Friday, October 10, 2008

ಯಾರನ್ನೂ ಬದಲಾಯಿಸುವ ಉಮೇದಿಯಿಲ್ಲ...

ಕಳೆದ ಒಂದು ವಾರದಿಂದ ಇಲ್ಲಿಯ ಬರಹಗಳಿಗೆ ಬಹುಸಂಖ್ಯೆಯಲ್ಲಿ ಪ್ರತಿಕ್ರಿಯೆಗಳು ಬರುತ್ತಿವೆ. ಕೆಲವರು ನಮ್ಮ ಪ್ರಯತ್ನ ಮೆಚ್ಚಿಕೊಂಡಿದ್ದರೆ, ಮತ್ತೆ ಕೆಲವರು ಹಿಗ್ಗಾ ಮುಗ್ಗಾ ಟೀಕಿಸಿದ್ದಾರೆ. ಎಲ್ಲಿರಗೂ ಸ್ವಾಗತ. ರಾಹುಲ್ ಗಾಂಧಿ ಚಿತ್ರಗಳಿಗೆ ಸ್ವಲ್ಪ ಹೆಚ್ಚೇ ಎನ್ನುವಷ್ಟು ಪ್ರತಿಕ್ರಿಯೆಗಳು ಬಂದಿವೆ. ಕುಕೂಊ ಎಂಬ ಬ್ಲಾಗಿ "ಯಾವ ಗಂಡಸು ತನಕ್ಕೆ ಈ ರಾ'ಗಾಂದಿ ಬೆವರು ಸುರಿಸಿದ್ದು? ಅದೂ ಗನ್ ಮ್ಯಾನ್ಗಳ ನಡುವೆ..!ನಿನಗೆ ಅಶ್ಟು ತಿಳುವಳಿಕೆ ಇಲ್ಲವೆ? ಯಾಕೆ ಈ ತಿಳಿಗೇಡಿ ತನ ನಿಮಗೆ?ನಿಮಗೂ ಆ ಟೈಮ್ಸ್ ಆಫ್ ಇಂಡಿಯ, NDTV, ಆಜತಕ್ ನವರಿಗೂ ಇರುವ ಗೇಂಟೇನು?"
ಇವರ ಪ್ರತಿಕ್ರಿಯೆ ಅಷ್ಟಾಗಿ ಅರ್ಥವಾಗಲಿಲ್ಲ. 'ಗಂಡಸುತನ' ಪ್ರದರ್ಶನಕ್ಕಾಗಿ ಮಾತ್ರ ಯಾರಾದರೂ ಬೆವರು ಸುರಿಸುತ್ತಾರೋ? ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಪ್ರಚುರ ಪಡಿಸಲು ರಾಹುಲ್ ಗಾಂಧಿ, ಗಾಂಧಿ ಜಯಂತಿಯಂದು ಆ ಕೆಲಸ ಮಾಡಿದ್ದು. ಅದು ಯುಪಿಎ ಸರಕಾರದ ಯೋಜನೆ. ಪಕ್ಷದ ಕಾರ್ಯಕರ್ತನಾಗಿ ಆ ಯೋಜನೆಯನ್ನು ಪ್ರಚಾರ ಮಾಡುವುದು ಕೆಲಸವಾಗಿತ್ತು. ಈ ದೇಶದಲ್ಲಿ ತುಟಿಗೆ ಹಚ್ಚುವ ಕ್ರೀಮ್, ತೊಡುವ ಅಂಡರ್ ವೇರ್ ನಿಂದ ಹಿಡಿದು, ಅತ್ಯಾಧುನಿಕ ಕಾರುಗಳನ್ನು ಪ್ರಚಾರ ಮಾಡಲು ತಾರೆಗಳು ಮುಗಿಬಿಳುತ್ತಾರೆ ಹಾಗೂ ಆ ಮೂಲಕ ಕೋಟಿಗಟ್ಟಲೆ ಹಣ ಗಳಿಸುತ್ತಾರೆ. ಆದರೆ ಜನರಿಂದ ಆಯ್ಕೆಯಾದವನೊಬ್ಬ ಉದ್ಯೋಗ ನೀಡುವ ಯೋಜನೆಯೊಂದರ ಪ್ರಚಾರಕ್ಕಿಳಿದರೆ, ಅವನ ಗಂಡಸುತನ, ಬೆವರು..ಎಂದೆಲ್ಲಾ ಕಾಮೆಂಟ್ ಗಳು ಕೇಳಿಬರುತ್ತವೆ. ನಾವು ತೀರಾ ಈ ಮಟ್ಟಿಗೆ ಸಿನಿಕರಾಗುವುದು ಬೇಡ.
ಇನ್ನು ಕೆಲವರು ನಾವು ಹಿಂದೂ ವಿರೋಧಿಗಳು ಎಂದು ಫರ್ಮಾನು ಹೊರಡಿಸಿದ್ದಾರೆ. ಗೊಡ್ಡು ಸಂಪ್ರದಾಯಗಳನ್ನು, ಇಂದಿಗೂ ನಿಲ್ಲದ ಅಸ್ಪೃಶ್ಯತೆಯನ್ನು, ಢಾಳಾಗಿ ಕಾಣುವ ಅಸಮಾನತೆಯನ್ನು ಟೀಕಿಸಿದರೆ ಅದನ್ನು ಹಿಂದೂ ವಿರೋಧಿ ಧೋರಣೆ ಎಂದು ಮೂದಲಿಸುವುದು ಇಂದು ಸರ್ವೇಸಾಮಾನ್ಯವಾಗಿದೆ.
ಅಮೆರಿಕಾದಿಂದ ರವಿ ತಮ್ಮ ಇತ್ತೀಚಿನ ಬರಹವೊಂದರಲ್ಲಿ ಕೋಮುವಾದ, ಮೂಲಭೂತವಾದ ವಿರುದ್ಧದ ದನಿಗಳು ಇಂಟರ್ ನೆಟ್, ಬ್ಲಾಗ್ ಗಳಲ್ಲಿ ಕಾಣುತ್ತಿರುವುದು ತೀರಾ ಇತ್ತೀಚೆಗೆ. ಈ ಮೊದಲು 'ನಿಜ ಕನ್ನಡ ನಾಡು' ಇಂಟರ್ ನಟ್ ನಲ್ಲಿ ಪ್ರತಿಬಿಂಬಿತವಾಗುತ್ತಿರಲಿಲ್ಲ ಎಂದಿದ್ದಾರೆ. ತಳ ಸಮುದಾಯದ ಕಾಳಜಿ ಬಗ್ಗೆ ಚಿಂತಿಸುವ ಅನೇಕರು ಇಂಟರ್ ನೆಟ್, ಬ್ಲಾಗ್ ಗಳು ಪರಿಚಯ ಇಲ್ಲದಿರುವುದನ್ನೇ ಹೆಮ್ಮೆಯ ಸಂಗತಿ ಎಂದು ಬೀಗುವ ಕಾಲವಿತ್ತು. ಈಗ ಬದಲಾಗುತ್ತಿದೆ ಎಂದು ಬರೆಯುತ್ತಾ ಸುದ್ದಿಮಾತು ಹಾಗೂ ಮತ್ತಿತರೆ ಬ್ಲಾಗ್ ಗಳನ್ನು ಉದಾಹರಿಸಿದ್ದಾರೆ (ಪೂರ್ಣ ಲೇಖನ ಇಲ್ಲಿದೆ, ಓದಿ). ನಮ್ಮ ಬರಹಗಳನ್ನು ಟೀಕಿಸುವವರು ಈ ಬೆಳವಣಿಗೆಯನ್ನು ಅಷ್ಟಾಗಿ ಸಹಿಸುವವರಲ್ಲ ಎಂದೆನಿಸುತ್ತದೆ.
ಒಂದಂತೂ ಸ್ಪಷ್ಟ. ನಮ್ಮ ಬರಹಗಳಿಂದ ಯಾರನ್ನೇ ಆಗಲಿ ತಿದ್ದುತ್ತೇವೆ ಎನ್ನುವ ಉಮೇದಿ ನಮ್ಮದೇನಲ್ಲ.

