Sunday, December 14, 2008

ಆತ 'ನಮ್ಮವ'ನಾಗಲು ಸಾಧ್ಯವಿಲ್ಲ

ಕರ್ನಾಟಕ ಮುಖ್ಯಮಂತ್ರಿ ಯಡಿಯುಊರಪ್ಪ ಅಮೆರಿಕಾ ವಿವಿಯಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿದ್ದಾರೆ. ಡಾಕ್ಟರೇಟ್ ಲಭಿಸಿದುದರ ಹಿನ್ನೆಲೆ ಎಲ್ಲರಿಗೂ ಗೊತ್ತು. ವಿಜಯ ಕರ್ನಾಟಕ ಸಮಯೋಚಿತ ಲೇಖನವೊಂದನ್ನು ಪ್ರಕಟಿಸಿ ಡಾಕ್ಟರೇಟ್ ಪ್ರದಾನದ ಹಿಂದೆ 'ಕಾಣಿಸುವ ಕೈ' ಪಾತ್ರವನ್ನು ಬಯಲು ಮಾಡಿತು.

ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿ, ಯಾರೋ, ಯಾವುದೋ ಲಾಭಕ್ಕೆ ಡಾಕ್ಟರೇಟ್ ಕೊಡ್ತಾರೆ ಅಂದರೆ, ಒಂದು ದಂಡು ಕಟ್ಟಿಕೊಂಡು ಹೋಗಿ, ಅದೂ ಸರಕಾರಿ ಖರ್ಚಿನಲ್ಲಿ, ಸ್ವೀಕರಿಸುತ್ತಾರಲ್ಲಾ, ಏನನ್ನಬೇಕು ಇವರ ದಡ್ಡತನಕ್ಕೆ?

ಸಮಾಜಕ್ಕೆ ಅವರು ನೀಡಿದ ಕೊಡುಗೆಯನ್ನು ಗಮನಿಸಿ, ಆ ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪ್ರದಾನ ಮಾಡುತ್ತಿದೆ ಎಂದು ಹಲವರು ವಾದ ಮಾಡಬಹುದು. ಅಲ್ಲಾ ಸ್ವಾಮಿ, ಸದ್ಯ ಭಾರತದಲ್ಲಿ 440ಕ್ಕೂ ಹೆಚ್ಚು ವಿಶ್ವ ವಿದ್ಯಾನಿಲಯಗಳಿವೆ. ಕರ್ನಾಟಕದಲ್ಲಿಯೇ ಹತ್ತು ವಿ.ವಿ. ಗಳಿವೆ. ಯಡಿಯುಊರಪ್ಪನವರು ಸಮಾಜಕ್ಕೆ ನೀಡಿದ 'ಕೊಡುಗೆ' ಈ ಎಲ್ಲಾ ಸ್ಥಳೀಯ ವಿಶ್ವವಿದ್ಯಾನಿಲಯಗಳ ಕಣ್ತಪ್ಪಿಸಿ, ಸಾವಿರಾರು ಮೈಲಿ ದೂರದ ಅಮೆರಿಕಾದ ವಿವಿಗೆ ಕಾಣಿಸಿತೆ? ಅಲ್ಲಾರೀ, ಯಡಿಯುಊಪ್ಪನ ಕೊಡುಗೆ ಏನು ಎನ್ನುವುದನ್ನು ಸಂಶೋಧಿಸಲು ಒಂದು ಆ ವಿ.ವಿಯ ನಿಯೋಗವೇನಾದರೂ ಬಂದು ಹೋಗಿತ್ತೆ?

ಅದಾವುದೂ ಇಲ್ಲ.

ಆದರೂ ಇವರ ಸಮಾಜ ಸೇವೆ ದೊಡ್ಡದು. ಇವರಿಗೊಂದು ಗೌರವ ಡಾಕ್ಟರೇಟ್. ಮುಖ್ಯಮಂತ್ರಿ ಸಲಹೆಗಾರರು, ಆಪ್ತ ಸಿಬ್ಬಂದಿ ಎನಿಸಿಕೊಂಡವರು ಮುಖ್ಯಮಂತ್ರಿಗೆ ಇಂತಹ ವಿಚಾರಗಳಲ್ಲಿ ತಿಳಿ ಹೇಳಬೇಕಾಗುತ್ತದೆ. ಈ ಹಿಂದೆ ಇಂಥದೇ ಗೌರವವನ್ನು ಎಸ್.ಎಂ. ಕೃಷ್ಣರಿಗೆ ನೀಡಲು ಆ ವಿಶ್ವ ವಿದ್ಯಾನಿಯಲ ಮುಂದೆ ಬಂದಿತ್ತಂತೆ. ಕೃಷ್ಟ ನಯವಾಗಿ ನಿರಾಕರಿಸಿದರು. ಅವರಿಗೆ ಡಾಕ್ಟರೇಟ್ ಬಂಡವಾಳ ಗೊತ್ತು. ಮೇಲಾಗಿ, ತಾನು ಡಾಕ್ಟರ್ ಎಂದು ಕರೆಸಿಕೊಳ್ಳುವ ಉಮ್ಮೇದಿ ಅವರಿಗಿರಲಿಲ್ಲ. ಅದು ಪ್ರೌಢ ಮನಸ್ಸು ಆಲೋಚಿಸುವ ಪರಿ.

