Monday, December 15, 2008

ಇರಾಕ್ ಪತ್ರಕರ್ತ ಮತ್ತು ಯುದ್ಧದ ಡಿಮಾಂಡ್!

ಹೀಗೊಂದು ಪ್ರತಿಕ್ರಿಯೆ ವ್ಯಕ್ತವಾಗುವ ಅಗತ್ಯವಿತ್ತು. ಇರಾಕ್ ನ ಪತ್ರಕರ್ತ ಮುಂತಾಜೀರ್ ಅಲ್-ಜೈದಿ ಅದನ್ನು ಯಶಸ್ವಿಯಾಗಿ ಮಾಡಿದ್ದಾನೆ. ವಿಶ್ವದ ಹಿರಿಯಣ್ಣ ಎಂದೇ ಕುಖ್ಯಾತಿ ಪಡೆದಿರುವ ಅಮೆರಿಕಾ ಅಧ್ಯಕ್ಷನಿಗೆ ವಿದಾಯದ ಮುತ್ತನ್ನು ಬೂಟಿನ ಮುಊಲಕ ನೀಡುವುದು ಸುಲಭದ ಮಾತಲ್ಲ.
ಮುಂತಾಜೀರ್ ತನ್ನ ಅಸಂವೈಧಾನಿಕ ನಡವಳಿಕೆಯಿಂದ ಬಂಧಿತನಾಗಿರಬಹುದು. ಆದರೆ ಅವನ ಉದ್ದೇಶ, ಆ ನಡವಳಿಕೆ ಹಿಂದಿರುವ ನೋವು, ಬೇಸರ ಎಲ್ಲವೂ ಸ್ಪಷ್ಟವಾಗಿ ಜಗತ್ತನ್ನು ತಲುಪಿವೆ. ವಿಚಿತ್ರ ನೋಡಿ, ಬಾಂಬ್, ಮಿಸೈಲ್ ದಾಳಿ ಮಾಡಿ ಲಕ್ಷಾಂತರ ಅಮಾಯಕರನ್ನು ಕೊಂದ ಬುಷ್ ವಿರಾಜಮಾನನಾಗಿ ಪತ್ರಿಕಾಗೋಷ್ಠಿ ಮಾಡುತ್ತಾನೆ. ಅವನ ಕೊಲೆಗಡುಕ ಕೃತ್ಯಕ್ಕೆ ಬೂಟಿನೇಟಿನ ಮುಊಲಕ ವಿರೋಧ ವ್ಯಕ್ತಪಡಿಸಿದ ಪತ್ರಕರ್ತ ಬಂಧಿಯಾಗುತ್ತಾನೆ!
ಇರಾಕ್ ನ ವಿಧವೆಯರು, ತಬ್ಬಲಿಗಳು ಹಾಗೂ ಅನ್ಯಾಯವಾಗಿ ಪ್ರಾಣತೆತ್ತ ಅಮಾಯಕರ ಪರವಾಗಿ ಎರಡನೆಯ ಬೂಟು.
