Saturday, December 6, 2008

ಆಡೋದೊಂದು, ಮಾಡೋದೊಂದು, ಇದು ಪೇಜಾವರ ಸ್ಟೈಲ್..

ದಲಿತರೂ ಹಿಂದೂಗಳು. ಅವರ ಏಳಿಗೆಗೆ ಮುಂದಾಗುತ್ತೇವೆ ಎಂದರು. ವಿಜಯ ಕರ್ನಾಟಕದಲ್ಲಿ ಮತಾಂತರ ಕುರಿತು ಸಂವಾದದಲ್ಲಿ ಪತ್ರ ಬರೆದು ದಲಿತರು ಬೇರಾವ ಜಾತಿ ಸೇರಬಾರದು ಅಂದರು. ಬೌದ್ಧ ಧರ್ಮಕ್ಕೆ ಸಾಮೂಹಿಕವಾಗಿ ಮತಾಂತರಗೊಂಡ ಸುದ್ದಿ ಕೇಳಿ ದಲಿತ ಸಮುದಾಯಕ್ಕೆ ಪತ್ರ (ಪೂರ್ಣ ಪತ್ರ ಇಲ್ಲಿದೆ ) ಬರೆದು,
"ಅಂತೂ ಯಾವುದೇ ಸಂದರ್ಭದಲ್ಲಿಯೂ ನಮ್ಮ ಹಿರಿಯರು ಆರಾಧಿಸಿಕೊಂಡು ಬಂದ ರಾಮ, ಕೃಷ್ಣ, ಶಿವ, ದುರ್ಗೆ ಮೊದಲಾದ ದೇವರನ್ನು, ನಾಗ-ದೈವಗಳನ್ನು, ಗ್ರಾಮ ದೇವತೆಗಳನ್ನು ತೊರೆದು ನಮ್ಮ ಸಂಸ್ಕೃತಿಯನ್ನು ಪರಿತ್ಯಜಿಸಿ ಅನ್ಯಮತಗಳಿಗೆ ಸೇರುವುದು ಬೇಡ. ಹಿಂದು ಧರ್ಮದಲ್ಲಿಯೇ ಇದ್ದು ಸಂಘಟಿತರಾಗಿ ನ್ಯಾಯಕ್ಕಾಗಿ ಹೋರಾಡೋಣ. ನಿಮ್ಮ ಜೊತೆ ನಾನೂ ಇನ್ನೂ ಅನೇಕ ಮಠಾಧಿಪತಿಗಳು ಇದ್ದೇವೆ" ಎಂದುಶ್ರೀಗಳು ಭರವಸೆ ಕೊಟ್ಟರು.
ಮಾಡಿದ್ದೇನು?
ಇದೆಲ್ಲಾ ಬರೀ ಮಾತು ಅನ್ನೋದನ್ನು ಪೇಜಾವರರು ತೋರಿಸಿದ್ದಾರೆ. ಇವತ್ತಿನ ಪ್ರಜಾವಾಣಿ 4 ಪುಟದಲ್ಲಿರುವ ವರದಿ ನೋಡಿ.
ಬೆಂಗಳೂರಿನಲ್ಲಿ ಶನಿವಾರ ಜಾತಿ ವಿನಾಶ ವೇದಿಕೆ ಹಮ್ಮಿಕೊಂಡಿದ್ದ ದಲಿತರೊಂದಿಗೆ ಸಹ ಪಂಕ್ತಿ ಭೋಜನಕ್ಕೆ ಪೇಜಾವರ ಬರದೇ ತಮ್ಮ ಹೇಳಿಕೆಗಳ ಬಗ್ಗೆ ಅನುಮಾನ ಹುಟ್ಟುವ ಹಾಗೇ ಮಾಡಿದ್ದಾರೆ. ತಿಂಗಳ ಹಿಂದೆಯೇ ಡಾ.ರಾಮ ಮನೋಹರ ಲೋಹಿಯಾ ವೇದಿಕೆ ಈ ಸವಾಲು ಹಾಕಿತ್ತು.
ಶ್ರೀಗಳು ಸವಾಲುಸ್ವೀಕರಿಸಿ, ತಮ್ಮ ಆಡಿದ ಮಾತು ಕೃತಿಯಲ್ಲೂ ಅಷ್ಟೇ ದಿಟ ಎನ್ನುವುದು ಸ್ಪಷ್ಟಪಡಿಸದೇ ಹಿಂಜರಿದಿದ್ದಾರೆ. ಈ ಬಗ್ಗೆ ವೇದಿಕೆಯಿಂದ ಸಾಕಷ್ಟು ಬಾರಿ ಆಹ್ವಾನ ಹೋಗಿತ್ತಂತೆ. ಆದರೂ ಸೌಜನ್ಯಕ್ಕೂ ಶ್ರೀಗಳಿಂದ ಪ್ರತಿಕ್ರಿಯೆ ಬಂದಿಲ್ಲ. ಇಂಥವರು , ದಲಿತೋದ್ದಾರದ ಮಾತಾಡಿದರೆ ಹೇಗೆ ನಂಬುವುವುದು?
ಒಟ್ಟಿನಲ್ಲಿ ದಲಿತರು ಮತ್ತು ಹಿಂದುಳಿದವರನ್ನು ಉಳಿದ ಹಿಂದೂಗಳಂತೆ ಸಮಾನತೆ ಯಿಂದ ನೋಡುವ ಭರವಸೆ ನೀಡುತ್ತೇವೆ. ದಲಿತರಿಗೆ ಅನ್ಯಾಯವಾದಲ್ಲಿ ನನಗೆ ತಿಳಿಸಿ ದಲ್ಲಿ ನಾನು ಸ್ವತಃ ಆಗಮಿಸಿ ಅಥವಾ ಪ್ರತಿನಿಧಿಗಳನ್ನು ಕಳುಹಿಸಿ ಅದನ್ನು ಸರಿಪಡಿಸಲು ಯತ್ನಿಸುತ್ತೇನೆ. ಅದು ಸಾಧ್ಯವಾಗದಿದ್ದಲ್ಲಿ ದಲಿತರ ಜೊತೆ ನಾನೂ ಹೋರಾಟಕ್ಕೆ ಸಿದ್ಧನಿದ್ದೇನೆ.

