Navayana, award-winning publisher, on anticaste issues, is facilitating the training of five dalits/adivasis through the PG Certificate Course in Editing and Publishing conducted by the School of Cultural Texts and Records, Jadavpur University, Kolkata.
AVARNA is a pioneering initiative towards ensuring editorial diversity in the publishing industry in India. Dalit and adivasi graduates, below 35 years of age, must email their CVs to avarna.navayana@gmail.com by 28 Nov 2008.
Ten short-listed applicants will be paid return train fare to attend a screening test on 22 December 2008 in Kolkata.
Five selected candidates, will each receive a stipend of Rs 5,000 per month. Navayana will cover the course fees. Course period: January—April 2009.
For further details visit www.navayana.org or editpub.blogspot.com
Applications can also be posted to NavayanaE-92,2nd Floor, SaketNew Delhi-110017
Thursday, November 6, 2008
Wednesday, November 5, 2008
ದೊಡ್ಡವರ ಸಣ್ಣತನ
ಮಂಗಳವಾರ ಬಿಜೆಪಿ ನಾಯಕ ಅಡ್ವಾನಿಯವರ ಆತ್ಮಕತೆ ಕನ್ನಡ ಅನುವಾದ ಬಿಡುಗಡೆಯಾಯಿತು. ಆತ್ಮಕತೆ ಕನ್ನಡ ಆವೃತಿ ಎಂದಾಕ್ಷಣ ವಿಜಯ ಕರ್ನಾಟಕ ಸಂಪಾದಕ ವಿಶ್ವೇಶ್ವರ ಭಟ್ ರೇ ಈ ಅನುವಾದ ಮಾಡಿರಬೇಕು ಎಂದು ಸುದ್ದಿ ಹಬ್ಬಿತು. ಅದು ನಿಜವೆಂಬುದನ್ನು ಅರಿಯಲು ತಡವಾಗಲಿಲ್ಲ. ಆದರೆ ವಿಜಯ ಕರ್ನಾಟಕ ಪತ್ರಕರ್ತರ ಬಳಗಕ್ಕೆ ಗೊತ್ತಿರುವ ಸಂಗತಿ ಎಂದರೆ - ಇಡೀ ಪುಸ್ತಕವನ್ನು ಅನುವಾದ ಮಾಡಿದವರು ಭಟ್ಟರೊಬ್ಬರೇ ಅಲ್ಲ.ಹಿಂದಿನ ಕೆಲವು ಉದಾಹರಣೆಗಳಂತೆ, ಈ ಬಾರಿಯೂ ಅವರು, ಮೂಲಕೃತಿಯನ್ನು ವಿವಿಧ ಭಾಗಗಳನ್ನಾಗಿ ಹಂಚಿ ತಮ್ಮ ಶಿಷ್ಯೋತ್ತಮರಿಗೆ ಹಂಚಿದರು. ಪ್ರತಿಯೊಬ್ಬರು ಇಂತಿಷ್ಟು ಪುಟ ಅನುವಾದ ಮಾಡಿ ತರುವಂತೆ ಆದೇಶಿಸಿದರು. ಕೆಲವೇ ದಿನಗಳಲ್ಲಿ ಅನುವಾದ ಸಿದ್ಧವಾಯಿತು.
ಆ ನಂತರ ಭಟ್ಟರು ಒಮ್ಮೆ ಎಲ್ಲಾ ಪುಟಗಳ ಮೇಲೆ ಕಣ್ಣಾಡಿಸಿದರು. ಕೃತಿ ಪ್ರಕಟಣೆಗೆ ಸಿದ್ಧವಾಯಿತು. ಬಿಡುಗಡೆಯೂ ಆಯಿತು. ಆದರೆ ಅನುವಾದಕರೆಂದು ಭಟ್ಟರು ಮಾತ್ರ ವಿರಾಜಮಾನರಾದರು.
ದೊಡ್ಡ ಮಂದಿಯ ಸಣ್ಣತನ ಅಂದರೆ ಇದೇ ಅಲ್ಲವೆ?
ಈ ಹಿಂದೆ ಕುಲದೀಪ್ ನಯ್ಯರ್ 'ಸ್ಕೂಪ್' ಅಂಕಣ ಬರಹಗಳನ್ನು ಪುಸ್ತಕ ರೂಪವಾಗಿ ಪ್ರಜಾವಾಣಿ ಸಂಸ್ಥೆ ಪ್ರಕಟಿಸಿತು. ನಯ್ಯರ್ ಬರಹಗಳನ್ನು ಮೂಲಕ್ಕೆ ಧಕ್ಕೆ ಬರದಂತೆ ಬರೆದವರು ನಾಲ್ಕೈದು ಉಪಸಂಪಾದಕರು. ಆ ಅಂಕಣ ಜನಮನ ಸೆಳೆಯಲು ಅವರ ಪಾತ್ರ, ಶ್ರಮ ದೊಡ್ಡದಿತ್ತು. ಪುಸ್ತಕ ಪ್ರಕಟವಾದಾಗ ಅವರ ಹೆಸರುಗಳು ಎಲ್ಲಿಯೂ ನಮೂದಾಗಲಿಲ್ಲ. ಆ ಬರಹಗಳನ್ನು ಸಂಪಾದಿಸದರೆಂದು ಎಸ್. ದಿವಾಕರ್ ರ ಹೆಸರು ಅಚ್ಚಾಯಿತು. ಯಾಕೆ ಹೀಗೆ? ಅನುವಾದ ಉಪಸಂಪಾದಕರ ಕೆಲಸದ ಒಂದು ಭಾಗವೇ ಇರಬಹುದು. ಆದರೆ, ಅಂಕಣಗಳ ಅನುವಾದ ಅಷ್ಟು ಸುಲಭದ ಕೆಲಸವಲ್ಲ. ಸುದ್ದಿಯಂತೆ ಸರಾಗವಾಗಿ ಅನುವಾದ ಮಾಡಲಾಗದು. ಅಂಕಣಗಳ ಅನುವಾದ ಹೆಚ್ಚಿನ ಭಾಷಾ ಪ್ರೌಢಿಮೆ, ಶ್ರಮ ಬೇಡುತ್ತದೆ.
ಅಂತಹ ಬರಹಗಳು ಪತ್ರಿಕೆಯಲ್ಲಿ ಪ್ರಕಟವಾದಾಗಲಂತೂ ಅನುವಾದಕರು ಹೆಸರು ಎಲ್ಲೂ ಕಾಣುವುದಿಲ್ಲ. ಕಡೇ ಪಕ್ಷ ಬರಹಗಳು ಪುಸ್ತಕ ರೂಪದಲ್ಲಿ ಬಂದಾಗಲಾದರೂ ಅವರ ಕೆಲಸಕ್ಕೆ ಒಂದು ಮನ್ನಣೆ ಬೇಡವೆ?
Tuesday, November 4, 2008
ಒಬಾಮಾ ಬ(ಹುಪ)ರಾಕ್!!
ಅಮೆರಿಕ ಬದಲಾಗಿದೆ."ಬದಲಾವಣೆ"ಯ ಧ್ಯೇಯದೊಂದಿಗೆ ಚುನಾವಣೆಗೆ ಇಳಿದ ಒಬಾಮಾ ಈಗ ಅಮೆರಿಕದ 44ನೇ ಅಧ್ಯಕ್ಷ. ಕರಿಯ ಬಿಳಿಯರ ತಾರತಮ್ಯವಿದ್ದ ರಾಷ್ಟ್ರವೊಂದರಲ್ಲಿ ಕರಿಯರ ಸಮುದಾಯದ ವ್ಯಕ್ತಿಯೊಬ್ಬ ರಾಷ್ಟ್ರದ ಉನ್ನತ ಸ್ಥಾನ ಅಲಂಕರಿಸುತ್ತಿರುವುದು ಬದಲಾವಣೆಯಲ್ಲದೆ ಮತ್ತೇನು?
ಶತಮಾನಗಳ ಹಿಂದೆ ಗುಲಾಮರಾಗಿದ್ದರು ಎಂಬ ಕಾರಣಕ್ಕೆ ಇಂದಿಗೂ ಚರ್ಮದ ಬಣ್ಣದಿಂದಲೇ ಅಳೆಯುವ ಬಿಳಿ ಅಮೆರಿಕನ್ನರೂ ಒಬಾಮನ ಶಕ್ತಿಗೆ ತಲೆಬಾಗಿದ್ದಾರೆ. ಆತನ ಕನಸುಗಳಿಗೆ ಸೈ ಎಂದಿದ್ದಾರೆ. ಪ್ರಜಾಪ್ರಭುತ್ವನ್ನು ಎತ್ತಿ ಹಿಡಿದಿದ್ದಾರೆ. ಇತಿಹಾಸ ನಿರ್ಮಿಸಿದ್ದಾರೆ. ಒಬಾಮಾ ತನ್ನ ವಿಜಯ ಭಾಷಣದಲ್ಲೇ ಹೇಳಿದಂತೆ ಇದು ಕೇವಲ ಆತನ ಜಯವಲ್ಲ. ಇಡೀ ಅಮೆರಿಕನ್ನರ ಜಯ.
ಇಲಿನಾಯ್ಸ್ ಸೆನೆಟರ್ ಆಗಿ ಕೇವಲ ಎರಡು ವರ್ಷಗಳ ಅನುಭವವಿರುವ ಒಬಾಮಾ ಅಮೆರಿಕದಲ್ಲಿ ಇವತ್ತೊಂದು ಪವಾಡವನ್ನೇ ಮಾಡಿದ್ದಾರೆ. ಕಳೆದ ಜುಲೈನಲ್ಲಿ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ್ದರು. ಆ ಭಾಷಣ ಇಡೀ ವಿಶ್ವಕ್ಕೆ ಬರಾಕ್ ಒಬಾಮಾನನ್ನು ಪರಿಚಯಿಸಿತು. ಅದೇ ಭಾಷಣದಲ್ಲಿ ಅಮೆರಿಕ ಸಣ್ಣ ಕನಸುಗಳಲ್ಲಿ ಪವಾಡಗಳಲ್ಲಿ ಹೇಗೆ ನಂಬಿಕೆ ಇಟ್ಟುಕೊಂಡಿದೆ ಎಂಬ ಮಾತನ್ನು ಹೇಳಿದ್ದರು. ಒಬಾಮಾ ತನ್ನ ಬಗ್ಗೆ, ತನ್ನ ತಂದೆಯ ಬಗ್ಗೆ, ಅಮೆರಿಕದ ಬಗ್ಗೆ ಅಭಿಮಾನದ ಮಾತುಗಳನ್ನು, ಕನಸುಗಳನ್ನು ಹಂಚಿಕೊಂಡಿದ್ದರು.