ಒಂದು ಯುದ್ಧ ಏನೆಲ್ಲಾ ಅವಗಢಗಳಿಗೆ ಕಾರಣವಾಗಬಹುದು ಎಂಬುದನ್ನು ಆ ಪತ್ರಕರ್ತ ತನ್ನ ಎರಡನೆಯ ಬೂಟನ್ನು ಎಸೆಯುವ ಮುನ್ನ ಜಗತ್ತಿಗೇ ಸಾರಿದ. ನಮ್ಮಲ್ಲೂ ಯುದ್ಧ ಬೇಕು ಎಂದು ಡಿಮಾಂಡ್ ಮಾಡುವವರು ಇದಿರಂದ ಕಲಿಯಲೇಬೇಕಾದ ಪಾಠವಿದೆ.
ಪ್ರಜಾವಾಣಿ ದೆಹಲಿ ಪ್ರತಿನಿಧಿ ದಿನೇಶ್ ಅಮಿನ್ ಮಟ್ಟು ಸೋಮವಾರ ತಮ್ಮ ಅಂಕಣದಲ್ಲಿ ಯುದ್ಧ ಕುರಿತಂತೆ ಬರೆದಿದ್ದಾರೆ. ಮುಊರು ರಸ್ತೆ ಕೂಡೋ ಸರ್ಕಲ್ ಗಳಲ್ಲಿ ನಾಕಾಣೆ ಮುಂಬತ್ತಿ ಹಚ್ಚಿಟ್ಟುಕೊಂಡು ಶೋಕಾಚರಣೆ ಮಾಡುವವರು ಯುದ್ಧ ಬೇಕು ಎನ್ನುವುದು ಈ ಹೊತ್ತಿನ ಬಹುದೊಡ್ಡ ಪಾರಾಡಾಕ್ಸ್.
ನೆನಪಿರಬಹುದು ನಿಮಗೆ, ಕಾರ್ಗಿಲ್ ಯುದ್ಧದಲ್ಲಿ ಕರ್ನಾಟಕದ 13-14 ಸೈನಿಕರು ಪ್ರಾಣ ತೆತ್ತರು. ಅವರೆಲ್ಲ ಯಾರು? ಸಣ್ಣ ಸಣ್ಣ ಊರಿನ ಹುಡುಗರು. ಅವರ್ಯಾರೂ ಶ್ರೀಮಂತರ ಮಕ್ಕಳಲ್ಲ. ಬಡ ಕೂಲಿ ಕಾರ್ಮಿಕ, ರೈತರ ಮಕ್ಕಳು. ಒಂದು ಯುದ್ಧ ಮಾಡಿದರೆ ಎಲ್ಲವೂ ಸರಿಹೋಗುತ್ತದೆ ಎನ್ನುವುದಾದರೆ, ಈ ಭೂಮಿ ಮೇಲೆ ಮೊದಲ ಯುದ್ಧವೇ ಕೊನೆಯ ಯುದ್ಧವೇ ಆಗಿರುತ್ತಿತ್ತು. ಆದರೆ ಹಾಗಾಗಲಿಲ್ಲವೆ. ಯುದ್ಧದಿಂದ ಯುದ್ಧ ಮಾತ್ರ ಹುಟ್ಟಬಲ್ಲುದು, ಶಾಂತಿಯಲ್ಲ. ಅಂದಹಾಗೆ ದಿನೇಶ್ ಅಮಿನ್ ಮಟ್ಟು ಬರಹವನ್ನು ತಪ್ಪದೇ ಓದಿ.

