Friday, July 17, 2009

ಪ್ರಶ್ನೆಗಳಿರುವುದು ಜಿ.ಎನ್ ಮೋಹನ್ ಗೆ!!

ಇದು ಸಂತಸದ ಸಂಗತಿ. ಪತ್ರಿಕೋದ್ಯಮದ ಗಿರಣಿಯಲ್ಲಿ ಹಲವು ವರ್ಷಗಳಿಂದ, ನಾನಾ ರೂಪಗಳಲ್ಲಿ ತೊಡಗಿಸಿಕೊಂಡಿರುವ ಜಿ.ಎನ್ ಮೋಹನ್ ಈಗ ಮಿಡಿಯಾ ಮೆಣಸಿನಕಾಯಿ (ಮಿಡಿಯಾ ಮಿರ್ಚಿ) ಕಿವುಚಲು ಅಣಿಯಾಗಿದ್ದಾರೆ. ವಿಜಯ ಕರ್ನಾಟಕದ ಶನಿವಾರದ ಆವೃತ್ತಿಯಲ್ಲಿ ಪ್ರತಾಪ ಸಿಂಹನ ಅಂಕಣದೊಂದಿಗೆ ಮೋಹನ್ ಅಂಕಣ ಪ್ರಕಟವಾಗುವುದು ವಿಶೇಷ.
ಒಂದು ಪತ್ರಿಕೆ ಹೀಗೆ ಪತ್ರಿಕೋದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಕುರಿತು ಚರ್ಚೆಗೆ ವೇದಿಕೆ ಒದಗಿಸುವುದು ವಿಶಿಷ್ಟ ಬೆಳವಣಿಗೆ. ವಿಜಯ ಕರ್ನಾಟಕ ಸಂಪಾದಕ ವಿಶ್ವೇಶ್ವರ ಭಟ್ ಇಂತಹದೊಂದು ತೀರ್ಮಾನಕ್ಕೆ ಬರಲು ಏನೆಲ್ಲಾ ಕಾರಣಗಳು, ಒತ್ತಡಗಳಿದ್ದವು ಎಂಬುದು ನಿಗೂಢ. ಅದೇನೇ ಇದ್ದರೂ ಇದು ಒಂದು ಉತ್ತಮ ಪ್ರಯೋಗವೇ.
ಒಂದು ವಾರದ ಹಿಂದೆ ಸನ್ಮಾನ್ಯ ಭಟ್ಟರು ಇಂತಹದೊಂದು ಅಂಕಣದ ಬಗ್ಗೆ ಕ್ಲೂ ಕೊಟ್ಟಾಗ, ಬರೆಯುವವರ್ಯಾರು ಎಂಬ ಸಂಗತಿಯನ್ನು ಬಚ್ಚಿಟ್ಟಿದ್ದರು. ಅದು ಈಗ ಬಹಿರಂಗವಾಗಿದೆ. ಮೋಹನ್ ಈ ಕೆಲಸಕ್ಕೆ ಸಮರ್ಥರು ಎಂದು ಒಪ್ಪಿಕೊಳ್ಳುವ ಅನೇಕ ಮಂದಿ, ವಿಜಯ ಕರ್ನಾಟಕದ ಆಯ್ಕೆ ಇವರು ಆಗಿರಲಿಕ್ಕಿಲ್ಲ ಎಂದೇ ಭಾವಿಸಿದ್ದರು.
ಕಾರಣ ಇಷ್ಟೆ. ಮೋಹನ್ ಒಂದು ಭಜರಂಗಿಗಳ ಅಡ್ಡೆಯಲ್ಲಿ ಅಂಕಣಕಾರರಾಗುತ್ತಾರ? ನಾಡಿನ ಬಹಳಷ್ಟು ಮಂದಿ ಇಂದಿಗೂ ಮೋಹನ್ ರನ್ನು ಗುರುತಿಸುವುದು 'ನನ್ನೊಳಗಿನ ಹಾಡು ಕ್ಯೂಬಾ' ಎಂಬ ಪ್ರವಾಸ ಕಥನದಿಂದ, ಡೆಂಕಲ್ ಪ್ರಸ್ತಾವನೆ ಕುರಿತಂತೆ ಬರೆದ ಕಿರು ಹೊತ್ತಗೆಯಿಂದ. ಆ ಮುಊಲಕ ಅವರ ಎಡ ಪಂಥೀಯ ಧೋರಣೆಯ ಮನುಷ್ಯ ಎಂಬುದು ಅನೇಕರ ಲೆಕ್ಕಾಚಾರ. ಇತ್ತೀಚೆಗೆ ಅವರು ಈಟಿವಿ ಮೂಲಕ, ಅವಧಿ ಮುಊಲಕ, ಮೇಫ್ಲವರ್ ಮಿಡಿಯಾ ಹೌಸ್ ಮುಊಲಕ ಕಾಣಿಸಿಕೊಳ್ಳುತ್ತಿದ್ದಾರೆ. ಅದರಂತೆ ಅವರನ್ನು ಗ್ರಹಿಸುವ ರೀತಿಗಳೂ ಬದಲಾಗಿವೆ. ಅವರ ಸುತ್ತ ಒಂದಿಷ್ಟು ಬ್ಲಾಗ್ ಹುಡುಗರು ಆಗಾಗ ಕಾಣಿಸಿಕೊಳ್ಳುತ್ತಾರೆ. ಅವರು ಬರೆದದ್ದನ್ನು ಇವರು ಗಂಭೀರವಾಗಿ ಓದಿ, ಪ್ರತಿಕ್ರಿಯಿಸುವವರಂತೆ ನಟಿಸುತ್ತಾರೆ. ಸಿಕ್ಕ ಸಿಕ್ಕವರಿಗೆಲ್ಲಾ ಬ್ಲಾಗ್ ಮಾಡ್ರಿ ಅಂತ ಬ್ಲಾಗ್ ಹುಚ್ಚು ಹಿಡಿಸುತ್ತಾರೆ. ಇವೆಲ್ಲದರ ಮಧ್ಯೆ, ಎಡಪಂಧೀಯ ಹೋರಾಟದಿಂದ ರೂಪುಗೊಂಡ ದೇಶದ ಕತೆಯನ್ನೇ ತನ್ನೊಳಗಿನ ಹಾಡನ್ನಾಗಿಸಿಕೊಂಡ ಮೋಹನ್ ಮರೆಯಾಗಿದ್ದಾರೆ, ಅಥವಾ ಮಸುಕಾಗಿದ್ದಾರೆ.
ಹಾಗಂತ, ಅವರು ಅದೆಲ್ಲಕ್ಕೂ ತಿಲಾಂಜಲಿ ಇಟ್ಟಿದ್ದಾರೆ ಎಂದಲ್ಲ. ಹೊಸ ಓದುಗ ಸಮುಊಹ, ಭಿನ್ನ ಆಲೋಚನೆಯ ಗುಂಪನ್ನು ತನ್ನ ಪರಿಧಿಯೊಳಗೆ ತಂದುಕೊಳ್ಳುವ ಪ್ರಯತ್ನ ಇರಬಹುದು. ಈಗ ವಿಜಯಕರ್ನಾಟಕ ಪತ್ರಿಕೆಗೆ ಅಂಕಣ ಬರೆಯಲು ಒಪ್ಪಿಕೊಂಡಿರುವುದು ಅಂತಹದೇ ಒಂದು ಹೆಜ್ಜೆಯಾ?
ಕಾದು ನೋಡಬೇಕು...
ಇನ್ನು ವಿಜಯ ಕರ್ನಾಟಕ. ಓದುಗರನ್ನು ದಿಕ್ಕುತಪ್ಪಿಸುವ ಕಾರ್ಯದಲ್ಲಿ ಸದಾ ಮುಂದು. ಮತಾಂತರ ಕುರಿತಂತೆ ಚರ್ಚೆ ಆರಂಭಿಸಿ, ಎಲ್ಲರಿಗೂ ಬರೆಯಲು ಅವಕಾಶ ನೀಡಿ, ತಾವೇನೋ ಉದಾರವಾದಿಗಳು ಎಂಬಂತೆ ಪೋಸು ಕೊಟ್ಟವರು ಆ ಪತ್ರಿಕೆಯ ಮುಖ್ಯಸ್ಥರು. ಆದರೆ ಆ ಎಲ್ಲಾ ಚರ್ಚೆಗೆ ಭೈರಪ್ಪನಿಂದಲೇ ಉತ್ತರ ಕೊಡಿಸಿ, ಎಲ್ಲರಿಗೂ ಟೋಪಿ ಇಟ್ಟರು. ಪ್ರತಾಪ ಸಿಂಹ ತನಗೆ ಗೂಗಲ್ ನಲ್ಲಿ ಸಿಕ್ಕಿದ್ದನೆಲ್ಲಾ ಅಧಿಕೃತ ಮಾಹಿತಿ ಎಂದು ಬರೆದು ಒಂದು ವರ್ಗವನ್ನು ದಿಕ್ಕುತಪ್ಪಿಸಿದ್ದು ಸುಳ್ಳಲ್ಲ. ಅಡ್ವಾನಿ ಇನ್ನುಮುಂದೆ ಪ್ರಧಾನಿ ಆಗುವುದೇ ಎಲ್ಲ ಎಂಬ ಸತ್ಯ ಅರಿವಾದಾಗ ಭಟ್ಟರು ತಮ್ಮ ಅಂಕಣದ ತುಂಬಾ ಕಣ್ಣೀರು ಹರಸಿದ್ದು ಇನ್ನೂ ಹಸಿರಾಗಿಯೇ ಇದೆ. ಓದುಗರ ಪತ್ರ ನೋಡಿಕೊಳ್ಳುವ ಸಿಂಹ, ಆಗಾಗ ತಾನೇ ಕಾಪು, ಸುಳ್ಯ, ಕರ್ಜೆ ಎಂಬ ಕೆಲ ಊರುಗಳಲ್ಲಿರುವ ಓದುಗನಾಗಿ ಪತ್ರ ಬರೆದುಕೊಂಡದ್ದೂ ಜಗಜ್ಜಾಹೀರು. ಅನಂತಮುಊರ್ತಿ ಭೈರಪ್ಪನನ್ನು 'ಒಬ್ಬ ಚರ್ಚಾಪಟು' ಎಂದು ಮುಊದಲಿಸಿದ್ದಕ್ಕೆ ಎಸ್ ಎಂ ಎಸ್ ಚಳವಳಿ ಮಾಡಿದ ಭೂಪರಲ್ಲವೇ ಇವರು.
