Sunday, February 8, 2009

ಮಾಧ್ಯಮಗಳಿಗೆ ಒಂಬುಡ್ಸಮನ್, ಆಚಾರ್ಯರ ಹೊಸ ವರಸೆ


ಮಂಗಳೂರು ಮತ್ತೆ ಮತ್ತೆ ಸುದ್ದಿಯಲ್ಲಿದೆ. ಕೆಲವೇ ದಿನಗಳ ಹಿಂದೆ ಪಬ್ ಮೇಲೆ ದಾಳಿ ಮಾಡಿ ಕೆಲ ಹುಡುಗಿಯರನ್ನು ಹೀನಾಯವಾಗಿ ಥಳಿಸಿತ್ತು ಶ್ರೀರಾಮಸೇನೆ ಹುಡುಗರ ದಂಡು. ಆ ಬೆಂಕಿ ತಣ್ಣಗಾಗುವ ಮುನ್ನವೇ ಕೇರಳ ಶಾಸಕರೊಬ್ಬರ ಪುತ್ರಿ ಮೇಲೆ ದಾಳಿ ನಡೆದಿದೆ. ಅನ್ಯ ಧರ್ಮದ ಹುಡುಗನೊಬ್ಬನ ಜೊತೆ ಬಸ್ ನಲ್ಲಿ ಪ್ರಯಾಣಿಸಿದ್ದೇ ಆ ಹುಡುಗಿಯ ಮೇಲಿನ ದಾಳಿಗೆ ಕಾರಣ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಹೊಸತರಲ್ಲಿ ಚರ್ಚ್ ಗಳ ಮೇಲೆ ಸರಣಿ ದಾಳಿ ನಡೆಯಿತು.

ಈ ಎಲ್ಲಾ ಘಟನೆಗಳಲ್ಲೂ ಬಹುಸಂಖ್ಯಾತ ಹಿಂದೂ ಧರ್ಮದ ಅನುಯಾಯಿಗಳ ಭಯೋತ್ಪಾದನ ಮನೋಭಾವ ಕ್ರಿಯಾಶೀಲವಾಗಿದೆ. ಅವರೆಲ್ಲರೂ ನಿಜ ಅರ್ಥದಲ್ಲಿ ಭಯೋತ್ಪಾದಕರು. ಹಾಗೆಯೇ ಆಡಳಿತದಲ್ಲಿರುವ ಬಿಜೆಪಿ ಜೊತೆ ಒಂದಲ್ಲ ಒಂದು ರೀತಿ ಸಂಪರ್ಕ ಇಟ್ಟುಕೊಂಡವರು. ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಿಂದೆ ಬಜರಂಗದಳದ ನೇತಾರ. ರಾಜಕೀಯ ಆಸೆ ಬೆಳೆಸಿಕೊಂಡಾಗ ಸಂಘ ಪರಿವಾರ ಹೊರಹಾಕಿತು. ಆದರೆ ಇಂದಿಗೂ ತಾತ್ವಿಕವಾಗಿ ಮುತಾಲಿಕ್ ಸಂಘ ಪರಿವಾರದ ಕಾರ್ಯಕರ್ತನೇ.

ಅಚ್ಚರಿ ಎಂದರೆ ಗೃಹ ಮಂತ್ರಿ, ತಾನು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ವಿಫಲನಾದರೂ, ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಕೈಂಕರ್ಯದಲ್ಲಿದ್ದಾರೆ. ಮಾಧ್ಯಮಗಳು ಕ್ಷುಲ್ಲಕ ಸಂಗತಿಗಳನ್ನು ವಿಜೃಂಭಿಸುತ್ತಿವೆ ಎನ್ನುವುದು ಅವರ ಆರೋಪ. ಹಾಗೆಯೇ ಮಾಧ್ಯಮಗಳ ಮೇಲೆ ನಿಯಂತ್ರಣ ಸಾಧಿಸಲು ಒಂಬುಡ್ಸಮನ್ ನೇಮಕ ಮಾಡುತ್ತಾರಂತೆ.

"ಕೈಲಾಗದವನು ಮೈ ಪರಚಿಕೊಂಡನಂತೆ..." - ಆಚಾರ್ಯ ಈ ಮಾತಿಗೆ ತಕ್ಕ ಉದಾಹರಣೆ. ಯುವತಿಯರನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದನ್ನು ಮಾಧ್ಯಮ ಟೀಕಿಸಿದರೆ, ಇವರಿಗೆ ಆಗಿ ಬರುವುದಿಲ್ಲ. ಅವರ ಡಿಕ್ಷನರಿಯಲ್ಲಿ ಅದು ತೀರಾ ಸಣ್ಣ ಘಟನೆ. ಶಾಸಕರ ಪುತ್ರಿಗೇ ರಕ್ಷಣೆ ಇಲ್ಲದ್ದು ತೀರಾ ನಿರ್ಲಕ್ಷಿಸಬೇಕಾದ ಸಂಗತಿ!

ಸರಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಪಬ್ ಸಂಸ್ಕೃತಿ ವಿರೋಧಿಸುವ ಮಾತುಗಳನ್ನಾಡಿದ್ದಾರೆ. ಆಡಳಿತಕ್ಕೆ ಬಂದ ಹೊಸತರಲ್ಲಿ ನೂತನ ಅಬಕಾರಿ ನೀತಿಯನ್ನು ಜಾರಿಗೆ ತಂದು 5,000 ಕ್ಕೂ ಹೆಚ್ಚು ಪಬ್, ಬಾರ್ ಗಳಿಗೆ ಅನುಮತಿ ಕೊಡುವ ಸರಕಾರ, ಪಬ್ ಸಂಸ್ಕೃತಿ ವಿರೋಧ ಮಾಡುವ ಮಾತುಳನ್ನಾಡುತ್ತದೆ ಎಂದರೆ ಜನ ನಂಬಬೇಕೆ?