15 comments:

chanakya said...

ಅಮೇರಿಕಾದ ನಿರ್ಗಮಿತ ಅದ್ಯಕ್ಶ ಬುಶ್ ಮೇಲೆ ಬೂಟ್ ಏಸೆದಿದ್ದು ಸರಿ ಎನ್ನುವ ನೀವು..ಸರ್ವಾದಿಕಾರಿ ದೋರಣೆ ಹೊಂದಿದ್ದ ಇರಾಕ್ ಮೇಲಿನ ದಾಳಿಯನ್ನೂ ಒಪ್ಪಿಕೊಳ್ಳಬೇಕು..ಮಾನವ ವಿರೋದಿ ಕ್ರುತ್ಯ ನಡೆಸುವ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ದಂಡನೆಗೆ ಗುರಿಯಾಗಬೇಕಾದವರೇ? ಹಾಗಾಗಿ ಇಲ್ಲಿ ಬೂಟೇಟು ತಿಂದವ..ಕೊಟ್ಟವ ಇಬ್ಬರೂ ತಪ್ಪಿತಸ್ತಾರೆ. ಸತ್ಯ ಯಾವತ್ತೂ ಕಹಿ..ಅಲ್ವಾ ಗೆಳೆಯಾ..?

Anonymous said...

ಆ ದೃಶ್ಯವನ್ನು ಮತ್ತೆ ಮತ್ತೆ ನೋಡಿದೆ. ಎಂಥದೋ ಒಂದು ತೃಪ್ತಿ. ಅಸಹಾಯಕತೆಗೆ ಅಭಿವ್ಯಕ್ತಿ ದೊರಕಿದ ಸಮಾಧಾನ. ಇದು ಬುಷ್ಗೆ ಒಬ್ಬ ವ್ಯಕ್ತಿ ಆಗಿ ಅಲ್ಲ, ಅವರ ಧೋರಣೆಗಳಿಗೆ, ಅಮೆರಿಕನ್ ಅಹಂಕಾರಕ್ಕೆ, ಪುಂಡಾಟಿಕೆಗೆ ಆಗಲೇ ಬೇಕಾಗಿದ್ದ ಪೂಜೆ. ಇಡೀ ಭೂಮಂಡಲವನ್ನ ಪುರಾತನ ಕಾಲದಲ್ಲಿದ್ದ ಸಾರ್ವಭೌಮರಂತೆ ಆಧುನಿಕ ಕುತಂತ್ರಗಳ ಮೂಲಕ ಸವಾರಿ ಮಾಡುವ ಮನಸ್ಸಿಗೆ ಸಿಕ್ಕಿರುವ ಪ್ರತಿಕ್ರಿಯೆ.
ಅಂತೆಂಬರ ಗಂಡ ನಾನೇ ಎನ್ನುವ ಮನೋಭಾವದ, ಅದನ್ನೇ ಜಗತ್ತಿಗೆ ನಂಬಿಸುವ ಬುಷ್ ಸಹ ಮಣ್ಣಿನ ಪಾದದ ದೇವರೆಂಬುದು ಆ ದೃಶ್ಯದ(ಘಟನೆಯ) ಮೂಲಕ ಸಾಬೀತಾಯಿತು.
-ಪರಮೇಶ್ವರ ಗುರುಸ್ವಾಮಿ

Anonymous said...

ಬುಸ್ಸುಗುಡುವ ಬುಷ್‌ಗೆ ಪತ್ರಕರ್ತನೊಬ್ಬ ಬೂಟು ಎಸೆಯುವ ಮೂಲಕ ಸರಿಯಾದ ಉತ್ತರವನ್ನೇ ನೀಡಿದ್ದಾನೆ.
ಅದೃಷ್ಠವಶಾತ್ ನಮ್ಮ ಮಾಧ್ಯಮಗಳು, ಇತನನ್ನು ದುಷ್ಕರ್ಮಿ, ಭಯೋತ್ಪಾದಕ ಎಂದು ಬಣ್ಣಿಸಿಲ್ಲ. ದೊಡ್ಡಣ್ಣನೆಂದು ಬೀಗುವ ಅಮೇರಿಕಾದ ಅಹಂಕಾರಕ್ಕೆ ಬಿದ್ದ ದೊಡ್ಡ ಪೆಟ್ಟಿದು. ಅಮೇರಿಕಾದ ವಾಣಿಜ್ಯ ಕಟ್ಟಡಗಳ ಸ್ಪೋಟಕ್ಕಿಂತಲೂ ದೊಡ್ಡ ಪ್ರತಿಭಟನೆ ಇದಾಗಿದೆ. ಹೌದಲ್ವೇ ಇಂತವರಿಗೆ ಉತ್ತರ ಇದೇ ರೀತಿ ಹೇಳುವುದು ಸಹ ಅಹಿಂಸಾ ಹೋರಾಟವಲ್ಲವೇ? ಬುಷ್‌ಗೆ ಬಿದ್ದ ಬೂಟು, ಆತನನ್ನು ಬೆಂಬಲಿಸುವ, ಮೆಚ್ಚುವ ಯುದ್ಧದಾಹಿಗಳಿಗೆಲ್ಲಾ ಬಿದ್ದ ಏಟು ಕೂಡಾ ಇದು ಹೌದು. ಆ ಪತ್ರಕರ್ತನಿಗೆ ನಾವು ಸಾವಿರ ನಮಸ್ಕಾರ ಹೇಳುವೆವು ಹಾಗೂ ಬೆಂಬಲಿಸುವೆವು.
-ಪರುಶುರಾಮ ಕಲಾಲ್
-ಶಿವಶಂಕರ ಬಣಗಾರ್
-ಪಿ.ಅಬ್ದುಲ್

Anonymous said...

shame on america. atleast from now americans should know that they will be treated in any of the manner..! but we must support the journalist.

Anonymous said...

Bush annu aagalee Iraq melina yuddhavannaagali naanu samarthisuvudilla.

Aadare patrakartanobba ee reethi maadiddannu neevu samarthisuttiruvudu sariyalla.

Yuddhada bagge nimma dhoraneyannu kanditaa opputtene. Dinesh Ameen Mattu avara lekhanada bagge gamana seledaddakke dhanyavaadagalu.

Nanna prakaara prastuta ankanakaarara paiki Mattu avara ankana atyuttama. Enanteeri?

cmariejoseph.blogspot.com said...

