Saturday, October 18, 2008

ಕನ್ನಡ ಪತ್ರಿಕೆಗಳಲ್ಲಿ ಏಕೆ ಹೀಗೆ?

ಮಹಿಳೆಯರನ್ನು ಸಹೋದ್ಯೋಗಿಯನ್ನಾಗಿಯೋ, ತಮ್ಮ ಸೀನಿಯರ್ ಎಂದಾಗಿಯೋ ಒಪ್ಪಿಕೊಳ್ಳುವ ಮನಸುಗಳು ಕನ್ನಡ ಪತ್ರಿಕೋದ್ಯಮದಲ್ಲಿ ಕಡಿಮೆ ಎನ್ನುವುದಂತೂ ಸತ್ಯ. ಆದರೆ, ಎಲ್ಲಾ ಕನ್ನಡ ಪತ್ರಿಕೆಗಳು ರಾಜಕಾರಣದಲ್ಲಿ ಮಹಿಳೆಯರಿಗೆ ಮೀಸಲಾತಿ ಎಂದಾಗ ಮಹಿಳಾ ಪರ ನಿಲ್ಲುತ್ತವೆ.


ಏಕೆ ಹೀಗೆ? ಕನ್ನಡ ಪತ್ರಿಕೆಗಳಲ್ಲಿ ದುಡಿಯುತ್ತಿರುವ ಮಹಿಳೆಯರನ್ನೆಲ್ಲ ಒಂದೆಡೆ ಸೇರಿಸಿದರೆ, ಅವರ ಸಂಖ್ಯೆ ೫೦ ದಾಟಲಾರದು. ಅದರಲ್ಲೂ ಪ್ರಜಾವಾಣಿಯರವರದೇ ಮೇಲುಗೈ. ಪ್ರಜಾವಾಣಿಯಲ್ಲಿ ಕನಿಷ್ಠ ೨೦ ಮಹಿಳೆಯರಿದ್ದಾರೆ. ವಿವಿಧ ಆವೃತ್ತಿಗಳಲ್ಲಿ ಇನ್ನಷ್ಟು ಮಂದಿ ಇರಬಹುದು.
ಆದರೆ ಇತರೆ ಕನ್ನಡ ಪತ್ರಿಕೆಗಳಲ್ಲಿ ಅವರ ಸಂಖ್ಯೆ ತೀರಾ ಕಡಿಮೆ. ಕನ್ನಡಪ್ರಭದಲ್ಲಿ ದುರ್ಬೀನು ಹಾಕಿ ಹುಡುಕಿದರೂ ಕಣ್ಣಿಗೆ ಬೀಳುವವರು ಇಬ್ಬರು ಮಾತ್ರ. ಒಬ್ಬರು ಯಶೋದಾ ಮತ್ತೊಬ್ಬರು ವಿದ್ಯಾರಶ್ಮಿ. ವಿಶೇಷ ಪುರವಣಿಗಳಲ್ಲಿ ಆಗಾಗ ಇವರ ಹೆಸರು ಕಾಣುವುದರಿಂದ ಇವರಿಬ್ಬರು ಆ ಪತ್ರಿಕೆಗೆ ದುಡಿಯುತ್ತಾರೆ ಎಂದು ತಿಳಿಯುತ್ತದೆ.
ಉದಯವಾಣಿ ಪತ್ರಿಕೆ ಸಂಪಾದಕರು ಡಾ. ಆರ್ ಪೂರ್ಣಿಮಾ. ಮಹಿಳಾ ಪರ ಆಲೋಚನೆಗಳಿರುವವರು. ಅವರ ಪತ್ರಿಕೆಯಲ್ಲಿ ಅವರನ್ನು ಹೊರತು ಪಡಿಸಿ ವರದಿಗಾರ್ತಿ ಯಶೋದಾ ಇದ್ದಾರೆ. ಅಲ್ಲದೆ ಒಬ್ಬರೇ ಒಬ್ಬರು ಉಪಸಂಪಾದಕರಿದ್ದಾರೆ ಎನ್ನುವ ಮಾಹಿತಿ ಇದೆ. ಇನ್ನು ವಿಜಯಕರ್ನಾಟಕ. ಇಲ್ಲಿ ವರದಿಗಾರರ ಪಟ್ಟಿಯಲ್ಲಿ ಕಾಣುವುದು ಇತ್ತೀಚೆಗೆ ಸೇರಿಕೊಂಡ ಸುಮನಾ ಲಕ್ಷ್ಮೀಶ್ ಮಾತ್ರ. ಕೆಲವರು ಉಪಸಂಪಾದಕರಿರಬಹುದು. ಆದರೆ ಅವರ ಸಂಖ್ಯೆ ಹತ್ತನ್ನು ದಾಟಲಾರದು ಎಂದು ಮುಲಾಜಿಲ್ಲದೆ ಹೇಳಬಹುದು.
ಸಂಯುಕ್ತ ಕರ್ನಾಟಕದಲ್ಲಿರುವಂತೆ ಕಾಣುವವರು ಕೇವಲ ಇಬ್ಬರು. ಒಬ್ಬರು ಕೆಲವು ದಿನಗಳ ಮಟ್ಟಿಗೆ ಮುಖ್ಯ ವರದಿಗಾರ್ತಿಯಾಗಿದ್ದ ಶಾಂತಲಾ ಧರ್ಮರಾಜ್ ಮತ್ತು ಸಿನಿಮಾ ಪತ್ರಕರ್ತೆ ಸಾವಿತ್ರಿ. ಮತ್ತೊಂದು ಹೆಸರು ನೆನಪಾಗುವುದಿಲ್ಲ. ಇವರೆಲ್ಲರಿಗೂ ಹೋಲಿಸಿದರೆ, ಪ್ರಜಾವಾಣಿಯೇ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡಿದೆ ಎನ್ನಬಹುದು.
ಅನೇಕರಿಗೆ ಗೊತ್ತಿಲ್ಲದಿರಬಹುದು - ಮೊನ್ನೆ ಮೊನ್ನೆವರೆಗೆ ಸುಧಾ ವಾರಪತ್ರಿಕೆ ಸಹಾಯಕ ಸಂಪಾದಕರಾಗಿದ್ದ ಸಿ.ಜಿ ಮಂಜುಳಾ ಕರ್ನಾಟಕದ ಪ್ರಮುಖ ಪತ್ರಿಕೆಯೊಂದರ ಮೊದಲ ಜಿಲ್ಲಾ ವರದಿಗಾರ್ತಿ. ಪ್ರಜಾವಾಣಿ ಸಂಸ್ಥೆ ಅವರನ್ನು ಚಿಕ್ಕಮಗಳೂರಿನ ಜಿಲ್ಲಾ ವರದಿಗಾರರನ್ನಾಗಿ ನೇಮಿಸಿ ಇತಿಹಾಸ ಸೃಷ್ಟಿಸಿತ್ತು. ಆ ನಂತರ ಈ ನಿಟ್ಟಿನಲ್ಲಿ ಅಂತಹ ಪ್ರಗತಿ ಕಾಣಲಿಲ್ಲ. ನಂತರದ ದಿನಗಳಲ್ಲಿ ಹೀಗೆ ಜಿಲ್ಲಾ ವರದಿಗಾರರಾಗಿ ದುಡಿದ ಇನ್ನೊಬ್ಬ ಮಹಿಳೆ ನೀಲಾ ಗೌಡ. ಅವರೂ ಚಿಕ್ಕಮಗಳೂರು ಜಿಲ್ಲಾ ವರದಿಗಾರರಾಗಿದ್ದರು. ಆರ್. ಪೂರ್ಣಿಮಾ ಪ್ರಜಾವಾಣಿಯಲ್ಲಿದ್ದಾಗ ಮಂಗಳೂರು ಆವೃತ್ತಿ ಮುಖ್ಯಸ್ಥರಾಗಿದ್ದರು. ಇತರೆ ಪತ್ರಿಕೆಗಳು ಜಿಲ್ಲಾ ವರದಿಗಾರರನ್ನಾಗಿ ಮಹಿಳೆಯರನ್ನು ನೇಮಕ ಮಾಡಿದ ಉದಾಹರಣೆಗಳು ತಕ್ಷಣಕ್ಕೆ ನೆನಪಾಗುತ್ತಿಲ್ಲ. ೬೧ ವರ್ಷ ಇತಿಹಾಸ ಇರುವ ಪ್ರಜಾವಾಣಿ, ೭೫ರ ಅಂಚು ದಾಟಿರುವ ಸಂಯುಕ್ತ ಕರ್ನಾಟಕ, ೫೦ರ ಹತ್ತಿರಕ್ಕೆ ನಡೆಯುತ್ತಿರುವ ಕನ್ನಡ ಪ್ರಭ ಪತ್ರಿಕೆಗಳ ಸಂಪಾದಕರಾಗಿ ಇದುವರೆಗೂ ಯಾವೊಬ್ಬ ಮಹಿಳೆಯೂ ಕೆಲಸನಿರ್ವಹಿಸಿಲ್ಲ.
