ಇನ್ನು ಕೆಲವೇ ದಿನಗಳಲ್ಲಿ 'ಸುದ್ದಿಮಾತು'ಗೆ ಒಂದು ವರ್ಷದ ಸಂಭ್ರಮ. ಆ ಆಚರಣೆಗೆ ಮುನ್ನವೇ ನಾವು ನಿಮ್ಮಿಂದ ವಿದಾಯ ಬಯಸುತ್ತಿದ್ದೇವೆ. ವಿದಾಯ ಎಂದಾಕ್ಷಣ ನಿಮ್ಮಲ್ಲಿ ಹಲವು ಆಲೋಚನೆಗಳು ಒಮ್ಮೆಲೆ ನುಗ್ಗಿ ಬಂದಿರಬಹುದು. ಇವರ ಮೇಲೆ ಯಾರೋ ಕೇಸು ಹಾಕಿರಬೇಕು, ಇಲ್ಲ ಯಾರೋ ಇವರೇ ಮಾಡ್ತಿರೋದು ಅಂತ ಗೊತ್ತಾಗಿ ಧಮಕಿ ಹಾಕಿರಬೇಕು - ಹೀಗೆ ನಿಮ್ಮಲ್ಲಿ ಅನೇಕ ಐಡಿಯಾಗಳು ಹೊಳೆದಿರಲೂ ಸಾಕು.
ಆದರೆ ಅದಾವುದೂ ಅಲ್ಲ.
ಒಂದು ವರ್ಷದ ಹಿಂದೆ ಹೀಗೆ ಯಾವುದೋ ಪತ್ರಿಕಾ ವರದಿಗೆ ಸ್ಪಂದಿಸುವ ನೆವದಲ್ಲಿ ಬ್ಲಾಗ್ ಹುಟ್ಟಿಕೊಂಡಿತು. ನಿನ್ನೆ ಒಂದು ಪೋಸ್ಟ್ ಮಾಡಿದಿವಿ, ಇಂದೂ ಒಂದು ಮಾಡಿದರೆ ಹೇಗೆ.... ಹೀಗೆ ಸುದ್ದಿಮಾತು ಒಂದು ರೂಪ ಪಡೆದುಕೊಂಡಿತು. ಆ ನಂತರ ಮಾಧ್ಯಮ ಕ್ಷೇತ್ರದ ಬೆಳವಣಿಗೆಗಳನ್ನು ಗಮನಿಸುತ್ತಾ, ಪ್ರತಿಕ್ರಿಯಿಸುತ್ತಾ ಸಾಗಿದೆವು. ಕೆಲವೊಮ್ಮೆ ಉತ್ತಮ ಬರಹಗಳನ್ನು ಹೆಕ್ಕಿ ಹಾಕಿದೆವು. ಆರಂಭದಲ್ಲಿ ಬಂದ ಪ್ರತಿಕ್ರಿಯೆಯಿಂದ ಹಿಗ್ಗಿದೆವು. ನಮಗೆ 'ನಾವು ಯಾರು' ಎಂದು ಹೇಳಿಕೊಳ್ಳುವುದಕ್ಕಿಂತ, ನಮ್ಮ ವಿಚಾರವನ್ನು ಹೇಗೆ ಬ್ಲಾಗ್ ಓದುಗ ಸಮುಊಹ ಸ್ವೀಕರಿಸುತ್ತದೆ ಎಂಬುದರ ಬಗ್ಗೆ ಕುತೂಹಲವಿತ್ತು. ಕೆಲವರು 'ನೀವು ಕಾಂಗ್ರೆಸ್ಸಿನವರು' ಎಂದು ಟೀಕಿಸಿದರೆ, ಇನ್ನು ಕೆಲವರು 'ನೀವು ಎಡಪಂಥೀಯರು' ಎಂದು ಮುಊದಲಿಸಿದರು.
ಪ್ರಜಾವಾಣಿ ಪತ್ರಿಕೆಯನ್ನು ಒಟ್ಟಾರೆಯಾಗಿ ಒಪ್ಪಿಕೊಳ್ಳುತ್ತಲೇ, ಅದರ ಕೆಲ ಧೋರಣೆಗಳನ್ನು ಟೀಕಿಸಿದೆವು. ಆ ಪತ್ರಿಕೆ 60ನೇ ವರ್ಷಾಚರಣೆ ಸಂದರ್ಭದಲ್ಲಿ ಬರೆದ ಸಂಪಾದಕೀಯದಲ್ಲಿ ತಪ್ಪುಗಳನ್ನು ಹುಡುಕಿ ಬರೆದ ಲೇಖನ ಉತ್ತಮ ಪ್ರತಿಕ್ರಿಯೆ ತಂದಿತ್ತು. ಹಾಗೆಯೇ ವಿಜಯ ಕರ್ನಾಟಕ ಪಕ್ಕಾ ಚೆಡ್ಡಿಯಾಗಿ ವರ್ತಿಸಿದಾಗ ಟೀಕಿಸಲೇ ಬೇಕಾಯ್ತು. ಆದರೆ ಯಾರ ಮೇಲೂ ವೈಯಕ್ತಿಕ ಆರೋಪ ಮಾಡಲಿಲ್ಲ. ವಿಚಾರದ ನೆಲಗಟ್ಟಿನಲ್ಲೇ ನಮ್ಮ ಟೀಕೆ ಇತ್ತು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ ಎಂದೇ ನಮ್ಮ ನಂಬುಗೆ.
ಈ ಮಧ್ಯೆ ನಮ್ಮ ಓದುಗರು ಸುದ್ದಿಮಾತುಗಾರರನ್ನು ಅನೇಕರಲ್ಲಿ ಹುಡುಕಿದರು. ಜಿ.ಎನ್ ಮೋಹನ್, ದಿನೇಶ್.. ಹೀಗೆ ಪತ್ರಿಕಾ ಜಗತ್ತಿನ ಅನೇಕ ಹೆಸರುಗಳು ಹರಿದಾಡಿದವು. ಕೆಲವರಂತೂ, 'ಅವರು ನಮ್ಮ ಹುಡುಗರೇ ಕಣೋ' ಎಂದು ಸುಖಾ ಸುಮ್ಮನೆ ಎಲ್ಲರ ಮುಂದೆ ಒಂಥರಾ ಸ್ಕೋಪ್ ತೆಗೊಳೋಕೆ ಹೇಳಿಕೊಂಡಿದ್ದ ಉದಾಹರಣೆಗಳೂ ಉಂಟು.
