Wednesday, January 7, 2009

ಹೊಸಪೇಟೆಯಲ್ಲೊಂದು ಪತ್ರಕರ್ತರ ಹೋರಾಟ ನಡೆದಿದೆ!

ನಮ್ಮ ಅನಾಮಿಕ ಓದುಗರೊಬ್ಬರು ಹೊಸಪೇಟೆಯಲ್ಲಿ ನಡೆದಿರುವ ಪತ್ರಕರ್ತರ ಹೋರಾಟವೊಂದರ ಕುರಿತು ಬರೆದಿದ್ದಾರೆ.ಪತ್ರಕರ್ತರು ತಮ್ಮ ಖಾಸಗಿ ಅಪೇಕ್ಷೆಗಳಿಗೆ, ಒಣಜಂಭಕ್ಕೆ ಪತ್ರಕರ್ತರಿಗಿರುವ ಮೌಲ್ಯವನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದಕ್ಕೆ ಇದು ನಿದರ್ಶನ.ವಿವರ ಇಲ್ಲಿದೆ.

ಈ ಕತೆ ಇಷ್ಟು,ಎಂ.ಎಸ್.ಪಿ.ಎಲ್. ಎಂಬ ಕಾರ್ಪೋರೇಟ್ ಗಣಿ ಸಂಸ್ಥೆಯು ರಾಮದೇವ್ ಗೂರುಜಿ ಯೋಗ ಶಿಬಿರವನ್ನು ಹೊಸಪೇಟೆಯಲ್ಲಿ ಆಯೋಜಿಸಿದೆ. ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿತು. ಈ ಗೋಷ್ಠಿಗೆ ಎಲ್ಲರೂ ಹೋಗಿದ್ದರೂ ಮೂವರು ಪತ್ರಕರ್ತರು ಮಾತ್ರ ತಡವಾಗಿ ಬಂದು ಪಾಸ್ ತೆಗೆದುಕೊಂಡು ಹೋಗಿ ಎಂದು ಹೇಳಿದ್ದಕ್ಕೆ ಸೆಕ್ಯೂರಟಿಯವರ ವಿರುದ್ಧ ಹರಿಹಾಯ್ದು ಖ್ಯಾತೆ ತೆಗೆದರು. ಎಲ್ಲರನ್ನೂ ಫೋನ್ ಮಾಡಿ ವಾಪಾಸ್ಸು ಕರೆಸಿಕೊಂಡು ಗೋಷ್ಠಿ ಬಹಿಷ್ಕಾರದ ಬೆದರಿಕೆ ಹಾಕಿದರು. ಆಡಳಿತ ಮಂಡಳಿ ಅಧಿಕಾರಿಗಳು ಬಂದು ತಪ್ಪಾಗದಿದ್ದರೂ ಕ್ಷಮೆಯಾಚಿಸಿದರು. ಇದು ಇಲ್ಲಿಗೆ ಮುಗಿಯಲಿಲ್ಲ. ಮರುದಿನ ಪ್ರಜಾವಾಣಿಯಲ್ಲಿ ಗೋಷ್ಠಿಯ ಸುದ್ದಿ ಬರದೇ ಎಂ.ಎಸ್.ಪಿ.ಎಲ್. ಕನ್ನಡ ನಾಮಫಲಕ ಹಾಕದೇ ಭಾಷಾ ನೀತಿ ಉಲ್ಲಂಘಿಸಿದೆ ಎಂದು ಫೋಟೋ ಸಮೇತ ಬೈಲೈನ್ ಸುದ್ದಿ ಪ್ರಕಟಿಸಿತು. ವಿಜಯಕರ್ನಾಟಕದಲ್ಲೂ ಇದೇ ರೀತಿಯ ಸುದ್ದಿ. ಕಂಪನಿಯ ಪಿ.ಆರ್.ಓ. ರಾಘವೇಂದ್ರ ರಾವ್ ಈ ಪತ್ರಿಕೆಗಳ ಮುಖ್ಯಸ್ಥರಿಗೆ ಕನ್ನಡ ಫಲಕವಿದ್ದರೂ ಅದನ್ನು ಬೇಕೆಂದೆ ಉಪೇಕ್ಷಿಸಿ ಅಂಗ್ಲ ನಾಮ ಫಲಕ ಹಾಕಿ ಇಂತಹ ಸುದ್ದಿ ಮಾಡಲಾಗಿದೆ ಎಂದು ವಿವರ ನೀಡಿದರು. ಇದರಿಂದ ಕೆಂಡಮಂಡಲವಾದ ಇಬ್ಬರು ವರದಿಗಾರರಿಗೆ ರಾಘವೇಂದ್ರ ರಾವ್ ’ಥ್ಯಾಂಕ್ಸ್’ ಎಂದು ಮೇಸೇಜ್ ಹಾಕಿದ್ದು ವ್ಯಂಗ್ಯವೆನಿಸಿ, ಮರಳಿ ಫೋನ್ ಮಾಡಿ ದಬಾಯಿಸಿದರು. ಅಲ್ಲಿಗೂ ಪ್ರಕರಣ ಮುಕ್ತಾಯಗೊಳಿಸದೇ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆ, ಪತ್ರಕರ್ತರನ್ನು ಬೆದರಿಸಿರುವ ಸರ್ವಾಧಿಕಾರಿ ರಾಘವೇಂದ್ರ ರಾವ್ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಪತ್ರಕರ್ತರನ್ನು ಕೂಡಿಸಿಕೊಂಡು ಹೋಗಿ ಪೊಲೀಸರಿಗೆ ದೂರು ನೀಡಲಾಯಿತು. ’ಪತ್ರಕರ್ತರಿಗೆ ಬೆದರಿಕೆ-ಖಂಡನೆ’ ಸುದ್ದಿ ಫೋಟೋ ಸಮೇತ ವರದಿಯಾಯಿತು. ಕರವೇ ಮುಂತಾದ ಸಂಘಟನೆಗಳು ಖಂಡಿಸಿದವು. ಟಿ.ವಿ.೯ನಲ್ಲೂ sಸ್ಕೋಲಿಂಗ್ ನಿವ್ಸ್ ಬಿತ್ತರವಾಯಿತು. ಅಸಲಿಗೆ ಈ ಹೋರಾಟದ ಹಿನ್ನೆಲೆ ಏನು? ರಾಮದೇವ ಗುರೂಜಿ ಯೋಗ ಶಿಬಿರದ ಜಾಹಿರಾತು ಎಲ್ಲಾ ಪತ್ರಿಕೆಗಳಲ್ಲಿ ಎಂ.ಎಸ್.ಪಿ.ಎಲ್. ಬೆಂಗಳೂರಿನ ಜಾಹಿರಾತು ಸಂಸ್ಥೆಯ ಮೂಲಕ ನೀಡಿದ್ದು ಮುಖ್ಯ ಕಾರಣವಾಗಿದೆ. ಸ್ಥಳೀಯ ಪತ್ರಕರ್ತರಿಗೆ ಕಮೀಷನ್ ಸಿಗಲಿಲ್ಲ ಎಂಬ ಅಸಹನೆಯೆ ಇಷ್ಟೆಲ್ಲಾ ರಾದ್ಧಾಂತ ಎಬ್ಬಿಸಿತು. ಈಗ ಪೊಲೀಸ್ ಪ್ರಕರಣ ವಾಪಾಸ್ಸು ಪಡೆಯಲು ಪತ್ರಕರ್ತರ ಬೇಡಿಕೆ ಇಷ್ಟೇ, ಪಿ.ಆರ್.ಓ. ರಾಘವೇಂದ್ರರಾವ್ ಅವರ ಹುದ್ದೆ ಬದಲಿಸಬೇಕು, ಅವರು ಪತ್ರಕರ್ತರಲ್ಲಿ ಬಂದು ಕ್ಷಮೆ ಯಾಚಿಸಬೇಕು. ಕೊನೆ ಮಾತು: ಕನ್ನಡ ಫಲಕ ಇದ್ದರೂ ಬೇಕೆಂದೆ ಬರೆದ ಬರಹಕ್ಕೆ ಕ್ಷಮೆ ಯಾಚಿಸಿ ಘನತೆ ಕಾಪಾಡಿಕೊಳ್ಳಬೇಕಿದ್ದ ದೊಡ್ಡ ಪತ್ರಿಕೆಗಳು ಎಲ್ಲಾ ಗೊತ್ತಾಗಿಯೂ ಉಪೇಕ್ಷೆ ಮಾಡಿದವು ಎಂದರೆ ಈ ಪತ್ರಕರ್ತರ ಹಾರಾಟದಲ್ಲೂ ಯಾವುದೇ ತಪ್ಪಿಲ್ಲ. ಎಲ್ಲಿಗೆ ಬಂತು ಸ್ವಾಮಿ ಪತ್ರಿಕೋದ್ಯಮ