ಅದೇ ಆಂಗ್ಲ ದಿನಪತ್ರಿಕೆಗಳಲ್ಲಿ ಈ ಪರಿಸ್ಥಿತಿ ಇಲ್ಲ. ಪ್ರಮುಖ ಪತ್ರಿಕೆ ದಿ ಹಿಂದು ಕರ್ನಾಟಕ ಆವೃತ್ತಿ ಮುಖ್ಯಸ್ಥರು ಪಾರ್ವತಿ ಮೆನನ್. ಡೆಕ್ಕನ್ ಕ್ರಾನಿಕಲ್ ರೆಸಿಡೆಂಟ್ ಎಡಿಟರ್ (ಬೆಂಗಳೂರು) ನೀನಾ ಗೋಪಾಲ್. ಟೈಮ್ಸ್ ಆಫ್ ಇಂಡಿಯಾ ಚೀಫ್ ಆಫ್ ಪೊಲಿಟಿಕಲ್ ಬ್ಯೂರೋ ನಾಹಿದಾ ಅತಾವುಲ್ಲಾ. ಕುಶಾಲಾ ಮುಖ್ಯ ವರದಿಗಾರ್ತಿ. ಡೆಕ್ಕನ್ ಹೆರಾಲ್ಡ್ ಮುಖ್ಯ ವರದಿಗಾರ್ತಿ ಆಶಾ ಕೃಷ್ಣಸ್ವಾಮಿ. ಹೀಗೆ ಪಟ್ಟಿ ಬೆಳೆಯುತ್ತದೆ. ವರದಿಗಾರರಾಗಿ, ಉಪಸಂಪಾದಕರಾಗಿ ಅನೇಕ ಮಹಿಳೆಯರು ಆಂಗ್ಲ ಪತ್ರಿಕೆಗಳಲ್ಲಿದ್ದಾರೆ.
ಕನ್ನಡ ಪತ್ರಿಕೆಗಳು ಮಹಿಳೆಯರಿಗೆ ಸಾಕಷ್ಟು ಅವಕಾಶಗಳನ್ನು ನೀಡದಿರಲು ಕೆಲವು ಕಾರಣಗಳು ಅಲ್ಲಲ್ಲಿ ಕೇಳಿ ಬಂದವು. ಒಂದು ಕಾರಣವೆಂದರೆ, ರಾತ್ರಿ ಪಾಳಿ ನಂತರ ವಾಹನ ಸೌಲಭ್ಯ ಇಲ್ಲದಿರುವುದು. ಪುರುಷರಾದರೆ ಹೇಗೋ ಮನೆ ಸೇರಿಕೊಳ್ತಾರೆ. ಮಹಿಳೆಯರದೇ ಕಷ್ಟ. ಅಚ್ಚರಿ ಅಂದರೆ ಇದೇ. ಇಡೀ ಊರಿನ ಅವ್ಯವಸ್ಥೆ ಬಗ್ಗೆ ಮಾತನಾಡುವ ಪತ್ರಿಕೆಗಳು ತಮ್ಮ ಸಂಸ್ಥೆಗಾಗಿ ದುಡಿಯುವವರಿಗ ರಾತ್ರಿ ವಾಹನ ವ್ಯವಸ್ಥೆ ಮಾಡುವುದಿಲ್ಲ ಎಂದರೆ?
ಈ ಕಾರಣ ಕೇವಲ ನೆಪ. ಮಹಿಳೆಯರನ್ನು ಸಹೋದ್ಯೋಗಿಯನ್ನಾಗಿಯೋ, ತಮ್ಮ ಸೀನಿಯರ್ ಎಂದಾಗಿಯೋ ಒಪ್ಪಿಕೊಳ್ಳುವ ಮನಸುಗಳು ಕನ್ನಡ ಪತ್ರಿಕೋದ್ಯಮದಲ್ಲಿ ಕಡಿಮೆ ಎನ್ನುವುದಂತೂ ಸತ್ಯ. ಆದರೆ, ಎಲ್ಲಾ ಕನ್ನಡ ಪತ್ರಿಕೆಗಳು ರಾಜಕಾರಣದಲ್ಲಿ ಮಹಿಳೆಯರಿಗೆ ಮೀಸಲಾತಿ ಎಂದಾಗ ಮಹಿಳಾ ಪರ ನಿಲ್ಲುತ್ತವೆ. ಏಕೆ ಈ ದ್ವಂದ್ವ?

