Wednesday, November 5, 2008

ದೊಡ್ಡವರ ಸಣ್ಣತನ

ಮಂಗಳವಾರ ಬಿಜೆಪಿ ನಾಯಕ ಅಡ್ವಾನಿಯವರ ಆತ್ಮಕತೆ ಕನ್ನಡ ಅನುವಾದ ಬಿಡುಗಡೆಯಾಯಿತು. ಆತ್ಮಕತೆ ಕನ್ನಡ ಆವೃತಿ ಎಂದಾಕ್ಷಣ ವಿಜಯ ಕರ್ನಾಟಕ ಸಂಪಾದಕ ವಿಶ್ವೇಶ್ವರ ಭಟ್ ರೇ ಈ ಅನುವಾದ ಮಾಡಿರಬೇಕು ಎಂದು ಸುದ್ದಿ ಹಬ್ಬಿತು. ಅದು ನಿಜವೆಂಬುದನ್ನು ಅರಿಯಲು ತಡವಾಗಲಿಲ್ಲ. ಆದರೆ ವಿಜಯ ಕರ್ನಾಟಕ ಪತ್ರಕರ್ತರ ಬಳಗಕ್ಕೆ ಗೊತ್ತಿರುವ ಸಂಗತಿ ಎಂದರೆ - ಇಡೀ ಪುಸ್ತಕವನ್ನು ಅನುವಾದ ಮಾಡಿದವರು ಭಟ್ಟರೊಬ್ಬರೇ ಅಲ್ಲ.
ಹಿಂದಿನ ಕೆಲವು ಉದಾಹರಣೆಗಳಂತೆ, ಈ ಬಾರಿಯೂ ಅವರು, ಮೂಲಕೃತಿಯನ್ನು ವಿವಿಧ ಭಾಗಗಳನ್ನಾಗಿ ಹಂಚಿ ತಮ್ಮ ಶಿಷ್ಯೋತ್ತಮರಿಗೆ ಹಂಚಿದರು. ಪ್ರತಿಯೊಬ್ಬರು ಇಂತಿಷ್ಟು ಪುಟ ಅನುವಾದ ಮಾಡಿ ತರುವಂತೆ ಆದೇಶಿಸಿದರು. ಕೆಲವೇ ದಿನಗಳಲ್ಲಿ ಅನುವಾದ ಸಿದ್ಧವಾಯಿತು.

ಆ ನಂತರ ಭಟ್ಟರು ಒಮ್ಮೆ ಎಲ್ಲಾ ಪುಟಗಳ ಮೇಲೆ ಕಣ್ಣಾಡಿಸಿದರು. ಕೃತಿ ಪ್ರಕಟಣೆಗೆ ಸಿದ್ಧವಾಯಿತು. ಬಿಡುಗಡೆಯೂ ಆಯಿತು. ಆದರೆ ಅನುವಾದಕರೆಂದು ಭಟ್ಟರು ಮಾತ್ರ ವಿರಾಜಮಾನರಾದರು.
ದೊಡ್ಡ ಮಂದಿಯ ಸಣ್ಣತನ ಅಂದರೆ ಇದೇ ಅಲ್ಲವೆ?
ಈ ಹಿಂದೆ ಕುಲದೀಪ್ ನಯ್ಯರ್ 'ಸ್ಕೂಪ್' ಅಂಕಣ ಬರಹಗಳನ್ನು ಪುಸ್ತಕ ರೂಪವಾಗಿ ಪ್ರಜಾವಾಣಿ ಸಂಸ್ಥೆ ಪ್ರಕಟಿಸಿತು. ನಯ್ಯರ್ ಬರಹಗಳನ್ನು ಮೂಲಕ್ಕೆ ಧಕ್ಕೆ ಬರದಂತೆ ಬರೆದವರು ನಾಲ್ಕೈದು ಉಪಸಂಪಾದಕರು. ಆ ಅಂಕಣ ಜನಮನ ಸೆಳೆಯಲು ಅವರ ಪಾತ್ರ, ಶ್ರಮ ದೊಡ್ಡದಿತ್ತು. ಪುಸ್ತಕ ಪ್ರಕಟವಾದಾಗ ಅವರ ಹೆಸರುಗಳು ಎಲ್ಲಿಯೂ ನಮೂದಾಗಲಿಲ್ಲ. ಆ ಬರಹಗಳನ್ನು ಸಂಪಾದಿಸದರೆಂದು ಎಸ್. ದಿವಾಕರ್ ರ ಹೆಸರು ಅಚ್ಚಾಯಿತು. ಯಾಕೆ ಹೀಗೆ? ಅನುವಾದ ಉಪಸಂಪಾದಕರ ಕೆಲಸದ ಒಂದು ಭಾಗವೇ ಇರಬಹುದು. ಆದರೆ, ಅಂಕಣಗಳ ಅನುವಾದ ಅಷ್ಟು ಸುಲಭದ ಕೆಲಸವಲ್ಲ. ಸುದ್ದಿಯಂತೆ ಸರಾಗವಾಗಿ ಅನುವಾದ ಮಾಡಲಾಗದು. ಅಂಕಣಗಳ ಅನುವಾದ ಹೆಚ್ಚಿನ ಭಾಷಾ ಪ್ರೌಢಿಮೆ, ಶ್ರಮ ಬೇಡುತ್ತದೆ.
ಅಂತಹ ಬರಹಗಳು ಪತ್ರಿಕೆಯಲ್ಲಿ ಪ್ರಕಟವಾದಾಗಲಂತೂ ಅನುವಾದಕರು ಹೆಸರು ಎಲ್ಲೂ ಕಾಣುವುದಿಲ್ಲ. ಕಡೇ ಪಕ್ಷ ಬರಹಗಳು ಪುಸ್ತಕ ರೂಪದಲ್ಲಿ ಬಂದಾಗಲಾದರೂ ಅವರ ಕೆಲಸಕ್ಕೆ ಒಂದು ಮನ್ನಣೆ ಬೇಡವೆ?

