Monday, January 26, 2009

ನಿಮ್ಮದು ಯಾವ ಸಂಸ್ಕೃತಿ ಮಿಸ್ಟರ್ ಪಾಲೆಮಾರ್?

ಸೋಮವಾರ ಮಾಧ್ಯಮದವರಿಗೆ ಮಾತನಾಡಿದ ಪಾಲೆಮಾರ್ ಹೇಳ್ತಾರೆ - "ಇಂತಹ ಪಬ್ ಸಂಸ್ಕೃತಿ ನಮ್ಮದಲ್ಲ. ನಮ್ಮ ಸಂಸ್ಕೃತಿಗೆ ಭಿನ್ನವಾಗಿ, ಅಶ್ಲೀಲವಾಗಿ ವರ್ತಿಸುವುದನ್ನು ನಾವು ಸಹಿಸುವುದಿಲ್ಲ ". ವಿವಿಧತೆಯಲ್ಲಿ ಏಕತೆ ಸಾಧಿಸಿರುವ ದೇಶ ನಮ್ಮದು ಎಂದು ದೇಶವೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿರುವಾಗ, ಈ ನೆಲದ ಜನ ಆಯ್ಕೆ ಮಾಡಿದ ಮಂತ್ರಿಯೊಬ್ಬ ಮಾತನಾಡಿದ್ದು ಹೀಗೆ. ನಾವೀಗ ಕೇಳಲೇ ಬೇಕಾದ ಪ್ರಶ್ನೆ - "ಹುಡುಗಿಯರನ್ನು ಹೀನಾಮಾನ ಥಳಿಸಿ, ಅವರ ಮೇಲೆ ಬಲಾತ್ಕಾರ ಮಾಡುವುದು ನಿಮ್ಮ ಸಂಸ್ಕೃತಿಯೇ ಮಿಸ್ಟರ್ ಕೃಷ್ಣ ಪಾಲೆಮಾರ್?"

ಅಮಾಯಕ ಹೆಣ್ಣುಮಕ್ಕಳನ್ನು ಹೀನಾಯವಾಗಿ ಥಳಿಸಿ, ಕೆಮರಾಗಳ ಎದುರು ಅವರ ಉಡುಪುಗಳನ್ನು ಕಳಚಿದ ಗೂಂಡಾಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಿ ಎಂದರೆ, ಪಬ್...ಅಶ್ಲೀಲ ಸಂಸ್ಕೃತಿ.. ಎಂದೆಲ್ಲಾ ಉಪದೇಶ ಕೊಡುತ್ತಾರೆ ಈ ಮಂತ್ರಿ. ಇನ್ನು ಈ ನಾಡಿನ ಗೃಹಮಂತ್ರಿ ಹೇಳಿದ್ದೇನು "ನೀವು ಟಿವಿ ಚಾನೆಲ್ ನವರು ಈ ಘಟನೆಯನ್ನು ಅನಗತ್ಯವಾಗಿ ವಿಜೃಂಭಿಸುತ್ತಿರುವುದು ನೋಡಿದರೆ ಇದರ ಹಿಂದೆ ರಾಜಕೀಯ ಕೈವಾಡ ಇದೆ ಎನಿಸುತ್ತದೆ". - ಜವಾಬ್ದಾರಿಯುತ ಮಂತ್ರಿ ನೀಡುವ ಹೇಳಿಕೆಯೇ ಇದು?

ಅತ್ತ ಆ ಜಿಲ್ಲೆಯ ಉಸ್ತುವಾರಿ ಸಚಿವ ಅಶ್ಲೀಲ ಸಂಸ್ಕೃತಿಯನ್ನು ನಾವು ಸಹಿಸುವುದಿಲ್ಲ ಎಂದು ದಾಳಿಕೋರರ ವಕ್ತಾರರಂತೆ ಮಾತನಾಡಿದರೆ, ಇತ್ತ ಗೃಹ ಮಂತ್ರಿ ಘಟನೆಯಲ್ಲಿ ರಾಜಕೀಯ ಹುಡುಕುತ್ತಿದ್ದಾರೆ. ಆಚಾರ್ಯರ ಹತ್ತಿರದ ಸಂಬಂಧಿಕರೊಬ್ಬರ ಮನೆಮಗಳು ಇಂತಹ ಘಟನೆಯಲ್ಲಿ ಥಳಿತಕ್ಕೆ ಒಳಗಾಗಿದ್ದರೆ, ಹೀಗೆ ಮಾತನಾಡುತ್ತಿದ್ದಿರಾ?

