Monday, May 11, 2009

ಶೃತಿ ವಿಚ್ಛೇದನ ಮತ್ತು ಪಕ್ಷದ ಶಿಸ್ತು...

ನಟಿ ಶೃತಿ ಸುದ್ದಿಯಲ್ಲಿದ್ದಾಳೆ. ಪತಿ ಮಹೇಂದರ್ ನಿಂದ ದೂರವಾಗಲು ಬಯಸಿ ವಿಚ್ಛೇದನಕ್ಕೆ ಮುಂದಾಗಿದ್ದಾಳೆ. ನಟ, ನಟಿಯರ ದಾಂಪತ್ಯ ಸುದ್ದಿಮಾಧ್ಯಮಗಳಿಗೆ ಸದಾ ಬಹುಬೇಡಿಕೆಯ ಸರಕು. ಕೆಲವು ಟ್ಯಾಬ್ಲಾಯ್ಡ್ ಗಳಿಗೆ ಈ ಬೆಳವಳಿಗೆ ಸೆಂಟರ್ ಪೇಜೆ ಸೆನ್ಸೇಷನ್!
ಇದೇ ಸಮಯಕ್ಕೆ ಕಾದು ಕೂತಿದ್ದವರಂತೆ ಬಿಜೆಪಿಯ ಕೆಲ ನಾಯಕ, ನಾಯಕಿಯರು ಜಾಗೃತರಾಗಿದ್ದಾರೆ. ಬಿಜೆಪಿ ಶಿಸ್ತಿಗೆ ಹೆಸರಾದ ಪಕ್ಷ. ಶೃತಿ ವಿಚ್ಛೇದನ ಕೋರುವ ಮುಊಲಕ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದ್ದಾಳೆ ಎಂಬುದು ಅವರ ದೂರು. ಆ ಕಾರಣ ಶೃತಿಯನ್ನು ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕೆಂದು ಸದಾನಂದಗೌಡರ ಬೆನ್ನು ಬಿದ್ದಿದ್ದಾರೆ. ಆಕೆಯನ್ನು ಪದಚ್ಯುತಗೊಳಿಸಲು ಒತ್ತಾಯ ಮಾಡುವುದೆಂದರೆ, ತಮಗೇ ಆ ಸ್ಥಾನ ಕೊಡಿ ಎಂದು ಬೇಡಿಕೆ ಮುಂದಿಡುವುದು ಎಂದರ್ಥ. ಪ್ರಮೀಳಾ ನೇಸರ್ಗಿ ಮತ್ತಿತರರು ಇಂತಹ ಪ್ರಯತ್ನದಲ್ಲಿದ್ದಾರೆ.
ಸದಾನಂದ ಗೌಡರು ಸೋಮವಾರ ಪತ್ರಿಕೆಗಳಿಗೆ ಮಾತನಾಡಿ, ತಾನು ಮಹೇಂದರ್, ಶೃತಿ ಜೋಡಿಯನ್ನು ಒಂದು ಗೂಡಿಸಲು ಪ್ರಯತ್ನಮಾಡಿ ಸೋತೆ. ಆಕೆಯನ್ನು ಅಧ್ಯಕ್ಷ ಹುದ್ದೆಯಿಂದ ತೆಗೆಯುವ ವಿಚಾರವನ್ನು ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು. ಅವರ ಮಾತುಗಳಲ್ಲೇ ಹೇಳುವುದಾದರೆ, ಬಿಜೆಪಿ ಶಿಸ್ತಿಗೆ ಹೆಸರಾದ ಪಕ್ಷ. ಶೃತಿಯ ಇಂತಹ ನಡವಳಿಕೆಯಿಂದ ಪಕ್ಷಕ್ಕೆ ಮುಜುಗರವಾಗಿದೆ.
