Friday, February 6, 2009

ಲ್ಯಾಪ್‌ಟಾಪ್ ಪತ್ರಕರ್ತರು



ಎಲ್ಲವೂ ಹಣದಿಂದ ಕೊಳ್ಳಬಹುದು ಎಂದೇ ತಿಳಿದಿರುವ ಗಣಿ ಜನಾರ್ಧನ ರೆಡ್ಡಿ ಗ್ಯಾಂಗ್ ರಾಜಕಾರಣವನ್ನು ಇದೇ ರೀತಿ ಭಾವಿಸಿ ತಮ್ಮ ಬೆಂಬಲಿಗ ಶಾಸಕರನ್ನು ಚುನಾಯಿಸಿ ಸಂಖ್ಯೆ ಹೆಚ್ಚು ಮಾಡಿಕೊಂಡು ರಾಜ್ಯಪ್ರಭುತ್ವವನ್ನೇ ಮುನ್ನಡೆಸುತ್ತಿರುವಾಗ ಪಾಪ ಯಡಿಯೂರಪ್ಪ ತಾಳಕ್ಕೆ ತಕ್ಕಂತೆ ಕುಣಿಯುವುದು ಬಿಟ್ಟು ಬೇರೇನೂ ಮಾಡಲು ಸಾಧ್ಯ? ಈ ನಡುವೆ ಪ್ರಜಾಪ್ರಭುತ್ವದ ೪ನೇಯ ಅಂಗ ಪತ್ರಿಕೆಗಳು ಯಾವ ಲೆಕ್ಕ?


ಪ್ರಜಾಪ್ರಭುತ್ವದ ಕಾವಲು ನಾಯಿಗಳನ್ನು ತನ್ನ ಸಾಕು ನಾಯಿ ಮಾಡಿಕೊಳ್ಳುವುದು ಎಷ್ಟು ಸುಲಭ ಎಂದು ಸ್ವತಃ ಒಂದು ದಿನ ಪತ್ರಿಕೆಯ ಸಂಪಾದಕರಾಗಿರುವ ಜನಾರ್ಧನ ರೆಡ್ಡಿಗೆ ಹೇಳಿಕೊಡಬೇಕಿಲ್ಲ. ಜನಾರ್ಧನ ರೆಡ್ಡಿ ಅವರನ್ನು ಗುಟ್ಟಾಗಿ ಕಂಡ ದೊಡ್ಡಗಂಟಲಿನ ದಿನ ಪತ್ರಿಕೆಯ ಸಂಪಾದಕರೊಬ್ಬರು ತಾವು ರೀನಿವಲ್ ಆಗಲು ಇರುವ ಕಷ್ಟ ನಿವೇದಿಸಿಕೊಂಡು ಕೃತಾರ್ಥರಾದ ವರ್ತಮಾನ ಬಂದಿದೆ.


ಆಂಧ್ರದಲ್ಲಿ ಗಣಿಗಾರಿಕೆ ನಡೆಸುವ ಪರವಾನಿಗೆ ಪಡೆದು ಕರ್ನಾಟಕದ ೩೫ ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಾ ಕನ್ನಡ ನೆಲವನ್ನು ಆಂಧ್ರಕ್ಕೆ ಸೇರಿಸಿ ಬಿಟ್ಟ ಜನಾರ್ಧನ ರೆಡ್ಡಿ ಪವಾಡವನ್ನು ಕನ್ನಡ ನೆಲ, ಜಲದ ಬಗ್ಗೆ ಮಾತನಾಡುವ ಕನ್ನಡಪರ ಸಂಘಟನೆಗಳು ಯಾಕೋ ಮೈ ಮರೆತಿವೆ. ಬೆಳಗಾವಿ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪವಾಗದಂತೆ ನೋಡಿಕೊಳ್ಳಲು ಒಂದು ಕಡೆ ಶಿವಸೇನೆ ಮತ್ತೊಂದು ಕಡೆ ಸರ್ಕಾರ ಮುಗಿದು ಹೋಗಿರುವ ಬೆಳಗಾವಿ ಗಡಿ ಸಮಸ್ಯೆ ಎತ್ತುವ ಮೂಲಕ ಕನ್ನಡ ನೆಲ ಕದಿಯುತ್ತಿರುವುದನ್ನು ಮುಚ್ಚಿ ಹಾಕಲಾಯಿತು.


