ದಕ್ಷಿಣ ಕನ್ನಡದ 'ಕರಾವಳಿ ಅಲೆ' ಪತ್ರಿಕೆ ಈಗ ಸುದ್ದಿಯಲ್ಲಿದೆ. ದುಷ್ಕರ್ಮಿಗಳು ಪತ್ರಿಕೆಯ ಐದು ಸಾವಿರ ಪ್ರತಿಗಳನ್ನು ಸುಟ್ಟಿದ್ದಾರೆ. ಪತ್ರಿಕೆ ಮಾರುವವರ ಮೇಲೂ ದಾಳಿ ನಡೆದಿದೆ. ಸಂಪಾದಕ ಸೀತಾರಾಂ ದೂರು ದಾಖಲಿಸಿದರೂ, ಪ್ರಯೋಜನವಾಗಿಲ್ಲ. ಅಷ್ಟೇ ಅಲ್ಲ, ದೂರನ್ನು ದಾಖಲಿಸಲೂ ಪೊಲೀಸರು ಮೀನಮೇಷ ಎಣಿಸುತ್ತಿದ್ದಾರೆ.
ರಾಷ್ಟೀಯ ಸಂಪಾದಕರ ಗಿಲ್ಡ್ ಅಧ್ಯಕ್ಷ ರಾಜದೀಪ್ ಸರ್ದೇಸಾಯಿ ಕರ್ನಾಟಕ ಪೊಲೀಸ್ ಮಹಾನಿರೀಕ್ಷಕರಿಗೆ ಈ ಪ್ರಕರಣ ಕುರಿತಂತೆ ಒಂದು ಪತ್ರ ಬರೆದಿದ್ದಾರೆ. "ನಿಮ್ಮ ಪೊಲೀಸರಿಗೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸಿ" ಎಂಬುದು ಅವರ ಪತ್ರದ ಒಕ್ಕಣೆ.
ಆದರೆ ದಿ ಹಿಂದೂ ಪತ್ರಿಕೆ ಹೊರತುಪಡಿಸಿ ಬೇರಾವ ಪತ್ರಿಕೆಯಲ್ಲೂ ಈ ಘಟನೆಗಳ ವರದಿ ಪ್ರಕಟವಾಗಲಿಲ್ಲ. ಯಾಕೆ ಹೀಗೆ? ಒಂದು ಗ್ಯಾಸ್ ಸಿಲಿಂಡರ್ ದೊಡ್ಡ ಸದ್ದು ಮಾಡಿದರೂ (ಸ್ಫೋಟ ಅಲ್ಲ) ಬ್ರೇಕಿಂಗ್ ನ್ಯೂಸ್ ಆಗುವ ಈ ದಿನಗಳಲ್ಲಿ ಒಂದು ದಿನ ಪತ್ರಿಕೆಯ ಐದು ಸಾವಿರ ಪ್ರತಿಗಳು ಸುಟ್ಟರೂ ಅದು ಸುದ್ದಿಯಾಗುವುದಿಲ್ಲ.
ತುಂಬಾ ದಿನಗಳಿಂದ ಬೆಳೆದು ಬಂದಿರುವ ಸಂಪ್ರದಾಯವಿದು. ಪತ್ರಿಕೆಗಳಿಗೆ ಇತರೆ ಪತ್ರಿಕೆಗಳೆಂದರೇನೆ ಅಲರ್ಜಿ. ಇತರೆ ಪತ್ರಿಕೆ ಕುರಿತಂತೆ ಏನೇ ಸುದ್ದಿ ಇದ್ದರೂ 'ಪ್ರಮುಖ ದಿನಪತ್ರಿಕೆ' ಎಂದು ವರದಿ ಮಾಡುತ್ತಾರೆ. ಪತ್ರಿಕೆ ಹೆಸರು ಪ್ರಕಟಗೊಳ್ಳದಂತೆ ನೋಡಿಕೊಳ್ಳುತ್ತಾರೆ. ಏಕೆ ಹೀಗೆ?
