Tuesday, June 16, 2009

ನಾಗ್ತಿಹಳ್ಳಿ ಲೆಕ್ಕಾಚಾರ; ಪ್ರೇಕ್ಷಕನಿಗೆ ಮೋಸ!

ಕೆಲ ವರ್ಷಗಳ ಹಿಂದಿನ ಘಟನೆ. ನೀನಾಸಂನ ಸಂಸ್ಕೃತಿ ಶಿಬಿರದಲ್ಲಿ ಸಮಕಾಲೀನ ಸಿನಿಮಾ ಕುರಿತು ಸಂವಾದ ಏರ್ಪಟ್ಟಿತ್ತು. ಕವಿತಾ ಲಂಕೇಶ್ ಮತ್ತು ಗಿರೀಶ್ ಕಾಸರವಳ್ಳಿ ಸಭೆಯಲ್ಲಿದ್ದರು. ಯುವಕನೊಬ್ಬ ಕೇಳಿದ ಪ್ರಶ್ನೆ ಹೀಗಿತ್ತು - 'ಸಾರ್ವಜನಿಕರು ತಮಗೆ ಯಾವುದೇ ವಸ್ತು ಕೊಂಡಾಗ ಮೋಸವಾದರೆ ಅದನ್ನು ಗ್ರಾಹಕರ ಹಕ್ಕು ಅಧಿನಿಯಮದ ಅಡಿ ಪ್ರಶ್ನಿಸಲು ಅವಕಾಶವಿದೆ. ಅದೇ ರೀತಿ, ಉತ್ತಮ ಚಿತ್ರ, ಮನೆಮಂದಿಯೆಲ್ಲ ಕೂತು ಸಂಭ್ರಮ ಪಟ್ಟು ನೋಡಬಹುದಾದ ಸಿನಿಮಾ ಎಂದೆಲ್ಲಾ ಪ್ರಚಾರ ಮಾಡಿ ಪ್ರೇಕ್ಷಕರನ್ನು ಥಿಯೇಟರಿಗೆ ಸೆಳೆದ ಚಿತ್ರವೊಂದು ಎಲ್ಲಾ ಭರವಸೆಗಳನ್ನು ಹುಸಿ ಮಾಡಿದರೆ, ಅದೇ ಗ್ರಾಹಕರ ಕಾಯ್ದೆ ಅಡಿ ಪರಿಹಾರ ಕೇಳಬಹುದೇ?'
ನಾಗ್ತಿಹಳ್ಳಿ ಚಂದ್ರಶೇಖರ್ ಅವರ ಲೇಟೆಸ್ಟ್ ಸಿನಿಮಾ 'ಒಲವೇ ಬದುಕಿನ ಲೆಕ್ಕಾಚಾರ' ನೋಡಿದಾಗಿನಿಂದ ಆ ಯುವಕನ ಪ್ರಶ್ನೆ ಮತ್ತೆ ಮತ್ತೆ ನೆನಪಾಗುತ್ತಿದೆ. ಹಾಗಂತ ನಾಗ್ತಿಹಳ್ಳಿ ಚಿತ್ರದ ಬಗ್ಗೆ ಭಾರೀ ಭರವಸೆ ಇಟ್ಟುಕೊಂಡು ಹೋಗಿದ್ದೆವು ಎಂದೆಲ್ಲ. ಮುಊಲತಃ ಕತೆಗಾರ, ಮಾಡಿದರೆ ವಿಭಿನ್ನ ಚಿತ್ರವನ್ನೇ ಮಾಡುತ್ತಾರೆ ಎಂಬ ಸಣ್ಣ ನಿರೀಕ್ಷೆ ಕೂಡಾ ಹುಸಿಯಾಯಿತು. ನಾಗ್ತಿಹಳ್ಳಿ ಮಾತಿನಲ್ಲಿಯೇ ಹೇಳುವುದಾದರೆ, ಅವರ ಸಿನಿಮಾದ ಬಗ್ಗೆ ನಮಗಿದ್ದ ಲೆಕ್ಕಾಚಾರ ತಪ್ಪಾಗಿತ್ತು.
ಲೋಪದೋಷಗಳನ್ನು ಪಟ್ಟಿ ಮಾಡುತ್ತಾ ಕೂತರೆ ದೊಡ್ಡ ಪಟ್ಟಿಯೇ ಆಗಿಬಿಡುತ್ತದೆ. ಅದು ಒತ್ತಟ್ಟಿಗಿರಲಿ. ನಾಗ್ತಿಹಳ್ಳಿ ಈ ಸಿನಿಮಾ ಮುಊಲಕ ಹೇಳಲು ಹೊರಟಿರುವುದು ಏನನ್ನು ಎನ್ನುವುದು ಮುಖ್ಯ ಪ್ರಶ್ನೆ. ಜುಬ್ಬಾಧಾರಿಗಳು ಅಲಿಯಾಸ್ ಬುದ್ಧಿಜೀವಿಗಳು ಢೋಂಗಿಗಳು, ಮಾರ್ಕ್ಸ್, ಲೆನಿನ್, ಚೆ, ಫಿಡೆಲ್ ಕಾಸ್ಟ್ರೋ ಎಂದೆಲ್ಲಾ ಮಾತನಾಡುವವರು ಮುಊಲತಃ ಲಂಪಟರು, ಹೊಟೇಲ್ ನಲ್ಲಿ ಚಮಚ ಕದಿಯುವ ಸಣ್ಣ ಮನುಷ್ಯರು, ಹೆಣ್ಣನ್ನು ಕೀಳಾಗಿ ಕಾಣುವವರು ಎಂದು ಬಿಂಬಿಸುವುದರ ಹಿಂದಿನ ಉದ್ದೇಶ ಏನು?
ಇತ್ತೀಚಿನ ದಿನಗಳಲ್ಲಿ ಬುದ್ಧಿಜೀವಿ ಎನ್ನುವ ಪದ ತೀವ್ರ ಅಪಮಾನಕ್ಕೆ ಈಡಾಗುತ್ತಿದೆ. ಒಂದು ಪಟ್ಟಭದ್ರರ ಗುಂಪು ಇಂತಹದೊಂದು ಪ್ರಪಾಗಾಂಡದಲ್ಲಿ ತೊಡಗಿದೆ. ಅವರ ಪ್ರಕಾರ ಜಗತ್ತಿನ ಎಲ್ಲಾ ಬುದ್ಧಿಜೀವಿಗಳು 'ಹುಸಿ ಜಾತ್ಯತೀತವಾದಿಗಳು'. ಕೆಲ ದಿನಗಳ ಹಿಂದೆ ಲೇಖಕ, ಪತ್ರಕರ್ತ ಜೋಗಿ ಒಂದು ಕಾದಂಬರಿ ಬರೆದು ಬಿಡುಗಡೆ ಮಾಡಿದರು. ಅದರ ಮುಖ್ಯ ಪಾತ್ರ ಇಂತಹದೇ ಒಂದು ಬುದ್ಧಿಜೀವಿ. ಆ ಜೀವಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸುತ್ತದೆ. ಪ್ರಶಸ್ತಿಗೆ ನಾನಾ ರೀತಿಯ ಲಾಬಿ ನಡೆಸಿರುತ್ತಾರೆ. ಅವರ ಸುತ್ತಲೇ ಆ ಕಾದಂಬರಿ ಸುತ್ತುತ್ತದೆ, ಆ ಮುಊಲಕ ಒಂದು ವಿಚಾರವಾದಿ ಸಮುಊಹ ಮತ್ತು ಬುದ್ಧಿಜೀವಿ ಗುಂಪನ್ನು ಅದು ವ್ಯಂಗ್ಯದಿಂದಲೇ ಕಾಣುತ್ತದೆ.
ಆ ಕಾದಂಬರಿ ಸಾಧಿಸಲು ಹೊರಟಿದ್ದನ್ನೇ ನಾಗ್ತಿಹಳ್ಳಿ ತನ್ನ ಸಿನಿಮಾ ಮುಊಲಕ ನಿರೂಪಿಸಲು ಶ್ರಮಿಸಿದ್ದಾರೆ. ಅಂದಹಾಗೆ ಅವರ ಪ್ರಯತ್ನಕ್ಕೆ ಜೋಗಿಯವರ ಸಹಕಾರ ಕೂಡ ಇದೆ (ಚಿತ್ರಕತೆಯಲ್ಲಿ ಜೋಗಿಯದು ಮುಖ್ಯ ಪಾತ್ರ). ಉಪನ್ಯಾಸಕನ ಪಾತ್ರ ಶುರುವಾಗುವುದೇ ಕೆಂಪು ಕರವಸ್ತ್ರದಿಂದ ಮುಊಗನ್ನು ಒರೆಸಿಕೊಳ್ಳುವುದರ ಮುಊಲಕ. ಈ ಧೋರಣೆ ಚಿತ್ರದುದ್ದಕ್ಕೂ ಮುಂದುವರೆಯುತ್ತದೆ. ಕಾಲೇಜಿನಲ್ಲಿ ಅರ್ಥಶಾಸ್ತ್ರ ಬೋಧಿಸಬೇಕಾದ ಅವರು ಕ್ರಾಂತಿ ಮಾತನಾಡುತ್ತಾರೆ. ಮನೆಯಲ್ಲಿ ದಿನಕ್ಕೊಬ್ಬ ಹುಡುಗಿಯ ಸಂಗ, ರಾತ್ರಿಯಾದರೆ ಹುಡುಗರೊಟ್ಟಿಗೆ ಡಾಬಾ, ಲೈವ್ ಬ್ಯಾಂಡ್, ಬಿಲ್ ಕೊಡದೆ ಗಲಾಟೆ ಮತ್ತು ಚಮಚ ಕದಿಯುವುದು. ಮದುವೆ ಮತ್ತು ಹುಡುಗಿಯರ ಬಗ್ಗೆ ತೀರಾ ಅಹಸ್ಯ ಎನಿಸುವ ಹೇಳಿಕೆಗಳು ಆತನಿಂದ ಹೊರಬರುತ್ತವೆ. (ಈ ಕಾರಣಕ್ಕೆ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದ್ದು!)
ಮೇಷ್ಟ್ರು ತಮ್ಮ ಅಂಕಪಟ್ಟಿ ಸುಟ್ಟು ಹಾಕಿದ ಪ್ರಕರಣದಿಂದಲೇ ಅವರು ಢೋಂಗಿ ಎನ್ನುವುದು ಹುಡುಗರಿಗೆ ಸಾಬೀತಾಗಿರುತ್ತದೆ. ಆದರೂ ಬಾಲಚಂದ್ರ (ಕಿಟ್ಟಿ) ಅವರ ಕ್ರಾಂತಿಗೆ ಮರುಳಾಗುತ್ತಾನೆ? ಅವರು ಹೇಳಿದ್ದೆಲ್ಲಾ ವೇದವಾಕ್ಯ ಎಂದು ನಂಬುತ್ತಾನೆ. ಪ್ರೀತಿಸಿದ ಹುಡುಗಿಗೆ ಮೋಸ ಮಾಡುತ್ತಾನೆ. ಅವಳಿಂದ ಹಣ ತಂದು ಮೇಷ್ಟ್ರಿಗೆ ಹೆಂಡ ಕುಡಿಸುತ್ತಾನೆ. ಕೊನೆಗೆ ಓಡಿಹೋಗಿ ಇನ್ನೊಬ್ಬ ಢೋಂಗಿ ಜುಬ್ಬಾಧಾರಿ ಬುದ್ಧಿಜೀವಿಯಾಗುತ್ತಾನೆ.
ಕರ್ನಾಟಕದ ಬಹುದೊಡ್ಡ ಬುದ್ಧಿಜೀವಿ ಸಮುದಾಯಕ್ಕೆ ಆಶ್ರಯ ಕೊಟ್ಟ ಮಹಾರಾಜ ಕಾಲೇಜಿನಲ್ಲಿ ಈ ಚಿತ್ರದ ಕಾಲೇಜು ಸನ್ನಿವೇಶಗಳು ಚಿತ್ರೀಕರಣಗೊಂಡಿವೆ. ನಾಗ್ತಿಹಳ್ಳಿಗೆ ಗೊತ್ತಿರಬಹುದು, ಆ ಕಾಲೇಜಿನಲ್ಲಿ ಪಾಠ ಮಾಡಿದ ಕುವೆಂಪು ಇಂದಿನ ಅದೆಷ್ಟೋ ವಿಚಾರವಾದಿಗಳಿಗೆ ಮುಊಲ ಬೇರು. ವಿಚಾರಕ್ರಾಂತಿಗೆ ಕರೆ ನೀಡಿದವರು ಅವರು. ಕನ್ನಡ ಸಾಹಿತ್ಯ ಚಳವಳಿಗಳು ಹುಟ್ಟಿಕೊಂಡದ್ದು ಅಲ್ಲಿಯೇ. ಈಗ್ಗೆ ಕೆಲ ವರ್ಷಗಳ ಹಿಂದಿನ ತನಕ ಅಲ್ಲಿಯೇ ಪಾಠ ಮಾಡುತ್ತಿದ್ದ ಪ್ರೊ.