Friday, October 31, 2008

ಪ್ರಚಾರ ಕೊಟ್ಟರೆ ಪ್ರಶಸ್ತಿ!

ಕನರ್ಾಟಕ ಸರಕಾರ ಏಳು ಮಂದಿ ಪತ್ರಕರ್ತರನ್ನು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ. ವಿವಿಧ ರೀತಿಯಲ್ಲಿ ಬಿಜೆಪಿ ಪಕ್ಷಕ್ಕೆ ಸಹಾಯ ಮಾಡಿದ ಅನೇಕರು ಈ ಪಟ್ಟಿಯಲ್ಲಿದ್ದಾರೆ. ಪಟ್ಟಿಯಲ್ಲಿ ಮೊದಲಿಗರು - ಪದ್ಮರಾಜ ದಂಡಾವತಿ. ಪ್ರಜಾವಾಣಿ ಸಹ ಸಂಪಾದಕರು. ಆರ್.ಪಿ ಜಗದೀಶ್ ನಂತರ ಪ್ರಜಾವಾಣಿಯನ್ನು ಬಿಜೆಪಿವಾಣಿಯನ್ನಾಗಿ ಪರಿವತರ್ಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಇತ್ತೀಚೆಗೆ ಬಿಜೆಪಿ ತನ್ನ ಕಾರ್ಯಕರ್ತರಿಗಾಗಿ ನಡೆಸಿದ ವಿಶೇಷ ಪತ್ರಿಕಾ ಕಾರ್ಯಗಾರದಲ್ಲಿ "ರಾಜಕಾರಣಿಗಳು ಪತ್ರಿಕೆಗಳನ್ನು ಹೇಗೆ ಬಳಸಿಕೊಳ್ಳಬೇಕು" ಎಂಬುದರ ಬಗ್ಗೆ ಉಪನ್ಯಾಸ ಕೊಟ್ಟು ಬಂದವರು ಪದ್ಮರಾಜ ದಂಡಾವತಿ. ಅವರ ಉಪನ್ಯಾಸಕ್ಕೆ ಪುಟ್ಟ ಸಂಭಾವನೆ - ಒಂದು ಲಕ್ಷ ರೂ ನಗದು ಹಾಗೂ 20 ಗ್ರಾಂ ಚಿನ್ನ. ಅಥರ್ಾತ್ ರಾಜ್ಯೋತ್ಸವ ಪ್ರಶಸ್ತಿ!ಇನ್ನು ರವಿ ಬೆಳಗೆರೆ. ಬಳ್ಳಾರಿ ರೆಡ್ಡಿಪಟಾಲಂಗೆ ಆಪ್ತ. ತಾನು ಪತ್ರಕರ್ತ ಎನ್ನುವುದನ್ನೂ ಮರೆತು ಕೋಮುವಾದಿ ಪಕ್ಷ ಬಿಜೆಪಿಗೆ ಮತ ನೀಡಿ ಎಂದು ಬಳ್ಳಾರಿಯಲ್ಲಿ ಪ್ರಚಾರ ಮಾಡಿದವರು. ಗಣಿ ಮಾಫಿಯಾ ಹಿನ್ನೆಲೆ ರಾಜಕಾರಣಿಗಳು ತಮ್ಮ ಗೆಳೆಯನ ಋಣ ತೀರಿಸಲು ತೀರಾ ರಾಜ್ಯೋತ್ಸವವನ್ನೂ ಕೊಡಿಸದಿದ್ದರೆ ತಪ್ಪಾಗುವುದಿಲ್ಲವೆ?ಬೇಸುನ ಮಲ್ಯ - ಆರ್.ಎಸ್.ಎಸ್ ಮುಖವಾಣಿ ವಿಕ್ರಮ ಸಂಪಾದಕರಾಗಿದ್ದವರು. ಬಿಜೆಪಿ ಅಧಿಕಾರಕ್ಕೆ ಬಂದಾಗಲಾದರೂ ವಿಕ್ರಮ ಸಂಪಾದಕರಿಗೆ ಮಣೆ ಹಾಕದಿದ್ದರೆ ಕೇಶವ ಕೃಪ ಸುಮ್ಮನಿದ್ದೀತೆ?ಕೆ.