Saturday, October 11, 2008

ಯದ್ವಾ-ತದ್ವಾ ಈಶ್ವರಪ್ಪ !!

ನಮ್ಮ ಉಡುಪಿ ಪ್ರತಿನಿಧಿಯಿಂದ:
ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಯದ್ವಾತದ್ವಾ ಮಾತನಾಡಿದ್ದಾರೆ. (ವರದಿ ಇಲ್ಲಿದೆ) ಕನಕಗೋಪುರ ವಿವಾದಕ್ಕೆ ಸಂಬಂಧಿಸಿದಂತೆ ಪೇಜಾವರ ಶ್ರೀಗಳು ವಿಶ್ವನಾಥ್, ಸಿದ್ರಾಮಯ್ಯ, ಹಾಗೂ ಅನಂತಮೂರ್ತಿಗೆ ಶಾಪ ಕೊಟ್ರಂತೆ. ಹಾಗಾಗಿ ಅವರೆಲ್ಲಾ ಇಂದು ಬೀದಿ ಪಾಲಾಗಿದ್ದಾರಂತೆ.
ಇನ್ನೂ ಮುಂದೆ ಹೋಗಿ, ಅನಂತಮೂರ್ತಿಗೆ ಬೇರೆ ಧರ್ಮದವರನ್ನು ಮದುವೆಯಾಗಿ ಧರ್ಮ ಬಿಟ್ಟರಂತೆ, ಅವರಂತೆಯೇ ಎಲ್ಲರೂ ಮಾಡಲಿ ಎಂದು ಪ್ರಭಾವ ಬೀರುತ್ತಾ ಗೊಡ್ಡು ಸಂಪ್ರದಾಯ ಹಾಕಿದ್ದಾರಂತೆ.
ಇಷ್ಟೆಲ್ಲಾ ಮಾತನಾಡಿ ತಾನು ಅಪ್ರಬುದ್ಧ ಎಂದು ತೋರಿಸಿಕೊಟ್ಟ ಈಶ್ವರಪ್ಪನವರು " ತಾನು ಹುಟ್ಟಿರುವ ಜಾತಿಗೆ ತಕ್ಕಂತೆ, ಅದೇ ಜಾತಿಯ ಭಾಷೆಯಲ್ಲಿ ಮಾತನಾಡಿದ್ದೇನೆ " ಎಂದಿದ್ದಾರೆ.
ಈಶ್ವರಪ್ಪ ಅರ್ಥ ಮಾಡಿಕೊಳ್ಳಬೇಕಿರುವ ಸಂಗತಿ ಏನೆಂದರೆ: ಸ್ವಭಾವತಃ ಕುರುಬನಾಗಿಯೇ ಉಳಿದಿದ್ದರೆ, ಅವರು ಇಂದು ಇಂತಹ ಮಾತನಾಡುತ್ತಿರಲಿಲ್ಲ.
ಚಿಕ್ಕಂದಿನಲ್ಲೇ ಆರ್.ಎಸ್.ಎಸ್ ಚಡ್ಡಿ ಹಾಕುವುದನ್ನೂ ಕಲಿತು ಸಂಘ ಪರಿವಾರದ ಜಾತಿಗೆ ಸೇರಿ ತನ್ನ ಶೂದ್ರ ನೆಲೆಯನ್ನು ಕಳೆದುಕೊಂಡಿದ್ದರಿಂದ ಹೀಗಾಯಿತು. ನಿಜ ಅರ್ಥದಲ್ಲಿ ಧರ್ಮ, ಸಂಸ್ಕಾರ, ಬಿಟ್ಟವರು ಈಶ್ವರಪ್ಪ, ಅನಂತಮೂರ್ತಿ ಅಲ್ಲ.
ಕೆಲ ದಿನಗಳ ಹಿಂದೆ ಅನಂತಮೂರ್ತಿ ಒಂದು ಮಾತು ಹೇಳಿದ್ರು, "ಎಡಪಂಥಿಯರು ಸಾಮಾನ್ಯವಾಗಿ ಒಂದಿಷ್ಟು ಓದಿ ಕೊಂಡು, ಹೋರಾಟದ ಅನುಭವದಿಂದ ಬುದ್ಧಿವಂತರಾಗಿರುತ್ತಾರೆ. ಆದರೆ ಅದೇ ಬಲಪಂಥಿಯರಲ್ಲಿ ಪ್ರಖಾಂಡ ವಿಚಾರವಾದಿಗಳು, ಪ್ರಗತಿಪರ ಚಿಂತಕರು ಕಾಣುವುದೇ ಇಲ್ಲ".
ನಾವು ಎಂದಾದರೂ ಈ ಯಡ್ಯೂರಪ್ಪ, ಈಶ್ವರಪ್ಪ ಅವರೊಟ್ಟಿಗೆ ಇತ್ತೀಚಿನ ಸಾಹಿತ್ಯಕ ಚಳವಳಿ, ಹೊಸ ಸಿದ್ಧಾಂತಗಳು, ನೂತನ ಸಾಹಿತ್ಯ ಸ್ವೀಕಾರ, ಇಂದಿನ ಸಮಾಜಶಾಸ್ತ್ರೀಯ ಚಿಂತನಗಳು, ಸಮಾಜವಾದ.. ಹೀಗೆ ಯಾವ ಒಂದು ವಿಷಯ ಕುರಿತಾದರೂ ಮಾತನಾಡಲು ಸಾಧ್ಯವೇ?
ಮುಖ್ಯವಾಗಿ ಇವರ್ಯಾರಿಗೂ ಓದುವ ಸಂಪ್ರದಾಯವೇ ಇಲ್ಲ. ಚಡ್ಡಿ ಹಾಕ್ಕೊಂಡು ವ್ಯಾಯಾಮ ಮಾಡೋದು ಬಿಟ್ಟು ಮತ್ತೊಂದನ್ನು ಅವರ ಸಂಘ ಅವರಿಗೆ ಕಲಿಸಲೇ ಇಲ್ಲ. ಅದರ ಪರಿಣಾಮವಾಗಿ ಹೀಗೆ ತಲೆ ಬುಡ ಗೊತ್ತಿಲ್ಲದೆ, ಯದ್ವಾತದ್ವಾ ಮಾತನಾಡುವ ಈಶ್ವರಪ್ಪ!
(Photo courtesy: The Hindu)