ಕೆ. ಎಸ್. ಭಗವಾನ್, ಕೆ. ರಾಮದಾಸ್ ಚ. ಸರ್ವಮಂಗಳ ಇರತರು 'ಯಾವುದನ್ನೂ ಪ್ರಶ್ನೆ ಮಾಡದೆ ಒಪ್ಪಬೇಡಿ' ಎಂಬ ಪರಂಪರೆಯನ್ನು ಬಹುಕಾಲ ಮುಂದುವರೆಸಿದವರು. ಒಂದಂತೂ ಸತ್ಯ ಪ್ರೊ. ಕೆ. ರಾಮದಾಸ್ ಮಾತು ಕೇಳಿದವನು ಜಾತಿವಾದಿಯಾಗಿರುತ್ತಿರಲಿಲ್ಲ, ಕೋಮುವಾದಿಯಾಗಿರುತ್ತಿರಲಿಲ್ಲ. ಇಂತಹದೊಂದು ಪರಂಪರೆ ಕನ್ನಡದ ಸಂದರ್ಭದಲ್ಲಿ ಸದಾ ಜಾಗೃತವಾಗಿದೆ. ಇದೆಲ್ಲದರ ಸ್ಪಷ್ಟ ಅರಿವು ನಾಗ್ತಿಹಳ್ಳಿಗೂ ಇದೆ. ಆದರೆ ಅವರ ಚಿತ್ರದಲ್ಲಿ ಅದಾವುದೂ ಇಲ್ಲ. ಯಾವ ವಿಚಾರದಲ್ಲೂ ಸಭ್ಯನಲ್ಲದ ಒಂದು ಪಾತ್ರ ಸೃಷ್ಟಿಸಿ ಅದನ್ನು ಬುದ್ಧಿಜೀವಿ, ವಿಚಾರವಾದಿ, ಮಾರ್ಕ್ಸ್ ವಾದಿಗಳಿಗೆ ಸಮೀಕರಿಸುವ ಪ್ರಯತ್ನ ಮಾಡಿದ್ದು ದುರಂತ.
ಈ ಸಿನಿಮಾ ಜಡ (inert). ಅದು ಬೆಳೆಯುವುದೇ ಇಲ್ಲ. ಮೊದಲಾರ್ಧದಲ್ಲಿ ಹುಡುಗರಿಗೆ ಸುಳ್ಳುಹೇಳಿ, ಯಾರದೋ ದುಡ್ಡಲ್ಲಿ ಹೆಂಡ ಕುಡ್ಕೊಂಡು, ಹೆಣ್ಣಿನ ಸಂಗ ಮಾಡ್ಕೊಂಡು ಜೀವನ ಮಾಡ್ತಿದ್ದ ಮೇಷ್ಟ್ರು, ದ್ವಿತೀಯಾರ್ಧ್ಲದಲ್ಲಿ ಜನರಿಗೆ ಸುಳ್ಳುಗಳ 'ಬ್ರಹ್ಮಾಂಡ' ಸೃಷ್ಟಿಸಿ ಮೋಸ ಮಾಡಿ, ವರದಕ್ಷಿಣೆ ಹಣದಲ್ಲಿ ಮಜಾ ಮಾಡುತ್ತಾ ಜೀವನ ಮಾಡ್ತಾರೆ.
ಆ ಪಾತ್ರ ಬದಲಾಗುವುದೇ ಇಲ್ಲ. ಆದರೆ ಚಿತ್ರಕತೆ ಮಾತ್ರ ಮೇಷ್ಟ್ರು ಬದಲಾದರು ಎನ್ನುವಂತೆ ಬಿಂಬಿಸುವ ಪ್ರಯತ್ನ ಮಾಡುತ್ತದೆ. ಮಗು ಮತ್ತು ಪತ್ನಿಯೊಂದಿಗೆ ದೇವಸ್ಥಾನದಿಂದ ಹೊರ ಬರುವ ಮೇಷ್ಟ್ರನ್ನು ನೋಡಿದಾಗ ಬಾಲಚಂದ್ರನ ಪ್ರತಿಕ್ರಿಯೆಯಲ್ಲಿ ಇದನ್ನು ಕಾಣಬಹುದು. ಬಾಲಚಂದ್ರನ ಪ್ರಕಾರ ಮೇಷ್ಟ್ರು 'ನಮಗೆಲ್ಲ ಕ್ರಾಂತಿ ಕ್ರಾಂತಿ ಅಂತ ಬೋಧಿಸಿ, ಈಗ ಮದುವೆ ಮಾಡ್ಕೊಂಡು ಸುಖವಾಗಿದ್ದಾರೆ' ಎಂದು ಭಾವಿಸುತ್ತಾನೆ. ಆ ಮುಊಲಕ ತನ್ನ ಪ್ರೇಯಸಿಯನ್ನು ಹುಡುಕಲು ಮುಂದಾಗುತ್ತಾನೆ. ಇದೇ ವಿಚಿತ್ರ. ಮೇಷ್ಟ್ರು ಮೊದಲು ಹೇಗಿದ್ದರೋ, ಈಗಲೂ ಹಾಗೇ ಇದ್ದಾರೆ. ಹಾಗಿರುವಾಗ ಅವರಲ್ಲಿನ ಯಾವ ಬದಲಾವಣೆ ಅವನನ್ನು ಪ್ರಭಾವಿಸಲು ಸಾಧ್ಯ?
ನಾಗ್ತಿಹಳ್ಳಿಯನ್ನು ತೀವ್ರ ಟೀಕೆಗೆ ಗುರಿಪಡಿಸಬೇಕಾಗಿರುವುದು ಅವರು ಮಹಿಳೆಯರ ಬಗ್ಗೆ ಹೊರಹೊಮ್ಮಿಸುವ ಅಭಿಪ್ರಾಯಗಳಿಗಾಗಿ. ಉದಾಹರಣೆಗೆ ಬಾಲಚಂದ್ರ ತನ್ನ ಕಾಲೇಜಿನ ಮಹಿಳಾ ಸಹೋದ್ಯೋಗಿಗಳನ್ನು ಪರಿಚಯಿಸುವ ಪರಿಯನ್ನು ಒಮ್ಮೆ ಜ್ಞಾಪಿಸಿಕೊಳ್ಳಿ. ಜಿಯೋಗ್ರಾಫಿ ಲೆಕ್ಚರರ್ ಭೂಗೋಳವೇ ಸರಿ ಇಲ್ವಂತೆ. ಇಂಗ್ಲಿಷ್ ಉಪನ್ಯಾಸಕಿ ಮುಖ ಕರೆದ ಬೋಂಡವಂತೆ! ಜಗತ್ತಿನಲ್ಲಿ ಇರುವವರು ಎರಡೇ ಜಾತಿಯ ಹುಡುಗಿಯರು - ಕೆಟ್ಟ ಹುಡುಗಿಯರು, ಅತೀ ಕೆಟ್ಟ ಹುಡುಗಿಯರು! ಅದೇ, ಜೋಗಿ/ನಾಗ್ತಿಹಳ್ಳಿ ಚಿತ್ರಕತೆಯಲ್ಲಿ ಯಾವುದೇ ಗಂಡಸಿನ ಬಗ್ಗೆ ಇಂತಹದೊಂದು ಕಾಮೆಂಟ್ ಪಾಸ್ ಮಾಡುವುದಿಲ್ಲ.
