Thursday, October 16, 2008

ಹೊಲಸು ಕಾರಿಕೊಂಡ ಭೈರಪ್ಪ...

ಸಾಯುವ ಮೊದಲು ಜ್ಞಾನಪೀಠ ಗಿಟ್ಟಿಸಲೇಬೇಕೆಂದು ಹೆಣಗಾಡುತ್ತಿರುವ ಎಸ್.ಎಲ್.ಬೈರಪ್ಪನ ಭೈರಿಗೆ ಕೊರೆತ ಆರಂಭವಾಗಿದೆ. ವಿಜಯಕರ್ನಾಟಕದ ಅಕ್ಟೋಬರ್ ೧೬ರ ಸಂಚಿಕೆಯ ಒಂದೂವರೆ ಪುಟವನ್ನು ಭೈರಪ್ಪ ಸ್ವಾಹಾ ಮಾಡಿದ್ದಾನೆ. ಮತಾಂತರ ವಿಷಯ ಬೆಳೆಯುತ್ತಿದ್ದಾಗ ವಿ.ಕ. ಎಸ್‌ಎಂಎಸ್ ಪೋನ್ ಇತ್ಯಾದಿ ಮಣ್ಣು ಮುಸುಡಿ ಆರಂಭಿಸಬೇಕಿತ್ತು. ತಡವಾಗಿಯಾದರೂ ವಿ.ಕ ತನ್ನ ಟ್ರಾಕಿಗೆ ಬಂದಿದೆ. ಅಭಿನಂದನೆಗಳು ವಿ.ಭಟ್ಟರೇ.
ಭೈರಪ್ಪ ಕರ್ನಾಟಕದ ನರೇಂದ್ರ ಮೋದಿಯಾಗಲು ಹೊರಟಿದ್ದಾನೆ. ಹಾಗಾಗಿ ಅವರ ಸಂಶೋಧನಾ ಲೇಖನದಲ್ಲಿ ಮೋದಿ ಮಾತುಗಳೇ ಕೇಳಿಸುತ್ತವೆ. ಅವನ ದೃಷ್ಟಿಯಲ್ಲಿ ಸೋನಿಯಾಗಾಂಧಿಯ ಪಟ್ಟಾಭಿಷೇಕವಾದ ಮೇಲೆ ಭಾರತದಲ್ಲಿ ಕ್ರಿಸ್ತೀಕರಣವು ಅಗಾಧವಾದ ಪ್ರಮಾಣಕ್ಕೆ ಏರಿದೆ. ಈ ಅಗಾಧತೆಯಿಂದ ಎಚ್ಚೆತ್ತ ಒರಿಸ್ಸಾ, ಕರ್ನಾಟಕ ಮೊದಲಾದ ಕಡೆ ಅಲ್ಲಲ್ಲಿ ಪ್ರತಿಕ್ರಿಯೆಗಳಾಗುತ್ತಿವೆ ಅಷ್ಟೆ. ಗುಜರಾತ್‌ನಲ್ಲಿ ಸಾವಿರಾರು ಮುಸ್ಲಿಮರನ್ನು ಹಿಂದೂ ವೀರರು ಕೊಂದುಹಾಕಿದಾಗ ಮೋದಿ ಇದನ್ನೇ ಹೇಳಿದ್ದಲ್ಲವೆ? ಹಾಗಾಗಿ ಮೋದಿಗೂ ಭೈರಪ್ಪನಿಗೂ ಅಷ್ಟೇನು ವ್ಯತ್ಯಾಸ ಕಾಣದು.
ವಿಚಿತ್ರವೆಂದರೆ ಮೋದಿಗೆ ಭೈರಪ್ಪನನ್ನು ಹೋಲಿಸಿದರೆ ಆತ ಮುಜುಗರ ಪಟ್ಟುಕೊಳ್ಳುವುದರ ಬದಲು ಹೆಮ್ಮೆ ಪಟ್ಟುಕೊಂಡರೆ ಆಶ್ಚರ್ಯವೇನಿಲ್ಲ. ಭೈರಪ್ಪ ಲೇಖನದಲ್ಲಿ ಸಾದರಪಡಿಸಿರುವ ಕಥೆಗಳಿಗೆಲ್ಲ ಆಧಾರವಾಗಿ ಕಾಣಿಸಿರುವುದು ಅರುಣ್ ಶೌರಿ ಎಂಬ ಮೂರನೇ ದರ್ಜೆ ಪತ್ರಕರ್ತನ ಕೃತಿಯನ್ನು, ಜತೆಗೆ ಸಂಘ ಪರಿವಾರದ ಭಟ್ಟಂಗಿಗಳಾದ ಸೀತಾರಾಂ ಗೋಯೆಲ್, ನವರತ್ನ ಎಸ್. ರಾಜಾರಾಂ ಎಂಬ ಅನಾಮಿಕ ಲೇಖಕರನ್ನು.
ಹಾಗೆಯೇ ಫ್ರಾಂಕ್ಚಾ ಗೋತಿಯೆ ಎಂಬ ಕ್ರಿಶ್ಚಿಯನ್ ದ್ವೇಷಿ ಫ್ರೆಂಚ್ ಪತ್ರಕರ್ತ ಹೇಳಿದ್ದೆಲ್ಲ ಭೈರಪ್ಪನಿಗೆ ವೇದೋಪನಿಷತ್ ಆಗಿರುವುದು ಸಹಜವೇ ಆಗಿದೆ. ಭೈರಪ್ಪನ ಕಿವಿ ಎಷ್ಟು ಕಿವುಡಾಗಿದೆಯೆಂದರೆ ಆತನಿಗೆ ಕರ್ನಾಟಕದ ಚರ್ಚುಗಳ ಮೇಲೆ ದಾಳಿ ನಡೆಸಿದ್ದು ಬಜರಂಗದಳ ಎಂಬುದರ ಬಗ್ಗೆಯೇ ಅನುಮಾನ. ಜನಸಾಮಾನ್ಯರೇ ರೊಚ್ಚಿಗೆದ್ದು ಈ ದಾಳಿ ಸಂಘಟಿಸಿರಬಹುದು ಎಂಬುದು ಆತನ ಲೆಕ್ಕಾಚಾರ. ಸ್ವತಃ ಬಜರಂಗದಳದ ಸಂಚಾಲಕ ಮಹೇಂದ್ರ ಕುಮಾರನೇ ಟಿವಿ ಚಾನೆಲ್‌ಗಳ ಸ್ಟೂಡಿಯೋಗಳಲ್ಲಿ ನೇರಪ್ರಸಾರದ ಕಾರ್ಯಕ್ರಮಗಳಲ್ಲಿ ನಾವೇ ಇದನ್ನು ಮಾಡಿದ್ದು ಎಂದು ಬೊಗಳಿದ್ದು ಭೈರಪ್ಪನಿಗೆ ಕೇಳಿಸಿಲ್ಲವೆ?ಭೈರಪ್ಪನಿಗೆ ಗೊತ್ತಿಲ್ಲದ ಮತ್ತಷ್ಟು ವಿಷಯಗಳಿವೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವಹಿಸಿರುವುದು ಪೃಥ್ವಿರಾಜ್ ಚೌಹಾಣ್ ಅವರು; ಎ.ಕೆ.ಆಂಟನಿ ಅಲ್ಲ. ಮಾರ್ಗರೆಟ್ ಆಳ್ವಾ ಮಹಾರಾಷ್ಟ್ರದಲ್ಲಿ ಅದ್ಯಾವ ರೀತಿಯಲ್ಲಿ ಭಯೋತ್ಪಾದನೆ ಮಾಡುತ್ತಿದ್ದಾರೋ ಭೈರಪ್ಪನೇ ಬಲ್ಲ. ಕಾರ್ಮಿಕ ಖಾತೆಯಲ್ಲಿರುವ ಆಸ್ಕರ್ ಫರ್ನಾಂಡೀಸ್ ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸುವ ಮಂತ್ರಿ ಎಂದು ಭೈರಪ್ಪನವರಿಗೆ ಯಾರು ಹೇಳಿದರೋ? ಭೈರಪ್ಪನವರಿಗೆ ರಾಜಕೀಯ ಅಜ್ಞಾನವಿದ್ದರೆ ಬಾಯಿ ಮುಚ್ಚಿಕೊಂಡಿರಬೇಕು. ಫ್ರಾಂಕ್ವಾಗೋತಿಯೆ ಎಂಬ ಮೂರ್ಖ ಬರೆದ ಎಂಬ ಒಂದೇ ಕಾರಣಕ್ಕೆ ಬರಿಗಣ್ಣಿಗೆ ಕಾಣುವ ಸುಳ್ಳುಗಳ ಸರಮಾಲೆ ಯಾಕೆ ಸೃಷ್ಟಿಸಬೇಕು?
ಭೈರಪ್ಪನ ಇಡೀ ಲೇಖನವೇ ಇಂಥ ಅಸಹಾಯಕ, ಔಟ್‌ಡೇಟ್ ಆದ, ಮೂಲಭೂತವಾದಿ ಮುದಿ ಬ್ರಾಹ್ಮಣನ ಬಡಬಡಿಕೆಯಂತೆ ಕೇಳುತ್ತದೆ. ಮೇಲೆ ಹೇಳಿದ ಕೆಲವೇ ಉದಾಹರಣೆ ಸಾಕು; ಇಡೀ ಲೇಖನ ತುಂಬಾ ಇಂಥ ಸುಳ್ಳುಗಳು ಕಣ್ಣಿಗೆ ರಾಚುತ್ತವೆ ಎಂದು ಹೇಳಲು. ಭೈರಪ್ಪ ಪ್ರವಾದಿ ಮಹಮದ್ ಬಗ್ಗೆ ಹೇಗೆ ಬರೆಯುತ್ತಾನೆ ನೋಡಿ: "ಯಹೂದಿ, ಕ್ರೈಸ್ತ ಹಾಗು ಮುಸ್ಲಿಂ ಮತಗಳಲ್ಲಿನ ಸಾಮಾನ್ಯ ಅಂಶವೆಂದರೆ ದೇವರು ನಿಮಗೆ ನೇರವಾಗಿ ಲಭ್ಯನಲ್ಲ. ನೀವು ಮೂಲತಃ ಪಾಪಿಗಳು. ದೇವರು ಮಹಾ ಭಯಂಕರ, ಮಹಾಕ್ರೂರ ಶಿಕ್ಷೆಯನ್ನು ಮುಲಾಜಿಲ್ಲದೆ ಕೊಡುವವನು. ಪ್ರವಾದಿಯಾದ ನನ್ನನ್ನು ನಂಬಿ ನನ್ನ ಬೋಧೆಯಂತೆ ನಡೆದರೆ ನಿನಗೆ ಸತ್ತ ನಂತರ ಘೋರ ನರಕಕ್ಕೆ ಬೀಳಿಸುವುದನ್ನು ತಪ್ಪಿಸಿಕೊಳ್ಳುವ ಅವಕಾಶವುಂಟು. ಇಲ್ಲದಿದ್ದರೆ ಕೊನೆ ಇಲ್ಲದ ನೋವಿನ ನರಕ ಕಟ್ಟಿಟ್ಟದ್ದು. ನೀನು ನಂಬಬೇಕು, ಇತರರನ್ನು ನಂಬಿಸಬೇಕು. ಎಲ್ಲೆಲ್ಲಿಯೂ ಹೋಗಿ ಬಲ ಪ್ರಯೋಗವನ್ನಾದರೂ ಮಾಡಿ ನಂಬುವವರನ್ನು ಹೆಚ್ಚಿಸಬೇಕು. ಅದೇ ಧರ್ಮ, ಅದೇ ನೀತಿ. ನಂಬದವರನ್ನು ಹಿಂಸಿಸಿ ಕೊಲ್ಲುವ, ಗುಲಾಮರಾಗಿ ತುಳಿದು ದುಡಿಸಿಕೊಳ್ಳುವ ವಿಧಾನವನ್ನು ಮಹಮದರು ಬೋಧಿಸಿದರು. ಹಾಗಿದ್ದರೆ ಹಿಂದೂ ಧರ್ಮದ ಒಳಗಿನ ಅವತಾರಗಳ ಕತೆ ಏನು? ಸಂಭವಾಮಿ ಯುಗೇ ಯುಗೇ ಎಂದು ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದನ್ನು ಭೈರಪ್ಪ ಹೇಗೆ ಅರ್ಥೈಸುತ್ತಾನೆ?
ದೇವರು ನೇರವಾಗಿ ಲಭ್ಯನಲ್ಲ ಎಂದು ಇತರ ಧರ್ಮಗಳು ಹೇಳುವುದಾದರೆ ಹಿಂದೂ ಧರ್ಮದಲ್ಲಿ ನೇರವಾಗಿ ಲಭ್ಯನೇ? ಹಾಗಿದ್ದರೆ ಈ ದೇಶದಲ್ಲಿ ಕೋಟಿ ಕೋಟಿ ಪೂಜಾರಿ ಪುರೋಹಿತರಿದ್ದಾರಲ್ಲ, ಅವರಿಗೆ ದೇವರು ಮತ್ತು ಮನುಷ್ಯರ ನಡುವೆ ದಳ್ಳಾಳಿ ಕೆಲಸ ಮಾಡಲು ಹಚ್ಚಿದವರು ‍ಯಾರು?
ಭೈರಪ್ಪನ ಲೇಖನಕ್ಕೆ ಇಂಥ ನೂರು ಉತ್ತರಗಳನ್ನು ನೀಡಬಹುದು. ಆದರೆ ಅನ್ನ ಬೆಂದಿದಿಯೇ ಎಂದು ತಿಳಿಯಲು ಎಲ್ಲ ಅಗುಳನ್ನು ಹಿಚುಕಿ ನೋಡಬೇಕಾಗಿಲ್ಲ ಅಲ್ಲವೆ? ಹಿಂಸೆ, ಮತಾಂಧತೆಗಳಿಂದ ರಾಜ್ಯ ನಿಧಾನವಾಗಿ ತಣ್ಣಗಾಗುವ ಹೊತ್ತಿನಲ್ಲೇ ಭೈರಪ್ಪ ಮತ್ತೆ ಇಡೀ ರಾಜ್ಯಕ್ಕೆ ಕಿಚ್ಚು ಹಚ್ಚಲು ಹೊರಟಿದ್ದಾನೆ. ಕ್ಷಮಿಸಿ, ಈ ಕಾರಣದಿಂದಲೇ ಆತನಿಗೆ ಏಕವಚನ ಪ್ರಯೋಗ ಮಾಡಬೇಕಾಯಿತು.