ಶಿಸ್ತಿನ ಪಕ್ಷ ಎಂದರೇನು?
ಹಾಗಾದರೆ ಪಕ್ಷದ ಕಾರ್ಯಕರ್ತೆ ಗಂಡನಿಂದ ಬೇಸತ್ತು ಬೇರೆ ಗಂಡಸಿನೊಂದಿಗೆ ಜೀವನ ಮಾಡುವ ಉದ್ದೇಶದಿಂದ ವಿಚ್ಛೇದನ ಕೋರಿದರೆ, ಅದು ಪಕ್ಷದ ಶಿಸ್ತಿನ ಉಲ್ಲಂಘನೆಯೆ? ಬಿಜೆಪಿ ಆಂತರಿಕ ಸಂವಿಧಾನ ಹಾಗೆ ಹೇಳುತ್ತದೆಯೆ? ವೈಯಕ್ತಿಕ ಜೀವನದಲ್ಲಿ ಬೇಸತ್ತು ಬೇರೆ ಆಯ್ಕೆಯ ಮೊರೆ ಹೋದರೆ, ಪಕ್ಷಕ್ಕೆ ಮುಜುಗರ ಆಗುವುದೆ?
ಬಿಜೆಪಿಗೆ ಶಿಸ್ತಿನ ಪಕ್ಷ ಎಂಬ ಹಣೆಪಟ್ಟಿ ಬರಲು ಇರುವ ಕಾರಣ, ಆ ಪಕ್ಷದಲ್ಲಿರುವ ಅನೇಕರು ಆರ್ ಎಸ್ ಎಸ್ ಮುಊಲದವರು. ಮೊದಲು ಅಲ್ಲಿ ಕೋಲು ಹಿಡಿದು ವ್ಯಾಯಾಮ ಮಾಡಿದವರು. ಇಂತಿಷ್ಟು ಹೊತ್ತಿಗೆ ಎದ್ದು, ಪೂಜೆ ಪುನಸ್ಕಾರಗಳನ್ನು ಮಾಡಿಕೊಂಡಿದ್ದ ಕಾರಣ ಅವರನ್ನು ಶಿಸ್ತಿನ ಸಿಪಾಯಿಗಳು, ಅವರು ಇರುವ ಪಕ್ಷ ಶಿಸ್ತಿನ ಪಕ್ಷ ಎಂದು ಅವರೇ ಪ್ರಚಾರ ಮಾಡಿದರು. ಆದರೆ ಅವರಿಗೆ ಎಂದಿಗೂ ಬಹುಮುಖೀ ಸಂಸ್ಕೃತಿ ದೇಶವನ್ನು ಗ್ರಹಿಸುವ ಕಲೆಯನ್ನು ಆ ಶಿಸ್ತು ಕಲಿಸಲೇ ಇಲ್ಲ. ಆ ಕಾರಣ ಒಬ್ಬ ಮಹಿಳೆ ವಿಚ್ಛೇದನಕ್ಕೆ ಅರ್ಜಿ ಹಾಕಿದರೆ, ಅದನ್ನು ಪಕ್ಷಕ್ಕಾದ ಮುಜುಗರ ಎನ್ನುತ್ತಾರೆ.
ಹಾಗಾದರೆ, ಬಿಜೆಪಿಯಲ್ಲಿದ್ದಾಕ್ಷಣ, ಗಂಡ ಎಷ್ಟೇ ಕಷ್ಟ ಕೊಟ್ಟರೂ ಯಾವ ಮಹಿಳೆಯೂ ವಿಚ್ಛೇದನ ಪಡೆಯದೇ ಇರಬೇಕೇನು?