ಈ ಚಿತ್ರದಲ್ಲಿ ಬಂದು ಹೋಗುವ ಹೆಣ್ಣಿನ ಪಾತ್ರಗಳ ಮೇಲೆ ಒಂದು ಕಣ್ಣು ಹಾಯಿಸಿ - ಅಪ್ಪನಿಂದ ಹಿಂಸೆಗೆ ಒಳಪಟ್ಟು, ಪ್ರೀತಿಸಿದ ಹುಡುಗನಿಂದ ಮೋಸ ಹೋದ ರುಕ್ಮಿಣಿ; ತಮ್ಮನ ಒಳಿತಿಗಾಗಿ ತನ್ನ ದೇಹವನ್ನು ಅರ್ಪಿಸಲು ಸಿದ್ಧವಿರುವ 'ಅವಳು'; ಮಗನಿಗಾಗಿ ಒಮ್ಮೆ ತಡಕಾಡಿ ಹಳ್ಳಿಗೆ ಹಿಂತಿರುಗುವ ಅಮ್ಮ ಮತ್ತು ಗಡಿಯಲ್ಲಿರುವ ಗಂಡ ಹಾಗೂ ಆತನ ಸಹಚರರ ಒಳಿತಿಗಾಗಿ ಒಂದು ದಿನ ಉಪವಾಸ ಮಾಡುವ ಕಂಪೂಟರ್ ಸೈನ್ಸ್ ಉಪನ್ಯಾಸಕಿ! ಚಿತ್ರದಲ್ಲಿ ಯಾವ ಹೆಣ್ಣು ಪಾತ್ರವೂ ಗಟ್ಟಿಯಾಗಿ ನಿಲ್ಲುವುದಿಲ್ಲ. ಡೈಸಿ ಬೋಪಣ್ಣನ ಪಾತ್ರ ಸವಕಲು. ಆ ಪಾತ್ರ ಬಾಲಚಂದ್ರನಲ್ಲಿ ಬದಲಾವಣೆಗೆ ಕಾರಣವಾಯಿತು ಎಂದು ಹೇಳಲು ಒಂದು ಸನ್ನಿವೇಶ ಸೃಷ್ಟಿಯಾಗಿದೆ. ಆದರೆ ಅದರಲ್ಲಿ ಹೊಸತನ, ಗಟ್ಟಿತನ ಇಲ್ಲ.
ತಾಂತ್ರಿಕ ಅಂಶಗಳಲ್ಲೂ ಚಿತ್ರ ಗಟ್ಟಿಯಾಗಿ ನಿಲ್ಲುವುದಿಲ್ಲ. ಮೊದಲಾರ್ಧದ ಸನ್ನಿವೇಶ ನಡೆಯುವುದು ಹಳ್ಳಿಯಲ್ಲೋ, ಪಟ್ಟಣದಲ್ಲೋ ಗೊತ್ತಾಗುವುದೇ ಇಲ್ಲ. ಅಲ್ಲಿ ಪದವಿ ಕಾಲೇಜಿದೆ, ಲೈವ್ ಬ್ಯಾಂಡ್ ಇರುವ ಬಾರ್ ಇದೆ. ರಿಲಯನ್ಸ್ ಫ್ರೆಶ್ ನೆನಪಿಸುವ ಅಂಗಡಿ ಇದೆ. ಅದೇ ಊರಲ್ಲಿ ಒಂದು ಹಳ್ಳಿಯಲ್ಲಿ ಇರಬಹುದಾದ ಒಂದು ಸಾಮಾನ್ಯ ರೈಲ್ವೇ ನಿಲ್ದಾಣ ಇದೆ ಮತ್ತು ಥಟ್ಟನೆ ಹಳ್ಳಿಯನ್ನು ನೆನಪಿಸುವ 'ರಾತ್ರಿಯಾದರೆ ಬೇಟೆಗೆಂದು ರೈಫಲ್ ಹಿಡಿದು ಹೊರಡುವ' ಅಪ್ಪನ ಸನ್ನಿವೇಶಗಳಿವೆ. ಹಾಗಾದರೆ ಆ ಪ್ರದೇಶ ಯಾವುದು?
ಇನ್ನು ಕ್ಲೈಮಾಕ್ಸ್. ಅದೊಂದು ಸರ್ಕಸ್. ಎರಡು ಕನಸು ಮತ್ತು ಒಂದು ನಿಜ - ಹೀಗೆ ಮುಊರು ಕ್ಲೈಮಾಕ್ಸ್ ಗಳಿವೆ. ರುಕ್ಮಣಿ, ಬಾಲಚಂದ್ರನ ಗೆಳೆಯನನ್ನೇ ಮದುವೆಯಾಗಿರುತ್ತಾಳೆ. ಇದು ಅಚ್ಚರಿ. ಬಾಲಚಂದ್ರ ಮೋಸ ಮಾಡಿ ಅವಳನ್ನು ರೈಲು ನಿಲ್ದಾಣದಲ್ಲಿ ಏಕಾಂಗಿಯಾಗಿ ಬಿಟ್ಟು ಹೋದಾಗ, ಅವಳ ಅಪ್ಪ ಮತ್ತು ಅವಳನ್ನು ಮದುವೆಯಾಗುವ ಕನಸು ಕಾಣುತ್ತಿರುವ (ನೀನಾಸಂ ಅಶ್ವತ್ಧ್) ಅವಳನ್ನು ಹಿಡಿದುಕೊಳ್ಳುತ್ತಾರೆ. ಅಲ್ಲಿಂದ ಅವಳ ಕತೆ ಏನಾಯ್ತು ಗೊತ್ತಿಲ್ಲ. ಆದರೆ ಅಂತ್ಯದ ಹೊತ್ತಿಗೆ, ಬಾಲಚಂದ್ರನ ಗೆಳೆಯನನ್ನೇ ಮದುವೆಯಾಗಿ ಒಂದು ಮಗುವನ್ನು ಹೆತ್ತಿರುತ್ತಾಳೆ. ಇದೆಲ್ಲಾ ಹೇಗಾಯ್ತು ಸ್ವಾಮಿ?
ಅದಕ್ಕೇ ಕೇಳಿದ್ದು ನಾಗ್ತಿಹಳ್ಳಿ ಲೆಕ್ಕಾಚಾರದಲ್ಲಿ ಪ್ರೇಕ್ಷಕನಿಗೆ ಮೋಸವಾಗಿದೆ, ಗ್ರಾಹಕರ ಕಾಯಿದೆ ಅಡಿ ಪರಿಹಾರಕ್ಕೆ ಅರ್ಜಿ ಹಾಕಬಹುದೆ?