ಮೊನ್ನೆ ಮೊನ್ನೆ ತಾನೆ ವಿಜಯಾ ಕಾಲೇಜಿನ ಕೆಮಿಸ್ಟ್ರಿ ಉಪನ್ಯಾಸಕರೊಬ್ಬರ ಟ್ರಿಕ್ ಗೆ ಬಲಿಯಾದದ್ದು ಇದೇ ಪತ್ರಿಕೆ. ತಾನೂ ಒಬ್ಬ ಪ್ರಖ್ಯಾತ ಜ್ಯೋತಿಷ್ಯ ಶಾಸ್ತ್ರಜ್ಞ ತನ್ನದೂ ಒಂದು ಬರಹ ಪ್ರಕಟಿಸಿ ಎಂದು ಅವರು ಪತ್ರಿಕೆಗೆ ಸುಮ್ಮನೇ ಒಂದು ಲೇಖನ ಕಳುಹಿಸಿದರಂತೆ. ನೋಡು, ಈ ಪತ್ರಿಕೆ ಮಂದಿಗೆ ತಲೆಯೇ ಇರೋಲ್ಲ ಯಾವನು ಏನು ಬರೆದರೂ ಹಾಕ್ತಾರೆ ಎಂದು ಸ್ನೇಹಿತರೊಬ್ಬರ ಜೊತೆ ಬೆಟ್ ಕಟ್ಟಿ ಹಾಗೆ ಲೇಖನ ಕಳುಹಿಸಿದರು. ಆ ಲೇಖನವೂ ಪ್ರಕಟವಾಯಿತು.
ಈ ಪತ್ರಿಕೆಗೆ ಬರೆಯುವ ಕೆಲವು ಅಂಕಣಕಾರರು ಈ ನೆಲದ ಬಹುಜನರಿಗೆ ಮಾಡಿರುವ ದ್ರೋಹ ಅಷ್ಟಿಷ್ಟಲ್ಲ. ಪ್ರತಿ ಅಕ್ಷರದಲ್ಲೂ ಕೋಮುವಾದವನ್ನೇ ಉಸುರುವ ಬರಹಗಳು ಇಲ್ಲಿ ಮಾತ್ರ ಬರಲು ಸಾಧ್ಯ.
- ಇದೆಲ್ಲವೂ ಜಿ.ಎನ್ ಮೋಹನ್ ಗೆ ಚೆನ್ನಾಗಿ ಗೊತ್ತು. ಹಾಗಾದರೆ, ಇನ್ನು ಮುಂದೆ ಅವರ ಅಂಕಣ ಬರಹಗಳು ಹೇಗಿರುತ್ತವೆ? ಅವರು ಟೀಕೆಗೆ ನಿಲ್ಲುವುದಾದರೆ, ಮೊದಲು ಟೀಕಿಸಬೇಕಾದ್ದು ಆ ಪತ್ರಿಕೆಯ ಧೋರಣೆಗಳನ್ನೇ. ಮೋಹನ್ ನೇರವಾಗಿ ಅನ್ನಿಸಿದ್ದನ್ನು ಹೇಳಬಲ್ಲರು. ಇತ್ತೀಚೆಗೆ ಜೋಗಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಿಖರವಾಗಿ ಮಾತನಾಡಿದ್ದು ಅವರು ಮಾತ್ರ. ಜೋಗಿ ಮಾರುಕಟ್ಟೆಗಾಗಿ ಬರೆಯುತ್ತಾರೆ. ಅವರ ಕಥಾವಸ್ತುವಿಗೂ, ಟಿ.ಎನ್ ಸೀತಾರಂ ಅವರ ಜನಪ್ರಿಯ ಧಾರಾವಾಹಿಗೂ ವ್ಯತ್ಯಾಸಗಳಿಲ್ಲ ಎಂದು ಹೇಳಿದರು. ಅಂತಹದೊಂದು ಛಾತಿ ಅವರಿಗಿದೆ. ಆದರೆ, ಅದೇ ಧಾಟಿಯ ಮಾತುಗಳನ್ನು ಸಹಿಸಿಕೊಳ್ಳುವ ತಾಳ್ಮೆ ವಿಜಯ ಕರ್ನಾಟಕಕ್ಕೆ ಇದೆಯಾ?
ಅಂಥಹದೊಂದು ಸಂಘರ್ಷಕ್ಕೆ ಅನುವು ಮಾಡಿಕೊಡದಂತೆ ಬರೆಯುವ ಕೆಲಯುಊ ಮೋಹನ್ ಗೆ ಗೊತ್ತು. ಹಾಗಾದಲ್ಲಿ ಅವರು ರಾಜಿ ಆಗುತ್ತಾರ? ಬಹಳ ಕಾಲ ಅಂಕಣ ಉಳಿಯಲೆಂದು ವಿಜಯ ಕರ್ನಾಟಕದ ಬಗ್ಗೆ ಮಾತನಾಡದೇ ಸುಮ್ಮನಿರುತ್ತಾರಾ? ಧೋರಣೆ, ನಂಬಿ ಬಂದಿದ್ದ ಸಿದ್ಧಾಂತ ಎಲ್ಲವನ್ನು ಬದಿಗಿಟ್ಟು ಪಕ್ಕಾ ಅಕಡೆಮಿಕ್ ಶೈಲಿಗೆ ಒಗ್ಗಿಕೊಳ್ಳುತ್ತಾರ?
- ಈ ಪ್ರಶ್ನೆಗಳಿರುವು ಜಿ.ಎನ್ ಮೋಹನ್ ಗೆ!