ದಿ ಹಿಂದು (ಮಂಗಳವಾರ) ಮುಖಪುಟ ವರದಿ, ಅಂದು ಶನಿವಾರ ಎಮ್ನೇಸಿಯಾ ಪಬ್ ನಲ್ಲಿ ನಡೆದದ್ದನ್ನು ಸವಿವರವಾಗಿ ನಿರೂಪಿಸುತ್ತದೆ. ಶ್ರೀರಾಮ ಸೇನೆ ಹುಡುಗರು, ಕೆಲ ಹುಡುಗಿಯರ ಬಟ್ಟೆ ಎಳೆದಾಡಿದರು, ಮನಸೋ ಇಚ್ಛೆ ಥಳಿಸಿದರು. ಅವರ ಸಹಾಯಕ್ಕೆ ಬಂದ ಹುಡುಗರನ್ನೂ ಬಿಡಲಿಲ್ಲ. ಜೊತೆಗೆ ಇದೆಲ್ಲವೂ ಹೊರಜಗತ್ತಿಗೆ ಗೊತ್ತಾಗಲೆಂದು ಮಾಧ್ಯಮದವರನ್ನೂ ಬರಲು ಹೇಳಿದ್ದರು. ಅದೇ ದಿನ ರಾತ್ರಿ ಇನ್ನೊಂದು ಖಾಸಗಿ ಪಾರ್ಟಿಮೇಲೆ ದಾಳಿಯಾಗಿದೆ. ಆ ದಾಳಿಯ ಹೊಣೆಯನ್ನೂ ಇದೇ ಸೇನೆಯ ಮುಖಂಡ ಹೊತ್ತುಕೊಂಡಿದ್ದಾನೆ. ಹಾಗಾದರೆ ಇದಕ್ಕೆಲ್ಲಾ ಯಾರು ಹೊಣೆ ಎನ್ನುವುದು ಇನ್ನು ತನಿಖೆ ಮಾಡಬೇಕಾದ ಸಂಗತಿಯೆ? ಇಂತಹ ದಾಳಿಗಳನ್ನು ಸಮರ್ಥಿಸಿಕೊಳ್ಳುವ ಪ್ರಮೋದ್ ಮುತಾಲಿಕ್ ಎಲ್ಲಾ ಸುದ್ದಿವಾಹಿನಿಗಳ ದೂರವಾಣಿ ಕರೆಗೆ ನಿಲುಕುತ್ತಾರೆ ಎಂದಾದರೆ, ಪೊಲೀಸರಿಗೆ ಬಂಧಿಸಲು ಏನಡ್ಡಿ?

ಮಾಧ್ಯಮಗಳು

ಡಿಜಿಪಿ ಶ್ರೀಕುಮಾರ್ ಮುಖ್ಯಪ್ರಶ್ನೆಯೊಂದನ್ನು ಎತ್ತಿದ್ದಾರೆ. "ಇಂತಹ ದಾಳಿ ಬಗ್ಗೆ ಮೊದಲೇ ಗೊತ್ತಿದ್ದರೂ, ಮಾಧ್ಯಮದವರು ಪೊಲೀಸರಿಗೇಕೆ ತಿಳಿಸಲಿಲ್ಲ? ನಿಮ್ಮದು ಬೇಜವಾಬ್ದಾರಿ ನಡವಳಿಕೆ ಅಲ್ಲವೇ?"

ಮಾಧ್ಯಮಗಳು ಸ್ಥಳಕ್ಕೆ ಧಾವಿಸುವ ಮುನ್ನ ಪೊಲೀಸರಿಗೆ ಮಾಹಿತಿ ನೀಡಬೇಕಿತ್ತು ಎನ್ನುವುದು ಸರಿಯೇ. ಆದರೆ, ದಾಳಿಕೋರರ ಹಿಂಡು ನಾವೀಗ ಗೂಂಡಾಗಿರಿ ಮಾಡಲು ಹೊರಡುತ್ತೇವೆ ಎಂದು ಊರತುಂಬ ಮಾಧ್ಯಮಗಳಿಗೆ ಹೇಳಿಕೊಂಡು ಬರುವ ತನಕ ತಮ್ಮ ಇಂಟೆಲಿಜೆನ್ಸ್ ವಿಂಗ್ ಏನು ಮಾಡುತ್ತಿತ್ತು ಸ್ವಾಮಿ?