ಮೊದಲು ಒಂದು ವಿಚಾರವನ್ನು ಸ್ಪಷ್ಟ ಪಡಿಸುತ್ತೇವೆ. ನಾವು ಯಾರು ಎನ್ನುವುದು ಮುಖ್ಯವೇ ಅಲ್ಲ. ಕಾರಣ ಇಲ್ಲಿ ಯಾರೂ ಮುಖ್ಯರಲ್ಲ! ಅದೇ ಹೊತ್ತಿಗೆ ಇನ್ನೊಂದು ಮಾತು - ನೀವು ಸಂಶಯ ಪಡುತ್ತಿರುವ ಯಾರೂ ನಮ್ಮ ತಂಡದಲ್ಲಿಲ್ಲ. ಜಿ.ಎನ್ ಮೋಹನ್ ನಮ್ಮ ತಂಡದಲ್ಲಿ ಇದ್ದಿದ್ದರೆ, ಅವರಿಗೆ ಪ್ರಶ್ನೆ ಕೇಳುವ ಪ್ರಮೇಯವೇ ಬರುತ್ತಿರಲಿಲ್ಲ.
ಹೆಸರಿಲ್ಲದೆ ಬರೆದರೆ ಏನೆಲ್ಲಾ ಪ್ರತಿಕ್ರಿಯೆ ಬರಬಹುದು, ಎಂಬ ಸಣ್ಣ ಕುತೂಹಲದಿಂದ ಬ್ಲಾಗ್ ಮುಂದುವರಿಸಿದೆವು. ಇಲ್ಲಿಯವರೆಗೂ ಬಂದು ನಿಂತಿದ್ದೇವೆ. ಹೆಸರು ಹೇಳದಿದ್ದರೂ, ನಾವು ದಾರಿ ತಪ್ಪಲಿಲ್ಲ ಎಂದು ನಂಬುತ್ತೇವೆ. ಯಾರಿಗೂ ಮುಜುಗರಕ್ಕೆ ಈಡು ಮಾಡುವಂತಹ ಬರಹಗಳನ್ನು ಹಾಕಲಿಲ್ಲ. ನಿಜ. ಒಂದೆರಡು ಕಾಮೆಂಟ್ ಗಳನ್ನು ಪಬ್ಲಿಷ್ ಮಾಡುವಾಗ ಎಡವಿದೆವೇನೋ ಎನ್ನಿಸುತ್ತಿದೆ. ಅದು ಆ ಕ್ಷಣ wrong judgement. ಅಂತಹ ಕಾಮೆಂಟ್ ಗಳಿಂದ ಬೇಸರ ಆಗಿರುವವರಿಗೆ ಕ್ಷಮೆ ಕೋರುತ್ತೇವೆ.
ಇನ್ನು ವಿದಾಯದ ಮಾತುಗಳೇಕೆ?
ನಾವು ಹೆಸರು ಹೇಳದೆ ಬ್ಲಾಗ್ ನಡೆಸಿದ ಕಾರಣಕ್ಕೆ, ಹೆಸರಿಲ್ಲದೆ ಬರೆಯುವುದನ್ನು ಬೆಂಬಲಿಸುತ್ತೇವೆ ಎಂದಲ್ಲ. ಹೆಸರಿಲ್ಲದೆ ಉಳಿಯುವುದು ನಿಜವಾಗಿಯುಊ ಸ್ವಾತಂತ್ರ್ಯವೇ. ಆದರೆ ಅದನ್ನೇ ಸ್ವೇಚ್ಛೆಯಾಗಿಸಿಕೊಂಡವರ ಬಗ್ಗೆ ನಮಗೆ ಬೇಸರವಿದೆ. ಆ ಸ್ವಾತಂತ್ರ್ಯ ಆರೋಗ್ಯವಂತ ಚರ್ಚೆಗೆ ಪ್ರೇರಣೆ ಆಗದೆ, ವೈಯಕ್ತಿಕ ನಿಂದನೆಯ ಹಾದಿ ಹಿಡಿಯುತ್ತಿರುವುದು ದು:ಖದ ಸಂಗತಿ. ಸುದ್ದಿಮಾತು ಆರಂಭವಾದಾಗ ಮಾಧ್ಯಮಗಳ ಬಗ್ಗೆ ಬರೆಯುತ್ತಿದ್ದ ಬ್ಲಾಗ್ ಗಳು ಅಷ್ಟಾಗಿ ಕಾಣಲಿಲ್ಲ. ಇತ್ತೀಚೆಗೆ ಅವುಗಳ ಸಂಖ್ಯೆ ಹೆಚ್ಚಿದೆ. ಕೆಲವು ದಿನಗಳ ಹಿಂದೆ 'ಸುದ್ದಿ ಮನೆ ಕತೆ' ಯಾದವರು ಈಗ 'ಸ್ಫೋಟಕ ಸುದ್ದಿ' ಯಾಗಿ ಹಾಜರಾಗಿದ್ದಾರೆ. ಆ ಮಹಾನುಭಾವ ಮೋಹನ್ ಮತ್ತು ದಿನೇಶ್ ಒಂದೇ ದಿನ ಕಾಮೆಂಟ್ ಹಾಕಿದ್ರಂತೆ, ಆ ಕಾರಣಕ್ಕೆ ಇದು ಅವರದೇ ಬ್ಲಾಗ್ ಎಂದು ಫರ್ಮಾನು ಹೊರಡಿಸಿಬಿಟ್ಟ. ಇನ್ಯಾರೋ ಒಬ್ಬ ಪತ್ರಿಕೋದ್ಯಮದ ವಿದ್ಯಾರ್ಥಿ ಎಂದು ಹೇಳಿಕೊಂಡು ಬರೆಯುತ್ತಿದ್ದಾನೆ. ಈ ಮಧ್ಯೆ ಕಾರ್ಗಿಲ್ ವೀರ ಶಿವಪ್ರಸಾದ್, ಇಂತಹ ಬ್ಲಾಗರ್ಸ್ ಮಧ್ಯೆ ಸುದ್ದಿಮಾತು ವನ್ನೂ ಸೇರಿಸಿ ಸಾರಾಸಗಟಾಗಿ ತೀರ್ಪು ಕೋಡುತ್ತಾರೆ.
ಇಂತಹ ಕಲುಷಿತ ವಾತಾವರಣದಿಂದ ದೂರ ಇರಬೇಕೆಂಬುದು ನಮ್ಮ ಬಯಕೆ. ನೀವೇನಂತೀರಿ?
