Friday, January 9, 2009

ಶಶಿಧರ್ ಭಟ್ ಎತ್ತಿರುವ ಸಾಮಾಜಿಕ ನ್ಯಾಯದ ಗಂಭೀರ ಪ್ರಶ್ನೆಗಳು

ಮಾಧ್ಯಮ ರಂಗದಲ್ಲಿ ಸಿಬ್ಬಂದಿಗಳ ನೇಮಕದಲ್ಲಿ ಸಾಮಾಜಿಕ ನ್ಯಾಯ ಇರಬೇಕು ಎಂಬ ಚರ್ಚೆಯೇ ಇನ್ನೂ ಸರಿಯಾಗಿ ಆರಂಭವಾಗದೇ ಇರುವ ಸಂದರ್ಭದಲ್ಲಿ ಜನಪರ ಪತ್ರಕರ್ತ ಶಶಿಧರ್ ಭಟ್ ತಮ್ಮ ಕುಮ್ರಿ ಬ್ಲಾಗ್‌ನಲ್ಲಿ ಖಾಸಗಿ ವಿಚಾರವೊಂದನ್ನು ಪ್ರಸ್ತಾಪಿಸಿದ್ದಾರೆ. ವಿಷಯ ಖಾಸಗಿಯಾಗಿದ್ದರೂ ಇದು ಕರ್ನಾಟಕದ ಮಾಧ್ಯಮರಂಗದ ಸದ್ಯದ ಹಲವು ಸಮಸ್ಯೆಗಳ ಕುರಿತ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಶಶಿಧರ ಭಟ್ ಅವರ ಸಾಮಾಜಿಕ ನ್ಯಾಯದ ದೃಷ್ಟಿಕೋನದ ಜತೆಗೆ ಇವತ್ತಿನ ದಿಕ್ಕುಗೆಟ್ಟ ಯುವಪತ್ರಕರ್ತರ ಬೌದ್ಧಿಕ ದಿವಾಳಿತನವನ್ನು ಈ ಲೇಖನ ಬಹಿರಂಗಪಡಿಸುತ್ತದೆ. ತಮ್ಮ ಜಾತಿಯ ಪತ್ರಕರ್ತರನ್ನೇ ಆಯ್ದು ಸೇರಿಸಿಕೊಳ್ಳುವ ಸಂಪಾದಕಗಣಗಳು ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ ಎನಿಸುತ್ತದೆ.ಶಶಿಧರ ಭಟ್ಟರ ಸಂಪೂರ್ಣ ಲೇಖನ ನಮ್ಮ ಸುದ್ದಿಮಾತು ಓದುಗರಿಗಾಗಿ ಇಲ್ಲಿ ನೀಡಿದ್ದೇವೆ. ವೈಯಕ್ತಿಕ ತೇಜೋವಧೆಗೆ ಅವಕಾಶ ಇಲ್ಲದಂತೆ ನಮ್ಮ ಓದುಗರು ಇಲ್ಲಿ ಚರ್ಚೆಗೆ ತೊಡಗಿಕೊಳ್ಳಬಹುದು.

ಆತ ಅಂದು ಬೆಳಿಗ್ಗೆ ಬಂದು ನನ್ನ ಮುಂದೆ ಕುಳಿತ.ಕುಳಿತವನೇ "ನಾನು ನಿಮ್ಮ ಪಕ್ಕದ ತಾಲೂಕಿನವನು" ಎಂದ. ಹವ್ಯಕ ಭಾಷೆಯಲ್ಲಿ ಮಾತನಾಡಲು ಪ್ರಾರಂಭಿಸಿದ. ಇನ್ನೊಬ್ಬ ಪತ್ರಕರ್ತರ ಹೆಸರು ಹೇಳಿ ತನಗೊಂದು ಕೆಲಸ ಬೇಕು ಎಂದು ಅಹವಾಲು ಮಂಡಿಸಿದ. ಸುಮ್ಮನೆ ಮಾತನಾಡುತ್ತಲೇ ಇರುವ ಈ ವ್ಯಕ್ತಿ ನಾನು ಪಕ್ಕದ ತಾಲೂಕಿನವನು ಎಂದು ಹೇಳಿದ್ದು, ಹವ್ಯಕಭಾಷೆಯಲ್ಲಿ ಮಾತನಾಡಿ ಕೆಲಸ ಕೇಳಿದ್ದು ನನಗೆ ಸರಿ ಬರಲಿಲ್ಲ.

ನಾನು ಅವನಿಗೆ ಹೇಳಿದೆ;"ನಮ್ಮಲ್ಲಿ ತಕ್ಷಣ ಕೆಲಸ ಇಲ್ಲ. ಹಾಗೆ ನಾನು ನನ್ನ ಊರಿನವನು ನನ್ನ ಜಾತಿಯವನು ಎಂಬ ಕಾರಣಕ್ಕೆ ಯಾರನ್ನೂ ಕೆಲಸಕ್ಕೆ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ನಾನು ಈ ವಿಚಾರದಲ್ಲಿ ಹೆಚ್ಚು ಜಾಗರೂಕನಾಗಿರುತ್ತೇನೆ. ಈಗ ನಮ್ಮ ಸಂಸ್ಥೆಯಲ್ಲಿ ಎಲ್ಲ ಜಾತಿ ಜನ ಸಮುದಾಯದ ಜನ ಇದ್ದಾರೆ. ಅವರಲ್ಲಿ ಬಹಳಷ್ಟು ಜನರ ಜಾತಿ ನನಗೆ ಗೊತ್ತಿಲ್ಲ. ಅದರ ಅಗತ್ಯವೂ ನನಗಿಲ್ಲ. ಆದರೆ ಕೆಲವೊಮ್ಮೆ ಎಲ್ಲ ಜಾತಿ ಸಮುದಾಯದವರಿಗೆ ಅವಕಾಶ ಸಿಗಲಿ ಎಂಬ ಕಾರಣಕ್ಕೆ ಜಾತಿಯನ್ನು ತಿಳಿದುಕೊಳ್ಳಬೇಕಾಗುತ್ತದೆ. ಈಗ ಉತ್ತರ ಕನ್ನಡ ಜಿಲ್ಲೆಯಲ್ಲಿ ನಾನು ಕೆಲಸಕ್ಕೆ ತೆಗೆದುಕೊಂಡು ಇಬ್ಬರು ಹುಡುಗರು ದೀವರು ಜಾತಿಗೆ ಸೇರಿದವರು. ನಾನು ಉದ್ದೇಶಪೂರ್ವಕವಾಗಿ ಅವರನ್ನು ಕೆಲಸಕ್ಕೇ ತೆಗೆದುಕೊಂಡಿದ್ದೇನೆ. ಯಾಕೆಂದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇಲ್ಜಾತಿಯವರ ಕೈಯಲ್ಲಿ ಪತ್ರಿಕೋದ್ಯಮ ಇದೆ. ಇದು ಎಲ್ಲರಿಗೂ ತಲುಪಲಿ ಎಂಬ ಕಾರಣಕ್ಕೆ ನಾನು ಹಿಂದುಳಿದ ವರ್ಗದ ಹುಡುಗರನ್ನು ತೆಗೆದುಕೊಂಡಿದ್ದು. ಈಗ ಈ ಇಬ್ಬರೂ ಹುಡುಗರು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಾರೆ. ಯಾರ ಒತ್ತಡಕ್ಕೂ ಅವರು ಮಣಿಯುತ್ತಿಲ್ಲ.