ಅದು ದೌರ್ಜನ್ಯದ ವಿರುದ್ಧದ ಮಾನವ ಹೃದಯದ ತುಡಿತ.

Anonymous said...

ಚಪ್ಪಲಿ ಎಸೆದದ್ದು ಸರಿ. ಬುಶ್ ಗೆ ಹಾಗಾಗಬೇಕು.
ಆದರೆ,
ಅಮೇರಿಕಾದ ವಾಣಿಜ್ಯ ಕಟ್ಟಡಗಳ ಸ್ಪೋಟಕ್ಕಿಂತಲೂ ದೊಡ್ಡ ಪ್ರತಿಭಟನೆ ಇದಾಗಿದೆ--ಎಂಬ ಪ್ರತಿಕ್ರಿಯೆಗೆ
ಆದರೆ ಕಟ್ಟಡಗಳ ಸ್ಪೋಟವನ್ನು ಪ್ರತಿಭಟನೆ ಅನ್ನೋ ನೀವು ತಾಜ್ ಘಟನೆಯನ್ನೂ ಹಾಗಂತೀರ?
ಅದೂ ಪ್ರತಿಭಟನೆ ಎಂದರೆ ನಿಮ್ಮನ್ನು ಏನನ್ನಬೇಕು?
ಇದಕ್ಕೆ ಪರುಶುರಾಮ ಕಲಾಲ್, ಶಿವಶಂಕರ ಬಣಗಾರ್, ಪಿ.ಅಬ್ದುಲ್ ಸೂಕ್ತ ಉತ್ತರ ನೀಡಲಿ. ಅಸಹ್ಯಕರ ಬೇಡ.(ಹೇಗೆಂದರೆ ಬ್ರಾಹ್ಮಣ ಹುಡುಗಿಯನ್ನು ಶೂದ್ರ ಅಥವಾ ಮುಸ್ಲಿಮ್ ಭೋಗಿಸಿದರೆ ಸಮಾನತೆ ಮೂಡಬಹುದು ಅನ್ನೋ ಅಗ್ನಿ ಶ್ರೀಧರ್ ಆಲೋಚನೆಯಂತೆ)
-ಜೀವನ್ ಕುಮಾರ್

Anonymous said...

ಸುದ್ದಿಮಾತು ಆರಂಭಗೊಂಡ ಕೆಲದಿನಗಳಲ್ಲಿ ಇದನ್ನು ಆರಂಭಿಸಿದವರು ಸಾಕಷ್ಟು ಕ್ರಿಯಾಶೀಲರು, ಸಾಹಸಪ್ರಿಯರು ಅನ್ನಿಸಿತ್ತು. ಅಕ್ಟೋಬರ್ ತಿಂಗಳಿನಲ್ಲಿ ಬರೋಬ್ಬರಿ ೩೧ ಪೋಸ್ಟ್‌ಗಳನ್ನು ನೋಡಿ ಬೆರಗಾಗಿದ್ದೆ. ಆದರೆ ಈ ಕ್ರಿಯಾಶೀಲ ಯುವಕರಿಗೂ (ಯುವತಿಯರೂ ಇರಬಹುದೆ?) ಜಡತ್ವ ಆವರಿಸಿಕೊಂಡಂತಿದೆ. ಡಿಸೆಂಬರ್ ತಿಂಗಳ ೧೭ ದಿನಗಳಲ್ಲಿ ಕೇವಲ ಎಂಟು ಪೋಸ್ಟ್‌ಗಳನ್ನು ನೋಡಿದರೆ ಇದರ ಅರಿವಾಗುತ್ತೆ.
ಯಾಕೆ ಹೀಗಾಗುತ್ತಿದೆ? ತಮ್ಮ ವಿರುದ್ಧ ಸುದ್ದಿಮಾತುವಿನಲ್ಲಿ ಕಮೆಂಟ್‌ಗಳ ಮೂಲಕ ಮಿಸೈಲ್‌ಗಳನ್ನು ಎಸೆಯುವ ಅಕ್ಷರ ಭಯೋತ್ಪಾದಕರಿಗೆ ಹೆದರಿದ್ದೀರೇನು? ಇಷ್ಟೊಂದು ಸೋಮಾರಿತನ ಬಂದರೆ ಹೇಗೆ?
ಸುದ್ದಿಮಾತು ಸುದ್ದಿಮಾಧ್ಯಮದ ಹುಳುಕುಗಳನ್ನು ಎತ್ತಿಹಿಡಿಯುವ ಮೂಲಕ ಹಲವರ ನೋವಿಗೆ, ಆಕ್ರೋಶಕ್ಕೆ, ಸಾತ್ವಿಕ ಪ್ರತಿಭಟನೆಗೆ ಧ್ವನಿ ಒದಗಿಸಿದ್ದು ನಿಜ.
ಹೀಗಾಗಿ ಸುದ್ದಿಮಾತು ಬರೆಯುವವರ ಜವಾಬ್ದಾರಿಯೂ ಹೆಚ್ಚಾಗಿದೆ. ದಯಮಾಡಿ ಒಂದು ಕಮಿಟ್‌ಮೆಂಟ್ ಇಟ್ಟುಕೊಂಡು ಬರೆಯಿರಿ. ನಿಮ್ಮಿಂದ ಸುದ್ದಿಮಾಧ್ಯಮದ ಜಗತ್ತಿಗೆ ಆಗುವುದು ಸಾಕಷ್ಟಿದೆ. ಉತ್ಸಾಹ ಕಳೆದುಕೊಂಡು ಕಳೆದುಹೋಗಬೇಡಿ.
ಪ್ರವಾಸಕ್ಕೆ ಹೋಗಿದ್ದೆವು.. ಇತ್ಯಾದಿ ಬಾಲಿಷ ಕಾರಣಗಳನ್ನು ಕೊಡದೇ ದಿನವೂ ಅಪ್‌ಡೇಟ್ ಮಾಡಿ, ಬರೆಯಲು ಸಾಕಷ್ಟು ವಿಷಯಗಳಿವೆ