9 comments:

parasurama kalal said...

ವಿಜಯ ಕರ್ನಾಟಕದಲ್ಲಿ 'ಮಿಡಿಯಾ ಮಿರ್ಚಿ' ಅಂಕಣಕಾರರಾಗಿ ಜಿ.ಎನ್.ಮೋಹನ್ ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಇದನ್ನೊಂದು ಸಕರಾತ್ಮಕ ಬೆಳವಣಿಗೆ ಎಂದುಕೊಳ್ಳೋಣ. ಇವತ್ತಿನ ಪರಿಸ್ಥಿತಿಯಲ್ಲಿ ನಾವು ಆಶಾಜೀವಿಗಳಾಗಿರಬೇಕು. ಇಲ್ಲದಿದ್ದರೆ ಸಿನಿಕತನ ಆವರಿಸುತ್ತದೆ.
ಆದರೆ....
ಈ ಆದರೆ ಎನ್ನುವುದು ಇದೆಯಲ್ಲಾ ಇದೇ ಬಹಳ ಕಿರಿಕಿರಿ ಉಂಟು ಮಾಡುವಂತಾದ್ದು ಮತ್ತು ಮುಖ್ಯವಾದುದ್ದು. 'ವಿಜಯ ಕರ್ನಾಟಕ'ದಲ್ಲಿ ಎರಡು ವರ್ಷ ಬಳ್ಳಾರಿ ಜಿಲ್ಲಾ ವರದಿಗಾರನಾಗಿ ನಾನು ಕೆಲಸ ಮಾಡಿದ್ದೇನೆ. ಆಗ ವಿಶ್ವೇಶ್ವರ ಭಟ್ ರು ಇನ್ನೂ ಕಾಲಿರಿಸಿದ್ದಿಲ್ಲ. ಆಗಲೇ ಆ ಪತ್ರಿಕೆ ಸಂಘ-ಪರಿವಾರದವರ ಅಣತಿಗೆ ತಕ್ಕಂತೆ ಕುಣಿಯುತ್ತಿತ್ತು. ಅದೇ ಕಾರಣದಿಂದ ನಾನು ಹೊರ ಬರಬೇಕಾಯಿತು. ಭಟ್ ರು ಬಂದ ಮೇಲೆ ವಿಜಯಕರ್ನಾಟಕ ಮೋದಿ ಪಾತ್ರವನ್ನು ವಹಿಸಿಕೊಂಡರೆ ಉಳಿದ ಪ್ರಮುಖ ದಿನ ಪತ್ರಿಕೆಗಳು ಅದ್ವಾನಿ, ವಾಜಪೇಯಿ ಪಾತ್ರಗಳನ್ನು ವಹಿಸಿಕೊಂಡು ತೃಪ್ತಗೊಂಡವು. ಈಗಲೂ ಈ ಪರಿಸ್ಥಿತಿ ಬದಲಾಗಿಲ್ಲ. ಪ್ರಜಾವಾಣಿ, ಈ ಟಿವಿಯಲ್ಲಿ ಕೆಲಸ ಮಾಡಿರುವ ಜಿ.ಎನ್.ಮೋಹನ್ ಅವಧಿ ಮೂಲಕ ಬ್ಲಾಗ್ ಲೋಕದಲ್ಲಿ ಕಾಲಿರಿಸುವ ಮೂಲಕ ತಮ್ಮ ಅಸ್ತಿತ್ವವನ್ನು ಮೀಡಿಯಾ ಹೌಸ್ ಮೂಲಕ ಕಂಡುಕೊಂಡರು. 'ಹಾಗೇ ಸುಮ್ಮನೆ' ಎನ್ನುವ ಬರಹಗಾರರ ಬಳಗದ ಸಂಯೋಜನೆ ನಡೆಸಿದರು. ಸಾಹಿತ್ಯ,ಸೃಜನಶೀಲ ಜೊತೆಯಲ್ಲಿ ಸಮಾಜ ಅದು ಇದು ಎಂಬ ಸಂವಾದವನ್ನೂ ನಡೆಸುತ್ತಾ ಬರುತ್ತಿದ್ದಾರೆ.