16 comments:

Anonymous said...

veekaa bhattaru nda adhikarakke bandre rajyasabha memaber aagtarante. aasthan panditarige idondu putta kaanike ante. heli keli bhattaru purohitru allave? adakke kaanike sigade hodre bhramanar paapa tagalutte. bhattar sannatan torisi neevyake avar shaapakke eedagtira?!

Anonymous said...

ಇದು ಕನ್ನಡ ಪತ್ರಿಕೋದ್ಯಮದ ದೌರ್ಭಾಗ್ಯ. ರವಿ ಬೆಳಗೆರೆ ಅವರ ಬರಹಗಳನ್ನು ವಿಶ್ವೇಶ್ವರ ಭಟ್ಟರು ಅನುವಾದಿಸುತ್ತಾರೆ. ವಿಶ್ವೇಶ್ವರ ಭಟ್ಟರ ಅನುವಾದಗಳನ್ನು ಅವರ ಶಿಷ್ಯರು ಮಾಡುತ್ತಾರೆ.
ಇದೆಲ್ಲ ಯಾರಿಗೂ ಅರ್ಥವಾಗುವುದಿಲ್ಲ. ಎಲ್ಲರ ದೃಷ್ಟಿಯಲ್ಲೂ ಇವರು ದೊಡ್ಡ ಪತ್ರಿಕೋದ್ಯಮಿಗಳು ! ಇಂದಿನ ಬಹುತೇಕ ಸಂಪಾದಕರು ನಿಜವಾದ ಅರ್ಥದಲ್ಲಿ ಮಧ್ಯವರ್ತಿಗಳು. ಕಮಿಷನ್ ಎಜೆಂಟರು. ಇವರಿಂದ ಭೇರೆನು ನಿರೀಕ್ಷಿಸಲು ಸಾಧ್ಯ ?

Anonymous said...

ಇದು ನಿಜವಾಗಲೂ ಸಣ್ಣತನವೇ ಸರಿ. ಆದರೆ ಭಟ್ಟರನ್ನು ದೊಡ್ಡವರು ಎಂದು ಹೇಳಿದವರಾರು? ಇದಿಷ್ಟೇ ಅಲ್ಲ. ನಾವು ಟಿವಿ ಚಾನಲ್‌ಗಳಲ್ಲೂ ದಿನನಿತ್ಯ ಇಂತಹ ಸುದ್ದಿಗಳನ್ನು ಕೇಳುತ್ತೇವೆ ಅನುಭವಿಸುತ್ತಿದ್ದೇವೆ.ಇದು ಸುದ್ದಿಯಾಗುವುದುಲ್ಲ ಅಷ್ಟೇ. ಈಟಿವಿಯಲ್ಲಿ ಇರುವ ಕೆಲ ಹಳಸಲು ಮುಖಗಳ ‘ ಹಿರಿಯ ಪತ್ರಕರ್ತರು’ ಹೀಗೆ ಇತರೆ ವರದಿಗಾರರನ್ನು ಕಳಿಸಿ ಬೈಟ್‌ಗಳನ್ನು ತರಿಸಿಕೊಳ್ಳುತ್ತಾರೆ. ಕಛೇರಿಯಲ್ಲಿರುವ ಕಾಪಿ ಎಡಿಟರ್‌ಗಳನ್ನು ಸ್ಟೆನೋಗ್ರಾಫರ್‌ಗಳಂತೆ ಬಳಸಿಕೊಂಡು ತಮ್ಮ ಹೇಳಲಾಗಿದೆ ಮಾಡಲಾಗಿದೆ ಎನ್ನಲಾಗಿದೆ ಎಂಬ ‘ ಮುಊಲ ’ ಬಿಗಿ ಹಿಡಿಯುವ ಸುದ್ದಿಯನ್ನು ಟೈಪ್ ಮಾಡಿಸುತ್ತಾರೆ. ಆದರೆ ರಾತ್ರಿ ಹೆಡ್‌ಲೈನ್ ಸ್ಟೋರಿ ಬೈಲೈನ್ ಮಾತ್ರ ಈ ಹಳಸಲು ಮುಖಗಳಿಗೆ ಸಿದ್ಧವಾಗಿರುತ್ತೆ. ಇದು ಎಲ್ಲರಿಗೂ ಗೊತ್ತು .ಆದರೆ ಪಾಪ ಬಡಪಾಯಿ ವರದಿಗಾರ ಬೈಟ್ ತಂದವನು ತನ್ನ ‘ ಮುಊಲ ’ ಕೆರೆದೊಕೊಂಡು ಅವಕ್ಕಾಗಿರುತ್ತಾನೆ....

Anonymous said...