ಪಾಪ ವಿರೋಧ ಪಕ್ಷಗಳು ಕೂಡಾ ಇದನ್ನೇ ಮಾತನಾಡಿ ಅಧಿವೇಶನ ತುಂಬಾ ಗಲಾಟೆ ಮಾಡಿದವು. ಕನ್ನಡ ನೆಲದಲ್ಲಿದ್ದ ಐತಿಹಾಸಿಕ ಸುಂಕ್ಲಮ್ಮದೇವಿಯ ಗುಡಿಯು ಗಣಿಗಾರಿಕೆಯಿಂದ ಶಿಥಿಲವಾಗುತ್ತಿದೆ ಎಂದು ನಮ್ಮ ಎಲ್ಲಾ ಮಾಧ್ಯಮಗಳು ವರದಿ ಮಾಡಿದ್ದವು. ವಿದ್ಯುನ್ಮಾನ ಮಾಧ್ಯಮಗಳು ಶಿಥಿಲಗೊಳ್ಳುತ್ತಿರುವ ಗುಡಿಯ ದೃಶ್ಯಗಳನ್ನು ಸೆರೆ ಹಿಡಿದು ವಿಶೇಷ ವರದಿ ಮಾಡಿದ್ದವು. ನಂತರ ಗುಡಿಯ ರಿಪೇರಿ ನಡೆಸಿದ ಜನಾರ್ಧನ ರೆಡ್ಡಿ ಎಲ್ಲಾ ಮಾಧ್ಯಮದವರನ್ನು ಕರೆದುಕೊಂಡು ಗುಡಿಗೆ ಏನೋ ಆಗಿಲ್ಲ ಎಂದು ವರದಿ ಮಾಡಿಸಿದ್ದರು. ಈ ಗುಡಿಯು ಕನ್ನಡ ನೆಲದಲ್ಲಿದೆ ಎಂಬ ಅಂಶ ಗೊತ್ತಾಗುತ್ತಿದ್ದಂತೆ ಇಡೀ ಗುಡಿಯನ್ನು ಗುಡಿಸಿ ಹಾಕಿಯೇ ಬಿಟ್ಟರು. ಈಗ ಅಲ್ಲಿ ಗುಡಿ ಇತ್ತು ಎಂದರೆ ಯಾರು ನಂಬುವುದಿಲ್ಲ. ಈ ಬಗ್ಗೆ ನಮ್ಮ ಯಾವ ಮಾಧ್ಯಮಗಳು ತುಟಿ ಪಿಟ್ಟೆಂದಿಲ್ಲ.


ಗುರುವಾರದಂದು ರಾತ್ರಿ ಬಳ್ಳಾರಿಯ ಎಲ್ಲಾ ಮಾಧ್ಯಮದವರನ್ನು ಕರೆಸಿಕೊಂಡ ಜನಾರ್ಧನ ರೆಡ್ಡಿ ಒಂದು ಲಕ್ಷ ರೂ. ಮೌಲ್ಯದ ಲ್ಯಾಪ್‌ಟಾಪ್ ನೀಡಿದ್ದಾರೆ. ಅಲ್ಲದೆ ತಲಾ ವರದಿಗಾರರಿಗೆ ಒಂದು ಬೆಲೆ ಬಾಳುವ ಸೈಟ್ ನೀಡುವುದಾಗಿ ಘೋಷಣೆ ಮಾಡಿದ್ದಾರೆ ಎಂಬ ಮಾಹಿತಿಗಳಿವೆ.ಕೃತಾರ್ಥಭಾವದಲ್ಲಿ ನರಳುತ್ತಿರುವ ಪತ್ರಕರ್ತರ ಪೆನ್ನಿನಲ್ಲಿ ರೆಡ್ಡಿ ವಿರುದ್ಧ ಬರೆಯುವ ಶಾಯಿ ಈಗ ಮುಗಿದು ಹೋಗಿದೆ.


ಮುದ್ರಣ, ದೃಶ್ಯ ಮಾಧ್ಯಮದ ಜಿಲ್ಲಾ ವರದಿಗಾರರಂತೂ ಇದರಿಂದ ಪುಳುಕಿತರಾಗಿ ರಾತ್ರಿ ರಂಗಾಗಿ ಪಾರ್ಟಿ ಆಚರಿಸಿದ ವರದಿಗಳು ಬಂದಿವೆ. ಈಗ ಬಳ್ಳಾರಿಯಲ್ಲಿರುವ ಪತ್ರಕರ್ತರನ್ನು ಲ್ಯಾಪ್‌ಟಾಪ್ ಪತ್ರಕರ್ತರೆಂದು ಕರೆಯಬಹುದು. ಪ್ರಜಾಪ್ರಭುತ್ವದ ಕಾವಲು ನಾಯಿ, ಗಣಿಧಣಿಗಳ ಸಾಕು ನಾಯಿಯಾದ ಕಥೆ ಎಂದು ಇದನ್ನು ಮರುನಾಮಕರಣ ಮಾಡಬಹುದೇ?