ಕರಾವಳಿ ಅಲೆ ಸಂಪಾದಕರು ಪತ್ರಿಕಾ ಧರ್ಮಕ್ಕೆ ಬದ್ಧರಾಗಿರುವವರು. ಅವರ ವಿರುದ್ಧ ಕೋಮುವಾದಿಗಳು ಸದಾ ಕೆಂಗಣ್ಣು ಬೀರುತ್ತಲೇ ಬಂದಿದ್ದಾರೆ. ಪತ್ರಿಕೆ ಪ್ರತಿ ಸುಟ್ಟದ್ದೂ ಅವರದೇ ಕೃತ್ಯ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಅವರದೇ ಪಕ್ಷ ಅಧಿಕಾರಕ್ಕೆ ಬಂದ ಮೇಲಂತೂ, ಅವರ ಪುಂಡಾಟ ಹೆಚ್ಚಾಗಿದೆ. ಆಡಳಿತದಲ್ಲಿರುವವರ ಕುಮ್ಮಕ್ಕೂ ಇಂತಹ ಚಟುವಟಿಕೆಗಳಿಗೆ ಇದ್ದೇ ಇದೆ.
ಕರಾವಳಿ ಅಲೆ ವಿರುದ್ಧ ಎದ್ದಿರುವ ಕರಾಳ ಮನಸ್ಸುಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಇತರೆ ಪತ್ರಿಕೆಗಳೂ ಕಾರ್ಯೋನ್ಮುಖರಾಗುವುದು ಒಳಿತು.
Thursday, December 18, 2008
Subscribe to:
Post Comments (Atom)
6 comments:
ಕರಾವಳಿ ಅಲೆ ಪತ್ರಿಕೆ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಪ್ರತಿಭಟಿಸಿದಕ್ಕಾಗಿ ಭಜರಂಗಿ ಗೂಂಡಾಗಳು ಪಿಯುಸಿಎಲ್ ಕಾರ್ಯಾಧ್ಯಕ್ಷ ಪಿ.ಬಿ.ಡಿಸಾ ಅವರ ಕಛೇರಿ ಮೇಲೆ ದಾಳಿ ನಡೆಸಿದ್ದಾರೆ. ದುರಂತವೆಂದರೆ ಇದೂ ಸಹ ನಮ್ಮ ಪ್ರಮುಖ ದಿನಪತ್ರಿಕೆಗಳಲ್ಲಿ ಸುದ್ದಿಯಾಗಲೇ ಇಲ್ಲ.
ಮೊನ್ನೆ ಈ ದಾಳಿ ನಡೆದಿದ್ದರೂ ಪ್ರಜಾವಾಣಿಯಂಥ ಪತ್ರಿಕೆಯಲ್ಲಿ ಒಂದು ಸಣ್ಣ ಕಾಲಂನ ಸ್ಟೇಟ್ ನ್ಯೂಸ್ ಆಗದೇ ಇರುವುದು ನಾಚಿಕೆಗೇಡು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ರೀತಿಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣ ಇದ್ದಂತಿದೆ. ಕೋಮುವಾದಿಗಳ ವಿರುದ್ಧ ಯಾರಾದರೂ ಧ್ವನಿಯೆತ್ತಿದರೆ ಅವರನ್ನು ಅರಣ್ಯ ನ್ಯಾಯದಿಂದ ದಮನ ಮಾಡಬಹುದು ಎಂಬ ವಾತಾವರಣ ಇದೆ.
ಅಲ್ಲಿನ ಪೊಲೀಸ್ ಅಧಿಕಾರಿಗಳೂ ಸಹ ಕೋಮುವಾದಿ ಭಯೋತ್ಪಾದಕರೊಂದಿಗೆ ಶಾಮೀಲಾಗಿದ್ದಾರೆ.
ಕರಾವಳಿ ಅಲೆ ಮೇಲಿನ ದಾಳಿ ಹಾಗು ಮಾನವಹಕ್ಕು ಹೋರಾಟಗಾರರ ಮೇಲಿನ ದಾಳಿ ಪ್ರಕರಣಗಳನ್ನು ವರದಿ ಮಾಡದ ಎಲ್ಲ ಪತ್ರಿಕೆಗಳಿಗೆ ನಮ್ಮ ಧಿಕ್ಕಾರವಿರಲಿ.
