Saturday, December 13, 2008

ವಿಜಯ ಕರ್ನಾಟಕ ಮುಚ್ತಾರಂತೆ!!!

ಕನ್ನಡ ಪತ್ರಿಕೋದ್ಯಮ ಮಟ್ಟಿಗಿದು ಬ್ರೇಕಿಂಗ್ ನ್ಯೂಸ್!
ಜಾಗತಿಕ ಆರ್ಥಿಕ ಕುಸಿತದಿಂದ ಕುಗ್ಗಿರುವ ಟೈಮ್ಸ್ ಆಫ್ ಇಂಡಿಯಾ ಗ್ರೂಪ್ ತನ್ನ ವಿಜಯ ಕರ್ನಾಟಕ ದಿನಪತ್ರಿಕೆಯನ್ನು ಮುಚ್ಚಲು ತಯಾರಿ ನಡೆಸುತ್ತಿದೆ ಎಂಬ ಸುದ್ದಿಯೊಂದು ಸುದ್ದಿಮಾತು ಬಾಗಿಲು ತಲುಪಿದೆ. ಇದು ನಿಜಕ್ಕೂ ಆತಂಕದ ಸಂಗತಿ. ಹಾಗೂ ಇದು ಅನಿರೀಕ್ಷಿತವೇನಲ್ಲ. ಟಿಓಐ ಗುಂಪಿನವರು ವಿಜಯ ಕರ್ನಾಟಕ ಸಮುಊಹವನ್ನು ಕೊಂಡಾಗಲೇ ಈ ಗುಮಾನಿ ಇತ್ತು. ವಿಜಯ ಸಂಕೇಶ್ವರ ಹೆಸರಿನ ಮೊದಲರ್ಧವನ್ನು ಸೂಚಿಸುವ ವಿಜಯ ಕರ್ನಾಟಕ ಎಂಬ ಟೈಟಲ್, ಟೈಮ್ಸ್ ಗ್ರೂಪ್ ಗೆ ಯಾವತ್ತಿಗೂ ಪಥ್ಯವಾಗಿರಲಿಲ್ಲ. ಹಾಗಂತ ಪತ್ರಿಕೆ ಕೊಂಡ ತಕ್ಷಣ ಮಾಸ್ಟರ್ ಹೆಡ್ ನ್ನು ಬದಲಾಯಿಸುವಂತಿರಲಿಲ್ಲ. ಅದು ನಂಬರ್ 1 ಕನ್ನಡ ದಿನಪತ್ರಿಕೆ.
ಆದರೆ ಕ್ರಮೇಣ ಟೈಮ್ಸ್ ಆಫ್ ಇಂಡಿಯಾ ಎಂಬ ಹೆಸರಿನಲ್ಲೇ ಕನ್ನಡ ದಿನಪತ್ರಿಕೆ ಆರಂಭಿಸಿತು. ಆ ಮುಊಲಕ ಉಷಾಕಿರಣ ಮಲಗಿತು. ಕೆಲವರು ಕೆಲಸ ಕಳೆದುಕೊಂಡು ಬೇರೆಡೆ ನೆಲೆ ಕಂಡರು. ವಿಜಯ ಟೈಮ್ಸ್, ಬೆಂಗಳೂರು ಮಿರರ್ ಎಂಬ ಟ್ಯಾಬ್ಲಾಯ್ಡ್ ರೂಪ ತಾಳಿತು. ಈಗ ವಿಜಯ ಕರ್ನಾಟಕ ಸರದಿ.
ಟೈಮ್ಸ್ ಗ್ರೂಪ್ ವಿಜಯ ಕರ್ನಾಟಕವನ್ನು ಟ್ಯಾಬ್ಲಾಯ್ಡ್ ರೂಪಕ್ಕೆ ಬದಲಾಯಿಸುವ ಯೋಚನೆಯಲ್ಲಿದೆ. ಬೆಂಗಳೂರು ಮಿರರ್ ರೂಪದಲ್ಲಿ ದಿನಕ್ಕೊಂದು ಸೋಕಾಲ್ಡ್ 'ಇಂಟರೆಸ್ಟಿಂಗ್' ಸುದ್ದಿ ಹೊತ್ತು ಮಾರುಕಟ್ಟೆಗೆ ಬರಲಿದೆ. ಇದೀಗ ಸುದ್ದಿ ಮಾಡಲಾರಂಭಿಸಿರುವ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವಿಜಯ ಕರ್ನಾಟಕದ ಸ್ಥಾನವನ್ನು ಅಲಂಕರಿಸಲಿದೆ. ರಾಜ್ಯಾದ್ಯಂತ ಹಾಲಿ ಇರುವ ವಿಜಯ ಕರ್ನಾಟಕ ಓದುಗರಿಗೆ ಟಿಓಐ ಕನ್ನಡ ತಲುಪುತ್ತದೆ. ಬೆಂಗಳೂರಿಗರಿಗೆ ಟ್ಯಾಬ್ಲಾಯ್ಡ್!