ಎಡಪಂಥೀಯ ಸಂಘಟನೆ ಹಾಗೂ ವಿಚಾರಗಳಿಗೆ ಹತ್ತಿರವಾಗಿರುವ ಮೋಹನ್ ಅವರಿಂದ ನಾವು ಕೂಡಾ ಸಹಜವಾಗಿ ನಿರೀಕ್ಷೆ ಇಟ್ಟುಕೊಂಡಿದ್ದೇವು. ಸಮಕಾಲೀನ ವಿಷಯಗಳ ಬಗ್ಗೆ ಒಂದು ರೀತಿಯ ಗಂಭೀರ ಚರ್ಚೆ (ಲಘುವಾಗಿಯಾದರೂ) ಬ್ಲಾಗ್ ನಲ್ಲಿ ನಿರೀಕ್ಷಿಸಿದ್ದೇವು. 'ಹಾಗೇ ಸುಮ್ಮನೆ' ಎನ್ನುವವರ ಜೊತೆ ಅವರು ಹೆಚ್ಚು ಬೆರೆತರು. ಇಂತಹ ಅನೇಕ ವಿಭಾಗದಲ್ಲಿ ಬೆರೆತು ಕೆಲಸ ಮಾಡುವುದು ಸಹ ಬಹಳ ಮುಖ್ಯ. ಪ್ರಶ್ನೆ ಎಂದರೆ ವೈಚಾರಿಕ ಗಾಢ ಅನುಭವವನ್ನು ಅಲ್ಲಿ ನಾವು ಉಂಟು ಮಾಡುವ ಮೂಲಕ ಬರಹಗಾರರಿಗೆ ಬದುಕಿನ ದೃಷ್ಠಿಕೋನ ಇನ್ನೂ ಹೆಚ್ಚು ಗಾಢವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರಜ್ಷಾವಂತರದ್ದಾಗಿದೆ. ಅದರಿಂದ ನಾವು ತಪ್ಪಿಸಿಕೊಂಡರೆ ಉಳಿದಂತೆ ಸಾಹಿತ್ಯ ಎನ್ನುವುದು ಉಪ್ಪಿನಕಾಯಿಯಂತೆ ನಂಜಿಕೊಳ್ಳುವ ಚರ್ಚೆಯಾಗುತ್ತದೆ. (ಡ್ರಿಂಕ್ಸ್ ಮಾಡುವಾಗ ಸ್ನಾಕ್ಸ್ ಎಂದು ಕರೆಯುತ್ತಾರಲ್ಲ. ಈ ಉಪಮೆ ಹೆಚ್ಚು ಸಮಕಾಲೀನ) ಅವಧಿ, ಕೆಂಡ ಸಂಪಿಗೆಯಲ್ಲೂ ನಡೆಯುತ್ತಿರುವುದು ಅದೇ ಅಲ್ಲವೇ?
ಈ ಎಲ್ಲಾ ಹಿನ್ನೆಲೆಯಲ್ಲಿ ಪ್ರೀತಿಯ ಗೆಳೆಯ ಜಿ.ಎನ್.ಮೋಹನ್ ಅವರ ಎಡಪಂಥೀಯ ಬದ್ಧತೆ,ವೈಚಾರಿಕ ದೃಷ್ಠಿಕೋನದ ಬಗ್ಗೆ ಎರಡೂ ಮಾತಿಲ್ಲ. ಆದರೆ... ಈ ಬಾರಿ
ವಿಜಯ ಕರ್ನಾಟಕದಲ್ಲಿ 'ಮೀಡಿಯಾ ಮಿರ್ಚಿ'ಯನ್ನು ಬಾರಿ ನಿರೀಕ್ಷೆ ಇಟ್ಟುಕೊಂಡು ನಾವು ಕಾಯುವುದಿಲ್ಲ.
ನಮ್ಮ ನಿರೀಕ್ಷೆಯನ್ನು ಸಹ ಅವರು ಪ್ರತಿಬಾರಿಯಂತೆ ಹುಸಿಗೊಳಿಸಲಿ ಎಂದು ಆಶಿಸುವೆ.
- ಪರುಶುರಾಮ ಕಲಾಲ್