"ಈ ಹುಡುಗ ಬಂದವನು, ನೇರವಾಗಿ ನಾನು ನಿಮ್ಮ ಜಾತಿಯವನು ಎಂದು ಹೇಳಿದ್ದು ನನಗೆ ಸರಿ ಕಾಣಲಿಲ್ಲ. ಹೀಗಾಗಿ ನಾನು ಅವನನ್ನು ಕೆಲಸಕ್ಕೆ ತೆಗೆದುಕೊಳ್ಳಲಿಲ್ಲ.ಇದಾದ ಮೇಲೆ ಆತ ಗೆಳೆಯ ರವೀಂದ್ರ ರೇಷ್ನೆ ಅವರ ಪತ್ರಿಕೆಯಲ್ಲಿ ಯಾವುದೊ ಕೆಲಸ ಮಾಡಿಕೊಂಡಿದ್ದ. ನಿನ್ನೆ ನನ್ನ ನ್ಯೂಸ್ ಮತ್ತು ವ್ಯೂಸ್ ಕಾರ್ಯಕ್ರಮಕ್ಕೆ ಸಾಗರದ ಶಾಸಕ ಬೇಳೂರು ಗೋಪಾಲಕೃಷ್ನ ಬಂದಿದ್ದರು. ಅವರ ಪಕ್ಕದಲ್ಲಿ ಈ ಆಸಾಮಿ. ಅವನ ಕೈಯಲ್ಲಿ ಯಾವುದೋ ಪತ್ರಿಕೆಗಳ ಕಟ್ಟು. ಅದನ್ನು ನನಗೆ ಕೊಟ್ಟವನೇ, ನಾನು ಇಂಡಿಯನ್ ಎಕ್ಸಪ್ರೆಸ್ಸಿನಲ್ಲಿದ್ದೇನೆ. ಈ ಪತ್ರಿಕೆಯನ್ನು ತರುತ್ತಿದ್ದೇನೆ ಅಂದ. ನಾನು ಸ್ಟುಡಿಯೋ ಓಳಕ್ಕೆ ಹೋಗುವ ಆತುರದಲ್ಲಿ ಇದ್ದುದರಿಂದ ಪತ್ರಿಕೆಯನ್ನು ನೋಡಲಿಲ್ಲ. ಆದರೆ ಆತ ಬಿಡಲಿಲ್ಲ.

''ನಾನು ನಿಮ್ಮ ಬಗ್ಗೆ ಬರೆದಿದ್ದೇನೆ. ನೋಡಿ" ಎಂದು ಪುಟ ತೆಗೆದು ತೋರಿಸಿದ.ಅಲ್ಲಿ ತಾನು ಕೆಲಸಕ್ಕಾಗಿ ಪಡುತ್ತಿರುವ ಪಡಪಾಟಲನ್ನು ವಿವರಿಸಿದ್ದ. ಹಾಗೆ ಜಾತಿಯ ಕಾರಣಕ್ಕೆ ಶಶಿಧರ್ ಭಟ್ಟರು ನನಗೆ ಕೆಲಸ ಕೊಡಲಿಲ್ಲ ಎಂದು ಬರೆದಿದ್ದ. ಹಾಗೆ ಆ ಸಾಲು ನಾನು ಜಾತಿಯವಾದಿ ಎಂಬಂತೆ ಅರ್ಥವನ್ನು ಕೊಡುತ್ತಿತ್ತು. ನಾನು ಇದನ್ನು ನೋಡಿದವನು ಯಾವ ಪ್ರತಿಕ್ರಿಯೆಯನ್ನು ನೀಡಲಿಲ್ಲ.ನಾನು ಸ್ಟುಡಿಯೋದ ಒಳಕ್ಕೆ ಹೋದ ಮೇಲೆ ನನ್ನ ಸಹಾಯಕರಿಗೆ ಅವನ ಪತ್ರಿಕೆಯ ಪ್ರತಿಗಳನ್ನು ನೀಡಿ ಅದನ್ನು ಕಚೇರಿಯಲ್ಲಿ ಹಂಚಿ ಎಂದನಂತೆ !

ಇಂದು, ಅಂದರೆ ಶುಕ್ರವಾರ ಮಧ್ಯಾನ್ಹದ ಊಟಕ್ಕೆ ಪ್ರೆಸ್ ಕ್ಲಬ್ಬಿಗೆ ಹೋಗಿದ್ದೆ. ಅಲ್ಲಿ ಇದೇ ಬೇಳೂರು ಗೋಪಾಲಕೃಷ್ಣ, ಮತ್ತು ರೇಣುಕಾಚಾರ್ಯ ಇದ್ದರು. ಪತ್ರಿಕಾಗೋಷ್ಟಿ ಮುಗಿದ ಮೇಲೆ ಗೋಪಾಲಕೃಷ್ಣ ನನ್ನ ಬಳಿ ಬಂದು ಮಾತನಾಡಿದರು. ಪಕ್ಕದಲ್ಲಿ ಇದೇ ಮನುಷ್ಯ !

ನನ್ನ ಜೊತೆಗಿದ್ದ ಇನ್ನೊಬ್ಬ ಪತ್ರಕರ್ತರು ಹೇಳಿದರು. ಈ ವ್ಯಕ್ತಿ ಸಾಗರ ಮತ್ತು ಸೊರಬದ ಶಾಸಕರ ಜೊತೆ ಸದಾ ಇರುತ್ತಾನೆ ಅಂತ. ಪತ್ರಿಕೋದ್ಯಮಿಯಾದವನು ರಾಜಕಾರಣಿಗಳ ಚೇಲಾ ಆದರೆ ಆತ ಪತ್ರಿಕೋದ್ಯಮಿಯಾಗಿ ಮುಂದುವರಿಯಬಾರದು ಎಂದು ನಂಬಿದವನು ನಾನು. ಆದರೆ ಈಗ ನಮ್ಮ ಪತ್ರಿಕೋದ್ಯಮಿಗಳು ರಾಜಕಾರಣಿಗಳ ಜೊತೆ ಸಂಬಂಧ ಬೆಳೆಸುತ್ತಿದ್ದಾರೆ. ಒಮ್ಮೆ ಸಂಬಂಧ ಬೆಳಸಿದ ಮೇಲೆ ಪತ್ರಿಕೋದ್ಯಮವನ್ನು ಬಿಟ್ಟು ಹೋಗುವುದಿಲ್ಲ. ಈ ಕಾರಣದಿಂದಲೇ ತುಂಬಾ ವೈಯಕ್ತಿಕವಾದ ಈ ಟಿಪ್ಪಣಿಯನ್ನು ಬರೆದಿದ್ದೇನೆ.ಈಗ ನಾನು ಹೇಳಿದ ಹುಡುಗನ ಹೆಸರು ವೆಂಕಟೇಶ ಸಂಪ. ಆತ ಸಾಗರದವನು.

17 comments:

Anonymous said...

ನೀವು ಜಾತಿವಾರು ಶಿಫಾರಸ್ಸು ಎಂಬ ದರಿದ್ರವನ್ನು ದೂರ ಇಟ್ಟಿರುವುದಕ್ಕೆ ತುಂಬಾ ಸಂತಸ ತಂದಿದೆ. ಇದು ಹೀಗೆ ಮುಂದುವರೆಯಲಿ. ಎರಡನೆಯದಾಗಿ ಕೆಲ ಪತ್ರಕರ್ತರು ರಾಜಕಾರಣಿಗಳ ಚೇಲಾಗಳಾಗಿದ್ದುಕೊಂಡು ಹೀಗೆ ಮಾಡುತ್ತಿರುವ ಬಗ್ಗೆ ನಮ್ಮಲ್ಲೇ ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ. ಟಿವಿ ಚಾನಲ್‌ಗಳಿಂದ ಹಿಡಿದು ಪತ್ರಿಕೆಗಳು , ನಿಯತಕಾಲಿಕಗಳಲ್ಲಿ ಕೆಲಸ ಮಾಡುವ, ಬೀಟ್‌ ಹೆಸರಿನಲ್ಲಿ ಒಂದು ಪಕ್ಷದ ಸುದ್ದಿ ತರುವ ಕೆಲ ಪತ್ರಕರ್ತರು , ಅದೇ ಪಕ್ಷದ ವಕ್ತಾರರಂತೆ ನಡೆದುಕೊಳ್ಳುತ್ತಿದ್ದಾರೆ. ಇದು ನಿಮಗೂ ಗೊತ್ತಿದೆ. ಇದನ್ನು ಸರಿ ಪಡಿಸಿ .

lakshmipriya

Anonymous said...

Bariyoke enu saraku siagta ilwa annavre...bere blog/site inda copy paste madoke start madvri.

Anonymous said...

