Thursday, July 23, 2009

ಕೇಶಿರಾಜರು ಮತ್ತು ಕನ್ನಡ ಪತ್ರಿಕೋದ್ಯಮ!

ಕೆಲವರಲ್ಲಿ ಒಂದು ಕಲ್ಪನೆ ಇದೆ. ಅದೇನೆಂದರೆ, ವ್ಯಾಕರಣ ದೋಷವಿಲ್ಲದೆ ಬರೆಯುವವರೆಲ್ಲಾ ಉತ್ತಮ ಪತ್ರಕರ್ತರಾಗಬಹುದು! ಮತ್ತು ಅದೇ ನಂಬಿಕೆಯ ಮುಂದುವರಿದ ಭಾಗ - ಭಾಷೆ, ವ್ಯಾಕರಣ ತಿಳಿಯದವನು ಪತ್ರಕರ್ತನಾಗಲಾರ ಮತ್ತು ಪತ್ರಕರ್ತನಾಗಕೂಡದು!
ಹೀಗೆ ಯೋಚಿಸುವವರು, ಮುಲಾಜೇ ಬೇಡ, ಅವರು ಬೇರಾರೂ ಅಲ್ಲ - ಭಾಷೆ, ವ್ಯಾಕರಣಗಳನ್ನು ಮಾತ್ರ ಕಲಿತು ಈ ಕ್ಷೇತ್ರಕ್ಕೆ ಬಂದವರು. ಪ್ರತಿಷ್ಠಿತ ಪತ್ರಿಕೆಗಳ ಆಯಕಟ್ಟಿನ ಜಾಗಗಳಲ್ಲಿ ಕುಳಿತಿರುವವರಿಗೆ ಪುಟದಲ್ಲಿ ಹೀಗೆ ತಪ್ಪುಗಳನ್ನು ಹೆಕ್ಕಿ ತೆಗೆಯುವುದೇ ಮುಖ್ಯವಾಗಿಬಿಟ್ಟಿದೆ. "ಅಯ್ಯೋ, ಇದು ಬ್ಲಂಡರ್. ಯಾವನ್ರೀ ಅವನು, 'ಚಳವಳಿ'ಯನ್ನು 'ಚಳುವಳಿ' ಅಂತ ಬರೆದವನು. ಕನ್ನಡ ಬರದವರೆಲ್ಲ ಪತ್ರಿಕೋದ್ಯಮಕ್ಕೆ ಬಂದರೆ ಹೀಗೆ ಆಗೋದು. ಅವನನ್ನು ಕರೆದು ಸ್ವಲ್ಪ ಬುದ್ಧಿ ಹೇಳಿ." - ಹೀಗೊಂದು ಫರ್ಮಾನು ಹೊರಡುತ್ತದೆ. ಅದರಂತೆ ಆ ವಿಭಾಗದ ಮುಖ್ಯಸ್ಥರು ಸಂಬಂಧಪಟ್ಟ ವರದಿಗಾರನನ್ನೊ, ಉಪಸಂಪಾದಕನನ್ನೋ ಝಾಡಿಸುತ್ತಾರೆ.