ಮಾಡಲಿ ಬಿಡಿ. ಕಿವಿ ಮೇಲೆ ಹೂ ಇಟ್ಟುಕೊಳ್ಳಲು ವಿಕದಲ್ಲಿನ ಭಟ್ಟರ ಶಿಷ್ಯರು ಸಿದ್ಧರಿರುವಾಗ ನಿಮಗೇಕೆ ತೊಂದರೆ? ವಿಜಯ ಸಂಕೇಶ್ವರ ಮತ್ತು ಟೈಮ್ಸ್‌ ಗ್ರೂಪ್‌ನ ಮಾಲೀಕರ ಕಿವಿಗೇ ಹೂ ಮುಡಿಸಿದವರಿಗೆ ಇದೇನ್ ಮಹಾ?

Rakesh S Joshi said...

ತುಂಬಾ ದಿನದಿಂದ ಸುದ್ದಿಮಾತಲ್ಲಿ, ನಾ ಕಂಡಂತೆ ವಿಕ ವನ್ನು, ಅದರ ಸಂಪಾದಕರನ್ನು, ಸಹೊದ್ಯೋಗಿಗಳನ್ನ ತೆಗಳುವದರಲ್ಲೆ ಇದೆ. ಭಟ್ಟರು ಹೀಗೆ ಮಾಡಿದ್ದಾರೆ ಅಂತ ಹೇಳಲು ಎನಾದರು ಪುರವೆ? ಹಾಗೆನಾದ್ರು ಮಾಡಿದ್ರು, ಅದರಲ್ಲಿ ತಪ್ಪೆನಿದೆ? ನಮ್ಮ ದೈನಂದಿನ ಜೀವನದಲ್ಲು ಎಷ್ಟೊ ಘಟಣೆಗಳು ಹೀಗೆ ಇರುತ್ತವೆ ಅಲ್ಲವೆ? Blood of soldier gives honor to the king.
ಆ honor ನಲ್ಲಿಯೆ soldier ಸಂತೋಷಪಡುತ್ತಾನೆ. ಅದೆ ಶಿಷ್ಯರು ನಾಳೆ ಇದೆ experience ಉಪಯೋಗಿಸಿ ಒಬ್ಬ ಒಳ್ಳೆಯ ಲೇಖಕರಾಗಬಹುದಲ್ವೆ? ನೀವು ಒಬ್ಬ ಪತ್ರಕರ್ತರು, ಇನ್ನೊಬ್ಬ ಪತ್ರಕರನ್ನ ತೆಗಳೊದು ನೊಡಿದ್ರೆ, ನೀವು ಅವರ ಬೆಳವಣಿಗೆ ನೊಡಿ ಹೊಟ್ಟೆಯುರಿ ಪಡ್ತಿದಿರೆನೊ ಅಂತ ಅನುಮಾನ ಬರುತ್ತೆ.
ಸುದ್ದಿಮಾತಲ್ಲಿ ಎಷ್ಟೊ ಒಳ್ಳೆ ಸುದ್ದಿ ಬರುತ್ತೆ. ಇದರಲ್ಲಿನ ಟೀಕೆಗಳು ಸಂತೊಷ ಕೊಡುತ್ತವೆ. ಆದರೆ ನಿಮ್ಮ ಟೀಕೆಗಳು ವಿಷಯಾದಾರಿತವಾಗಿದ್ದರೆ ತುಂಬಾ ಒಳ್ಳೆಯದು. ಹೀಗೆ ಕರಬುವಂತದಾಗಿದ್ರೆ ಬೇಸರವಗುತ್ತೆ. ಅಲ್ವೆ?

Anonymous said...

ರಾಕೇಶ್ ನಿಮ್ಮ ಬರೆಹ ನೋಡಿದರೆ ವಿ.ಕ.ದ ವಿ.ಭಟ್ಟರೇ ನಿಮ್ಮ ರೂಪದಲ್ಲಿ ಬಂದಂತೆ ಕಾಣಿಸುತ್ತಿದೆಯೆಲ್ಲಾ. ಭಟ್ಟರೇ ನಾವಿರುವುದು ಪ್ರಜಾಪ್ರಭುತ್ವ ಯುಗದಲ್ಲಿ. ಇಲ್ಲಿ ರಾಜನಿಗಾಗಿ ಯಾರೂ ರಕ್ತ ಕೊಡುವುದಿಲ್ಲ. ರಕ್ತ ಕೊಡಲೇಬೇಕಾಗಿ ಬಂದರೆ ಪ್ರಜೆಗಳೂ ರಾಜನೂ ಒಟ್ಟಿಗೇ ರಕ್ತ ಹರಿಸುತ್ತಾರೆ. ನೀವು ಬಳಸಿರುವ ಉಪಮೆ ಕೂಡಾ ರಾಜಾ ಪ್ರತ್ಯಕ್ಷ ದೇವತಾ ಎಂದು ಪ್ರತಿಪಾದಿಸಿದ ಮನುವಿನದ್ದೇ. ನೀವು ವಿ.ಭಟ್ಟರಲ್ಲದಿದ್ದರೂ ಮತ್ತಾವುದೋ ಭಟ್ಟರಾಗಿರುವುದಂತೂ ಖರೆ.
-ರಮೇಶ್ ಸಮಗಾರ

Anonymous said...