ಇದೆಲ್ಲಾ ಒತ್ತಟ್ಟಿಗಿರಲಿ. ಇಂತಹದೊಂದು ಬೆಳವಣಿಗೆಯಿಂದ ತೀರಾ ಆತಂಕಕ್ಕೆ ಒಳಗಾಗುವವರು ವಿಜಯ ಕರ್ನಾಟಕ ಸಿಬ್ಬಂದಿ. ಅದು ಟ್ಯಾಬ್ಲಾಯ್ಡ್ ರೂಪ ತಾಳುತ್ತಿದ್ದಂತೆ ಹೆಚ್ಚು ನೌಕರರ ಅಗತ್ಯ ಬೀಳದು. ವಿವಿಧ ಬ್ಯೂರೋಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ.ಕ ಸಿಬ್ಬಂದಿಯಲ್ಲಿ ಕೆಲವರು ಟೈಮ್ಸ್ ಕನ್ನಡ ಸಿಬ್ಬಂದಿಯಾಗಿ ಮುಂದುವರಿಯಬಹುದು. ಆದರೆ ಬಹುತೇಕರು ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಅವರಿಗೆ ಎರಡೋ-ಮುರೋ ತಿಂಗಳ ಸಂಬಳ ಮುಂಗಡವಾಗಿ ನೀಡಿ ಮನೆಗೆ ಕಳುಹಿಸುತ್ತಾರೆ.
ಈ ಹಿಂದೆ ಉಷಾಕಿರಣ ಹಾಗೂ ವಿಜಯ ಟೈಮ್ಸ್ ಬಾಗಿಲು ಹಾಕಿದಾಗ ಬೀದಿಗೆ ಬಿದ್ದವರನ್ನು ಸೇರಿಸಿಕೊಳ್ಳಲು ಕೆಲವು ಪತ್ರಿಕೆಗಳು ಸಿದ್ಧವಿದ್ದವು. ಆದರೆ ಇಂದಿನ ಆರ್ಥಿಕ ದುಸ್ಥಿತಿಯಿಂದ ಕಂಗಾಲಾಗಿರುವ ಪತ್ರಿಕೆಗಳು ಹೊಸ ಹುದ್ದೆಗಳನ್ನು ಸೃಷ್ಟಿಸುವ ಸ್ಥಿತಿಯಲ್ಲಿಲ್ಲ. ಇರುವಷ್ಟರಲ್ಲೇ ಹೇಗೋ ಹೊಂದಿಕೊಂಡು ಹೋಗಬೇಕೆಂದು ಹರಸಾಹಸ ಮಾಡುತ್ತಿವೆ. ಹೀಗಿರುವಾಗ ಕೆಲಸ ಕಳೆದುಕೊಳ್ಳುವವರಿಗೆ ನೆಲೆ ಎಲ್ಲಿ?
ಸುದ್ದಿಮಾತು ಬಯಸುವುದಿಷ್ಟೆ. ಇಂದಿನ ವಿಜಯ ಕರ್ನಾಟಕ ಹಲವು ವಿಚಾರಗಳಲ್ಲಿ ಜನವಿರೋಧಿ, ಜೀವವಿರೋಧಿ ಸಿದ್ಧಾಂತಗಳಿಗೆ ವೇದಿಕೆಯಾಗಿರಬಹುದು. ಮುಂದೊಂದು ದಿನ ಪ್ರಗತಿಪರ ಮನಸ್ಸಿರುವ ಸಂಪಾದಕ ಪತ್ರಿಕೆ ನೇತೃತ್ವ ವಹಿಸಿದರೆ ಅದು ಬದಲಾಗುತ್ತದೆಂಬ ನಿರೀಕ್ಷೆ ಸುದ್ದಿಮಾತಿನದು. ಆದರೆ ಪತ್ರಿಕೆಯೇ ಇಲ್ಲವಾದರೆ? ಅದು ನಿಜಕ್ಕೂ ಬೇಸರ ಹಾಗೂ ಸಂಗತಿ. ಏಕೆಂದರೆ ನೂರಾರು ಕುಟುಂಬಗಳು ಪತ್ರಿಕೆಯ ಆಶ್ರಯದಲ್ಲಿವೆ. ಸುದ್ದಮಾತಿಗೆ ತಿಳಿದು ಬಂದ ಸುದ್ದಿ, ಕೇವಲ ಸುದ್ದಿಯಾಗಿ ಉಳಿದರೆ ಚೆನ್ನ.
ಕೊನೆಮಾತು: ಇದೇ ಭಾನುವಾರ (ಡಿ.14)ದಿಂದ ಡಿಎನ್ಎ ಬೆಂಗಳೂರು ಆವೃತ್ತಿ ಕಣ್ತೆರೆಯಲಿದೆ. ಪತ್ರಿಕೆ ತಂಡಕ್ಕೆ ಶುಭಾಶಯಗಳು.