ಶಶಿಧರ್ ಭಟ್ ಅವರ ಬರಹಕ್ಕೆ ನಮ್ಮ ಸಹಮತವಿದೆ. ಆದರೆ ಕೆಲ ಆಕ್ಷೇಪಣೆಗಲೂ ಇವೆ.
ಶಶಿಧರ ಭಟಟರ ಪತ್ರಿಕೆಯಲ್ಲಿ ಎಷ್ಟು ಜನ ಬ್ರಾಹ್ಮಣರಿದ್ದಾರೆ ಎಂಬುದು ರಹಸ್ಯವೇನಲ್ಲ. ದೆಹಲಿಯಿಂದ ಹಿದಿಡು ಬೆಂಗಳುರಿನ ಕೆಲ ಪ್ರಮುಖ ಹುದ್ದೆಗಳ ವರೆಗೆ ಅವರು ತಂದು ಕೂರಿಸಿಕೊಂಡಿರುವುದು ಬ್ರಾಹ್ಮಣರನ್ನೇ!
ಎರಡನೆಯದಾಗಿ ನೀವೆಲ್ಲ ಏಕೆ ಪ್ರತಿಬೆಯನ್ನು ನೋಡದೆ ಜಾತಿವಾರು ಪ್ರಾತಿನಿಧ್ಯ ಕೊಡಲು ಮುಂದಾಗುತ್ತಿದ್ದಿರೋ ಗೊತ್ತಿಲ್ಲ. ನಾನೂ ಕೂಡಾ ಜಾತಿಯ ಕಾರಣಕ್ಕೆ ಸಾಕಷ್ಟು ನೊಂದಿದ್ದೇನೆ. ಏನೋ ಆಗಬೇಕಾದವನು, ಮತ್ತೇನೋ ಆಗಿದ್ದೇನೆ. ಆದರೆ ನೀವೆಲ್ಲ ೇಕೆ ಪ್ರತಿಬೆ ನೋಡುತ್ತಿಲ್ಲ? ಯ಻ವುದೋ ಜಿಲ್ಲೆಯಲ್ಲಿ ಮುಮದುಳಿದ ಜಾತಿಯವರ ೈಯಲ್ಲಿ ಪತ್ರಿಕೋದ್ಯಮ ಿದೆ ಎಂದು ಹಠಕ್ಕೆ ಬಿದ್ದು ಮತ್ತೊಂದು ಜಾತಿಯವರನ್ನು ತರುವುದು ಎಷ್ಟು ಸರಿ?
ನಿಮ್ಮ ವತ೵ನೆ ಹೇಗಿದೆ ಎಂದರೆ ಮುಮದೆ ಕ್ರೀಡೆ, ವಿಜ್ಞಾನದಲ್ಲೂ ಮೀಸಲಾತಿ ಬೇಕು ಎನ್ನುತ್ತೀರಿ. ಪತ್ರಕತ್ರರಾಗಿ ಜಾತಿ ರಾಜಕಾರಣ ಮಾಡಬಾರದು. ಜಾತಿಯ ಕಾರಣ, ನಮ್ಮ ಪಕ್ಕದ ತಾಲೂಕಿನವನ್ನು ಎಂಬ ಕಾರನಗಳು ನನಗೆ ಸರಿ ಬರೋಲ್ಲ ೆನ್ನುತ್ತಲೇ ಮತ್ತೊಂದು ರೀತಿಯ ಜಾತಿವಾದವನ್ನು ತಾವು ಉತ್ತೇಜಿಸುತ್ತಿದ್ದೀರಿ. ದಯವಿಟ್ಟು ಪತ್ರಿಕೊದ್ಯಮವನ್ನಾದರೂ ಇಂತಹ ವಿಚಾರಗಳಿಮದ ದೂರವಿಡಿ. ಇಲ್ಲದಿದ್ದರೆ ನಿ್ಮ ಖಾಸಗಿ ಅನುಬವಗಳನ್ನೇ ಪತ್ರಿಕೊದ್ಯಮದ ಅನುಬವಗಳು ಎಂಬಂತೆ ಬಿಂಬಿಸುವುದರಿಂದ ಅಪಾಯವಿದೆ. ನಿಮ್ಮಂತಹವರಿಂದ ಯಾವ ಯಾವ ಪತ್ರಿಕೆ, ಚಾನೆಲ್ ಗಳಲ್ಲಿ ಯಾವ ಜಾತಿಯವರು ಎಷ್ಟು ಜನರಿದ್ದಾರೆ ಎಂದು ಸುವರ್ಣ ಸಮೀಕ್ಷೇ ಮಾಡುವವರು ಹುಟ್ಟುತ್ತಾರೆ.
ಶಶಿಧರ ಬಟ್ ರಂತಹ ಪ್ರಜ್ಞಾವಂತರು ಮಿಸಲಾತಿ ಮಾಡಿರುವ, ಮಾಡಬಹುದಾದ ಅನಾಹುತವನ್ನು ಅರ್ತ ಮಾಡಿಕೊಳ್ಳಬಲ್ಲರು ಎಮದು ಭಾವಿಸಿದ್ದೇನೆ. ಮಿಸಲಾತಿಯಿಂದಲೇ ನಾನು ಎಷ್ಟು ಅನ್ಯಾಯಕ್ಕೆ ಒಳಗಾದೆ. ಮೇಲ್ಜಾತಿಯಲ್ಲಿ ಹುಟ್ಟಿದ್ದೇ ನನ್ನ ತಪ್ಪು ಎಂಬಂತಾಗಿದೆ. ಶೇ.90 ರಷ್ಟು ಅಂಕ ಪಡೆದರೂ, ಸಿಟು ಪಡೆಯುವುದು, ಕೆಲಸ ಗಿಟ್ಟಿಸುವುದು ನನ್ನಿಂದ ಆಗಿಲ್ಲ. ಅದೇ ಕೆಳಜಾತಿಯಲ್ಲಿ ಹುಟ್ಟಿದ್ದರೆ ಇಷ್ಟೊತ್ತಿಗೆ ಐ ಎ ಎಸ್ ಆಗಿರುತ್ತಿದ್ದೆನೇನೋ?
ದಯವಿಟ್ಟು ಅನ್ಯಾಯಕ್ಕೆ, ತುಳಿತಕ್ಕೆ ಒಳಗಾದವರಿಗೆ ಬೆಂಬಲ ಕೊಡಿ. ಶಿಕ್ಷಣ ಕೊಡಿ. ಕೆಲಸ ಕೊಡಿ. ದಾರಿ ತೋರಿಸಿ. ನಂತರ ಆ ವ್ಯಕ್ತಿ, ಆ ಕುಟುಂಬಕ್ಕೆ ಮೀಸಲಾತಿಯ ಯಾವುದೇ ಸೌಲಬ್ಯ ಸಿಗದಂತೆ ಕಾನೂನು ಮಾಡಿ. ಇಲ್ಲದಿದ್ದರೆ ಮಿಸಲಾತಿಯ ದೆಸೆಯಿಂದ ನೌಕರಿ ಗಿಟ್ಟಿಸಿದವನು ಆತ್ರಿಕವಾಗಿ ಮುಂದೆ ಬಂದರೂ, ಮತ್ತೆ ಮತ್ತೆ ಅವನ ಮಕ್ಕಳಿಗೆ, ಮೊಮ್ಮಕ್ಕಳಿಗೆ ಮಿಸಲಾತಿ ನೀಡುತ್ತಾ ಹೊಗುವುದರಿಂದ ನನ್ನಂತಹವರಿಗೂ ಅನ್ಯಾಯವಾಗುದು ಗಮನಿಸಿ. ಐ ಎ ಎಸ್ ಗಳ ಮಕ್ಕಳಿಗೂ ಮೀಸಲಾತಿ ಬೇಕು. ಮೀಸಲಾತಿ ಕಾರನದಿಂದ ಶಾಸಕ, ಸಂಸದನಾಗಿ ಬಂದವರ ಮಕ್ಕಳಿಗೂ ಮೀಸಲಾತಿ ಬೇಕು. ದಯವಿಟ್ಟು ಜಾತಿಯ ಆಧಾರದ ಮೇಲೆ ಇಂತಹ ಹೇತ್ಲಾಮಡಿ ಮಾತನಾಡುವ ಬದಲು, ಆತ್ರಿಕವಾಗಿ ಹಿಂದುಳಿದವರಿಗೆ ಒಂದು ಹಂತಕ್ಕೆ ಬರುವವರೆಗೆ ಮೀಸಲಾತಿ ನೀಡಿ. ನಂತರ ತೆಗೆದು ಬಿಡಿ. ಇಲ್ಲದಿದ್ದರೆ ನಿಂತಹವರ ಹಳಸಲು ವಿಚಾರಗಳಿಂದ ಿನ್ನು ನೂರು ವರುಷವಾದರೂ ಮೀಸಲಾತಿ ಹ಻ಗೇ ಇರುತ್ತದೆ. ನನ್ನಂತಹವರು ಸಂಕಷ್ಟಕ್ಕೆ ಸಿಲುಕುತ್ತಲೇ ಇರುತ್ತಾರೆ.
ಇನ್ನುಳಿದಂತೆ ನೀವು ತೆಗೆದುಕೊಂಡ ನಿರ್ದರಾ ಸರಿಯಾಗಿಯೇ ಇದೆ. ಆದರೆ ಪತ್ರಿಕೊದ್ಯಮದಲ್ಲಿ ಜಾತಿ ಲೆಕ್ಕಾಚಾರ ತರಬೇಡಿ.
-ನೊಂದವ

Anonymous said...