ವಿಶ್ವೇಶ್ವರ ಭಟ್ಟರ ಈ ಕೀರ್ತಿ ಲಾಲಸೆ ಬಹಳ ಹಿಂದೆಯೇ ಆರಂಭವಾಗಿದೆ. ಹಿಂದೆ ಯಾರೋ ಓದುಗರು ಕಳಿಸಿದ ಜೋಕ್ಸ್‌ಗಳನ್ನು ಕಲೆಹಾಕಿ ದೊಡ್ಡದಾಗಿ ತಮ್ಮ ಹೆಸರು ಹಾಕಿ ಪ್ರಕಟಿಸಿದರು ಭಟ್ಟರು. ಅಂತಹ ನಾಚಿಕೆಗೇಡಿ; ಉಪಸಂಪಾದಕರು ಅನುವಾದ ಮಾಡಿಕೊಟ್ಟದ್ದನ್ನು, ಕಿಂಚಿತ್‌ ಕೃತಜ್ಷತೆಯೂ ಇಲ್ಲದೇ ತನ್ನ ಹೆಸರು ಹಾಕಿದ್ದರಲ್ಲಿ ಆಶ್ಷರ್ಯ ಏನಿಲ್ಲ.ಕೆಲಸ ಉಳಿಸಿಕೊಳ್ಳುವ ಮತ್ತು ಮರ್ಯಾದೆಯಿಂದ ಬದಕಬೇಕೆಂಬ ಏಕೈಕ ಹಂಬಲದಿಂದ ೮೦-೯೦ ಪುಟಗಳನ್ನು ರಾತ್ರಿ ಹಗಲೆನ್ನದೇ ಅನುವಾದ ಮಾಡಿ ಕೊಟ್ಟ ಕಷ್ಟ ಆ ಉಪ ಸಂಪಾದಕರಿಗೇ ಗೊತ್ತು. ಆ ಶ್ರಮದ ಬಗ್ಗೆ ನನ್ನ ತಕರಾರಿಲ್ಲ. ಆದರೆ, ಅದು ಇಂತಹ ನೀಚನಿಗೋಸ್ಕರ ಆಯಿತಲ್ಲಾ ಅನ್ನುವುದೇ ಬೇಜಾರಿನ ಸಂಗತಿ. ನಾವು ಪತ್ರಿಕೋದ್ಯಮದಲ್ಲಿ ಆದರ್ಶ ಅಂದುಕೊಳ್ಳುವ ಹಲವರನ್ನು ನೋಡಿದ್ದೇವೆ. ಆದರೆ ಅನೈತಿಕ ಪತ್ರಿಕೋದ್ಯಮದಲ್ಲಿ ವಿಷ ಭಟ್ಟ, ಬೆಳೆಗೆರೆ ಅಗ್ರಗಣ್ಯರೆನಿಸುತ್ತಾರೆ.

Anonymous said...

ಜೀವನವೆಂದರೆ ಇತರರಿಗೆ ಮಾದರಿಯಾಗಬೇಕು.ಬರಹವೆಂದರೆ ಹತ್ತು ಜನರಿಗೆ ಉಪಕಾರವಾಗಬೇಕು.ಚರ್ಚೆಯೆಂದರೆ ಮಾಗಿದ ಹಣ್ಣಿನಂತಿರಬೇಕು ಎನ್ನುವ ಪಾಠವನ್ನು ಕೇಳಿದವರು ನಾವು. ಆದರೆ ನಿಮ್ಮ ಬ್ಲಾಗ್ ,ಕೆಲವು ಪತ್ರಿಕೆ , ಚಾನೆಲ್ ಗಳನ್ನೇ ಟಾರ್ಗೆಟ್ ಮಾಡಿದಂತಿದೆ.ಇದು ಆರೋಗ್ಯಕರವಂತೂ ಅಲ್ಲ. ಇಂದು ಸಮಾಜದಲ್ಲಿ ಒಳ್ಳೆಯವರಾರಿದ್ದಾರೆ. ಅಂತರಾತ್ಮವನ್ನು ಮೊದಲು ಕೇಳಿದರೆ ತಿಳಿಯುತ್ತೆ ನಾವೆಷ್ಟು ಸರಿಯಿದ್ದೇವೆ ಎಂದು. ಆ ಬಳಿಕ ಇತರರ ಬಗ್ಗೆ ನೋಡೋಣ.

ಗೌರೀಶಂಕರ ,ಬೂಕನೂರು

Anonymous said...

ಭಟ್ಟರ ಹಾಗೆ ಹಲವರಿದ್ದಾರೆ.. ಮಹಾ ಪ್ರಗತಿಪರ ಸಂತೋಷ ಕುಮಾರ ಗುಲ್ವಾಡಿ ಕಾಲ ಇದ್ದಾಗ ಉಪಸಂಪಾದಕರ ಲೇಖನಕ್ಕೆ ಅವರು ಸಹು ಹಾಕುತ್ತಿದ್ದರು..ಇದರಿಂದ ರೋಸಿ ಹೋಗಿ ತರಂಗ ಬಿಟ್ಟವರಿದ್ದಾರೆ...

Anonymous said...