ಮಾಧ್ಯಮದವರು ಜನರಿಗೆ ಸುದ್ದಿ ಮುಟ್ಟಿಸುವ ತವಕದಲ್ಲಿರುತ್ತಾರೆ. They are not police informants.

ಹಿಂದೆ ಇಂತಹದೇ ಅನೇಕ ಪ್ರಕರಣಗಳಲ್ಲಿ ಪೊಲೀಸ್ ನಡೆದುಕೊಂಡಿರುವ ಪರಿ ಮಾಧ್ಯಮದವರಿಗೆ ಬೇಸರ ತಂದಿರಬಹುದು. ಹಾಗಾಗಿಯೇ ಅವರೂ ಪೊಲೀಸರಿಗೆ ಹೇಳುವ ಉಸಾಬರಿಗೆ ಹೋಗಿಲ್ಲ. ಹಾಗೊಂದು ಪಕ್ಷ ಮಾಹಿತಿ ನೀಡಿದ ನಂತರ, ಅಲ್ಲಿ ಆ ಘಟನೆ ಆಗದೇ ಹೋದರೆ - ಎಂಬ ಅನುಮಾನ ಪತ್ರಕರ್ತರಲ್ಲೂ ಇರುತ್ತದೆ. ಹೀಗಿರುವಾಗ ಮಾಧ್ಯಮಗಳಿಗೆ ನೋಟಿಸ್ ಜಾರಿಮಾಡುವ 'ಬುದ್ಧಿವಂತಿಕೆ' ಅಗತ್ಯವಿರಲಿಲ್ಲ.

11 comments:

Anonymous said...

ಮಾಧ್ಯಮದವರು ತಮ್ಮ ಕೆಲಸವನ್ನ ಚೆನ್ನಾಗಿಯೇ ನಿರ್ವಹಿಸಿದ್ದಾರೆ. ಪೊಲೀಸರು ಯಾರ ಹಿತ್ತಿಲು ಕಾಯುತ್ತಿರುತ್ತಾರೆ? ಅವರ ಕೆಲಸವನ್ನೂ ಮದ್ಯಮದವರೇ ಮಾಡಬೇಕಿತ್ತು ಎಂಬ ಶ್ರೀಕುಮಾರರ ನಿರೀಕ್ಷೆ ನಗೆ ಬರಿಸುತ್ತದೆ. ತಮ್ಮ ಇಲಾಖೆಯ ಕರ್ತವ್ಯ ಲೋಪವನ್ನು ಮರೆ ಮಾಚಲು ಮಾಧ್ಯಮದ ಮೇಲೆ ಹರಿಹಾಯುವುದು, ಸಾಕ್ಷಿಗಳಾಗಿ ಕರೆಸುತ್ತೇವೆ ಎಂದೆಲ್ಲ ಬೆದರಿಸಲು ಪ್ರಯತ್ನಿಸುವುದು ಇತ್ತೀಚೆಗೆ ಬಿದರಿಯವರು ಬೆಂಗಳೂರಿನ ಸಾಲು ಸಾಲು ಕೊಳೆಗಳ ಬಗ್ಗೆ ಎಲ್ಲರಿಗೂ ರಕ್ಷಣೆ ಕೊಡಲು ಸಾರ್ಧಯವಿಲ್ಲ ಎಂದಿರುವುದು ಇಲಾಖೆಯ ಜವ್ಬ್ದಾರಿ ಅಧಿಕಾರಿಗಳು ರಾಜಕಾರಣಿಗಳಂತೆ ಮಾತನಾಡುತ್ತಿರುವುದನ್ನು ನೋಡಿದರೆ ಒಟ್ಟಾರೆ ನಮ್ಮ ನಮ್ಮ ವ್ಯವಸ್ಥೆ ತಲುಪುತ್ತಿರುವ ದುರಂತವನ್ನ ಢಾಳಾಗಿ ಎತ್ತಿ ತೋರಿಸುತ್ತಿದೆ ಅನಿಸುತ್ತದೆ.