ಅದೆಲ್ಲಾ ಬರೀ ಕನಸುಗಳಾಗಿರಲಿಲ್ಲ. ಅಂಧ ಆತ್ಮವಿಶ್ವಾಸವೂ ಆಗಿರಲಿಲ್ಲ. ಅಮೆರಿಕದ ವಿಶ್ವಾಸವಾಗಿತ್ತು. ಆ ವಿಶ್ವಾಸದ ವಕ್ತಾರನಾಗಿ ಕಾಣಿಸಿಕೊಂಡಿದ್ದು ಒಬಾಮಾ
ಈ ಮಾತುಗಳನ್ನೇ ನೋಡಿ..
what this election is about. Do we participate in a politics of cynicism or a politics of hope? John Kerry calls on us to hope. John Edwards calls on us to hope. I'm not talking about blind optimism here -- the almost willful ignorance that thinks unemployment will go away if we just don't talk about it, or the health care crisis will solve itself if we just ignore it. No, I'm talking about something more substantial. It's the hope of slaves sitting around a fire singing freedom songs; the hope of immigrants setting out for distant shores; the hope of a young naval lieutenant bravely patrolling the Mekong Delta ; the hope of a mill worker's son who dares to defy the odds; the hope of a skinny kid with a funny name who believes that America has a place for him, too. The audacity of hope!
ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಅಮೆರಿಕವನ್ನು ಆ ಸಮಸ್ಯೆಗಳಿಗೆ ಸಮರ್ಥವಾಗಿ ಮುಖ ಮಾಡಿ ನಿಲ್ಲುವಂತೆ ಮಾಡುವುದಕ್ಕೆ ಈ ವಿಶ್ವಾಸ, ಭರವಸೆ ಬೇಕಿತ್ತು. ಇವುಗಳ ಸಂಕೇತವಾಗಿ, ಶಕ್ತಿಯಾಗಿ ಒಬಾಮಾ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಅಮೆರಿಕ ಒಬಾಮಾಗೆ ಪರಾಕ್ ಹೇಳಿದೆ.
ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಸಾರ್ವಜನಿಕ ಭಾಷಣವೊಂದರಲ್ಲಿ ಮಾತನಾಡುತ್ತಾ, "ನನ್ನದೊಂದು ಕನಸು. ಚರ್ಮದ ಬಣ್ಣ ನೋಡಿ ನಮ್ಮನ್ನು ಅಳೆಯದ ಅಮೆರಿಕದಲ್ಲಿ ನನ್ನ ನಾಲ್ಕು ಮಕ್ಕಳು ಜೀವಿಸುತ್ತಾರೆ " ಎಂದಿದ್ದರು.
ಅಮೆರಿಕದಲ್ಲಿ ಅಂಥ ದಿನಗಳು ಆರಂಭವಾಗುತ್ತಿವೆ...
ಪೇಜಾವರ ಶ್ರೀಗಳ ಸಾರ್ವಜನಿಕ ಮನರಂಜನೆ!
ಪೇಜಾವರ ಶ್ರೀಗಳು ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಶ್ರೀಗಳು ಕರ್ನಾಟಕದ ಮಟ್ಟಿಗೆ ಹಿಂದೂ ಧರ್ಮದ ಅಘೋಷಿತ (ಸ್ವಘೋಷಿತವೂ ಹೌದು) ವಕ್ತಾರರು. ಹಿಂದೂ ಧರ್ಮಕ್ಕೆ ಸಂಬಂಧಿಸಿದ ಎಲ್ಲ ವಾದವಿವಾದಗಳ ಸಂದರ್ಭಗಳಲ್ಲೂ ಶ್ರೀಗಳು ಕ್ರಿಯಾತ್ಮಕವಾಗಿ ಪಾಲ್ಗೊಳ್ಳುತ್ತಾರೆ ಮತ್ತು ತಮ್ಮದೇ ಆದ ವಿಚಾರಧಾರೆಗಳಿಂದ ಹಿಂದುತ್ವವನ್ನು, ಇಡೀ ಸಂಘಪರಿವಾರವನ್ನು ಸಮರ್ಥಿಸಿಕೊಳ್ಳುತ್ತಾರೆ. ಅವರ ದುರದೃಷ್ಟವೆಂದರೆ ಹಿಂದೂಧರ್ಮದ ವಕ್ತಾರರ ಸ್ಥಾನವನ್ನು ಹೊಸದಾಗಿ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಕಸಿದುಕೊಂಡುಬಿಟ್ಟಿದ್ದಾರೆ. ಹೀಗಾಗಿ ಪೇಜಾವರರು ಗಲಿಬಿಲಿಗೊಂಡು ದಲಿತರ ಬೌದ್ಧಧರ್ಮ ಸ್ವೀಕಾರವನ್ನು ತಮ್ಮದೇ ಆದ ಭಾಷೆಯಲ್ಲಿ ಖಂಡಿಸಿ ಮಾತನಾಡಿದ್ದಾರೆ, ತನ್ಮೂಲಕ ಭೈರಪ್ಪನವರಿಂದ ಮತ್ತೆ ತಮ್ಮ ಸ್ಥಾನ ಕಸಿದುಕೊಳ್ಳಲು ಯತ್ನಿಸುತ್ತಿದ್ದಾರೆ.ಪೇಜಾವರರು ನೀಡಿರುವ ಹೇಳಿಕೆ ನ.೩ರ ಎಲ್ಲ ಕನ್ನಡ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ವಿಜಯ ಕರ್ನಾಟಕದಲ್ಲಿ ಹೇಳಿಕೆಯ ಪೂರ್ಣಪಾಠ ಪ್ರಕಟವಾಗಿದೆ. ಪೇಜಾವರರ ಹೇಳಿಕೆಯಲ್ಲೇ ದ್ವಂದ್ವವಿದೆ. ಹೇಳಿಕೆಯ ಆರಂಭದಲ್ಲೇ ಬೌದ್ಧಧರ್ಮವೂ ಹಿಂದೂ ಧರ್ಮದ ಒಂದು ಭಾಗವೇ ಆಗಿದೆ ಎಂದು ಪೇಜಾವರರು ಹಸಿಹಸಿ ಸುಳ್ಳು ಹೇಳುತ್ತಾರೆ. ಒಂದು ವೇಳೆ ಇವರು ಹೇಳುವ ಸುಳ್ಳು ನಿಜವೇ ಆಗಿದೆ ಎಂದು ಒಪ್ಪಿಕೊಂಡರೂ ಬೌದ್ಧಧರ್ಮಕ್ಕೆ ಮತಾಂತರಗೊಳ್ಳಬೇಡಿ ಎಂದು ಹೇಳುವ ಅಗತ್ಯವಾದರೂ ಏನಿತ್ತು. ದಲಿತರು ಬೌದ್ಧಧರ್ಮಕ್ಕೆ ಹೋದರೂ ಪೇಜಾವರರ ಥಿಯರಿಯಂತೆ ಅವರು ಹಿಂದೂ ಧರ್ಮದಲ್ಲೇ ಉಳಿಯುತ್ತಾರಲ್ಲವೆ? ಹಾಗಿದ್ದ ಮೇಲೆ ಮತಾಂತರವಾಗಬೇಡಿ ಎಂದು ಹೇಳುವ ಅಗತ್ಯವಾದರೂ ಏನು?ಪ್ರತಿಯೊಬ್ಬರಿಗೂ ತಮಗೆ ಇಷ್ಟವಾದ ಧರ್ಮವನ್ನು ಸ್ವೀಕರಿಸುವ ಹಕ್ಕಿದೆ, ಆದುದರಿಂದ ಇಂತಹ ಮತಾಂತರವನ್ನು ನಾವು ವಿರೋಧಿಸಲಾರೆವು ಎಂದು ಪೇಜಾವರರು ಹೇಳುತ್ತಾರೆ. ಮುಂದುವರೆದು ಬೌದ್ಧಧರ್ಮದಲ್ಲೂ ಪರಲೋಕ, ಸ್ವರ್ಗ, ನರಕ, ಪುಣ್ಯ, ಪಾಪ, ಪುನರ್ಜನ್ಮ, ಮೂರ್ತಿಪೂಜೆಗಳು ಇರುವುದರಿಂದ ಅಲ್ಲಿಗೆ ಹೋಗುವುದರಿಂದ ಪ್ರಯೋಜನವಿಲ್ಲ ಎಂದು ಪರೋಕ್ಷ ವಿರೋಧ ವ್ಯಕ್ತಪಡಿಸುತ್ತಾರೆ. ಪೇಜಾವರರು ಎಷ್ಟು ಗೊಂದಲಗಳನ್ನು ಕೆಡವಿಕೊಂಡಿದ್ದಾರೆಂದರೆ ಒಂದು ವೇಳೆ ಮತಾಂತರಗೊಳ್ಳುವುದಾದರೆ ದಯಾನಂತ ಸರಸ್ವತಿಯವರ ಆರ್ಯ ಸಮಾಜಕ್ಕೆ ಸೇರುವುದು ಹೆಚ್ಚು ಉಚಿತ ಎಂದು ಅಪ್ಪಣೆ ಕೊಡುತ್ತಾರೆ. ಆರ್ಯ ಸಮಾಜವನ್ನು ಸೇರುವುದು ಉಚಿತ ಎಂದು ಹೇಳುವ ಪೇಜಾವರರೇ ಮೊದಲು ಆ ಕೆಲಸ ಮಾಡಲಿ, ಆಮೇಲೆ ಆ ಸಮಾಜವನ್ನು ಸೇರುವ ಕುರಿತು ಪರಿಶೀಲಿಸೋಣ ಎಂದು ದಲಿತರು ಹೇಳಿದರೆ ಅವರು ಏನನ್ನುತ್ತಾರೆ?