ಬಿ. ಗಣಪತಿ - ಮೈಸೂರು ಮಿತ್ರ ಹಾಗೂ ಸ್ಟಾರ್ ಆಫ್ ಮೈಸೂರು ಸಂಪಾದಕರು ಹಾಗೂ ಮಾಲೀಕರು. ಮೈಸೂರು ಭಾಗದಲ್ಲಿ ಸಂಘ ಪರಿವಾರದವರು ತಮ್ಮ ವಿಕ್ರಮ, ಅಸೀಮಾ, ಹೊಸದಿಗಂತದಂತಹ ಪತ್ರಿಕೆಗಳನ್ನು ಪ್ರಸರಣ ಮಾಡುವ ಅಗತ್ಯವೇ ಇಲ್ಲ. ಕಾರಣ ಆ ಪತ್ರಿಕೆಗಳ ಹೊಣೆಯನ್ನು ಮೈಸೂರು ಮಿತ್ರ ಯಶಸ್ವಿಯಾಗಿ ನಿಭಾಯಿಸುತ್ತಿದೆ. ಆ ಕಾರಣ ಅವರಿಗೂ ಒಂದು ರಾಜ್ಯೋತ್ಸವ.ಉಳಿದಂತೆ ಇಮ್ರಾನ್ ಖುರೇಶಿ, ಧಾರವಾಡದ ಕೃಷ್ಣಮೂತರ್ಿ ಹೆಗಡೆ, ಶಿವಮೊಗ್ಗದ ಚಂದ್ರಕಾಂತ್ ಇವರಿಗೆ ಪ್ರಶಸ್ತಿ ಲಭಿಸಿದೆ. ಇವರಿಗೆ ಯಾವ್ಯಾವ ಲಾಬಿಗಳು ಪ್ರಶಸ್ತಿ ಗಿಟ್ಟಿಸಿತೋ? ಅಥವಾ ಅವರೆಲ್ಲಾ ನಿಜ ಅರ್ಥದಲ್ಲಿ ಅರ್ಹರಾಗಿದ್ದರೆ ಸುದ್ದಿಮಾತು ಅಭಿನಂದನೆಗಳು. ಮತ್ತೊಂದು ಸಂಗತಿ: 89 ಮಂದಿ ಪಟ್ಟಿ ಮೇಲೆ ಹಾಗೇ ಕಣ್ಣಾಡಿಸಿ, ನಿಮಗೆ ಒಂದೂ ಕ್ರಿಶ್ಚಿಯನ್ ಹೆಸರು ಕಾಣುವುದಿಲ್ಲ. ಪ್ರಶಸ್ತಿಗಾಗಿ ಪರಿಗಣಿಸಿದ 24 ಕ್ಷೇತ್ರಗಳಲ್ಲಿ ಒಬ್ಬೇ ಒಬ್ಬ ಕ್ರಿಶ್ಚಿಯನ್ ಸಾಧಕರು ಕಾಣಲಿಲ್ಲವೇ ಸರಕಾರಕ್ಕೆ? ಅಥವಾ ಯಡಿಯೂರಪ್ಪ ನೇತೃತ್ವ ಸರಕಾರದ ಅಲ್ಪಸಂಖ್ಯಾತ ವಿರೋಧಿ ನೀತಿ ಪ್ರಶಸ್ತಿ ಆಯ್ಕೆಗೂ ಅನ್ವಯವಾಯಿತೆ?ಇತ್ತೀಚೆಗೆ ನಡೆದ ಚಚರ್್ಮೇಲಿನ ದಾಳಿಗಳನ್ನು "ಮತಾಂತರ ವಿರುದ್ಧ ಜನತೆ ತೋರಿದ ಪ್ರತಿಕ್ರಿಯೆ" ಎಂದು ಸಮಥರ್ಿಸಿಕೊಂಡ ಯಡಿಯೂರಪ್ಪನವರಿಂದ ಜಾತ್ಯತೀತ, ಧರ್ಮ ಸಮನ್ವಯ ಆಡಳಿತ ನಿರೀಕ್ಷಿಸುವುದೂ ತರವಲ್ಲವೇನೋ..ಅಂದಹಾಗೆ ಈ ಬಾರಿಯಿಂದ ಪ್ರಶಸ್ತಿ ಮೌಲ್ಯ ಹೆಚ್ಚಾಗಿದೆ. ಹಿಂದಿನ ವರ್ಷಗಳಲ್ಲಿ ಕೇವಲ ಹಣ ಅಥವಾ ಚಿನ್ನದ ಪದಕ ನೀಡುತ್ತಿದ್ದರು. ಈ ಬಾರಿ ಒಂದು ಲಕ್ಷ ರೂ ನಗದಿನೊಂದಿಗೆ 20 ಗ್ರಾಂ ಚಿನ್ನ ಕೂಡಾ ಲಭ್ಯ. ಮುಂದಿನ ವರ್ಷ ನಿಮಗೆ ಪ್ರಶಸ್ತಿ ಬೇಕೆಂದರೆ, ಈಗಿನಿಂದಲೇ ಪ್ರಯತ್ನಿಸಲು ಶುರು ಮಾಡಿ. ಲಾಬಿ ಜೋರಾಗಲಿದೆ.