ಶಶಿಧರ್‌ ಭಟ್‌ ಅವರ ವಿಷಯದಲ್ಲಿ ಹೇಳುವುದಾದರೆ ಯಾವೊತ್ತು ಅವರು ಕೆಲಸವನ್ನ ಪ್ರತಿಭೆಯನ್ನ ಪ್ರೀತಿಸುವವರು. ಜಾತಿ ಲೆಕ್ಕಾಚಾರ ಮಾಡಿದವರಲ್ಲಾ. ಅವರು ಎಂದಿಗೂ ಯಾರನ್ನು ಜಾತಿ ಕೇಳಿದವರಲ್ಲಾ. ಅವರ ಆ ಗುಣ ನನ್ನ ಮೇಲೆ ಬಹಳಷ್ಟು ಪ್ರಭಾವ ಬೀರಿತ್ತು. ಇದು ಯಾವುದೇ ಹೊಗಳಿಕೆ ಅಲ್ಲಾ. ಅವರ ನಿಜವಾದ ಗುಣ. ದಯವಿಟ್ಟು ಅದನ್ನ ತಪ್ಪು ದಾರಿಗೆಳೆಯುವ ಪ್ರಯತ್ನ ಮಾಡಬೇಡಿ. ಆ ವಿಚಾರದಲ್ಲಾದರೂ ಅವರನ್ನ ದೂರವಿಡಿ.

Anonymous said...

Bhat avara dorane sariyagide. adare kelavaru anagatya jativadi patta kattutiddare. havyakaru istu varsha divara hakku kittukondida bagge matra yaru mataduvudilla. kenepadarada bagge matadutare nachikegedu. inta manuvadigalige dikkara.

chanakya said...

ಶಶಿದರ್ ಭಟ್ ಅವರ ಬರಹಕ್ಕೆ ನನ್ನ ಸಹಮತವಿದೆ. ಆದರೆ ಭವಿಶ್ಯದ ಅಪಾಯಕಾರಿ ಮುನ್ಸೂಚನೆಯನ್ನೂ ಅರಿಯಬೇಕಿದೆ.ಆತ್ಮಾವಲೋಕನ ಪತ್ರಕರ್ತರಲ್ಲಶ್ಟೇ ಅಲ್ಲ ರಾಜಕಾರಣಿಗಳಲ್ಲೂ ಆಗಬೇಕಿದೆ.ಗೆಳೆಯ ಶ್ರೀನಿದಿ ಮಾಡಿರುವ ವಿಶಯವೂ ಚರ್ಚಾಸ್ಪದವೇ? ಜೊತೆಗೆ ಉದ್ಯಮ ಹಾಗೂ ಉದ್ಯಮದಲ್ಲಿ ಪ್ರಮುಖ ಸ್ತಾನದಲ್ಲಿರುವವರು ತಮ್ಮ ವ್ಯಾಪ್ತಿಯಲ್ಲಿ ಶುದ್ದೀಕರಣಕ್ಕೆ ಮುಂದಾದರೆ ಶ್ರೀಯುತರ ಕಳಕಳಿಯ ಬರಹ ಸಾರ್ತಕವಾದೀತು....

Anonymous said...

After reading Mr.Bhat's blog I tried to collect information about castbalance in the Kannada newspapers office . To my shock except Prajavani all other Kannada Newspapers are dominated by one particular cast i.e.Brahmin. Including the post of editor Brahmins are holding the most of the topposts in the office.
I also came to know that last three Associate editors (who is in charge of the newspaper's daily operation)in Prajavani were nonbrahmin (Mr.Sridhar Achar, Mr.Shailesh gupta and Mr.P.R.jagadeesh). Prsent A.editor also nonbrahmin.
And among staffmembers also there is perfect castmix.
If this is possible in Prajvani, why not in other Newspaper office?
-Naarayana Naik

Anonymous said...

ಶಶಿಧರ ಭಟ್ ಅವರ ಎತ್ತಿರುವ ಸಾಮಾಜಿಕ ನ್ಯಾಯದ ಪ್ರಶ್ನೆಗಳು. ನಮ್ಮ ಜಾತಿ ವ್ಯವಸ್ಥೆಯ ಅನೇಕ ಪ್ರಶ್ನೆಗಳಿಗೆ ಉತ್ತರ ಬೇಡುತ್ತದೆ ಎಂದೇ ನಾನು ಭಾವಿಸುವೆ.
ಬ್ರಾಹ್ಮಣರ ಬಗ್ಗೆ ಅನುಮಾನ ಇಟ್ಟುಕೊಂಡೆ ಬೆಳೆದವನು ನಾನು. ಇದಕ್ಕೆ ಕಾರಣ, ಕೇರಳದ ನಾರಾಯಣಗುರು, ಪೆರಿಯಾರ್, ೧೨ನೇ ಶತಮಾನದ ಕಾಯಕ ಚಳವಳಿ, ದಲಿತ ಚಳವಳಿಗಳ ಪ್ರಭಾವ ಮತ್ತು ವಿಶೇಷವಾಗಿ ಕರ್ನಾಟಕದಲ್ಲಿ ಲೋಹಿಯಾ ವ್ಯಾಧಿಗಳು ಮಂಡಿಸುತ್ತಿದ್ದ ಜಾತಿ ಸಂಘರ್ಷದ ಕಥನಗಳು ಕಾರಣವಾಗಿರಬಹುದು.
ಆದರೆ ಆರಂಭದಲ್ಲಿ ನನ್ನ ಗಮನವನ್ನು ಸಿದ್ಧಾಂತ, ವಿಚಾರವಾದದ ಕಡೆ ಸೆಳೆದವರು, ಗಂಭೀರ ಸಾಹಿತ್ಯದ ಓದಿಗೆ ಕಾರಣರಾದವರು ಇದೇ ಬ್ರಾಹ್ಮಣರಾಗಿದ್ದಾರೆ. ಅವರೊಂದಿಗೆ ಜಗಳ ಕಾದಿದ್ದೇನೆ, ಗುದ್ದಾಟ ನಡೆಸಿದ್ದೇನೆ. ಎಲ್ಲೂ ಕೂಡಾ ಅವರು ಬ್ರಾಹ್ಮಣರು ಎಂಬ ಕಾರಣದಿಂದ ಇದು ನಡೆದಿರಲಿಲ್ಲ.
ಇವತ್ತು ಕೋಮುವಾದದ ವಿರುದ್ಧ, ಸಂಘ ಪರಿವಾರದ ವಿರುದ್ಧ ದೊಡ್ಡ ಧ್ವನಿ ಎತ್ತುತ್ತಿರುವ ಅನಂತಮೂರ್ತಿ, ಕೆ.ಫಣಿರಾಜ್, ಜಿ.ಕೆ.ಗೋವಿಂದರಾವ್, ವಿಠ್ಠಲ ಹೆಗಡೆ, ಜಿ.ರಾಜಶೇಖರ್ ಇವರನ್ನು ಬ್ರಾಹ್ಮಣರು ಎಂದು ಗುರುತಿಸಲು ಆಗುತ್ತದೆಯೇ? ಅದೇ ಸಂದರ್ಭದಲ್ಲಿ ಕೆಳಜಾತಿ, ಹಿಂದುಳಿದ ಜಾತಿಗಳಲ್ಲಿ ಹುಟ್ಟಿ ಮೇಲ್ಜಾತಿ ಮೌಲ್ಯಗಳನ್ನು ಪ್ರತಿಪಾದಿಸುತ್ತಾ ಚಡ್ಡಿ ತೊಟ್ಟವರಿಗೆ ಏನೋ ಹೇಳುವುದು? ಈಗಂತೂ ಎಲ್ಲಾ ಜಾತಿಗಳು ಚರಿತ್ರೆಯಿಂದ ಏನನ್ನೂ ಹೆಕ್ಕಿಕೊಂಡು ಮೈತುಂಬಾ ವೈಭವ ಮೆತ್ತಿಕೊಂಡು ಮೆರೆದಾಡುತ್ತಿವೆ. ವಾಸ್ತವವನ್ನು ಮರೆತು ಬಿಟ್ಟಿವೆ.
ಮಾಧ್ಯಮಗಳಲ್ಲಿ ಮೇಲ್ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಸುಳ್ಳಲ್ಲ. ಅಲ್ಲಿಗೆ ಸಾಮಾಜಿಕ ನ್ಯಾಯವೂ ಕಾಲಿಡಬೇಕು ಎನ್ನುವ ಬಗ್ಗ ಸಹ ದುಸರಾ ಮಾತಿಲ್ಲ. ಆದರೆ ನನ್ನ ಪ್ರಶ್ನೆ ಇರುವುದು, ಪತ್ರಕರ್ತರಾಗಬೇಕಾದವರು
ಯಾವ ವರ್ಗದ ಹಿತಾಶಕ್ತಿ ಕಾಪಾಡುತ್ತಿದ್ದಾರೆ? ಪತ್ರಕರ್ತರ ಹುದ್ದೆ ಎನ್ನುವುದು ಸಾಮಾಜಿಕ ಜವಾಬ್ದಾರಿ ಎನ್ನುವುದನ್ನು ಅರ್ಥ ಮಾಡಿಕೊಳ್ಳದೇ ಬೌದ್ಧಿಕ ದಿವಾಳಿಕೋರತನ, ಪಿಗ್ಮಿ ಏಜೆಂಟ್‌ರಂತೆ ವೇತನ ನಂಬಿಕೊಂಡವರು, ರಾಜಕಾರಣಿಗಳ ಮುಂದೆ ಹಲ್ಲುಗಿಂಜುವವರು, ಜಾಹಿರಾತಿಗಾಗಿ ದುಂಬಾಲು ಬೀಳುವವರು ಯಾವ ಜಾತಿಯವರಾಗಿದ್ದರೂ ಅವರನ್ನು ಸಹಿಸಿಕೊಳ್ಳುವುದು ಹೇಗೆ? ಈ ಬಗ್ಗೆಯೂ ಚರ್ಚೆ ನಡೆಯಬೇಕು ಎನ್ನುತ್ತೇನೆ ನಾನು.
- ಪರುಶುರಾಮ ಕಲಾಲ್