ಹೇಗೆ ವರದಿ ಮಾಡಬೇಕು, ಹೇಗೆ ಮಾಡಬಾರದು, ಯಾವುದು ಕ್ಷುಲ್ಲಕ, ಯಾವುದು ಗಂಭೀರ ಎನ್ನುವುದನ್ನು ಮಾಧ್ಯಮಗಳು ಈ ಕೋಮುವಾದಿ ಮನಸ್ಸುಗಳು ತುಂಬಿಕೊಂಡಿರುವ ಸರಕಾರದಿಂದ ತಿಳಿದುಕೊಳ್ಳಬೇಕೆ?

ಉಡುಪಿ ಶಾಸಕ ರಘುಪತಿ ಭಟ್ ಪತ್ನಿ ಅನುಮಾನಾಸ್ಪದ ಸಾವು ಸುದ್ದಿಯಾದಾಗಿನಿಂದ ಆಚಾರ್ಯರದು ಒಂದೇ ಮಾತು 'ಮಾಧ್ಯಮಗಳು ಮಿತಿ ಮೀರಿ ವರ್ತಿಸುತ್ತಿವೆ'. ಫ್ಯಾಸಿಸ್ಟ್ ಮನಸುಗಳಿಗೆ ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ ಇರುವುದಿಲ್ಲ. ಅಂತೆಯೇ ಟೀಕೆಗಳನ್ನು ಸಹಿಸುವುದಿಲ್ಲ. ಆಚಾರ್ಯ ಇದಕ್ಕಿಂತ ಹೊರತಲ್ಲ.

4 comments:

Anonymous said...

ಸರಿಯಾಗಿ ಆಡಳಿತ ನಡೆಸಲು ಬಾರದಿದ್ದರೂ ತಮ್ಮ ಅಸಾಮರ್ಥ್ಯವನ್ನು ಬಯಲಿಗೆಳೆಯುತ್ತಿರುವ ಮಾಧ್ಯಮವನ್ನು ನಿಯತ್ರಿಸಲು ಪ್ರಯತ್ನಿಸುತ್ತಿರುವುದು ಈ ಸರ್ಕಾರದ ನಾಝಿ ಧೋರಣೆಯನ್ನು ತೋರಿಸುತ್ತಿದೆ. ಆದರೆ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಇವರು ಬಾಲ ಬಿಚ್ಚುವುದಕ್ಕೆ ಆಗುವುದಿಲ್ಲ. ಕಸ್ತೂರಿ ಚಾನಲ್ನಲ್ಲಿ ಪ್ರಸಾರವಾದ ೦೮.೦೨.೨೦೦೯ರ ’ಕುರುಕ್ಷೇತ್ರ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುತಾಲಿಕ್ ಮತ್ತು ಪಡೆಯವರಿಗೆ ಚೆನ್ನಾಗಿ ನೀರಿಳಿಸಿದ್ದಾರೆ.

Anonymous said...

ಯಾಕೋ ಸುದ್ದಿಮಾತೆ ಮೊದಲು ಒಂಬುಡ್ಸಮನ್ ಗೆ ಬಲಿಯಾಗೊ ಚಾನ್ಸ್ ಇದೆ.. ಈ ರೀತಿ ಅಪಪ್ರಚಾರ ಮಾಡಿದ್ರೆ ಖಂಡಿತ ನಿಮ್ಮನ್ನು ಕಟಕಟೆ ಯಲ್ಲಿ ನಿಲ್ಲಿಸಬೇಕಾಗುತ್ತೆ..
ಮೊನ್ನೆ ಶಾಸಕ ಪುತ್ರಿಯ ಅಪಹರಣ ಮಾಡಿದ್ದು ಸಿ ಪಿ ಯಂ ನವರು ಅಂತ ಜನಸಾಮಾನ್ಯರಿಗೆಲ್ಲಾ ಗೊತ್ತಿದೆ.. ಮಾದ್ಯಮದ ಮಂದಿಗೆ ಇದು ಭಜರಂಗಿ..ಶ್ರೀ ರಾಮ ಸೇನೆ ಅಂತ ಹೇಳಲು ಮಾತ್ರ ಗೊತ್ತಿದೆ .. ಒಂದು ವಿಷ್ಯ ಗೊತ್ತಿರಲಿ.. ಏ ಸಂಘಟನೆಗಳು ಇದನ್ನು ಮಾಡಿದ್ದಲ್ಲಿ ಖಂಡಿತಾ ಅವ್ರು ಒಪ್ಪಿಕೊಳ್ಲುತ್ತಿದ್ದರು..ಯಾಕಂದ್ರೆ ಅವ್ರು ನಿಮ್ಮ ಹಾಗೆ ಮುಖವಿಲ್ಲದವರಲ್ಲ...

Anonymous said...

ಬಿಜೆಪಿಯವರಿಗೆ ಅಧಿಕಾರ ಸಿಕ್ಕಿದ್ದು, "ಮುಂದೆಂದೂ ಸಿಗದು" ಎನ್ನುವ ರೀತಿ ಆಡಳಿತ ನಡೆಸುತ್ತಿದ್ದಾರೆ. ಇದೇ ರೀತಿ ಅದರೆ ಅವರಿಗೆ ಮೂಲಭೂತವಾದಿತನಕ್ಕೆ ಖೆಡ್ಡ ರೆಡಿ ಮಾಡಿಕೊಂಡಂತೆಯೇ ಸರಿ...

Anonymous said...

acharya bidi avaru hage....
aadare kelavondu madhyamagalu haddu meeri vartisuttillave

neeve hakteeralla

- Booba