5 comments:

chanakya said...

ಸ್ವಾಮಿ..ಸ್ನೇಹಿತ್ರೆ ಬರಿ ಮತ್ತೊಬ್ಬರ ತಪ್ಪು ಹುಡ್ಕೋದೆ ನಿಮ್ ಜಾಯಮಾನ ಆಗೋಯ್ತಲ್ರೀ..ನಿಮಗೆ ಗೊತ್ತಾಗಿರೋದು ಕೇವಲ ಬಳ್ಳಾರಿ ಪತ್ರಕರ್ತ ಗೆಳೆಯರದ್ದು. ರಾಜದಾನಿಯ ಕಲರ್ಫುಲ್ ಪತ್ರಕರ್ತರಿಗೆ ಏನೇನು ಸಿಕ್ಕಿದೆ ಗೊತ್ತಾ? ಆದ್ರೂ ಇದೇನು ಹೊಸತಲ್ಲ ಬಿಡಿ. ಈಗಾಗ್ಲೆ ವಾಚು-ಉಂಗುರ ಕೊಟ್ಟಿರೋರು ಅದುನಿಕ ಪತ್ರಕರ್ತರ ಬೇಕುಬೇಡಗಳನ್ನ ಈಡೇರಿಸಿದಾರೆ ಅಂದ್ಕೊಳ್ಳಿ..ಇದು ವ್ಯವಸ್ತೆಯ ದುರಂತ..

Anonymous said...

Hello Sir,
in and out of Bellary District Journalism Died. No one Journalish heaving Gutts to with Facts and Figures. But, here all journalists were verymuch depending on Gani Kalla Reddy Monthealy Covers. in this line some one will get money through online Banking system only. Now, today what they took is very small. their salary and saving verifation is essentieal.

----------
annayana, Srimathi

ಅರಕಲಗೂಡುಜಯಕುಮಾರ್ said...

Oh... is this Reddygaru "Press Operation"? I think this is not new else, as chanakya told plenty of pupils those who are not knowing journalism ethics will join under the labels journalist.As everybody knows how such pupils+so called senior and popular labelled journalists always go behind power politics and money holders... u know in some places they were acted like mediators, pimps also commission agents. Really i felt very bad to hear this news.It's very shameful to us. However now journalist are not poor in economy side because such type of some dirty's were stayed in journalism field and doing gambling and etc.,What is the remedy for this?????

Anonymous said...

ನೀವು ಬಳ್ಳಾರಿ ಪತ್ರಕರ್ತರ ಬಗ್ಗೆ ಬರೆದ್ರಿ. ಆದ್ರೆ ಬೆಂಗಳೂರಿನ ಕೆಲ ಪತ್ರಕರ್ತರ ಜನ್ಮ ಜಾಲಾಡಿದ್ರೆ ಪತ್ರಿಕೋದ್ಯಮದ ಬ್ರಶ್ಟತೆ ಎಲ್ಲಿಯ ವರೆಗೆ ತಲುಪಿದೆ ಎಂಬುದು ಗೊತ್ತಾಗ್ತದೆ. ದ್ರಶ್ಯ ಮಾದ್ಯಮದ ಒಂದು ಟೀಂ ಅತ್ಯಂತ ವ್ಯವಸ್ತಿತವಾಗಿ ವಸೂಲಿ ದಂದೆಯಲ್ಲಿತೊಡಗಿದೆ. ಕಳೆದ ಒಂದೇ ಚುನಾವಣೆಯಲ್ಲಿ ಕೆಲವರ ಕಮಾಯಿ ನೋಡಿದ್ರೆ ವಾಕ್ರಿಕೆ ಬರುತ್ತೆ. ಇಂತಹ ಕೆಲವೇ ಮಂದಿಯಿಂದ ಎಲ್ಲ ಪತ್ರಕರ್ತರನ್ನು ಒಂದೇ ತಕ್ಕಡಿಯಲ್ಲಿ ತೂಗುವಂತಾಗಿದೆ.ಮಜಾ ಅಂದ್ರೆ ಅಂತಹವ್ರೇ ಪ್ರೊಮೋಶನ್, ಇಂಕ್ರಿಮೆಂಟ್ ಎಲ್ಲಾ ಪಡ್ಕೊಂಡು ಮಹಾ ಸಾಚಗಳಂತೆ ಕಾಂಣ್ತಾ ಇರ್ತಾರೆ.ಇದಲ್ವೆ ವ್ಯಂಗ್ಯ?

Anonymous said...

Why blame and brand poor chaps in Bellary alone? Who prevented their counterparts from the capital to expose Gani Dhani's?