40 comments:

sugandhi said...

ಕ್ರಿಶ್ಚಿಯನ್ನರು ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದರೆ ಭೈರಪ್ಪ ಯಾಕೆ ಅಷ್ಟು ಯಾತನೆ ಪಡಬೇಕು? ಕಳೆದ ಅರವತ್ತು ವರ್ಷಗಳಿಂದಲೂ ಕೇಂದ್ರ ಸರ್ಕಾರದಲ್ಲಿ ಶೇ.೫೦ಕ್ಕೂ ಹೆಚ್ಚು ಮಂದಿ ಬ್ರಾಹ್ಮಣರು, ಬನಿಯಾಗಳೇ ಆಡಳಿತ ನಡೆಸಿದ್ದು ಭೈರಪ್ಪನಿಗೆ ಗೊತ್ತಿಲ್ಲವೆ?
ಭೈರಪ್ಪನ ಅಸಹನೆ ಯಾವ ಮಟ್ಟಕ್ಕಿದೆ ಎಂದರೆ ಚರ್ಚ್‌ಗಳ ಮೇಲಿನ ದಾಳಿಯನ್ನು ಆತ ‘ಪ್ರತಿಕ್ರಿಯೆ’ ಎಂದು ಸರಳವಾಗಿ ಹೇಳುತ್ತಾನೆ. ಇಂಥ ಪ್ರತಿಕ್ರಿಯೆಗಳನ್ನು ಈ ದೇಶದ ಆದಿವಾಸಿಗಳು, ದಲಿತರು ಭೈರಪ್ಪನಂಥವರಿಗೆ ತಿರುಗಿ ನೀಡತೊಡಗಿದರೆ ಇವರೆಲ್ಲ ಏನಾಗುತ್ತಾರೆ ಎಂಬ ಕಲ್ಪನೆ ಈತನಿಗಿದೆಯೆ?
ಯಾವತ್ತೂ ಜೀವವಿರೋಧಿ ನೆಲೆಯಲ್ಲೇ ಕಾದಂಬರಿಗಳನ್ನು ಬರೆದ ಭೈರಪ್ಪ ಕನ್ನಡ ಸಾಹಿತ್ಯಲೋಕದ ಪಾಲಿಗೆ ದೊಡ್ಡ ಕಪ್ಪು ಚುಕ್ಕೆ ಇದ್ದ ಹಾಗೆ.
ಇಂಥ ಲೇಖನ ಬರೆದಿದಕ್ಕಾಗಿ ಬಿಜೆಪಿ ಸರ್ಕಾರ ಭೈರಪ್ಪನಿಗೆ ಯಾವ ಕೊಡುಗೆ ಕೊಡುತ್ತದೋ ಕಾದು ನೋಡಬೇಕು.
ನೀವು ಬರೆದ ಹಾಗೆ ಮುಂದೆ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಬಂದರೆ ಜ್ಞಾನಪೀಠ ಹೊಡೆದುಕೊಳ್ಳುವ ಆಸೆ ಈತನಿಗಿರಬೇಕು.

ರಾಮಸ್ವಾಮಿ ಹುಲಕೋಡು said...

ಮಿತ್ರರೆ, ನಿಜವಾಗಿಯು ನನಗೆ ಎಸ್.ಎಲ್.ಬೈರಪ್ಪನ ಬಗ್ಗೆ ಸಿಟ್ಟು ಬರಲಿಲ್ಲ. ಯಾರದ್ದೋ ಲೇಖನ ಇಟ್ಟುಕೊಂಡು ಏನೇನೋ ಬರೆದ ಆತನ ಬಗ್ಗೆ ಪಾಪಾ ಅನಿಸಿತು. ವಿ.ಕ. ಭಟ್ಟಗೆ ಪತ್ರಿಕೋದ್ಯಮ ಗೊತ್ತಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಯಿತು. ಬ್ಲಾಗ್ ಸೂಪರ್

Anonymous said...

ಮಿತ್ರರೆ ನಮಗೆ ನಿಮ್ಮ ಮೇಲಿನ ಅನುಮಾನ ನಿಜವಾಗಿದೆ. ನಿಜವಾಗಿಯೂ ನೀವು ಪರ್ತಕರ್ತರೆ..? ನನಗ್ಯಾಕೂ ನೀವು ಅಪ್ಪಟ ಕಾಂಗ್ರೆಸ್ಸಿಗರಿರಬೇಕೆನಿಸುತ್ತಿದೆ. ಅಪ್ಪಟ ಕಾಂಗ್ರೆಸ್‌ನವರ ರೀತಿಯಲ್ಲೆ ಮಾತನಾಡುತಿದ್ದಿರಲ್ಲಾ. ನಿಮ್ಮ ಬ್ಲಾಗ್‌‌ ಮೇಲೆ ತುಂಬಾ ಅಭಿಮಾನವಿದೆ ಹಾಗಾಗಿ ಈ ರೀತಿಯಲ್ಲಿ ಯಾರೋಬ್ಬರನ್ನೋ ಗುರಿಯಾಗಿಟ್ಟುಕೊಂಡು ಬರಹಗಳು ಬೇಡ.. ಅದು ಸುದ್ದಿಮಾತಿನಲ್ಲಿ ಬೇಡ ಬೆಕಾದರೆ ಬೆರೆ ಎಲ್ಲಾದರೂ ಬರೆದುಕೊಳ್ಳಿ....

j.k said...

ನಂಬದವರನ್ನು ಹಿಂಸಿಸಿ ಕೊಲ್ಲುವ, ಗುಲಾಮರಾಗಿ ತುಳಿದು ದುಡಿಸಿಕೊಳ್ಳುವ ವಿಧಾನವನ್ನು ಮಹಮದರು ಬೋಧಿಸಿದರು.
ಹೀಗೆ ಬರೆಯುವ ಮೂಲಕ ಭೈರಪ್ಪ ನೇರವಾಗಿ ಈ ರಾಜ್ಯದ ಶಾಂತಿ ಕದಡುವ ಯತ್ನ ನಡೆಸಿದ್ದಾನೆ. ಪೊಲೀಸ್ ಮಹಾನಿರ್ದೇಶಕರು ಕೂಡಲೇ ಭೈರಪ್ಪನನ್ನೂ ಆತನ ಬರೆಹವನ್ನು ಅಚ್ಚುಹಾಕಿದ ವಿಕದವರನ್ನೂ ಬಂಧಿಸಿ ಜೈಲಿಗೆ ಕಳುಹಿಸಬೇಕು.
ಕರ್ನಾಟಕದ ಪಾಲಿಗೆ ಸದ್ಯಕ್ಕೆ ಭೈರಪ್ಪನೇ ನಂ.೧ ಭಯೋತ್ಪಾದಕ. ಇಂಧ ಮತಾಂಧ ಭಯೋತ್ಪಾದಕರನ್ನು ಮಟ್ಟಹಾಕುವ ಕೆಲಸವನ್ನು ಮಾನವೀಯ ಕಳಕಳಿಯುಳ್ಳ ಎಲ್ಲರೂ ಮಾಡಬೇಕಾದ್ದು ಈಗಿನ ತುರ್ತು.