4 comments:

sugandhi said...

ಇಂಥ ಟೀಕೆಗಳೆಲ್ಲ ನಿರೀಕ್ಷಿತವೇ. ಅದರಲ್ಲಿ ವಿಶೇಷವೇನೂ ಇಲ್ಲ. ಸುದ್ದಿ ಮಾತು ಆಯ್ದುಕೊಂಡಿರುವುದು ಕಠಿಣವಾದ ಹಾದಿ. ಈ ಹಾದಿಯಲ್ಲಿ ಇಂಥವೆಲ್ಲ ಸಾಮಾನ್ಯ.
ನೀವು ಇದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಹಾಗು ಪದೇ ಪದೇ ನಿಮ್ಮ ನಿಲುವುಗಳನ್ನು ಸ್ಪಷ್ಟಪಡಿಸಬೇಕಾದ ಅಗತ್ಯವೂ ಇಲ್ಲ. ನೀವು ಮಾಡುತ್ತಿರುವ ಕೆಲಸವನ್ನು ಹೀಗೆಯೇ ತಣ್ಣಗೆ ಮಾಡುತ್ತ ಹೋಗಿ.
ಅಮೆರಿಕ ರವಿ ಗುರುತಿಸಿದ ಹಾಗೆ ಬ್ಲಾಗ್ ಲೋಕದಲ್ಲಿ ಹೀಗೆ ಮುಚ್ಚುಮರೆಯಿಲ್ಲದೆ ಸಾಮಾಜಿಕ ನ್ಯಾಯ, ಸಮಾನತೆಗಾಗಿ ಬರೆಯುವವರ ಕೊರತೆಯಿತ್ತು. ಈ ಗ್ಯಾಪ್ ತುಂಬಿಕೊಳ್ಳುತ್ತಿರುವುದರಿಂದ ಕಂಗಾಲಾಗಿರುವ ಜನರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಅದು ಅವರ ಪಾಡು, ಅವರನ್ನು ಅವರ ಪಾಡಿಗೆ ಬಿಟ್ಟು ಮುನ್ನಡೆಯಿರಿ.
ಸುದ್ದಿಮಾತು ರಾಗದ್ವೇಷಗಳಿಲ್ಲದಂತೆ ಮುಂದೆ ಸಾಗಲಿ.

Anonymous said...

yavade kelsakku par mattu virodhagalu samany.. Nivu madtirodu nimage sari annsidre tikeagalige hedarade nim baravanige munduvarisi.. Ondu vishay suddimatu blog olle kelsane madite.. Go ahead..........

heggere said...

Kandithvagi olley kels maduttiddira.go head.

renukaradya.blogspot.com

heggere said...

olleya kels maduttiddira go head..