18 comments:

Anonymous said...

I am ready to bet..this blog belongs to Congress mens or supporters......guys if you don't have guts to publish ur names....but simply want to condemn all the activities related BJP or hindutva ..they simply close this blog.As i previously told in one of the comments , you guys are one minded ....like Pratap simha of vijay karnataka.

if you want to write articles..write according to Media Philosophy otherwise stop this blog or dare to publish your names .....

ಶ್ರೀನಿವಾಸಗೌಡ said...

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಯಾವ ರೀತಿ ಪಡೆದುಕೊಳ್ಳಬಹುದು ಎಂಬ ಕುರಿತು ತನಿಖಾ ವರದಿ ಮಾಡಿ ಬ್ಲಾಗ್ ಮಾಡಿದ್ರೆ ಸರಿ ಅನ್ಸುತ್ತೆ. ಇಲ್ಲಾಂದ್ರೆ ಈ ವರೆಗೆ ಪ್ರಶಸ್ತಿ ಪಡೆದು ಬೀಗುತ್ತಿರುವವರ ಮೇಲೆಲ್ಲ ವಿಚಿತ್ರ ಅನುಮಾನ ಶುರುವಾಗುತ್ತಪ್ಪ... ಅರೆ ಇನ್ನೊಂದು ವಿಷಯ ನ್ಯಾಯವಾಗಿ ಸೇವೆ ಮಾಡಿ ಪ್ರಶಸ್ತಿ ಗಳಿಸಿದೋರ ಬಗ್ಗೆ ಈ ಭ್ಲಾಗ್ ಓದೋರಿಗೆಲ್ಲ ನಂಬಿಕೆ ಇದೆ ಅಂದ್ಕೋತೀನಿ...
ನಿಮ್ಮ ಬ್ಲಾಗ್ ಯಾವ ಪಕ್ಷಕ್ಕೆ ಸೇರಿದ್ದು ಎಂಬ ಕುರಿತು ಆಗಾಗ ಚರ್ಚೆ ನಡೀತಿದೆ ಹೌದು ನೀವು ಯಾವ ಪಕ್ಷ...?

Anonymous said...

ಯೋಸ್ನೆ ಮಾಡ್ಬೇಡ. ಮುಂದಿನ ವರ್ಸ ನಿಂಗೂ ಒಂದು ಪ್ರಸಸ್ತಿ ಕೋಡ್ಸಾಣಾ ಬುಡು. ವರ್ಸದ “ಕುಲಗೆಟ್ಟ ಪತ್ರಕರ್ತ” ಅಂತ

Anonymous said...

Adyaake aa Dandavathi avarannu ee paati peedisutiddeeri. Avaru naanu tilida mattige neevandu konda haagina jana alla. Prajavani annu yaavude mukhavaani maadalu ashtu sulabhavoo illa. Adu pakka bureaucracratic samsthe. In fact, Padmaraja Danadvathi, mattu avara hindina talemaarina R P Jagadish, Shridhara Achar, Shaileshchandra ivarugalella Mussourie Academy ge hogi IAS navarannu train maadaballashtu bureaucratic - idea galige bara iddavaru. Avaryaaru ideology ge daasaraagiddannu naakaane. R P Jagadish eno andarikee manchivaalu, lingayatarige innoo swalpa hechchu manchivaalu....inondu nenapidi. Dandavathi avarashtu arhate illada eshto mandi patrakartarige prashashti labhisiruvaaga avarige adu bandaddararalli vishesha enoo illa...eega bjp govt iddare adu kaakataaleeyavo eno. ee bhaariya prajavaani kotadalli avarige needalaagide anta naanaadaroo bhavisuttene....