Anonymous said...

Mittrare...
Nanu 'Vijaya karnataka' patrike odide. Adaralli Birappnavaru kelavu anki-amshagalannu daakalisiddare. adare avugalige moolavilla. melaagi kapoola kalpita. avrenoo sullu heliddare. adre vijayakarnataka patrike sampadakara taleyalli mannu tumbidiye, prakatisiddaralla?
idu patrikodyamada durupayoga...

Rakesh S Joshi said...

ಕ್ರಿಸ್ತನ ಮೇಲೆ ವಿಶ್ವಾಸವಿಟ್ಟು ಕ್ರ್ಯೆಸ್ತ ಧರ್ಮ ಸ್ವೀಕರಿಸಿದ್ದರೆ ಖಂಡಿತ ಅದನ್ನ ಒಪ್ಪೊಣ. ಆದರೆ, ಹಿಂದು ದೇವತೆಗಳನ್ನ ಅವಹೇಳನೆ ಮಾಡಿ, "ಸತ್ಯ ದರ್ಶಿನಿ"ಯಲ್ಲಿ ಪ್ರಕಟಿಸಿ ಅದನ್ನು ಹಂಚುವ ಕೆಲ್ಸ ಮಾಡಿದ್ದು ಕ್ರಿಸ್ತ ಮಿಶನರಿಗಳೆ ಅಲ್ಲವೆ? ಹಿಂದು ಧರ್ಮದಲ್ಲಿ ಎಲ್ಲವು ಸರಿಯಾಗಿದ್ದರೆ ಏಕೆ ಜನ ಮತಂತರಗೊಳ್ಳುತ್ತಿದ್ದರು ಅಂತ ಏಶ್ಟೊ ಜನ ಕೇಳ್ತರೆ. ಹಾಗದ್ರೆ ಕ್ರಿಸ್ತ ಧರ್ಮದಲ್ಲಿ ಎಲ್ಲವು ಸರಿಯಾಗಿ ಇದೆಯೆ? ಎಲ್ಲ ಧರ್ಮಗಳಲ್ಲು ಅವರವರದೆ ಆದ ತೊಂದರೆಗಳಿವೆ. ದಲಿತರ ಬಗ್ಗೆ ಮಾತನಾಡುವ ಅವರು, ಕರಿಯರು-ಬಿಳಿಯರನ್ನು ಸ್ರುಷ್ಟಿಸಿದ್ದು ಯಾರು? ಅಷ್ಟು ಸೇವಾ ಮನೊಭಾವ ಇದ್ದರೆ ಮತಂತರ ಮಾಡದೆ ಸೇವೆ ಮಾಡ್ಲಿ. ಡಿಸಿಪ್ಲೆನ ಹೆಸರಿನಲ್ಲಿ, ಮಿಷನರಿ ಶಾಲೆಗಳಲ್ಲಿ ಹಿಂದು ಹುಡುಗಿಯರಿಗೆ ಬಳೆ ಹಾಕಲು, ಹೂವು ಮುಡಿಯಲು ಬಿಡೊದಿಲ್ಲ. ತೊಡೆಮೆಲೆ ಬಟ್ಟೆ ಹಾಕ್ಸಿ, ಅವರಿಗೆ ಚಿಕ್ಕ ವಯ್ಯಸ್ಸಿನಲ್ಲೆ ವೆಸ್ಟರ್ನ ಕಲ್ಚರ ಕಲ್ಸ್ತಾ ಇರೊರು ಯಾರು ? ವಿದ್ಯೆ ಹೆಸರಿನಲ್ಲಿ, ಮತಾಂತರಕ್ಕೆ ಇದು ಬುನಾದಿಯಲ್ಲವೆ?
ಮೊದಿ ಹಾಗು ಭೈರಪ್ಪ ಒಂದೆ ಅಂತ ಹೇಳ್ತಿರಲ್ಲ, ಗೊದ್ರಾ ನಡೆದಾಗ ೨೦೦ ಲೀ. ಪೆಟ್ರೊಲ ಖರೀದಿ ಆಗಿದ್ದು, ೨ ಬೋಗಿ ಹಿಂದು ಜನ ಸಜೀವ ದಹನವಾಗಿದ್ದು ನಿಮ್ಗೆ ತಿಳಿಯಲ್ವೆ?
ಕಾಂಗ್ರೆಸ್ಸಿಗರು ಮೊದಲಿನಿಂದಲು ಹಿಂದುಗಳನ್ನ ನಿಂದಿಸುತ್ತಾ ಬಂದಿದಾರೆ. ಬಿಜೆಪಿ ಹಿಂದುಗಳ ಪರ ನಿಂತಾಗ, ಅದನ್ನ ಕೊಮುವದ ಪಕ್ಶ ಅಂತ ಹೇಳಿದ್ರು. ಕೊಮುವಾದದ ಅರ್ಥ ಏನು? ನಾನು ಬಿಜೆಪಿ ಪರವಾಗಿ ಮಾತಾಡ್ತಿಲ್ಲ. ಹಿಂದುಪರವಗಿ ಮಾತಾಡ್ತಿದಿನಿ.
ಕ್ರಿಸ್ತ ಮಿಶನರಿಗಳು ಸೇವೆನೆಪದಲ್ಲಿ ಮಾಡ್ತ ಇರೋ ಮತಾಂತರಕ್ಕೆ ಹಿಂದುಗಳಾದ ನಾವು ನಿಲ್ಲಿಸಬೇಕು. ಅದಕ್ಕೆ ನಾವೆಲ್ಲ ಒಂದಗಿ ನಿಲ್ಲಬೇಕು. ಪತ್ರಕರ್ತರದ ನೀವು ಸರಿಯಾದ ದಾರಿ ತೊರಿಸ್ಬೆಕು.
ಅದಕ್ಕಾಗಿಯೆ ಇರಬೇಕು ಚೀನಾ ದೇಶದಲ್ಲಿ ಇವತ್ತಿಗು ಪೊಪಗೆ ಎನ್ಟ್ರ್ಯಿ ಕೊಡ್ತಾ ಇಲ್ಲಾ!!!
ಸೇವಾಮನೊಭಾವನೆಯನ್ನು ನಾವು ಆದರಿಸುತ್ತೇವೆ ಆದರೆ ಮತಾಂತರವನ್ನಲ್ಲ.

@sugandhi,
ಭೈರಪ್ಪರವರ ಸಾಹಿತ್ಯದ ಬಗ್ಗೆ ಮಾತನಡುವ ನೀವು ನಿಮ್ಮ ಸಾಹಿತ್ಯ ತಿಳ್ಕೊಳಿ. ಆದ್ರೆ ಅವರ ಪುಸ್ತಕಗಳನ್ನ ಓದಿ. ಆಮೇಲೆ ಮಾತಾಡಿ.

ರ್‍ಆಕೇಶ ಜೋಶಿ

Anonymous said...

ಇದು ’ಬೈ’‌ರಪ್ಪರ ಆವರಣದ ಕ್ರಿಶ್ಚಿಯನ್ ವರ್ಶನ್ ಇರಬೇಕು...


ಅಲ್ಲಿ ಮುಸ್ಲಿಂಮರನ್ನು ಬೈದಿದ್ದಾರೆ.. ಇಲ್ಲಿ ಕ್ರಿಶ್ಚಿಯನ್ನರನ್ನು..

ಒಟ್ಟಿನಲ್ಲಿ ಬೈರಪ್ಪರಿಗೆ ಬೈಯ್ಯೋದೇ ಕೆಲಸ; ಹೆಸರು ತಕ್ಕವಾಗಿ ಇದೆ.

Shree Vyas said...

Dr.ಭೈರಪ್ಪ ನವರ ಬಗ್ಗೆ ಇಷ್ಟು ಕೇವಲವಾಗಿ ಮಾತನಾಡಿರುವ ನೀವು ಒಬ್ಬ ಸಾಹಿತಿಯೇ ?!!
ನಿಮ್ಮ 'ಹೊಲಸು ಕಾರಿಕೊಂಡ' ಲೇಖನವನ್ನು ಓದಿದ ಮೇಲೆ ಎಲ್ಲಾ ಬುದ್ದಿಜೀವಿಗಳಿಗೂ ನಿಮ್ಮ ಹೊಲಸು ಸಾಹಿತ್ಯ ಅರ್ಥವಾಗದೆ ಇರದು !

sugandhi said...

ರಾಕೇಶ್ ಜೋಷಿ,
ನಿಮ್ಮ ಸಾಹಿತ್ಯ ತಿಳ್ಕೊಳಿ ಅಂದ್ರೆ ಏನು? ಇದೆಂಥ ವಾಕ್ಯ ಪ್ರಯೋಗ?
ಭೈರಪ್ಪನ ವಂಶವೃಕ್ಷ ಓದಿದ್ದೀರಾ? ವಿಧವೆಗೆ ಮತ್ತೊಂದು ಗಂಡಸನ್ನು ಪ್ರೀತಿಸುವ, ಮದುವೆಯಾಗುವ ಹಕ್ಕು-ಯೋಗ್ಯತೆಯಿಲ್ಲ ಎಂದು ಪ್ರತಿಪಾದಿಸುವ ಕೃತಿ ಅದು. ಆತನನ್ನು ಜೀವವಿರೋಧಿ ಎನ್ನದೆ ಬೇರೆ ಏನು ಹೇಳಲು ಸಾಧ್ಯ?
ಭೈರಪ್ಪನ ಕಾದಂಬರಿಗಳನ್ನು ಓದಿಯೇ ನಾನು ಮಾತನಾಡಿದ್ದೇನೆ. ಕೋಮುವಾದದ ಅರ್ಥ ಗೊತ್ತಿಲ್ಲದಿದ್ದರೆ ಯಾಕೆ ಇಷ್ಟೆಲ್ಲ ಕಷ್ಟಪಟ್ಟು ಬರೆಯಲು ಯತ್ನಿಸುತ್ತೀರಿ? ಅದರ ಬದಲು ನಿಮ್ಮನ್ನು ನೀವು ಬಜರಂಗಿ ಎಂದು ಘೋಷಿಸಿಕೊಳ್ಳೋದೇ ಕ್ಷೇಮವಲ್ಲವೆ?

Anonymous said...