12 comments:

Anonymous said...

Nimma aatankadalli naanoo bhaagi. Kelasa kaledukonda naukararige thamma punarvasati kandukolluvudu ashtenoo kashtavalla bidi. Swalpa samaya tondare aadeetu ashte. Aadare aa patrike samaajakke unabadisuva visha nodidare adara koneyannu ella prajnaavanta jana swaagatisabeku. VK andare vijaya karanataka alla, visha kanye. eegaagale karnatakada samaajada ardadashtu raktavannnadu vishamaya goliside. Innardhakke vishaveruva munna aa patrike chira vishraanti padedare naanantoo sambhrama paduttene. kelasa kaledukollabahudaada geleyarige ToI kannadadallo, tabloid nallo, athavaa innaavudaadaroo patrikegalalloo aadashtu bega kelasa dorakalee anthaloo prarthisuttene. Arthika muggattenoo shaashvatavalla bidi. innonduvare varshadalli matte ellavoo chetarisikolluttade...

Ittigecement said...

che..realy bad news..!

Anonymous said...

yes, correct totally agreed with suddimaathu. we dont have anything against VK. only thing is the present editorial policy is not acceptable at all.

abhivykthi said...

idu tira atnakad vichara. idra bennalle kasturi tv channel allu patrakartakartara annu horage kalislu list ready agide annte. nijkku nijavada patrakartarige idu aga baradu. idu sullagali. raj tv channel ninda nijavada journalist hora bandidare. idu nimge gotte.

Anonymous said...

VK close madalu tayari nadeyuttiddare VIJAY SANKESHWAR hosa sahasakke kai hakuttiddarante nijave..?

cmariejoseph.blogspot.com said...