ವಿಭಾಗದ ಮುಖ್ಯಸ್ಥರು ಎನಿಸಿಕೊಂಡ ಅನೇಕರಿಗೆ ತಮ್ಮ ಕೆಳಗಿನವರ ವರದಿಗಳಲ್ಲಿ ಇಂತಹ ತಪ್ಪುಗಳನ್ನು ಹುಡುಕಿ 'ಸುದ್ದಿ ಮಾಡುವುದೇ' ಚಾಳಿ. ಹಾಗೆ ಸುದ್ದಿ ಮಾಡುವ ಮುಊಲಕ ತಾವು ಶಬ್ದಮಣಿದರ್ಪಣದ ಕೇಶಿರಾಜನೋ, ರಾಣಿಯೋ ಎಂಬಂತೆ ಪೋಸು ಕೊಡುತ್ತಾರೆ.
ಇತ್ತೀಚೆಗೆ ಇಂತಹ ಅನೇಕ ಕೇಶಿರಾಜರಲ್ಲಿ ಒಬ್ಬರು ಪ್ರಮುಖ ಕಾರ್ಯಕ್ರಮದ ವರದಿಗೆಂದು ಹೊರದೇಶಕ್ಕೆ ಹೋಗಿದ್ದರು. ಅಲ್ಲಿಂದ ಅವರು ಕಳುಹಿಸಿದ ವರದಿಗಳು ಇಂದು ಕಚೇರಿಯ ತುಂಬಾ, ಅಷ್ಟೇಕೆ ಅನೇಕ ಪತ್ರಿಕಾಲಯಗಳಲ್ಲಿ ಪ್ರಮುಖ ಸುದ್ದಿ. ಅವರ ವರದಿಗಳಲ್ಲಿ ಪದೇ ಪದೇ ಕಾಣಿಸಿಕೊಂಡ ಪದ 'ಪರಿಸರ ಮಾಲಿನ್ಯ ಸಂರಕ್ಷಣೆ'!!! ಅಂದಹಾಗೆ ಅವರು ಬರೆಯುತ್ತಿದ್ದುದು ಹವಾಮಾನ ವೈಪರೀತ್ಯದ ಬಗ್ಗೆ. Climate Change ಎಂದರೆ ಪರಿಸರ ಮಾಲಿನ್ಯ ಎಂದುಕೊಂಡೇ ಅವರು ಮೊದಲ ಎರಡು ದಿನ ವರದಿ ಮಾಡಿದ್ದರು! ವಿಶಿಷ್ಟ ಅಂದರೆ ಆ ವರದಿಗಳನ್ನು ಪತ್ರಿಕಾಲಯದ ನೊಟೀಸ್ ಬೋರ್ಡ್ ನಲ್ಲಿ ಅಂಟಿಸಿ, ಅಲ್ಲಿದ್ದ ತಪ್ಪುಗಳನ್ನು ಕೆಂಪು ಶಾಯಿಯಲ್ಲಿ ಗುರುತಿಸಲಾಗಿತ್ತು ಎಂಬ ಸುದ್ದಿಯುಊ ಹೊರಬಿದ್ದಿದೆ.
ಅದು ಒತ್ತಟ್ಟಿಗಿರಿಲಿ..
ಭಾಷೆಗೆ ಮಹತ್ವ ಕೊಡಲಿ. ಆದರೆ ಭಾಷೆಗಿಂತ ವಿಚಾರ, ಆಲೋಚನೆ, ಹೊಸ ದೃಷ್ಟಿಕೋನ ಮುಖ್ಯ ಅಲ್ಲವೆ?