Anonymous said...

allaa saamyore.....aa udayavaaniya mangalooru Manohar Prasad iyaadigaligellaa rajya prashasti bandirovaaga dandavathi avarige bandaddakke neevu Bjp ya jate gantu haakutteerallaa....

Anonymous said...

nimage diryaviddare hesaru prakatisi. illavadalli SHANDA patrakartha antha thilkobekaguthe...bereyavarannu doosisalu neevu barediruva lekhana chennagide... adare nimma Bhayakke navu besara paduthiddeve..neevu JDS or CONGRESSna vaktharane...

ಅನಿವಾಸಿ said...

ಮತ್ತೊಂದು ಸಂಗತಿ: 89 ಮಂದಿ ಪಟ್ಟಿ ಮೇಲೆ ಹಾಗೇ ಕಣ್ಣಾಡಿಸಿ, ನಿಮಗೆ ಒಂದೂ ಕ್ರಿಶ್ಚಿಯನ್ ಹೆಸರು ಕಾಣುವುದಿಲ್ಲ. ಪ್ರಶಸ್ತಿಗಾಗಿ ಪರಿಗಣಿಸಿದ 24 ಕ್ಷೇತ್ರಗಳಲ್ಲಿ ಒಬ್ಬೇ ಒಬ್ಬ ಕ್ರಿಶ್ಚಿಯನ್ ಸಾಧಕರು ಕಾಣಲಿಲ್ಲವೇ ಸರಕಾರಕ್ಕೆ?

ಶಿಕ್ಷಣಕ್ಕೆ ಉತ್ತರ ಕನ್ನಡದ ಪ್ರೊ. ವಿ.ಬಿ.ಕುಟಿನೊ ಅವರಿಗೆ ಕೊಟ್ಟಿದ್ದಾರೆ, ಅವರು ಕ್ರಿಶ್ಚಿಯನ್ನರು ಇರಬಹುದು :) ಹಾಗೆ ನೋಡಿದರೆ, ಹೆಸರು ನೋಡಿ ಧರ್ಮ/ಜಾತಿ ಹೇಳುವುದು ಕಷ್ಟ ಮತ್ತು ತಪ್ಪು ಅಲ್ಲವೆ?

ಆದರೂ, ಪ್ರಶಸ್ತಿಗಳು politicise ಆಗುವುದು ಒಂದು ದುರಂತವೇ!

Anonymous said...

neevu heliddu noorakke noorarashtu nija. bengaloorina bahutheka patrakartharu yadiyurappa sarkaarada runadlli biddiddare...haagaagi sarakaarada virudda varadigle kaanuvudilla. ravibelegeyavarnthaha oorigella buddivaada heluva patrakartharu, raajyada raajakeeyavannu adhapathanakke kondoyda reddi sahodarara bennige nilluththare...vedikeglalli yadiyurappananthaha ayogya mukhya manthriya bagge indra chandra endu hogaluththare... kevala kelavarannu horathupadisidre beraroo itararannu teekisuva naithikathe kaledukondiddare.modalu pathrakartharu raajakaaranigla enjalige kaiyodduvudnnu nillisabeku .....

ajit said...

ಶಭಾಶ್ ಗಂಡಸರೆ,
ಮೆಚ್ಚಿದೆ ನಿಮ್ಮ ಬುದ್ಧೀನ. ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ ಜಾತಿ ಹುಡುಕಿದಿರಲ್ಲಾ, ನಿಮಗೆ ಸಿಗಬೇಕು ಕಣ್ರಯ್ಯ ಪ್ರಶಸ್ತಿ. ಯಾವ ನನ್ ಮಗನಿಗೆ ಈ ಥರ ಯೋಚಿಸೊ ತಾಕತ್ತಿದೆ? ಹಿಂದೊಂದ್ಸಲ ’ಅಗ್ನಿ’ ವಾರ ಪತ್ರಿಕೆಯಲ್ಲಿ
ಈ ಟಿ.ವಿ ಯ ’ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ಬರೀ ಬ್ರಾಹ್ಮಣರ ಮಕ್ಕಳೇ ಯಾಕೆ ಗೆಲ್ತಾರೆ ಅಂತ ಬರೆದಿದ್ದಾ ಯಾವನೋ. ಮಕ್ಕಳ ಹಾಡು ಕೇಳೊವಾಗ ಅವರ ಜಾತಿ ಯಾವುದು ಅಂತಾ ಯೋಚಿಸೋ ತಾಕತ್ತು..? ಶಭಾಶ್... ಹಂಗೆ ನೀವು ಕೂಡ ಪ್ರಶಸ್ತಿ ವಿಜೇತರ ಜಾತಿಯ ಮಾತು ಎತ್ತಿದೀರ. ನಮ್ಮಂಥ ಅಧಮರಿಗೆ ಈ ರೀತಿ ಯೋಚಿಸೊದಕ್ಕೆ ಯಾಕೆ ಬರೋದಿಲ್ವೋ ಗೊತ್ತಿಲ್ಲ... ಹೌದೂ, ನೀವು ಹೊಟ್ಟೆಗ್ ಏನ್ ತಿಂತೀರ?

