ನಿಮ್ಮ ವೃತ್ತಿ ಜೀವನದ ಸಾರ್ಥಕ ಕ್ಷಣ...
"ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದಾಗ ದಲಿತನೊಬ್ಬನನ್ನು ಅರ್ಚಕನನ್ನಾಗಿ ನೇಮಕ ಮಾಡಿದ್ದು..."
ಮುಜುಗರ ಉಂಟು ಮಾಡಿದ ಘಟನೆ...
"ಒಂದು ಮೀಟಿಂಗ್ ನಲ್ಲಿ ಉದ್ಯಮಿಯೊಬ್ಬರು ಮಾತನಾಡಿ, ನನ್ನ ಕೆಳಗಿನ ಅಧಿಕಾರಿ ಪರವಾನಗಿ ಮಂಜೂರು ಮಾಡಲು 2,000 ಲಂಚ ಪಡೆದ ಎಂದು ಆರೋಪ ಮಾಡಿದರು. ನಾನು ತಕ್ಷಣ ನನ್ನ ಜೇಬಿನಿಂದ ಎರಡು ಸಾವಿರ ರೂಗಳನ್ನು ಆ ಉದ್ಯಮಿಗೆ ನೀಡಿ, ನಂತರ ನನ್ನ ಕೆಳಗಿನ ಅಧಿಕಾರಿಯಿಂದ ಅದನ್ನು ಹಿಂಪಡೆಯುತ್ತೇನೆ ಎಂದೆ. ಆ ತಪ್ಪು ಒಪ್ಪಿಕೊಂಡು ಅಧಿಕಾರಿ ಎರಡು ಸಾವಿರ ರೂಗಳನ್ನು ನನಗೆ ಹಿಂತಿರುಗಿಸಿದರು..."
ಒಬ್ಬ ಅಧಿಕಾರಿಗೆ ಇರಬೇಕಾದ ಸಾಮಾಜಿಕ ಕಾಳಜಿ ಮತ್ತು ಪ್ರಾಮಾಣಿಕತೆ ಎರಡೂ ಈ ಮೇಲಿನ ಎರಡು ಘಟನೆಗಳಲ್ಲಿ ವ್ಯಕ್ತವಾಗುತ್ತದೆ. ಅಂದಹಾಗೆ ಮೇಲೆ ಉದಾಹರಿಸಿರುವ ಅಧಿಕಾರಿ ವಿ.ಪ. ಬಳಿಗಾರ್. ಸದ್ಯ ಅವರು ಮುಖ್ಯಮಂತ್ರಿ ಯಡಿಯುಊರಪ್ಪನವರ ಪ್ರಧಾನ ಕಾರ್ಯದರ್ಶಿ. ಹಿಂದೆ ಹಲವು ಇಲಾಖೆಗಳಲ್ಲಿ, ಹಲವು ಉನ್ನತ ಹುದ್ದೆಗಳಲ್ಲಿ ದಕ್ಷತೆ ಮೆರೆದವರು.
ಆದರೆ ಇತ್ತೀಚೆಗೆ ಅವರು ಮುಖ್ಯಮಂತ್ರಿ ಕಾರ್ಯಾಲಯ ಸೇರಿ ಮಂಕಾದರು ಎಂದೆನಿಸಿದರೆ ತಪ್ಪೇನಿಲ್ಲ. ಮುಖ್ಯಮಂತ್ರಿ ಹಲವು ಸಂದರ್ಭಗಳಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಾಗ 'ಬಳಿಗಾರ್ ಅವರು ಮುಖ್ಯಮಂತ್ರಿಗೆ ಸೂಚಿಸಬಹುದಿತ್ತಲ್ಲ' ಎಂದು ನಾವು ಲೆಕ್ಕ ಹಾಕುತ್ತೇವೆ. ಒಂದಂತೂ ಸತ್ಯ. ಬಳಿಗಾರ್ ಲಿಂಗಾಯುತರಲ್ಲದೇ ಹೋಗಿದ್ದರೆ ಅವರು ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ಆಗುತ್ತಿರಲಿಲ್ಲ. ಈ ಸೂಕ್ಷ್ಮವನ್ನು ಅವರೂ ಬಲ್ಲರು.
ಅದೇನೆ ಇರಲಿ, ಬಳಿಗಾರ್ ಆದರ್ಶಗಳನ್ನು ಇಟ್ಟುಕೊಂಡು ಸರಕಾರಿ ಸೇವೆಗೆ ಬಂದವರು. ಅವರನ್ನು ಒಂದು ಹಂತಕ್ಕೆ ಜಾತಿವಾದಿ ಎಂದರೂ, ಭ್ರಷ್ಟ ಎನ್ನಲಾಗದು. ಪತ್ರಕರ್ತರು ಸದಾ ಅಧಿಕಾರಿಗಳನ್ನು ಕಂಡರೆ ಟೀಕಿಸುವುದೇ ಹೆಚ್ಚು. ಟೈಮ್ಸ್ ಆಫ್ ಇಂಡಿಯಾದ ನಾಹಿದಾ ಅತಾವುಲ್ಲಾ ಅವರು ಬಳಿಗಾರ್ ಕುರಿತ ವಿಶೇಷ ಲೇಖನ ಬರೆದಿದ್ದಾರೆ. (ದಿನಾಂಕ -ಡಿಸೆಂಬರ್ 29). ತಪ್ಪದೇ ಓದಿ. ಓದಿದ ಪರಿಣಾಮ ಮನಸ್ಸು ಪ್ರಫುಲ್ಲಗೊಳ್ಳುತ್ತದೆ.
2 comments:
ಗೆಳೆಯಾ...ನಿನ್ ಜೀವನದಲ್ಲಿ ಏನಾದ್ರು ಒಳ್ಳೆ ಕೆಲ್ಸ ಮಾಡಿದೀಯ್ತಾ ಅಂದ್ರೆ..ಇದೊಂದೇ. ಅದ್ರಲ್ಲೂ ಹುಳ್ಕು ಹುಡ್ಕೋಕೆ ಪ್ರಯತ್ನ ಮಾಡಿದೀಯಾ? ಒಳ್ಳೆಯವರನ್ನ ಅಂತವ್ರು ಅಂತ ಹೇಳೋದುಕ್ಕೂ ಯಾಕಪ್ಪಾ ಕಂಜೂಸ್ತನ.ಬಳಿಗಾರ್ ಅಂತ ಅದಿಕಾರಿಗಳ ಅಗತ್ಯ ರಾಜ್ಯಕ್ಕಿದೆ.ವ್ಯವಸ್ತೆಗೆ ಅನಿವಾರ್ಯ ಆಗಿದೆ.ಸಿಎಂ ಬಳಿ ಅವ್ರು ಇದಾರೆ ಅನ್ನೋದ್ರಿಂದ ಒಂದಶ್ಟು ಒಳ್ಳೆದನ್ನ ನಿರೀಕ್ಸೆ ಮಾಡ್ಬಹುದು...ಎನಿವೇ ವಿ ವಿಶ್ ಯು ಆಂಡ್ ಆಲ್ ಹ್ಯಾಪಿ ನ್ಯೂ ಇಯರ್.ಒಳ್ಳೆದಕ್ಕೆ ಯಾವಾಗ್ಲು ಒಟ್ಟಿಗೆ ಇರ್ತೀವಿ.
nasty story.
Baligar ge bakettaa?!!
Post a Comment