Anonymous said...

Janardana poojari avra press meet agta iddaga kannada da prathishthitha dinapatrike varadigaararobbaru ondu prashne ettidru....
``Avru hogiddu pub ge swami devashthanakkalla... anthavarannu `hengasaru' antha karee bahuda....''
Idra bagge nanenu vishleshane madalla readers can analise about it.

Anonymous said...

ee acharya mattu palemar yavattu nagarikara riti vartisiddare? daka dalli alpasankyataru baluvanta vatavarana ideye? idannu nagarika sarkara ennabeka? acharya gruha khate vahisikolalu nalayakku. kudale rajiname nidabeku. mana maryade iddare. srirama sene gunda gallanny olage akabeku. adare acharyanige a ghats yellide swami?

Anonymous said...

Media is sensationalising the whole issue. Some girls (?) who have gone to drink, dance and create nuisance have been advised to behave properly. And none of them have gone to pray God or perform some religious rituals. Nor those girls were doing some official public service duty. Nor they were doing their routine work to earn their living. These rich and spoilt girls have no business to be in public place after the midnight.

Anonymous said...

ರಾಜ್ಯವು ಇಂದು ಕೋಮುವಾದಿಗಳ ಕೈಯ್ಯಲ್ಲಿ ನಳುಗುತ್ತಿರುದರ ಉತ್ತಮ ಉದಾಹರಣೆ ಈ ಘಟನೆ, ಮಂಗಳೂರಿನಲ್ಲಿ ಅಲ್ಪಸಂಖ್ಯಾತರನ್ನು ಇದೇ ರೌಡಿಗಳು ಬೆತ್ತಲೆಗೊಳಿಸಿದಾಗ ಸ್ಪಂದಿಸದ ರಾಷ್ಟ್ರೀಯಮಾದ್ಯಮಗಳು ಇಂದು ತಾವು ಪ್ರಚಾರ ಮಾಡುವ ಸಂಸ್ಕೃತಿಯಮೇಲೆ ದಾಳಿನಡೆದಾಗ ಎಚ್ಚೆತ್ತು ಕೊಂಡಿದೆಯೆಂದರೆ ತಪ್ಪಾಗಲಾರದು.. ಸುದ್ದಿ ಮಾತಿಗೆ ಧನ್ಯವಾದಗಳು ಇತ್ತೇಚೆಗೆ ರಾಜ್ಯಸರಕಾರ ಇದೇ ಕೋಮುರೌಡಿಗಳ ಮೇಲೆ ಮೊಕದ್ದಮೆಗಳನ್ನು ಹಿಂತೆಗೆಯುವ ಮೂಲಕ ಇವರನ್ನು ಹುರಿದುಂಬಿಸಿದೆ. ಸಮಾಜದ ಶಾಂತಿಪ್ರಿಯರೆಲ್ಲ ಒಂದಾಗಿ ಈ ಕೋಮು ರೌಡಿಗಳ ವಿರುದ್ದ ಹೋರಾಡಬೇಕಾಗಿದೆ

Anonymous said...

nidhi sahebare mechide nimma tarkad mattige. manuvaditanavannu stapisalu yathnisuttiruva nemage shabhasgiri helalebeku. devasthanake hodare bhakuti hutti barututade enuddare bellur- halebedugala kama shilpagala bage enu heluveri.

Anonymous said...

sir nanu baredadannu swalpa sariyagi odi

Anonymous said...