ಅದಿರಲಿ, ಯಡಿಯುಊರಪ್ಪನಿಗೆ ಆ ಪ್ರೌಢತೆ ಇಲ್ಲವೆಂದರೆ, ಪ್ರಜಾವಾಣಿ ಸಿಬ್ಬಂದಿಗೂ ಇಲ್ಲವೆ. "ಗೌರವ ಡಾಕ್ಟರೇಟ್ ಪಡೆದ ನಮ್ಮ ಸಿಎಂ" ಎಂದು ಶೀರ್ಷಿಕೆಯಡಿ ಸುದ್ದಿಯನ್ನು ಮುಖಪುಟದಲ್ಲಿ ಪ್ರಕಟಿಸಿದ್ದಾರೆ. ಇಲ್ಲಿ 'ನಮ್ಮ ಸಿಎಂ' ಎಂಬ ಪದ ಬಳಕೆ ಸರಿಯಾದದ್ದೇ ಎನ್ನುವ ಪ್ರಶ್ನೆ ಕಾಡುತ್ತದೆ. ಇಲ್ಲಿಯ 'ನಮ್ಮ' ಯಾರನ್ನು ಉದ್ದೇಶಿಸಿದ್ದು? ಓದುಗರೆ, ಈ ನಾಡಿನ ಪ್ರಜೆಗಳೆ, ಬಿಜೆಪಿ ಕಾರ್ಯಕರ್ತರೆ ಅಥವಾ ಪ್ರಜಾವಾಣಿ ಸಿಬ್ಬಂದಿಯೇ?

ಮೇಲ್ನೋಟಕ್ಕೆ ಸ್ಪಷ್ಟವಾಗುವ ಒಂದು ಸಂಗತಿ, ಯಾರೋ ಮಹಾಶಯರು ಯಡಿಯುಊರಪ್ಪನಿಗೆ ಗೌರವ ಡಾಕ್ಟರೇಟ್ ಲಭಿಸಿದ ಬಗ್ಗೆ ಅತೀವ ಸಂತೋಷ ಪಟ್ಟು, ಇಂತಹದೊಂದು ತಲೆಬರಹ ನೀಡಿದ್ದಾರೆ. ಒಂದು ಮಾತು ಸ್ಪಷ್ಟವಿರಲಿ, ಯಾರೇ ಒಬ್ಬನನ್ನು 'ನಮ್ಮವ' ಎಂದು ಹೆಮ್ಮೆಯಿಂದ ಸಂಬೋಧಿಸುವುದು, ಆತನ ಸಾಧನೆ ಬಗ್ಗೆ ಹೆಮ್ಮೆ ಪಟ್ಟಾಗ. ವಿದೇಶಿ ನೆಲದಲ್ಲಿ ಯಡಿಯುಊರಪ್ಪ ಯಾರದೋ ಲಾಬಿಯಿಂದ ಗೌರವ ಡಾಕ್ಟರೇಟ್ ಪಡೆದಾಕ್ಷಣ ಅದು ದೊಡ್ಡ ಸಾಧನೆಯಾಗುವುದಿಲ್ಲ. ಹಾಗೆಯೇ ಆತ 'ನಮ್ಮವ'ನಾಗಲು ಸಾಧ್ಯವಿಲ್ಲ.

11 comments:

Harisha - ಹರೀಶ said...

ಯಡಿಯೂರಪ್ಪ ಕರ್ನಾಟಕದ ಮುಖ್ಯಮಂತ್ರಿ. ಕರ್ನಾಟಕದ ಜನರನ್ನು ನೀವು "ನಮ್ಮವರು" ಎಂದುಕೊಂಡರೆ ಯಡಿಯೂರಪ್ಪ "ನಮ್ಮ ಮುಖ್ಯಮಂತ್ರಿ"ಯೇ. ನಿಮ್ಮ ದೃಷ್ಟಿಯಲ್ಲಿ ಕನ್ನಡಿಗರು ನಿಮ್ಮವರಲ್ಲ ಎಂದಾದರೆ ಖಂಡಿತ ಯಡಿಯೂರಪ್ಪ ನಿಮ್ಮವರಾಗಲು ಸಾಧ್ಯವಿಲ್ಲ. ನೀವು ಯಾರೆಂದು ಮೊದಲು ಯೋಚಿಸಿ.

chanakya said...

