ದಿನೇಶ್ ಸತತ ಒಂಭತ್ತು ವರ್ಷಗಳ ಕಾಲ ಪ್ರಜಾವಾಣಿ ಓದುಗರಿಗೆ ದೆಹಲಿ ತೋರಿಸಿದವರು. ಚುನಾವಣೆ ಸಂದರ್ಭಗಳಲ್ಲಿ ದೇಶದ ಉದ್ದಗಲಕ್ಕೂ ಅಲೆದಾಡಿ ವಿಶ್ಲೇಷಣೆ ಬರೆದರು. ಪಶ್ಚಿಮ ಬಂಗಾಳದಲ್ಲಿ ಸುದೀರ್ಘ ಅವಧಿಗೆ ಎಡರಂಗ ಆಡಳಿತ ನಡೆಸಲು ಸಾಧ್ಯವಾಗಿದ್ದು ಏತಕ್ಕೆ ಎನ್ನುವುದು ಅವರ ಬರಹಗಳ ಮುಊಲಕ ಸ್ಪಷ್ಟವಾಯಿತು. ಓರಿಸ್ಸಾದ ಪಪ್ಪು ಪಾಸ್ ಹೋಗಯಾ, ಎನ್ನುವಾಗಲೂ ಪಪ್ಪುವಿನ (ನವೀನ್ ಪಟ್ನಾಯಕ್ ನ) ಮುಂದಿನ ನಡೆ ಬಗ್ಗೆ ಸಂಶಯ ಇಟ್ಟುಕೊಂಡೇ ಬರೆಯುತ್ತಾರೆ.
ಮುಂದಿನ ಪ್ರಧಾನಿ ಯಾರಾಗಬಹುದು ಎಂಬ ಬರಹದಲ್ಲಿ, 'ಇಷ್ಟೆಲ್ಲಾ ಸಾಧ್ಯತೆಗಳಿವೆಯಾ?' ಎಂದು ಓದುಗರಲ್ಲಿ ಅಚ್ಚರಿ ಮುಊಡಿಸಿದ್ದುಂಟು. ಈಗ್ಗೆ ಕೆಲವು ತಿಂಗಳುಗಳ ಹಿಂದೆ, ಗುಜರಾತ್ ಅಭಿವೃದ್ಧಿ ವಿಚಾರದಲ್ಲಿ ದೇಶದಲ್ಲಿಯೇ ಮುಂದಿದೆ ಎಂದು ಎಲ್ಲಾ ಮಾಧ್ಯಮಗಳು ಬೀಗುತ್ತಿದ್ದ ಕಾಲದಲ್ಲಿ ದಿನೇಶ್, ಆ ರಾಜ್ಯ ಹಿಂದುಳಿದಿರುವುದೆಲ್ಲಿ ಎನ್ನುವುದನ್ನು, ಅಂಕಿ ಅಂಶ ಸಹಿತ ವಿವರಿಸಿದ್ದರು.
ಕರ್ನಾಟಕದಲ್ಲಿ ಜೆಡಿಎಸ್-ಬಿಜೆಪಿ ಸರಕಾರ ಮುರಿದು ಬಿದ್ದಾಗ, ಜೆಡಿಎಸ್ ಪಕ್ಷದ ಮೇಲೆ ವಚನ ಭ್ರಷ್ಟತೆ ಆರೋಪ ಹೊರಿಸಲಾಯಿತು. ಅದೇ ಹೊತ್ತಿಗೆ ದಿನೇಶ್ ಬಿಜೆಪಿ ದೇಶಾದ್ಯಂತ ಹೀಗೆ ಎಷ್ಟು ಪಕ್ಷಗಳನ್ನು 'ವಚನ ಭ್ರಷ್ಟರನ್ನಾಗಿ' ಮಾಡಿದೆ ಎಂದು ಅಂಕಣ ಬರೆದರು. ಮಾರನೇ ದಿನ ಕುಮಾರಸ್ವಾಮಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, ಆ ಅಂಕಣದ್ದೇ ಸುದ್ದಿ. ವಿಚಿತ್ರ (ವಿಶಿಷ್ಷ) ಅಂದರೆ, ಜೆಡಿಎಸ್ ಆ ಅಂಕಣದ ಭಾಗಗಳನ್ನೇ ತನ್ನ ನಡೆಯ ಸಮರ್ಥನೆಗಾಗಿ ಇತರ ಪತ್ರಿಕೆಗಳಲ್ಲಿ ಜಾಹೀರಾತಿನ ರೂಪದಲ್ಲಿ ಬಳಸಿಕೊಂಡಿತು.