ಅದೆಷ್ಟೋ ದಶಕಗಳ ಕಾಲ ಕನ್ನಡ ಪತ್ರಿಕೋದ್ಯಮ ಒಂದು ವರ್ಗಕ್ಕಷ್ಟೇ ಸೀಮಿತವಾಗಿದ್ದು ಇದೇ ಕಾರಣಕ್ಕೆ. 'ಅವರ' ಹೊರತಾಗಿ ಇತರರಿಗೆ ಭಾಷೆ ಜ್ಞಾನ ಅಷ್ಟಾಗಿ ಇರೋಲ್ಲ ಎಂಬ ಕುರುಡು ನಂಬಿಕೆಗೆ ಕನ್ನಡ ಪತ್ರಿಕೋದ್ಯಮ ಬಲಿಯಾಯಿತು.
ಹಾಗೆ ಸುಮ್ಮನೆ ಕನ್ನಡ ಪತ್ರಿಕೋದ್ಯಮದ ಇತಿಹಾಸ ಗಮನಿಸಿದರೆ, ಪ್ರಜಾವಾಣಿ ಹೊರತಾಗಿ ಬೇರೆ ಪ್ರಮುಖ ಪತ್ರಿಕೆಗಳು ನಮ್ಮ ನಾಡಿನ ಸಾಹಿತ್ಯಕ, ಸಾಂಸ್ಕೃತಿಕ ಬದಲಾವಣೆಗಳಿಗೆ ತೆರೆದುಕೊಳ್ಳಲಿಲ್ಲ. ಕಾರಣ ಇಷ್ಟೆ - ಆ ಪತ್ರಿಕೆಗಳಲ್ಲಿ ವಿಭಿನ್ನ ದೃಷ್ಟಿಕೋನ, ಬಹುಮುಖಿ ಆಲೋಚನೆಯ ಮನಸ್ಸುಗಳಿಗೆ ಕೊರತೆ ಇತ್ತು. ಅವುಗಳಲ್ಲಿ ಕೆಲಸ ಮಾಡುವ ಬಹುತೇಕರು ಒಂದೇ ವರ್ಗಕ್ಕೆ ಸೀಮಿತವಾಗಿದ್ದರು. ಪ್ರಜಾವಾಣಿಯಲ್ಲಿಯುಊ ಆಯಕಟ್ಟಿನ ತಾಣಗಳಲ್ಲಿ ಅವರೇ ಇದ್ದರೂ, ಸಾಂಸ್ಥಿಕವಾಗಿ ಪತ್ರಿಕೆಗೆ ಬೇರೆಯದೇ ಚೌಕಟ್ಟು, ಶಿಸ್ತು ಸಿದ್ಧಿಸಿತ್ತು. ಆ ಕಾರಣ 'ದಲಿತರು ಬಂದರು ದಾರಿಬಿಡಿ' ಎಂಬಂತಹ ತಲೆಬರಹ ಮುಖಪುಟದಲ್ಲಿ ಕಾಣಲು ಸಾಧ್ಯವಾಯಿತು. ಕರ್ನಾಟಕ ಪತ್ರಿಕೋದ್ಯಮಕ್ಕೆ ಪ್ರಜಾವಾಣಿ ಸೇರ್ಪಡೆಗೊಳ್ಳದೇ ಹೋಗಿದ್ದರೆ, ಇಲ್ಲಿನ ಪತ್ರಿಕೋದ್ಯಮ ಇಂದಿಗೂ ಅಗ್ರಹಾರದ ಆಚೆಗೆ ಹಬ್ಬುತ್ತಿರಲಿಲ್ಲ.

