Tuesday, December 16, 2008

ಭಲೇ ಟಿವಿ9!

ಸಾಮಾನ್ಯವಾಗಿ ಟಿವಿ9 ವಾಹಿನಿ ಏನೇ ಮಾಡಿದರೂ ಅತಿಯಾತಿ ಮಾಡುತ್ತದೆ. ತನ್ನ ಗ್ರಹಿಕೆಯೇ ಅಂತಿಮ ಎಂದುಕೊಂಡು ವರದಿಮಾಡುತ್ತದೆ. ಇದಕ್ಕೆ ಮಂಗಳವಾರ ಪ್ರಸಾರಗೊಂಡ "ಧೋನಿ-ಲಕ್ಷ್ಮಿರೈ" ಕುರಿತು "ಸ್ನೇಹನಾ-ಪ್ರೀತಿನಾ" ಕಾರ್ಯಕ್ರಮ ಇತ್ತೀಚಿಗಿನ ಸಾಕ್ಷಿ. ಇದರ ನಡುವೆಯೂ ನಿನ್ನ ಟಿವಿ9 "ಮುಖ್ಯಮಂತ್ರಿಗಳಿಂದ ಜಾತಿ ರಾಜಕೀಯ" ಎನ್ನುವ ಸುದ್ದಿಯನ್ನು ಭಿತ್ತರಿಸಿ ಭೇಷ್ ಏನಿಸಿಕೊಂಡಿದೆ.
ಮಂಡ್ಯದ ಟಿವಿ9 ವರದಿಗಾರ ರವಿ ಸುದ್ದಿಯನ್ನು ಸೂಕ್ಷ್ಮವಾಗಿ ಗಮನಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಡೆಸಿದ ಜಾತಿವಾರು ಸಭೆಯಗಳ ಮಾಹಿತಿಗಳನ್ನುಮತ್ತು ವಿಡಿಯೋ ಕ್ಲಿಪ್ಪಿಂಗ್ ಗಳನ್ನು ಸಂಗ್ರಹಿಸಿದ್ದರು. ಮುಖ್ಯಮಂತ್ರಿ " ಮಾದಿಗರ ಒಕ್ಕೂಟ"ಕ್ಕೆ ಹೋಗಿ ಅಲ್ಲಿಯೂ ತಮ್ಮ ಎಂದಿನ "'ಪುಂಗಿ" ಊದಿ ಬಂದದ್ದು ನಂತರ ವೀರಶೈವ ಮುಖಂಡರ ಸಭೆ ನಡೆಸಿದ್ದನ್ನು ನೇರವಾಗಿ ಹೇಳಿದ್ದಾರೆ ವರದಿಗಾರ.
ಹಾಗೆಯೇ ಮುಖ್ಯಮಂತ್ರಿಗಳು ಆಗಾಗ್ಗೆ ಹೇಳುವ " ಜಾತಿ ರಾಜಕೀಯ ಮಾಡಬೇಡಿ" ಎನ್ನುವ ಮಾತನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿಗಳನ್ನು ಮರಳಿ ಪ್ರಶ್ನಿಸಿದ್ದಾರೆ. ಜಾತಿ ರಾಜಕೀಯ ಮಾಡಿದ ಮುಖ್ಯಮಂತ್ರಿಗಳನ್ನು ಝಾಡಿಸಿದ್ದಾರೆ. ಜನರ ಮುಂದೆ ಮೈಕ್ ಹಿಡಿದಾಗ ಸಾರ್ವಜನಿಕರೂ ಕೂಡ ಮುಖ್ಯಮಂತ್ರಿಗಳಿಗೆ ಮಂಗಳಾರತಿ ಮಾಡಿದ್ದಾರೆ. "ಅಭಿವೃದ್ಧಿ ವಿಚಾರದಲ್ಲಿ ರಾಜಕೀ ಮಾಡಬೇಡಿ " ಎನ್ನುವ ಮುಖ್ಯಮಂತ್ರಿಗಳು ಅಭಿವೃದ್ಧಿ ವಿಚಾರ ಬಿಟ್ಟು ಜಾತಿಗಳನ್ನು ಅಪ್ಪಿಕೊಂಡಿದ್ದೇಕೆ ಎಂದು ಆಕ್ಷೇಪಿಸಿದ್ದಾರೆ.
ವರದಿಗಾರ ರವಿ ಕೊನೆಯಲ್ಲಿ ಕೇಳಿದ ಪ್ರಶ್ನೆ: ಮೊನ್ನೆ ತಾನೇ ಗೌರವ ಡಾಕ್ಟರೇಟ್ ತೆಗೆದುಕೊಂಡ ಡಾ. ಬಿ.ಎಸ್.ಯಡಿಯೂರಪ್ಪ ಅವರು ಈ ರೀತಿ ಜಾತಿ ರಾಜಕೀಯ ಮಾಡಬಹುದೆ?
ಇವತ್ತಿನ ಪತ್ರಿಕೆಗಳಲ್ಲಿ ಈ ಬಗ್ಗೆ ಒಂದೇ ಒಂದು ಸಾಲೂ ಇಲ್ಲ. ಬದಲಿಗೆ ಈಗಾಗಲೇ ಸಾವಿರ ಸಲ ಹೇಳಿ ಸವಕಲಾಗಿರುವ " ಎಂಟೂ ಕ್ಷೇತ್ರಗಳಲ್ಲು ಗೆಲ್ಲುತ್ತೇವೆ" ಎನ್ನುವ ಸುದ್ದಿ ರಾರಾಜಿಸುತ್ತಿದೆ.