ಒಂದು ಕ್ಷಣ ಬಿಜೆಪಿಯ 'ಅಪ್ರತಿಮ ಪ್ರತಿಭೆ' ರೇಣುಕಾಚಾರ್ಯನನ್ನು ನೆನಪು ಮಾಡಿಕೊಳ್ಳಿ. ಜಯಲಕ್ಷ್ಮಿ ಎಂಬ ನರ್ಸ್ ಜೊತೆ ರಾದ್ಧಾಂತ ಮಾಡಿಕೊಂಡ ಆಸಾಮಿ. ಆಕೆಗೆ ನಾನಾ ಆಮಿಷ ಒಡ್ಡಿ, ಮೋಸ ಮಾಡಿದನೆಂಬ ಆರೋಪಗಳಿವೆ. ಆಕೆ ಹಲವು ಬಾರಿ ಆತ್ಮಹತ್ಯೆಗೂ ಯತ್ನಿಸಿದ್ದುಂಟು. ಪತ್ರಿಕಾಗೋಷ್ಪಿಯೊಂದನ್ನು ಕರೆದು, ರೇಣುಕಾಚಾರ್ಯನ ಲೀಲೆಗಳನ್ನು ಜಗಜ್ಜಾಹೀರು ಮಾಡಿದಳು.
ನೆನಪಿರಲಿ, ಆಗ ಈ ಸೊಕಾಲ್ಡ್ ಶಿಸ್ತಿನ ಪಕ್ಷಕ್ಕೆ ಮುಜುಗರವಾಗಲಿಲ್ಲ, ಅದರ ಶಿಸ್ತು ಉಲ್ಲಂಘನೆ ಆಗಲಿಲ್ಲ!! ಅದೇ ವ್ಯಕ್ತಿ ಶಾಸಕನಾಗಿ ಮುಂದುವರಿಯುತ್ತಾನೆ. ಮುಂದೆ ಹಟ್ಟಿ ಚಿನ್ನದ ಗಣಿಗೆ ಅಧ್ಯಕ್ಷನಾಗುತ್ತಾನೆ.
ಅದೇ ಪತ್ರಿಕಾಗೋಷ್ಟಿಯಲ್ಲಿ ಯಡಿಯುಊರಪ್ಪ ಮತ್ತು ಪಕ್ಷದ ಇನ್ನೊಬ್ಬ ಪ್ರಮುಖ ನಾಯಕಿ ಮಧ್ಯೆ ಮಧುರ ಬಾಂಧವ್ಯ ಇದೆ ಎಂದು ಜಯಲಕ್ಷ್ಮಿ ಸಾರಿದಳು. ಅವರ ಸಂಬಂಧವೇ ತಮ್ಮ ಮತ್ತು ರೇಣುಕಾಚಾರ್ಯರ ಸಂಬಂಧಕ್ಕೆ ಪ್ರೇರಣೆ ಎಂದೂ ಹೇಳಿದಳು. ಆಗ ಪಕ್ಷಕ್ಕೆ ಮುಜುಗರ ಆಗಲಿಲ್ಲವೇ ಮಿಸ್ಟರ್ ಸದಾನಂದಗೌಡರೆ?
ಟಿವಿ9 ರ ಸಂದರ್ಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಶೃತಿ ಹೇಳಿದ್ದು "ಸದಾನಂದ ಗೌಡರ ಹೆಂಡತಿ ಅವರಿಂದ ಡೈವೋರ್ಸ್ ಪಡೆಯಲು ಅರ್ಜಿ ಹಾಕಿದ್ದರೆ, ಅವರಿಗೆ ಮುಜುಗರ ಆಗಬೇಕಿತ್ತು. ನಾನು ನನ್ನ ಗಂಡನಿಂದ ವಿಚ್ಛೇದನ ಕೋರಿದರೆ ಅವರಿಗೇಕೆ ಮುಜುಗರ?"
ಉತ್ತರ ಸರಿಯಾಗಿಯೇ ಇತ್ತು. ಶೃತಿಯ ನಿರ್ಧಾರ ಏನೇ ಇರಲಿ. ಅದರ ಪರಿಣಾಮಗಳನ್ನು ಆಕೆ ಎದುರಿಸುತ್ತಾಳೆ.