Anonymous said...

ಪರಶುರಾಮ್ ಮತ್ತು ಶ್ರೀನಿಧಿ ಹೇಳಿದ್ದಕ್ಕೆ ನನ್ನ ಸಹಮತವಿದೆ. ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ್ದಾರೆ ಎಂದ ಮಾತ್ರಕ್ಕೆ ಎಲ್ಲಾ ಬ್ರಾಹ್ಮಣರನ್ನೂ ಅನುಮಾನಿಸುವುದು ತುಂಬಾ ತಪ್ಪು. ನಾನು ಹುಟ್ಟಿನಿಂದ ಅದೇ ಜಾತಿ. ಆದರೆ ಬೇರೆ ಬೇರೆ ರೀತಿಯ ಬ್ರಾಹ್ಮಣರನ್ನು ನೋಡಿದ್ದೇನೆ, ಇಷ್ಟ ಪಟ್ಟಿದ್ದೇನೆ, ಗಾಂಧಿಯನ್ನು ಇವತ್ತಿನ ಜನತೆ ಮರೆಯುತ್ತಿರುವುದಕ್ಕೆ ನೊಂದಿದ್ದೇನೆ, ಸಾವರ್ಕರರ ಒಳ್ಳೆಗುಣಗಳ ಬದಲು ಕೆಟ್ಟ ಗುಣಗಳು ಆದರ್ಶವಾಗುತ್ತಿರುವದಕ್ಕೆ ನೊಂದಿದ್ದೇನೆ, ನನ್ನ ಆತ್ಮೀಯರಾದವರೇ ಉಗ್ರವಾಗಿ ವಾದಮಾಡುವಾಗ ಅವರ ತರ್ಕಕ್ಕೆ ಉತ್ತರಿಸಲಾಗದೇ ಕಷ್ಟಪಟ್ಟಿದ್ದೇನೆ, ಹಾಗೆಯೇ ನನ್ನ ವೃತ್ತಿಯಲ್ಲಿ ಹಾಗೂ ಬದುಕಿನಲ್ಲಿ ನನ್ನ ಜಾತಿ ನನಗೆ ಮರೆತೇ ಹೋಗುತ್ತದೆ. ಒಬ್ಬ ಜವಾಬ್ದಾರಿಯುತ ಮಾಧ್ಯಮದ ವ್ಯಕ್ತಿಯಾಗಿ ಯೋಚಿಸುವುದು ಅಭ್ಯಾಸವಾಗಿದೆ. ಹಾಗೆಯೇ ಜವಾಬ್ದಾರಿಯಿಲ್ಲದೆ ಜನರಲ್ಲಿ ಭಯ ಹುಟ್ಟಿಸುವ ಕೋಮು ಗಲಭೆ ಪ್ರೇರೇಪಿಸುವ ಮಾಧ್ಯಮಗಳು ನನಗೂ ಭಯ ಹುಟ್ಟಿಸಿವೆ, ಹಾಗೆಯೇ ಒಂದು ಜಾತಿಯನ್ನೇ ಟಾರ್ಗೆಟ್ ಮಾಡಿ ಭಯೋತ್ಪಾದನೆ ವಿರುದ್ಧ ಸಮರ ಹೂಡಿರುವ ಮಾಧ್ಯಮಗಳಿಗೆ ಭಯೋತ್ಪಾದನೆ ಜಾತ್ಯತೀತ ಎಂಬ ಜ್ಞಾನೋದಯ ಇನ್ನೂ ಆಗಿಲ್ಲವಲ್ಲ ಅಂತ ಬೇಜಾರಾಗಿದೆ, ಅದನ್ನು ಹೇಳುವಂತಹ ಸುದ್ದಿಗಳು ನೀಟಾಗಿ ಸೆನ್ಸಾರಾಗುವ ರೀತಿ ಆಶ್ಚರ್ಯ ಹುಟ್ಟಿಸಿದೆ, ನಮ್ಮ ಪತ್ರಿಕೋದ್ಯಮ ಎಲ್ಲಿ ಹೋಗುತ್ತಿದೆಯೋ ಎಂಬ ಭಯ ಹುಟ್ಟಿದೆ.