5 comments:

Anonymous said...

Even in mangalore similar protest by Journalist. One 'Darring' yellow-Journalist arrested in a case. But he is not inside jail. in AC hospital. Some months ago, He himself written an editorial How Culprits escape from Jail bu joining Hospital..

Anonymous said...

but BVS goskara ella kade patrakarthara prathibhatane nadedaru mangalore nalli nadililla....... Mangalorepatrakartharu kelavaru press note gu hana tagoltare swami avru so called mainstream patrike avru.

Anonymous said...

ಶ್ರೀ ಸೀತಾರಾಮ ಬಿಸಿಲಕೊಪ್ಪ ಒಬ್ಬ ಅತ್ಯುತ್ತಮ ಪತ್ರಕರ್ತರು. ಸಂಯುಕ್ತ ಕರ್ನಾಟಕ, ದಿ ಹಿಂದೂ ಪತ್ರಿಕೆಗಳಲ್ಲಿ ಸುದೀರ್ಘ ಕಾಲ ಸಾಹಿತ್ಯ-ಸಂಸ್ಕೃತಿಯ ಬಗ್ಗೆ ಒಳ್ಳೆಯ ವರದಿಗಳನ್ನು ಬರೆದವರು. ಏತನ್ಮಧ್ಯೆ ’ಮನ್ವಂತರ’ ಎಂಬ ಸಾಪ್ತಾಹಿಕಕ್ಕೂ ಕೊಡುಗೆ ನೀಡಿದ್ದರು.