Anonymous said...

ವಿಜಯ ಕನಾಱಟಕ ಸುದ್ದಿ ಮನೆಯಲ್ಲ, ಅದು ಕೇವಲ ಲದ್ದಿ ಮನೆ ಅ0ತ ಮೋಹನ್ಗೆ ಗೊತ್ತಾಗುತ್ತೆ ಬಿಡಿ.ಮೋಹನ್ ಲದ್ದಿ ಬೇಕೋ, ಸುದ್ದಿ ಬೇಕೋ ಅ0ತ ಡಿಸೈಡ್ ಮಾ್ಡಬೇಕು ಅಷ್ಟೆ.
ನಿಸಾರ್ ಅಹಮದ್
ಹೊಸಪೇಟೆ

Anonymous said...

ಜಿ.ಎನ್. ಮೋಹನ್ ಕುರಿತು ನಾವೇನೂ ಆಶಾವಾದಿಗಳಾಗಿರಬೇಕಾಗಿಲ್ಲ. ಏಕೆಂದರೆ ಕಮ್ಯುನಿಸ್ಟ್ ಪಕ್ಷವೊಂದರ ಅಧಿಕೃತ ಸದಸ್ಯರಾಗಿರುವ ಅವರು ಈಗಾಗಲೇ ಹಾದಿ ತಪ್ಪಿರುವುದು ಸ್ಪಷ್ಟವಾಗಿದೆ. ಮೇ ಫ್ಲವರ್ ಎಂಬ ಮೀಡಿಯಾ ಹೌಸ್ ಶುರುಮಾಡಿ, ಪುಸ್ತಕ ಪ್ರಕಟಿಸಲು ಆರಂಭಿಸಿದಾಗ, ಅವರು ಆಯ್ದುಕೊಂಡಿದ್ದು ಯಾರ ಪುಸ್ತಕವನ್ನು ಗೊತ್ತೇ, ಚೇತನಾ ತೀರ್ಥಹಳ್ಳಿ ಎಂಬ ಆರ್ಎಸ್ಎಸ್ ಬೆಂಬಲಿಸುವ ಬರಹಗಾತರ್ಿಯದ್ದು. ಚೇತನಾರ ಧೋರಣೆ ಬಗ್ಗೆ ಯಾರಿಗಾದರೂ ಅನುಮಾನಗಳಿದ್ದಲ್ಲಿ, ಅವರು ಇದುವರೆಗೆ ಬರೆದಿರುವ ಎಲ್ಲ ಬರಹಗಳನ್ನು ಒಮ್ಮೆ ಓದಬಹುದು. ಹೋಗಲ ಚೇತನಾರ ಮಾತಿನ ಮೋಡಿಗೆ ಮರುಳಾಗಿ ಮೋಹನ್ ಯಾಮಾರಿದ್ದಾರೆಂದು ಭಾವಿಸಿದರೂ, ಮೊನ್ನೆ ಮುಖ್ಯಮಂತ್ರಿ ಯಡಿಯೂರಪ್ಪ ಬಿಡುಗಡೆ ಮಾಡಿರುವ `ತುಂಬಿತು ವರುಷ, ತಂದಿತು ಹರುಷ' ಎಂಬ ಸಕರ್ಾರದ ಒಂದು ವರ್ಷದ ಸಾಧನೆಯನ್ನು `ಬಿಂಬಿಸುವ' ಪುಸ್ತಕವನ್ನು ವಿನ್ಯಾಸಗೊಳಿಸಿದ್ದು, ಅಂದರೆ ಸಿದ್ಧಪಡಿಸಿದ್ದು ಯಾರು ಎಂಬುದ ನೋಡಿದರೆ ಇವರೆತ್ತ ಸಾಗುತ್ತಿದ್ದಾರೆ ಎಂಬ ಬಗ್ಗೆ ಅನುಮಾನಗಳೇಳುವುದಿಲ್ಲ. ಅದಕ್ಕೆ ಪೂರಕವೆಂಬಂತೆ ಚೆಡ್ಡಿ ಪತ್ರಿಕೆ `ವಿಜಯ ಕರ್ನಾಟಕ' ದಲ್ಲಿ ಅವರೀಗ ಕಾಲಂ ಬರೆಯುತ್ತಿದ್ದಾರೆ. ಮೋಹನ್ ಚೆಡ್ಡಿ ಸಮುದಾಯಕ್ಕೆ ಕಮ್ಯುನಿಸ್ಟರ ಮತ್ತೊಂದು ಕೊಡುಗೆ

chetana said...

ಚೇತನಾರ ಧೋರಣೆ ಬಗ್ಗೆ ಯಾರಿಗಾದರೂ ಅನುಮಾನಗಳಿದ್ದಲ್ಲಿ, ಅವರು ಇದುವರೆಗೆ ಬರೆದಿರುವ ಎಲ್ಲ ಬರಹಗಳನ್ನು ಒಮ್ಮೆ ಓದಬಹುದು. ಹೋಗಲ ಚೇತನಾರ ಮಾತಿನ ಮೋಡಿಗೆ ಮರುಳಾಗಿ ಮೋಹನ್ ಯಾಮಾರಿದ್ದಾರೆಂದು ಭಾವಿಸಿದರೂ,
- very sick. inthaha GANDU MANASTHITIyannu nAnu dhikaristEne. heNNobbaLannu baLasikoLLade vyaktiyobbanannu oppose mADuva tAkattU nimagillave? identha asahAya vikruti nimmadu?
Mr. Anonymous, I WISH U SPEEDY RECOVERY. jotege, intha keeLu abhiruchi, mAtu, heNNannu anumAnagoLisuva comment gaLannu moderate mADuva Suddi mAtu vina baddhateyannU nAnu prashnistEne.
- Chetana Teerthahalli

Anonymous said...

nimagyake hottekichhu?

neevoo One Side alva?

NAGARAJU L M said...

navu mohan avarannu nambutteve. nodona enu breyuttare

ಶ್ರೀನಿವಾಸಗೌಡ said...

ನಿಮ್ಮ ಪ್ರಕಾರ ಜಿ.ಎನ್.ಮೋಹನ್ ಏನು ಬರಿಬೇಕು ಸ್ವಾಮಿ, ನೀವೆ ಎಲ್ಲಾ ಡಿಸೈಡ್ ಮಾಡಿದ್ರೆ ಹೇಗೆ, ಅವರು ಬರೆದಿರೋದು ಇನ್ನೂ ಒಂದೇ ಕಾಲಮ್ಮು. ಆಗಲೇ ಇದೆಲ್ಲಾ ಚರ್ಚೆ ಯಾಕೆ ಅಂತ. ಇಲ್ಲಿನ ಕಾಮೆಂಟುಗಳನ್ನ ಮೋಹನ್ ಓದಿದ್ರಂತೂ ಕನ್ಪೂಸ್ ಆಗಿಬಿಡ್ತಾರೆ. ಮುಂದೆ ಅವರು ಕಾಲಂಮ್ಮಿನಲ್ಲಿ ಬರೆಯೋ ಪ್ರತಿ ಪದ ಎಡಪಂಥವಾ, ಇಲ್ಲಾ ಬಲಪಂತವಾ ಅಂತ ಚರ್ಚೆ ಆರಂಭಿಸಬೇಡಿ ಪ್ಲೀಸ್. ಕಾಲಂ ಅಂದರೆ ಕೇವಲ ಒಂದು ಕಾಲಂ ಅಪ್ಪ ಇಷ್ಟ ಆದರೆ ಓದೋಣ ಇಲ್ಲ ಬಿಡೋಣ.
ಈಗ ಮಾಡ್ತಾ ಇಲ್ಲವಾ,ಕಾಸುಕೊಟ್ಟು ಯಾರು ಓದ್ತಾರೆ ವಿಕ ನಾ...