ನನ್ನ ಪ್ರಕಾರ ಜಾತಿ ಬ್ರಾಹ್ಮಣರದ್ದು ಎಂಬುದಕ್ಕೋಸ್ಕರ ಪತ್ರಿಕೋದ್ದ್ಯಮದಲ್ಲಿ ಅವಕಾಶ ನೀಡದಿರುವುದು ತಪ್ಪು. ಪತ್ರಕರ್ತರ ಆಯ್ಕೆ ಮಾಡುವಾಗ ಸಂಬಂಧಪಟ್ಟರು ಏನು ಮಾಡುತ್ತಾರೆ? ಅಲ್ಲಿ ಅವರು ಮಾಡುವ ರಾಜಕೀಯವೇ ಎಲ್ಲಾ ಅವಾಂತರಗಳಿಗೂ ಕಾರಣ. ವೃತ್ತಿಪರರಾದವರನ್ನು ಜಾತಿ ನೋಡದೆ ಆಯ್ಕೆ ಮಾಡಿದರೆ ಈ ತೊಂದರೆಗಳು ಹೇಗೆ ಬರ್ತಿತ್ತು? ದೃಷ್ಟಿಕೋನಗಳು ಜಾತಿಯ ಮೇಲೆ ಅವಲಂಬಿತವಲ್ಲ, ಅವು ವ್ಯಕ್ತಿ ರೂಪಿಸಿಕೊಳ್ಳುವಂತಹವು. ಮತ್ತು ನಮ್ಮ ಕಾಲೇಜುಗಳು, ಅಧ್ಯಾಪಕರು ಬೆಳೆಸುವಂತಹವು. ವ್ಯಕ್ತಿ ಬೆಳೆದ ಹಾಗೆ ಪೂರ್ಣಾನಂದರು ಆದರ್ಶವಾದರೂ ಆಗಬಹುದು, ಅಥವಾ ಪ್ರತಾಪ್ ಸಿಂಹರು ಆದರ್ಶವಾದರೂ ಆಗಬಹುದು. ಇವತ್ತು ಪೂರ್ಣಾನಂದರನ್ನು ಯಾರು ಕೇಳುತ್ತಾರೆ, ಅವರನ್ನು ಬೈಯುತ್ತಲೇ ಬೆಳೆದ ಪ್ರತಾಪ್ ಸಿಂಹ ತನ್ನ ಜಾತಿಯ ಹೊರತಾಗಿಯೂ ಪ್ರಭಾವಿ ಉಗ್ರ ಪತ್ರಕರ್ತ ಅಂತ ಹೆಸರಾಗಿಲ್ಲವೇ? ಆತ ಬರೆಯುವುದರಲ್ಲಿ ನಿಮಗೆ ಆತ ಯಾವ ಜಾತಿ ಅಂತ ಗೊತ್ತಾಗುತ್ತದೆಯೇ? ಆತನನ್ನು ದೂಷಿಸುವುದು ನನ್ನ ಉದ್ದೇಶವ್ಲಲ, ಆದ್ರೆ ಅಂತಹ ಉಗ್ರನನ್ನೇ ಪತ್ರಕರ್ತ ಅಂತ ಸ್ವೀಕರಿಸಿದ ಪತ್ರಿಕೋದ್ಯಮ, ಜಾತಿಯ ಬಗ್ಗೆ ಯಾವುದೇ ರೀತಿಯಲ್ಲಿ ಚರ್ಚಿಸುವುದು ಅನವಶ್ಯಕ. ಅವರವರ ಬುದ್ಧಿವಂತಿಕೆ - ಪ್ರತಿಭೆಯ ಆಧಾರದ ಮೇಲೆ ಎಲ್ಲರಿಗೂ ಮೇಲೆ ಬರಲು ಬಿಡಿ ಸ್ವಾಮಿ, ಜಾತಿ ನೋಡಬೇಡಿ, ಬ್ರಾಹ್ಮಣ ಅನ್ನುವ ಕಾರಣಕ್ಕೆ ದೂಷಿಸಬೇಡಿ.
- ಮತ್ತೊಬ್ಬ ನೊಂದ ಬ್ರಾಹ್ಮಣ ಪತ್ರಕರ್ತ

Anonymous said...

ನಾನು ಇಲ್ಲಿ ಹೇಳಿದಂತೆಯೇ ಆಗಿದೆ. ಆಗಲೇ ನಾರಾಯಣ ನಾಯಕ್ ಎಲ್ಲಾ ಪತ್ರಿಕೆಗಳ ಜಾತಿವಾರು ಸುವರ್ನ ಸಮೀಕ್ಷೆ ನಡೆಸಿಯೇ ಬಿಟ್ಟಿದ್ದಾರೆ. ಇನ್ನೇನು ! ಇದಕ್ಕೂ ಹೋರಾಟ ಆರಂಭಿಸಿ ಬಿಡಿ! ಪತ್ರಿಕೊದ್ಯಮದಲ್ಲಿ ಇಷ್ಟು ವರುಷ ಸಂಪಾದಕರಾಗಿರುವ ವಿ.ಭಟ್, ರಂಗನಾಥ್, ಪೂರ್ನಿಮಾ, ಶ.ಭಟ್ ಇವರು ತಮ್ಮ ಸಂಪಾದಕತ್ವ ಹುದ್ದೆ ಬಿಟ್ಟು ಕೆಳಗಿಳಿಯಬೇಕು. ಮೀಸಲಾತಿ ಆಧಾರದ ಮೇಲೆ ಅಲ್ಲಿಗೆ ಹಿಂದುಳಿದ ಜಾತಿಯವರನ್ನು ತರಬೇಕು ಎಂದು. ಈಗಾಗಲೇ ಐಟಿ ಕಂಪೆನಿಗಳಲ್ಲಿ ಈ ನಿಯಮ ಲಾಗೂ ಮಾಡಬೇಕು ಎಂದಾಗ ಎಲ್ಲರೂ ವಿರೋಧಿಸಿದ್ದರು. ಮುಂದೆ ಇಸ್ರೊದಂತಹ ವಿಜ್ಞಾನ ಸಂಸ್ಥೆಗಳ ಸಮೀಕ್ಷೆ ಮಾಡಿ. ಅಲ್ಲಿಯೂ ಪ್ರತಿಭೆಯನ್ನು ಕಡೆಗಣಿಸಿ ಮೀಸಲಾತಿ ಆಧಾರದ ಮೇಲೆ, ಸಾಮಾಜಿಕ ನ್ಯಾಯದ ಆಧಾರದ ಮೇಲೆ ನೇಮಕಾತಿ ಮಾಡೋಣ. ಪ್ರತಿಭೆ ಇದ್ದವರು ಮೂಲೆಗುಂಪಾದರೇನು?
ನೆನಪಿಡಿ. ಯಾವುದೋ ಒಂದು ತಪ್ಪಿಗೆ, ಕೊಲೆಗೆ, ಅತ್ಯಾಚಾರಕ್ಕೆ, ಅನ್ಯಾಯಕ್ಕೆ ಸುಪ್ರಿಂ ಕೋರ್ಟ್ ಸಹ ನ್ಯಾಯ ಅಥವಾ ಪರಿಹಾರ ನೀಡುವುದು ಒಂದೇ ಬಾರಿ. ತಲೆಮಾರುಗಳ ವರೆಗೆ ತಪ್ಪು ಮಾಡಿದ ಕುಟುಂಬ ಶತ ಶತಮಾನಗಳ ವರೆಗೆ ಅನ್ಯಾಯಕ್ಕೆ ಒಳಗಾದ ಕುಟುಂಬಕ್ಕೆ ಪರಿಹಾರ ನೀಡುತ್ತಲೇ ಇರಬೇಕು ಎಂದು ತೀಮ್ರಾನ ನೀಡುವುದಿಲ್ಲ.
ಅದೇ ರೀತಿ ನಮ್ಮ ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದ ಅನೇಕರು ಇದ್ದಾರೆ. ಅವರಿಗೆ ನ್ಯಾಯ ನೀಡುವುದು, ಸಮಾಜದ ಮುಖ್ಯವಾಹಿನಿಗೆ ತರುವುದು, ಸಾಮಾಜಿಕ ನ್ಯಾಯ ನೀಡುವುದು ನಮ್ಮ ಜವಾಬ್ದಾರಿ ಎಂಬುದರಲ್ಲಿ ಎರಡು ಮಾತಿಲ್ಲ.ಆದರೆ ರಾಜಕೀಯ ಕಾರಣಗಳಿಗೋಸ್ಕರ ಅದನ್ನು ಶತ ಶತಮಾನಗಳವರೆಗೆ ವಿಸ್ತರಿಸುತ್ತಾ ಹೋಗುವುದು ಸರಿಯೇ? ಮತ ಬ್ಯಾಂಕ್ ಗಾಗಿ ಕೆನೆ ಪದರಕ್ಕೂ ಮೀಸಲಾತಿ ಸಿಗಬೇಕು ಎಂಬ ವಾದ ಸರಿಯೇ? ಆದ್ದರಿಂದಲೇ ಹೇಳಿದ್ದು. ಮೀಸಲಾತಿ ಆಧಾರದ ಮೇಲೆ ಅವರಿಗೆ ಉದ್ಯೋಗ ಕೊಡೋಣ. ಉಚಿತ ಶಿಕ್ಷಣ ಕೊಡೋಣ. ಉತ್ತಮ ಸ್ಥಿತಿಗೆ ಬರುವಂತೆ ಮಾಡೋಣ. ಆ ರೀತಿ ಸಾಮಾಜಿಕ ನ್ಯಾಯ ನೀಡಿದ ನಂತರ ಮತ್ತೆ ಮತ್ತೆ ಅದನ್ನು ರಾಜಕೀಯ, ಮತ ಬ್ಯಾಂಕ್ ಗಾಗಿ ವಿಸ್ತರಿಸುತ್ತಾ ಹೋಗುವುದು ಬೇಡ. ಇಷ್ಟೆಲ್ಲಾ ಆಗಿ, ಎಲ್ಲರಿಗೂ ನ್ಯಾಯ ಸಿಕ್ಕ ನಂತರ ಜಾತಿ, ಧರ್ಮ, ಸ್ಥಳಗಳ ಗೊಡವೆ ಇಲ್ಲದೆ ಕೇವಲ ಪ್ರತಿಭೆ ಆಧರಿಸಿ ಆತ ಯಾವುದೇ ಜಾತಿಯವನಾಗಿರಲಿ, ಮನ್ನಣೆ ನೀಡಬೇಕು. ಆಗ ಮಾತ್ರ ಸ್ವಸ್ಥ ಸಮಾಜವನ್ನು ರೂಪಿಸಲು ಸಾಧ್ಯ. ಇಲ್ಲದಿದ್ದರೆ ಮೀಸಲಾತಿಯ ದುರುಪಯೋಗ ಪಡೆಯುವ, ಅಂತಹದ್ದನ್ನು ಸಾಮಾಜಿಕ ನ್ಯಾಯದ ಹೆಸರಿನಲ್ಲಿ ವಿಸ್ತರಿಸುತ್ತಾ ಹೋಗುವುದರಿಂದ ಬಹುದೊಡ್ಡ ಅಪಾಯ ಕಾದಿದೆ. ಇದಕ್ಕೆ ನಾವೆಲ್ಲರೂ ಹೊಣೆಯಾಗಬೇಕಾದೀತು.
ಪೂರ್ವಾಗ್ರ ಪಿಡಿತ ಮನಸ್ಸು, ದೃಷ್ಠಿಕೋನಗಳನ್ನು ಬಿಟ್ಟು ಸ್ವಲ್ಪ ಆರೋಗ್ಯಕರವಾಗಿ ಚಿಂತಿಸಿ ಎಂಬುದು ನನ್ನ ಕೋರಿಕೆ.