10 comments:

Anonymous said...

ಸುದ್ದಿಮಾತಿನ ಗೆಳೆಯರಿಗೆ ನಮ್ಮ ಅಭಿನಂದನೆಗಳು. ಇಂಥ ಕೆಲವು ಮಂದಿ ಎಲ್ಲಾ ಕಚೇರಿಗಳಲ್ಲೂ ಇರುತ್ತಾರೆ, ವ್ಯಾಕರಣ ದೋಷ ಇರಬಾರದು ಅನ್ನೊದು ತಪ್ಪಲ್ಲ, ಆದರೆ ಒಬ್ಬ ಒಳ್ಳೇ ಬರಹಗಾರನನ್ನು ಹಳಿಯೋಕೆ, ಅವನನ್ನ ದಡ್ಡ ಅಂತ ನಿರೂಪಿಸೋಕೆ, ಕೆಲವು ಮಂದಿ ಈ ದರಿದ್ರ ಉಪಾಯ ಕಂಡುಕೊಂಡಿರುತ್ತಾರೆ, ಯಾರಾದರೂ ಒಳ್ಳೇದನ್ನು ಬರೆದರೆ ಅದನ್ನ ಹೊಗಳೋದರ ಬದಲು ಅಲ್ಲಿ ಕಾಮ, ಇಲ್ಲ. ಪುಲ್ ಸ್ಚಾಪ್ ಇಲ್ಲ, ಮಹಾಪ್ರಾಣ ಇಲ್ಲ ಅಂತಾ ಅವಮಾನಿಸೋದು ಕೆಲವರ ಐಡಿಯಾ..
ಆದರೆ ತಪ್ಪನ್ನ ತಿದ್ದುವ ಬದಲು, ವರದಿಗಾರರನ್ನು ಭಯಕ್ಕೆ ,ಅಪಮಾನಕ್ಕೆ ಒಳಪಡಿಸೋದನ್ನ ಕೆಲವರು ಮಾಡುತ್ತಾರೆ, ವರದಿಗಾರನಿಗೆ ವ್ಯಾಕರಣ ತಿದ್ದಿ ತೀಡಕ್ಕೆ ಸಮಯ ಇರಲ್ಲ, ಕಾಫಿ ಎಡಿಟರ್ ಗಳು ಅದನ್ನ ಮಾಡಬೇಕು ಅನ್ನೊದು ಸರಿ.ಅಲ್ಲವಾ..
ನಂಗೆ ಗೆಳಯನೊಬ್ಬ ಹೇಳಿದ. ಪ್ರಜಾವಾಣಿಯ ದಂಡಾವತಿಗೆ ತನಗೆ ಬರೇಯೋಕೆ ಬರದೇ ಹೋದರೂ ಮತ್ತೊಬ್ಬರ ಗ್ರಾಮರ್ ತಪ್ಪನ್ನ ಎಲ್ಲಾರಿಗೂ ತೋರಿಸಿ ಹಂಗಿಸುತ್ತಾನಂತೆ, ಅವಮಾನಿಸುತ್ತಾನಂತೆ.ಅಷ್ಟೇ ಏಕೆ ನೀವು ಬದುಕಿದ್ದೇ ದುರಾದೃಷ್ಟ ಅಂತಾನಂತೆ.
ಸಾಮಾನ್ಯವಾಗಿ ಸ್ವಲ್ಪ ಉಡಾಪೆ ಸ್ವಾಭಾವದ ಜಾಣರು ಗ್ರಾಮರ್ ಬಗ್ಗೆ ಕೇರ್ ಮಾಡೋಲ್ಲ, ಅದೇ ಬರೆಯಕ್ಕೆ ಬರದ ದಡ್ಡರು ಗ್ರಾಮರ್ ಅನ್ನ ಅಸ್ತ್ರವನ್ನಾಗಿ ಮಾಡಿಕೊಂಡಿರುತ್ತಾರೆ. ಅವರಿಗೆ ನಮ್ಮ ಕಡೆಯಿಂದ ದಿಕ್ಕಾರ.
ಎಸ್.ಗೌಡ. ನರಸಾಪುರ.

Anonymous said...

Sariyagi hELidIri.

Anonymous said...

ಮಿತ್ರರೇ,ಒಳ್ಳೇ ಸಂಗತಿಯನ್ನು ಚರ್ಚೆಗೆ ಎತ್ತಿಕೊಂಡಿರಿ. ಕೆಲವು ಕಚೇರಿಗಳಲ್ಲಿ ಕೇಶೀರಾಜನಿಲ್ಲ. ಸಮಾಧಾನಪಟ್ಟುಕೊಳ್ಳಬೇಡಿ. ಅಲ್ಲಿ ಪಾಣಿನಿ ಪದ್ಮಾಸನ ಹಾಕಿ ಕೂತಿದ್ದಾನೆ.

test said...

'ಅವರ' ಮೇಲೆ ಗೂಬೆ ಕೂರಿಸಲು ಸಿಕ್ಕಸಿಕ್ಕ ಚಾನ್ಸುಗಳನ್ನೆಲ್ಲ ಉಪಯೋಗಿಸಿಕೊಳ್ತಿರೋ ನಿಮ್ಮ ಕೊಳೆತ ಬುದ್ಧಿಗೆ ದೂರದಿಂದಲೇ ಒಂದು ನಮಸ್ಕಾರ!