ಈ ವಾರ ದೆಹಲಿ ಹವಾಗುಣದ ಬಗ್ಗೆ ಒಂದು ಚಂದದ ಬರಹ ಬರೆದು ದೆಹಲಿಗೆ ವಿದಾಯ ಹೇಳಿದ್ದಾರೆ. ದಿನೇಶ್ ರ ಈ ಬರಹದಲ್ಲಿ 'ಸೂರ್ಯ' ಮತ್ತೆ ಮತ್ತೆ ಕಾಣಸಿಗುತ್ತಾನೆ. ಅವರಿಗೆ ದೆಹಲಿಯ ಸಂಸದರನ್ನು ಕಂಡಾಗಲೆಲ್ಲ "ಯಾಕೋ ನೆತ್ತಿಮೇಲೆ ಸುಡುತ್ತಿರುವ ಸೂರ್ಯನೇ ನೆನಪಾಗುತ್ತಿದ್ದ. ಕಣ್ಣೆತ್ತಿ ನೋಡುವ ಹಾಗಿಲ್ಲ. ಸಮೀಪ ಹೋದರೆ ಸುಟ್ಟುಬಿಡುವಂತೆ ಧಗ ಧಗ ಉರಿಯುತ್ತಿರುವ ಅಧಿಕಾರದ ಬೆಂಕಿ". ಅಧಿಕಾರವನ್ನು ಬೆಂಕಿಗೆ ಹೋಲಿಸುತ್ತಾರೆ. ತರುಣ ಪತ್ರಕರ್ತರಿಗೆ ಇಲ್ಲೊಂದು ಕಿವಿಮಾತು ಎಂದು ತಿಳಿದರೆ ತಪ್ಪಿಲ್ಲ. ಸೆಪ್ಟಂಬರ್-ಅಕ್ಟೋಬರ್ ತಿಂಗಳ ಸೂರ್ಯನನ್ನು ಅವರು, ಅಧಿಕಾರದಲ್ಲಿಲ್ಲದ ಪಕ್ಷದ ಸಂಸದರಿಗೆ ಹೋಲಿಸುತ್ತಾರೆ. ಆ ತಿಂಗಳಲ್ಲಿ ಸೂರ್ಯ ಇದ್ದೂ ಇಲ್ಲದ ಹಾಗೆ.
ದೆಹಲಿಯಲ್ಲಿ ಬಿಸಿಲ ಝಳ ಕಡಿಮೆಯಾಗುವ ಹೊತ್ತಿನಲ್ಲಿ ದಿನೇಶ್ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅಂದಹಾಗೆ 'ದಿನೇಶ್' ಕೂಡಾ ಸೂರ್ಯನ ಇನ್ನೊಂದು ಹೆಸರು. ಪ್ರಜಾವಾಣಿ ಓದುಗರ ಪಾಲಿಗೆ ದಿನೇಶ್ ಅಮಿನ್ ಮಟ್ಟು 'ದೆಹಲಿಯ ಸೆಪ್ಟಂಬರ್-ಅಕ್ಟೋಬರ್ ತಿಂಗಳ' ಸೂರ್ಯನಾಗದಿರಲಿ ಎಂಬುದೇ ಸುದ್ದಿಮಾತು ಆಶಯ.