shashidhar Bhat said...

ನಾನು ಲೇಖನದಲ್ಲಿ ಹೇಳಲು ಹೊರಟಿದ್ದು ಜಾತಿಯ ಬಗ್ಗೆ ಅಲ್ಲ. ಜಾತಿಯನ್ನು ಬಳಸಿಕೊಳ್ಳುವ ಬಗ್ಗೆ. ನಾನು ಪ್ರಸ್ತಾಪಿಸಿದ ಹುಡುಗ ಜಾತಿಯನ್ನು ಮುಂದಿಟ್ಟುಕೊಂಡು ಕೆಲಸವನ್ನು ಕೇಳಲು ಯತ್ನ ನಡೆಸಿದ್ದು ನನಗೆ ಅಘಾತವನ್ನು ಉಂಟು ಮಾಡಿತ್ತು. ಪತ್ರಿಕೋದ್ಯಮದಲ್ಲಿ ಇರುವವರು ಜಾತಿಯನ್ನು ಸ್ವಲಾಭಕ್ಕಾಗಿ ಬಳಸಿಕೊಳ್ಳಲು ಯತ್ನ ನಡೆಸಿದರೆ ? ಇಲ್ಲಿ ಸಾಂದರ್ಭಿಕವಾಗಿ ಪತ್ರಿಕೋದ್ಯಮದ ಸ್ಥಿತಿಯನ್ನು ವಿವರಿಸಲು ನಾನು ಯತ್ನ ನಡೆಸಿದೆ.
ಇಂದು ಕೆಲಸಕ್ಕೆ ಜಾತಿಯನ್ನು ಬಳಸಿಕೊಳ್ಳುವವರು ನಾಳೆ ತಮ್ಮ ವೃತ್ತಿಯಲ್ಲೂ ಇದೇ ಕೆಲಸ ಮಾಡುತ್ತಾರೆ. ಅಂದರೆ ನನ್ನ ಜಾತಿಯವರಿಗೆ ಪ್ರಚಾರ ನೀಡುವುದು ಬೇರೆ ಜಾತಿಯವರನ್ನು ಹೀಗಳಿಯುವುದು ಇಂತಹ ಸ್ಥಿತಿ ಬರಬಹುದು. ಇದು ನನಗಿದ್ದ ಚಿಂತೆ, ಈಗಲೂ ನಮ್ಮ ಮಾಧ್ಯಮಗಳನ್ನು ಸೂಕ್ಷ್ನವಾಗಿ ಗಮನಿಸಿದರೆ ಜಾತಿ ಕೆಲಸ ಮಾಡುವ ರೀತಿ ಅರ್ಥವಾಗುತ್ತದೆ. ಬೆಂಗಳೂರಿನಲ್ಲಿ ಬೇರೆ ಬೇರೆ ಜಾತಿಯ ಪತ್ರಕರ್ತರ ಗುಂಪುಗಳಿವೆ, ಆಯಾ ಆಯಾ ಜಾತಿ ಪತ್ರಕರ್ತರು ತಮ್ಮ ಜಾತಿಯ ರಾಜಕಾರಣಿಗಳಿಗೆ ಸಲಹೆಗಾರರಾಗಿ ಕೆಲಸ ಮಾಡುತ್ತಾರೆ. ಇದರ ಬಗ್ಗೆ ನಾವು ಮಾತನಾಡುವುದಿಲ್ಲ. ಇದನ್ನು ಸರಿಪಡಿಸಲು ಯತ್ನ ನಡೆಸುವುದಿಲ್ಲ. ಈ ಮಾತುಗಳನ್ನು ಹೇಳಿದ್ದು ನಾನು ಈ ಮಾಧ್ಯಮದ ಭಾಗವಾಗಿಯೇ. ಇದು ನಮ್ಮನ್ನೆಲ್ಲ ಯೋಚನೆಗೆ ಹಚ್ಚಬೇಕು ಎಂಬುದು ನನ್ನ ಉದ್ದೇಶ. ನನಗೆ ಬೀದಿ ಜಗಳದಲ್ಲಿ ನಂಬಿಕೆ ಇಲ್ಲ. ಅರ್ಥಪೂರ್ಣ ಚರ್ಚೆಗೆ ಯಾವಾಗಲೂ ನಾನು ಸಿದ್ಧ.

ಶಶಿಧರ್ ಭಟ್

Anonymous said...

How come Bhat's private words become your matter of discussion?

I strongly feel tabloid attitudes in your steps......

If you dont have any stock, drag something like this to get more visitors to your blogs.

Anonymous said...

ಶಶಿದರ್ ಭಟ್ ಅವರ ಸಾಮಾಜಿಕ ನ್ಯಾಯದ ಪ್ರಶ್ನೆಗೆ ನನ್ನ ಸಹಮತವಿದೆ. ಅವರ ಜೊತೆಗೇ ಕೆಲಸ ಮಾಡಿಕೊಂಡಿರುವವನು ನಾನು. ಅವರು ಯಾವತ್ತೂ ಜಾತಿಯನ್ನು ಕೆಲಸದ ಜೊತೆ ಸೇರಿಸಿಲ್ಲ.
ಆ ವೆಂಕಟೇಶ್ ಸಂಪಾ ಇದಾನಲ್ಲ, ಅವನೊಬ್ಬ ಮೂಲವ್ಯಾದಿಯಂತವನು. ಹತ್ತು ನಿಮಿಶ ಅವನ ಜೊತೆ ಕುಂತು ಮಾತಾಡಿದ್ರೆ, ನಿಮಗೇ ಅರಿವಾಗತ್ತೆ...

Ravi said...