Anonymous said...

aadre prajavaniyoo eega agrahara agiruvudu... sojiga...

parasurama kalal said...

raಶಬ್ದ ಬ್ರಹ್ಮನ ಶಿರ ಹೊಯಿತು ಎನ್ನುವಂತೆ ಕೇಶಿರಾಜರ ಹಾವಳಿಯಿಂದ ಒಬ್ಬ ಪತ್ರಕರ್ತ ಕೊನೆಗೂ ಜಾಹಿರಾತು ಪ್ರಪಂಚಕ್ಕೆ ಕಾಯಂ ಆಗಿ ಅಟ್ಟಿದ ಒಂದು ಪ್ರಕರಣ ನೆನಪಿಗೆ ಬರುತ್ತದೆ. ಅವರ ಹೆಸರು ಶಿವಕುಮಾರ್‍ ಭೋಜಶೆಟ್ಟಿ. ಈ ಭೋಜಶೆಟ್ಟಿಯ ವರದಿಗಳು ಸಂಯುಕ್ತ ಕರ್ನಾಟಕದಲ್ಲಿ ಮುಖಪುಟದಲ್ಲಿ ರಾಜರಾಜಿಸುತ್ತಿದ್ದ ಒಂದು ಕಾಲವಿತ್ತು. ಇದರಿಂದ ತೀವ್ರ ಅಸಹನೆಗೊಂಡ ಒಂದು ವರ್ಗ ಭೋಜಶೆಟ್ಟಿ ಬಳಸುವ ಭಾಷೆಯಲ್ಲಿ ತಪ್ಪುಗಳನ್ನು ಹುಡುಕಿ 'ಮಂಗ್ಯಾನ ಬಾಲ'
ಯಾ ಒತ್ತಕ್ಷರಕ್ಕೆ ಉತ್ತರ ಕರ್ನಾಟಕದಲ್ಲಿ ಕರೆಯುವ ರೀತಿ ಇದು.
ಅದನ್ನೇ 'ಅಯ್ಯೋ ಬೆಂಗಳೂರಲ್ಲಿ ' ಬರೆಸಿ, ಆತನನ್ನು ಜರೆಯಲಾಯಿತು. ವಿಜಯ ಕರ್ನಾಟಕಕ್ಕೂ ಹೋದರೂ ಅಲ್ಲೂ ಜಾಹಿರಾತಿಗೆ ಬಳಕೆಯಾಗಿ ಅಲ್ಲಿಂದ ಪುನಃ ಸಂಯುಕ್ತ ಕರ್ನಾಟಕಕ್ಕೆ ಹೋದರೂ ಅಲ್ಲೂ ಜಾಹಿರಾತಿಗೆ ಮೀಸಲಾಗುವಂತೆ ನೋಡಿಕೊಂಡರು. ಪತ್ರಕರ್ತನೊಬ್ಬನನ್ನು ಭಾಷೆ ಶುದ್ಧಿಯ ಹಸರಲ್ಲಿ ಜಾಹಿರಾತಿಗೆ ಅಟ್ಟಿದ ಪರಿ ಇದು.
- ಪರಶುರಾಮ ಕಲಾಲ್

Anonymous said...

Journalists first work for giving news forget about the mistakes, mistakes are ought to happen in dailies not in weeklies or monthlies.

Anonymous said...

tappu mAdadavar yAravre, tappe mAdadavar ellavre..

Anonymous said...

Right is wrong
You should respect ವ್ಯಾಕರಣ (and not BHakshana Vedike).

I strongly condemn those people who torture reporters for small mistakes.
BUt, mistakes should be avoided.
Making ವ್ಯಾಕರಣ mistakes is wrong and its not alright.

Anonymous said...

Debate about
giving all details of rape victims, juvenile cases etc in news reports.
VK do everyday.