ಮಂಗಳೂರು ಘಟನೆಯನ್ನು ಅನಗತ್ಯವಾಗಿ ವಿಜೃಂಭಿಸಲಾಗಿದೆ. ಎಡಪಂಥೀಯರು, ಬುದ್ದಿಜೀವಿಗಳು ಸ್ವಾತಮತ್ರ, ಮಾನವ ಹಕ್ಕುಗಳ ಹೆಸರಲ್ಲಿ ಮಹಿಳೆಯರ ಹಾದಿ ತಪ್ಪಿಸುತ್ತಿದ್ದಾರೆ.
ಇಲ್ಲಿ ಗಮನಿಸಬೇಕಾದ ಕೆಲ ಅಂಶಗಳಿವೆ. ಇವುಗಳ ಆದಾರದ ಮೇಲೆ ಚರ್ಚೆ ನಡೆಯಲಿ.
1. ಈಗ ಈ ಹೆಣ್ಣು ಮಕ್ಕಳನ್ನು, ಗಂಡು ಮಕ್ಕಳನ್ನು ಬೆಂಬಲಿಸುತ್ತಿರುವ ಜನಾರ್ಧನ ಪುಜಾರಿ, ಮಹಿಳಾ ಆಯೊಗದ ಮಹಿಳಾ ಮಣಿಗಳು, ಪುರುಷ ಪುಂಗವರು, ಮಹಿಳಾ ಹಕ್ಕಿನ ಬಗ್ಗೆ ಮಾತನಾಡುವ ನಾಯಕಿ ಶಿಖಾಮಣಿಗಳಿಗೆಲ್ಲ ಒಂದು ಪ್ರಶ್ನೆ: ನಿಮಗೂ ಗಂಡು ಅಥವಾ ಹೆಣ್ಣು ಮಕ್ಕಳಿದ್ದಾರಲ್ಲವೇ? ಈಗ ಪಬ್ ನಲ್ಲಿ ಒದೆ ತಿಂದು ಬಂದಿರುವ ಹೆಣ್ಣು ಮಕ್ಕಳನ್ನು ನಿಮ್ಮ ಗಂಡು ಮಕ್ಕಳಿಗೆ ಮದುವೆ ಮಾಡಿ ಸೊಸೆಯಂದಿರನ್ನಾಗಿ ಮಾಡಿಕೊಳ್ಳಲು ಸಿದ್ಧರಿದ್ದೀರಾ? ಅಥವಾ ಅಲ್ಲಿ ಕುಣಿದು, ಬೆದೆ ಬಂದ ದನದಂತೆ ವರ್ಥಿಸಿದ ಪುರುಷ ಪುಂಗವರಿಗೆ ನಿಮ್ಮ ಹೆಣ್ಣು ಮಕ್ಕಳನ್ನು ಮದುವೆಮಾಡಿ ಕೊಡಲು ಸಿದ್ಧರಿದ್ದೀರಾ? ದಯವಿಟ್ಟು ಉತ್ತರಿಸಿ. ಏಕೆಂದರೆ ಅವರೇನೂ ತಪ್ಪು ಮಾಡಿಲ್ಲವಲ್ಲ! ಸಂವಿಧಾನವೇ ಅವರಿಗೆ ಹಕ್ಕು ನೀಡಿದೆ.
2. ಏಕೆ ದೇವಸ್ಥಾನ, ಕಾಲೇಜುಗಳಿಗೆ ಸೌಜನ್ಯಯುತವಾಗಿ ಹೋಗಿ ಬರುವ ಹುಡುಗಿಯರ ಮೇಲೆ ಧಾಳಿ ನಡೆದಿಲ್ಲ?
3. ಬಾರ್ ಗೆ ಕುಡಿಯಲು, ಕುಣಿಯಲು, ತಾತ್ಕಾಲಿಕ ದೈಹಿಕ ಬಾಧೆಗಳನ್ನು ತಿರಿಸಿಕೊಳ್ಳಲು ಯಾವನನ್ನೋ ಅಥವಾ ಯಾವಳನ್ನೋ ಕಟ್ಟಿಕೊಂಡು ಹೋದವರ ಬಗ್ಗೆ ಇಷ್ಟು ಕಾಳಜಿ ಏಕೆ?
4. ಇದೇ ಮಂಗಳೂರಿನಲ್ಲಿ ಇಂತಹ ಹುಡುಗಹಿಯರಿಗೆ ಕುಡಿತ, ಕುಣಿತ ಡ್ರಗ್ಸ್, ಸೆಕ್ಸ್ ರುಚಿ ಹಚ್ಚಿಸಿ, ಎಷ್ಟು ಹುಡುಗಿಯರ ಬ್ಲೂ ಫಿಲಂ ತೆಗೆಯಲಾಗಿದೆ ಎಂದು ಎಲ್ಲರಿಗೂ ಗೊತ್ತು.
5. ಈ ಹುಡುಗ-ಹುಡುಗಿಯರು ಹಾಕಿಕೊಂಡಿದ್ದ ಬಟ್ಟೆ, ಕುಡಿತವನ್ನು ಬೆಂಬಲಿಸುವವರು ತಮ್ಮ ಮಕ್ಕಳನ್ನು ಅದೇ ಸ್ಥಿತಿಯಲ್ಲಿ ಅಂತಹ ಕ್ಲಬ್ ಗಳಿಗೆ ಹೋಗುವುದನ್ನು ಸಮರ್ಥಿಸುತ್ತಾರಾ? ಉತ್ತೇಜಿಸುತ್ತಾರಾ? ಏಕೆಂದರೆ ಅವರ ಮಕ್ಕಳಿಗೂ ಸ್ವಾತಂತ್ರ ಇದೆಯಲ್ಲವೇ?