Tuesday, August 25, 2009
Subscribe to:
Post Comments (Atom)
24 comments:
ಎಲ್ಲರ ಮಧ್ಯೆ ನಿಮ್ಮದು ವಿಭಿನ್ನವಾಗಿ ವೈಯಕ್ತಿಕವಾಗಿ ಅಷ್ಟೇಲ್ಲಾ ಕೆರಚು ಎರಚದೆ ಸುದ್ದಿಮನೆಯಲ್ಲಿನ ವಿವರ ಕೊಡುತ್ತಿದ್ರಿ.ಉಳಿದವರು ನೇರವಾಗಿ ವೈಯಕ್ತಿಕವಾಗೇ ದಾಳಿ ಆರಂಭಿಸಿದ್ದು ಬ್ಲಾಗ್ ಗಳ ದುರ್ಧೈವ.ಯಾರೋ ಹೇಳಿದರು ಅಂತ ಈ ತೀರ್ಮಾನ ಯಾಕೆ?. ಹಾಯ್ ಬೆಂಗಳೂರು,ಲಂಕೇಶ್ ಪತ್ರಿಕೆಗಳ ಮಧ್ಯೆ ಇರೋ ದಿನ ಪತ್ರಿಕೆಗಳ ಥರ ನಿಮ್ಮ ಬ್ಲಾಗ್!!.ಉಳಿದ ಬ್ಲಾಗ್ ಗಳು ಏನೇ ಹೇಳಿದರೂ ಮೊದಲಿನ ಉದ್ದೇಶವನ್ನು ಇಟ್ಟುಕೊಂಡೆ ೨ ನೇ ವರ್ಷಕ್ಕೆ ಪಾದಾರ್ಪಣೆ ಮಾಡಿ!!
ಶುಭಾಶಯಗಳೊಂದಿಗೆ...
It is not a good decision.
Please continue..
Your blog will help full to media persons & society. In the public interest you should continue to post. I hope you will do.
ಅನಾಮಿಕರ ಸುದ್ದಿಮಾತು ಮುಂದುವರೆಯಲಿ ಎಂಬುದು ನಮ್ಮ ಬಯಕೆ ಆದರು ನಿಮ್ಮ ಸ್ವತಂತ್ರಕ್ಕೆ ಅಡ್ಡಿ ಪಡಿಸೋದು ಬೇಡ ನಿಮ್ಮ ನಿರ್ಧಾರ ಸಮಯೋಚಿತವಾಗಿದೆ.ಯಾರು ಏನನ್ನು ಬದಲಾವಣೆ ಮಾಡಲು ಸಾದ್ಯವಿಲ್ಲ ಅನ್ನೋದು ನಮ್ಮ ದೇಶದ ಅಘೋಷಿತ ಸತ್ಯ ಮನಪೂರ್ವಕ ವಿದಾಯಗಳು ಸುದ್ದಿಮಾತು ಪ್ರವರ್ತಕರೆ.......
ದೂರ ಹೋಗುವ ಬಯಕೆ..ಯಾಕೇ ಯಾಕೇ ಇದು ನನ್ನ ಮೊದಲ ಪ್ರಶ್ನೆ.
ಸುದ್ದಿಮಾತು ಪ್ರಾರಂಭವಾದಾಗ ಅದೇ ತಾನೇ ಬ್ಲಾಗ್ ಲೋಕದಲ್ಲಿ ಇಣುಕಿ ಹಾಕಿದ್ದ ನಾನು ತಡವಾಗಿ ಸುದ್ದಿಮಾತು ಬ್ಲಾಗ್ ನೋಡಿದೆ. ಪತ್ರಿಕೋದ್ಯಮದಿಂದ ಏನಾದರೂ ಮಾಡಬಹುದು ಎಂದು ಪತ್ರಕರ್ತನಾದ ನಾನು ಇಲ್ಲಿಯ ಲೋಕ ಕಂಡು ಬೆರಗಾಗಿ ಹೋದೆ. ನೇರ,ನಿಷ್ಟೂರ ನಡುವಳಿಕೆಗಳಿಂದ ಅನೇಕ ಅವಕಾಶ ಕಳೆದುಕೊಂಡೆ. ಇದರಿಂದ ನನಗೆ ಯಾವ ದುಃಖವಾಗಲಿ, ವಿಷಾಧವಾಗಲಿ ಇಲ್ಲ. ಈ ನಡುವೆ ಬದುಕು ಹಾಗೂ ಪತ್ರಕರ್ತ ಎರಡನ್ನೂ ಇಟ್ಟುಕೊಂಡು ಹೋರಾಟ ಮಾಡುವ ನಿರಂತರ ಪ್ರಯತ್ನ ಸಾಗಿದೆ.ಬದುಕಿನ ಅಗತ್ಯಕ್ಕೆ ಇದು ಅನಿವಾರ್ಯವೂ ಆಗಿದೆ. ಈ ಅನಿವಾರ್ಯತೆಯೂ ಎಂದೂ ನನ್ನ ಬರವಣಿಗೆಯ ಮೊನಚನ್ನು ಕಡಿಮೆ ಮಾಡಿಲ್ಲ. ಬದ್ದತೆಯನ್ನು ದೂರ ಸರಿಸುವುದಾಗಿಲ್ಲ. ಅನೈಚ್ಯಿಕ ಸಂಧಾನಕ್ಕೆ ಅವಕಾಶ ಕೊಟ್ಟಿಲ್ಲ. ಇಷ್ಟು ನನ್ನ ಬಗ್ಗೆಯೇ ಹೇಳುವುದಕ್ಕೆ ಕಾರಣ ಬದುಕಿನಿಂದ ದೂರ ಹೋಗಲು ಸಾಧ್ಯವಿಲ್ಲ ಎನ್ನುವದಕ್ಕೆ.
ಸುದ್ದಿಮಾತು ಬ್ಲಾಗ್ ಆದರೂ ಅದರ ಹಿಂದೆ ಇರುವವರು ಮನುಷ್ಯರು ತಾನೇ. ಅವರೂ ಸಹ 'ನಮ್ಮಂತವರು' ಎಂದು ಹೇಳಲು.
ದೂರ ಹೋಗುವದಾದರೂ ಎಲ್ಲಿಗೆ? ಎಲ್ಲರೂ ಒಂದು ದಿನ ದೂರ ಹೋಗಲೇಬೇಕು. ಅದನ್ನು ತಪ್ಪಿಸಲು ಆಗುವುದಿಲ್ಲ.
ಮನುಷ್ಯನಲ್ಲಿ ಒಂದು ಐಬು ಇದೆ. ಅದು ಅವನು ಯೋಚಿಸುವುದು ಎಂದು ನಾಟಕಕಾರ ಬ್ರೆಕ್ಟ್ ಒಂದು ಕಡೆ ಹೇಳುತ್ತಾನೆ. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದನ್ನು ತಪ್ಪಿಸಿಕೊಂಡವನು ಮನುಷ್ಯನಾಗಿ ಉಳಿದಿರಲಾರ.