4 comments:

Anonymous said...

chennagide sir....
adre shruthi madve agtha iro chndr chood bagge bareyiri boss avanobba mhaan kalla.. details bekaadre kodona
sgowda

parasurama kalal said...

gಒಂದೇ ಬಗೆಯ ಧಿರಿಸು ಧರಿಸಿ, ಕವಾಯುತು ನಡೆಸುವುದಕ್ಕೆ ಆರೆಸೆಸ್ಸ್ 'ಶಿಸ್ತು' ಎಂದು ಕರೆದುಕೊಳ್ಳುತ್ತದೆ. ಇಲ್ಲಿ ಧಿರಿಸು ಮಾತ್ರವಲ್ಲ, ಒಂದೇ "ಚಾರ, ಆಚಾರ ಎಲ್ಲವೂ "ಟ್ಲರ್‌ನ ಬೂದುಬಟ್ಟೆಯ ಸೈನಿಕರಿಂದ ಕಡ ತೆಗೆದುಕೊಂಡಿದ್ದೇ ಆಗಿದೆ. ಮ"ಳೆ ಎಂದರೆ ಆಕೇ ಶೂದ್ರಳೆಂದು ಆಕೆಯನ್ನು ಕತ್ತಲಲ್ಲಿಡಲು ಈ ಗುಂಪು ಜಾತಿಬೇಧ"ಲ್ಲದೇ ಮ"ಳಾ ಸಂಕುಲವನ್ನೇ ದೂರುತ್ತದೆ. "ಗಾಗಿ ಇವರಲ್ಲಿ ಅನೇಕರು ಬ್ರಹ್ಮಚಾರಿಗಳು ಎಂದು ಕರೆದುಕೊಳ್ಳಲು ಹೆಮ್ಮೆ ಪಡುತ್ತಾರೆ. 'ಬ್ರಹ್ಮಚರ್ಯವೇ ಜೀವನ, "ರ್ಯ ನಾಶವೇ ಮೃತ್ಯು' ಇವರಿಗೆ ಪ್ರಿಯವಾದ ಪುಸ್ತಕ. ಇಂತಹ "ಕಾರಳಿಂದಲೇ ಇವರಲ್ಲಿ ಕೆಲವರು ಸಲಿಂಗಕಾ"ಗಳಾಗಿ ಬದಲಾಗಿದ್ದಾರೆ.
ಇಂತಹ "ಚಾರಧಾರೆಯ ಪಕ್ಷ ಬಿಜೆಪಿಗೆ ರೇಣುಕಾಚಾರ್ಯರದು ತಪ್ಪೇ ಅಲ್ಲ. "ಚ್ಛೇದನಕ್ಕೆ ಅರ್ಜಿ ಹಾಕಿದ ಶೃತಿಯದೇ ಮಹಾ ಅಪರಾಧ. ಹೆಣ್ಣಾದವಳು, ತಗ್ಗಿ, ಬಗ್ಗಿ ನಡೆದು ಅವರು ತಿಳಿದುಕೊಂಡ ಭಾರತೀಯ ಸಂಸ್ಕೃತಿಯ ಪರಮನಾರಿಯಾಗಬೇಕಲ್ಲವೇ? ಈ ಪಕ್ಷದ್ದು ಹೋಗಲಿ, ಶೃತಿಯ ಸಂಸಾರದ ಜಂಜಾಡವನ್ನೆಲ್ಲಾ ದುಶ್ಯಾಸನರಂತೆ ತನಿಖಾ ವರದಿ ಎಂಬ ಹೆಸರಲ್ಲಿ ಎಳೆದು ಹಾಕುತ್ತಾ ಮಾನವನ್ನೇ ಹರಾಜು ಹಾಕುತ್ತಾರಲ್ಲ. ಈ ಟ್ಯಾಬ್ಲೋ ಪತ್ರಿಕೆಗಳ ಬಗ್ಗೆ ಮೊದಲು ಮಾತಾಡಬೇಕಿದೆ.
- ಪರುಶುರಾಮ ಕಲಾಲ್

ishtena yennuva matugalali said...

bjp bagge bidona.adre shruthi bagge matadona.avalu divorce kottiddu tappala adre sumaru hattu varshgalinda kanada lopa doshagalu ega yake kanisidave adu innobba vekti sikka mele.heege samrathane madodadre hosa jeevanada kanasu kanoru sanyasinigalu agbeku ashte.adre shruthi public figures ri enu madoke agalla.if they become so public they will loose their private life.

Anonymous said...

BJP, RSS and other Sections of Hindus are talibanis. take care of all these.

Habba