Anonymous said...

ಹಲವಾರು ವರ್ಷಗಳಿಂದ ಪ್ರಶಸ್ತಿ ಅಪಮೌಲ್ಯ ಆಗ್ತಿದೆ ಕಣ್ರೀ..ಅದಿರ್ಲಿ..ಮುಂದೆ ಕಾಂಗ್ರೆಸ್ಸ್ ಸರ್ಕಾರ ಬಂದ ಮೇಲೆ ನಂಗಾ ನಾಚ್ ಇರ್ಲಿ ಅಂದ ಕಾರ್ನಾಡ್ ನ್ನು ಸಂಸ್ಕ್ರುತಿ ಮಂತ್ರಿ ಮಾಡಿ. ಹುಡುಗಿಯರ ಬೆನ್ನು ನೇವರಿಸುವ ರಸಿಕ ಜ್ನಾನಪೀಟಿಗೆ ಯಾವುದಾದರೂ ಪೋಸ್ಟ್ ಕೊಡಿಸಿ. ಅದಕ್ಕೆ ನಿಮ್ಮ ಬ್ಲಾಗ್ ಸಹಾಯ ಮಾಡಲಿ. ಅಂದ ಹಾಗೆ ಷಂಡ ನಕ್ಸಲರಿಗೂ ಶೌರ್ಯ ಪ್ರಶಸ್ತಿ ಕೊಡಿಸಿ...
-ಮಾದೇಶ

Anonymous said...

ನಿಜವಾಗಿಯೂ ನಿಮ್ಮ ಯೋಚನೆ ಸರಿಯಾಗಿದೆ. ಕೆಲವರ ವಿಚಾರ ಒತ್ತಟ್ಟಿಗಿರಲಿ. ಬ್ಲಾಕ್‌ಮೇಲ್‌ ಪತ್ರಕರ್ತ ರವಿ ಬೆಳಗೆರೆಗೆ ಪ್ರಶಸ್ತಿ ಕೊಟ್ಟಿರುವುದು ಗಣಿದಣಿಗಳ ಕೈವಾಡ ಇಲ್ಲ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಬಾಗೆಪಲ್ಲಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಾಯಿಕುಮಾರ್‌ಗೆ ಪ್ರಶಸ್ತಿ ಸಿಕ್ಕಿರುವುದು ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ. ಈ ವಿಚಾರದಲ್ಲಿ ಪ್ರತಿಪಕ್ಷಗಳಂತೆ ಕಾರ್ಯನಿರ್ವಹಿಸಬೇಕಾದ ಮಾಧ್ಯಮಗಳು ಸರ್ಕಾರದ ವಕ್ತಾರರಂತೆ ಸುದ್ದಿ ಪ್ರಸಾರ ಮಾಡುತ್ತಿರುವುದು ವಿಪರ್ಯಾಸವೇ.ಅಲ್ಲದೆ, ನಿಮ್ಮ ಬ್ಲಾಗ್‌ಗೆ ಪ್ರತಿಕ್ರಿಯೆ ನೀಡಿರುವ ಚಡ್ಡಿಗಳು, ಕಾಮಾಲೆ ರೋಗದವನಿಗೆ ಪ್ರಪಂಚವೆಲ್ಲ ಹಳದಿ ಎಂಬಂತೆ ನಿಮ್ಮ ಪಕ್ಷ ಯಾವುದು, ನೀವು ಪಕ್ಕಾ ಕಾಂಗ್ರೆಸಿಗರು ಎಂದು ಕೇಳಿರುವುದು ದುರಂತವೇ ಸರಿ.ಕೋಮುವಾದಿಗಳು ತಮ್ಮ ಲಿಂಗಾಯಿತ, ಬ್ರಾಹ್ಮಣರಿಗೆ ಮಾತ್ರ ಮಣೆ ಹಾಕುತ್ತವೆ ಅಂತ ಗೊತ್ತಿದ್ದೆ ಇಷ್ಟು ದಿನ ಜನ ದೂರ ಇಟ್ಟಿದ್ದರು. ಕುಮಾರಸ್ವಾಮಿ ಏನೋ ಮಾಡಬಾರದ ಮೋಸ ಮಾಡಿಬಿಟ್ಟರು ಅಂತ ಜನರಲ್ಲಿ ಗೋಗರೆದು ಅಧಿಕಾರ ಗಿಟ್ಟಿಸಿಕೊಂಡರು ಯಡಿಯೂರಪ್ಪ. ಏನಾದರೂ ಮಾಡಿ ೫ ವರ್ಷ ಪೂರ್ಣಗೊಳಿಸಬೇಕು ಎಂದು ಹಪಹಪಿಸುತ್ತಿರುವ ಅವರಿಗೆ ಉಪಚುನಾವಣೆ ಅವಸಾನದ ಕರೆಗಂಟೆಯಾಗಲಿ. ಜಾತ್ಯಾತೀತ ಪಕ್ಷಗಳು ಕನ್ನಡ ನಾಡಿನ ಚುಕ್ಕಾಣಿ ಹಿಡಿಯಲಿ.