8 comments:

Jadi G said...

ಸುಮ್ಮನೆ ಬರೆದೆ

ನಾಗತಿಹಳ್ಳಿ ಲೆಕ್ಕಾಚಾರ ಮತ್ತು ಆತ ಸೃಷ್ಟಿಸಿರುವ ಕೆಲವು ಪಾತ್ರಗಳ ಬಗ್ಗೆ ಹೇಳುವುದಾದರೆ ಸಿನಿಮಾದಲ್ಲಿ ಒಂದು ರೀತಿಯಲ್ಲಿ ಹಲವು ಪಾತ್ರಗಳು ನಾವು ಕೇಳಿದ ಮತ್ತು ನೋಡಿದ ಕೆಲವು ನಿಜ ವ್ಯಕ್ತಿಗಳನ್ನು ಕುರಿತದ್ದಾಗಿವೆ.

ರಂಗಾಯಣ ರಘು ಬಾರ್ನಲ್ಲಿ ಚಮಚಗಳನ್ನು ಕದಿಯುವು ಪಾತ್ರ ನಮ್ಮ ನಾಟಕ ಅಕಾಡೆಮಿಯ ಹಿಂದಿನ ಅಧ್ಯಕ್ಷರಾಗಿದ್ದ ಒಬ್ಬ ಪ್ರತಿಷ್ಟಿತ ನಾಟಕಕಾರನ ಚಟವಾಗಿದೆ. ಅವರು ಚಮಚ 'ಮತ್ತಿತರೆಯ(ರು)'ರನ್ನು ಕದ್ದರೆ ಅದು ತಪ್ಪಲ್ಲ ಬದಲಾಗಿ ಅದೊಂದು ಅವರ ಸ್ಪೇಷಲ್ ಟಾಲೆಂಟ್.

ನಾಗತಿಹಳ್ಳಿ ಕೆಲವರ ಪಟ್ಟಿ ಮಾಡಿ ಅದಕ್ಕೆ ತಕ್ಕಂತೆ ಕಥೆಚಿತ್ರಕಥೆ ಹೆಣೆದಿದ್ದಾರೆ. ಹೀಗೆ ಅವರು ನಿರ್ಧರಿಸಿ ನಿದರ್ೇಶಿಸಿರುವ ಸಿನಿಮಾದಲ್ಲಿ ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ರಂಗಾಯಣ ರಘು ಮತ್ತೊಂದು ಕಡೆ ನವಿಲುಗರಿ ಚಾನೆಲ್ಲಿನ ಮುಖ್ಯಸ್ಥ ಬಾಲಾಜಿ ಜೊತೆ ಮಾತನಾಡುವುದು ಮತ್ತು ಅದರ ಕಲಾ ನಿದರ್ೇಶಕ ಅರುಣ್ ಸಾಗರ್ ಸೆಟ್ವಕರ್್ ಬಗ್ಗೆ ಗೇಲಿ ಮಾಡುವುದು ಹಾಗೆಯೇ ನವಿಲುಗರಿ ಚಾನೆಲ್ ಮಾಲಿಕರಿಗೆ ಚಂಡಿಯಾಗ ಮಾಡಿಸುತ್ತೇನೆ ಎಂದು ಹೇಳುವುದೆಲ್ಲಾ ನಮ್ಮ ಕನ್ನಡ ಕಸ್ತೂರಿ ಚಾನೆಲ್ ಕುರಿತಾಗಿದ್ದು ಮತ್ತು ಅದರ ಮಾಲಿಕ ಯಜ್ಞಯಾಗದಿಗಳ ಒಡೆಯರಾದಂತ ಅದರ ಮಾಲಿಕರಾದ ಮಹಾನ್ ದೈವಭಕ್ತರಾದ ಸನ್ಮಾನ್ಯ ಶ್ರೀ ದೇವಗೌಡ ಮತ್ತು ಅವರ ಮಗ ಮರಿ ಸನ್ಮಾನ್ಯ ಸಿ(ರೆ)ರಿ ಕುಮಾರಸ್ವಾಮಿಯವರಾಗಿದ್ದಾರೆ.

ಸಿನಿಮಾದ ಸೆಕೆಂಡ್ ಆಫ್ನಲ್ಲಿ ರಂಗಾಯಣ ರಘು ಒಬ್ಬ ಜ್ಯೋತಿಷಿಯಾಗಿ ಬದಲಾಗುವ ಪಾತ್ರವನ್ನು ನಾವು ಈ ಬ್ರಹ್ಮಾಂಡದಲ್ಲಿ ಸಾಕಷ್ಟು ಜನರನ್ನು ಕಾಣಬಹುದು, ಸ್ವಲ್ಪ ಕೆದಕಿ ನೋಡಿದರೆ ಬ್ರಹ್ಮಾಂಡದ ಇತಿಹಾಸದಲ್ಲಿ ಆ ಪಾತ್ರವನ್ನು ನಾವು ಕಾಣಬಹುದು.

ಸಿನಿಮಾದ ಫಸ್ಟ್ ಆಫ್ನಲ್ಲಿ ರಂಗಾಯಣ ರಘುವಿನ ಪಾತ್ರ ತುಂಬಾ ಬೋರ್ ಹೊಡಿಸುತ್ತದೆ ಜೊತೆಗೆ ಪ್ರೇಕ್ಷಕನಿಗೆ ರಘುವಿನ ಪಾತ್ರದ ಮೇಲೆ ಸಿಟ್ಟು ಬರುವತನಕ ನಾಗತಿಹಳ್ಳಿ ಎಳೆದು ತರುತ್ತಾರೆ. ಇದು ಒಂದು ರೀತಿಯಲ್ಲಿ ಅವರು ಪ್ರೇಕ್ಷಕರನ್ನು ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ನಾಗತಿಹಳ್ಳಿ ಇತ್ತೀಚಿಗೆ ಏನನ್ನೊ ಹುಡಕಲು ಒಂಟವರಂತೆ ಕಾಣುತ್ತಾರೆ, ಒಂದು ರೀತಿಯಲ್ಲಿ ಅವರು ಕಮಷರ್ಿಯಲ್ ಮೂಲಕ ಕ್ಲಾಸಿಕಲ್ ಸಿನಿಮಾ ಮಾಡಲು ಹೊಸ ಹಾದಿಯನ್ನು ಕಂಡುಕೊಳ್ಳುತ್ತಿದ್ದಾರೆ ಅನಿಸುತ್ತದೆ ಆದರೆ ಹಾದಿ ಸುಗಮವಿಲ್ಲ.