ನನಗ್ಯಾಕೂ ನೀವು ಅಪ್ಪಟ ಕಾಂಗ್ರೆಸ್ಸಿಗರಿರಬೇಕೆನಿಸುತ್ತಿದೆ. ಅಪ್ಪಟ ಕಾಂಗ್ರೆಸ್‌ನವರ ರೀತಿಯಲ್ಲೆ ಬರೆಯುತ್ತಿರಲ್ಲ !!. ನನ್ನ ಪ್ರಕಾರ ನೀವು ಪತ್ರಿಕಾ ಧರ್ಮಕ್ಕೆ ತಕ್ಕಂತೆ ಬರೆಯುವುದಿಲ್ಲ ಅನ್ನಿಸುತ್ತೆ.
ದಯವಿಟ್ಟು ಸುದ್ದಿಮಾತಿಗೂ ಟೀಕೆಗೂ ವೈತ್ಯಾಸ ತಿಳಿದುಕೊಂಡು ಬರೆಯಿರಿ. ಬರೀ ಟೀಕೆ ಮಾಡುವುದನ್ನೇ ವೃತ್ತಿ ಮಾಡಿಕೊಳ್ಳಬೇಡಿ.
ನಿಮ್ಮ ಬರಹಗಳು ಏಕ ಮುಖವಾಗಿರುತ್ತವೆ ವಿ. ಕ. ದಲ್ಲಿನ ಪ್ರತಾಪ್ ಸಿಂಹರ ಲೇಖನ ದಂತೆ.
ಮುಂದಿನ ಬರಹಗಳಲ್ಲಿ ತಿದ್ದಿ ಕೊಳ್ಳುವಿರಿ ಎಂಬ ಆಶಾಭಾವನೆಯೊಂದಿಗೆ

Anonymous said...

ಹಿಂದೂ ಭಯೋತ್ಪಾದಕರ ಬಗ್ಗೆ ಯಾರಾದರೂ ಏನಾದರೂ ಬರೆದರೆ ಅವರನ್ನು ಬುದ್ಧಿಜೀವಿ ಅಂತಲೋ, ಕಾಂಗ್ರೆಸ್ ಪಾರ್ಟಿಯವನು ಅಂತಲೋ ಬ್ರಾಂಡ್ ಮಾಡುವುದು ಹಲವರಿಗೆ ಅಭ್ಯಾಸವಾಗಿದೆ.
ಸುದ್ದಿಮಾತುಗೆ ಹಲವರು ಬರೆದಿರುವ ಅಭಿಪ್ರಾಯ ನೋಡಿದರೆ ಅವೆಲ್ಲವೂ ವಿರೋಧಕ್ಕೆ ವಿರೋಧ ಎಂಬಂತಿವೆ. ತಲೆಯಲ್ಲಿ ಏನೂ ಇಲ್ಲದವರು ಹೀಗೆ ಯಾವುದೋ ಒಂದು ಗೂಬೆ ತೋರಿಸಿ ಪಲಾಯನ ಮಾಡುತ್ತಾರೆ.
ತಮ್ಮ ಧರ್ಮ ರಕ್ಷಣೆ ಮಾಡಿಕೊಳ್ಳಲು ಇನ್ನೊಂದು ಧರ್ಮದ ಮೇಲೆ ಏರಿ ಹೋಗುವುದನ್ನೇ ಶೌರ್ಯ, ಪರಾಕ್ರಮ ಎಂದು ಭಾವಿಸಿರುವ ಹೇಡಿಗಳು ಮನುಷ್ಯರಾಗಿ ಬದುಕಲು ಲಾಯಕ್ಕಲ್ಲದವರು.
ಇಂಥ ಮೃಗಗಳ ಅಧಿನಾಯಕನಂತೆ ಫೋಜು ಕೊಟ್ಟಿರುವ ಎಸ್.ಎಲ್.ಭೈರಪ್ಪ ತನ್ನನ್ನು ತಾನು ಮತಾಂಧ ಎಂದು ಘೋಷಿಸಿಕೊಳ್ಳುವುದಷ್ಟೇ ಬಾಕಿ ಉಳಿದಿದೆ.
ಸುಬ್ರಹ್ಮಣ್ಯ ಶಾಸ್ತ್ರಿ, ಮೈಸೂರು

Rakesh S Joshi said...

@sugandhi
ಒಪ್ಪೊಣ. ವಂಶವ್ರುಕ್ಶಿ ಅಂದಿನ ಹಿಂದು ಧರ್ಮದಲ್ಲಿದ್ದ ವಿಚಾರ. ಅದನ್ನು ಪ್ರತಿಪಾದಿಸಿದ ಅವರು ಜೀವವಿರೊಧಿ ಹೇಗೆ ಆದಾರು? ನಿಮ್ಮ ಮಾತಿನಂತೆ ಅವರು ಜೀವವಿರೊಧಿಯೆ ಆದರೆ, ಭೂಮಿ ಸೂರ್ಯನ ಸುತ್ತಾ ಸುತ್ತುತ್ತೆ ಅಂತ ಹೇಳಿದ ಗೆಲಿಲಿಯೊ, ಬ್ರುನೊಗಳ ಜೀವನವನ್ನೆ ನರಕ ಮಾಡಿದ ಕ್ರಿಸ್ಚಿಯನ ಯಾವ ಧರ್ಮ? ಹಾಗದರೆ ಪೋಪಗಳಾರು?
ನಾ ಬಜರಂಗಿಯಲ್ಲ, ಆದರೆ ಒಬ್ಬ ಹಿಂದು.
ಕೊಮುವಾದ ಒಂದು ಪಕ್ಶಕ್ಕೆ ಅಂಟಿಲ್ಲ. ಅದು ವ್ಯಕ್ತಿಗಳಿಗೆ ಅಂಟಿರೊದು. ಹೆಚ್ಚು ಕಮ್ಮಿ ನಮ್ಮ ಎಲ್ಲ ರಾಜಕೀಯ ನಾಯಕರು ಕೊಮವಾದಿಗಳು. ಸಮಯೊಚಿತ ರಾಜಕಿಯ ಮಾಡೊವವರು. ಎಸ್. ಎಮ್. ಕ್ರಿಷ್ಣ ಮುಖ್ಯಮಂತ್ರಿ ಆದಾಗ ಚರ್ಚ್ಗೆ ಬೆಂಕಿ ಹಚ್ಚಲಯಿತು, ಆಗ ಇಲ್ಲದ್ದು ಇಂದು ಎಕೆ ಇಷ್ಟೊಂದು ದೊಡ್ಡ ಸಮಸ್ಯೆ ಅಗಿದೆ??

@ಸುಬ್ರಹ್ಮಣ್ಯ ಶಾಸ್ತ್ರಿ, ಮೈಸೂರು
"ತಮ್ಮ ಧರ್ಮ ರಕ್ಷಣೆ ಮಾಡಿಕೊಳ್ಳಲು ಇನ್ನೊಂದು ಧರ್ಮದ ಮೇಲೆ ಏರಿ ಹೋಗುವುದನ್ನೇ ಶೌರ್ಯ, ಪರಾಕ್ರಮ ಎಂದು ಭಾವಿಸಿರುವ ಹೇಡಿಗಳು ಮನುಷ್ಯರಾಗಿ ಬದುಕಲು ಲಾಯಕ್ಕಲ್ಲದವರು "

ಸ್ವಾಮಿ, ಹೀಗೆ ಮಾಡತಿರೊರು ಹಿಂದುಗಳಲ್ಲಾ. ಕ್ರಿಸ್ಚಿಯನ್ಗಳು.

Anonymous said...

ಪ್ರಿಯ ಸುಗಂಧಿ ನೀವಂದುಕೊಂಡಂತೆ ಜ್ಞಾನಪೀಠವೆಂಬುದು ಭಾರತ ಸರಕಾರ ಕೊಡುವ ಪ್ರಶಸ್ತಿ ಅಲ್ಲ. ಅದನ್ನು ಕೊಡುವುದು ಟೈಂಸ್ ಆಫ್ ಇಂಡಿಯಾ ಗುಂಪು ಸ್ಥಾಪಿಸಿರುವ ಜ್ಞಾನಪೀಠ ಟ್ರಸ್ಟ್. ಭೈರಪ್ಪನವರ ಲೇಖನ ಪ್ರಕಟಿಸಿರುವ ವಿಜಯ ಕರ್ನಾಟಕವೂ ಇದೇ ಗುಂಪಿಗೆ ಸೇರಿದ್ದು.

ಮತಾಂಧ ಬರೆಹಗಳಿಗೆ, ಮಾತುಗಳಿಗೆ ಶಿಕ್ಷೆ ಅನುಭವಿಸಬೇಕಾದರೆ ಅವರು ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿರಲೇ ಬೇಕು. ಇದು ಬಿಜೆಪಿ ಸರಕಾರವಿದ್ದಾಗಿನ ಕಥೆಯಷ್ಟೇ ಅಲ್ಲ. ಕಾಂಗ್ರೆಸ್ ನ ಹಣೆಬರೆಹವೂ ಅಷ್ಟೇ. ಬಾಬಾಬುಡನ್ ಗಿರಿಯಲ್ಲಿ ನಾಲಿಗೆ ಹರಿಬಿಟ್ಟ ಯಾರ ಮೇಲೂ ಈ ತನಕ ಕೇಸು ದಾಖಲಾಗಿಲ್ಲ. ಮಂಗಳೂರಿನ ಕತೆಯೂ ಇದುವೇ. ಕಳೆದ ಹತ್ತಾರು ವರ್ಷಗಳಿಂದ ಹಲವಾರು ಸಂಘಪರಿವಾರದ ನಾಯಕರು ಹೀಗೆ ಮಾತನಾಡುತ್ತಲೇ ಇದ್ದಾರೆ.

ಭೈರಪ್ಪನವರು ಅಧ್ಯಯನಶೀಲರಂತೆ. ಆವರಣ ಬರೆಯುವ ಮೊದಲು ಮುಸ್ಲಿಮರ ಮನೆಯಲ್ಲಿ ಕೆಲವು ಕಾಲ ಕಳೆದಿದ್ದರಂತೆ. ಮತಾಂತರದ ಬಗ್ಗೆ ಅವರು ಬರೆಯುವಾಗ ಮತಾಂತರಗೊಂಡವರ ಜತೆ ಕನಿಷ್ಠ ಮಾತನಾಡಬಹುದಿತ್ತು. ಅದನ್ನೂ ಅವರು ಮಾಡಿದಂತೆ ಕಾಣಿಸುವುದಿಲ್ಲ.