ವಿವಿಧ ಧರ್ಮಗಳು ಜಗತ್ತನ್ನು ಕಂಡಿರುವ ಕುರಿತಾದ ವಿಶ್ಲೇಷಣೆಯನ್ನು ಪೇಜಾವರರು ಮಾಡುತ್ತಾರೆ. ಜಗತ್ತು ಸತ್ಯವೋ, ಮಿಥ್ಯೆಯೋ ಅಥವಾ ಇವರೆರಡರ ನಡುವಿನ ಮಧ್ಯದ ಸ್ಥಿತಿಯೋ ಇದೆಲ್ಲವೂ ಈ ಹೊತ್ತಿನಲ್ಲಿ ದಲಿತರಿಗೆ ಪ್ರಸ್ತುತವಾದ ವಿಷಯಗಳೇ ಅಲ್ಲ ಎಂಬುದು ಪೇಜಾವರರಿಗೆ ಹೊಳೆಯುವುದಿಲ್ಲ. ಹೊಳೆದರೂ ಅವರು ಸುಮ್ಮನೆ ಎಲ್ಲರನ್ನು ಕನ್‌ಫ್ಯೂಸ್ ಮಾಡಿ ತಮ್ಮ ವಿಚಾರಧಾರೆ ಹೇರಲು ಯತ್ನಿಸುತ್ತಾರೆ.ತಮ್ಮ ಹೇಳಿಕೆಯ ಕೊನೆಯ ಭಾಗದಲ್ಲಿ ಪೇಜಾವರರು ತಮ್ಮ ನಿಜವಾದ ಅಜೆಂಡಾವನ್ನು ಹಿಡಿದು ಮಾತನಾಡುತ್ತಾರೆ. 'ಇನ್ನೂ ಒಂದು ಹೆಜ್ಜೆ ಮುಂದುವರೆದು ಹೇಳುವುದೇನೆಂದರೆ ದಲಿತರು ಹಿಂದೂ ಧರ್ಮವನ್ನು ತೊರೆದು ಮತಾಂತರಗೊಳ್ಳುವುದರ ಬದಲು ಹಿಂದೂ ಧರ್ಮದಲ್ಲಿಯೇ ಇರುವುದು ಒಳ್ಳೆಯದು ಎಂದು ಅವರು ತಮ್ಮ ನಿಜಸ್ವರೂಪದೊಂದಿಗೆ ಪ್ರತ್ಯಕ್ಷರಾಗುತ್ತಾರೆ.ಪೇಜಾವರರು ತಮ್ಮ ಹೇಳಿಕೆಗೆ ಒಂದು ಬಗೆಯ ಬ್ಲಾಕ್‌ಮೇಲ್ ಸ್ಪರ್ಶವನ್ನೂ ನೀಡುತ್ತಾರೆ. ದಲಿತರು ಮತಾಂತರಗೊಳ್ಳುವುದರಿಂದ ಹಿಂದೂ ಧರ್ಮದಲ್ಲಿರುವ ದಲಿತರ ಸಂಖ್ಯೆಯೂ ಕಡಿಮೆಯಾಗಿ ಅವರು ಇನ್ನೂ ಅಲ್ಪಸಂಖ್ಯಾತರೇ ಆಗುತ್ತಾರೆ ಎಂದು ಹೇಳುವ ಮೂಲಕ ದಲಿತರಲ್ಲಿ ಭೀತಿ ಹುಟ್ಟಿಸಲು ಯತ್ನಿಸುತ್ತಾರೆ. ಪ್ರಗತಿಪರ ಹಿಂದೂ ಸಮಾಜದ ಸಹಕಾರದಿಂದ ಅನ್ಯಾಯದ ವಿರುದ್ಧವಾಗಿ ಸಂಘಟಿತವಾಗಿ ಹೋರಾಟ ಮಾಡುವುದೇ ಸರಿಯಾದ ಮಾರ್ಗ ಎನ್ನುವುದು ಪೇಜಾವರರು ಕಂಡುಕೊಂಡಿರುವ, ದಲಿತರಿಗೆ ನೀಡಿರುವ ಹೊಸಮಾರ್ಗ. ಆದರೆ ಪೇಜಾವರರು ಪ್ರಗತಿಪರ ಹಿಂದೂ ಸಮಾಜ ಯಾವುದು ಎಂಬುವುದನ್ನು ಸ್ಪಷ್ಟಪಡಿಸುವುದಿಲ್ಲ. ಪೇಜಾವರರು ಪ್ರತಿನಿಧಿಸುವ ಶೂದ್ರ ಸಮೂಹದ ಪ್ರತ್ಯಕ್ಷ ವಿರೋಧಿ, ಮನುಸ್ಮೃತಿಯ ಪ್ರತಿಪಾದಕ ವಿಶ್ವ ಹಿಂದೂ ಪರಿಷತ್ ಅಥವಾ ಆರ್‌ಎಸ್‌ಎಸ್ ಪ್ರಗತಿಪರ ಹಿಂದೂ ಸಮಾಜವೆ? ಅಥವಾ ಅಸ್ಪೃಶ್ಯತೆಯ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿರುವಂತೆ ನೋಡಿಕೊಂಡಿರುವ ಪೇಜಾವರರು ಕುಳಿತಿರುವ ಮಠಪೀಠಗಳೇ ಪ್ರಗತಿಪರ ಹಿಂದೂ ಸಮಾಜವೆ? ಅಥವಾ ಹಿಂದುಳಿದ-ದಲಿತರನ್ನೇ ಇತರ ಧರ್ಮೀಯರ ವಿರುದ್ಧ ಎತ್ತಿಕಟ್ಟಿ ಬಲಿಪಶುಗಳನ್ನಾಗಿ ಮಾಡಲಾಗುವ ಭಜರಂಗದಳ ಪ್ರಗತಿಪರ ಹಿಂದೂ ಸಮಾಜವೇ?ದಲಿತರು ಹೋರಾಟ ಮಾಡಿಕೊಂಡೇ ಇರಬೇಕು ಎಂದು ಹೇಳುವ ಮನಸ್ಥಿತಿಯಲ್ಲೇ ಅಸ್ಪೃಶ್ಯತೆ, ವರ್ಣಾಶ್ರಮ ವ್ಯವಸ್ಥೆ ಜೀವಂತವಾಗಿರಬೇಕು ಎಂಬ ಧ್ವನಿಯನ್ನು ಗುರುತಿಸಬಹುದು.ದಲಿತರಿಗೆ ಭಕ್ತಿದೀಕ್ಷೆ ಹಾಗು ಮಂತ್ರದೀಕ್ಷೆಗಳನ್ನು ನೀಡುತ್ತೇವೆ ಎಂದು ಪೇಜಾವರರು ಘೋಷಿಸಿದ್ದಾರೆ. ತಮ್ಮ ಮಠಕ್ಕೆ ಓರ್ವ ದಲಿತನನ್ನು ಉತ್ತರಾಧಿಕಾರಿಯನ್ನಾಗಿ ಮಾಡಿ ನೋಡೋಣ ಎಂದು ಪ್ರಗತಿಪರರು ಕೇಳುತ್ತಲೇ ಇದ್ದಾರೆ. ಇದಕ್ಕೆ ಮಾತ್ರ ಪೇಜಾವರರು ಜಾಣ ಮೌನ ಮುಂದುವರೆಸುತ್ತಾರೆ. ನಿಮ್ಮ ಎಲ್ಲ ಮಠಪೀಠಗಳನ್ನು ಅಸ್ಪೃಶ್ಯರಿಗೆ ಬಿಟ್ಟುಕೊಡಿ ಎಂದು ಒಡ್ಡಲಾಗಿರುವ ಸವಾಲನ್ನು ಸ್ವೀಕರಿಸಲು ಪೇಜಾವರರೂ ಸೇರಿದಂತೆ ಯಾವ ಮಠಾಧೀಶರೂ ತಯಾರಿಲ್ಲ.ಇನ್ನಷ್ಟು ಶತಮಾನಗಳ ಕಾಲ ದಲಿತರನ್ನು ಹಿಂದುಳಿದವರನ್ನು ತುಳಿಯುತ್ತಲೇ ಇರಬಹುದು, ತುಳಿಯುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಬಹುದು ಎಂದುಕೊಂಡಿದ್ದ ಯಥಾಸ್ಥಿತಿವಾದಿಗಳೆಲ್ಲ ಈಗ ಭೀತಿಗೆ ಸಿಲುಕಿದ್ದಾರೆ. ದಲಿತರು, ಹಿಂದುಳಿದವರು ಬೇರೆ ಬೇರೆ ಧರ್ಮಗಳ ಕಡೆ ಕಣ್ಣು ಹರಿಸಿರುವುದು ಈ ಭೀತಿಗೆ ಕಾರಣ. ಹೀಗಾಗಿ ಇಷ್ಟು ವರ್ಷಗಳ ಕಾಲ ಇಲ್ಲದ ದಲಿತರ ಮೇಲಿನ ಪ್ರೀತಿ ಈಗ ಪೇಜಾವರರಂಥವರಿಗೆ ಹುಟ್ಟಿಕೊಂಡಿದೆ!ಹಿಂದೂ ಧರ್ಮದಲ್ಲೇ ಇರಿ, ಒಗ್ಗಟ್ಟಾಗಿ ನ್ಯಾಯಕ್ಕಾಗಿ ಹೋರಾಡೋಣ ಎಂಬಂಥ ಹಾಸ್ಯಾಸ್ಪದ ಮಾತುಗಳಿಂದ ಪೇಜಾವರರು ಕ್ರಾಂತಿಕಾರಿಯಾಗಲು ಹೊರಟಿದ್ದಾರೆ. ಕುರಿಯನ್ನು ಕಾಯಲು ತೋಳವನ್ನು ನಿಯೋಜಿಸುವುದೇ ಸೂಕ್ತ ಎಂಬಂತಿದೆ ಅವರ ಮಾತು.ಮಾಧ್ಯಮಗಳ ಮೂಲಕ ಪೇಜಾವರರು ಆಗಾಗ ಇಂಥ ಸಾರ್ವಜನಿಕ ಮನರಂಜನೆಯನ್ನು ನೀಡುತ್ತಿರುತ್ತಾರೆ. ಇಂಥವುಗಳನ್ನು ನಮ್ಮ ಮಾಧ್ಯಮಗಳು ಆದ್ಯತೆ ನೀಡಿ ಪ್ರಕಟಿಸುತ್ತಲೇ ಇರುತ್ತವೆ. ಈ ಆತ್ಮವಂಚನೆಯ ಪರಿಪಾಠಗಳಿಗೆ ಕೊನೆಯೇ ಇಲ್ಲವೇ ಎಂಬುದು ನಮ್ಮ ಪ್ರಶ್ನೆ.
Monday, November 3, 2008
ಪತ್ರಿಕೆಗಳ ಕ್ರೆಡಿಬಿಲಿಟಿ ಹರಾಜಿಗೆ...
"ಕಿಡ್ನಿ ಕದಿಯುವ ವೈದ್ಯನಿಗೂ, ವೃತ್ತಿಗೆ ದ್ರೋಹ ಬಗೆದು ಪತ್ರಿಕೆಯ ವಿಶ್ವಾಸಾರ್ಹತೆ (ಕ್ರೆಡಿಬಿಲಿಟಿ)ಯನ್ನೇ ಕದ್ದು ಕೆಲವು ಹಿತಾಸಕ್ತಿಗಳಿಗೆ ಮಾರುತ್ತಿರುವ ಪತ್ರಕರ್ತನಿಗೂ ಹೆಚ್ಚಿನ ವ್ಯತ್ಯಾಸವಿಲ್ಲ".