ಇಲ್ಲಿನ ಎರಡು ಕಾಮೆಂಟ್‌ಗಳ ಬಗ್ಗೆ ರಿ ಕಾಮೆಂಟ್‌ ಮಾಡಬೇಕಿದೆ ನನಗೆ.
ಅನಾನಿಮಸ್ ಒಬ್ರು ಹೇಳಿದಾರೆ, " ರವಿ ಬೆಳಗೆರೆ ಅವರ ಬರಹಗಳನ್ನು ವಿಶ್ವೇಶ್ಡರ ಭಟ್ಟರು ಅನುವಾದಿಸುತ್ತಾರೆ" ಅಂತ. ಏನಿದರ ಅರ್ಥ? ರವಿ ಬೆಳಗೆರೆ ಬರೆಯುವುದು ಯಾವ ಭಾಷೆಯಲ್ಲಿ? ಬೆಳಗೆರೆ ಕನ್ನಡದಲ್ಲಿ ಬರೆದಿದ್ದನ್ನು ಭಟ್ಟರು ಕನ್ನಡಕ್ಕೆ ಅನುವಾದಿಸುತ್ತಾರಾ? ಅಥವಾ ರವಿ ಬೆಳಗೆರೆಯವರಿಗೆ ಪುಸ್ತಕಗಳನ್ನು ಅನುವಾದಿಸಲು ಭಟ್ಟರು ನೆರವಾಗುತ್ತಾರೆ ಎಂದು ಹೇಳುವ ಉದ್ದೇಶವಿತ್ತಾ ಅನಾನಿಮಸ್‌ಗೆ? ಹೌದು ಅನ್ನುವುದಾದರೆ, ಬೆಳಗೆರೆಯವರಿಗೆ ಅನುವಾದ ಮಾಡಿಕೊಡುವ ಭಟ್ಟರು ತಾವೇಕೆ ಇನ್ಯಾರದೋ ಹತ್ತಿರ ಅನುವಾದ ಮಾಡಿಸುತ್ತಾರೆ? ಭಟ್ಟರು ಉಪಸಂಪಾದಕರ ಹತ್ತಿರ ಅನುವಾದ ಮಾಡಿಸುತ್ತಾರೆ ಅನ್ನುವುದಾದರೆ, ಒಂದೋ ಅವರಿಗೆ ಅನುವಾದ ಮಾಡಲು ಬರಲಿಕ್ಕಿಲ್ಲ ಅಥವಾ ಬಂದರೂ ಅಷ್ಟು ಟೈಮ್ ಇರಲಿಕ್ಕಿಲ್ಲ. ಅನುವಾದ ಮಾಡಲು ಬರಲ್ಲ ಅನ್ನುವುದಾದರೆ ಅವರು ಬೆಳಗೆರೆಯವರ ಬರಹಗಳನ್ನು ಹೇಗೆ ಅನುವಾದಿಸುತ್ತಾರೆ? ಅಕಸ್ಮಾತ್ ಟೈಮ್ ಇರಲ್ಲ ಅನ್ನುವುದಾದರೆ ಅನ್ನುವುದಾದರೆ ಬೆಳಗೆರೆಯವರ ಬರಹಗಳನ್ನು ಅನುವಾದಿಸಲು ಎಲ್ಲಿಂದ ತರುತ್ತಾರೆ ಟೈಮು? ನಾನಿಲ್ಲಿ ಯಾರ ಪರವಾಗಿಯೂ ಮಾತನಾಡ್ತಿಲ್ಲ. ನಿಮ್ಮ ಬರಹಗಳು ಎಷ್ಟೊಂದು ಅವಿವೇಕತನದ್ದು ಅಂತ ಹೇಳ್ತಿದೇನಿ ಅಷ್ಟೇ.

ಇನ್ನೊಂದು ಮಾತು, "ನೀವು ವಿ. ಭಟ್ಟರಲ್ಲದಿದ್ದರೂ ಮತ್ತಾವುದೋ ಭಟ್ಟರಾಗಿರುವುದಂತೂ ಖರೆ" ಅಂತ ಬರೆದಿದ್ದಾರೆ ರಮೇಶ್ ಸಮಗಾರ್‍. ಎಲ್ಲವನ್ನೂ ಜಾತಿಗೆ ಒಯ್ದು ಆನಿಸುವುದು ಎಷ್ಟು ಸರಳ ಅಲ್ವಾ ನಿಮಗೆ? ಹಿಂಗ್ ಬರೆದಿದೀರಾ ಅಂದ್ರೆ, ನೀವು ಎಸ್ಸಿನೋ ಎಸ್ಟಿನೊ ಆಗಿರಬೇಕು. ಅದೂ ಅಲ್ದೇ ಸರ್‍ನೇಮ್ ಬೇರೆ ಸಮಗಾರ್‍ ಅಂತಿದೆ. ಮೋಸ್ಟ್ಲಿ ಉತ್ತರ ಕರ್ನಾಟಕದ ಕಡೆಯವರಿರಬೇಕು. ವ್ರತ್ತಿಯಿಂದ ಚಮ್ಮಾರರಾಗಿದ್ದರೆ ಈ ಸರ್‍ನೇಮ್ ಇರತ್ತೆ. ದಲಿತರಾಗಿರೋದ್ರಿಂದ ಬ್ರಾಹ್ಮಣರ ವಿರುದ್ಧ ಬರೆಯೋ ಟೆಂಡೆನ್ಸಿ ಇರತ್ತೆ ನಿಮಗೆ. ಯಾ...ಹೂ... ನಂಗೂ ಹಿಂಗೆಲ್ಲಾ ಯೋಚನೆ ಮಾಡೋದಕ್ ಬರತ್ತೆ. ಮತ್ತು ನನ್ನ ಬಗ್ಗೆ ನನಗೇ ನಾಚಿಕೆ ಆಗತ್ತೆ. ನಿಮಗ್ಯಾವತ್ತೂ ಆಗೇ ಇಲ್ವಾ?

Anonymous said...