ಸಂಕೇಶ್ವರರು ಯಾವ ಆದರ್ಶದ ಉದ್ದೇಶವನ್ನು ತೋರಗೊಟ್ಟಿದ್ದರೋ ಅವಕ್ಕೆಲ್ಲ ತಿಲಾಂಜಲಿಯಿತ್ತು ಪ್ರಜಾವಾಣಿಗೆ ಸಡ್ಡು ಹೊಡೆದು ಒಂದೂವರೆ ರೂಪಾಯಿಗೆ ಪತ್ರಿಕೆ ಮಾರಿ ವ್ಯವಹಾರ ಕೌಶಲ್ಯ ಪ್ರದರ್ಶಿಸಿದರು. ಆದರೆ ನಂತರದ ದಿನಗಳಲ್ಲಿ ಅದೇ ಸ್ವಾರ್ಥದ ಲಾಭಕ್ಕಾಗಿ ಟೈಮ್ಸ್ ಬಳಗಕ್ಕೆ ಪತ್ರಿಕೆ ಮಾರಿ ಪತ್ರಕರ್ತರನ್ನು ನಡುನೀರಿನಲ್ಲಿ ಕೈಬಿಟ್ಟು ಕೈತೊಳೆದುಕೊಂಡರು. ಅಲ್ಲೇ ಉಳಿದ ಕೆಲವರಿಗೆ ಟಿಓಐ ಸಂಬಳ ದೊರೆಯಿತು. ಆದರೆ ಹೊರದೂಡಲ್ಪಟ್ಟವರು ಬಹುಕಾಲ ನೀರಿನಿಂದ ಹೊರಬಿದ್ದ ಮೀನಿನಂತೆ ಚಡಪಡಿಸಬೇಕಾಯಿತು.
ಮೊದಲಲ್ಲಿ ಈ ಪತ್ರಿಕೆ ವಿಭಿನ್ನ ರುಚಿಗಳನ್ನು ಉಣಬಡಿಸಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದಂತೂ ನಿಜ. ಆದರೆ ಭಟ್ಟರ ಧೋರಣೆ ಅಲ್ಲಿ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಸಿತು. ಈ ನಡುವೆ ರೀ‍ಡ‌ರ್‍ಶಿಪ್ ಹೆಚ್ಚಿಸುವ ಧಾವಂತದಲ್ಲಿ ಮತಾಂತರವನ್ನು ದಾಳವಾಗಿ ಬಳಸಿಕೊಳ್ಳಲಾಯಿತು. ಆದರೆ ಈ ಗಿಮಿಕ್ಕುಗಳು ಸಾರ್ವಕಾಲಿಕವಲ್ಲ ಎಂಬುದನ್ನು ಅರಿಯುವಲ್ಲಿ ಅವರು ಸೋತರು.
ಟಿ ಓ ಐ ಆಗಲೀ, ಡಿ ಎನ್ ಎ ಆಗಲೀ ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯುವ ಹರಿಕಾರರಾಗಲು ಸಾಧ್ಯವಿಲ್ಲ. ಹೇಗೆ ಬಿಬಿಸಿ ಯವರು ತಮ್ಮ ನಿಲುವುಗಳನ್ನು ನಮ್ಮ ಮೇಲೆ ಹೇರುತ್ತಾರೋ ಹಾಗೆ ಈ ಎಲ್ಲರೂ ತಮ್ಮ mould ಗೆ ತಕ್ಕಂತೆ ನಮ್ಮ ಮನಸ್ಸುಗಳನ್ನು ರೂಪಿಸ ಬಯಸುತ್ತಾರೆ.

Anonymous said...

who that blady told that vk is going close down. VK given life to so many journalists when their is no oppertunity in other news paper ogrgnisation. This is just gossip nothing more then this. Only crucade people can generate this type of news & gossip. Do u think of kranataka people r fool when they have accept the VK after seeing other news paper.
Now a days VK giving such a news and making experiment where other news paper hanging them self to the same old system.

Anonymous said...

Bhesh! Idondu baaki ittu. Tabloid patrikegalu 5 varsha ide tharada suddi baredavu. eega nimma saradi.

Anonymous said...

