಾಂವ್ ವಿಷಯದಲ್ಲಿ ಅವರು ಮಾತನಾಡಿದ್ದು ಅನಾನಿಮಸ್ ಅವರು ಕೇಳಿಲ್ಲ. ಬಿಜೆಪಿ, ಸಂಘ ಪರಿವಾರ, ಎಬಿವಿಪಿಯವರು ಸುಮ್ಮನಿರಬೇಖು. ಅವರು ಈ ವಿಷಯದಲ್ಲಿ ತಪ್ಪು ಮಾಡ್ತಿದ್ದಾರೆ ಎಂದು ನೇರವಾಗಿ ಝಾಡಿಸಿದ್ದಾರೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಯಾರೇ ತಪ್ಪು ಮಾಡಿದ್ದರೂ, ತನಿಖೆ ನಿಸ್ಪಕ್ಷಪಾತವಾಗಿ ನಡೆಯಲಿ. ಇದರಲ್ಲಿ ಉಳಿದವರು ಮೂಗೂ ತೂರಿಸೊದು ಬೇಡ ಎಂದು ಅವರು ಹೇಳಿದ್ದು ಸರಿಯಾಗೇ ಇದೆ. ವರದಿಗಾರನಿಗೆ ಇರುವ ಈ ಸೂಕ್ಷಷಮ್ತೆಗಳನ್ನು ಗಮನಿಸಬೇಖು.
ನಮ್ಮ ದೇಶದಲ್ಲೇ ಮಾಧ್ಯಮದ ಸೆಳೆತ ಹೆಚ್ಚುತ್ತಿದೆ ಆದರೆ ಕನ್ನಡದ ಸುದ್ದಿವಾಹಿನಿಗಳನ್ನ ದಯವಿಟ್ಟು ವೀಕ್ಷಕರನ್ನ ಸೆಳಿತಿವೆ ಅಂತ compare madbedi..
ಮುಂಬೈ ಕಾಯಾಚರಣೆ ಬಗ್ಗೆ ಸತತ ಮಾಹಿತಿ ಕೊಡೋದರ ಬಗ್ಗೆ ಮಾಧ್ಯಮಗಳು ಒಟ್ಟಾರೆ ತಪ್ಪು ಮಾಡಿವೆ. ಪಾಕ್ ನಲ್ಲಿ ಕುಳಿತವರಿಗೆ ನಾವು 477 ಮಂದಿ ಕಮ್ಯಾಂಡೋಗಳು ಕಾಯಾಚರಣೆಯಲ್ಲಿ ನಿರತರಾಗಿದ್ದಾರೆ ಅನ್ನೋದನ್ನ ಹೇಳಿದ್ರೆ .. ಏನಾಗುತ್ತೆ.. ಯಾರಾದ್ರು ಯುದ್ದದಲ್ಲಿ ಪಾಲ್ಗೊಂಡಿರೋ ಸೈನಿಕರ ಸಂಖ್ಯೆನ ಬಹಿರಂಗ ಪಡಿಸ್ತಾರ?
english chanells ಅಇದರಲ್ಲಿ ತುಂಬಾ ತಪ್ಪು ಮಾಡಿವೆ. ಸಿಎಸ್ ಟಿ ಟಮಿನಲ್ ನಲ್ಲಿ ಗುಂಡಿನ ಕಾಳಗ ನಡೀತಿದೆ ಅಂತ ತಪ್ಪು ವರದಿ ಮಾಡಿದ ಸಿಎನ್ ಎನ್ ನ್ನೇ ಎಲ್ಲರೂ ಫಾಲ್ಲೋ ಮಾಡಿ ಪ್ರಕಟಿಸಿ ಸಾರಿ ಕೇಳಿದ್ರು ಇದು ಬೇಕಿತ್ತಾ... ?