Anonymous said...

ನೀವು ಮಿರ್ಚಿಯರ ಮಾಡ್ರಿ ಮಸಾಲಾನಾದ್ರೂ ಮಾಡ್ರಿ. ಪ್ರಜಾವಾಣಿ ಬಗ್ಗೆ ಮಾತಾಡೋದು ನಿಮ್ಮ ಸಣ್ಣತನ ಻ದು ಗೊತ್ತಾ...

parasurama kalal said...

ಅಂತೂ ವಿಜಯ ಕರ್ನಾಟಕ ಜಿ.ಎನ್.ಮೋಹನ್ ಕಿವಿಗೆ ಕಮಲದ ಹೂವು ಸಿಕ್ಕಿಸಿಯೇ ಬಿಟ್ಟಿತು.
ಶನಿವಾರ ಬಂತಮ್ಮ, ಮೋಹನ್ ನೆನೆಯಮ್ಮ ಎಂದು ರಾಯರ ಹಾಡನ್ನು ತಿರುಚಿ ಹಾಡುತ್ತಿರುವಾಗಲೇ ಶನಿವಾರ ಬರುತ್ತೇ, ಹೋಗುತ್ತೇ. ಅಲ್ಲಿ ನಿಮಗೆ ವಿಶ್ವೇಶ್ವರ ಭಟ್ರು ಹಾಗೂ ಪ್ರತಾಪ್ ಸಿಂಹಗಳೇ ಭೂಮಿಯನ್ನು ಲೀಜ್ ಪಡೆದು ಗುತ್ತಿಗೆದಾರರಂತೆ ಇಡೀ ಪುಟವನ್ನು ಆವರಿಸಿಕೊಂಡು ಪಾಂಚಜನ್ಯ ಊದುತ್ತಾರೆ. ಅಂತಹ ಸ್ಥಳದಲ್ಲಿ ಮೋಹನ ಮುರುಳಿಗಾನಕ್ಕೆ ಏನು ಕೆಲಸ? ಎನ್ನುವಂತೆ ಮೋಹನ್ ಅವರ 'ಮಿಡಿಯಾ ಮಿರ್ಚಿ' ಮಾಯವಾಗಿ ಹೋಗಿದೆ.
ಬೆಂಗಳೂರಿನ ಹೊರಗಿರುವ ನಮ್ಮಂತವರು ಇನ್ನು ಮುಂದೆ ಮಿಡಿಯಾ ಮಿರ್ಚಿಯನ್ನು 'ಅವಧಿ'ಗೆ ಹೋಗಿ ಲಿಂಕ್ ತೆಗೆದುಕೊಂಡು ಅಲ್ಲಿಯೇ ಓದಿ ಪ್ರತಿಕ್ರಿಯಿಸಬೇಕು. ಮೊದಲ ಶನಿವಾರ ನಾನು ಬೆಂಗಳೂರಲ್ಲಿ ಇದ್ದೆ. ಅಲ್ಲಿ ವಿಜಯ ಕರ್ನಾಟಕ ತಿರುವಿ ಹಾಕಿದಾಗ 'ಮೀಡಿಯಾ ಮಿರ್ಚಿ'ಯಲ್ಲಿ ಗಂಗಾವತರಣ ಆನಾವರಣಗೊಂಡಿತ್ತು. ಅಂತೂ ಮೋಹನ್ ಕಾಣಿಸಿಕೊಂಡ ಅಂತಾ ನಿಜಕ್ಕೂ ಖುಷಿಯಾಯಿತು. ಊರಿಗೆ ಬಂದು ಕೆಲಸದಲ್ಲಿ ಮುಳುಗಿದ್ದಾಗ ಇವತ್ತು ಶನಿವಾರ ಅಂತಾ ನೆನಪಾಗಿ ವಿಜಯ ಕರ್ನಾಟಕ ಹುಡುಕಿದರೆ ಎಲ್ಲಿಯೂ 'ಮೀಡಿಯಾ ಮಿರ್ಚಿ' ಕಾಣಲಿಲ್ಲ. ಒಂದೇ ವಾರದಲ್ಲಿ ಮೋಹನ್ ವಿಕಗೆ ಬೇಡವಾಗಿ ಬಿಟ್ಟನೇ? ಅಂತಹ ಘಟನೆ ಏನಾದರೂ ನಡೆಯಿತೇ ವಾರವೇನಾದರೂ ಬದಲಾವಣೆ ಆಗಿದೆಯೇ ಎಂಬ ಗೊಂದಲದಲ್ಲಿ ಮುಳುಗಿದೆ. ಹಾಗೇ ನೋಡಿದರೆ ನಾನು ಮನೆಗೆ ಪ್ರಜಾವಾಣಿ ಬಿಟ್ಟು ಬೇರೆ ಪತ್ರಿಕೆ ತರಿಸುವುದಿಲ್ಲ. ಪ್ರಜಾವಾಣಿಯ ಬಗ್ಗೆ ಎಷ್ಟೇ ತಕರಾರು ಇದ್ದರೂ ಕುರುಡುಗಣ್ಣಿನವನಿಗಿಂತ ಮೆಳ್ಳಗಣ್ಣವನು ಮೇಲು ಎನ್ನುವ ಥಿಯರಿ ಅದು.