ಅಲ್ಲರಿ ಏನೇನೋ ಗಿಮೊಕ್ಸ ಅಂದರೆ ಪೇಪರ್ ಸೈಜ್, ಬೆಲೆ, ಪುಟ ಕಡಿಮೆ ಮಾಡಿ ಸಿಬ್ಬಂದಿಗೆ ಸರಿಯಾದ ಸಂಬಳ ಕೊಡದೆ ಸತಾಯಿಸಿದರೆ ಇನ್ನೇನಾಗುತ್ತೆ

Anonymous said...

Tale kettide nimage!!

Anonymous said...

ಎನೂ ಬರದರೂ, ಎಲ್ಲರೂ ಓದುತ್ತಾರೆ ಎಂಬ ಭ್ರಮೆ ನಿಮ್ಮನ್ನು ಈ ಲೇಖನ ಬರೆಯಲು ಪ್ರಚೋದಿಸಿದಂತಿದೆ. ಅಷ್ಟಕ್ಕೂ ಈ ಸುದ್ದಿಗೆ ಸಾಕ್ಷಿ ಒದಗಿಸದರೆ ನಿಮಗೆ ಕೋಟಿ ನಮನಗಳು. ಸದ್ಯ ಕಸ್ತೂರಿ ವಾಹಿನಿಯಲ್ಲಿ ಸುಮಾರು ೮೦ಕ್ಕೂ ಅಧಿಕ ಪತ್ರಕರ್ತ ಸ್ನೇಹಿತರನ್ನು ಏನೂ ನೀಡದೆ ಮನೆಗೆ ಕಳುಹಿಸುತ್ತಿದ್ದಾರೆ. ಮೊದಲ ಹಂತವಾಗಿ ಈಗಾಗಲೇ ೨೫ ಮಂದಿಗೆ ಗೇಟ್ಪಾಸ್ ನೀಡಲಾಗಿದೆ. ಇದರ ಬಗ್ಗೆ ಬರೆಯಬೇಕೆಂದು ಯಾಕೆ ಹೊಳೆಯಲಿಲ್ಲ. ಹಾಗಂತ ವಿ.ಕ.ವನ್ನು ತೆಗಳುದರಲ್ಲಿ ನಮಗೆ ಸಿಗುವ ವಿಕ್‌ಋತ ಸಂತೋಷ ಇದರಲ್ಲಿ ದೊರಕಲು ಸಾಧ್ಯವಿಲ್ಲವೇನೋ..ಇರಲಿ, ನಿಮ್ಮ ಎಲ್ಲಾ ವಾದಗಳನ್ನು ಒಪ್ಪದಿದ್ದರೂ ಸಹಾ, ಪತ್ರಕರ್ತರ ಕಾಳಜಿ ಕುರಿತು ನಮ್ಮ ಬೆಂಬಲಕ್ಕೆ ನಾವೂ ಸಹಭಾಗಿ. ಹಾಗೇ ನಿಮ್ಮ ಸೂಕ್ಷ ಮನಸ್ಸಿನ ಆಲೋಚನೆಗಳು ಅಷ್ಟೇ ಉತ್ತಮವಾಗಿರುತ್ತವೆ. ಹಾಗಾಗಿಯೇ, ನಾನು ಕೂಡಾ ನಿಮ್ಮನ್ನು ನಾನು ಯಾವುದೇ ಪೂರ್ವಾಗ್ರಹ ಪೀಡಿತನಾಗಿ ಈ ಮಾತು ಹೇಳುತ್ತಿಲ್ಲ. ಓರ್ವ ಹಿತ್‌ಐಷಿಯಾಗಿ, ಉತ್ತಮ ಸ್ನೇಹಿತನಾಗಿ ಹೇಳುತ್ತಿದ್ದ್‌ಏನೆ.
ಇತೀ ನಿಮ್ಮವ..........

Anonymous said...

ಸುದ್ದಿ ಓದಿ ಆತಂಕವಾಗಿದೆ