ಕ್ರೈಸ್ತರು ಮತಾಂತರಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದರೆ ಅದನ್ನು ತಡೆಯುವುದಕ್ಕೆ ಒಳ್ಳೆಯ ಉಪಾಯವೆಂದರೆ ಭೈರಪ್ಪನವರು ಇದೆ ಎಂದು ಹೇಳುವ ಹಿಂದೂ ಧರ್ಮಕ್ಕೆ ಜನರನ್ನು ಮತಾಂತರಿಸಲು ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುವುದು. ಹಿಂದೂ ಧರ್ಮಕ್ಕೆ ಯಾರನ್ನೂ ಮತಾಂತರಿಸಲು ಸಾಧ್ಯವಿಲ್ಲ. ವಿಶಾಲ ತಳಹದಿಯ ಈ ಧರ್ಮಕ್ಕೆ ಯಾರಾದರೂ ಬರುತ್ತೇನೆಂದರೆ ಅವರನ್ನು ಯಾವ ಜಾತಿಗೆ ಸೇರಿಸಬೇಕು ಎಂಬುದೊಂದು ಸಮಸ್ಯೆಯಲ್ಲವೇ?

Anonymous said...

ಕ್ರೀಶ್ಚಿಯನ್‌‌ ಮಿಷನರಿಗಳು, ಕ್ರೀಶ್ಚಿಯನ್ಸ್‌‌ಗಳ ಬಗ್ಗೆ ಕೇವಲ ಕಾಂಗ್ರೆಸ್ಸಿಗರಿಗೆ ಮಾತ್ರ ಖಾಳಜಿ ಇದೇ,ಅವರೆಲ್ಲಾರನ್ನಾ ಕಾಂಗ್ರೆಸ್ಸಿಗರು ದತ್ತು ತೆಗೆದುಕೊಂಡಿದ್ದಾರೆ ಅಂದುಕೊಂಡಿದ್ದೆ ಪರವಾಗಿಲ್ಲಾ ಈಗ ಸುದ್ದಿಮಾತು ಸಹ ಕಾಂಗ್ರೆಸ್ಸಿನವರೊಂದಿಗೆ ಕೈಜೋಡಿಸುತ್ತಿದೆ. ಆದರೆ ಮಾಜಿ ಮಾದ್ಯಮ ಪ್ರತಿನಿಧಿಗಳು ಅಂತ ಹೇಳಿಕೊಂಡಿರುವ ನೀವು ಈ ರೀತಿಯಲ್ಲಿ ಬರೆಯಬರದು ಅನ್ನಿಸುತ್ತಿದೆ.

chukki said...

helo....
e byrappa sakalavallabha anno sangati ellarigu gottu.
avaru arullo marullo kaladalli heege chinthisodu, gechodu sahaja thane? huttu guna suttaru hogallanthe.sogaladi bairappa v.k.nalli barediruvudakkinta sogasagi bareyuva samartya kaledukondidare papa bairappa!

Anonymous said...

ಎತ್ತ ಸಾಗುತ್ತಿದೆ ಚರ್ಚೆ ಈ ಚರ್ಚೆ? ಭೈರಪ್ಪನವರನ್ನು ಒಪ್ಪದಿದ್ದರೆ ಕತ್ತೆ ಬಾಲ. ಆ ವ್ಯಕ್ತಿಯ ಅಧ್ಯಯನ, ಓದು, ಆಸಕ್ತಿಯನ್ನಾದರು ನೋಡ್ರಿ.

Anonymous said...

ಭೈರಪ್ಪನವರ ಬಗ್ಗೆ ತಾವು ಬಳಸಿರುವ ಭಾಷೆ ನೋಡಿದರೆ ನಿಮ್ಮ ಲೆವೆಲ್ ಏನು ಅಂತ ಅರ್ಥ ಆಗುತ್ತೆ. hats off to u guys... ಪೋರ್ಚುಗಲ್ ಆಡಳಿತದಲ್ಲಿ ನಡೆದ ಅವಾಂತರಗಳ ಬಗ್ಗೆ ಭೈರಪ್ಪನವರು ಬರೆದಿರುವುದರ ಬಗ್ಗೆ ನೊ ಕಾಮೆಂಟ್ಸ್, ಯಾಕೆ?

sugandhi said...

ರಾಕೇಶ್,
ನಿಮ್ಮ ವಾದಸರಣಿಯೇ ಅರ್ಥವಾಗದ್ದು. ಹಿಂದೂ ಧರ್ಮದಲ್ಲಿ ವೇದ ಓದಿದ ಶೂದ್ರನ ಗಂಟಲಿಗೆ ಕಾದ ಸೀಸ ಸುರಿಯಬೇಕು ಅಂತಿದೆ, ವೇದ ಓದಿದರೆ ಗರ್ಭಿಣಿಗೆ ಗರ್ಭಪಾತ ಆಗುತ್ತೆ ಅಂತಿದೆ. ಅದು ಧರ್ಮದಲ್ಲಿದೆ ಅನ್ನುವ ಕಾರಣಕ್ಕೆ ಅದನ್ನು ಜೀವಪರ ಎನ್ನಲು ಸಾಧ್ಯವೇ.
ಜೀವವಿರೋಧಿ ಕ್ರಿಯೆಗಳು ಯಾವ ಧರ್ಮದಲ್ಲಿದ್ದರೂ ಅದು ಜೀವವಿರೋಧಿಯೇ. ಅದನ್ನು ಭೈರಪ್ಪ ಬರೆದ ಎಂದ ಮಾತ್ರಕ್ಕೆ ಜೀವಪರ ಎನ್ನುವವರಿಗೆ ತಲೆಕೆಟ್ಟಿರಬೇಕು ಅಷ್ಟೆ.
ಚರ್ಚ್‌ಗಳ ಮೇಲೆ ಕೃಷ್ಣ ಸರ್ಕಾರ ಇದ್ದಾಗ ದಾಳಿ ನಡೆಯಿತು. ಆಗ ಎಲ್ಲರೂ ಸುಮ್ಮನಿದ್ದರು ಎನ್ನುತ್ತೀರಲ್ಲ,
ಕಾಂಗ್ರೆಸ್‌ನವರು ಮಾಡಿದರು, ಬಿಜೆಪಿಯವರೂ ಮಾಡಲಿ ಎನ್ನುವುದು ನಿಮ್ಮ ಅಭಿಪ್ರಾಯವೇ?
ಇನ್ನೊಂದು ವಿಷಯ ನಿಮಗೆ ನೆನಪಿರಲಿ,
ಕಾಂಗ್ರೆಸ್ ಪಕ್ಷವೂ ಬಿಜೆಪಿಯ ಇನ್ನೊಂದು ಮುಖವೇ ಆಗಿದೆ. ಬಿಜೆಪಿಯದು ಉಗ್ರ ಹಿಂದುತ್ವವಾದವಾದರೆ, ಕಾಂಗ್ರೆಸ್‌ನದ್ದು ಸಾಫ್ಟ್ ಹಿಂದುತ್ವವಾದ. ವ್ಯತ್ಯಾಸಗಳು ಹೆಚ್ಚೇನಿಲ್ಲ.

Anonymous said...

ಓದು, ಅಧ್ಯಯನಗಳು ಭೈರಪ್ಪನವರನ್ನು ಇನ್ನಷ್ಟು ಜ್ಞಾನಿಯನ್ನಾಗಿಯೂ, ಮನುಷ್ಯತ್ವವುಳ್ಳವನನ್ನಾಗಿಯೂ ಮಾಡಬೇಕಿತ್ತು. ಆದರೆ ಆಗಿದ್ದೇನು?
ಓದು, ಆಧ್ಯಯನಗಳಿಂದಷ್ಟೇ ಮನುಷ್ಯರು ಉತ್ತಮರೆನಿಸಿಕೊಳ್ಳಲು ಸಾಧ್ಯವಿಲ್ಲ, ಹೃದಯಶುದ್ಧಿ ಬೇಕು. ಅದಿಲ್ಲದೆ ಎಷ್ಟು ಡಿಗ್ರಿ ಪಡೆದರೇನು? ಅಷ್ಕಕ್ಕೂ ಭೈರಪ್ಪನನ್ನು ಓದಿ ನಿಜಕ್ಕೂ ಯಾರಿಗೂ ಏನೂ ಆಗಬೇಕಾಗಿಲ್ಲ. ವಿ.ಕದಂಥ ಜನಪ್ರಿಯ ಪತ್ರಿಕೆಯಲ್ಲಿ ಈತ ಹಸಿಹಸಿ ಸುಳ್ಳುಗಳನ್ನು ಬರೆದಿರುವುದರಿಂದ ಆತನಿಗೆ ನೀರಿಳಿಸಬೇಕಾಗಿದೆ ಅಷ್ಟೆ.
-ಸುಬ್ರಹ್ಮಣ್ಯ ಶಾಸ್ತ್ರಿ

Anonymous said...

ಟೈಮ್ಸ್ ಆಫ್ ಇಂಡಿಯಾದವರು ಮಾರ್‍ವಾಡಿಗಳು ಹಾಗು ಪಕ್ಕಾ ವ್ಯವಹಾರಸ್ಥರು. ಒಂದೊಮ್ಮೆ ಎನ್‌ಡಿಎ ಸರ್ಕಾರ ಬಂದರೆ ಆ ಸರ್ಕಾರ ಭೈರಪ್ಪನಿಗೊಂದು ಜ್ಞಾನಪೀಠ ಕೊಡಿ ಎಂದರೆ ಟಿಓಐನವರು ತಮ್ಮ ಲಾಭಗಳಿಗಾಗಿ ಪ್ರಶಸ್ತಿ ಕೊಡ್ತಾರೆ ಅಲ್ಲವೆ?
-ಸಂದೀಪ್

Anonymous said...

Dear rakesh,
neevu 'nanu bjp para matadtilla. hindu para matadtidini' antiri. nimmallondu manavi. MANUSHYARA PARA matadi.
Alpasankyatara hita kayabekadudu bahu sankyatara dharma. adannu manushytvada darma endu helabahudu. adannu palisi.
Dikkaravirali daye ellada darmakke.
-Roomi

Anonymous said...

please do not use singular to anybody. after reading the blog article, it came spontaniously that, noboy writes singular. next time onwards use the words properly. If u use singular, it is ot good language.

Anonymous said...