Anonymous said...

hats up to iraqi journalist

Anonymous said...

he ddi gud job

Anonymous said...

ಅಮೇರಿಕಾದ ವಾಣಿಜ್ಯ ಕಟ್ಟಡದ ಧ್ವಂಸ ಖಂಡನಾರ್ಹ. ಅದೊಂದು ಭಯೋತ್ಪಾದಕ ಕೃತ್ಯ ಎಲ್ಲಾ ಸರಿ.
ಈ ಕಟ್ಟಡ ಧ್ವಂಸವಾಗುತ್ತಿದ್ದಂತೆ ಅಮೇರಿಕಾದ ಸಮಾಜಶಾಸ್ತ್ರಜ್ಞ ನೋಮ್ ಚೊಮಸ್ಕಿ ನೀಡಿದ್ದ ಪ್ರತಿಕ್ರಿಯೆ ಇಲ್ಲಿ ಮುಖ್ಯ ’ಅತ್ಯಾಧುನಿಕ ರಕ್ಷಣಾ ವ್ಯವಸ್ಥೆ ಕಟ್ಟಿಕೊಂಡಿದ್ದ ಅಮೇರಿಕಾವನ್ನು ಕೇವಲ ಯಾವುದೇ ಆಯುಧವಿಲ್ಲದ ನಿರಾಯುಧಗೊಂಡ ಕೆಲವೇ ಕೆಲವು ಜನರು ವಿಮಾನದ ಇಂಧನವನ್ನೇ ಆಯುಧ ಮಾಡಿಕೊಂಡು ಕಟ್ಟಡ ಸ್ಪೋಟಿಸಿದ್ದಾರೆ ಎಂದರೆ ನಿಜಕ್ಕೂ ಆಶ್ಚರ್ಯ. ಅಮೇರಿಕಾದ ಸಾರ್ವಭೌಮತೆ ಆಹಂಕಾರಕ್ಕೆ ಬಿದ್ದ ದೊಡ್ಡ ಪೆಟ್ಟು ಇದು.’ ಇದರರ್ಥ ಭಯೋತ್ಪಾದಕರನ್ನು ಬೆಂಬಲಿಸಿದರು ಎಂದರ್ಥವಲ್ಲ. ಈ ಅರ್ಥದಲ್ಲಿಯೇ ನಮ್ಮ ಪ್ರತಿಕ್ರಿಯೆಯನ್ನು ಗಮನಿಸಬೇಕು ಎಂದು ಜೀವನ ಕುಮಾರ್ ಅವರಲ್ಲಿ ನಮ್ಮ ವಿನಂತಿ. ಭಯೋತ್ಪಾದನೆ ಕೃತ್ಯ ಎಷ್ಟೇ ಖಂಡನಾರ್ಹವಾಗಿದ್ದರೂ ಅದು ಅವರ ಪ್ರತಿಭಟನೆಯೂ ಹೌದು. ಆದರೆ ಅದು ನಮ್ಮ ಪ್ರಜಾಸತ್ತಾತ್ಮಕ ಪ್ರತಿಭಟನೆಯಲ್ಲ ಎನ್ನಬಹುದು. ಪ್ರತಿಭಟನೆ ಎನ್ನುವ ಶಬ್ದವನ್ನು ಹಿಡಿದು ಯಾವದಕ್ಕೂ ಹೋಲಿಸುವುದು ಸಲ್ಲದ ಕ್ರಮ. ಅಗ್ನಿ ಶ್ರೀಧರ್ ಎಲ್ಲಿ ಯಾವಾಗ ಈ ಮಾತು ಹೇಳಿದರೂ ಗೊತ್ತಿಲ್ಲವಾದ್ದರಿಂದ ಅದರ ಬಗ್ಗೆ ನೋ ಕಾಮೆಂಟ್.
-ಪರುಶುರಾಮ ಕಲಾಲ್
-ಶಿವಶಂಕರ್ ಬಣಗಾರ್
-ಪಿ.ಅಬ್ದುಲ್