ಶ್ರೀಗಳು ಹೀಗೆಲ್ಲಾ ಹೇಳಿದ್ದು ಬಾಯಿ ಚಪಲಕ್ಕಾ?

11 comments:

Anonymous said...

yavattu modalu janarannu mechchisodu aamele udupi mattadavaranna mechchisalikke innodu helike idu pejavara style. Amele matta horage hakibitre... Lakhshagattale kharchu madi paryayadalli hemamalini dance nodokadre matra davaralli bekadashtu hana ide. Janapara karyakalla...

Anonymous said...

ಹಿಂದು ಧರ್ಮದಲ್ಲಿಯೇ ಇದ್ದು ಸಂಘಟಿತರಾಗಿ ನ್ಯಾಯಕ್ಕಾಗಿ ಹೋರಾಡೋಣ ಎಂದಿದ್ದಾರಲ್ಲ ಸ್ವಾಮಿಗಳು, ಅವರು ಯಾರ ವಿರುದ್ಧ ಹೋರಾಡುತ್ತಾರೆ ಎಂದು ಗೊಂದಲವಾಗುತ್ತಿದೆ. ಏಕೆಂದರೆ ಹಿಂದೂ ಧರ್ಮವೆಂದರೆ ಜಾತಿ ತಾರತಮ್ಯವನ್ನೇ ತಳಹದಿಯಾಗುಳ್ಳ ಧರ್ಮ. ಜಾತಿ ತಾರತಮ್ಯವನ್ನು ಪೋಷಿಸುವವರೇ ಈ ಮಠಾಧೀಶರು. ಅಂದ ಮೇಲೆ ’ಜಾತಿಗಳನ್ನು ಇನ್ನು ಮುಂದೆ ಲೆಕ್ಕಿಸುವುದಿಲ್ಲ, ಬನ್ನಿ ನಾನೂ ಎಲ್ಲರ ಹಾಗೇನೇ, ಎಲ್ಲ ಜಾತಿಜನರೊಂದಿಗೆ ಸಹಪಂಕ್ತಿಯಲ್ಲಿ ಕುಳಿತು ಉಣ್ಣುತ್ತೇನೆ’ ಎನ್ನಬೇಕೇ ಹೊರತು ಪಂಕ್ತಿಭೇದ ತೋರಿ ರಾಜಕಾರಣಿಯಂತೆ ಉಡಾಫೆಯ ಮಾತನಾಡುವುದು ಸರಿಯಾ?
ಪ್ರಸಾದ

Anonymous said...

nimma kannu bada(kalu)payi...! pejavara avara mele bittha... ayooo papa.
delhi seena

Anonymous said...