"ಎತ್ತ ಸಾಗುತ್ತಿದೆ ಚರ್ಚೆ ಈ ಚರ್ಚೆ? ಭೈರಪ್ಪನವರನ್ನು ಒಪ್ಪದಿದ್ದರೆ ಕತ್ತೆ ಬಾಲ. ಆ ವ್ಯಕ್ತಿಯ ಅಧ್ಯಯನ, ಓದು, ಆಸಕ್ತಿಯನ್ನಾದರು ನೋಡ್ರಿ."
1.ಭೈರಪ್ಪನವರು ಮಹಾ ಅಧ್ಯಯನ ಶೀಲರು ಎಂಬುದನ್ನು ಒಪ್ಪಿಕೊಂಡರೂ ವಿಜಯ ಕರ್ನಾಟಕದ ಅವರ ಲೇಖನದಲ್ಲಿರುವ ಫ್ಯಾಕ್ಚುಯಲ್ ಎರರ್ಸ್ಗೆ ಏನನ್ನೋಣ.
2.ಭಾರತದಲ್ಲಿರುವ ಕ್ರೈಸ್ತರ ಜನಸಂಖ್ಯೆ ಭೈರಪ್ಪನವರ ಅಂಕಿ-ಅಂಶಗಳ ಪ್ರಕಾರ 23.4ಲಕ್ಷಗಳಂತೆ. ಇದಕ್ಕೆ 2001ರ ಜನಗಣತಿಯನ್ನೂ ಅವರು ಉಲ್ಲೇಖಿಸುತ್ತಿದ್ದಾರೆ.
3.ಈ ತಪ್ಪನ್ನು ಮರೆತು ಬಿಡೋಣವೆಂದರೆ ಇದು ಭಾರತದ ಜನಸಂಖ್ಯೆಯ 2.5ರಷ್ಟೂ ಅಲ್ಲ ಎನ್ನುತ್ತಾರೆ. 23.4 ಲಕ್ಷಗಳೆಂದರೆ ಭಾರತದ ಜನಸಂಖ್ಯೆಯ ಶೇಕಡಾ 0.234 ಆಗುತ್ತದೆ. ಭಾರತದಲ್ಲಿರುವ ಕ್ರೈಸ್ತರ ಜನಸಂಖ್ಯೆ ಕೋಟಿಗಳಲ್ಲಿದೆ ಎಂಬ ಕನಿಷ್ಠ ಜ್ಞಾನವೂ ಇಲ್ಲದ ಲೇಖಕ ಅಧ್ಯಯನ ಶೀಲತೆಯನ್ನು ಏನನ್ನೋಣ.
4.ಅವರು ಉಲ್ಲೇಖಿಸಿರುವ ನಾಲ್ಕೂ ಮಂದಿ ಲೇಖಕರನ್ನು ಚೆಡ್ಡಿ ಚತುರರನ್ನು ಹೊರತು ಪಡಿಸಿದರೆ ಇನ್ಯಾರೂ ಇತಿಹಾಸಕಾರರೆಂದು ಒಪ್ಪುವುದಿಲ್ಲ. ಚಡ್ಡಿ ಧರಿಸಿದವರೇ ಆದರೂ ಇತಿಹಾಸಕಾರರೆಂದು ಮನ್ನಣೆ ಪಡೆದವರನ್ನಾದರೂ ಉಲ್ಲೇಖಿಸಬಾರದಿತ್ತೇ?
5.ಜನಸಂಖ್ಯಾ ಸಿದ್ಧಾಂತಗಳ ಕುರಿತು ಭೈರಪ್ಪನವರಿಗೆ ಎಳ್ಳಷ್ಟೂ ಅರಿವಿಲ್ಲ. ಜನಸಂಖ್ಯೆಯ ಹೆಚ್ಚಳ ಮತ್ತು ಸಮತೋಲನಕ್ಕೆ ಮೂರು ಹಂತಗಳಿವೆ. ಮೊದಲ ಹಂತದಲ್ಲಿ ಜನನ ಮರಣ ಪ್ರಮಾಣಗಳೆರಡೂ ಹೆಚ್ಚಾಗಿರುತ್ತವೆ. ಎರಡನೇ ಹಂತದಲ್ಲಿ ಮರಣ ಪ್ರಮಾಣ ಇಳಿಮುಖಗೊಳ್ಳುತ್ತದೆ. ಮೂರನೇ ಹಂತದಲ್ಲಿ ಎರಡೂ ಇಳಿಮುಖಗೊಂಡು ಸಮತೋಲನ ಸಾಧ್ಯವಾಗುತ್ತದೆ. ಈ ಸಿದ್ಧಾಂತದಂತೆ ಅರ್ಥ ಮಾಡಿಕೊಂಡರೆ ಭಾರತದಲ್ಲಿರುವ ಎಲ್ಲರ ಜನಸಂಖ್ಯೆಯೂ ಯಥಾ ಪ್ರಮಾಣದಲ್ಲೇ ಹೆಚ್ಚಿದೆ.
6.ಶೇಕಡಾ 3ರಷ್ಟಿರುವ ಬ್ರಾಹ್ಮಣರು ಇಡೀ ಅಧಿಕಾರಶಾಹಿಯನ್ನು ವ್ಯಾಪಿಸಿ ಕುಳಿತಿರುವುದನ್ನೇಕೆ ಭೈರಪ್ಪನವರು ಮರೆತುಬಿಡುತ್ತಾರೆ.
ಪಟ್ಟಿ ಮಾಡುತ್ತಾ ಹೋದರೆ ಇದು ಬೆಳೆಯುತ್ತದೆ. ಇವು ಕೆಲವು ಮೂಲಭೂತ ಸಂಗತಿಗಳು ಮಾತ್ರ.
-ರಮೇಶ್ ಸಮಗಾರ.

Anonymous said...

ನಿಮ್ಮ ಬ್ಲಾಗ್ ನ ಉದ್ದೇಶ ಈಗ ಅರ್ಥವಾಯಿತು! ಕಮ್ಯೂನಿಸ್ಟ್ ಜನರೂ ಒಂದು ಕಡೆ ಸೇರಿಕೊಂಡಿದ್ದೀರಿ. ನಿಮ್ಮಂಥಾ ಪಾಪಿಗಳಿಗೆ ಒಳ್ಳೇದಾಗಲಿ.

-ಯೇಸುಕ್ರಿಸ್ತ

Anonymous said...

ಭೈರಪ್ಪನವರು ಮತಾಂತರದ ಬಗ್ಗೆ ಒಂದು ದೊಡ್ಡ ಲೇಖನ ಬರೆದಿದ್ದಾರೆ. ಕರ್ನಾಟಕದ ಅತಿ ಜನಪ್ರಿಯ ಪತ್ರಿಕೆಯೊಂದು ಅದಕ್ಕೆ ಒಂದೂವರೆ ಪುಟದಷ್ಟು ಸ್ಥಳವನ್ನು ಕೊಟ್ಟು ಪ್ರಕಟಿಸಿದೆ. ಮುಖಪುಟದಲ್ಲಿಯೇ ಅರ್ಧಪುಟದಷ್ಟು ಜಾಗವೂ ದೊರೆತಿದೆ. ಇವೆಲ್ಲವೂ ಸರಿಯೇ. ಹಿಂದೂ ಧರ್ಮದ ರಕ್ಷಣೆಗೇ ಎಂದುಕೊಳ್ಳೋಣ.

ನನ್ನ ಸಮಸ್ಯೆ ಸ್ವಲ್ಪ ಬೇರೆಯೇ ಇದೆ. ಕಂಭಾಲಪಲ್ಲಿಯಿಂದ ಆರಂಭಿಸಿ ಖೈರ್ಲಾಂಜಿಯ ತನಕ ನಡೆದ ಅನೇಕ ದಲಿತರ ನರಮೇಧಗಳಾದಾಗ ಈ ಹಿಂದೂ ಧರ್ಮ ರಕ್ಷಕ ಭೈರಪ್ಪನವರು ತಮ್ಮ ಲೇಖನಿಗೆ ಏನನ್ನು ತೊಡಿಸಿಕೊಂಡಿದ್ದರು?

ಆ ಕಾಲದಲ್ಲಿ ಅವರ ಲೇಖನಿಗೆ ತೊಡಿಸಲಾಗಿದ್ದ ಕಾಂಡಂ ನೋಡಿದರೆ ಅವರ ಉದ್ದೇಶವೂ ಅರ್ಥವಾಗುವಂಥದ್ದೇ!

ಮೂಲತಃ ಭೈರಪ್ಪನವರು ಮನುಷ್ಯ ವಿರೋಧಿಗುಣವುಳ್ಳ ಲೇಖಕರು. ಇಷ್ಟರ ಮೇಲೆ ಅವರ ಅಧ್ಯಯನ ಶೀಲ ಕಾದಂಬರಿಗಳ ಬಗ್ಗೆ ಲಂಕೇಶರ ಒಂದು ಸಾಲಿನ ವಿಮರ್ಶೆಯೂ ಇದೆ. "ಭೈರಪ್ಪನವರ ಹೊಸ ಕಾದಂಬರಿಯೊಂದು ...ದಂಬರಿ"

Anonymous said...

ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿಯೆ??? ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ. ಅದೇನಿದ್ದರೂ ಬ್ರಾಹ್ಮಣರನ್ನ ಹೀಯಾಳಿಸಿ ಬರೆದ ಅನಂತಮೂರ್ತಿಗೆ, ಅಥವಾ ಮುಸ್ಲಿಮರನ್ನ ಓಲೈಸಿ ಬರೆದ ಗಿರೀಶ್ ಕಾನ್ರಾಡರಿಗೆ ಮಾತ್ರ.

ನೀವೂ ಇದೇ ರೀತಿ ಹಿಂದೂಗಳನ್ನ ಅವಹೇಳನ ಮಾಡಿ ಬರೀತಿರಿ. ನಿಮಗೂ ಒಂದಲ್ಲಾ ಒಂದು ದಿನ ಜ್ಞಾನಪೀಠವೋ ಅಥವಾ ವ್ಯಾಟಿಕನ್ ನಿಂದ “ಸಂತ” ಪ್ರಶಸ್ತಿಯೋ ಸಿಗಬಹುದು.

Anonymous said...

ಅಯ್ಯಾ ಬ್ಲಾಗ್ ಮಹಾಶಯಾ... ಹಿರಿಯರಿಗೆ ಮರ್ಯಾದೆ ಕೊಡೋದನ್ನ ನಿನ್ನ ಹೆತ್ತೋರು ಮನೆಯಲ್ಲಿ ಹೇಳಿ ಕೊಟ್ಟಿಲ್ಲಾಂತ ಕಾಣುತ್ತೆ. ಸಹನೆ ಕಳೆದುಕೊಂಡ ಹುಚ್ಚು ನಾಯಿಯಂತೆ ಬರೆದಿದ್ದೀಯ ನೀನು. ನೀನು ಪತ್ರಿಕೋದ್ಯಮಕ್ಕೇ ಒಂದು ದೊಡ್ಡ ಕಳಂಕ!

-ಗುರು

ಬಾನಾಡಿ said...