’ಕರಾವಳಿ ಅಲೆ’ ಪತ್ರಿಕೆಯನ್ನು ಆರಂಭಿಸಿದ ಮೇಲೆ ಅವರ ವರದಿಗಳನ್ನು ವಿರೋಧಿಸುವ ಕೆಲ ಪಟ್ಟಭದ್ರ ಹಿತಾಸಕ್ತಿಗಳಿವೆ. ಅವುಗಳಲ್ಲಿ ಕೆಲವೆಂದರೆ

* ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ಅವರ ಬೆಂಬಲಿಗರು
* ನಗ್ನಮುನಿ ತರುಣ ಸಾಗರ್ ಹಾಗೂ ಅವರ ಬೆಂಬಲಿಗರು
* ಮತಾಂತರವನ್ನು ಪ್ರಚೋದಿಸುವ ಕ್ರಿಶ್ಚಿಯನ್ ಸಮುದಾಯ
* ದೇಶದ ಹೆಮ್ಮೆಯ ಅಲ್ಪಸಂಖ್ಯಾತ ಬಾಂಧವರು

ಉಳಿದಂತೆ ತಮ್ಮ ಮೇಲೆ ಆಗಿಂದಾಗ್ಗೆ ವರದಿಗಳು ಬರುತ್ತವೆಂದು ರಾಜಕಾರಣಿ ಹಾಗೂ ಪೊಲೀಸ್ ಜನರು ಶ್ರೀ ಸೀತಾರಾಮ್ ಅವರ ಮೇಲೆ ಹಗೆತನ ಸಾಧಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಎರಡು ವರ್ಷ ಕೆಲಸ ಮಾಡಿದ ಪುಡಿ ಪತ್ರಕರ್ತರೆಲ್ಲಾ ’ಹಿರಿಯ ಪತ್ರಕರ್ತ’ರೆಂಬ ಗೌರವಕ್ಕೆ ಪಾತ್ರರು. ಆದರೆ ಮೂರು ದಶಕಗಳ ಅನನ್ಯ ಅನುಭವದ ಶ್ರೀ ಸೀತಾರಾಮ್ ಅವರನ್ನು ’ಯಾರೋ ಪತ್ರಕರ್ತ’, ‘ಓರ್ವ ವರದಿಗಾರ’ ಇತ್ಯಾದಿ ಎಂದು ಬಿಂಬಿಸಲಾಗಿದೆ.

ಹೆಚ್ಚು ಓದಿಕೊಂಡಿರುವ, ಪ್ರಖರ ಬರವಣಿಗೆಯ, ಸತ್ಯ ನಿಷ್ಠುರದ, ಸರಳ ಮತ್ತು ನೇರ ಪತ್ರಕರ್ತ ಬಿ.ವಿ.ಸೀತಾರಾಮ್ ಅವರ ಬಗ್ಗೆ ಈ ರೀತಿಯ ಅವಹೇಳನ ಸಲ್ಲ

Anonymous said...

ಇದು ಸತ್ಯ ಸ೦ಗತಿ. ಪತ್ರಕರ್ತರ ಈ ಹೋರಾಟ ನಡೆದದ್ದು ವೈಯುಕ್ತಿಕ ಹಿತಾಸಕ್ತಿಗಾಗಿ ಹಾಗೂ ಒಣಜ೦ಭಕ್ಕಾಗಿ. ಕನ್ನಡ ಬರಹದ ಸ೦ಸ್ಥೆಯ ನಾಮ ಫಲಕವಿದ್ದರೂ ಕಟ್ಟಡದ ಹೆಸರಿನ ಆ೦ಗ್ಲ ಫಲಕ ತೋರಿಸಿ ಭಾರಿ ರ೦ಪವನ್ನು ಎಲ್ಲಾ ಪತ್ರಿಕೆಗಳು ಮಾಡಿವೆ. ಅಸಲಿಗೆ ಅವರು ಬ೦ದು ಮಾಡಿದ ಸುದ್ದಿ ಸಮೀಕ್ಷೆ ವಿವರ ಯೋಗ ಗುರು ಬಾಬಾ ಶ್ರೀ ರಾಮದೇವಜಿ ಯವರ ಶಿಬಿರದ ಬಗ್ಗೆ ಪತ್ರಿಕೆವತಿಯಿ೦ದ ಇನ್ನೂ ಯಾವದೇ ಬರಹಗಳಿಲ್ಲ. ಇದು ನಮ್ಮ ಕನ್ನಡಿಗರ ಹೆಮ್ಮೆಯ ವಿಷಯ. ಪತ್ರಿಕಾ ಅಭಿವ್ಯಕ್ತಿ ಸ್ವತ೦ತ್ರ್ಯಕ್ಕೆ ಜೈ ಹೇಳೋಣ.

Anonymous said...

queens road kade yaako hoglilla??!! allu 1 round hogidre ella darshana mugida haage aagirodu...