7 comments:
ಕನ್ನಡ ಪತ್ರಿಕೋದ್ಯಮದ ದ್ರೋಣ ವಡ್ಡರ್ಸೆ ರಘುರಾಮ ಶೆಟ್ಟರ ಶಿಷ್ಯ ದಿನೇಶ್, ಬೆಂಗಳೂರಿನಲ್ಲಿ ಕಳೆದ ದಶಕದಿಂದ ಕುಲಗೆಡುತ್ತಿರುವ ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ದಿಶೆಯನ್ನು ತೋರಿಸಲಿ. ಶುಭ ಹಾರೈಕೆಗಳು.
ಒಲವಿನಿಂದ
ಬಾನಾಡಿ
ಸೂರ್ಯನ ಕುರಿತು ಬರೆದಾಗಲೆಲ್ಲಾ ನನಗೆ ತೀರಾ ಆಪ್ತ ಬರಹ ಎನಿಸುತ್ತದೆ. ಬಳ್ಳಾರಿ ಜಿಲ್ಲೆಯ ಬಿಸಿಲನಾಡಿನಲ್ಲಿ ಇರುವ ನನಗೆ ಸೂರ್ಯ ಅತ್ಯಂತ ಸ"ಪ, ಗೆಳೆಯ. ನೆತ್ತಿಮೇಲೆ ಯಾವಾಗಲೂ ಕುಕ್ಕುತ್ತಾ ನಮ್ಮ ಅಹಂ ಇಳಿಸುವ ಕರುಣಾಮು.
ನಮ್ಮ ಜಿಲ್ಲೆಯ ಸಾಮಾನ್ಯ ಜನರು ಸೂರ್ಯನನ್ನು ಎಷ್ಟು ಪ್ರೀತಿಸುತ್ತಾರೆ ಎಂದರೆ ಉರಿಬಿಸಿಲಿನಲ್ಲೂ ತಲೆಯ ಮೇಲೆ ಒಂದು ಕೊಡೆಯನ್ನಾಗಲಿ, ಅಥವಾ ಟೋಪಿ, ಟವೆಲ್ ಯಾವದನ್ನು ಹಾಕದೇ ನೆತ್ತಿ ಕುಕ್ಕಿಸಿಕೊಳ್ಳುತ್ತಾರೆ. ಸೂರ್ಯನಿಗೆ ಸವಾಲು ಹಾಕುವಂತೆ ಉರಿಬಿಸಿಲಿನಲ್ಲಿ ಬಿಸಿ ಬಿಸಿ ಒಗ್ಗರಣೆ, "ರ್ಚಿ ತಿನ್ನುತ್ತಾರೆ. ಚಹ "ರುತ್ತಾರೆ. ಅಪ್ಪಿ ತಪ್ಪಿ ಕೊಲ್ಡ್ರಿಂಕ್ಸ್ ಬೇಡುವುದಿಲ್ಲ.
ದೆಹಲಿಯಲ್ಲಿ ಸೂರ್ಯ ಅಧಿಕಾರದ ಸಂಕೇತವಾದರೆ, ನಮ್ಮೂರಲ್ಲಿ ಸೂರ್ಯ ಹೋರಾಟದ ಸಂಕೇತ, ಬದುಕಿನ ಸಂಕೇತ. ಸೂರ್ಯನಿಗೆ ಎದುರುವವರು ಎಲ್ಲಲ್ಲಿಯೋ ಹೆದರಿ ಕುಳಿತುಕೊಳ್ಳುತ್ತಾರೆ. ಎದುರಿಸುವವರು ಸೂರ್ಯನ ಗೆಳೆಯರಾಗುತ್ತಾರೆ. ಕೆಲವರಂತೂ ಬರಿಗಾಲಿನಿಂದಲೇ ಓಡಾಡಿ ಸ್ವತಃ ಸೂರ್ಯನೆ ಬೆಚ್ಚಿ ಬೀಳುವಂತೆ ನೋಡಿಕೊಂಡಿದ್ದಾರೆ.