6. ಮಂಗಳೂರು ಹಾಗೂ ಸುತ್ತಲ ಆಸ್ಪತ್ರೆಗಳಲ್ಲಿ ವಯಸ್ಸಿಗೆ ಬಂದಿರುವ ಎಷ್ಟು ಹೆಣ್ಣು ಮಕ್ಕಳು ಹೊಟ್ಟೆ ಬರಿಸಿಕೊಂಡು ಅಬಾರ್ಷ್ನ್ ಮಾಡಿಸಿಕೊಳ್ಳಲು ಲಕ್ಷ ಗಟ್ಟಲೆ ಸುರಿಯುತ್ತಾರೆ ಎಂದು ಗೊತ್ತಿದೆಯೇ?
7. ಈಗ ಇವರನ್ನು ಬೆಂಬಲಿಸುವವರು ತಮ್ಮ ಹೆಣ್ಣು ಮಕ್ಕಳಿಗೆ ಇಂತಹ ಸ್ಥಿತಿ ಬಂದರೆ ಏನು ಮಾಡುತ್ತಾರೆ?
8. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಇದೇ ರಿತಿ ಎಂಜಾಯ್ ಮಾಡಲು ಹೋಗಿದ್ದ ಪೇರ್ ಒಂದನ್ನು ಹಿಂಬಾಲಿಸಿದ ದುಷ್ಕರ್ಮಿಗಳು ಆ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಅತ್ಯಾಚಾರ ಎಸಗಿದ್ದು, ಸ್ಕಾರ್ಲೆಟ್ ಮರ್ಢರ್, ಮೋನಿಕಾ ಪ್ರಕರಣ ಮರೆತು ಬಿಟ್ಟಿದ್ದೀರಾ? ಇದರೆಲ್ಲಲ್ಲ ಇದೇ ಪಬ್ ಸಂಸ್ಕೃತಿಯ ಝಲಕ್, ಅದಕ್ಕೆ ದಾಸರಾದವರ ಕತೆಗಳ ಟಚ್ ಇದೆ.
8. ಹಾಗಂತ ಶ್ರೀ ರಾಮ ಸೇನೆ ಮಾಡಿದ್ದ ಸರಿ ಅಂತ ಅಲ್ಲ. ಅವರು ಸೌಜನ್ಯದಿಂದ ಆ ಪಬ್ ಮುಂದೆ ಧರಣಿ ನಡೆಸಿ, ಅದರ ಪರವಾನಿಗೆ ರದ್ದು ಪಡಿಸಲು ಒತ್ತಾಯಿಸಬಹುದಿತ್ತು. ಅದು ಬಿಟ್ಟು ಅಲ್ಲಿಗೆ ಬಂದವರ ಮೇಲೆ ಧಾಳಿ ನಡೆಸಿದ್ದ ಖಂಡಿತಾ ತಪ್ಪು.
ಆದರೆ ಇದನ್ನು ಓದುತ್ತಿರುವ ನಮಗೆಲ್ಲಾ ಸಾಮಾಜಿಕ ಜವಾಬ್ದಾರಿ ಇದೆ ಎಂದು ಭಾವಿಸಿದ್ದೇನೆ. ಬೇರೆ ಮನೆಯ ಹೆಂಗಸರು ಅರೆಬರೆ ಬಟ್ಟೆ ಹಾಕಿಕೊಂಡು, ಕುಡಿಯಲು ಯಾವನದ್ದೋ ಜೊತೆ ಹೋಗಿದ್ದನ್ನ ಮರೆ ಮಾಚಿ, ಊಟಕ್ಕೆ ಹೊದವರ ಮೇಲೆ ಧಾಳಿ ಎಂದು ಬಿಂಬಿಸುವದರಲ್ಲಿ ಅರ್ಥವಿಲ್ಲ. ನಮ್ಮ ಮನೆಗಳಲ್ಲೇ ಅಂತಹ 'ಊಟ'ದ ಸ್ವಾತಮತ್ರ ನೀಡಲು ಸಿದ್ಧರಿದ್ದೇವೆಯೇ?
ಇಲ್ಲಿ ಆಗಬೇಕಿರುವುದು ಇಷ್ಟೇ! ಈ ಪಬ್, ಕ್ಲಬ್ ಗಳ ಮೇಲೆ ಸರಕಾರ ಸರಿಯಾದ ನಿಯಂತ್ರಣ ಹಾಕಬೇಕು. ಪೋಷಕರೂ ತಮ್ಮ ಮಕ್ಕಳನ್ನು ಸರಿಯಾದ ದಾರಿಯಲ್ಲಿ ಸಾಗುವಂತೆ ಮಾಡಬೇಕು. ಇಲ್ಲದಿದ್ದರೆ ಪುಗಸಟ್ಟೆ ಪ್ರಚಾರದಿಂದ ಶ್ರಿ ರಾಮ ಸೇನೆ, ರಕ್ಷಣ ವೇದಿಕೆಯಂತಹ ಸಂಘಟನೆಗಳು ಹುಟ್ಟಿಕೊಳ್ಳಲು ಅವಕಾಶವಾಗುತ್ತದೆ.