- ಬಿ.ಎಂ.ಬಶೀರ್
ಪತ್ರಿಕೆಯ ಮು0ದಿರುವ ಸವಾಲುಗಳನ್ನು ಚರ್ಚಿಸುವುದು - ಸಮಾಜದ ಮು0ದಿರುವಸವಾಲುಗಳನ್ನು ಚರ್ಚಿಸುವುದು ಬೇರೆ ಬೇರೆಯಲ್ಲ. ಏಕೆ0ದರೆ ಸದ್ಯದ ದಿನಗಳಲ್ಲಿಪತ್ರಿಕೆಗಳೇ ಸಮಾಜಕ್ಕೆ ಸವಾಲಾಗಿ ನಿ0ತಿವೆ. ಸ0ವೇದನಾಹೀನ ಉದ್ಯಮಿ ಜೊತೆಗೆ ಪತ್ರಕರ್ತಪೈಪೋಟಿಗೆ ನಿ0ತಿದ್ದಾನೆ. ಸಣ್ಣ ಬೆರಳ ಸ್ಪರ್ಶಕ್ಕೂ ಮಿಡಿಯುತ್ತಿದ್ದ ಭಾಷೆ, ಶಬ್ದಗಳು ಇ0ತಹ ಪತ್ರಕರ್ತರ ದೆಸೆಯಿ0ದಾಗಿ ತನ್ನ ಸೂಕ್ಷ್ಮವನ್ನು, ಲಜ್ಜೆಯನ್ನು, ಸ0ವೇದನೆಯನ್ನು ಕಳೆದುಕೊಳ್ಳುತ್ತಿವೆ. ಭಾಷೆ, ಶಬ್ದಗಳೇ ಕುಲಗೆಟ್ಟ ಮೇಲೆ, ದೈನ0ದಿನವಾಸ್ತವಗಳನ್ನು ತೆರೆದಿಡುವುದಾದರೂ ಯಾವುದರ ಮೂಲಕ? ಈ ಕಾರಣದಿ0ದಲೇ, ಪತ್ರಿಕೆ ಒ0ದುಹೇಳಿದರೆ, ಇನ್ನೊ0ದು ಅರ್ಥದಲ್ಲಿ ಅದು ಧ್ವನಿಸುತ್ತದೆ. ಟಿ. ವಿ. 0ುಲ್ಲಿ "ಶ0ಕಿತಉಗ್ರ" ನ ಕುರಿತ0ತೆ ವಿವರ ನೀಡುತ್ತಿರುವ ವರದಿಗಾರ ತಾನು ಬಳಸುವ ಭಾಷೆಯ ಕಾರಣದಿ0ದಾಗಿ ನಿಧಾನಕ್ಕೆ ತಾನೇ ಘಟನೆಗಳ ಒಬ್ಬ ಪಾತ್ರಧಾರಿಯಾಗಿ ಬಿಡುತ್ತಿದ್ದಾನೆ. ಪತ್ರಿಕಾ ಭಾಷೆಯನ್ನು ಮರೆತು ರಾಜಕಾರಣಿಗಳ, ಸ0ಘ ಪರಿವಾರದ ನಾಯಕರ ಭಾಷೆಯಲ್ಲಿ ವರದಿಯನ್ನು ನೀಡುತ್ತಿದ್ದಾನೆ. ಮೂರನೆಯ ವ್ಯಕ್ತಿಯಾಗಿ ಒ0ದು ಘಟನೆಯನ್ನು ಕ0ಡುವರದಿ ಸ0ಗ್ರಹಿಸಬೇಕಾದ ಪತ್ರಕರ್ತ, ಸ0ಗ್ರಹಿಸಿವುದರ ಬದಲು ಸೃಷ್ಟಿಸುವುದರಲ್ಲಿಹೆಚ್ಚು ಆಸಕ್ತಿ ವಹಿಸುತ್ತಿದ್ದಾನೆ.ವರದಿಗಳು ಹೆಚ್ಚು ಆಕರ್ಷಣೀಯವಾಗಿರಬೇಕು, ಮನರ0ಜಿಸಬೇಕು. ರೋಚಕವಾಗಿರಬೇಕು.ಇವೆಲ್ಲದರ ನಡುವೆ ಆ ವರದಿ ಸತ್ಯಕ್ಕೆ ಹತ್ತಿರವಾಗಿರಬೇಕಾಗಿಯೇನೂ ಇಲ್ಲ. ಇದರ ಪರಿಣಾಮವಾಗಿಯೆ, ದಿನಪತ್ರಿಕೆಗಳು ಮನುಷ್ಯ ವಿರೋಧಿಗಳಾಗುತ್ತಿವೆ. ಕಿಡ್ನಿ ಕದಿಯುವ ವೈದ್ಯನಿಗೂ, ವೃತ್ತಿಗೆ ದ್ರೋಹ ಬಗೆದು ಪತ್ರಿಕೆಯ ವಿಶ್ವಾಸಾರ್ಹತೆ (ಕ್ರೆಡಿಬಿಲಿಟಿ)ಯನ್ನೇ ಕದ್ದು ಕೆಲವು ಹಿತಾಸಕ್ತಿಗಳಿಗೆ ಮಾರುತ್ತಿರುವ ಪತ್ರಕರ್ತನಿಗೂ ಹೆಚ್ಚಿನ ವ್ಯತ್ಯಾಸವಿಲ್ಲ. ದಿನಪತ್ರಿಕೆಗಳಲ್ಲಿ ವರದಿಗಾರರ ವೃತ್ತಿಪರತೆ0ು ಕೊರತೆ0ುನ್ನು "ಕನ್ನಡ ಪ್ರಭ" ದೈನಿಕದಒ0ದು ವರದಿಯನ್ನು ಮು0ದಿಟ್ಟು ನಾವು ಚರ್ಚಿಸಬಹುದಾಗಿದೆ. ಕಳೆದ ಒ0ದು ತಿ0ಗಳಿ0ದ ಉಗ್ರರ ಕುರಿತ0ತೆ ವರದಿ ಸ0ಗ್ರಹಿಸುವ ಹೆಸರಿನಲ್ಲಿ ತಾವೇ ವರದಿಯನ್ನು ಸೃಷ್ಟಿಸಿ,ತಾವೇ ಎಫ್. ಐ. ಆರ್. ದಾಖಲಿಸಿ ತಾವೇ ತೀರ್ಪು ನೀಡುತ್ತಿರುವ ಪತ್ರಿಕೆಗಳ ಕೃತ್ಯಗಳನ್ನು ನೋಡುತ್ತಿದ್ದೇವೆ. ಕಳೆದ ಫೆಬ್ರವರಿ 22 ರ0ದು "ಕನ್ನಡ ಪ್ರಭ" ದಲ್ಲಿ ಪ್ರಕಟವಾದ ಮುಖಪುಟಸುದ್ದಿಯೊಂದನ್ನು ಇದಕ್ಕೆ ಪೂರಕವಾಗಿ ತೆಗೆದುಕೊಳ್ಳೋಣ. ಹುಬ್ಬಳ್ಳಿಯಲ್ಲಿ ನಡೆದಪತ್ರಿಕಾಗೋಷ್ಠಿಯೊ0ದರಲ್ಲಿ ಪೋಲೀಸ್ ಮಹಾನಿರ್ದೇಶಕ ಶ0ಕರ ಬಿದರಿ, ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ "ಉಗ್ರ" ವರದಿಗಳನ್ನು ಸಾರಾಸಗಟಾಗಿ ಅಲ್ಲಗಳೆದರು. ರಾಜ್ಯದಲ್ಲಿ ಭಯೋತ್ಪಾದನೆ ಚಟುವಟಿಕೆ ಇಲ್ಲ ಎ0ದು ಸ್ಪಷ್ಟಪಡಿಸಿದರು. ಈ ಸ0ದರ್ಭದಲ್ಲಿ ಒಬ್ಬ ವರದಿಗಾರನ ಕೆಲಸ ಏನು? ಈವರೆಗೆ "ಮೂಲಗಳು ತಿಳಿಸಿವೆ" ಎ0ದು ಪತ್ರಿಕೆಗಳು ಮಾಡಿರುವ ವರದಿಗಳಿಗೆ ಅವರು ನೀಡಿದ ಅಧಿಕೃತ ಸ್ಪಷ್ಟೀಕರಣವಾಗಿತ್ತು ಅದು. ಈ ರಾಜ್ಯದಲ್ಲಿ ಉಗ್ರಗಾಮಿಗಳ ಕುರಿತ0ತೆ ಮಾಹಿತಿ ತಮ್ಮ ವಿಳಾಸವಿಲ್ಲದ "ಮೂಲ" ಗಳನ್ನು ಆಧರಿಸಿ ನೀಡಿದ ವರದಿಗಳ ಕುರಿತ0ತೆ ಒಬ್ಬ ಪೋಲೀಸ್ ವರಿಷ್ಠ ಅಧಿಕೃತ ಹೇಳಿಕೆ ನೀಡಿದರೆ ಅದನ್ನು ಪ್ರಕಟಿಸುವ ಎದೆಗಾರಿಕೆಯಾಗಲಿ, ವೃತ್ತಿಪರತೆಯಾಗಲಿ ಆ ಪತ್ರಿಕೆಗಿರಲಿಲ್ಲ. ಪರಿಣಾಮವಾಗಿ ಫೆಬ್ರವರಿ 22 ರ0ದು ಬಿದರಿಯ ಸ್ಪಷ್ಟೀಕರಣ "ಕನ್ನಡ ಪ್ರಭ" ದಲ್ಲಿಪ್ರಕಟವಾದ ರೀತಿ ಹೇಗಿತ್ತು ಗೊತ್ತೆ? "ರಾಜ್ಯದಲ್ಲಿ ಭ0ೋತ್ಪಾದನೆ ಇಲ್ಲ!" ಇದು ತಲೆಬರಹ. ಅದರ ಕೆಳಗೆ ಎರಡು ಕಿಕ್ಕರ್ಗಳು "ನ0ಬಿದರೆ ನ0ಬಿ ಬಿಟ್ಟರೆ ಬಿಡಿ ಹೀಗೆ ಹೇಳಿದ್ದು ಹೆಚ್ಚುವರಿ ಪೋಲೀಸ್ ಮಹಾನಿರ್ದೇಶಕ ಶ0ಕರ್ ಬಿದರಿ." "ಹಾಗಾದರೆ ಬೆ0ಗಳೂರು,ಮೈಸೂರು, ಹುಬ್ಬಳ್ಳಿ, ಧಾರವಾಡ, ದಾವಣಗೆರೆ ಪೋಲೀಸರು ಬ0ಧಿಸಿದ್ದು ಸುಳ್ಳಾ?"ಒ0ದು ಸುದ್ದಿಗೂ ಸ0ಪಾದಕೀಯಕ್ಕೂ ಇರುವ ವ್ಯತ್ಯಾಸ ಗೊತ್ತಿಲ್ಲದ ಅವಿವೇಕಿ ವರದಿಗಾರಮಾತ್ರ ಈ ರೀತಿ ವರದಿ0ುನ್ನು ಬರೆಯಬಲ್ಲ. ಆ ಬಳಿಕ ಸುದ್ದಿಯ ರೂಪದಲ್ಲಿ ಬಿದರಿಯ ಹೇಳಿಕೆಗಳ ವಿಶ್ಲೇಷಣೆ ನಡೆಯುತ್ತದೆಯೆ ಹೊರತು, ಎಲ್ಲೂ "ವರದಿ" ಇಲ್ಲ. ಪತ್ರಿಕಾಗೋಷ್ಠಿ ಬಿದರಿಯದು, ಆದರೆ ಹೇಳಿಕೆಗಳೆಲ್ಲ ವರದಿಗಾರನದ್ದು. ಸರಿ,ರಾಜ್ಯದಲ್ಲಿ ಉಗ್ರರು ಇದ್ದಾರೆ. ಭಯಾನಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ನುವುದನ್ನು ಬಿದರಿ ಯಾಕೆ ಒಪ್ಪಿಕೊಳ್ಳಬೇಕು ಎನ್ನುವುದಕ್ಕೂ ಈ ವರದಿಗಾರನಲ್ಲಿ ಕಾರಣಗಳಿಲ್ಲ. ಈತನ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಆಧರಿಸಿ ಒಬ್ಬ ಪೋಲೀಸ್ ಮಹಾ ನಿರ್ದೇಶಕ "ಉಗ್ರರನ್ನು ಬ0ಧಿಸಿರುವುದು ನಿಜ, ಶಸ್ತ್ರಾಸ್ತ ದೊರಕಿರುವುದು ನಿಜ"ಎ0ದು ಒಪ್ಪಿಕೊಳ್ಳಲಾಗುತ್ತದೆಯೆ?