ಪೇಜಾವರರು ನಡೆದುಕೊಂಡಿರುವ ರೀತಿಯೇ ಶೋಷಿತ ಜಾತಿಗಳವರು ಏಕೆ ಹಿಂದು ಧರ್ಮವನ್ನು ಬಿಡುವುದು ಮಾತ್ರವಲ್ಲ ದ್ವೇಷಿಸಬಾರದು ಎಂಬ ಪ್ರಶ್ನೆಯನ್ನು ಕೇಳುವಂತೆ ಮಾಡುತ್ತದೆ. ಜಾತಿ ವಿನಾಶ ವೇದಿಕೆಯ ಆಹ್ವಾನವನ್ನೇ ಅವಗಣಿಸುವ ಮೂಲಕ ತಮ್ಮ ನಿಜರೂಪವನ್ನು ಅವರ ಕೈಯಲ್ಲಿ ಮುಚ್ಚಿಕೊಳ್ಳುವುದಕ್ಕೆ ಆಗಿಲ್ಲ. ತಿಂಗಳ ಕಾಲಾವಧಿ ಇತ್ತು. ಎಲ್ಲ ಪತ್ರಿಕೆಗಳಲ್ಲಿ ಸಹಪಂಕ್ತಿ ಭೋಜನದ ಆಹ್ವಾನ ಪ್ರಕಟವಾಗಿತ್ತು. ಸಹಪಂಕ್ತಿ ಭೋಜನದಲ್ಲಿ ಭಾಗವಹಿಸದೆ, ಆಹ್ವಾನಕ್ಕೆ ಯಾವ ರೀತಿಯ ಪ್ರತಿಕ್ರಿಯೆಯನ್ನು ವ್ಯಕ್ತ ಪಡಿಸದೆ ಕಡೇ ಪಕ್ಷ ಕುಂಟು ನೆಪದ ಸಬೂಬೂ ಇಲ್ಲದೆ ಪೇಜಾವರರು ತಮ್ಮ ಮಟ್ಟಿಗೆ ಆಹ್ವಾನದ ಅಸ್ತಿತ್ವವೇ ಇಲ್ಲ ಎಂಬಂತೆ ವರ್ತಿಸಿದ್ದಾರೆ. ಶತಶತಮಾನಗಳಿಂದಲೂ ಇವರು ವ್ಯವಸ್ಥೆಯ ಮೇಲಿನ ತಮ್ಮ ಅನಾಗರಿಕ ಮತ್ತು ಅಮಾನುಷ ಹಿಡಿತವನ್ನು, ಇದೇ ರೀತಿ ಅನುನಯದ ನಾಟಕಗಳ ಮೂಲಕ, ತಮ್ಮ ಹಸಿ ಕ್ರೌರ್ಯವನ್ನು ಸಾಧಿಸಿಕೊಂಡು ಬಂದಿದ್ದಾರೆ. ಆದರೆ ಇಂದು ಶೋಷಿತ ಜಾತಿಗಳವರಿಗೂ ಬಾಯಿ ಬಂದಿದೆ. ಇವರ ನಿಜ ರೂಪಗಳು ಬತ್ತಲಾಗುಯ್ಯಿವೆ. ನಾಚಿಕೆಗೇಡಿನ ಪೇಜಾವರ ಅಥವಾ ಯಾವುದೇ ಹಿಂದೂ ಸಂರಕ್ಷಕ ಗೋಸುಂಬೆಗಳಿಗೆ ಸಾವಿರ ಧಿಕ್ಕಾರಗಳು!
ಈ ಈಷಾರಾಮಿ ಹರಾಮಿಗಳಿಗಾಗಿ ನಾವೇಕೆ ಜೀವ ತೆರಬೇಕು? -ಈ ಪ್ರಶ್ನೆಯನ್ನು ಶೋಷಿತ ಜಾತಿಗಳವರು ತಮಗೆ ತಾವೇ ಕೇಳಿಕೊಳ್ಳದಿದ್ದರೆ ನಿಜವಾಗಲೂ ನಮ್ಮ ಭವಿಷ್ಯ ಭಿಕರವಾಗುತ್ತದೆ.