ಮಂಗಳೂರಿನಿಂದ ಗೆಳೆಯರೊಬ್ಬರು ಮೇಸೇಜ್ ಹಾಕಿ ಕರಾವಳಿ ಎಡಿಸನ್ ನಲ್ಲಿ ಸಿಂಹ, ಭಟ್ಟರೇ ಇದ್ದಾರೆ. ಮೋಹನ್ ಕಾಣುತ್ತಿಲ್ಲ. ನಿಮ್ಮ ಎಡಿಸನ್ ನಲ್ಲಿ ಏನಾದರೂ ಮೋಹನ್ ಇದ್ದಾನೆಯೇ ಅಂತಾ ಕೇಳಿದ ಮೇಲೆಯೇ ನನಗೆ ಗೊತ್ತಾಗಿದ್ದು, ಮೋಹನ್ ಕಿವಿಗೆ ವಿಕ ಬಳಗ ಕಮಲದ ಹೂವು ಇಟ್ಟಿದೆ ಅಂತಾ. ಉಳಿದ ಎಡಿಸನ್ ಕಥೆ ಕೇಳುತ್ತಿದ್ದಂತೆ 'ಜಾಗ' ಎಲ್ಲಿದೆ? ಎಡಿಟೋರಿಯಲ್ ಪಕ್ಕದ ಈ ಜಾಗ ಬಹಳ ಮುಖ್ಯ. ಈಗಾಗಿ ಎಲ್ಲಾ ಎಡಿಸನ್ ಗಳು ಈ ಕಾಲಂ ಕೈ ಬಿಡುತ್ತವೆ ಎಂದರು. ಒಂದು ಕಾಲಂ ಕರ್ನಾಟಕವನ್ನು ಪ್ರತಿನಿಧಿಸುತ್ತದೆ. ಅಂತಹ ಕಾಲಂನ್ನು ಹೀಗೆ ಕೈ ಬಿಡುವುದು ಎಷ್ಟು ಸರಿ ಎಂದು ಕೇಳಿದರೆ ಅದಕ್ಕೆ ಸಮರ್ಪಕ ಉತ್ತರ ಸಿಗಲಿಲ್ಲ. ಅದು ಎಡಿಸನ್ ಗೆ ಬಿಟ್ಟ ವಿಷಯ. ಭಟ್ರರೇ ಅದನ್ನು ಖುದ್ದು ತಿಳಿಸಿದ್ದಾರೆ ಎಂದರು.
ಬೆಂಗಳೂರು ಎಡಿಸನ್ ದಲ್ಲಿ ಮಾತ್ರ ಮೀಡಿಯಾ ಮಿರ್ಚಿ ಕಾಣಿಸಿಕೊಳ್ಳುತ್ತಿದೆ ಅಂತಾ ಅರ್ಥಆಯಿತು. ಶರಣರ ವಚನವನ್ನು ಸ್ವಲ್ಪ ಬದಲಾವಣೆ ಮಾಡಿ, 'ಕೊಡಬೇಕು, ಕೊಡದಂತಿರಬೇಕು' ಎಂಬ ಹಾಡು ನಾವು ಗುನಗುನಿಸಬೇಕು ಅಷ್ಟೇ. ಕರ್ನಾಟಕದ ತುಂಬಾ ಒಂದು ಫೇಜಿನಲ್ಲಿ ನರಿಗಳು, ಸಿಂಹಗಳ ಅಪ ಪ್ರಲಾಪ. ಬೆಂಗಳೂರಿನವರಿಗೆ ಮಾತ್ರ ರಿಯಾಯಿತಿ. ಈ ಆಪ ಪ್ರಲಾಪದ ನಡುವೆ ಒಂದು ಮೋಹನ ಮುರಳಿಗಾನ...
ಮೋಹನ್ ಕಥೆ ಹೋಗಲಿ, ನಮ್ಮ ಕಿವಿಗೂ ಕಮಲದ ಹೂವು ಸಿಕ್ಕಿಸಿ ಬಿಟ್ಟರಲ್ಲಾ ಈ ವಿಕ ಮಂದಿ.
ಕಸಾಯಿಖಾನೆಯಲ್ಲಿ ಹೂವು ಮಾರುವವರಿಗೆ ಏನು ಕೆಲಸವಯ್ಯ?
ಅಯ್ಯಾ ಮೀಡಿಯಾ ಹೌಸ್ ನ ಮನೆಯೇ ಲೇಸವಯ್ಯಾ
ತಪ್ಪು,ಸರಿಯೋ ವಾದ ಮಾಡುವ, ಸಂವಾದ ನಡೆಸುವ ಬ್ಲಾಗ್ ಹುಡುಗರೇ ಖರೇ ಖರೇ ಸ್ನೇಹಿತರಯ್ಯಾ
ನಮ್ಮ ಕೂಡಲ ಸಂಗಮದೇವನೇ ಕ್ಯೂಬಾದ ಫಿಡೇಲ್ ಕ್ಯಾಸ್ಟ್ರೋ ಅಯ್ಯಾ
ಎಂಬ ಹೊಸ ಹಾಡನ್ನು ಈಗ ಮೋಹನ್ ಹಾಡಬಹುದು.
- ಪರಶುರಾಮ ಕಲಾಲ್