ಫೆಬ್ರವರಿ 28 ರ0ದು ಬೆ0ಗಳೂರಿನಲ್ಲಿ ಪೋಲೀಸ್ ಮಹಾನಿರ್ದೇಶಕ ಕೆ. ಆರ್. ಶ್ರೀನಿವಾಸನ್ ಈ ಕುರಿತ0ತೆ ಪತ್ರಕರ್ತರ ಮುಖಕ್ಕೆ ರಾಚುವ0ತೆ ಹೇಳಿದರು: "ಕೆಲ ಮಾಧ್ಯಮಗಳು ಪೋಲೀಸ್ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ ಎ0ದು ಮನಸೋ ಇಚ್ಛೆ ಪ್ರಕಟಿಸುವ ವರದಿಗಳು ಸತ್ಯಕ್ಕೆ ದೂರವಾದವು. ನೀವು ವರದಿ ಮಾಡಿದ0ತೆ ನಾವು ತನಿಖೆ ನಡೆಸಲು ಸಾಧ್ಯವಿಲ್ಲ." ಸಾಧಾರಣವಾಗಿ ಈ ಹಿ0ದೆ ಪತ್ರಿಕಾಗೋಷ್ಠಿಗಳಲ್ಲಿ ಪತ್ರಕರ್ತರು ಪೋಲೀಸರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ಮೊದಲಬಾರಿಯೆಂಬ0ತೆ ಪೋಲಿಸರು ಪತ್ರಕರ್ತರನ್ನು ಯದ್ವಾತದ್ವಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ವೃತ್ತಿಪರತೆಯ ಕೊರತೆ, ವೃತ್ತಿಗೆಸಗಿದ ದ್ರೋಹದ ಫಲವಾಗಿ ಪತ್ರಿಕೋದ್ಯಮ ಈ ಅವಮಾನವನ್ನು ಎದುರಿಸಬೇಕಾಗಿದೆ.
ಅಭಿವ್ಯಕ್ತಿ ಸ್ವಾತ0ತ್ರ್ಯದ ಕುರಿತ0ತೆ ಮಾತನಾಡುವ ಹಕ್ಕನ್ನು ಪತ್ರಕರ್ತರು ಅವರಾಗಿಯೆ ಕಳೆದುಕೊಳ್ಳುತ್ತಿದ್ದಾರೆ. ಯಾಕೆ0ದರೆ ಅಭಿವ್ಯಕ್ತಿ ಸ್ವಾತ0ತ್ರ್ಯದ ದಮನ ಕೆಲಸವನ್ನು ಪತ್ರಕರ್ತರೇ ಅತ್ಯುತ್ಸಾಹದಿ0ದ ನಿರ್ವಹಿಸುತ್ತಿದ್ದಾರೆ. ಪತ್ರಕರ್ತರೆ0ದು ಕರೆಸಿಕೊಳ್ಳುವ ಜನರಿ0ದಲೇ ಕಳೆದ ಒ0ದು ತಿ0ಗಳಿ0ದ ಅಭಿವ್ಯಕ್ತಿ ಸ್ವಾತ0ತ್ರದ ಮೇಲೆನಡೆಯುತ್ತಿರುವ ದಾಳಿ ಸಣ್ಣದೇನಲ್ಲ. ಪೋಲೀಸರ ಅಭಿವ್ಯಕ್ತಿ ಸ್ವಾತ0ತ್ರ್ಯ, ಸ0ತ್ರಸ್ತರ ಅಭಿವ್ಯಕ್ತಿ ಸ್ವಾತ0ತ್ರ್ಯ, ಓದುಗರ ಅಭಿವ್ಯಕ್ತಿ ಸ್ವಾತ0ತ್ರ್ಯ ಎಲ್ಲದರ ಮೇಲು ಸಾರಾಸಗಟಾಗಿ ದಾಳಿ ನಡೆಯುತ್ತಿದೆ. ಇದು ಪತ್ರಿಕೆಗಳ ಪಾಲಿಗೆ ಅತ್ಯ0ತ ಅಪಾಯಕಾರಿ ಬೆಳವಣಿಗೆ. ಯಾಕೆ0ದರೆ, ಮು0ದಿನ ದಿನಗಳಲ್ಲಿ ಪತ್ರಕರ್ತರ ಅಭಿವ್ಯಕ್ತಿ ಸ್ವಾತ0ತ್ರ್ಯದ ಮೇಲೆ ಹಲ್ಲೆಯಾದಾಗ ಅದಕ್ಕೆ ಅನುಕ0ಪ ವ್ಯಕ್ತಪಡಿಸುವವರೇ ಇಲ್ಲದ0ತಹ ಸನ್ನಿವೇಶ ನಿರ್ಮಾಣವಾಗಲಿದೆ. ಒ0ದು ಕಡೆ ವ್ಯಾಪಾರೀಕರಣ, ಇನ್ನೊ0ದೆಡೆ ಕೋಮುವಾದೀಕರಣಗೊಳ್ಳುತ್ತಿರುವ ಪತ್ರಿಕೆಗಳು ಪತ್ರಕರ್ತರ ಆಯ್ಕೆಯ ಸ0ದರ್ಭದಲ್ಲೂ ತಮ್ಮ ಮಾನದ0ಡಗಳನ್ನು ಬದಲಿಸುತ್ತಿವೆ. ಒ0ದುಅ0ಗಡಿ0ು ಸೇಲ್ಸ್ಮ್ಯಾನ್ನ ಆಯ್ಕೆ ಮತ್ತು ವರದಿಗಾರರ ಆಯ್ಕೆ ನಡುವಿನ ಅ0ತರ ಕಡಿಮೆ0ಾಗುತ್ತಿದೆ.
"ಟಿ. ವಿ. ನೈನ್" ಎ0ಬ ಸುದ್ದಿ ವಾಹಿನಿ0ುಲ್ಲಿ ವರದಿಗಾರರನ್ನುಆಹ್ವಾನಿಸುತ್ತಿರುವ ರೀತಿ ಮತ್ತು ಅವರು ನೀಡುವ ಆದ್ಯತೆಗಳನ್ನು ಗಮನಿಸಿ."ನೀವು ವರದಿಗಾರರಾಗಲು ಆಸಕ್ತಿಯನ್ನು ಹೊ0ದಿದ್ದೀರಾದರೆ ನಿಮಗಿರುವ ಅರ್ಹತೆಗಳು ಇವು. ಮುಖ್ಯವಾಗಿ ನೀವು ಮಹಿಳೆಯಾಗಿರಬೇಕು. ಅದಕ್ಕಿ0ತಲೂ ಮುಖ್ಯವಾಗಿ ನಿಮ್ಮ ವ0ುಸ್ಸು 25 ರಒಳಗಿರಬೇಕು. ಅದಕ್ಕಿ0ತಲೂ ಮುಖ್ಯವಾಗಿ ನೋಡಲು ಆಕರ್ಷಕವಾಗಿರಬೇಕು." ಯಾವುದೇ ಅ0ಗಡಿಯ ಮಾಲಿಕನೊಬ್ಬ ತನ್ನ ಸೇಲ್ಸ್ಮ್ಯಾನನ್ನು ಆಯ್ಕೆ ಮಾಡುವುದು ಇದೇ ಅರ್ಹತೆಗಳ ಮೇಲೆ.
ಕನ್ನಡ ಪ್ರಭ ದೈನಿಕ ವರದಿಗಾರರ ಆಯ್ಕೆ ಸ0ದರ್ಭದಲ್ಲಿ ಇನ್ನೂ ಒ0ದು ಹೆಜ್ಜೆ ಮು0ದೆ ಹೋಗಿದೆ. ಅಭ್ಯರ್ಧಿಯ ಡೇಟ್ ಆಫ್ ಬರ್ತ್ ಸರ್ಟಿಫಿಕೇಟನ್ನು ಆ0ಧ್ರದ ಖ್ಯಾತಜ್ಯೋತಿಷಿಯೊಬ್ಬರಿಗೆ ತೋರಿಸಿ, ಅವರಿ0ದ ಓಕೆ ಆದ ಬಳಿಕವೇ ಅದು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತದೆ.
ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ(ಎ0. ಸಿ. ಜೆ). ಪತ್ರಿಕೆಗಳಲ್ಲಿ ಕಾಲಿಡುವುದಕ್ಕೆ ವರದಿಗಾರನಾಗುವುದಕ್ಕೆ ಎ0. ಸಿ.ಜೆ. ಅ0ಕಗಳೇ ನಿಜವಾದ ಅರ್ಹತೆ ಎ0ದು ಬಲವಾಗಿ ನ0ಬಿರುವ ಇವರಲ್ಲಿ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊ0ಡಿರುವುದಕ್ಕೆ ಕಾರಣಗಳಿರುವುದಿಲ್ಲ. ಎ0. ಸಿ. ಜೆ. ಮಾಡಿದ ಹುಡುಗನಲ್ಲಿ ಸುಮ್ಮನೆ ಕನ್ನಡದ ಕೆಲಪು ಪತ್ರಕರ್ತರ ಕುರಿತ0ತೆ, ಅವರ ಬರಹಗಳ ಕುರಿತ0ತೆ ಕೇಳಿ. ಒಬ್ಬ ಹುಡುಗನಲ್ಲಿ ಹೀಗೆ ಮಾತನಾಡುತ್ತಿದ್ದೆ. "ಇತ್ತೀಚೆಗೆ ನೀನು ಓದಿದ ಪುಸ್ತಕ ಯಾವುದು?" ಆತನಿಗೆ ನೆನಪಿಲ್ಲ. "ಕನಿಷ್ಠ ಕಳೆದ ಒ0ದು ವರ್ಷದಲ್ಲಿ ಓದಿದ ಪುಸ್ತಕವಾದರೂ ನೆನಪಿದೆಯೆ?" ನನ್ನ ಪ್ರಶ್ನೆ ಆತನಿಗೆ ಬಾಲಿಶ ಅನಿಸಿರಬೇಕು. ನನ್ನನ್ನೇ ಪ್ರಶ್ನಾರ್ಥಕವಾಗಿ ನೋಡತೊಡಗಿದ. ಪಿ. ಲ0ಕೇಶ್ ಗೊತ್ತಾ? ಹೂ0. ಎ0ದ. ಟೀಕೆ ಟಿಪ್ಪಣಿ ಓದಿದ್ದೀಯ ಎ0ದರೆ ಇಲ್ಲ ಎ0ದ - ತೇಜಸ್ವಿಯ ಚಿದ0ಬರ ರಹಸ್ಯ ಓದಿಲ್ಲ. ಪಾ.ವೆ0. ಆಚಾರ್ಯ ಪದಾರ್ಥ ಚಿ0ತಾಮಣಿ ಕೃತಿಯನ್ನು ಬಿಡಿಸಿಲ್ಲ. ಆದರೆ ಆ ಕುರಿತ0ತೆಅವನಿಗೆ ಯಾವ ಖೇದವೂ ಇಲ್ಲ. ಯಾಕೆ0ದರೆ ಅದಕ್ಕೂ ಪತ್ರಿಕೋದ್ಯಮಕ್ಕೂ ಯಾವ ಸ0ಬ0ಧವೂ ಇಲ್ಲ. ಅಗತ್ಯ ಬಿದ್ದರೆ "ಗೂಗಲ್"ನಲ್ಲಿ "ಲ0ಕೇಶ್" ಒ0ದು ಹೊಡೆದರೆ ಆಯಿತಲ್ಲ!
ಮುಖ್ಯವಾಗಿ ಎ0. ಸಿ. ಜೆ. ಯಿ0ದ ಹೊರಬ0ದ ಹೆಚ್ಚಿನ ಅಭ್ಯರ್ಥಿಗಳಿಗೆ ಪತ್ರಿಕೋದ್ಯಮ ಅದರಲ್ಲೂ ಕನ್ನಡ ಪತ್ರಿಕೋದ್ಯಮ ಒ0ದು ಬಸ್ ಕೂಡ ಅಲ್ಲ. ಬರೆ "ಬಸ್ ಸ್ಟಾಪ್" ಅಷ್ಟೇ. ಬಸ್ ಬರುವವರೆಗೆ ಕಾಯಬೇಕಿರುವ ಒ0ದು ಸ್ಥಳ. ಅವರ ಗುರಿ ಯಾವುದೋ ಕ0ಪನಿಯ ಪಿ. ಆರ್.ಓ. ಅಥವಾ ಜಾಹೀರಾತು ಕ0ಪೆನಿಗಳಲ್ಲಿ ಕೆಲಸ ಮಾಡುವುದು. ಇ0ತಹ ಅಭ್ಯರ್ಥಿಗಳು ಬಸ್ ಮಿಸ್ಮಾಡಿಕೊ0ಡು ಶಾಶ್ವತವಾಗಿ ಆ ಬಸ್ ಸ್ಟಾಪ್ನಲ್ಲೇ ಉಳಿದುಬಿಟ್ಟರೆ ಆಗುವ ಪರಿಣಾಮಗಳ ಫಲಾನುಭವಿಗಳಾಗಿದ್ದಾರೆ ಓದುಗರು.
ಇನ್ನೊ0ದು ಉದಾಹರಣೆ. ನನ್ನೊಬ್ಬ ಗೆಳೆಯ ಹೇಳಿದ್ದು. ಪ್ರೆಸ್ ಕ್ಲಬ್ಗೆ ಅದಾವುದೋ ಸ0ದರ್ಭದಲ್ಲಿ ಕನ್ನಡದ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಬ0ದಿದ್ದರ0ತೆ. ಅದೆಲ್ಲಿ0ದ ಪ್ರತ್ಯಕ್ಷಳಾದಳೋ, ಟಿ. ವಿ. ವರದಿಗಾರ್ತಿ ತನ್ನ ಕ್ಯಾಮರಾ ಜೊತೆ ಧುತ್ತೆ0ದು ಕಾಸರವಳ್ಳಿಯ ಮು0ದೆ ನಿ0ತಳು. ತನ್ನ ಕೈಯಲ್ಲಿದ್ದ ಮೈಕ್ ಹಿಡಿದು "ಮಾತನಾಡಿ ಸಾರ್" ಎ0ದಳು. ಕಾಸರವಳ್ಳಿಗೆ ಗಾಬರಿ. ಯಾವ ಪ್ರಶ್ನೆಯನ್ನೂ ಕೇಳದೆ "ಮಾತನಾಡಿ" ಎ0ದರೆ ಏನನ್ನು ಮಾತನಾಡುವುದು? "ಏನನ್ನು ಮಾತನಾಡಲಿ?" ಕಾಸರವಳ್ಳಿ ಕೇಳಿದರ0ತೆ. "ಯಾವುದರ ಬಗ್ಗೆಯಾದರೂ ಮಾತನಾಡಿ" ಎ0ದಳಾಕೆ. ಕಾಸರವಳ್ಳಿ ಗೊ0ದಲಕ್ಕೊಳಗಾದರು. "ಸಾರ್ ನಿಮ್ಮ ದ್ವೀಪಕ್ಕೆ ಅವಾರ್ಡ್ ಸಿಕ್ಕಿತಲ್ಲ. ಆ ಚಿತ್ರದ ಬಗ್ಗೆ ಮಾತನಾಡಿ" ಎ0ದಳು.
"ಅದಕ್ಕೆ ಅವಾರ್ಡ್ ಸಿಕ್ಕಿ ವರ್ಷ ಆಯಿತಲ್ಲಮ್ಮ......"ಎ0ದವರು, ಅನಿವಾರ್ಯ ಕಾರಣದಿ0ದ ತಾವೇ ತಮ್ಮನ್ನು ಪ್ರಶ್ನಿಸಿ, ಉತ್ತರ ಹೇಳಿದರ0ತೆ.ಈ ನಾಡಿನ ಬರಹಗಾರರ ಕುರಿತ0ತೆ, ಚಿ0ತಕರ ಕುರಿತ0ತೆ, ಅತ್ಯುತ್ತಮ ಕೃತಿಗಳ ಕುರಿತ0ತೆ, ನಾಯಕರ ಕುರಿತ0ತೆ, ಸಿನಿಮಾಗಳ ಕುರಿತ0ತೆ ಸಾಮಾನ್ಯ ಜ್ಞಾನವೂ ಇಲ್ಲದ ಇ0ತಹ ಕೆಲವು ಪತ್ರಕರ್ತರ ಕೈಯಲ್ಲಿ ಈ ನಾಡು, ನುಡಿ, ಜನಸಾಮಾನ್ಯರ ಬದುಕು ಸಿಕ್ಕಿದರೆ ಅದು "ದುರ0ತ" ವನ್ನಲ್ಲದೆ, ಇನ್ಯಾವ ಫಲಿತಾ0ಶವನ್ನು ನೀಡಲು ಸಾಧ್ಯ?
ಬಳಸುವ ಪ್ರತಿ ಶಬ್ದಗಳಿಗೂ ಸ0ವೇದನಗಳಿವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳದ ಈ ಪತ್ರಕರ್ತರ ಕೈಯಲ್ಲಿ "ಉಗ್ರ" ಎನ್ನುವ ಶಬ್ದ ತನ್ನ ಲಜ್ಜೆಯನ್ನು ಕಳೆದುಕೊ0ಡ ರೀತಿ0ುನ್ನೇ ಉದಾಹರಣೆ0ಾಗಿ ತೆಗೆದುಕೊಳ್ಳೋಣ. ಕ0ಡವರಿಗೆಲ್ಲ ಉಗ್ರ, ಭಯೋತ್ಪಾದಕ ಎ0ದು ಬಳಸುತ್ತಾ ಹೋದ ಈ ವರದಿಗಾರರ ದೆಸೆಯಿ0ದ ಇ0ದು ಆ ಶಬ್ದ ಯಾರನ್ನೂ ಬೆಚ್ಚಿಬೀಳಿಸುತ್ತಿಲ್ಲ. ಅದು ತನ್ನ ಸ0ಕೋಚ ಮತ್ತು ಗಾ0ಭೀರ್ಯವನ್ನು ಕಳೆದುಕೊ0ಡಿದೆ. ಒಬ್ಬಬೈಕ್ ಕಳ್ಳನಿಗೂ ಉಗ್ರನಿಗೂ ವ್ಯತ್ಯಾಸವೇ ಇಲ್ಲದ0ತೆ ಮಾಡಿದ ಹೆಗ್ಗಳಿಕೆ ಈ ಪತ್ರಕರ್ತರಿಗೆ ಸಲ್ಲಬೇಕು. ಈ ಪತ್ರಕರ್ತರ "ನಕಲಿ ಉಗ್ರ" ರ ಮರೆಯಲ್ಲಿ ನಿಜವಾದ ಉಗ್ರರು ಆರಾಮವಾಗಿ ಬದುಕುವ ದಿನಗಳು ದೂರವಿಲ್ಲ. ಒ0ದು ಪತ್ರಿಕೆಯ ಬೆಲೆ 2. 50. ರೂ. ಆದರೆ ಅದರ ಅಸಲು ದರ ಸುಮಾರು 5. 00 ರೂ. ಪ್ರಸಾರ ಸ0ಖ್ಯೆ ಹೆಚ್ಚುತ್ತಾ ಹೋದ ಹಾಗೆಯೆ ಪತ್ರಿಕೆಯ ನಷ್ಟವೂ ಹೆಚ್ಚುತ್ತಾ ಹೋಗುತ್ತದೆ.