Anonymous said...

ಒಬ್ಬರ ಮೇಲೆ ಒಬ್ಬರನ್ನು ಪಿರಮಿಡ್ ರೀತಿಯಲ್ಲಿ ಕುಳ್ಳರಿಸಿರುವ ನಮ್ಮ ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ ತಾರತಮ್ಯ, ಅಸಮಾನತೆ ಅನಿವಾರ್ಯ. ಇದನ್ನು ಕೆಡವಿ ಹಾಕುವುದೊಂದೆ ಇದಕ್ಕೆ ಇರುವ ಪರಿಹಾರ. ಈ ಕೋಟೆಯನ್ನು ಛಿದ್ರಗೊಳಿಸಿದರೆ ವೈದಿಕ ವ್ಯವಸ್ಥೆಯೇ ಕುಸಿದು ಹೋಗುತ್ತದೆ. ಅವರ ಶ್ರೇಷ್ಟತೆಯ ಮಾನದಂಡಗಳು ತರೆಗಲೆ ಕಸಕಡ್ಡಿಯಾಗಿ ಕೊಚ್ಚಿ ಹೋಗುತ್ತವೆ. ಹೀಗಾಗಿ ವೈದಿಕಶಾಹಿಗಳು ಜಾತಿ ಅಸಮಾನತೆಯನ್ನು ಸರಿಪಡಿಸುವ ಮಾತುಗಳನ್ನು ಹೇಳುತ್ತಾರೆಯೇ ಹೊರತು ಆಚರಣೆಗೆ ತರುವುದಿಲ್ಲ. ಹಿಂದೂಧರ್ಮ ಎಂದು ಕರೆದುಕೊಳ್ಳುವ (ವಾಸ್ತವಾಗಿ ಅದು ವೈದಿಕ ಧರ್ಮ) ಜಾತಿ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಕೆಲಸವನ್ನೇ ಮಾಡುತ್ತದೆ. ಬುದ್ಧನನ್ನು ವಿಷ್ಣುವಿನ ಅವತಾರವನ್ನಾಗಿಸಿದ್ದು ಇಂತಹ ಹುನ್ನಾರವೇ. ಜೈನ ಧರ್ಮವನ್ನೂ ಅಪೋಶನ ತೆಗೆದುಕೊಂಡ ಈ ವೈದಿಕಶಾಹಿ ಈಗ ಲಿಂಗಾಯತರನ್ನು ಅಪೋಶನ ತೆಗೆದುಕೊಳ್ಳುವ ದಾರಿಯಲ್ಲಿದ್ದಾರೆ. ಚಿಮೂನಂತವರು ಇದಕ್ಕೆ ಸಿದ್ಧಾಂತ ಪೋಣಿಸುತ್ತಿದ್ದಾರೆ. ಒಕ್ಕಲಿಗರು ಸೇರಿದಂತೆ ಇತರೆ ಹಿಂದುಳಿದ ಜಾತಿಗಳನ್ನು ಪರಸ್ಪರ ಎತ್ತಿಕಟ್ಟುವ ಮೂಲಕ ಜಾತಿ ವ್ಯವಸ್ಥೆಯನ್ನು ಬಲಪಡಿಸುವ ಹುನ್ನಾರ ಅವರದ್ದು. ಪೇಜಾವರ ಶ್ರೀಗಳು ಹಿಂದೂ ಎಂಬ ಜನಿವಾರದಲ್ಲಿ ಎಲ್ಲರನ್ನೂ ಒಟ್ಟಿಗೆ ಸೇರಿಸಿ ಉಸಿರುಕಟ್ಟಿಸಿ ಕೊಂದು ಹಾಕುವ ದೊಡ್ಡ ಪೌರೋಹಿತ್ಯ ವಹಿಸಿದ್ದಾರೆ.
ಅದಕ್ಕೆ ’ಹೇಳುವುದು ಒಂದು ಮಾಡುವದು ಮತ್ತೊಂದು, ಪದ್ಮಾವತಿಪತಿ ಶ್ರೀವೆಂಕಟಾಚಲಪತಿ’ ಎಂಬ ಹಾಡಿನಂತೆ ಪೇಜಾವರ ಶ್ರೀಗಳ ಮಾತು ಮತ್ತು ವರ್ತನೆಯಾಗಿದೆ.
- ಪರುಶುರಾಮ ಕಲಾಲ್

Anonymous said...