’ಕರಾವಳಿ ಅಲೆ’ ಪತ್ರಿಕೆಗಳನ್ನು ಸುಟ್ಟು ಪತ್ರಿಕಾ ಸ್ವಾತಂತ್ರ್ಯದ ಮೇಲೆ ಹಲ್ಲೆ ನಡೆಸಿದ ಕೋಮುವಾದಿಗಳಿಗೆ ಮೊದಲು ಹೇಳುವೆ ಧಿಕ್ಕಾರ. ಇಂತಹ ಸುದ್ದಿಯನ್ನು ಪ್ರಕಟಿಸದ ಎಲ್ಲಾ ಪತ್ರಿಕೆಗಳಿಗೆ ಹೇಳುವೆ ಧಿಕ್ಕಾರ. ಕೋಮುವಾದಿಗಳಿಗಿಂತ ಇವರು ದೊಡ್ಡ ಅಪಾಯಕಾರಿಗಳು. ಪತ್ರಿಕೆಯ ಮೌಲ್ಯ, ಸ್ವಾತಂತ್ರ್ಯ ಇವುಗಳ ಬಗ್ಗೆ ಮಾತನಾಡುವ ನೈತಿಕ ನಾಲಿಗೆ ಕಳೆದುಕೊಂಡ ಪತ್ರಕರ್ತರನ್ನು ನಾನು ಏನೆಂದು ಕರೆಯಲಿ?
ಸೀತರಾಮ್ ಅವರ ಹೋರಾಟಕ್ಕೆ ನಾವು ಬೆಂಬಲಿಸಬೇಕು. ನಮ್ಮ ನಮ್ಮ ಸೀಮೆಯಲ್ಲಿ ನಾವು ಈ ಬಗ್ಗೆ ಮಾತನಾಡಬೇಕು, ಖಂಡಿಸಬೇಕು.
’ಅವರು ಹುಡುಕಿ ಕೊಂಡು ಬಂದರು. ನಾನು ಯಹೂದಿಯಾಗಿರಲಿಲ್ಲ. ನಾನು ಮೌನವಾಗಿದ್ದೆ. ನಂತರ ಅವರು ॒॒ ॒ಹುಡುಕಿ ಬಂದರು. ಹೀಗೆ ಪ್ರಾರಂಭವಾಗುವ ಕವಿತೆ ನನ್ನನ್ನು ಹುಡುಕಿಕೊಂಡು ಬಂದಾಗ ನನ್ನ ಸಹಾಯಕ್ಕೆ ಯಾರು ಇರಲಿಲ್ಲ’ ಎಂದೇ ಹೇಳುತ್ತಿದೆ.
ನಮ್ಮ ದೊಡ್ಡ ಪತ್ರಿಕೆಗಳಿಗೆ ಇಂತಹ ಸ್ಥಿತಿ ಮುಂದೆ ಬರುತ್ತದೆ. ಆಗ ಅವರ ಸಹಾಯಕ್ಕೂ ಯಾರು ಇರುವುದಿಲ್ಲ.
- ಪರುಶುರಾಮ ಕಲಾಲ್

karavali aleyalli yen barediru antha thilisi sir, namage gothe illa....
ಈ ಬಗ್ಗೆ ಸುದ್ದಿಮಾತು ತಪ್ಪು ಮಾಹಿತಿ ನೀಡಿದೆ.ಕರಾವಳಿ ಪತ್ರಿಕೆಗಳಲ್ಲಿ ಕರಾವಳಿ ಅಲೆ ಸುಟ್ಟ ಬಗ್ಗೆ ಬ್ವರದಿ ಅಲ್ಲಿನ ಪತ್ರಿಕೆಯಲ್ಲಿ ಬಂದಿದೆಯೆಂದು ನನ್ನ ಮಿತ್ರ ದೂರದ ಊರಿನಲ್ಲಿರುವ ಮಿತ್ರ ನನಗೆ ತಿಳಿಸಿದ್ದಾನೆ.ಇನ್ನು ಟಿ.ವಿ.ಮಾಧ್ಯಮಗಳಲ್ಲಿ "ಸುವರ್ಣ ವಾಹಿನಿ"ಮಾತ್ರಾ ಸುದ್ದಿಯನ್ನು ಬಿತ್ತರಿಸಿದೆ. ಇದನ್ನು ನಾನೂ ನೋಡಿದ್ದೇನೆ. ಕರಾವಳಿ ಅಲೆ ಪತ್ರಿಕೆ ಮೇಲೆ ದಾಳಿಯಾಗಬಾರದಿತ್ತು ಎಂಬುದಕ್ಕೆ ಸಹಮತ.....
ಹರೀಶ್ ಬೆಂಗಳೂರು
karavali alenu ondu paper? yarree heliddu? adondu vikrita patrike. adonde alla. adra familyne hange. aden baritaano. next buddhijeevi I mean next ananthmoorti agliddare BVSee. adke muchkondogta irodu. adyaro adralli leagal advice/ medical advice ella kodtarappa- playboy adru odabhudeno. adrindane swalpa badukirodu. anthavra bagge nimma kaalaji mechchbeku. dEshad kharma.
Post a Comment