ಪತ್ರಿಕೆಗಳಿಗೆ ಪ್ರಸಾರ ಸ0ಖ್ಯೆ ಬೇಕಾಗಿರುವುದು ಜಾಹೀರಾತುದಾರರಿಗೆ ತೋರಿಸುವುದಕ್ಕೆಮಾತ್ರ. ದರ ಸಮರ ಹೆಚ್ಚಿದ ಪರಿಣಾಮವಾಗಿ ಪತ್ರಿಕೆಗಳು ಓದುಗರಿಗೇನೊ ಸುಲಭವಾಗಿ ದೊರಕತೊಡಗಿದವು. ಆದರೆ ಓದುಗರ ಸಾರ್ವಭೌಮತೆಗೆ ಭಾರೀ ಧಕ್ಕೆಯುಂಟಾಯಿತು. ತಾವು ಏನನ್ನು ಕಳೆದುಕೊ0ಡಿದ್ದೇವೆ ಎನ್ನುವುದು ಅವರಿಗೆ ಹೊಳೆಯುವ ಮೊದಲೇ ಅವರು ಎಲ್ಲವನ್ನೂ ಕಳೆದುಕೊ0ಡಿದ್ದರು. ಅವರ ಕೈಯಲ್ಲಿ ಒ0ದು ರೂಪಾಯಿಗೆ ಆಕರ್ಷಕ ಪುರವಣಿಗಳುಳ್ಳ 20ಪುಟಗಳ ಪತ್ರಿಕೆಯಿತ್ತು. ಆದರೆ ಅದಕ್ಕೆ ಪ್ರತಿಯಾಗಿ ಆತ ತೆತ್ತದ್ದು ತನ್ನಸಾರ್ವಭೌಮತೆಯನ್ನು. ಇ0ದು ಆ ಸಾರ್ವಭೌಮತೆಯನ್ನು ಜಾಹೀರಾತುದಾರರು, ಬೃಹತ್ಕ0ಪನಿಗಳು ತಮ್ಮದಾಗಿಸಿಕೊ0ಡಿವೆ. ಒ0ದು ರೀತಿಯಲ್ಲಿ ಓದುಗನಿಗೆ ಚಿನ್ನದ ಚೂರಿಯಿ0ದ ಇರಿಯಲಾಗಿದೆ. ಹಾಗೆ ಇರಿತಕ್ಕೊಳಗಾದ ಓದುಗ ಚೂರಿ ಚಿನ್ನದ್ದು ಎನ್ನುವ ಸೌಭಾಗ್ಯಕ್ಕಾಗಿ ಸ0ಭ್ರಮಿಸಬೇಕು. ಒ0ದು ದಿನಪತ್ರಿಕೆಯ ನಿಜವಾದ ಬ0ಡವಾಳ ಅವರ "ಕ್ರೆಡಿಬಿಲಿಟಿ". ಸದ್ಯಕ್ಕೆ ಪತ್ರಿಕೆಯೋದ್ಯಮಿಗಳು ತಮ್ಮ ಲಾಭಕ್ಕಾಗಿ ಬಿಕರಿಗಿಟ್ಟಿರುವುದು ದಿನಪತ್ರಿಕೆಗಳನ್ನಲ್ಲ. ತಮ್ಮಪತ್ರಿಕೆಗಳ "ಕ್ರೆಡಿಬಿಲಿಟಿ" ಯನ್ನು.
ಪ್ರಜಾವಾಣಿಯಂತಹ ಹಿರಿಯ ಪತ್ರಿಕೆಯೂ ಈ ಕ್ರೆಡಿಬಿಲಿಟಿಯ ಹರಾಜಿನಲ್ಲಿ ಭಾಗವಹಿಸಿರುವುದು ಖೇದಕರ ಸ0ಗತಿ. ಈ ಹರಾಜಿನಲ್ಲಿ ರಾಜಕಾರಣಿಗಳು, ಉದ್ಯಮಿಗಳು, ಸ0ಘ ಪರಿವಾರ ಎಲ್ಲರೂ ಭಾಗಹಿಸಿ, ಬೆಲೆ ಕೂಗುತ್ತಿದ್ದಾರೆ. "ವಿಶ್ವಾಸಾರ್ಹತೆ" ಎನ್ನುವುದು ಸ0ಪೂರ್ಣವಾಗಿ ಹರಾಜಾದ ದಿನ ಅಥವಾ ಪತ್ರಿಕೆಗಳು ಸ0ಪೂರ್ಣ ನ0ಬಿಕೆಗೆ ಅನರ್ಹವಾದ ದಿನ, ಈ ಸಮಾಜದ ಪಾಲಿಗೆ, ಈ ನಾಡಿನಪಾಲಿಗೆ ಕಪ್ಪು ದಿನ. ಆಗ ಈ ದೇಶದಲ್ಲಿ ನೂರಾರು ಪತ್ರಿಕೆಗಳು ಕಡಿಮೆ ದರದಲ್ಲಿ ಹೆಚ್ಚುಪುಟಗಳಲ್ಲಿ ಆಕರ್ಷಕವಾಗಿ ಅ0ಗಡಿ ಅ0ಗಡಿಗಳಲ್ಲಿ ಸೂಳೆ0ುರ0ತೆ ತುಟಿಗೆ ನಗುವನ್ನುಅ0ಟಿಸಿ ಬಳುಕುತ್ತಿರುತ್ತವೆ. ಆದರೆ ತಮ್ಮದೆನ್ನುವ ಒ0ದೇ ಒ0ದು ಪತ್ರಿಕೆಯೂ ಜನಸಾಮಾನ್ಯರ ಬಳಿಯಿರುವುದಿಲ್ಲ.
(ಬಿ.ಎಂ.ಬಷೀರ್ ಸೂಕ್ಷ್ಮ ಸಂವೇದನಗಳಿರುವ ಪತ್ರಕರ್ತ. ಬದ್ಧತೆಯುಳ್ಳ ಬರಹಗಾರ. ಅವರ ಸೂಕ್ಷ್ಮ ಸಂವೇದನೆ ಹಾಗೂ ಬದ್ಧತೆಗಳಿಗೆ ಇಲ್ಲಿನ ಲೇಖನ ಸಾಕ್ಷಿ. ಅವರು ಮಂಗಳೂರು ಮೂಲದ ವಾರ್ತಾ ಭಾರತಿ ದೈನಿಕದ ಸುದ್ದಿ ಸಂಪಾದಕರು. ಕೆಲವು ದಿನಗಳ ಹಿಂದೆ ಈ ಲೇಖನ ಗೌರಿ ಲಂಕೇಶ್ ರ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇಂದಿನ ಪತ್ರಿಕೋದ್ಯಮ, ಪತ್ರಕರ್ತರ ಧೋರಣೆಗಳನ್ನು ಈ ಲೇಖನ ಸೂಕ್ಷ್ಮವಾಗಿ ಅವಲೋಕಿಸುತ್ತದೆ. ಸುದ್ದಿಮಾತಿನ ಓದುಗ 'ಇನ್ನೊಬ್ಬ ಅನಾಮಿಕ' ಈ ಬ್ಲಾಗ್ ಗೆಂದು ಈ ಲೇಖನವನ್ನು ಕಳುಹಿಸಿದ್ದಾರೆ. ಓದಿ ಪ್ರತಿಕ್ರಿಯಿಸಿ.)

Sunday, November 2, 2008
ಸೂತಕದ ಬೀದಿಯಲ್ಲಿ ಅದ್ಧೂರಿ ಮೆರವಣಿಗೆ!
ಇದು ಬೇಕಿತ್ತಾ? - ಇಂತಹದೊಂದು ಪ್ರಶ್ನೆ ಎದ್ದು ಕುಣಿಯುತ್ತಿದೆ.
ಕಬ್ಬಿಣ ಅದಿರಿಗೆ ಚೀನಾದ ಬೇಡಿಕೆ ನಿಲ್ಲುತ್ತಿದ್ದಂತೆಯೇ, ಇಷ್ಟುದಿನ ಬಂದರಿಗೆ ಅದಿರು ಸಾಗಿಸುತ್ತಿದ್ದ ಲಾರಿಗಳು ಸಾಲು ಸಾಲು ಮಾರಾಟಕ್ಕೆ ನಿಂತಿವೆ (ಪ್ರಜಾವಾಣಿಯಲ್ಲಿ ವರದಿಯಾಗಿದೆ). ಕೊಳ್ಳುವುದಿರಲಿ, ಕೇಳುವವರೇ ಇಲ್ಲ ಆ ಊರಲ್ಲಿ. ಸಾಲ ಕೊಟ್ಟವರು ಲಾರಿಗಳ ಹರಾಜು ಹಾಕಿ ಸಾಲ ಹಿಂದಕ್ಕೆ ಪಡೆಯುವ ಸ್ಥಿತಿಯಲ್ಲಿಲ್ಲ. ಚಾಲಕ ವೃತ್ತಿ ಮಾಡಿಕೊಂಡಿದ್ದ ಸೋಮಪ್ಪ, ಜಮೀನಿನಲ್ಲಿ ಅದಿರು ಆಯ್ದುಕೊಂಡು ಅನ್ನ ಕಾಣುತ್ತಿದ್ದ ನಿಶಾನಿ ಗುಳ್ಳಪ್ಪ, ಆತನ ಮಕ್ಕಳು.. ಕಂಗಾಲಾಗಿದ್ದಾರೆ.
ಹೊಸಪೇಟೆ ಹಾಗೂ ಬಳ್ಳಾರಿ ನಡುವಿನ ರಾಷ್ಟ್ರೀಯ ಹೆದ್ದಾರಿ ಕುಲಗೆಟ್ಟು ಹೋಗಿದೆ. ಅದು ಕುಲಗೆಟ್ಟು ಹೋಗಲು ಒಂದು ಸಕಾರಣವಿದೆ. ಅಲ್ಲಿಯ ಜನ ಆ ರಸ್ತೆ ಸರಿಯಾಗಲು ಒಪ್ಪುವುದಿಲ್ಲ. ರಸ್ತೆ ತುಂಬಾ ಉಬ್ಬು-ತಗ್ಗು, ಗುಂಡಿಗಳಿದ್ದರೆ ಅದಿರು ತುಂಬಿದ ಲಾರಿಗಳಿಂದ ಒಂದಿಷ್ಟು ಅದಿರು ರಸ್ತೆ ತುಂಬಾ ಬೀಳುತ್ತದೆ. ಅದನ್ನು ಆಯ್ಕೊಂಡು ಹೊಟ್ಟೆ ತುಂಬಿಸಿಕೊಳ್ಳುವ ಜನರಿದ್ದರು. ಈಗ ಅವರ ಪಾಡೇನು? ಚಿತ್ರದುರ್ಗದ ಲಾರಿ ಮಾಲೀಕನೊಬ್ಬ ತಾನು ಕೊಂಡ ಲಾರಿ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಳ್ಳಾರಿ ಜನ ತಕ್ಷಣಕ್ಕೆ ಚೇತರಿಸಿಕೊಳ್ಳಲು ಸಾಧ್ಯವಿಲ್ಲ. ದೊಡ್ಡ ಮಟ್ಟದಲ್ಲಿ ಅದಿರು ತುಂಬಿಕೊಂಡು ಚೀನಾಕ್ಕೆ ಸಾಗಿಸಿದವರು ಇಂದು ನೂರಾರು ಕೋಟಿಗೆ ಒಡೆಯರು. ಅವರ ಹಾರಾಟ ಆಕಾಶದಲ್ಲೆ. ಅವರನ್ನು ಬೆಲೆ ಕುಸಿತ, ಇಲ್ಲದ ಬೇಡಿಕೆ ಅಷ್ಟಾಗಿ ಬಾಧಿಸುವುದಿಲ್ಲ. ಹಿಂದಿನ ವೈಭೋಗದ ದಿನಗಳು ಮತ್ತೆ ಬರಲಾರವೇನೋ, ಆದರೆ ಅವರ ಅನ್ನಕ್ಕಂತೂ ದೋಕಾ ಇಲ್ಲ. ಆದರೆ ಕೂಲಿ ಕಾರ್ಮಿಕರ ಪಾಡೇನು?