ಸುದ್ದಿಮಾತು ಬ್ಲಾಗ್ ಲೋಕದಲ್ಲಿ ಮಾಧ್ಯಮದ ಬಗ್ಗೆ ನಿಷ್ಪಕ್ಷವಾದ ವಿವರ ನೀಡುತ್ತಿರಲಿ ಮತ್ತು ಅದನ್ನು ಅಷ್ಟೇ ನಿಷ್ಪಕ್ಷಪಾತದಿಂದ ಸ್ವೀಕರಿಸುವ ಸೌಜನ್ಯವೂ ನಮ್ಮಲ್ಲಿ ಇರಲಿ. ಬೈರಪ್ಪನವರ ವಿ.ಕ. ವಿಷಯವನ್ನು ಸುದ್ದಿಮಾತು ನಲ್ಲಿ ಮಂಡಿಸಿದ ರೀತಿಯಲ್ಲಿ ಸ್ವಲ್ಪ ಅತಿಯೆನಿಸುವಂತೆ ಕಂಡು ಬಂದರೂ ಅದಕ್ಕೆ ಬಂದ ಪ್ರತಿಕ್ರಿಯೆಗಳಂತೂ ಕೀಳುಮಟ್ಟಕ್ಕಿಳಿದಿದೆ. ಮಾಧ್ಯಮದ ವಿಷಯಗಳನ್ನು ಗಂಭೀರತೆಯಿಂದ ಮತ್ತು ಅಷ್ಟೇ ಮಾನವೀಯ ಗೌರವಗಳಿಂದ ಚರ್ಚಿಸೋಣ. ಕೆಟ್ಟದನ್ನು ಹೀಗಳೆಯೋಣ. ಕೆಸರಿಗೆ ಕಲ್ಲೆಸುವುದು ಬೇಡವೆಂದಲ್ಲ. ಕೆಸರು ನಮ್ಮ ಮೈಮೇಲೂ ಬಿದ್ದಾಗ ನಾವೂ ಕೆಸರಾಗಬಾರದು. ಸುದ್ದಿಮಾತು ಬ್ಲಾಗಿಗರಿಗೆ ಅಭಿನಂದನೆಗಳು. ಪ್ರಯತ್ನ ಮುಂದುವರಿಯಲಿ.
ಒಲವಿನಿಂದ
ಬಾನಾಡಿ

Supreeth.K.S said...

ಮಾನ್ಯರೇ,
ವಿಜಯ ಕರ್ನಾಟಕ ಒಂದು ಚರ್ಚೆಯನ್ನು ಹುಟ್ಟು ಹಾಕಿದೆ ಅದಕ್ಕೆ ತಾನು ವೇದಿಕೆ ಮಾತ್ರ ವಕ್ತಾರನಲ್ಲ ಎಂಬುದನ್ನು ಸ್ಪಷ್ಟ ಪಡಿಸಿದೆ. ಅದು ಚರ್ಚೆಯನ್ನು ಶುರು ಮಾಡಿರುವ ದಿಕ್ಕಿನಿಂದಲೇ ಅದರ ನಿಲುವು ಏನು ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಇದಕ್ಕೆ ಬೇರೆ ಪತ್ರಿಕೆಗಳು ಹೊರತಲ್ಲ. ಪ್ರಜಾವಾಣಿಯು ಚರ್ಚೆಯೊಂದನ್ನು, ಸಂವಾದವೊಂದನ್ನು ಯಾವ ದಿಕ್ಕಿನಿಂದ ಶುರು ಮಾಡುತ್ತದೆ ಎಂಬುದನ್ನು ಸಹ ಸಾಮಾನ್ಯ ಓದುಗ ಊಹಿಸಬಹುದು. ವಿಶ್ವೇಶ್ವರ ಭಟ್ಟರನ್ನು ನಿಂದಿಸುವುದಕ್ಕೆ ಯಾವ ಕಾರಣವೂ ಸಿಕ್ಕುವುದಿಲ್ಲ.
ಇನ್ನು ಭೈರಪ್ಪನವರ ಬಗ್ಗೆ ಬರೆದಿರುವುದು... ಇದು ನಿಮ್ಮ ಬ್ಲಾಗ್ ಆದ್ದರಿಂದ ನೀವು ಯಾವ ವಚನವನ್ನಾದರೂ, ಯಾವ ಲಿಂಗವನ್ನಾದರೂ ಆರೋಪಿಸಿ ಯಾರ ಬಗ್ಗೆ ಬೇಕಾದರೂ ಬರೆಬಹುದು. ಆದರೆ ನಿಮ್ಮ ಭಾಷಾ ಬಳಕೆ ಹಾಗೂ ನಿರೂಪಣೆಯಿಂದಾಗುವ ಪರಿಣಾಮವನ್ನು ಸ್ವಲ್ಪ ಕಾಳಜಿಯಿಂದ ಗಮನಿಸಿದರೆ ಒಳಿತು ಅನ್ನಿಸುತ್ತದೆ. ಚರ್ಚೆಗಳಲ್ಲಿ ನಾವು ಪೂರ್ವಾಗ್ರಹಗಳಿಲ್ಲದೆ ಭಾಗವಹಿಸುತ್ತೇವೆ ಎಂಬುದು ಸುಳ್ಳು. ಎಡಪಂಥೀಯ ಹಾಗೂ ಬಲಪಂಥೀಯ ನಿಲುವುಗಳು ತಮ್ಮಷ್ಟಕ್ಕೇ ತಾವು ಕೆಡುಕಿನವು ಅಲ್ಲ. ಎರಡೂ ನಿಲುವುಗಳು ಒಂದು ಹಂತದಲ್ಲಿ ಜೀವವಿರೋಧಿಯಾಗುತ್ತವೆ ಆ ಎಚ್ಚರಿಕೆಯನ್ನಿಟ್ಟುಕೊಂಡರೆ ಒಳ್ಳೆಯದು ಎಂಬುದು ನನ್ನ ನಮ್ರವಾದ ಭಾವನೆ.
ಧರ್ಮದ ಸರಕು ಇಷ್ಟೆಲ್ಲಾ ಉಪದ್ವಾಪ್ಯಗಳನ್ನು ಸೃಷ್ಟಿಸುವುದು ಕಂಡು ನನಗೆ ಆಶ್ಚರ್ಯವಾಗುತ್ತದೆ. ಅಸಲಿಗೆ ನಮ್ಮ ಮಾಧ್ಯಮಗಳು ಯಾವುದಕ್ಕೆ ಪ್ರಾಮುಖ್ಯತೆ ಕೊಡುತ್ತಿವೆ ಎಂಬುದೇ ತಿಳಿಯುವುದಿಲ್ಲ. ನಾನು ಬಲ್ಲಂತೆ ನನ್ನ ಓರಗೆಯ ವಿದ್ಯಾರ್ಥಿಗಳು ಹಾಗೂ ನನ್ನ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಧರ್ಮ, ಜಾತಿ ಮುಂತಾದ ಸಂಗತಿಗಳು ಎಂದಿಗೂ ಪ್ರಮುಖವಲ್ಲ. ತಮ್ಮ ದಿನನಿತ್ಯದ ಜಂಜಡಗಳಲ್ಲಿ ಮುಳುಗಿ ಹೋಗಿರುವ, ಒಂದು ತುತ್ತಿ ಅನ್ನಕ್ಕಾಗಿ ಬೆವರು ಸುರಿಸಬೇಕಾದ ಜನರಿಗೆ ಎಂದಿಗೂ ಧರ್ಮ ಎಂಬುದು ಮೊದಲ ಪ್ರಯಾರಿಟಿ ಆಗುವುದೇ ಇಲ್ಲ. ಧರ್ಮವನ್ನೇ ಮೊದಲ ಪ್ರಯಾರಿಟಿಯಾಗಿಟ್ಟುಕೊಂಡ ಬೆರಳೆಣಿಕೆಯ ಮಂದಿಯಿಂದ ಉಳಿದವರ ಧಾರ್ಮಿಕ ಭಾವನೆ ಕೆರಳುತ್ತಿದೆಯೇ? ನಮ್ಮ ಮಾಧ್ಯಮಗಳು ಈ ಬಗ್ಗೆ ಚಿಂತಿಸಬೇಕು ಎನ್ನುವುದು ನನ್ನ ಭಾವನೆ. ನಾವು ಇಂತಹ ಸಂಗತಿಗಳನ್ನು ಇಗ್ನೋರ್ ಮಾಡುವುದನ್ನು ರೂಢಿಸಿಕೊಳ್ಳಬೇಕು ಅನ್ನಿಸುತ್ತದೆ.
ಮತಾಂತರದ ವಿಷಯವನ್ನು ವಸ್ತುನಿಷ್ಠವಾಗಿ ಅಧ್ಯಯನ ಮಾಡಿ ಅದು ನಮ್ಮ ಬಹುಸಂಸ್ಕೃತಿಯ ನಾಡನ್ನು ಏಕ ಸಂಸ್ಕೃತಿಯೆಡೆಗೆ ಕೊಂಡೊಯ್ಯುತ್ತಿದೆಯೋ ಎಂಬುದನ್ನು ಪತ್ತೆ ಹಚ್ಚಬೇಕು. ಇದಕ್ಕಿಂತ ಮುಖ್ಯವಾಗಿ ನಮ್ಮ ನಾಡಿನ ಬಹುಸಂಸ್ಕೃತಿಯನ್ನು ನಾಶ ಪಡಿಸುವ ಹುಮ್ಮಸ್ಸಿನಲ್ಲಿ ನಮ್ಮ ಮೇಲೆರಗಿರುವ ಜಾಗತೀಕರಣವನ್ನು ಮೊದಲ ಪ್ರಯಾರಿಟಿಯಾಗಿರಿಸಿಕೊಳ್ಳಬೇಕು. ಕಾನೂನು ಸುವ್ಯವಸ್ಥೆ ಹಾಗೂ ನ್ಯಾಯ ನಿರ್ಣಯದಲ್ಲಿ ವಸ್ತುನಿಷ್ಟತೆ ನಮಗೆ ಅತ್ಯವಶ್ಯಕವಾಗಿ ಬೇಕಿದೆ. ಆಡಳಿತದಿಂದ ‘ಧರ್ಮ’ವನ್ನು ದೂರ ಮಾಡುವುದು ಹೇಗೆ? ಯಾಕೋ ನಮ್ಮ ಮಾಧ್ಯಮಗಳು ನಮ್ಮ ಪ್ರಯಾರಿಟಿಗಳನ್ನು ಬದಲಿಸಿವೆ ಎಂದು ಕಾಣುತ್ತದೆ. ಈ ಬಗ್ಗೆ ಸುದ್ದಿ ಮಾತು ಚಿಂತಿಸಿದರೆ, ಮಾಧ್ಯಮಗಳ ರಚನಾತ್ಮಕ ಪಾತ್ರದ ಬಗ್ಗೆ ಬೆಳಕು ಹರಿಸಿದರೆ ಸಂತೋಷವಾಗುತ್ತದೆ...