ಇಲ್ಲಿ ಸುದೀರ್ಘ ಕಮೆಂಟ್ ಮಾಡಿರುವ ಅನಾನಿಮಸ್ ತಿಳಿದುಕೊಳ್ಳಬೇಕಾದ ಕೆಲವು ಸತ್ಯಗಳಿವೆ : ಈ ದೇಶದಲ್ಲಿ ಜಾತಿಯನ್ನು ಹೊರಗಿಟ್ಟು ಯಾವುದೂ ನಡೆಯುವುದಿಲ್ಲ. ಭೈರಪ್ಪ ಕೂಡ ಮತಾಂತರದ ಬಗ್ಗೆ ಬರೆಯುವಾಗ, ಈ ದೇಶದಲ್ಲಿರುವ ಬ್ರಾಹ್ಮಣ ಜಾತಿ ಯಜಮಾನಿಕೆಯ ವೈದಿಕ ಧರ್ಮವನ್ನು ಉಳಿಸುತ್ತೇನೆಂಬ ಭ್ರಮೆಯಿಂದಲೇ ಬರೆಯುತ್ತಾರೆ. ಅದಿರಲಿ.
ವಿಭಟ್ಟರು ಹತ್ತಾರು ಜನರ ಬಳಿ ಅನುವಾದ ಮಾಡಿಸಿ ಹಾಕಿದ್ದು ಖರೇ ಖರೆ. ಸಾವಿರ ಪುಟಗಳಿಗಿಂತಲೂ ಹೆಚ್ಚಿರುವ ಅಡ್ವಾಣಿ ಆತ್ಮಕತೆಯನ್ನು ಅವರು ಹರಿದು ಹನ್ನೊಂದು ಜನಕ್ಕೆ ಹಂಚಿದ್ದರು. ಅದರಲ್ಲಿ ಹೆಚ್ಚಿನವು ಪತ್ರಿಕೆಯೊಳಗಿನ ಶಿಷ್ಯರಿಗೆ. ಉಳಿದದ್ದು ಹೊರಗಿನವರಿಗೆ. ವಿಷಯ ಇದಲ್ಲ. ಹೀಗೆ ಅನುವಾದ ಮಾಡಿಸಿಕೊಂಡದ್ದನ್ನು ಪುಸ್ತಕದಲ್ಲಿ ತಿಳಿಸಿಲ್ಲ, ಅನುವಾದ ಮಾಡಿಕೊಟ್ಟವರಿಗೆ ದುಡ್ಡು ಕೂಡ ಕೊಟ್ಟಿಲ್ಲ. ಇದೇ ನಿಜವಾದ ವಂಚನೆ.
ಅದು ಮಾತ್ರವೇ ಅಲ್ಲ. ಪುಸ್ತಕ ಬಿಡುಗಡೆ ಸಮಾರಂಭಕ್ಕೆ ತಮಗೆ ಹೀಗೆ ಸಹಾಯ ಮಾಡಿದ ಅನುವಾದಕರಿಗೆ ಆಮಂತ್ರಿಸುವ ಗೋಜಿಗೆ ಕೂಡ ಅವರು ಹೋಗಿಲ್ಲ.
ಇದಕ್ಕಿಂತ ಮಜವಾದ ಅನೇಕ ಸಂಗತಿಗಳಿವೆ ಕೇಳಿ : ಪತ್ರಿಕೆಯಲ್ಲಿ ಅವರ ಹೆಸರಿನಲ್ಲಿ ಬರುವ ಎಲ್ಲ ಅಂಕಣಗಳನ್ನೂ ಅವರೇ ಬರೆಯುತ್ತಾರೇನು ? ಸುಳ್ಳು. ಅನೇಕ ಸಲ ನೂರೆಂಟುಮಾತು, ಜನಗಣಮನ, ಸುದ್ದಿಮನೆಕತೆಗಳನ್ನು ಕೂಡ ಬೇರೆಬೇರೆಯವರ ಹತ್ತಿರ ಬರೆಸುತ್ತಾರೆ. ಅವರ ಶಿಷ್ಯರೂ ಅವರದೇ ಜಾಳುಜಾಳು ಶೈಲಿಯನ್ನು ಅನುಕರಿಸುವವರಾದುದರಿಂದ ವ್ಯತ್ಯಾಸ ಗೊತ್ತಾಗುವುದಿಲ್ಲ. ಕೆಲವೊಮ್ಮೆ ಭಟ್ಟರಿಗಿಂತ ಅವರ ಶಿಷ್ಯರ ಬರಹಗಳೇ ಚೆನ್ನಾಗಿರುತ್ವೆ ಬಿಡಿ.
- ನವನೀತ ಕುಮಾರ

Anonymous said...