ವ್ಯವಸಾಯ ಮರೆತು ಭೂಮಿ ಮೇಲ್ಪದರದಲ್ಲಿ ದೊರಕುವ ಅದಿರನ್ನೆಲ್ಲಾ ಮಾರಿಕೊಂಡ ಜನ ಈಗ ವ್ಯವಸಾಯಕ್ಕೆ ಮರಳಬೇಕಿದೆ. ಅದು ಅಷ್ಟು ಸುಲಭದ ಮಾತಲ್ಲ. ಅದಿರಿನೊಂದಿಗೆ ಭೂಮಿಯ ಸತ್ವವೆಲ್ಲ ಚೀನಾ ಸೇರಿದೆ. ಬಿತ್ತಿದರೆ ಬೆಳೆ ಬರುವುದಾದರೂ ಹೇಗೆ?
ಅಂದಹಾಗೆ, ಕರ್ನಾಟಕ ರಾಜಕೀಯದ ಮೇಲೂ ಇದರ ಪ್ರಭಾವ ಇಲ್ಲದಿಲ್ಲ. ಒಂದು ಓಟಿಗೆ ಸಾವಿರದ ನೋಟು ಕೊಟ್ಟು ಅಧಿಕಾರಕ್ಕೆ ಬಂದ ಜನ, ಹಿಂದಿನಂತೆ ಹಣ ಹರಿಯ ಬಿಡಲಾರರು. ದುಡ್ಡು ಎಷ್ಟೇ ಇದ್ದರೂ, ಮುಂದಿನ ದಿನಗಳಿಗೆ ಬೇಕಾಗುತ್ತೆ ಎಂದು ಕೂಡಿಡುವ ಮನೋಭಾವ ಸಹಜವಾಗಿಯೇ ಮೂಡುತ್ತದೆ.
ಇದೇ ಸಂದರ್ಭದಲ್ಲಿ ಇಂದು ಹಂಪಿ ಉತ್ಸವ ಉದ್ಘಾಟನೆಗೊಳ್ಳುತ್ತಿದೆ. ಉತ್ಸವಕ್ಕೆ ಅದ್ಧೂರಿಯಾಗಿ ನಡೆಸಬೇಕೆಂದು ಗಣಿ ರೆಡ್ಡಿಗಳು ತೀರ್ಮಾನಿಸಿದ್ದಾರೆ. ರಥ ಬೀದಿ, ಹಿಂದೆ ಇತ್ತು ಎನ್ನಲಾದ ವೈಭವವನ್ನು, ನೆನಪಿಸುತ್ತಿದೆ. ಈ ವೈಭವಕ್ಕಾಗಿ ಆ ಬೀದಿಯ ವ್ಯಾಪಾರಿಗಳನ್ನೆಲ್ಲ ಮನೆಗೆ ಕಳುಹಿಸಲಾಗಿದೆ. ಅವರ ಪಾಲಿಗೆ ಅದು ಉತ್ಸವ ಹೇಗಾಗಲು ಸಾಧ್ಯ?
ಒಂದೆಡೆ ಅನ್ನ ಕಳೆದುಕೊಂಡ ಸಾಮಾನ್ಯ ಜನ, ಮತ್ತೊಂದೆಡೆ ಸರಕಾರದ ವೆಚ್ಚದಲ್ಲಿ ಉಳ್ಳವರ ದೌಲತ್ತು. ಈಗ ಹೇಳಿ ಇದೆಲ್ಲಾ ಬೇಕಿತ್ತಾ?

Saturday, November 1, 2008
ನಮ್ಮದು ಯಾವ ಪಕ್ಷ?
ನೀವು ಕಾಂಗ್ರೆಸ್ ನವರು. ಇಲ್ಲಾ ಜೆಡಿಎಸ್ ಇರಬೇಕು - ಹೀಗೆ ಕೆಲವರು ಲೆಕ್ಕ ಹಾಕಿದ್ದಾರೆ. ಮತ್ತೆ ಕೆಲವರು - ನಿಮ್ಮದು ಯಾವ ಪಕ್ಷ ಎಂದು ನೇರಾ ನೇರಾ ರಾಜಕೀಯದ ಮಾತಿಗಿಳಿದಿದ್ದಾರೆ. ಸಾಮಾಜಿಕ, ರಾಜಕೀಯ ವಿಚಾರಗಳಿಗೆ ಪ್ರತಿಕ್ರಿಯಿಸುವವರನ್ನು ಹೀಗೆ ಒಂದು ಪಕ್ಷದ ಚೌಕಟ್ಟಿಗೆ ಹಾಕಿ ಆ ಫ್ರೇಮ್ ನಡಿಯಲ್ಲೇ ನೋಡುವ ಗುಣ ಈ ನೆಲದ ಮಣ್ಣಿನಲ್ಲೇ ಇದೆ. ಯಾರನ್ನೂ ಹಾಗೇ ಸುಮ್ಮನೆ ಬಿಡುವುದಿಲ್ಲ. ಸುದ್ದಿಮಾತು ಬಳಗಕ್ಕೆ ಆದದ್ದೂ ಅದೇ.
ಇತ್ತೀಚೆಗೆ ಇಲ್ಲಿನ ಕೆಲ ಬರಹಗಳಿಗೆ ಪ್ರತಿಕ್ರಿಯಿಸಿದವರು - ಬ್ಲಾಗ್ ಅನ್ನು ಕಾಂಗ್ರೆಸ್ ಮುಖವಾಣಿ ಎಂದು ಟೀಕಿಸಿದ್ದಾರೆ. ಬಿಜೆಪಿ ನೇತೃತ್ವ ಸರಕಾರದ ಕೆಲವು ನಡೆಗಳನ್ನು ಟೀಕಿಸಿದಾಗ ನಮ್ಮನ್ನು 'ಬಿಜೆಪಿ ವಿರೋಧಿಗಳು' ಎಂದು ಹೇಳುವ ಉದ್ದೇಶ ಇಟ್ಟುಕೊಂಡು - 'ಕಾಂಗ್ರೆಸ್ ನವರು' ಎಂದು ದೂರಿದ್ದಾರೆ. ನಮ್ಮದೊಂದು ಪ್ರಶ್ನೆ - ಯಾವ ಪಕ್ಷಕ್ಕೆ ಸೇರದೆಯೂ, ಆಡಳಿತದಲ್ಲಿರುವವರ ಕೃತ್ಯಗಳನ್ನು ಟೀಕಿಸುವುದು ಸಾಧ್ಯವಿಲ್ಲವೇ? ಟೀಕಿಸುವ ಎಲ್ಲರಿಗೂ ಒಂದು ರಾಜಕೀಯ ನೆಲೆ ಇರಲೆಬೇಕೆ? ಒಂದು ಕ್ಷಣ ನಮ್ಮ ಓದುಗರು - ಸಾಮಾನ್ಯ ಪ್ರಜೆಗಳಾಗಿ ಇವರು ಟೀಕಿಸುತ್ತಿರಬಹುದಲ್ಲ - ಎಂದು ಯಾಕೆ ಯೋಚಿಸುವುದಿಲ್ಲ. ಯಾವ ರಾಜಕೀಯ ಪಕ್ಷಗಳೆಡೆಗೂ ಒಲವಿಲ್ಲದೆ, ಯಾವ ಪಕ್ಷಗಳ ಬಲವಿಲ್ಲದೆ ಕೋಟ್ಯಂತರ ಜನ ಈ ನಾಡಿನಲ್ಲಿದ್ದಾರೆ ಎಂಬುದನ್ನು ನಾವೆಲ್ಲರೂ ಅರಿತುಕೊಳ್ಳಬೇಕಿದೆ.
ಪತ್ರಿಕೆಗಳು ಖಾಯಂ ವಿರೋಧ ಪಕ್ಷ ಎಂಬ ಮಾತಿದೆ. ಹಾಗೆ ಸುದ್ದಿಮಾತಿಗೆ ಒಂದು ಪಕ್ಷದ ಹಣೆ ಪಟ್ಟಿ ಕಟ್ಟಲೇಬೇಕು ಎಂಬ ಉಮ್ಮೇದಿ ಇರುವವರಿಗೆ ಒಂದು ಮಾತು - ನಮ್ಮದು ಖಾಯಂ ವಿರೋಧ ಪಕ್ಷ. ಆಡಳಿತಕ್ಕೆ ಯಾರೇ ಬರಲಿ, ವಿರೋಧ ಪಕ್ಷಗಳ ಸಾಲಿನಲ್ಲಿ ನಾವೂ ಇರುತ್ತೇವೆ. ಅಂದಹಾಗೆ ವಿರೋಧ ಪಕ್ಷದ ಕೆಲಸ ಕೇವಲ ವಿರೋಧ ಮಾಡುವುದಲ್ಲ ಎಂಬ ಪ್ರಜ್ಞೆಗೆ ನಾವೂ ಬದ್ಧರು.
ಮತ್ತೆ ಕೆಲವರು ತಮ್ಮ ಅಸಹಾಯಕತೆಯನ್ನು ಅಸಂಬದ್ಧ ಪದಗಳಿಂದ ಟೀಕಿಸುವ ಪ್ರಯತ್ನ ಮಾಡಿದ್ದಾರೆ. ಅವರ 'ಅಕ್ಷರ ಜ್ಞಾನ'ಕ್ಕೆ ನಮ್ಮ ಬಹುಪರಾಕು ಎಂದಷ್ಟೇ ಹೇಳಲು ಬಯಸುತ್ತೇವೆ.
ಇತ್ತೀಚೆಗೆ ಕೆಲವರ ಪ್ರತಿಕ್ರಿಯೆಗಳು ಆರೋಗ್ಯಕರ ಚರ್ಚೆಗೆ ನಾಂದಿ ಹಾಡಿದ್ದವು. ನಮ್ಮ ಉದ್ದೇಶವೂ ಅದೇ. ಹೆಚ್ಚು ಚರ್ಚೆ ಆದರೆ, ನಮ್ಮೊಳಗಿನ ಗೊಂದಲಗಳು ಸ್ಷಷ್ಟವಾಗುತ್ತವೆ, ಯೋಚನಾ ಲಹರಿಗೆ ಒಂದು ದಿಕ್ಕು ದಕ್ಕುತ್ತದೆ. ಹೀಗೆ ಚರ್ಚೆ ನಡೆಸಿದವರಿಗೆಲ್ಲ ಸುದ್ದಿಮಾತು ಬಳಗದ ಅಭಿನಂದನೆಗಳು.

Subscribe to:
Posts (Atom)