4 comments:

sugandhi said...

ಅಧಿಕಾರದ ಆಮಲು ಈಶ್ವರಪ್ಪನವರಿಗೆ ಹೇಗೆ ತಲೆಗೆ ಹತ್ತಿದೆ ಎಂಬುದಕ್ಕೆ ಅವರು ಮಾತನಾಡಿರುವ ರೀತಿ ಸಾಕ್ಷಿ. ಈಶ್ವರಪ್ಪ ತಾನು ಸದಾ ಕಾಲ ಸಚಿವನಾಗಿಯೇ ಇರುತ್ತೇನೆ ಎಂದು ಭಾವಿಸಿದಂತಿದೆ. ಸಿದ್ಧರಾಮಯ್ಯ, ವಿಶ್ವನಾಥ್ ಇನ್ಯಾವತ್ತೂ ಅಧಿಕಾರ ಪಡೆಯಲಾರರು ಎಂದು ಭಾವಿಸಿದಂತಿದೆ. ಕಾಲಚಕ್ರ ಉರುಳುತ್ತದೆ ಎಂಬುದೂ ಸಹ ಈಶ್ವರಪ್ಪನವರಿಗೆ ಗೊತ್ತಾಗದೇ ಇರುವಷ್ಟು ಅಧಿಕಾರದ ಮದ ಅವರನ್ನು ಆವರಿಸಿದೆ.
ಇನ್ನೂ ಶಾಪ, ಶಕುನ, ಜ್ಯೋತಿಷ್ಯಗಳನ್ನು ನಂಬುವ, ಆ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವ ಈಶ್ವರಪ್ಪನಂಥವರು ಶೂದ್ರ ಸಮೂಹಕ್ಕೆ ದೊಡ್ಡ ಕಳಂಕ. ಕನಕ ಜಯಂತಿಗೆ ರಜೆ ಘೋಷಿಸಿಕೊಂಡ ಹುಮ್ಮಸ್ಸಿನಲ್ಲಿ ಈಶ್ವರಪ್ಪ ಹೀಗೆಲ್ಲ ಮಾತನಾಡುತ್ತಿರಬಹುದು. ಕನಕಜಯಂತಿಗೆ ರಜೆ ಘೋಷಿಸಿದ ಮಾತ್ರಕ್ಕೆ ಕುರುಬರ ಬದುಕು ಭವ್ಯವಾಗುತ್ತದೆ ಎಂದು ಆತ ಭಾವಿಸಿದರೆ ಅದು ಅವರ ಅಜ್ಞಾನವನ್ನಷ್ಟೆ ತೋರಿಸುತ್ತದೆ.
ಪೇಜಾವರ ಸ್ವಾಮಿಯನ್ನು ಮನವೊಲಿಸಲು, ರಮಿಸಲು ಈಶ್ವರಪ್ಪ ಹೀಗೆ ಬೆತ್ತಲಾಗಬಾರದಿತ್ತು.