ಮನುಷ್ಯನಾಗಿ ಉಳಿಯುವುದೇ ಈ ಕಾಲದ ದೊಡ್ಡ ಸವಾಲಾಗಿದೆ.ನಾವು ತಪ್ಪು ಮಾಡುವುದಿಲ್ಲ ಎಂದು ಹೇಳಲಾಗುವುದಿಲ್ಲ. ಮನುಷ್ಯ ಸಹಜ ತಪ್ಪುಗಳು ಅವು. ಪರಿಪೂರ್ಣ ಮನುಷ್ಯ ಇರುವುದು ಇಬ್ಬರೇ. ಒಬ್ಬರು ಇನ್ನೂ ಹುಟ್ಟದವರು. ಮತ್ತೊಬ್ಬರು ಈಗಾಗಲೇ ಸತ್ತವರು ಎಂದು ಯಾರೋ ಹೇಳಿದ್ದು ನೆನಪಿಗೆ ಬರುತ್ತದೆ.
ಸುದ್ದಿಮಾತು ಬ್ಲಾಗ್ ಹಿಂದೆ ಯಾರಿದ್ದಾರೆ ಎಂದು ಒಮ್ಮೆ ಹುಡುಕುವ ಪ್ರಯತ್ನ ಮಾಡಿದೆ. ಯಾರೇರು ಹೆಸರು ಕೇಳಿ ಬಂದವು. ನನ್ನ ಶಿಷ್ಯನೊಬ್ಬ ಈಗ ಬೆಂಗಳೂರಿನ ಚೆನಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಐದು ಜನರಿದ್ದಾರೆ. ಅವರೆಲ್ಲಾ ನನಗೆ ಗೊತ್ತು ಹೆಸರು ಹೇಳುವುದಿಲ್ಲ ಎಂದು ಹೇಳಿ ನೀವೆಲ್ಲಾ ಎಂತಹ ಪತ್ರಕರ್ತರು, ನಿಮ್ಮ ಅನುಭವ ಏನೋ ಇಲ್ಲ ಎಂಬಂತೆ ಫೋಜು ನೀಡಿ ಬಿಟ್ಟ. ರಾಜಧಾನಿಯ ಕಾಲುಗುಣವೇ ಇಂತಹ ಮಾತಿಗೆ ಕಾರಣವಾಗುತ್ತಿದೆ ಎಂದು ನಕ್ಕು ಸುಮ್ಮನಾದೆ. ಹಂಪಿ ಕನ್ನಡ ವಿವಿಯಲ್ಲಿ ನಡೆದ ಹಿಂದುಳಿದ ಆಯೋಗದ ಸಭೆಗೆ ಯುವ ಪತ್ರಕರ್ತ ಮಿತ್ರರೇ ದಂಡೆ ಆಗಮಿಸಿತ್ತು. ಅವರಲ್ಲಿ ಇಂತಹ ಚರ್ಚೆ ಬಂದಾಗ ಅದರಲ್ಲಿ ನೀವಿದ್ದೀರಿ ಎಂದು ನನ್ನ ಕಡೆಯಿಂದಲೇ ಮಾಹಿತಿ ಸಂಗ್ರಹಿಸುವ ಕೆಲಸ ನಡೆಸಿದರು. ಅವತ್ತೇ 'ಯಾರಿದ್ದಾರೆ' ಎಂದು ಹುಡುಕುವ ಕುತೂಹಲ ಕಳೆದು ಹೊಯಿತು.
ಆ ಯುವ ಪತ್ರಕರ್ತರಲ್ಲಿ ದಿನೇಶ್ ಸಹ ಇದ್ದರು ಎನ್ನುವುದು ಇಲ್ಲಿ ಮುಖ್ಯ. ಯಾರಿದ್ದರೇನು ಅವರು ನಮ್ಮಂತವರು ಎಂಬ ತೀರ್ಮಾನಕ್ಕೆ ಬಂದು ಬಿಟ್ಟೆ.ನಾನೂ ಇಂತಹ ನಿಷ್ಟೂರ ಮಾತುಗಳನ್ನಾಡಿ 'ಹೆಸರು ಸಮೇತ' ಬೀದಿಗೆ ಬಂದವನು. ನೀರಲ್ಲಿ ಮುಳುಗಿದವನಿಗೆ ಚಳಿಯೇನು? ಮಳೆಯೇನು?
ಹೀಗಾಗಿ ಸುದ್ದಿಮಾತು ನನಗೆ ಪ್ರಿಯವಾಯಿತು. ಪ್ರತಿಕ್ರಿಯೆಗಳನ್ನು ಕಳಿಸಿಕೊಡಲಾರಂಭಿಸಿದೆ.
ಇವತ್ತು ಬ್ಲಾಗ್ ಲೋಕದಲ್ಲಿ ಈ ಅನಾನಿಮಸ್ ಪ್ರತಿಕ್ರಿಯೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಚೇತನಾ ತೀರ್ಥಹಳ್ಳಿ ಈ ಅನಾನಿಮಸ್ ಗಳ ವಿರುದ್ಧ ಕತ್ತಿ ಝುಳಿಸುತ್ತಿದ್ದಾರೆ. ಅವರ ಹೋರಾಟ ಸರಿ ಎನ್ನೋಣ.ಅನಾನಿಮಸ್ ಬ್ಲಾಗ್ ಬಗ್ಗ ಕೂಡಾ ಈ ಕತ್ತಿಯ ಅಲಗು ತಾಗಿಸಿದ್ದಾರೆ. ಈ ಬ್ಲಾಗ್ ಸುದ್ದಿಮಾತು ಎನ್ನುವುದಕ್ಕೆ ಯಾವ ಪುರಾವೆಯೂ ಬೇಕಿಲ್ಲ. ಈ ನಡುವೆ ಜೋಗಿ ಬ್ಲಾಗ್ ಬಗ್ಗೆ ವೈರಾಗ್ಯ ಘೋಷಿಸಿ ಯುದ್ಧಭೂಮಿಯಿಂದ ಹೊರ ನಡೆದಿದ್ದಾರೆ.
ಇನ್ನೊಂದೆಡೆ ಪತ್ರಿಕೆಗಳೇ ಪತ್ರಿಕೋದ್ಯಮದ ಕುರಿತು ಅಂಕಣ ಆರಂಭಿಸಿ ಬಿಟ್ಟಿದ್ದಾವೆ.
ಇವೆಲ್ಲಾ ಬೆಳವಣಿಗೆಗಳು ಸುದ್ದಿಮಾತು ದೂರ ಹೋಗುವ ಬಯಕೆ ಕಾರಣವಾಗಿರಬಹುದು.