Pejavar pontiff's non-response itself to the invitation for 'saha pankthi bhojana' by jaathi vinaasha vedike is an indication of his original self. He has not even tried to come up with any kind of lame excuse. He can't because all his hypocritical statements about the inclusion of dalits in to hindu religion, calls for the unity of hinduism and concerns about the autrocities on daliths, are really not true.
I have a brahmin friend who considers himself a progressive person and talks about all kinds of changes. He truly is. But when Basavalingappa banned the practice of soil-carrying (mala horodu), he literally was worried about clearing the shit from their toilet at his home in his village. Then of course, he realised and began thinking about alternatives. But this self styled reformer, Pejawar, does not have a mental ability to realise the truth. these kind of hyppocrites are much more dangerous than Bhyrappas.

Anonymous said...

ಪೇಜಾವರ ಅವರ ಹಿನ್ನೆಲೆಯನ್ನು ಸ್ವಲ್ಪ ಗಮನಿಸಿದರೆ ಅವರ ಹೇಳಿಕೆ, ನಡವಳಿಕೆಗಳ ಬಗ್ಗೆ ಸ್ಪಷ್ಟ ಕಲ್ಪನೆ ಬರಬಹುದು.
ದಶಕಗಳ ಹಿಂದೆ ಇವರು ದಲಿತರ ಕೇರಿಗೆ ಹೋಗುತ್ತೇನೆ, ಆ ಮೂಲಕ ಅಸ್ಪೃಶ್ಯತೆ ತೊಲಗಿಸುತ್ತೇನೆ ಎಂದು ದಲಿತ ಕೇರಿಯೊಂದಕ್ಕೆ ಹೋಗಿದ್ದರು. ಹೋದವರು ಅಲ್ಲೇನೂ ಯಾರ ಮನೆಗೂ ಪ್ರವೇಶಿಸಲಿಲ್ಲ, ಯಾರನ್ನೂ ಸ್ಪರ್ಶಿಸಲಿಲ್ಲ,.. ನೇರ ದಾರಿಯಲ್ಲಿ ಹೋಗಿ ಬಂದವರೇ ಪಂಚಗವ್ಯ ಹಾಕಿಕೊಂಡು ಶುದ್ಧಿ ಮಾಡಿಕೊಂಡು (ದೇಹವನ್ನಷ್ಟೇ!) ಗುಟ್ಟಾಗಿ ಹೋಮ- ವಿಧಿವಿಧಾನ ಮಾಡಿಕೊಂಡು ಮತ್ತೆ ತಮ್ಮ ಮನೆ ಹೊಕ್ಕವರು.
ಹಾಗಿರುವಾಗ, ಇತ್ತೀಚಿನ ಅವರ ಬೂಟಾಟಿಕೆಯ ಮಾತುಗಳನ್ನು ನಂಬುವುದೇ ಮೂರ್ಖತನವಾದೀತು.
ಇಡೀ ಕರ್ನಾಟಕದಲ್ಲಿ ಇವತ್ತು ಆರ್ಎಸ್ಎಸ್, ಭಜರಂಗದಳ, ಬಿಜೆಪಿ, ವಿಜಯಕರ್ನಾಟಕ ಮತ್ತು ರಾಜಕಾರಣಿಗಳನ್ನೂ ಮೀರಿಸುವ ಈ ಸ್ವಾಮೀಜಿಗಳಿಂದಾಗಿ ಇಡೀ ವೈದಿಕಶಾಹಿ ಲಿಂಗಾಯಿತರು, ಹಿಂದುಳಿದವರು, ದಲಿತರ ಮೇಲೆ ಸವಾರಿ ಮಾಡುತ್ತಿವೆ.
ಇದರ ಅಪಾಯವನ್ನು ಅರ್ಥಮಾಡಿಕೊಂಡು ಈಗಲೇ ಎಲ್ಲ ಹಿಂದುಳಿದವರು, ದಲಿತರು ಮತ್ತು ಲಿಂಗಾಯಿತರು,ಇವರಿಗೆ ನೀವು ಹೇಳುವ ಹಿಂದೂ ಧರ್ಮಕ್ಕೂ ನಮಗೂ ಸಂಬಂಧವಿಲ್ಲ. ಆ ಅರ್ಥದಲ್ಲಿ ನಾವಾರೂ ಹಿಂದೂಗಳೇ ಅಲ್ಲ, ನಮಗೆ ನಮ್ಮದೇ ಸಂಪ್ರದಾಯ, ಪರಂಪರೆ ಇದೆ. ಅದು ವೈದಿಕಶಾಹಿಗಿಂತ ಭಿನ್ನವೂ, ವೈವಿಧ್ಯಮಯವೂ ಆಗಿದೆ. ಹಾಗಾಗಿ ನಮ್ಮ ಕಣ್ಣಿಗೆ ಮಣ್ಣೆರಚುವ ಕೆಲಸ ಇನ್ನಾದರೂ ಬಿಡಿ ಎನ್ನಬೇಕಿದೆ.
ಹಾಗಿಲ್ಲದಿದ್ದರೆ, ಈ ಪ್ರತಾಪ ಸಿಂಹನ ತಂಗಿಯೋ, ವಿ. ಭಟ್ಟನ ಮಗಳನ್ನೋ ಯಾವುದೇ ಅಸ್ಪೃಶ್ಯನಿಗೆ ಕೊಟ್ಟು ಮದುವೆ ಮಾಡಲಿ, ಅವರೊಂದಿಗೆ ಬೀಗತನ ಬೆಳಸಲಿ(ಇವರ ಕೃತ್ರಿಮಗಳನ್ನು ನೆನೆದರೆ ಅದೂ ಕೂಡ ಬೇಡ ಎನಿಸದಿರದು! ಎಂದು ವಾದದ ಕಾರಣಕ್ಕಾದರೂ ಸವಾಲು ಹಾಕಬೇಕು...