ನಮ್ಮ ಸೂರ್ಯ ಕಲ್ಲುಗುಂಡುಗಳನ್ನು ಪೇರಿಸಿಟ್ಟ ಗುಡ್ಡಗಳನ್ನು ಕಾಸುತ್ತಾ ಹಗಲು ಪಾಳಿ ಮುಗಿಸುವ ಸೂರ್ಯ ರಾತ್ರಿ ನನ್ನ ಕೆಲಸವನ್ನು ನೀವು ಮಾಡಿ ಎಂದು ಬಿಸಿಲಿಗೆ ಕಾದ ಕಲ್ಲುಬಂಡೆಗಳಿಗೆ ಹೇಳುತ್ತಾನೆ. ರಾತ್ರಿಯೆಲ್ಲಾ ಬಿಸಿಗಾಳಿ ಊದುವ ಕಲ್ಲುಬಂಡೆಗಳು ಬೆಳಗಿನ ಜಾವ ತಣ್ಣಗಾಗುವ ಹೊತ್ತಿಗೆ ಸೂರ್ಯ ಮತ್ತೆ ಪ್ರತ್ಯಕ್ಷನಾಗಿ ಅವುಗಳಿಗೆ ಕಾವು ಕೊಡುತ್ತಾನೆ. ನಿಮಗೆ ಇದು ಗೊತ್ತಿರಲಿ, ಇಲ್ಲಿ ಸ್ವಲ್ಪ ತಂಪಾದ ವಾತಾವರಣ ಏರ್ಪಟ್ಟರೆ ಜನ ಸೋಮಾರಿಗಳಂತೆ ಮನೆಯಲ್ಲಿ ಉಳಿಯುತ್ತಾರೆ. ಸೂರ್ಯ ಬಂದು ಕರೆಯುವವರೆಗೆ ಅವರು ಹೊರ ಬರುವುದೇ ಇಲ್ಲ.
ಸೂರ್ಯ ಬಂದು ಕರೆದರೆ ಇಲ್ಲ ಎನ್ನಲಾಗುವುದೇ? ದಿನೇಶ್ ಅ"ನಮಟ್ಟು ಅವರ ಬರಹ ಓದಿದ ಮೇಲೆ ಇದೆಲ್ಲಾ ನೆನಪಾತು. 'ಸುದ್ದಿಮಾತು' ಓದಿದ ಮೇಲೆ ಇದೆಲ್ಲಾ ಬರೆಯಬೇಕಾತು. ಬಳ್ಳಾರಿ ಜಿಲ್ಲೆಯ ಸೂರ್ಯ ಹಾಗೂ ನಾನು ಇವರಿಬ್ಬರಿಗೂ ಅಭಿನಂದಿಸುತ್ತೇನೆ. ರೂಪಕದ ಭಾಷೆ, ಸೂಕ್ಷ್ಮ ಸಂವೇದನೆ ಎಲ್ಲಾ ಪತ್ರಕರ್ತರಿಗೂ ದಕ್ಕಲಿ ಎಂದು ಹಾರೈಸುವೆ.