ನನ್ನ ದೃಷ್ಠಿಯಲ್ಲಿ ಇದು ಸರಿಯಾದ ತೀರ್ಮಾನವಲ್ಲ. ಯುದ್ಧಭೂಮಿಯಲ್ಲಿ ಇಳಿದ ಮೇಲೆ ಹಿಂದೆ ಸರಿಯುವ ಪ್ರಶ್ನಯೇ ಇಲ್ಲ. ಯುದ್ಧ ಘೋಷಣೆ ಮಾಡಿದ ಮೇಲೆ ಯುದ್ಧ ಮಾಡಬೇಕು ಅಷ್ಟೇ. ನಾವು ದೂರ ಸರಿದರೆ ಯುದ್ಧಕ್ಕೆ ಹೆದರುವವರೇ ವೀರಸೇನಾನಿಗಳಾಗಿ ಬಿಂಬಿತರಾಗಿ ಬಿಡುತ್ತಾರೆ. ಸುದ್ದಿಮಾತು ಬ್ಲಾಗಿಗೆ ತನ್ನದೇ ಆದ ಹೆಸರಿದೆ. ತನ್ನದೇ ಆದ ಮುಖವಿದೆ. ಮುಖಗೇಡಿಗಳಿಗೆ (ಮುಖ ಹೊಂದಿಯೂ ಇರುವವರು)ಹೆದರಿ ಹಿಂದೆ ಸರಿಯುವ ಅಗತ್ಯವಿಲ್ಲ. ನೀವು ಹೆದರಿದ್ದಾರೆಂದು ಈ ಮಾತಿನ ಅರ್ಥವಲ್ಲ. ಇರಬೇಕು, ಇದ್ದ ಜಯಸಬೇಕು ಎನ್ನುವ ದಾಸರ ಹಾಡಿನ ಧನಾತ್ಮಕ ಅಂಶ ಗಮನಿಸಬೇಕು. ಬ್ರೆಕ್ಟ್ ಒಂದು ಕಡೆ ಹೇಳುತ್ತಾನೆ. 'ನೀನು ಮಾತ್ರ ಒಳ್ಳಯವನಾಗಿ ಇದ್ದು ಹೋದರೆ ಸಾಲದು ತಮ್ಮಾ , ಒಂದು ಒಳ್ಳಯ ಜಗತ್ತನ್ನು ಬಿಟ್ಟು ಹೋಗು. ಅಂತಹ ಒಳ್ಳೆಯ ಜಗತ್ತಿಗೆಗಾಗಿ ನಾವು-ನೀವೆಲ್ಲಾ ಹೋರಾಟ ಮುಂದುವರೆಸೋಣ.
- ಪರಶುರಾಮ ಕಲಾಲ್
ಮಾನ್ಯರೇ,
ಪತ್ರಿಕಾ ಲೋಕದ ಅತಿರೇಕಗಳನ್ನು, ಎಡವುವ ಪತ್ರಿಕೆ/ಪತ್ರಕರ್ತ ಎರಡನ್ನೂ ಸಮತೂಕದಲ್ಲಿ ಮತ್ತು ಆರೋಗ್ಯವಂತ ನೆಲೆಗಟ್ಟಿನಲ್ಲಿ "ಸುದ್ದಿಮಾತು" ಚರ್ಚೆಗೆ ತಂದು ಒಂದು ಉತ್ತಮ ವೇದಿಕೆಯನ್ನು ಕಲ್ಪಿಸಿದೆ. ಈ ಸಂಧರ್ಭದಲ್ಲಿ ಅನಾರೋಗ್ಯವಂತ ಮನಸ್ಸಿನ ಕೆಲಮಂದಿ ಸುದ್ದಿಮಾತು ತರಹದ ಬೇರೆ ಬ್ಲಾಗ್ ಸೃಷ್ಟಿಸಿ ವೈಯುಕ್ತಿಕ ನಿಂದನೆಗಳಿಗೆ ಬ್ಲಾಗ್ ಬಳಸಿದ್ದಾರೆ ಮತ್ತು ಅದು ಬ್ಲಾಗ್ ಲೋಕದ ತಲ್ಲಣಕ್ಕೆ ಕಾರಣವಾಗಿದೆ ಎಂಬ ಮಾತು ಸತ್ಯವೇ ಆಗಿದೆ. ಈ ಹಿನ್ನೆಲೆಯಲ್ಲಿ ಅನಾಮಿಕ ಬ್ಲಾಗ್ ಸೃಷ್ಠಿ ಮಾರಕವಾಗಿಯೂ ಇದೆ ಎಂಬುದು ಸಹಾ ಸತ್ಯವೇ. ಬ್ಲಾಗ್ ಲೋಕ ದಲ್ಲಿ ವಿಚಾರಾಧಾರಿತ ಆರೋಗ್ಯವಂತ ಚರ್ಚೆಗಳಾಗಬೇಕೆ ವಿನಹ ಪರಸ್ಪರರ ಮೇಲಣ ಕೆಸರೆರಚಾಟವಲ್ಲ..! ಇದರಿಂದ ಬಟಾಬಯಲಾಗುವುದು ಪರಸ್ಪರರೇ ಆಗಿರುತ್ತಾರೆ. ಇದರಿಂದ ಪ್ರಯೋಜನವೂ ಇಲ್ಲ. ಆದರೆ ಸುದ್ದಿಮಾತು ಕೀಳು ಅಭಿರುಚಿಯ ವಿಚಾರವನ್ನಾಗಲೀ , ಚರ್ಚೆಯನ್ನಾಗಲೀ ಮುಂದಿಟ್ಟಿಲ್ಲ... ಆರೋಗ್ಯವಂತ ನೆಲೆಗಟ್ಟಿನಲ್ಲಿ ವಿಚಾರ ಮಂಡನೆಗಳಾಗಿವೆ, ಸುದ್ದಿಮಾತು ಮುಂದುವರಿಯಲಿ ಇದಕ್ಕೆ ನಮ್ಮ ಬೆಂಬಲವಿದೆ. ಒಂದು ವರ್ಷ ಪೂರೈಸುತ್ತಿರುವ ಸುದ್ದಿಮಾತು ಬ್ಲಾಗ್ ಗೆ ಶುಭಾಶಯಗಳು.