7 comments:

Anonymous said...

ಎಚ್.ಡಿ.ಕುಮಾರಸ್ವಾಮಿಯವರು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದಾಗ ಟಿವಿ೯ನಲ್ಲಿ ಪ್ರಸಾರಗೊಂಡ ವರದಿಗಳನ್ನು ನೀವು ಗಮನಿಸಲಿಲ್ಲವೆನಿಸುತ್ತದೆ.
ಇಡೀ ದೇವೇಗೌಡರ ಕುಟುಂಬ ತಮ್ಮ ಕಛೇರಿಯಲ್ಲಿ ಅಸಹ್ಯಕರವಾಗಿ ಹೋಮ-ಹವನಗಳನ್ನು ಮಾಡುತ್ತ ಸಾರ್ವಜನಿಕವಾಗಿ ಒಂದು ಧರ್ಮದ ಪೂಜಾವಿಧಾನಗಳನ್ನು ಕೈಗೊಂಡಿದ್ದರು. ಜಾತ್ಯತೀತ ಎಂಬ ಹಣೆಪಟ್ಟಿಯ ಪಕ್ಷ ಹೀಗೆ ಒಂದು ಧರ್ಮದ ಆಚರಣೆಯನ್ನು ತಮ್ಮ ಪಕ್ಷದ ಕಚೇರಿಯಲ್ಲಿ ಆಚರಿಸಿದ್ದನ್ನು ಟಿವಿ೯ ಕಟುವಾಗಿ ಟೀಕಿಸಿ ವರದಿ ಮಾಡಿತು.
ಜಾತ್ಯತೀತ ರಾಷ್ಟ್ರದಲ್ಲಿ ಇಂಥ ಸಾರ್ವಜನಿಕ ಹೋಮ ಹವನಗಳಿಂದಾಗುವ ಪರಿಣಾಮಗಳ ಬಗ್ಗೆ ಲಕ್ಷ್ನಣ್ ಹೂಗಾರ್ ಅದ್ಭುತವಾಗಿ ಮಾತನಾಡಿದ್ದರು.
ಟಿವಿ೯ ಚೆಡ್ಡಿಗಳ ಕೈಗೆ ಸಿಕ್ಕಿದೆ ಎಂದು ಆಗಾಗ ಅನಿಸಿದರೂ ಇಂಥ ವರದಿಗಳಿಂದಾಗಿ ಅದು ಜೀವಂತಿಕೆ ಉಳಿಸಿಕೊಂಡಿದೆ.
ಥ್ಯಾಂಕ್ಸ್ ಟು ಲಕ್ಷ್ಮಣ್ ಹೂಗಾರ್

Anonymous said...

dr. yadiyurappara bagge varadi madalu yavude patrikege dairya illa. ella hondanike madikondive. adarindale jati sabhegala varadi madilla. idakke yavude patrike horatalla. patrekegalu tamma darma mareyuttive

Anonymous said...

S, J K Govinda Rao omme Bhashanadalli heliddaru BSY tanu votu keluvaga hindu antha heli mata kelidda athava lingayath anthana antha keli antha.

Anonymous said...