ನಾನು ಜಾತಿ ಮತಗಳನ್ನು ಮೀರಿ.......ಎಂದು ಕಾಮತ್ ಊಢಾಫೆಯಾಗಿ ಬರೆಯುವುದು,ಜೋಶಿ ಸಾಹೇಬರು ಹವ್ಯಕರು ಫ್ರತಿಭಾವಂತರಿರುವುದೇ ತಪ್ಪಾ ಎಂದು ಕೇಳುವುದು, ಇವು ತಮ್ಮ ಮೂಗಿನ ನೇರಕ್ಕೆ ಅರ್ಥ್ಸಇಸುವ ಉದಾಹರಣೆಗಳು. ಇವತ್ತು ಎಲ್ಲ ರಂಗಗಳಲ್ಲೂ ಯಾಕೆ ಹೆಚ್ಚು ಪ್ರತಿಶತ ಹವ್ಯಕರು ಇದ್ದಾರೆ ಎಂದು ಎಂದಾದರು ಇವರು ಕೇಳಿಕೊಂಡಿದ್ದಾರ?.ಇವರ ಉತ್ತರ ಹವ್ಯಕ ಜನಾಂಗವೇ ಪ್ರತಿಭಾವಂತರೆಂದರೆ ಉಳಿದ ಜನಾಂಗದವರು ದಡ್ಡರೇ?.
ಭ್ಹಟ್ಟರು ಉಳ್ಳವರು ನಿರ್ಲಜ್ಜೆಯಿಂದ ಜಾತಿಯನ್ನು ಉಪಯೋಗಿಸುವುದು ಖಂಡಿಸುವುದು ಇವರಿಗೆ ಯಾಕೆ ಕಾಣಿಸುವುದಿಲ್ಲ. ದೀವರ ಹುಡುಗರಿಗೆ ಕೆಲಸ ಕೊಟ್ಟ ತಕ್ಸಣ ಅವರ ಜಾತ್ಯಾತೀತೆ ಎಂದು ಅಣಕವಾಡುವ ಮುನ್ನ ಈ ಹುಡುಗರು ತಮ್ಮ ಜಾತಿ ಎನಾದರು ಹೇಳಿಕೊಂಡು ಕೆಲಸ ಗಳಿಸಿಕೊಂಡರಾ ಎಂದು ಕೇಳಿಕೊಳ್ಳುವುದಿಲ್ಲ.
ಮುಗಿಸುವ ಮುನ್ನ ನನ್ನ ಮತ್ತೊಂದು ಅನಿಸಿಕೆ ಹೇಳಲು ಬಯಸುತ್ತೇನೆ.
ನಾನು ಕೆಲಸ ಮಾಡುವ ಇಎ ಟಿ ಕಂಪನಿಯಲ್ಲಿ ನಾನು ಪ್ರೊಜೆಕ್ಟ್ ಲೀಡ್ ಆದ್ದರಿಂದ ಇಂಟರ್ ವ್ಯೂ ಕೂಡ ನನ್ನ ಕೆಲಸ. ನನ್ನ ಕಂಪನಿಯಲ್ಲಿ ನಾನು ಗಮನಿಸಿದ್ದು ಎಂದರೆ ಹೆಚ್ಚಾಗಿ ತೆಲುಗು ತಮಿಳು ಜನಗಳೇ ತುಂಬಿದ್ದಾರೆ. ಕನ್ನಡದವರಿಗಿಂತ ಇವರು ಬುದ್ದಿವಂತರೆಂದು ನಾನು ತಿಳಿದಿಲ್ಲ ಇಂಟರ್ ವ್ಯೂ ನಲ್ಲಿ ಕನ್ನಡದ ಹುಡುಗರಿದ್ದರೆ ಅವರು ಆಯ್ಕೆಯಾಗುವಂತೆ ನೋಡಿಕೊಳ್ಳುತ್ತೇನೆ. ಇವರು ಸುಧಾರಿಸಿಕೊಳ್ಳದಿದ್ದರೆ ಆರು ತಿಂಗಳಲ್ಲಿ ಕಂಪನಿಯೇ ಗೇಟ್ ಪಾಸ್ ಕೊಡುತ್ತದೆ. ಇವರೆಗು ನಾನು ಆಯ್ಕೆ ಮಾಡಿದ ಹುಡುಗ ಹೊರಹೋಗಿಲ್ಲ.
ಹವ್ಯಕರು ಇದಕ್ಕೆ ಎನು ಹೇಳುತ್ತಾರೆ?

Anonymous said...

ಈ ದೇಶದಲ್ಲಿ ಹಲವಾರು ಶತಮಾನಗಳಿಂದ ಪ್ರತಿಭೆಯ ಹೆಸರಿನಲ್ಲಿ ಅಘೋಷಿತ ಮೀಸಲಾತಿ ಆಚರಿಸಿಕೊಂಡು ಬರಲಾಗುತ್ತಿದೆ. ಎಲ್ಐಸಿ, ಅಂಚೆ ಕಚೇರಿ, ಬ್ಯಾಂಕ್, ಪತ್ರಿಕೋದ್ಯಮ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಪ್ರತಿಭೆ ಹೆಸರಿನಲ್ಲಿ ಯಾವುದೇ ಮೀಸಲಾತಿ ಇಲ್ಲದೆ ಒಂದೇ ಜಾತಿಗೆ ಸೇರಿದವರು ತುಂಬಿಕೊಂಡಿದ್ದಾರೆ.ಹಲವಾರು ದಶಕಗಳಿಂದ ಅದನ್ನು ಅವರು ವ್ಯವಸ್ಥಿತವಾಗಿ ಪಾಲಿಸಿಕೊಂಡು ಬಂದಿದ್ದಾರೆ.

Anonymous said...
This comment has been removed by a blog administrator.
Anonymous said...

ಒಂದು ಉತ್ತಮ ವ್ಯವಸ್ಥೆ ತರಲು ಬ್ರಾಹ್ಮಣರು ಬೇಕು .ಅದು ಸುಸ್ಥಿಯಲ್ಲಿದ್ದರೆ,ಎಲ್ಲರಿಗು ಬೇಕಾಗಿದಿದ್ದರೆ ಅಲ್ಲಿ ಎಲ್ಲರಿಗೂ ಮೀಸಲಾತಿ ಬೇಕು ಅಂದರೆ ಹೇಗೆ ಅದು ಸ್ವಾಮಿ. ಇವಾಗ ಇರೊ ಬ್ರಾಹ್ಮಣರ ಪೈಕಿ ಯಾರಾದರೂ ಅಯೋಗ್ಯರಿದ್ದಾರ.? ಇಷ್ಟು ದಿನ ಪ್ರತಿಭೆಯಿಂದ ನಡೆಸಿಕೊಂಡು ಬರುತ್ತಿದ್ದರು. ಇವಾಗ ಉಳಿದವರಿಗೆ ನಾವು ಯಾಕೆ ಕೈ ನೋಡ ಬಾರದು ಎಂಬ ಚಪಲ.
ಅಷ್ಟಕ್ಕೂ ಬ್ರಾಹ್ಮಣರ ಮೇಲೆ ಎಲ್ಲರಿಗೂ ಸಿಟ್ಟು? ಅವರು ಉನ್ನತ ಸ್ಥಾನದಲ್ಲಿದ್ದಾರೆ ಅಂತಾನ?ಆ ಸ್ಥಾನಕ್ಕೆ ಏರಲು ಉಳಿದವರಿಗೆ ಏಕೆ ಸಾಧ್ಯವಾಗಲಿಲ್ಲ ಎಂಬುದನ್ನು ಸ್ವಲ್ಪ ಯೋಚಿಸಿ.ಜಾತಿ ಮೇಲೊಂದೆ ಯಾವ ಪತ್ರಿಕೆನೂ ನಡೆಯಲ್ಲ.ಪತ್ರಿಕೆನ ಅವರೋಂದೆ ಜಾತಿಯವರು ಒದತಾರ? ಹಾಗಿದ್ರೆ ಇಶಷ್ಟ್ರೊಳಗೆ ವಿ.ಕ. ಕ.ಪ್ರ. ಉದಯವಾಣಿ ಎಲ್ಲ ಮುಚ್ಚಿ ಹೋಗುತಿತ್ತು. ಪತ್ರಿಕೋದ್ಯಮದದ ಆಸಕ್ತಿಗೆ ಕಾರಣ ಎಂದರೆ ಸುಲಭವಾಗಿ ಗುರುತಿಸಿಕೊಳ್ಳ ಬಹುದು ಎನ್ನುವುದು.ಅದೇ ಎಲ್ಲರ ಮನಸಲ್ಲಿ ಹೊಕ್ಕಿ ಜಾತಿ ಬಗ್ಗೆ ಮಾತನಾಡುವಂತೆ ಮಾಡುತ್ತಿದೆ.

ಮು.ನಿ.