ಸುಪ್ರೀತ್.ಕೆ.ಎಸ್

Anonymous said...

ಇಲ್ಲಿ ಭೈರಪ್ಪನವರ ಮೇಲೆ ವಿಷಕಾರುತ್ತಿರುವ ಕೆಲವರ ಪ್ರೊಫೈಲ್ ನೋಡಿದಾಗ ತಿಳಿಯುತ್ತೆ. ಅವರೆಲ್ಲ ಒಬ್ಬರೇ ಅಂತ. ಅವರೇ suddimatu!

suddimatu: member since September 2008
sugandhi: member since September 2008
hulakodu: member since September 2008
chukki: member since October 2008

ತಮ್ಮ ಸರಿಯಾದ ಪರಿಚಯ ಹೇಳಿಕೊಳ್ಳದೆ ಅನಾಮಧೇಯನ ರೀತಿ suddimatu ಬರೆಯುತ್ತಿರುವ ಉದ್ದೇಶ ಏನು? ತಮ್ಮ ಬ್ಲಾಗಿನಲ್ಲಿ ತಾವೇ ಬೇರೆಯವರ ಹೆಸರಲ್ಲಿ ಕಾಮೆಂಟ್ಸ್ ಬರೆಯುತ್ತಿರುವ್ದರ ಉದ್ದೇಶ ಏನು ಎಂದು ಸುಲಭವಾಗಿ ಎಲ್ಲರಿಗೂ ಅರ್ಥವಾಗುತ್ತೆ.

Anonymous said...

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗು ವಾಕ್ ಸ್ವಾತಂತ್ರ್ಯವಿದೆ , ಆದರೆ ಅದನ್ನು ಸ್ವೆಚ್ಚಾರ ಮಾಡಿಕೊಳ್ಳಬಾರದು ಅಷ್ಟೆ.
ಭೈರಪ್ಪನವರು ಬರೆದಿರುವುದರಲ್ಲಿ ತಪ್ಪೇನಿದೆ. ಭಾರತದಲ್ಲಿ ಸದ್ಯದ ಸ್ಥಿತಿ ಹೇಗಿದೆಯೆಂದರೆ ಬಹುಸಂಖ್ಯಾತರು ಮಾಡುವುದೆಲ್ಲ ತಪ್ಪು , ಅಲ್ಪಸಂಖ್ಯಾತರು ಎನಿಸಿಕೊಂಡವರು ತಪ್ಪು ಮಾಡಿದರು ಅದು ಸರಿ! ಯಾಕಿ ತಾರಾ ತಮ್ಯ ನೀತಿ. ಇಲ್ಲಿ ಬುದ್ದಿ ಇಲ್ಲದವರನ್ನು ಬುದ್ದಿಜೀವಿಗಳು ಎನ್ನುತ್ತಾರೆ. ಹಿಂದೂಗಳ ಬಗ್ಗೆ ಮಾತನಾಡಿದರೆ ಅವನು ಕೋಮುವಾದಿ, ಬೇರೆಯವರ ಬಗ್ಗೆ ಮಾತಾಡಿದರೆ ಅವನು 'ಜಾತ್ಯತೀತ' ಏನ್ರಿ ಇದೆಲ್ಲ. ಹಾ ಇನ್ನೊಂದು ಮಾತು ಹಿಂದುಗಳೆಂದರೆ ಬರಿ ಬ್ರಾಹ್ಮಣ ಹಾಗು ಬನಿಯಾಗಳು ಮಾತ್ರ ಅಲ್ಲ. ಇಲ್ಲಿ ವೈಶ್ಯರು, ಶೂದ್ರರು ಇದ್ದರೆ. ಸುಮ್ಮನೆ ಬ್ರಾಹ್ಮಣ ಅಂತ ಏಕೆ ಕೂಗಿ ಕೊಳ್ತಿರಾ.... ( ನಾನು ಬ್ರಾಹ್ಮಣ ಅಲ್ಲ )

Anonymous said...

nimage eshtu salary

Anonymous said...

fdffdghtg rtyhtrhr

Anonymous said...

kannada patrikegalu, vaahinigalu madida tappugalannu bareyutttiddiree. olleaya vishaya. Adara jotege maadyamadavaru enu madabekendu neevu helidre....sudarisikollabahudeno...........neevu bahala janariddeeri. allava?

Anonymous said...

eka vachana prayogisiddu tappu. neevu avara level ge ilidiri. neevu yaavudo ondu shaktiya vaktaararante vartisidiri. matte v. bhat aarambhadalli ondu samajaayisi needidante nimmadondu samajaayisi konege. ekavachanadalli barediddeve anta. cheap. nimma niluvina bagge takaraarilla. sariyaagi barediddeeri.

Anonymous said...

ಥೂ ನಿಮ್ಮಯ್ಯನ್ ಹಿಂಗಾ ನೀನು ಬರಿಯೋದು...

Anonymous said...

ellarigu namaskara,

ಚಚರ್ೆ ಚನ್ನಾಗಿ ಸಾಗುತ್ತಿದೆ. ಆವೇಶ, ಭಾವಾವೇಶ, ಪೂರ್ವಗ್ರಹ ಪೀಡನೆ, ನಿಜಕ್ಕೂ ಎರಡೂ ಕಡೆಯ ವಾದಿಗಳಿಗೆ ಅಗತ್ಯವಿಲ್ಲ. ವಾದ ಬಲಹೀನವಾದಾಗ ಬಿರುಸಿನ ಶಬ್ದಗಳು ಹುಟ್ಟುತ್ತವೆ. ಬೈರಪ್ಪ ಬರೆದಿದ್ದು ಸರಿ ಅಂತ ಅವರನ್ನು ನಂಬುವ, ಕೆಲ ಕಾರಣಕ್ಕೆ ಅವರನ್ನು ಒಪ್ಪುವ ಜನಕ್ಕೆ ಸರಿ ತೋರಬಹುದು. ಆದರೆ ಅವರ ಬರೆಹಗಳಲ್ಲಿರುವ ಜೀವ ವಿರೋಧಿ ನಿಲುವನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಹೀಗೆ ಕ್ಯಾತೆ ತೆಗೆದು ಬೆಂಕಿ ಹಚ್ಚುವ ಕೆಲಸವನ್ನು ಯಾವ ಧರ್ಮದ ಮನುಷ್ಯ ಮಾಡಿದರೂ ಅದು ತಪ್ಪೇನೆ.
ಈಗ ಜಾತಿ,ಧರ್ಮಗಳ ಜಗಳ ಆರಂಭಿಸಿ ಯಾವುದನ್ನೂ, ಯಾವ ಕಾರಣಕ್ಕೂ ಬಗೆಹರಿಸಿಕೊಳ್ಳದ ದುರಂತ ಸ್ಥಿತಿಯಲ್ಲಿ ನಾವಿದ್ದೇವೆ. ಅಕ್ಷರ ಸಂಸ್ಕೃತಿ ಕಲಿತ ನಾವೇ ಹೀಗೆ ಎಲ್ಲಾ ಗೊತ್ತದ್ದೂ ಅವಿವೇಕಿಗಳಾಗಿರುವುದು. ನಮ್ಮ ಅನಕ್ಷರಸ್ಥ,ಮುಗ್ಧ ಹಳ್ಳಿ ಜನ ಇಂದಿಗೂ, ಸೌಹಾರ್ಧವಾಗಿ,ಅನ್ಯೋನ್ಯ ವಾಗಿ ಬದುಕಿದ್ದಾರೆ- ಈಗಲೂ ಬದುಕುತ್ತಿದ್ದಾರೆ. ನಮ್ಮೆಲ್ಲರ ನಂಜು ಅವರಿಗೂ ತಲುಪಿ ಅವರೂ ನಮ್ಮಂತೆ ಹಾಳಾಗದಿರಲೆಂದು ಆಶಿಸೋಣ.
ಸೂಜಿ ಹೊಲಿಗೆಗೆ ಇರಲಿ, ಕಣ್ಣು ಚುಚ್ಚಿಕೊಳ್ಳುವ ಅವಿವೇಕತನಕ್ಕೆ ಅದನ್ನು ಉಪಯೋಗಿಸಿಕೊಳ್ಳುವುದು ಬೇಡ.

kalee

Anonymous said...

suddi matu blognalli barediddell carrecta. krischiannru matantara madillava. matantara asamanate hogaladisuvudakke pariharve.. bairappa helirudarlli tappirabhudu. adre kraistaru mtanatara mdata erodu aste satya embudanna ayru allgaleyuvadakke agodill

Anonymous said...

ಭೈರಪ್ಪ ಕಾರಿಕೊಂಡ ಹೊಲಸು ತಿಂದ ಸುದ್ದಿಮಾತು ಎಂಬುದು ಬಹುಶಃ ಸೂಕ್ತ ಉತ್ತರವೆ ಸೈ.
ಅಪ್ಪಟ ಡೇಶದ್ರೋಹಿ ಮತಾಂಧ ಮುಸಲ್ಮಾನ ಅಥವ ಕ್ರಿಶ್ಚಿಯನ್ನೊಬ್ಬನಿಂದ ನಡೆಸಲ್ಪಡುವ ಈ ಬ್ಲಾಗ್ ಪತ್ರಿಕಾಧರ್ಮಕ್ಕೆ ಅಪಚಾರ.

Anonymous said...

ವಿ.ಕ ದಲ್ಲಿದ್ದು ಈಗ ಪ್ರಜಾವಾಣಿಯಲ್ಲಿ ಕೆಲಸ ಮಾಡುತ್ತಿರುವ ನನಗಂತೂ ಎಂದೂ ವಿ.ಕ ಕಪೋಲ ಕಲ್ಪಿತ ಸುದ್ದಿಗಳನ್ನು ಪ್ರಕಟಿಸುವುದಿಲ್ಲವೆಂದು ಬಲ್ಲೆ. ಬಹುಶಃ ಸುದ್ದಿಮಾತು ತಾನು ಮಾಡುತ್ತಿರುವುದನ್ನೆ (ಬೇರೆಯವರ ಹೆಸರಿನಲ್ಲಿ ಪ್ರತಿಕ್ರಿಯಿಸುವ) ವಿ.ಕ ಮಾಡುತ್ತಿರುವುದು ಎಂದು ಭಾವಿಸುತ್ತಿರುವುದು ತನ್ನಂತೆ ಪರರ ಬಗೆದೊಡೆ ಎಂಬ ಬಸವಣ್ಣನವರ ಮಾತಿನಂತಿರಬೇಕು ಅಲ್ಲವೆ?