Anonymous said...

Heege Madhyamadavaru maddutta hodre Naale criminla obba, phone maadi inthalli kole maduthenne antha helluthane. aaga breaking exclusive suddi mattu visual gagi reporter camera person hoogabahudallwa ?

Anonymous said...

ಸುದ್ದಿ ನೀಡುವುದು ಒಂದೇ ಮಾಧ್ಯಮದವರ ಜವಾಬ್ದಾರಿಯೇ ಎಂಬುದನ್ನು ತಾವು ಮಾಧ್ಯಮದವರಾಗಿ ತಾವು ಅರಿತುಕೊಳ್ಳಬೇಕಾಗಿದೆ.ಆದ್ರೆ ಅದೂ ಸರಿಯಾಗಿದೆಯೇ?.ಅದೂ ಇಲ್ಲ. ಒಂದು ನೈಜ ಸುದ್ದಿ ತಿರುಚಿ ಮರಿದಿನ ಪ್ರಕಟವಾಗುತ್ತದೆ. ಇಲ್ಲಸಲ್ಲದ್ದನ್ನು ಸೇರಿಸಿ ಪ್ರಸಾರ ಮಾಡಲಾಗುತ್ತದೆ. ಉದಾಹರಣೆಗಳು ಅದೆಷ್ಟೋ. ಬೇಕಾ ಇಂತಹ ಮಾಧ್ಯಮ...

Anonymous said...

Well, beating up women inbroad day light is not appreciated in a country whose claims to treat women as Gods n dat too by people who claim to b her true
torch bearers. But, is slapping n pushing around of 2 or 3 women
worth so much coverage ,especially in a country where there are
at least 50 rape cases a day?[ National Crime Records Bureau (NCRB) report]

Why on earth is one isolated incident given so much coverage, I
simply can't understand.

It has also showed how ignorant n misleading some national news
channels are? They {ndtv as I have seen} carried a report of more than
15 mins without having a single reporter stationed in mlore at that
time.

Look it from the larger angle.
Is it ideal for a healthy society for its youth to drink n dance at 3
in the afternoon?
In less than 200 metres from d pub there of 2 big colleges wid at least
5000 students.d impact?
Also d pub is in d heart of d city {balmatta] If somebody drinks n
drives in mid afternoon, there is high possibility of drunkards
running over ppl.
in dat timings wid all music in such a central location, it only
creates nuisance.
Hence though d mode of protest of sri ram sena is
wrong, their concern is justified