ಶಶಿಧರ್ ಭಟ್ ಕನ್ನಡದ ಅತ್ಯುತ್ತಮ ಪತ್ರಕರ್ತರಲ್ಲಿ ಒಬ್ಬರು. ಅವರು ಅತ್ಯುತ್ತಮ ಎನ್ನಲು ಮುಖ್ಯ ಕಾರಣ ಅವರು ಹೋರಾಟದ ಹಿನ್ನೆಲೆಯಿಂದ ಪತ್ರಿಕೋದ್ಯಮಕ್ಕೆ ಬಂದವರು. ರೈತ ಪರ, ದಲಿತ ಪರ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ನಿಜ. ಅವರ ತಲೆಮಾರಿನವರಿಗೆ ಪತ್ರಿಕೋದ್ಯಮಕ್ಕೆ ಪ್ರವೇಶ ಮಾಡುವಾಗ ಪತ್ರಕರ್ತ ಆಕ್ಟಿವಿಸ್ಟ್ ಆಗಿರಬೇಕೆ, ಬೇಡವೆ ಎಂಬ ಗೊಂದಲಗಳಿರಲಿಲ್ಲ. ಅವರಲ್ಲಿ ಅನೇಕರು ಪತ್ರಿಕೋದ್ಯಮ ಕ್ಷೇತ್ರ ಎಂದರೇನೆ, ಆಕ್ಟಿವಿಸಮ್ ಎಂದುಕೊಂಡವರು. ಹಾಗಾಗಿ ಹೋರಾಟಗಳಲ್ಲಿ ತೊಡಗಿಸಿಕೊಂಡರು. ಆದರೆ ಕಾಲ ಬದಲಾಯಿತು.
ಪತ್ರಿಕೋದ್ಯಮ ಇತರೆ ಎಲ್ಲಾ ಉದ್ಯೋಗಗಳಂತೆ ಅನ್ನಕ್ಕೊಂದು ಮಾರ್ಗ ಎಂದಾಯಿತು. ಪತ್ರಿಕಾ ಮಾಲೀಕರು ನಿಮ್ಮ ಹೊಟ್ಟೆ ತುಂಬ ಬೇಕಾದರೆ ಜಾಹೀರಾತುದಾರರ ಕಡೆ ಗಮನವಿರಲಿ ಎಂಬ ಮಾತುಗಳನ್ನು ಆಡಲು ಶುರುಮಾಡಿದರು. ಅಂತೆಯೇ ಇಂದಿನ ಬಹುತೇಕ ಪತ್ರಕರ್ತರು ಮಾಲೀಕರು ಆಡಿಸಿದಂತೆ ಆಡುತ್ತಿದ್ದಾರೆ. ಶಶಿಧರ್ ಭಟ್ ಕೂಡಾ ಇದಕ್ಕೆ ಹೊರತಲ್ಲ!!
ಇತ್ತೀಚೆಗೆ ಶಶಿಧರ್ ಭಟ್ ತಮ್ಮ ಬ್ಲಾಗ್ ಕುಮ್ರಿಯಲ್ಲಿ ಯಡಿಯೂರಪ್ಪನನ್ನು ಭೇಟಿ ಮಾಡಿದ್ದರ ಕುರಿತು ಬರೆದಿದ್ದರು. ಅದರ ಆಯ್ದ ಭಾಗ ಇಲ್ಲಿದೆ. ಪತ್ರಕರ್ತ ಶಶಿಧರ್ ಭಟ್ರ ಸೂಕ್ಷ್ಮ ಒಳನೋಟ, ಸಾಮಾಜಿಕ ಕಾಳಜಿ ಎಲ್ಲವೂ ಇಲ್ಲಿ ವ್ಯಕ್ತ.