ಆಹಾ ಧನ್ಯೋಸ್ಮಿ,
ಈ ದೇಶದಲ್ಲಿ ಜಾತಿಯನ್ನು ಹೊರಗಿಟ್ಟು ಏನೂ ನಡೆಯುವುದಿಲ್ಲ ಅನ್ನೋದು ನನಗೂ ಚನ್ನಾಗಿ ಗೊತ್ತು. ಆದರೆ ಹಾಳಾದ ರಕ್ತ, ಬಿಸಿ ಇದೆ ನೋಡಿ, ಅದನ್ನ ವಿರೋಧಿಸಬೇಕು ಅನ್ಸತ್ತೆ. ನಿಮ್ಮನ್ನು ಕೊನೆಪಕ್ಷ ಮಾನಸಿಕವಾಗಿಯಾದರೂ ಯುವಕರು ಅಂದುಕೊಂಡಿದ್ದೆ. ಸತ್ಯವನ್ನು ಒಪ್ಪಿಕೊಂಡು, ಅದಕ್ಕೆ ಶರಣಾಗಿ, ಅದರಲ್ಢೇ ಬಿದ್ದು ಹೊರಳಾಡ್ತಿರೊ ಹೆಲ್ಪ್‌ಲೆಸ್ ಜನ ಅಂತ ಗೊತ್ತಿರಲಿಲ್ಲ.
"ಭೈರಪ್ಪ ಕೊಡ ಮತಾಂತರದ ಬಗ್ಗೆ ಬರೆಯುವಾಗ ಈ ದೇಶದಲ್ಲಿರುವ ಬ್ರಾಹ್ಮಣ ಜಾತಿ ಯಜಮಾನಿಕೆಯ ವೈದಿಕ ಧರ್ಮವನ್ನು ಉಳಿಸುತ್ತೇನೆ ಎಂಬ ಭ್ರಮೆಯಿಂದಲೇ ಬರೆಯುತ್ತಾರೆ" ಎಂದಿದ್ದೀರಿ. ಬಿಡಿ, ರಾಜ್ಯೋತ್ಸವ ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ಕ್ರಿಶ್ಚಿಯಾನಿಟಿ ಹುಡುಕಿದ ನಿಮಗೆ, ವಿಶ್ವೇಶ್ವರ ಭಟ್ಟರ ಸರ್‍ನೇಮ್ನಲ್ಲಿ ಬ್ರಾಹ್ಮಣ್ಯ ಹುಡುಕಿದ ನಿಮಗೆ, ಭೈರಪ್ಪನವರ ಬರಹದಲ್ಲಿ ವೈದಿಕ ಧರ್ಮವನ್ನು ಉಳಿಸುವ ಷಡ್ಯಂತ್ರ ಕಾಣಿಸಿದ್ದರೆ ದೇವರಾಣೆಗೂ ಆಶ್ಚರ್ಯ ಪಡಬೇಕಾಗಿಲ್ಲ.

cmariejoseph.blogspot.com said...

ಈ ಕುರಿತು ನಾನು ಏನೂ ಹೇಳದೆ ಮಾನ್ಯ ಡಿ ಎಸ್ ನಾಗಭೂಷಣರು ’ವಿಕ್ರಾಂತ ಕರ್ನಾಟಕ’ದ ಸೆಪ್ಟೆಂಬರ್‍ ನ ಒಂದು ಸಂಚಿಕೆಯಲ್ಲಿ ಬರೆದ ಕೆಲ ಸಾಲುಗಳನ್ನು ಉದ್ಧರಿಸುತ್ತೇನೆ.
"ಶಾರದಾ ಪ್ರಸಾದರು ಇಂಗ್ಲಿಷ್ ಪತ್ರಿಕೆಯೊಂದಕ್ಕಾಗಿ ಬರೆಯುತ್ತಿದ್ದ ಅಂಕಣಗಳನ್ನು ತನ್ನ ಪತ್ರಿಕೆಗಾಗಿ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿಕೊಂಡು, ಅವನ್ನು ಅವರು ತನ್ನ ಮೇಲಿನ ವಿಶ್ವಾಸಕ್ಕಾಗಿಯೇ ಬರೆಯುತ್ತಿದ್ದಾರೆಂದು ಪ್ರಚಾರ ಮಾಡಿಕೊಂಡಿದ್ದಲ್ಲದೆ; ಅವರಿಗೆ ಕೊಡಬೇಕಾದ ಸಂಭಾವನೆಗೆ ಸತಾಯಿಸಿ, ಕೊನೆಗೆ ಅವರ ಸ್ನೇಹಿತರ ಆಗ್ರಹದ ಮೇರೆಗೆ ಸಂಭಾವನೆ ಕೊಡಬೇಕಾಗಿ ಬಂದರೂ, ಅದನ್ನು ಅವರು ಬೇಡ ಬೇಡವೆಂದರೂ ತಾನು ಒತ್ತಾಯಪೂರ್ವಕವಾಗಿ ಕಳಿಸಿದ್ದಾಗಿ ಅವರ ಸಾವಿನ ನಂತರ ಯಾವ ನಮ್ಮ ಸಂಪಾದಕ ಮಹಾಶಯರು ಬರೆದುಕೊಂಡು ಪತ್ರಿಕೋದ್ಯಮವನ್ನು 'ಬುರುಡೆ' ಮಟ್ಟಕ್ಕೆ ಇಳಿಸಿದ್ದಾರೋ; ಅವರ ಪತ್ರಿಕೆಯಲ್ಲಿ ಇತ್ತೀಚೆಗೆ ಪ್ರಕಟವಾದ ಬರೀ ಸುಳ್ಳು ಮತ್ತು ಅಪ್ರಬುದ್ಧ ಪ್ರಲಾಪಗಳಿಂದಲೇ ತುಂಬಿಹೋಗಿದ್ದ ಅಂಕಣವೊಂದರ ಬಗ್ಗೆ ಇಂದಿನ ಸೂಕ್ಷ್ಮ ಕೋಮು ಪರಿಸ್ಥಿತಿಯಲ್ಲಿ ಅದು ಉಂಟುಮಾಡಬಹುದಾದ ಅಪಾಯವನ್ನು ಗಮನದಲ್ಲಿಟ್ಟುಕೊಂಡು ನಾನು ಪ್ರತಿಕ್ರಿಯೆಯೊಂದನ್ನು ಬರೆದು ಆ ಸಂಪಾದಕ ಮಹಾಶಯರ ವಿಳಾಸಕ್ಕೇ ಈ ಮೇಲ್ ಮಾಡಿದೆ. ಅದನ್ನು ಪತ್ರಿಕೋದ್ಯಮದ ಮೂಲ ತತ್ವಗಳ ಬಗ್ಗೆ ಪ್ರತಿವಾರ ತನ್ನ ಅಂಕಣವೊಂದರಲ್ಲಿ ಬುರುಡೆ ಹೊಡೆಯುವ ಈ ಸಂಪಾದಕ ಮಹಾಶಯ ಪ್ರಕಟಿಸಲಿಲ್ಲ. ಕಾರಣ, ಅದನ್ನು ನೀವೇ ಓದಿದರೆ ಅರ್ಥವಾದೀತು: . . ".
ದಯವಿಟ್ಟು ಓದಿರಿ, http://sampada.net/article/11929

Anonymous said...