ಸಿನಿಮಾದಲ್ಲಿ ರಘುವಿನ ಬದಲಾವಣೆಯನ್ನು ನಿದರ್ೇಶಕರು ತುಂಬಾ ಅರ್ಥಗಬರ್ಿತವಾಗಿ ತೋರಿಸಿದ್ದಾರೆ. ಮೊದಲ ಆಫ್ನಲ್ಲಿ ಮನುಷ್ಯ ಬದುಕಲಿಕ್ಕೇ ಮಾತೊಂದಿದ್ದರೆ ಸಾಕು ಎನ್ನುವ ರಘುವಿನ ಧ್ಯೇಯ ವಾಕ್ಯದಂತೆ ಅವನ ಪಾತ್ರ ಸೆಕೆಂಡ್ ಆಫ್ನಲ್ಲಿ ಜ್ಯೋತಿಷ್ಯವನ್ನು ಆರಿಸಿಕೊಳ್ಳುವುದು ಮತ್ತೇ ಮೋಸ ಮಾಡುವ ಪ್ರವೃತ್ತಿಗೆ ಇನ್ನೊಂದು ಮುಖ ಹೊಂದಿಸುವುದು. ಮೋಸ ಹೋಗುವವರು ಇರುವತನಕ ಮೋಸ ಮಾಡುವವರು ಇರುತ್ತಾರೆ. ಇದು ಮೇಲ್ನೋಟಕ್ಕೆ ಕಾಣುವ ಚಿತ್ರದ ಸಾರಂಶ.

ಎಡಪಂಥ ಅಥಾವ ಬಲ ಪಂಥ ಎನ್ನುವುದಕ್ಕಿಂತ ಬದುಕ ಪಂಥ ಬಹು ಮುಖ್ಯ ಮತ್ತು ಅದರ ಶೃಂಗಾರವನ್ನು ಕಳೆದುಕೊಳ್ಳಬೇಡಿ ಎನ್ನುವುದಕ್ಕೆ ಉದಾಹರಣೆಯಾಗಿ ಕಿಟ್ಟಿ ಉಳಿದುಕೊಳ್ಳುವ ಅಪಾಟರ್್ಮೆಂಟ್ನ ಸೆಕ್ಯುರಿಟಿಯ ಗಂಡ ಹೆಂಡತಿ ಪ್ರೀತಿಗೆ ಕಿಟ್ಟಿ ಮರಳಾಗುತ್ತಾನೆ ಹೊರತಾಗಿ ರಂಗಾಯಣ ರಘುವಿನ ಮೇಲಿನ ಸಿಟ್ಟಿನಿಂದಲ್ಲ.

ಮನುಷ್ಯನ ಜೀವನ ಕೊಡುಕೊಳ್ಳುವಿಕೆಯಲ್ಲಿ ಅವಲಂಬಿಸಿದೆ, ಅದು ಪ್ರೀತಿಯಾಗಿರಬಹುದು, ಹಣವಾಗಿರಬಹುದು ಅಥಾವ ಮತ್ತೀನ್ನೇನು ವಸ್ತುವಾಗಿರಬಹುದು. ಜೀವನವನ್ನು ಪಂಥಗಳ ಲೆಕ್ಕಚಾರಗಳಡಿಯಲ್ಲಿ ತಂದು ಪಂಥಗಳಿಗೆ ಕಟ್ಟುಬಿದ್ದು ನಿಜವಾದ ಬದುಕಿನ ಸಾರವನ್ನು ಕಳೆದುಕೊಳ್ಳಬೇಡಿ.

Anonymous said...

[ನೀವು ಮತ್ತು ನಿಮ್ಮಂಥ ಇತರ] "ಬುದ್ಧಿ"ಜೀವಿಗಳನ್ನು ನಿಜವಾಗಿ ಹೇಗೆ ತೋರಿಸಬೇಕೋ ಹಾಗೆ ತೋರಿಸಿದ್ದಾರೆ ಎಂಬ ಒಂದೇ ಕಾರಣದಿಂದ ನಾಗತಿಹಳ್ಳಿಯವರ ಮೇಲೆ ಕೆಂಡಕಾರುತ್ತಿರುವಂತಿದೆಯಲ್ಲ! :-) ಈ ಸಿನಿಮಾ ನೋಡಲೇಬೇಕು! :-D

parasurama kalal said...