Anonymous said...

americada president mele boot etu nididakkae avanige doreta prashastigalu matra mecchuge galisive.

akshara sonaar said...

americada president mele boot etu nididakkae avanige doreta prashastigalu matra mecchuge galisive

Anonymous said...

ಪರಶುರಾಮರೆ,
ವಿಮಾನವನ್ನು ಹೈಜಾಕ್ ಮಾಡಿದವರು ನಿರಾಯುಧರೆ? ಹಾಸ್ಯಾಸ್ಪದ

Anonymous said...

ಅನಾಮಿಕರೊಬ್ಬರ ಪ್ರತಿಕ್ರಿಯೆ ತಡವಾಗಿ ನೋಡಿದೆ. ವಿಮಾನ ಹೊಡೆದುರಳಿಸಿದವರು ನಿರಾಯುಧರೇ? ಹಾಸ್ಯಸ್ಪದ ಎಂದು ಅವರು ನನ್ನ ಪ್ರತಿಕ್ರಿಯೆಗೆ ಪ್ರತಿಕ್ರಿಯಿಸಿದ್ದಾರೆ.
ವಿಮಾನದ ಪ್ರಯಾಣಿಕರು ಹಾಗೂ ಅವರ ವಸ್ತುಗಳನ್ನು ಪ್ರತಿಯೊಂದನ್ನು ಪರಿಶೀಲನೆ ಮಾಡುವ ವ್ಯವಸ್ಥೆ ಇರುವ ಬಿಗಿ ಭದ್ರತೆಯಲ್ಲಿ ಉಗ್ರರು ಸಾಮಾನ್ಯ ಪ್ರಯಾಣಿಕರಂತೆ ನಿರಾಯುಧರಾಗಿಯೇ ತೆರಳಿದ್ದಾರೆ. ಅವರ ಮೆದುಳಲ್ಲಿ ಮಾತ್ರ ವ್ಯೂಹ ಇದೆ. ಆತ್ಮಾಹುತಿಯ ಹುಂಬ ಹುಮ್ಮಸ್ಸು ಇದೆ. ಇದೇ ವಿಮಾನ ಹಾಗೂ ಅದರ ಇಂಧನವನ್ನೇ ಅಯುಧವನ್ನಾಗಿ ಮಾಡಿಕೊಂಡಿದೆ. ಈ ಮೆದುಳಿನಲ್ಲಿ ನಡೆಯುವ ಘಟನೆಗಳನ್ನು ಸೆರೆ ಹಿಡಿಯವ ಯಂತ್ರ ಕಂಡು ಹಿಡಿಯಲು ಸಾಧ್ಯವೇ? ಇದು ಹೇಗೆ ಹಾಸ್ಯಸ್ಪದವಾಗುತ್ತಿದೆಯೋ ಅನಾಮಿಕರೇ ಹೇಳಬೇಕು.
- ಪರುಶುರಾಮ ಕಲಾಲ್