-ಅರಕಲಗೂಡು ಜಯಕುಮಾರ್, ಜನತಾ ಮಾಧ್ಯಮ ದಿನಪತ್ರಿಕೆ, ಹಾಸನ
There is no meaning in saying good bye…
Dear moderator,
According to the best of my knowledge,
None of our senior journalists are ready to accept the negative feed back about their performance in any way…
In such a situation, it is very difficult to highlight their mis deeds with out so called
Mukhavada
ಇತ್ತೀಚಿನ ದಿನಗಳಲ್ಲಿ ನೆಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದಾಗ ನೀವು ಬ್ಲಾಗ್ ಬರೆಯುವದನ್ನು ಅಂದ್ರೆ ಈ ಸುದ್ದಿ ಮಾತನ್ನು ನಿಲ್ಲಿಸುವುದ ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯ.
ಮುಖೇಡಿ ಬ್ಲಾಗೀಗರ ಗದ್ದಲ ಮತ್ತು ಅವರು ಬರೆಯುತ್ತಿರುವ ರೀತಿ, ನೀತಿ ಹಾಗೂ ಭಾಷೆ ಅಷ್ಟು ಆರೋಗ್ಯಕರವಾಗಿಲ್ಲ. ಈ ರೀತಿಯ ಮಖೇಡಿ ಬ್ಲಾಗೀಗರನ್ನು ದ್ವೇಷಿಸುವ ನಾನು ಸುದ್ದಿ ಮಾತು ಸೇರಿದಂತೆ ಕೆಲ ಬ್ಲಾಗ್ ಗಳನ್ನು ತಪ್ಪದೇ ಓದುತ್ತಿದ್ದೆ.ಆದರೆ, ವಿಮರ್ಶೆ ಅಥಾವ ಟೀಕೆಯಲ್ಲಿ ಅವು ಎಂದು ತಮ್ಮ ಇತಿ-ಮಿತಿಗಳನ್ನು ದಾಟಿರಲಿಲ್ಲ.
ನೀವು ಯಾರು ? ಏಕೆ ಹೀಗೆಲ್ಲಾ ಬರೆಯುತ್ತೀರಿ ? ಎನ್ನುವುದಕ್ಕಿಂತ ನಿಮ್ಮ ಬರಹಗಳು ಮತ್ತು ಯೋಚನೆಗಳು ಹಾಗೂ ನೀವು ಸುದ್ದಿಗಳನ್ನು ಹೆಕ್ಕಿ ತೆಗೆಯುತ್ತಿದ್ದ ರೀತಿ ಬೆರಗು ಮೂಡಿಸುವುದರ ಜೊತೆಯಲ್ಲಿ ಇನ್ಫಾರಮೇಟಿವಾಗಿದ್ದವು.
ಸುದ್ದಿ ಮಾತಿನ ಈ ಸುದ್ದಿ ಬೇಸರ ತರಿಸಿದೆ. ಆದರೆ, ನಿಮ್ಮ ಯೋಚನೆ ಸರಿಯಾಗಿದೆ. ಒಂದು ಆರೋಗ್ಯಕರ ಬ್ಲಾಗೀಕರಣಕ್ಕೆ ನಾಂದಿಯಾಡಲು ಈ ಬ್ಲಾಗ್ ಮುಚ್ಚುತ್ತಿರುವುದು ಸಮಂಜಸ ಮತ್ತು ಅದು ನಿಮ್ಮ ಸಾಮಾಜಿಕ ಜವಬ್ಧಾರಿಯನ್ನು ತೋರಿಸುತ್ತಿದೆ. ಎಲ್ಲಾ ಮುಖರಹಿತ ಬ್ಲಾಗಿಗಳು ಮುಖಸಹಿತವಾಗಲಿ ಇಲ್ಲವಾದಲ್ಲಿ ಮುಚ್ಚಿಬಿಡಲಿ. ಆರೋಗ್ಯಕರ ಚರ್ಚೆಗಳಾಗಲಿ.
ನೀವು ಯಾರೆಂದು ತಿಳಿಯುವ ಬಯಕೆ ನನಗಿಲ್ಲ, ನೀವು ಯಾರೇ ಆಗಿದ್ದರು ನಿಮಗೆ ಒಳ್ಳೆಯದಾಗಲಿ. ನಿಮ್ಮ ನಿಲುವುಗಳು ಹೀಗೆ ಇರಲಿ ಮತ್ತು ಆರೋಗ್ಯಕರವಾಗಿರಲಿ.
ಜಡಿಯಪ್ಪ.ಜಿ
olleyadaytu Guru.. Ninna Angadiyannu muchchiddu....
- Jayarama, Samyukta Karnataka
Ups and downs are very common in every ones life. I know Unknown and faceless writers created very new type of sense I.e. Mental disturbance’s for so many Journalists. Don’t close this blog. This is energy feedback forum for YOUNG Journalists.
I wish team members of `Suddimaatu’ for their 2nd year of Birthday festival.
Mahendra Kumar H M
Bellary
Ups and downs are very common in every ones life. I know Unknown and faceless writers created very new type of sense I.e. Mental disturbance’s for so many Journalists. Don’t close this blog. This is energy feedback forum for YOUNG Journalists.
I wish team members of `Suddimaatu’ for their 2nd year of Birthday festival.
Mahendra Kumar H M
Bellary
ಖಂಡಿತ ಕೂಡದು !!! ಹಾಗೇನಾದರೂ ಈ ಬ್ಲಾಗ್ ಮುಚ್ಚಿ ಹೋದರೆ ಪತ್ರಕರ್ತರು ಪ್ರಶ್ನಾತೀತರಾಗಿಬಿಡುವ ಅಪಾಯವಿದೆ!.
ಬ್ಲಾಗುಗಳನ್ನು ನಡೆಸುತ್ತಿರುವ ಪತ್ರಕರ್ತರಿಗೆ, ಕಿವಿಹಿಂಡುವ ವಿಮರ್ಶಕರಿಗೆ ಏನಾಗಿದೆ? ಹಳೇ ಕಾಲದ ಸಿನಿಕ ಜರ್ನಲಿಸ್ಟುಗಳಂತೆ ಆಡುತ್ತಿದ್ದಾರೆ. ಕೆಲವರು ಕಾಮೆಂಟುಗಳ ಬಗ್ಗೆ ಮೈಪರಚಿಕೊಳ್ಳುತ್ತಿದ್ದರೆ, ಇನ್ನು ಕೆಲವರು ಬ್ಲಾಗ್ ಮನೆಯ ಬಾಗಿಲನ್ನೇ ಮುಚ್ಚಿಬಿಡುತ್ತೇವೆ ಅನ್ನುತ್ತಿದ್ದಾರೆ. ಇದು ಸರ್ವಥಾ ಸಲ್ಲದು. ಸುದ್ದಿಮಾತು ಎಂದಿನ ಚಟುವಟಿಕೆಯನ್ನು ಮುಂದುವರಿಸಬೇಕು. ದಟ್ಸ್ ಕನ್ನಡದಲ್ಲಿ ಬ್ಲಾಗನ್ನು ಮುಚ್ಚಬೇಕೆ ಬೇಡವೆ ಎಂಬ ಬಗ್ಗೆ ಚರ್ಚೆಗೆ ಮುನ್ನುಡಿ ಬರೆಯಲಾಗಿದೆ. ಓದಿರಿ.