ಯಡಿಯೂರಪ್ಪರ ಜಾತಿ ರಾಜಕಾರ ಇಂದು ನಿನ್ನೆಯದಲ್ಲ. ಅವರ ಸುತ್ತ ಮತ್ತ ಹಾಗೂ ಆಯಕಟ್ಟಿನ ಸ್ಥಳಗಳಲ್ಲೆಲ್ಲಾ ಈಗಾಗಲೇ ಲಿಂಗಾಯತ ಸಮುದಾಯ ಗಿರಕಿ ಹೊಡೆಯುತ್ತಿದೆ. ಕೆಲವು ಪ್ರಮುಖ ಪತ್ರಿಕೆಗಳ ಕೆಲವರಿಗೆ ಮಾಮೂಲು ನೀಡುತ್ತಾ ಅವರ ಕೆಲಸಗಳನ್ನು ಇವರು ಮಾಡಿಕೊಡುತ್ತಿರುವುದರಿಂದ ಯಾವ ಪತ್ರಿಕೆ ವರದಿ ಮಾಡಲು ಮುಂದಾಗಿಲ್ಲ. ಆದರೆ ಬಿಜೆಪಿಗೆ ವಿರೋಧಿಯಾಗಿರೋ ಕಸ್ತೂರಿ ವಾಹಿನಿಯ ಮಂಡ್ಯ ವರದಿಗಾರ ರೆಲ್ಲ ಹೋಗಿದ್ದ ಇಂತಹ ಸುದ್ದಿ ತೆಗೆಯೋದು ಬಿಟ್ಟು ಅನ್ನೋದು ಈಗಿನ ಪ್ರಶ್ನೆ .
ಅಲ್ರೀ ಕುಮಾರಣ್ಣ ನಿಮಗೆ ಬೇಕಾಗಿರೋ ಬಿಸಿ ಸುದ್ದಿ ಕೊಡದವರಿಗೆ ಸ್ವಲ್ಪ ಬಿಸಿ ಮುಟ್ಟಿಸ್ರೀ ಆಗಲಾದ್ರೂ ಸರಿ ಹೋಗ್ತಾರೇನೋ...?
ಇನ್ನ vijaya karnataka ಅನ್ನೋ ಹಳದಿ ಪತ್ರಿಕೆ ಜನರಿಗೆ ಬೇಕಾಗಿರೋ ಸುದ್ದಿ ಬಿಟ್ಟು ಬೆರೇದನ್ನೆಲ್ಲಾ ಕೊಡ್ತಾಯಿದೆ. ಇದಕ್ಕಿಂತ times of india kannada ಸ್ವಲ್ಪ ವಾಸಿ ಅನ್ಸುತ್ತೆ ಅಲ್ವಾ..?
ದಂಡಿಯಾಗಿ ದುಡ್ಡು ಕೊಡೋರ photos ಗೆ ಬೆಂಗಳೂರು ವಿಜಯಾನ sale ಮಾಡುತ್ತಿದ್ದಾರೆ times group ನೋರು ಮಣ್ಣು ತಿನ್ತಿದ್ದಾರಾ ಅಂತಾ....

Anonymous said...

ಸುದ್ದಿಮಾತು ಮಿತ್ರರೇ ನಿಮಗೆ ಟಿವಿ೯ ಬಿಟ್ಟರೆ ಬೇರಾವ ಟಿವಿ ಚಾನಲ್‌‌ಗಳೂ ಕಣ್ಣಿಕೆ ಕಾಣಿಸಲ್ವಾ... ಕರ್ನಾಟಕದಲ್ಲಿ ಇರೋದು ಕೇವಲ ಟಿವಿ೯ ಮಾತ್ರವಲ್ಲಾ ಇತರ ಟಿವಿ ಚಾನಲ್‌‌ಗಳೂ ಇವೆ ...

Anonymous said...

tv9 nalli din nitya bruv heliddu keliddu karfykfrma nodideera...? adrlli, rajkarni glnna cnnaagi jhadistare.... adr bgge nimma abhipraaya breeri... namagantu raghavendra avra baraha ista agide... totally, its a great and innovative program...and

Anonymous said...

ಯಾರೋ ಒಬ್ಬರು ಮಹಾನುಭಾವರು 'ಹೇಳಿದ್ದು- ಕೇಳಿದ್ದು' ಬೆಸ್ಟ್ ಅಂತ ಬರೆದಿದ್ದಾರೆ. ಆದರೆ ಅದನ್ನು ಬರೆಯುವವರ ಹೆಸರು ಎಲ್ಲೂ ಕಾಣಿಸೋಲ್ಲ. ಹಾಗಿದ್ರೂ ಸ್ಕ್ರಿಪ್ಟ್ ಬರೆದವರ ಹೆಸರನ್ನು ಹಾಕಿ, ರಾಘವೇಂದ್ರ ಶ್ರಮ ಸಾರ್ಥಕ ಎಂದಿದ್ದಾರೆ. ಅಂದ ಮೇಲೆ ಇದು ಟಿವಿ-9 ಸಿಬ್ಬಂದಿಯ ಪತ್ರವೇ ಹೌದು.