Anonymous said...

DANDAVATHI BJP PARA ENNUVUDHAKKE SAKSHI 1-11-08 PRAJAVANI PAPER. CM YADIYURAPPA UPAVASA SATHYGRHA MADUTHARE ANTHA KANNADAKKE SHATRIYA STHANAMANA NIDIDHRU ANTHA MUKAPUTADHALLI BAREYALAGIDHE.

Anonymous said...

ravi belagere bagge helodenide? mooru bittonu urige doddonu antaralla hage bellary belegere. pakka dhandhe mado journlist andru tappalla.media listalli imran khurshi obba nijavad professional journalist. khurshige abhinandane. innu neev helid haage ulida mahanubhavarige award hege siktu ant kelodu tappu. namma champa maatu illi heli madisidangide. ivru prashasti padkondilla but hodkondidare. pracharkke prashsti story aatm vmrshege hacchide.

Anonymous said...

ನಿಜಕ್ಕೂ ನೀವು ಹೇಳಿದ್ದು ಅಪ್ಪಟ ಸತ್ಯ... ಆದರೆ ಜೀರ್ಣಿಸಿಕೊಳ್ಳಲು ಕೆಲವರಿಗೆ ಆಗೋದಿಲ್ಲ. ಹುಚ್ಚು ಅಭಿಮಾನ.ನನಗೆ ಕಳೆದ ಹಾಯ್‌ ಬೆಂಗಳೂರು ಪತ್ರಿಕೆಯ ಜನಾ-ದಿನಾ ಈ ಸುದ್ದಿ ನೋಡೇ ಅಂದುಕೊಂಡೆ ಬೆಳೆಗೆರೆ ಸಾಹೇಬ್ರು,, ಹಿಂಗ್ಯಾಕಾದರೂ ಅಂತಾ..ಇನ್ನಾದರೂ ಸರ್ಕಾರ ಅಲ್ಪಸಂಖ್ಯಾತರ ವಿರುದ್ಧ ನಡೆಸುತ್ತಿರುವ ಸಮರವನ್ನ ಕೊನೆಗಾಣಿಸಬೇಕು.........

Anonymous said...

ALLAPPA, NIMMANNU CONGRESH OR JDS ANNUVAVARU NIJAKKU BJP OR CHADDI JANA ANTHA PAKKA AYITHALLA!
ILLIVAREGU CHADDI ENDU HELIKOLLALU NACHIKE PADUTHIDDA VATHAVARANA ITTU.IGA PRASASTHI BERE KODUTHARE ENDHARE CHADDIGALU RAVIBILIGERE HAGE MURANNU BIDALU REDI IRUTHARE BIDI! NIMMANNU CONGRESH ENDU TIKISUVA BJP OR CHADDIGALU ONDU VISAYA ARIYABEKU, ADENEDARE E DESADALLI CONGRESIGARU ENISIKOLLUVUDU ITHIHASADA HINNELEYALLI HEMME VISAYA...! P.MANJUNATH

ವಿನಾಯಕ said...