ಮಾರ್ಕ್ಸ್‌ವಾದಿಗಳನ್ನು "ಡಂಬಿಸುವ ಪ್ರವೃತ್ತಿ ಕರ್ನಾಟಕದಲ್ಲಿ ಮೊದಲು ಲೊ"ಯಾವಾದಿಗಳಿಂದಲೇ ಆರಂಭವಾತು. ಅನಂತಮೂರ್ತಿ ತಮ್ಮ ಆವಸ್ಥೆಯಲ್ಲಿ ಇಂತಹ ಪಾತ್ರವೊಂದನ್ನು ಸ್ಠೃಸಿದ್ದಾರೆ. ಲಂಕೇಶ್ ಸೇರಿದಂತೆ ಅನೇಕ ಲೊ"ಯಾವಾದಿಗಳು ಇದನ್ನು ಸಾ"ತ್ಯದಲ್ಲಿ ಮುಂದುವರೆಸಿದ್ದರು. "ಚಿತ್ರವೆಂದರೆ ಲೊ"ಯಾವಾದಿಗಳು, ಮಾರ್ಕ್ಸ್‌ವಾದಿಗಳು ಸೇರಿದಂತೆ ಇಡೀ "ಚಾರವಾದಿಗಳ ಸಮೂಹವನ್ನೇ ಹುಸಿ ಜಾತ್ಯಾತೀತವಾದಿಗಳು ಎಂದು ಅದರ "ಕೃತರೂಪವನ್ನು ಶುದ್ಧ ಸಾ"ತ್ಯವಾದಿಗಳು! ಒಪ್ಪಿಕೊಳ್ಳುತ್ತಿದ್ದಾರೆ. ಶುದ್ಧ ಸಾ"ತ್ಯವಾದಿಗಳು ಎಂದು ಯಾಕೇ ಕರೆಯಬೇಕಾಗಿದೆ ಎಂದರೆ ಅವರು, ಎಡವೂ ಅಲ್ಲ, ಬಲವೂ ಅಲ್ಲ ಎಂದುಕೊಂಡು ಸಾ"ತ್ಯ ಮುಖ್ಯ ಎನ್ನುವುದಕ್ಕೆ. ಹೃದಯ ಮುಖ್ಯ ಎಂದರೆ ಓಕೆ ಅನ್ನಬಹುದು. ಆದರೆ ಸಾ"ತ್ಯ ಮುಖ್ಯ ಎನ್ನುತ್ತಾರೆ. ಹಾಗೇ ಸುಮ್ಮನೆ ಬರೆಯಬೇಕು ಎನ್ನುತ್ತಾರೆ. ಖಲೀಲ್ ಜಿಬ್ರಾನ್ ಇಂತವರಿಗಾಗಿಯೇ ಒಂದು ಸುಂದರ ಕ"ತೆ ಬರೆದಿದ್ದಾನೆ. 'ಒಂದು ದಿನ ಪರಿಶುದ್ಧ ಹೂವು ಹುಟ್ಟಿತು. ಯಾರನ್ನೂ ಮೂಸಲು ಕೊಡದೆ, ಯಾರನ್ನೂ ಕಾಣಲಾರದೆ, ಯಾರನ್ನೂ ನೋಡಲಾಗದೇ ಅರಳಿ ತನ್ನ ತಾನು ನೋಡಿಕೊಳ್ಳುತ್ತಾ ಒಂದು ದಿನ ಪರಿಶುದ್ಧವಾಗಿ ಸತ್ತು ಹೊತು. ಯಾರು ಅದನ್ನು ನೋಡಲೇ ಇಲ್ಲ.' ಇದು ಅನುವಾದವಲ್ಲ, ಕ"ತೆ ಏನು ಹೇಳುತ್ತಿದೆ ಎಂದು ತಿಳಿಸುವುದಕ್ಕಾಗಿ ಮಾತ್ರ ಬರೆದಿದ್ದೇನೆ.
ಜನಪರ ಚಳವಳಿಗಳು ಇಲ್ಲದಿರುವಾಗ ಇಂತಹ ಫ್ಯಾಂಟಮ್‌ಗಳು, ಟಾರ್ಜನ್‌ಗಳು ಸಾ"ತ್ಯದಲ್ಲಿ "ಜೃಂಭಿಸುತ್ತಾರೆ. ಅವರು ಬಹಳ ದಿನಗಳ ಕಾಲ ಇರುವುದಿಲ್ಲ. ಕಾಲ ಅನ್ನುವುದು ಎಲ್ಲವನ್ನೂ ಕೊಚ್ಚಿ ಹಾಕುತ್ತಲೇ ಹೋಗುತ್ತದೆ. ಗಟ್ಟಿ ಉಳಿದುಕೊಳ್ಳುತ್ತವೆ. ಜೊಳ್ಳು ತೂರಿ ಹೋಗುತ್ತವೆ. ಸಾ"ತ್ಯ ಚರಿತ್ರೆ ಎಂದರೆ ಇದೇ ಅಲ್ಲವೇ?
ಮಾರ್ಕ್ಸ್‌ವಾದಿಗಳಾಗಿ ತಮ್ಮ ಬದುಕನ್ನು ತೇಯ್ದುಕೊಂಡವರ ಪಟ್ಟಿಯೇ ನನ್ನ ಮುಂದಿದೆ. ಇವರ್‍ಯಾರು ಇವರಿಗೆ ಕಾಣುತ್ತಿಲ್ಲ. ಇತ್ತೀಚಿಗಷ್ಟೇ ನಿಧನರಾದ ಪ್ರೊ. ಎಸ್.ಎಸ್. "ರೇಮಠರನ್ನು ಇಲ್ಲಿ ನೆನಪು ಮಾಡಿಕೊಳ್ಳುವೆ. ಅಕಾಡೆ" ಪ್ರಶಸ್ತಿಯನ್ನು ಸಹ ನಿರಾಕರಿಸಿ, ತಮ್ಮ ಬದುಕಿನೂದ್ದಕ್ಕೂ ತಾವು ನಂಬಿದ ತತ್ವ, ಸಿದ್ಧಾಂತಗಳ ಜೊತೆ ರಾಜೀ ರ"ತವಾಗಿ ಬದುಕಿದ ಅವರು, ಕೊನೆಗಾಲದಲ್ಲಿ ತೀರಾಸಂಕಷ್ಟಗಳಿಗೆ ಒಳಗಾಗಿ ಸಾ"ಗಿಡಾದರು. ಇಂತಹವರು ಯಾರಿಗೂ ಕಾಣಿಸುವುದಿಲ್ಲವಲ್ಲ. ಅವರ ಬಗ್ಗೆ ನಾನು ನಾವು-ನಮ್ಮಲ್ಲಿ ಬ್ಲಾಗ್‌ನಲ್ಲಿ ಬರೆದ ಪುಟ್ಟಲೇಖನ ಇದಕ್ಕೆ ಪ್ರತಿಕ್ರಿಯೆಯಾಗಿ ಪ್ರಕಟಿಸುವುದು ಸೂಕ್ತ ಎಂದು ಇದರ ಜೊತೆ ಅದನ್ನು ಸಹ ಪ್ರತಿಕ್ರಿಯೆರೂಪವಾಗಿ ಸಾದಾರ ಪಡೆಸುವೆ.

parasurama kalal said...