ವಿಭಟ್ಟರು ಜಾತಿವಾದಿ ಎಂಬುದಕ್ಕೆ ಬೇಕಷ್ಟು ಆಧಾರಗಳಿವೆ. ಅವರು ಯಾವತ್ತು ಸಂಪಾದಕರಾದರೋ ಮೊದಲು ಮಾಡಿದ ಕೆಲಸವೆಂದರೆ, ಬ್ರಾಹ್ಮಣ ಪತ್ರಕರ್ತರನ್ನು ಉಳಿಸಿಕೊಂಡು ಉಳಿದವರನ್ನು ಸಂಸ್ಥೆಯಿಂದ ಹೊರಕ್ಕೆ ಹೋಗುವಂತ ಮಾಡಿದ್ದು. ವಿಕದಲ್ಲಿ ಯಾರನ್ನಾದರೂ ಆಫ್ ದಿ ರೆಕಾಢ್ ಕೇಳಿ ಪ್ರತಾಪ ಸಿಂಹ ಮತ್ತು ಕೆಲವರನ್ನು ಹೊರತುಪಡಿಸಿ ಬಹುತೇಕ ಮಂದಿ ಉಸಿರುಗಟ್ಟಿದ ವಾತಾವರಣದಲ್ಲಿ ಕೆಲಸ ಮಾಡುತ್ತದ್ದಾರೆ... ನನಗೆ ಅಚ್ಚರಿಯೆನಿಸುವುದು- ಟೈಂಸ್ ಆಫ್ ಇಂಡಿಯಾದ ಮುಖ್ಯಸ್ಥರು ಈ ಭಟ್ಟನ ಹಾರಾಟ ,ಸೋಗಲಾಡಿತನ, ಸುಳ್ಳು, ಏಕಪಕ್ಷೀಯ ವರದಿಗಳನ್ನು ನೋಡುತ್ತ ಮೌನವಾಗಿ ಏಕಿದ್ದಾರೆ ಅಂತ... ವಿಭಟ್ಟನಂತವರು ಪತ್ರಿಕೋದ್ಯಮವನ್ನು ಯಾವ ಮಟ್ಟಕ್ಕೂ ಇಳಿಸುತ್ತಾರೆಎಂಬುದಕ್ಕೆ ವಿಕ ಸಾಕ್ಷಿ...ಈ ಆರೋಪಗಳನ್ನು ಭಟ್ಟರು ಮತ್ತವರ ಗ್ಯಾಂಗ್ ನಿರಾಕರಿಸುತ್ತಾರಾದರೆ, ಅವರು ಎದೆಮುಟ್ಟಿ ಹೇಳಿಕೊಳ್ಳಲಿ ತಮ್ಮಪತ್ರಿಕೆ ಪತ್ರಿಕೋದ್ಯಮದ ಎತಿಕ್ ಗಳಿಗೆ ಬದ್ದವಾಗಿದೆ ಎಂದು...ನೆನಪಿರಲಿ ಕರಾವಳಿಯ ಕೋಮುಗಲಭೆಗಳಿಗೆ ಇದೇ ವಿಕದ ಕೊಡುಗೆ ಅಪಾರ..ಇವರೆಂಥವರೆಂದರೆ, ಉರಿವ ಮನೆಯ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುವವರು....

Anonymous said...

E Visha Bhatta ella kade chaddigalanne saki bittiddane. Karavaliyalli komu galabhe srushtisuvalli Vijaya Karnatakada patra apara.Modalige atana sahodariya maga Vinayaka Bhatta Mururu Mangalorinalli ellavannu kulagedisi bitta. Ivanige bengavalagi bittaddu ide Visha Bhatta. karavaliyalli Hindu mattu Muslimara naduve dwesha srushtisalu tanna ella shramavannu dhare ereda nantara eta Delhige hariddane. Iga Vinayaka Bhattana kelasavannu Mangalorina Vijaya Karnataka photographer Sudhakar Ermal munduvarisiddanne. Kaleda bari Christian jana Mangalurinalli rochigeddaga ide Ermal tanna vikruta buddi torisida. Christian hudugarige hodeyalu nirdeshana needida. Jatege tanu hodeda. Obba photographer agi tanna mitiyolage irabekada eta tumba 'cheap' agi vartisida. Ivanige bengavalu yaru gotte? ide visha bhatta. Idu namma nadina duranta...
--Rajesh Rao

Anonymous said...

Well, it is true that V Bhat has been indulging himself in these activities. Sadly, he dosent encourage any others of his opposite cast. Ask other writers or artists on their payment. Most of them have not yet received amount for their year old works...
This is another face of journalsim. But one thing is of certain. Bhat is driving on the path laid by 'Santosh Kumar Gulvadi'the great, and will meet the same end. Pitty you, V Bhat.