ಮುಖ್ಯಮಂತ್ರಿ.ಅಂದರೆ ಅವರು ರಾಜ್ಯಕ್ಖೆ.ನಿಮಗೂ ಅವರು ಸಿಎಮ್ .ವ್ಯಯಕ್ತಿಕವಾಗಲ. ಎಲ್ಲವನೂ ನೆಗೆಟಿವ್ ಆಗಿಯೇ ನೋಡಿದ್ರೆ ಕಾಮಾಲೆ ಕಣ್ಣು ಅನಿಸ್ಕೊಳಲ್ವ.ಸ್ವಲ್ಪ ವಿಶಾಲ ಭಾವನೆ ಬೆಳೆಸ್ಕೊಳಿ ಅನ್ನೋದು ಚಿಕ್ಕ ಸಲಹೆ.

Anonymous said...

yadiyurappa doctoret padeyuva modalu alochisabekittu. yava sadane madidene anta padediddare? rajyada arthika stiti e mattakka tandidare antana? yashasvi operation kamala anthana? yavudakke? nachike agabeku. avara salayegararu enu maduttidare? rajyada vv gale gurutisada sadane merica guruthiside ante. nachike agalva? allige rajyada hana dana maduvudagi heli bandiddire. yavaga buddi barutto eno!

Anonymous said...

ಈಗ ಡಾಕ್ಟರೇಟ್ ಗಳೆಲ್ಲ ಮೂರನೇ ದರ್ಜೆಗಳಿದಿರುವುದರಿಂದ ಅದರ ಬಗ್ಗೆಯೆಲ್ಲಾ ಯಾಕ್ರಿ ಅಷ್ಟೊಂದು ತಲೆ ಕೆಡಿಸಿಕೊಳ್ತೀರಾ? ಯಾರು ಜನರ ಸೇವೆ ಮಾಡಿದ್ದಾರೆ, ಇಲ್ಲ, ಅಥವಾ ಯಾರಿಗೆ ಯಾರು ಡಾಕ್ಟರೇಟ್ ಕೊಟ್ರೆ ಏನಾಗುತ್ತೆ ಎಂಬುದನ್ನೆಲ್ಲಾ ಜನ ನಿರ್ಧಾರ ಮಾಡ್ತಾರೆ..

ಆದರೆ, ಒಬ್ಬ ಮುಖ್ಯಮಂತ್ರಿ ತನಗೆ ಸಿಕ್ಕ ಪುಟಗೋಸಿ ಡಾಕ್ಟರೇಟ್ ಪಡೆಯೋಕೆ ಸಾರ್ವಜನಿಕರ ತೆರಿಗೆ ಹಣವನ್ನು ಸುರಿದು ದಂಡು ಕಟ್ಟಿಕೊಂಡು ಹೋದದ್ದಕ್ಕೆ ಅವರು ಜನತೆಗೆ ಸ್ಪಷ್ಟನೆ ನೀಡಲೇಬೇಕು.

ಇಲ್ಲವಾದರೆ ಇದು ಲಜ್ಜೆಗೇಡಿತನದ ಪರಮಾವಧಿಯಷ್ಟೆ! ಶಾಂತವೇರಿ ಗೋಪಾಲಗೌಡರಂಥ ನಾಯಕರನ್ನು ಕೊಟ್ಟ ನಮ್ಮ ಶಿವಮೊಗ್ಗ ಜಿಲ್ಲೆಯರು ಈ ಯಡಿಯೂರಪ್ಪ ಎನ್ನಲು ನಮಗೆ ನಾಚಿಕೆಯಾಗುತ್ತೆ!

-ಸ್ಯಾಮ್ಸ್

Anonymous said...

Good observation. Prajavani need not have gone overboard by using the word 'nammma' I agree with the comments here that 'namma' means 'of Kannadigas' but when newspapers use the word it is not just this literal meaning. there is an emotional connotation to it; there is a sense of celebration in it. These are subtle things generally the media avoids. It was not certainly an appropriate usage in this context, if not outrightly wrong. Thanks Suddimaatu

Anonymous said...

It is the unseen hands of a former employee of Mysore printers ltd, that played a vital role in the heading. The person in the question, who is more a political chamcha of BSY than a journalist, is dreaming MLC post. According to close associates of him, he had not written a single article on his own. After returning from a foreign country, this man, who was sitting at a top place, directed his junior to write a article on his tour. Later, the article was published in his name.

Anonymous said...