Anonymous said...

suudimatina tandakke namaskara..
nimma prayatna kutoohaladinda gamanisuttiddene.. yaakoo neevu hali tappi hoguttiruva haagide..
ee vichaaravaagi pejavara avara pratikreeye marudina patrikegalalli prakavagiddu maatra nimma kannige bilolla andre neevu yavudakkagi kannu teredu kayuttiddeerendu arthavaguttide.. shame to u..

Anonymous said...

ಪೇಜಾವರರನ್ನು ಪರೀಕ್ಷೆ ಮಾಡಿದ್ದು ಆಯ್ತಲ್ಲಾ. ಇನ್ನು ಬೇರೆ ಬೇರೆ ಶ್ರೀಗಳು ಇದ್ದಾರೆ. ಅವರನ್ನು ಕರೆಯಿರಿ. ಯಾಕಂದ್ರೆ ಅವರೆಲ್ಲಾ ವಿದೇಶಿ ಕಾರುಗಳಲ್ಲಿ ಅಡ್ಡಾಡಿಕೊಂಡು ಫಾರಿನ್ ಸ್ಟೈಲಲ್ಲಿ ಬಾಣಸಿಗರನ್ನು ಕೆಲಸಕ್ಕೆ ನೇಮಿಸಿಕೊಂಡು ವಿಲಾಸಿ ಜೀವನ ಸಾಗಿಸುತ್ತಿದ್ದಾರೆ. ಅವರನ್ನು ಬೀದಿಗೆ ತಂದು ನಿಲ್ಲಿಸಿ. ಇದು ಇಲ್ಲಿಗೇ ನಿಲ್ಲಬಾರದು. ದಲಿತರೊಂದಿಗೆ ಊಟ ಹಂಚಿಕೊಳ್ಳಲು ಸೋ ಕಾಲ್ಡ್ ನಾಯಕರು , ಮಠಾಧೀಶರು ಎಲ್ಲರನ್ನು ಒಂದೆಡೆ ಸೇರಿಸಿ.

Vinobha K T said...

Congratulations... Suddimaatu team should continue to criticise such 'double-standard' policies of so called 'Hindu leaders' in future too... If Pejawar claims himself as a Hindu religious reformer, he should have participated in the sahapankthi bhojana.

Anonymous said...

pejevara swamy modalu dalitara jate sahapankthi bhojanakke barali. atha nobba hedi. bari bogale biduttane. nijavada kalaji illa