- ಪರುಶುರಾಮ ಕಲಾಲ್
ಕೆಲ ಪತ್ರಕರ್ತರಿಂದ ಪತ್ರಿಕಾ ಪರಿಭಾಷೆ ನುಡಿಗಟ್ಟುಗಳು ಮೂಲಾರ್ಥಕ್ಕಿಂತ ಕುಲಗೆಡುವುದು ಹೆಚ್ಚು. ಇದು ವೃತ್ತಿ ಬದುಕಿನ ಅನಿವಾರ್ಯತೆಂದಲೂ ಆಗಬಹುದೇನೋ, ಆದರೆ ಕೆಲ ಸೂಕ್ಷ್ಮ ಪತ್ರಕರ್ತರು ಪತ್ರಿಕಾ ಬರಹವನ್ನು ನೋಡುವ, ಗ್ರ"ಸುವ ತಿಳುವಳಿಕೆಯನ್ನೆ ಬದಲಾಸಿಕೊಳ್ಳಲು ಒತ್ತಾಸುವಂತೆ ಬರೆಯುತ್ತಾರೆ. ಅಂತಹವರ ಸಾಲಿಗೆ ಸೇರಿದವರು ದಿನೇಶ್ ಅ"ನ್ಮಟ್ಟು. ದೆಹಲಿ ನೋಟದ ಮೂಲಕ ಜೋಳದ ಕೂಡ್ಲಿಗಿಯಂತಹ ಪುಟ್ಟ ಊರಲ್ಲಿ ಕುಳಿತು ಭಾರತದ ರಾಜಕಾರಣವನ್ನು ಅದರೆಲ್ಲಾ ಸೂಕ್ಷ್ಮ ಆಯಾಮಗಳೊಂದಿಗೆ ತಿಳಿಯಲು, ಹರಿತವಾಗಿ ಯೋಚಿಸಲು ಸಾಧ್ಯವಾಗಿದ್ದು ಅವರ ಬರಹದಿಂದ. ದೆಹಲಿಂದ ಅವರು ಬೆಂಗಳೂರಿಗೆ ಬಂದಿದ್ದು, ಖುಯೂ ಹೌದು, ಬೇಸರವೂ ಹೌದು. ಖು ಯಾಕೆಂದರೆ ಪತ್ರಿಕೆಗೆ ನಮಗೆ ಇನ್ನಿಷ್ಟು ಹತ್ತಿರವಾಗುತ್ತಾರೆ. ಕರ್ನಾಟಕದ ರಾಜಕಾರಣದ ಬಗ್ಗೆಯೂ ಸೂಕ್ಷ್ಮವಾಗಿ ಯೋಚಿಸಲು ಸಹಾಯವಾಗುತ್ತದೆ. ಬೇಸರವೆಂದರೆ ಭಾರತದ ರಾಜಕಾರಣದ ಬಗ್ಗೆ ಅವರ ಸೂಕ್ಷ್ಮ ಬರಹದಿಂದ ವಂಚಿತರಾಗಿರುವುದು. ಪ್ರಜಾವಾಣಿಗೊಂದು ಹೊಸ ಚೈತನ್ಯವನ್ನು ದೊರಕಿಸಿಕೊಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇವೆ.
- ಅರುಣ ಜೋಳದ್ ಕೂಡ್ಲಿಗಿ
You are very right. Dinesh Amin Mattu is the most promising among the contemporary Kannada journalists. He has an exceptional analytical ability and a thorough understanding of Karnataka, and India to some extent. More than anything, he is not biased. At a time when 'the most popular columnists' in Kannada journalism tried to address the gallery, Dinesh's columns were thoroughly grounded in facts and figures.
Yes, Prajavani needs some fresh ideas. Dinesh's arrival at this juncture is most appropriate...
ಪ್ರತಿವಾರ ಏನೇ ತಪ್ಪಿಸಿದರೂ ತಪ್ಪದೇ ಓದುತ್ತಿದ್ದ ಅಂಕಣ ದೆಹಲಿ ನೋಟ. ಈಗ ಅವರು ಬೆಂಗಳೂರಿಗೆ ಬಂದಿದ್ದಾರೆ ಎಂದರೆ ರಾಜ್ಯ ರಾಜಕೀಯದ ಹೊಸ ಒಳನೋಟ ಸಿಗುತ್ತೆ ಎಂದು ನಿರೀಕ್ಷಿಸಬಹುದು.
ಮಹೇಶ್ ಕುಮಾರ್
ಈಟಿವಿ, ಹೈದರಾಬಾದ್
Very rare breed of journalist in the present kannada journalism. It requires great amount of interest in current affairs, reading, contacts, cross checking etc. style of writing also very lucid..
Ayush Narayan, Mangalore
dinesh nantar dehaliyalli ashtondu olle report mado journalist yaradru iddara paper irli tv irali? dinesh was the only man....
Post a Comment