ಮಂಜುನಾಥ ಅವರೆ,

ಕಾಂಗ್ರೆಸ್ ಗೆ ಯಾವ ಇತಿಹಾಸವಿದೆ? ಸ್ವತಂತ್ರ ಗಳಿಸಲು ಹೋರಾಡಿದ ಕಾಂಗ್ರೆಸ್ ಪಕ್ಷವೇ ಬೇರೆ ಈ ೫೦ ವರ್ಷ ನಮ್ಮ ದೇಶವನ್ನು ನುಂಗಿ ನೀರುಕುಡಿದ ಇದು ಇಂದಿರಾ ಕಾಂಗ್ರೆಸ್. ಪ್ರಶಸ್ತಿ ಸಿಕ್ಕ ೫-೬ ಜನ BJP ಬೆಂಬಲಿಗರಿದ್ದರೆ ಅದು ಅವರ ತಪ್ಪೇ? ಹಾಗಾದರೆ ಆಡಳಿತ ಬೆಂಬಲಿಗರಾಗಿದ್ದು ಅವರಲ್ಲಿ ಅರ್ಹತೆಗಳಿದ್ದರೆ ಅವರಿಗೆ ಪ್ರಶಸ್ತಿ ಕೊಡಬಾರದೇ? ಹಾಗಾದರೆ ಕಾಂಗ್ರೆಸ್ ಆಡಳಿತವಿದ್ದಾಗ ಪ್ರಶಸ್ತಿ ಗಿಟ್ಟಿಸಿಕೊಂಡವರಲ್ಲಿ ಎಶ್ಟು ಜನ ಕಾಂಗ್ರೆಸ್ ಬೆಂಬಲಿಗರಿದ್ದರು ಎಂದು ಯಾರಾದರೂ ಕೇಳಿದ್ದರೇ?
ಮಾತಿನಲ್ಲಿ ಜಾತ್ಯಾತೀತಿಗಳು ಎಂದು ಹೇಳಿಕೊಳ್ಳುವ ಒಬ್ಬರು ಕೇಳಿರುವ ಪ್ರಶ್ನೆ :

89 ಮಂದಿ ಪಟ್ಟಿ ಮೇಲೆ ಹಾಗೇ ಕಣ್ಣಾಡಿಸಿ, ನಿಮಗೆ ಒಂದೂ ಕ್ರಿಶ್ಚಿಯನ್ ಹೆಸರು ಕಾಣುವುದಿಲ್ಲ. ಪ್ರಶಸ್ತಿಗಾಗಿ ಪರಿಗಣಿಸಿದ 24 ಕ್ಷೇತ್ರಗಳಲ್ಲಿ ಒಬ್ಬೇ ಒಬ್ಬ ಕ್ರಿಶ್ಚಿಯನ್ ಸಾಧಕರು ಕಾಣಲಿಲ್ಲವೇ ಸರಕಾರಕ್ಕೆ?

ಈ ಪ್ರಶ್ನೆ ಕೇಳಿರುವ ನೀವೇ ಕೋಮುವಾದಿಗಳು ಎಂದು ಕಾಣುತ್ತಿದೆ. ಮುಂದಿನ ವರುಶದಿಂದ "ಅಲ್ಪಸಂಖ್ಯಾತರಿಗೆ ಏನಾದರು ಕೋಟಾ ಬೇಕಾ?"

Anonymous said...

rss navrige ptasasti nididare ennodu nimma aropa. edarlli satya iddirabhudu.. adu nijanu howdu.. ravi belageri prasasti nididdu tappu... bere bhase uttam krutigallanna batti iliso jananige rajyotsva sikkide.. adirali eke kristarige prasati nidbeku.. dharmavanneke illi eledu tandiddiri.. niuabekadre dharma eladu tandu uttam patrike annisskaobeku anno aturana

Anonymous said...

'Agni'Shreedhar once famously said that Ravi Belagere is Kothwal Ramachandra and Vishweshwara Bhat is M P Jayaraj of Kannada journalism! Above mentioned two mafia dons were thousand times better than these two pimps in the guise of editors.