Meshtru Lankesh iddidre ivattu innodu katha sankalana berediroru. 'Yediyurappana doctorate yatre'. Harish avarige ondu prashne. Yediyurappa nammavare, adaralli anumana illa. Prashne irodu Prajavaniyavarige. ivaru 'Namma(AVARA) CM' hegadru? Prajavani hindendoo Namma CM anno sheershike balasi suddi madiruvudu nanna mattige nenapilla. Suddimaatina prashne ishetey, CM nammavaru, adare prajavanige avaru special CMma? Patrike eke yediyurappanarige eke namma CM antha helbeku. Namma Anitha Kumaraswamy, Namma Siddaramaiah, namma Deve Gowda antha inmunde barili bidi?

Ustaad

Harisha - ಹರೀಶ said...

ಉಸ್ತಾದ್ ಅವರೇ, ಪ್ರಜಾವಾಣಿ "ನಮ್ಮ" ರಾಜ್ಯದ ಪತ್ರಿಕೆ. ಅಂಥ ಪತ್ರಿಕೆಗೆ "ನಮ್ಮ" ರಾಜ್ಯದ ಮುಖ್ಯಮಂತ್ರಿ "ನಮ್ಮ ಮುಖ್ಯಮಂತ್ರಿ"ಯೇ ಆಗುತ್ತಾರೆ.

Anonymous said...

BSY, RPJ, Kanti, doctorate, prajavani, namma cayammu....nodi swamee naavirode heege...

Nanaganisutte, Yediyurappa avarige ee doctorate padakollalu arhate ideye illave ennuvudakkinta hechchu mukhyavaada prashne andare aa vishwa vidyanilayakke bharata deshada obba mukhyamantri ge doctorate needuva arhate ideye annuvudu.

Aa VV ya website nodidare adondu glorified polytechnic college na haagide. hesarigeno ondashtu dodda manushyarannu thamma hale vidyartigalu anta helikondaru, adondu vishwavidyanilayave alla vaastavadalli.

Haagiruvaaga anthaha VV ya doctorate annu sweekarisi Yediyurappa karnatakakke avamaana esagiddaare. S M Krishna kaapaida karnatakada maana Yediyurappa avarinda hoyitu.

America the VV endaakshana nibberagaagabekaagilla. Patrikegalu aa VV ya arhateyannu prashnisabekittu.

Badalige namma ciyammige eno ghanavaadaddu doreyitu anta bimbisiddu patrikegala intellectual mattu moral deewalitanakke saakshi

ಮನಸ್ವಿ said...

ರೀ ಸ್ವಾಮಿ ನೀವು ಕರ್ನಾಟಕದವರಾಗಿದ್ದರೆ ನೀವು ನಮ್ಮವರಾಗುತ್ತೀರಿ, ಇಲ್ಲಾ ಅಂದ್ರೆ ನೀವು ನಮ್ಮವರಲ್ಲ.. ಅಂದ ಹಾಗೆ ಪ್ರಜಾವಣಿಯವರು ನಮ್ಮ ಮುಖ್ಯಮಂತ್ರಿ ಎಂದು ಬರೆದದ್ದರಲ್ಲಿ ಏನು ತಪ್ಪಿಲ್ಲ. ತಾವು ಬರೆಯುವ ಮುನ್ನ ಸ್ಪಲ್ಪ ಯೋಚಿಸಿ ಬರೆಯಲು ಕಲಿತರೆ ಒಳಿತು.. ನಿಮಗೂ ನಮ್ಮ ಕರ್ನಾಟಕ ಜನರಿಗೂ!

Anonymous said...

ಮೂರ್ಖರೇ, ಯಡಿಯೂರಪ್ಪನವರು “ನಮ್ಮ” ಕರ್ನಾಟಕದ ಮುಖ್ಯಮಂತ್ರಿಗಳು. ಅವರನ್ನು ಮುಖ್ಯಮಂತ್ರಿ ಮಾಡಿದವರು “ನಮ್ಮ” ಕರ್ನಾಟಕದ “ನಮ್ಮ” ಲಕ್ಷಾಂತರ ಕನ್ನಡಿಗರು. ಅವರನ್ನು “ನಮ್ಮ” ಮುಖ್ಯಮಂತ್ರಿ ಅಂತ ಕರೆಯದೇ ಪಕ್ಕದ ರಾಜ್ಯದ ಮಂತ್ರಿ ಅಂತ ಕರೆಯಬೇಕಾ? ನಿಮಗೆ ಬಿಜೆಪಿ ಪಕ್ಷ ಇಷ್ಟವಿಲ್ಲದಿದ್ದರೆ ಪರವಾಗಿಲ್ಲ. ಆದರೆ, ಆ ಪಕ್ಷವನ್ನು ಆರಿಸಿ ಕಳಿಸಿದ ಕರ್ನಾಟಕದ ಮತದಾರರನ್ನು ಅವಮಾನಿಸಬೇಡಿ.

-ಸಿ. ಜೋಸೆಫ್