ಅಲ್ರಿ ಮೆಜೆಸ್ಟಿಕ್ನಲ್ಲಿ ಯಾರೋ call girl ಮೇಲೆ ರೇಪ್ ಆಗಿದೆ ಅನ್ನೋದನ್ನ ಗಂಟೆಗಟ್ಟಲೆ ತೋರಿಸೋ, ಅದಕ್ಕಾಗಿಯೇ ಒಬ್ಬ ವರದಿಗಾರನಿಂದ ಮಾಹಿತಿ ತಗಳ್ಳೋ ಅನಿವಾಯತೆ ನಮಗೆ ಬೇಕಿದ್ಯಾ ? ಅಲ್ರೀ ದೇಶನೇ ತದ್ದುತ್ತೀವಿ ಅಂತೇಳೋ ಒಂದ ಚಾನೆಲ್ ನ ವರದಿಗಾರನೊಬ್ಬ ಲ್ಲಿನ ಹುಡುಗಿಯೊಬ್ಬಳಿಗೆ ಕೈಕೊಟ್ಟು ಇನ್ನೊಭ್ಭಳ ಜತೆ ಮದುವೆಗೆ ಮುಂದಾಗಿದ್ದಾನೆ ಇಂತವರಿಂದ ನಾವು ದೇಶ ುದ್ದಾರದ ುಪದೇಶ ನಿರೀಕ್ಷಿಸೋದು ಸರೀನಾ..?
ನೀವೇನಾದ್ರು ದಿನಾ ಇದೇ ಚಾನೆಲ್ ನೋಡಿದ್ರೆ ಜ್ಯೋತಿಷ್ಯ ದೂ ಇದೂ ಅಂತ ಕಥೆ ಹೇಳೋ ವಾಚಕನ ಮಾತು ಕೇಳಿ..ನಿಮಗೆ ಅಥ ಆಗುತ್ತೇ ದಯವಿಟ್ಟು ' ಜತೆಜತೆಗೆ 'ಅನ್ನೋ ಪದಾನ ನಿಮಿಶಕ್ಕೆ ಐವತ್ತು ಬಾರಿ ಹೇಳೊ ಇವರಿಗೆ ಬುದ್ದಿಹೇಳೋರೇ ಇಲ್ವಾ..? ಮಾಗಡಿಯ ರಂಗನಾಥನೇ ನಮ್ಮನ್ನ ಕಾಪಾಡಬೇಕು...
"ಘಟನೆಯ ಸಾಕ್ಶಿ"ಯವರಿಗೆ ಒಂದು ಮಾತು, ಆವತ್ತು ನಾನು ಅಲ್ಲೇ ಇದ್ದೆ. ಸುವರ್ಣ ಚಾನಲ್ ನ್ ಮೂರೂವರೆ ಅಡಿ ವರದಿಗಾರ ಕೇಳಿದ್ದು, " ಈ ಯರ್ರಾಬಿರ್ರಿ ಟ್ರಾನ್ಸ್ ಫರ್ ಗಳು ರಾಜ್ಯದ ಬೇಹುಗಾರಿಕೆ ವ್ಯವಸ್ಟೆಯ ಮೇಲೆ ಪರಿಣಾಮ ಬೀರುತ್ತಿವೆಯಲ್ಲ" ಅಂತ. ಪ್ರಶ್ನೆಯನ್ನು ಸಂಪೂರ್ಣವಾಗಿ ಕೇಳಿಸಿಕೊಳ್ಳುವ ವ್ಯವದಾನ ಯಡಿಯೂರಪ್ಪನವರಿಗಂತೂ ಇಲ್ಲ. ನಿಮಗೂ ಇಲ್ಲವಾ?
ನನ್ನ ಐಡಿಯಿಂದ ಲಾಗ್ಇನ್ ಆಗಿದ್ದಾಗ, ಫೋನ್ ಬಂತು. ಅಚಾತುರ್ಯದಿಂದ ಕಮೆಂಟ್ ಅಪಿಯರ್ ಆಯ್ತು. ಸುವರ್ಣದ ಬಗ್ಗೆ ನನಗೆ ಗೌರವವಿದೆ. ಆದರೆ ಕೆಲವೊಮ್ಮೆ ಅಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಬಗ್ಗೆ ಬೇಸರವಾಗಿದ್ದೂ ನಿಜ.
shivaprasad avarantha pracharakke hathoreyuva reporter galige encourage madidakke thumba thanks. u dont want real news. u want only glorification of or sensetionalisiom of news. it is realy bad for kannada channel or journalism. plz, what he said is importent rather than what was is fluency. plz, repair ur self. plz, it for good for kannada journalism and entair media, because every one known he is the ABVP karyakartha. plz understand my concern mr/ms animous.
Post a Comment