http://thatskannada.oneindia.in/mixed-bag/blogs/2009/0826-suddimaatu-first-anniversary-balance-sheet.html
ತಪ್ಪು ತೋರಿಸಿಕೊಟ್ಟಾಗ ಹೆಸರುವಾಸಿಯಾದವರಿಗೆ ಮುಖಭಂಗವಾಗುವುದು ಸಹಜವೆ. ಆ ಕಾರಣಕ್ಕಾಗಿ ನೀವೇಕೆ ದೂರಹೋಗಬೇಕು. ಖಂಡಿತ ಮುಂದುವರೆಸಿ. ನಾನಂತೂ ನಿಮ್ಮ ಬ್ಲಾಗ್ ತಪ್ಪದೆ ಓದುವವರಲ್ಲಿ ಒಬ್ಬಳು.
ಅದು ಬ್ಲಾಗ್ ಲೋಕದ ತಲ್ಲಣಕ್ಕೆ ಕಾರಣವಾಗಿದೆ ಎಂಬ ಮಾತು ಸತ್ಯವೇ ಆಗಿದೆ. ಈ ಹಿನ್ನೆಲೆಯಲ್ಲಿ ಅನಾಮಿಕ ಬ್ಲಾಗ್ ಸೃಷ್ಠಿ ಮಾರಕವಾಗಿಯೂ ಇದೆ ಎಂಬುದು ಸಹಾ ಸತ್ಯವೇ..
Dear Jayakumar,
one or two blogers are afraid of ಸತ್ಯ!TV journalists knew that TRUTH.
All hue and cry is for that. Why this was an issue just a week back. After Spotakasuddi. There number of spotaka suddi connected to this bloger is yet to come out. They want block that.
Several month ago Jayantha Kaikini publically said against this. Except KP news paper nobody cared..
Why now it is a issue..
Please dig up the truth my dear journalist
ಸುದ್ದಿ ಮಾತುಗಾರರೇ
ಸತ್ಯ ಹೇಳುವುದೇ ಈಗಿನ ಕಾಲದ ಅತಿ ದೊಡ್ಡ ತಪ್ಪು ಎನ್ನುವ ಮಂದಿ ಇಲ್ಲಿದ್ದಾರೆ. ನಿಮ್ಮ ಬ್ಲಾಗ್ನ ವಿದಾಯದ ಮಾತುಗಳು ನನಗೆ ಇಷ್ಟವಾಗಲಿಲ್ಲ. ನೇರವಾಗಿ ಹೇಳುತ್ತಿದ್ದೇನೆ. ಎಲ್ಲ ರಂಗದಲ್ಲೂ ಮುಖವಾಡ ಹಾಕಿಕೊಂಡ ಬಹಳಷ್ಟು ಮಂದಿ ಇದ್ದಾರೆ. ಅವರು ವಿನಯದ ಮುಖವಾಡ ಹಾಕಿಕೊಂಡೇ ಅನೇಕ ಯುವ ಪತ್ರಕರ್ತರ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿದ್ದಾರೆ. ಎಷ್ಟೋ ಮಂದಿ ಯುವಕರು ಪತ್ರಕರ್ತರಾಗಬೇಕೆಂದು ಬಂದು ಅವರ ಮುಖವಾಡದ ಹಿಂದಿನ ಸತ್ಯ ಅರ್ಥವಾಗದೇ ಬಲಿಯಾಗಿದ್ದಾರೆ.
ಅಪ್ರಾಮಾಣಿಕತೆಯ ಪಟ್ಟ ಕಟ್ಟಿಕೊಂಡಿದ್ದಾರೆ. ಈಗಿನ ಪತ್ರಕರ್ತನೊಬ್ಬನ ಸಂಕಟಗಳು "ಬಲಿತ"ವರಿಗೆ ತಮಾಷೆಯಾಗಿ ಕಾಣುತ್ತವೆ. ತಮಗೆ ಬೇಡವೆಂದವರನ್ನು ಅವರು ತುಳಿದು ಹಾಕಬಲ್ಲ ಶಕ್ತಿವಂತರಿದ್ದಾರೆ. ಹೀಗೆ ಬಂದ ಹಾದಿಯನ್ನು ಮರೆತುಬಿಡುವಷ್ಟು ಹತಾಶ ಸ್ಥಿತಿಯತ್ತ ನೋಡುತ್ತಿರುವ ಅನೇಕ ಯುವ ಪತ್ರಕರ್ತರಿಗೆ ಪ್ರಬುದ್ಧತೆಯ ಹೆಸರಿನಲ್ಲಿ ಬಲಿತ ಅಥವಾ ಸಿದ್ದಾಂತ ಎಂದು ಹೇಳಿಕೊಳ್ಳುವ ಪತ್ರಿಕೋದ್ಯಮದ ನೈಜ ಸ್ಥಿತಿ ಅರ್ಥ ಮಾಡಿಸಿರಿ.ಕೊನೆಯದಾಗಿ ನನಗೆ ಬಸವಣ್ಣ ನೆನಪಾಗುತ್ತಾರೆ. ಅವರ ನಿಜ ಕ್ರಾಂತಿಯನ್ನು ತುಳಿಯಲು ಹೊರಟ ಗುಂಪು ನೆನಪಾಗುತ್ತದೆ...!?
ದಯವಿಟ್ಟು ಬ್ಲಾಗ್ ಮುಂದುವರಿಸಿ,
ಹೆಗ್ಗೆರೆ ರೇಣುಕಾರಾಧ್ಯ
ಮೈಸೂರು.
ರೀ, ಬ್ಲಾಗ್ ನಿಲ್ಸಿದ್ರೆ ಹುಷಾರ್! ಅದೇನ್ ಅಷ್ಟು ಸುಲಭ ಅಂದ್ಕೊಂಡ್ರಾ? ಸುಮ್ನೆ ಏನೂ ಕಾರಣ ಹೇಳ್ದೆ continue ಮಾಡಿ.ಅಷ್ಟೆ!
ಅಗಸಿ ಬಾಗ್ಲತನಕ ಹೊಂಟೊರೊ ವಳ್ಳಿ ಬಂದ್ರ...?
ಸುದ್ದಿಮಾತು
ಹಾಗಾಗಬಾರದು.