ಜಡಿ ಜೆ. ಬರೆದ ಪ್ರತಿಕ್ರಿಯೆ ಓದಿದೆ. ಬೀದಿನಾಟಕದಲ್ಲಿ ಕೆಲಸ ಮಾಡಿದ, ಹಳ್ಳಿಂದ ಕಷ್ಟಪಟ್ಟು ಮೇಲೆ ಬಂದ ಹುಡುಗನೊಬ್ಬ ಈಗ ವೇದಾಂತಿಯಂತೆ ಮಾತನಾಡುವುದು ಅಚ್ಚರಿಯ ಸಂಗತಿ.
ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುವುದಕ್ಕೆ ಅವರಿಗೆ ಹಕ್ಕಿದೆ. ಅದರೆ ಕೊನೆಯ ಸಾಲುಗಳ ಬಗ್ಗೆ ನನ್ನ ತಕರಾರು ಇದೆ. 'ಮನುಷ್ಯನ ಜೀವನ ಕೊಡಕೊಳ್ಳು"ಕೆಯಲ್ಲಿದೆ. ಅದು ಹಣವಾಗಿರಬಹುದು, ಪ್ರೀತಿಯಾಗಿರಬಹುದು ಮತ್ತೇನೂ ವಸ್ತುವಾಗಿರಬಹುದು. ಜೀವನವನ್ನು ಪಂಥಗಳ ಲೆಕ್ಕಾಚಾರಗಳ ಅಡಿಯಲ್ಲಿ ತಂದು ಪಂಥಗಳಿಗೆ ಕಟ್ಟುಬಿದ್ದು ನಿಜವಾದ ಬದುಕಿನ ಸಾರ ಕಳೆದುಕೊಳ್ಳಬೇಡಿ.'
ಈ ವಾಕ್ಯವೇ ಅವರು ಹೇಳುವ ಬದುಕಿಗೆ "ರುದ್ಧವಾಗಿಯೇ ಇದೆ. ಮನುಷ್ಯದ ಜೀವನದ ಕೊಡುಕೊಳ್ಳು"ಕೆಯನ್ನು ಪ್ರೀತಿ, ಹಣ ಹಾಗೂ ಮತ್ತೇನೂ ವಸ್ತುಗಳ ಕೊಡುಕೊಳ್ಳು"ಕೆಯಲ್ಲಿದೆ ಎಂದರೆ ಏನರ್ಥ? ಪ್ರೀತಿ, ಹಣ, ಮತ್ತೇನೂ ವಸ್ತುಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವವರಿಗೆ ಬದುಕಿನ ಗಾಢ ಅನುಭವ ದಕ್ಕಿತೇ?
ಪಂಥಗಳಿಗೆ ಕಟ್ಟುಬಿದ್ದು ಬದುಕಿನ ಸಾರ ಕಳೆದುಕೊಳ್ಳಬೇಡಿ ಎನ್ನುವುದು ಈಗಾಗಲೇ ಬಳಿಸಿ, ಬಳಿಸಿ ಸವಕಲಾಗಿರುವ ಕ್ಲೀಷೆಯಾಗಿ ಹೋಗಿದೆ.
ಕಾರ್ಲ್ ಮಾರ್ಕ್ಸ್ ಒಂದೆಡೆ ಹೇಳುತ್ತಾರೆ. (ಕಾರ್ಲ್ ಮಾರ್ಕ್ಸ್ ಉದಾಹರಣೆ ಕೊಟ್ಟರಂತೂ ಅನೇಕರು ಕಪ್ಪೆ ಮೈ ಮೇಲೆ ಬಿದ್ದವರಂತೆ ಹಾರಾಡುತ್ತಾರೆ.) 'ನನಗೆ ಯಾವ ಐಡಿಯಾಲಾಜಿ ಇಲ್ಲ ಎನ್ನುವರ ಬಗ್ಗೆ ನನಗೆ ಕನಿಕರ"ದೆ. ಯಾಕೆಂದರೆ ಅದಕ್ಕಿಂತ ಕೆಟ್ಟ ಐಡಿಯಾಲಾಜಿ ಮತ್ತೊಂದಿಲ್ಲ.'
ಸ್ವಾ" ಬದುಕಿಗೆ ಒಂದು ಬದ್ಧತೆ ಬೇಕು. ಈ ಬದ್ಧತೆ ಅನ್ನುವುದು ನಂಬಿಕೆಯ ಮೇಲೆ ಹುಟ್ಟುವಂತಾದ್ದು, ಈ ನಂಬಿಕೆ ಎನ್ನುವುದು ಬದುಕಿನ ಗಾಢ ಅನುಭವಗಳ ಮೂಲಕವೇ ಹುಟ್ಟುತ್ತದೆ. ಇಲ್ಲಿ ಪಂಥಗಳು ಇರಬಹುದು, ಇರದೇ ಇರಬಹುದು. ಆದರೆ ಅವು ನಿರ್ವ"ಸುವ ಪಾತ್ರಗಳ ಬಗ್ಗೆ ಎಚ್ಚರಿಕೆ ಇರಬೇಕು ಅಷ್ಟೇ. ಯಾಕೆಂದರೆ ಬದುಕು ಎನ್ನುವುದು ಸರಳ ರೇಖೆಯಲ್ಲಿರುವುದಿಲ್ಲ.
- ಪರುಶುರಾಮ ಕಲಾಲ್

Anonymous said...

ನಾಗತಿಹಳ್ಳಿ ಬುದ್ಧಿಜೀವಿಗಳನ್ನು ಲೇವಡಿ ಮಾಡಲಿ, ಕೋಮುವಾದಿ ಸಿದ್ಧಾಂತವನ್ನೇ ಎತ್ತಿಹಿಡಿಯಲಿ. ಕನಿಷ್ಠ ಸಿನಿಮಾ ಮಾಡಲಿ. ನಾಗತಿಹಳ್ಳಿಗೆ ಸಿನಿಮಾ ಮಾಡುವುದಕ್ಕೇ ಬರುವುದಿಲ್ಲ ಎಂಬುದು ಬರಬರುತ್ತಾ ಸಾಬೀತಾಗುತ್ತಿದೆ. ಅವರ ಕೊಟ್ರೇಶಿ ಕನಸು, ಉಂಡೂ ಹೋದ ಕೊಂಡು ಹೋದದಂಥ ಚಿತ್ರಗಳನ್ನು ನಿಜಕ್ಕೂ ನಾಗತಿಹಳ್ಳಿಯೇ ಚಿತ್ರಕತೆ ಬರೆದು ನಿರ್ದೇಶಿಸಿದ್ದರಾ ಎಂಬ ಅನುಮಾನ ಬರುವಂಥ ಚಿತ್ರಗಳನ್ನು ಅವರೀಗ ಮಾಡುತ್ತಿದ್ದಾರೆ.

ಇನ್ನು ಚಿತ್ರದಲ್ಲಿರುವ ಬುದ್ಧಿಜೀವಿ ಪಾತ್ರ ನಾಗತಿಹಳ್ಳಿಯನ್ನೇ ಹೋಲುತ್ತಿರುವಂತೆ ಕಾಣಿಸುತ್ತದೆ. ನಾಗತಿಹಳ್ಳಿ ಬರೆಹ, ಸಿನಿಮಾ, ಮಾತು ಮತ್ತು ನಡವಳಿಕೆಯ ನಡುವಣ ಅಂತರಗಳನ್ನು ನೋಡಿದರೆ ಇದು ಅರ್ಥವಾಗುತ್ತದೆ. ಒಂದಕ್ಕೊಂದು ಸಂಬಂಧವೇ ಇಲ್ಲ. ಈ ಸಿನಿಮಾವನ್ನು ವಿಮರ್ಶಿಸಲು ನೂರಾರು ಪದಗಳನ್ನು ವ್ಯಯಿಸಿರುವುದಕ್ಕೆ ನನ್ನ ಅನುಕಂಪವಿದೆ.
-ರಮೇಶ್ ಸಮಗಾರ

Anonymous said...

hinde maatad maatad mallige-yalli nammolage beretu hoda bayalu sseme katte puraana-da paatra-galannu bafoon-nanthe chitrisi, eega kempu-horaatagaara-rannu kodangi-galanthe kaanisuvudu Naagathihalli-yavara hosa-prayogada viphalathegalu.. avarige kallathmaka-commrcial chitragala sthithyanthara-da prayoga-kkintha duddu madode guri.. hinde nanna prithiya hudugi yemba avaasthava chitrakke award baralilla antha bobbe hodediddaru.. -kaviswara shikaripura

ranganata said...

bara barutta rayara kudure katte ayithanthe...hanage ayith nagti kathe.

Anonymous said...

LOL!, That's what you journalists and the so-called literary giants do nowadays!. No wonder Nagthi has exposed it and We definitely encourage it.
There are 3 categories of people we never trust
1). Politicians (obviously)
2). Journalists (inevitably)
3). Kannada-sahithya intellectuals!!.
Good work Nagthi!.
-The Ocean