8 comments:

Anonymous said...

Once again my heart-felt congratulations to you all, the former-journalists. But, the tragedy is that you seem so immetured and no-different that of the funadamentalists. You can use decent language to express your anguish against such people. But, in a hurry to unfold your concern you are ignoring the way of expressing things in a better way. For your kind information I too worked in print media for two years. Waht i learnt is to put things in a good ways. If we use such a language there will be no different for those who exchage bad language on streets. Its not my fault if my words sound too undigestable for you. I liked the conetent in the blog not the way you put thoe on the web. (Not all the news stories but a few. I dont even want that to be repeated in Sudimaatu.)If you find it worth do make some changes....Govindraaj

Anonymous said...

The stories in the Suddimaatu mirror my mind in many ways as far as the matters are concerned. Media is not giving opportunities to all irrespective of thier caste, community and gender. You can even go deep into these things as you have discusses about the women-journos. govindraaj

Anonymous said...

good one.

Anonymous said...

ಇದೇ ಮಂಜುಳಾ ಅವರ ತಂಗಿ ಬಿಜಾಪುರ ಜಿಲ್ಲಾ ವರದಿಗಾರ್ತಿಯಗಿ ಕೆಲಸ ಮಾಡಿದ್ದರು. ಅಲ್ಲವೆ?

Anonymous said...

ಇದೇ ಮಂಜುಳಾ ಅವರ ತಂಗಿ, ಮಂದಾಕಿನಿಯವರು ಪ್ರಜಾವಾಣಿಯ ಬಿಜಾಪುರ ಜಿಲ್ಲಾ ವರದಿಗಾರ್ತಿಯಗಿ ಕೆಲಸ ಮಾಡಿದ್ದರು. ಅಲ್ಲವೆ?

Anonymous said...

For you kind infomation. KUSUMA SHANBHA is the first women Reporter. Ple make this correction

Anonymous said...

Man, it was C.G.Manjula who first worked as a female staffer from a district. it was in late 80s. Then Kusuma Shanabag worked from Mandya in early 90s. both did reported for Deccan Herarld and Prjavani. They really did commendable job.

Anonymous said...

ಕನ್ನಡ ಪತ್ರಿಕಗಳಲ್ಲಿ ಹೀಗೇಕೆ ಎಂಬ ಅಕ್ಟೋಬರ್ 18ರ ಲೇಖನದಲ್ಲಿ ಮಂಜುಳ ಪ್ರಮುಖ ಪತ್ರಿಕೆಯ ಮೊದಲ ಜಿಲ್ಲಾ ವರದಿಗಾರ್ತಿ ಅನ್ನುವ ರೀತಿಯಲ್ಲಿ ವರದಿ ಪ್ರಕಟವಾಗಿದೆ.ಆದರೆ ಹಲವು ವರ್ಷಗಳ ಹಿಂದೆ ಕುಸುಮಾ ಶಾನ್ಾಭಾಗ್ ಪ್ರಜಾವಾಣಿಯ ಮಂಡ್ಯ ಜಿಲ್ಲಾ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದರು.ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಹಂತಕರಾದ ಶಿವರಾಸನ್ ಮತ್ತು ತಂಡ ಮುತ್ತತ್ತಿಯಲ್ಲಿ ತಲೆಮರೆಸಿಕೊಂಡಿದ್ದಾರೆ ಎಂಬ ಸುದ್ದಿ ತಿಳಿದು ರಾತ್ರೋರಾತ್ರಿ ಎಕಾಂಗಿಯಾಗ ಮುತ್ತತ್ತಿ ಕಾಡಿಗೆ ಹೋಗಿ ವರದಿ ಮಾಡಿದ್ದರು.ಆನಂತರ ಈ ವಿಷಯ ಪೊಲೀಸರಿಗೆ ತಿಳಿದಿತ್ತು.ಮತ್ತೊಂದು ಮಾಹಿತಿ ಎಂದರೆ ಕುಸುಮಾ ಶಾನ್್ಭಾಗ್ ,ಹುಲಿಯ ಹಾಲಿನ ಮೇವು ಮತ್ತಿತರ ಕಾದಂಬರಿಗಳನ್ನು ಬರೆದ ಕನ್ನಡದ ಪ್ರಸಿದ್ದ ಸಾಹಿತಿ ಭಾರತೀಸುತರ ಪುತ್ರಿ.ಮಂದಾಕಿನಿ ಕೂಡ ಹಲವು ಜಿಲ್ಲೆಗಳಲ್ಲಿ ಪರದಿಗಾರರಾಗಿ ಕೆಲಸಮಾಡಿದ್ದರು.ವಾಸ್ತವವಾಗಿ ಪತ್ರಿಕೋದ್ಯಮದಲ್ಲಿರುವ ಮಹಿಳೆಯರು ನೀವು ಅಪೇಕ್ಷಿಸಿದ ಈ ಕಾರ್ಯಕ್ಕೆ ಹಿಂಜರಿಯುತ್ತಾರೆ.ಆದರೆ ಪ್ರಜಾವಾಣಿಯ ಮಾಯೂರಿಗಳು,ಸುಧೆಯರು ಈ ವಿಷಯದಲ್ಲಿ ವಿಭಿನ್ನ.