ನೀವಿನ್ನು ಹಾದಿ ಶುರುಹಚ್ಚಿದವರು ಅಗಸಿ ಬಾಗಲತನಕ ಹೋಗಿ ವಾಪಸ್ಸು ಬಂದು ಹಚಡ ಹೊದ್ದು ಮುಲಗ್ಯಾಡಿದರು ಎನ್ನುವಂತಾಗಬಾರದು.
ಯಾರು.. ಯಾರು ನೀ ಯಾರು
ಎಂದು ಅವರು ಕೇಳುತ್ತಿರಲಿ
ಅವರ ಅರಚಾಟ,ಕ್ಕೆ ಕನಿಷ್ಟ ಕುಟುಕುವ ಕೆಲಸಮಾಡಿದಿದ್ದರೆ ಅವರ ಹುಚ್ಚಾಟ ಜಾಸ್ತಿಯಾಗುವುದಿಲ್ಲವೆ
-ಶಿವಶಂಕರ ಬಣಗಾರ
HOW DARE YOU SHUT...
IGNORE ಜಡಿಯಪ್ಪM SUGGESTION. Even journalist like Jayakumar suported you. Forget about ex journalists, about to retire journalists..
You Should continue..
We will see how dare you shut...
Kiran shobha Neetu from Hubli
hello suddi maatu moderator, Please continue the blog. We do not have any other source to know the news about kannada journalism. Kindly write about journalism colleges and journalist education in karnataka plus India. We need those information
In journalism REPORTER is always anonymous. His color, hair style,creed, face, dress, ism, college,family etc are all not at all important. What he writes is IMPORTANT.
Like that Blog.
Don't yield to any pressure. That is not good character of a good journalist.
I never ever dream of u people saying good bye to blogging. You know you made media persons to retrospect. They might do the same if you continue blogging. We miss Suddomaathu that made some strides in the Media field. Anyways, if your decision is firm, done with it. Thanx for making media persons to do a re-think over their attitude. Thanks to Suddimaatu and the team....
I am recent visitor to Suddimatu..It is very good. Some like it..other dislike..bu evryone should read...
Wednesday, January 14, 2009
1. ಪ್ರಜಾವಾಣಿಗೇಕೆ ಈ ದುರ್ಗತಿ ಬಂತು?
2. ಭಲೇ ಟಿವಿ9!"
3. Friday, January 9, 2009
ಶಶಿಧರ್ ಭಟ್ ಎತ್ತಿರುವ ಸಾಮಾಜಿಕ ನ್ಯಾಯದ ಗಂಭೀರ ಪ್ರಶ್ನೆಗಳು
4."‘ಒಡ್ಡು ಒಡ್ಡಾಗಿ ಅಂದ್ರೆ ಏನು ರಂಗಣ್ಣಾ?"
5. "ಕನ್ನಡ ಪತ್ರಿಕೆಗಳಲ್ಲಿ ಏಕೆ ಹೀಗೆ?"
6."ಪೇಜಾವರ ಶ್ರೀಗಳ ಸಾರ್ವಜನಿಕ ಮನರಂಜನೆ!"
7. "ಸ್ಕೂಪ್, ಬ್ರೇಕಿಂಗ್ ನ್ಯೂಸ್, ಫ್ಲಾಶ್ ನ್ಯೂಸ್...!"
8. "ಪ್ರಜಾವಾಣಿಗೆ ಈಗ ವಯಸ್ಸಾಗಿದೆ...!"
+ ಪ್ರೆಸ್ ಕ್ಲಬ್ನಲ್ಲಿ ಹನ್ನೆರಡು ದಿನಗಳ ಸೂತಕ
'ದಂಡ'ವತೆ
ಜೀ ಕನ್ನಡ ನ್ಯೂಸ್ ಹೀಗೇಕೆ?
+ ತಿಂಗಳು ಕಳೆದಿದ್ದು ಗೊತ್ತಾಗಲೇ ಇಲ್ಲ...
+ ಹಾಗಾದ್ರೆ ಯಾರವರು?
+ ನಕ್ಕು ಹಗುರಾಗಿ... ಪ್ರಾಮಾಣಿಕರಾಗಿ...
+ ಕನ್ನಡ ಪತ್ರಿಕೆಗಳಲ್ಲಿ ಏಕೆ ಹೀಗೆ?
+ ಕೊಳೆತ ವಸ್ತು ನಾರದೇ ಇರುವುದೆ?
+ ಹೊಲಸು ಕಾರಿಕೊಂಡ ಭೈರಪ್ಪ...
+ ಸ್ಕೂಪ್, ಬ್ರೇಕಿಂಗ್ ನ್ಯೂಸ್, ಫ್ಲಾಶ್ ನ್ಯೂಸ್...!
+ ಪ್ರಜಾವಾಣಿಗೆ ಈಗ ವಯಸ್ಸಾಗಿದೆ...!
+ ಯಡಿಯೂರಪ್ಪ ಯಾರಿಗೆ ಮುಖ್ಯಮಂತ್ರಿ?
+ ಕ್ರೈಸ್ತರ ಮೇಲಿನ ದಾಳಿ, ರಾಜಕಾರಣಿಗಳು ಹಾಗೂ ಸಾಹಿತಿಗಳ ಪತ್...
+ ಯಾರನ್ನೂ ಬದಲಾಯಿಸುವ ಉಮೇದಿಯಿಲ್ಲ...
Pls cntn. ಇಲ್ಲಾಂದ್ರೆ ಪತ್ರಕರ್ತರು ಮಾಡಿದ್ದೆಲ್ಲ ಸರಿಯೆಂದಾಗುತ್ತದೆ. Be honest & proud.
ವೈಯಕ್ತಿಕ ನಿಂದೆಯ ಕೆಲ ಆಪಾದನೆಗಳ ನಡುವೆಯೂ ಸಮಕಾಲೀನ ಪತ್ರಿಕೋದ್ಯಮ ರಾಜಕಾರಣ ಕುರಿತು ಅರ್ಥಪೂರ್ಣ ಟೀಕೆ ಟಿಪ್ಪಣಿ ಒಳನೋಟಗಳನ್ನು ನೀಡಿದ ಸುದ್ದಿಮಾತು ಅನಾಮಿಕ ಎಂಬ ಕಾರಣಕ್ಕಾಗಿ ನೇಪಥ್ಯಕ್ಕೆ ಸರಿಯಬೇಕಾಗಿರುವ ಸನ್ನಿವೇಶ ಸೃಷ್ಟಿಯಾಗಿರುವುದು ಆರೋಗ್ಯಕರ ಅಲ್ಲ.
ಡಿ.ಉಮಾಪತಿ
ನವದೆಹಲಿ.
Post a Comment