Anonymous said...

ಕುರುಬರ ಭಾಷೆ ಎಂದರೆ ಏನು? ಕುರುಬರೇನು ಸಂಸ್ಕೃತಿಹೀನರೆ? ಅನಾಗರಿಕರೆ? ನಡವಳಿಕೆ ಗೊತ್ತಿಲ್ಲದವರೆ?
ಯಾವ ಪರಿಭಾಷೆಯಲ್ಲಿ ಈಶ್ವರಪ್ಪ ಹೀಗೆ ಮಾತನಾಡಿದರು ಎಂಬುದನ್ನು ಬಹಿರಂಗಪಡಿಸಬೇಕಾಗಿದೆ. ಕುರುಬ ಸಮುದಾಯದವರೂ ಸಹ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಈಶ್ವರಪ್ಪ ಮಾತನಾಡಿರುವುದು ಬಜರಂಗಿಯ ಭಾಷೆಯಲ್ಲಿ, ಆರ್‌ಎಸ್‌ಎಸ್ ಭಾಷೆಯಲ್ಲಿ, ಬಿಜೆಪಿ ಭಾಷೆಯಲ್ಲಿ. ಶಾಪ, ಪಾಪ, ದೋಷ, ಮುಟ್ಟು, ಮೈಲಿಗೆ ಇತ್ಯಾದಿ ಶಬ್ದಗಳ ವಾರಸುದಾರರು ಈ ಜನರೇ. ಹೀಗಾಗಿ ಈಶ್ವರಪ್ಪ ಬಜರಂಗಿ ಭಾಷೆಯಲ್ಲಿ ಮಾತನಾಡಿದ್ದೇನೆ ಎಂದು ಹೇಳಬೇಕಿತ್ತು.
ಈಶ್ವರಪ್ಪನವರು ಬೇಕಾದರೆ ಪೇಜಾವರರ ಮನೆಯಲ್ಲಿ ಕಸ ಹೊಡೆದುಕೊಂಡಿರಲಿ, ಯಾರು ಬೇಡವೆಂದವರು? ಆದರೆ ಕುರುಬ ಸಮುದಾಯದ ಅಂತಃಸಾಕ್ಷಿಯನ್ನು ಅಡವಿಡಲು ಇವರು ಯಾರು?
-ಸದಾಶಿವ ಹಂಪನಾಳ

Anonymous said...

ಬ್ಲಾಗಿಗೆ ಹೊಸ ಪ್ರವೇಶ.ಅನುದಿನದ ಬೆಳವಣಿಗೆಗಳು ಹೊಸ ಶಾಕ್. ಪ್ರತಿಯೊಂದನ್ನೂ ಗಮನಿಸುವ ಕ್ಯಾಮಾರ. ಬ್ರೇಕಿಂಗ್ ನ್ಯೂಸ್ , ಹೆಡ್ ಲೈನ್ಸ್... ಇತ್ಯಾದಿ. ಸಕತ್ ಆಗಿದೆ. ಬದಲಾವಣೆಗೆ ... ತಿದ್ದುಪಡಿಗೆ ಅವಕಾಶ ಇಲ್ಲಿದೆ......

ಮಹೇಶ್ ಪುಚ್ಚಪ್ಪಾಡಿ

Anonymous said...

you have reporters in Udupi also!!!!!!