ನಾನು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದಾಗ ಹೀಗೆ ಹೇಳಿದೆ; ಸಾರ್ ನನಗೆ ನಿಮ್ಮಿಂದ ಏನೂ ಆಗಬೇಕಿಲ್ಲ. ನೀವು ಇಚ್ಚೆ ಪಟ್ಟಿದ್ದರಿಂದ ನಿಮ್ಮನ್ನು ನೋಡುತ್ತಿದ್ದೇನೆ. ನೀವು ಕರ್ನಾಟಕದ ಮುಖ್ಯಮಂತ್ರಿ ಎಂಬುದನ್ನು ಯಾವ ಸಂದರ್ಭದಲ್ಲಿ ಮರೆಯಬೇಡಿ. ನೀವು ಬಿಜೆಪಿ, ಸಂಘ ಪರಿವಾರದ ಮುಖ್ಯಮಂತ್ರಿಯಲ್ಲ. ನಿಮ್ಮ ಮನಸ್ಸಿನಲ್ಲಿ ಎಲ್ಲಿಯವರೆಗೆ ಬಿಜೆಪಿ ಮುಖ್ಯಮಂತ್ರಿ ಎಂಬುದು ಇರುತ್ತದೆಯೋ ಅಲ್ಲಿಯವರೆಗೆ ನೀವು ಈ ನಾಡಿನ ಮುಖ್ಯಮಂತ್ರಿಯಾಗುವುದಿಲ್ಲ. ಆದರೆ ದುರ್ದೈವ ಎಂದರೆ ಇದುವರೆಗೆ ನೀವು ಕರ್ನಾಟಕದ ಮುಖ್ಯಮಂತ್ರಿಯಂತೆ ವರ್ತಿಸಿಲ್ಲ.ಒಬ್ಬ ಮುಖ್ಯಮಂತ್ರಿಯಾದವನು ರಾಜನೀತಿಜ್ಞನಾಗಿರಬೇಕು. ಆತ ಸ್ಟೇಟ್ಸ್ ಮನ್ ಆಗಿರಬೇಕು. ಆದರೆ ನೀವು ಪಂಚಾಯಿತಿ ಮಟ್ಟದ ರಾಜಕಾರಣಿಯಂತೆ ವರ್ತಿಸುತ್ತಿದ್ದೀರಿ ಎಂದು ಹೇಳಲು ಬೇಸರವಾಗುತ್ತಿದೆ.ನನಗೆ ನಿಮ್ಮ ಮುಖದಲ್ಲಿ ನಗುವನ್ನು ನೋಡುವುದು ಇಷ್ಟ. ನೀವು ನಗುತ್ತಿದ್ದರೆ ನಿಮ್ಮ ಮನಸ್ಸು ಹಗುರಾಗುತ್ತದೆ. ನಿಮ್ಮ ಮನಸ್ಸು ಹಗುರಾದರೆ ನೀವು ಪ್ರಾಮಾಣಿಕವಾಗಿ ಯೋಚಿಸಬಲ್ಲಿರಿ. ನೀವು ಪ್ರಾಮಾಣಿಕವಾಗಿ ಯೋಚಿಸಿದರೆ ನಾಡಿಗೆ ಒಳ್ಳೆಯದಾಗುತ್ತದೆ. ಯಡಿಯೂರಪ್ಪ ನಾನು ಹೇಳಿದ್ದನ್ನು ಕೇಳಿಸಿಕೊಂಡರು. ನಾನು ಹೇಳಿದ್ದು ಅವರಿಗೆ ಎಷ್ಟು ಅರ್ಥವಾಯಿತೋ ತಿಳಿಯಲಿಲ್ಲ.
Sunday, October 19, 2008
Subscribe to:
Post Comments (Atom)
11 comments:
ಚುನಾವಣಾ ಸಮೀಕ್ಷೆ ಮೊದಲ್ಗೊಂಡು, ಹಲವು ಸಂಧಭಱ
ಸುವಣಱ ವಾಹಿನಿಯಲ್ಲಿ, ಬಿ.ಜೆ.ಪಿ.ಪರ ವಿಶ್ಲೇಷಣೆ ಕಂಡು ಬಂದಿದೆ.
ಸ್ವಲ್ಪ Loud ಎನಿಸುವ ಸಂದಶಱನಗಳಲ್ಲಿ, ಕಂಡುಬರದಿದ್ದ ಭಟ್ಟರ ವಿಚಾರ ಅವರ ಬ್ಲಾಗ್ ನಲ್ಲಿ ಕಾಣುತ್ತಿದೆ.
ಅವರ profile ಓದಿದರೆ, ಛೆ! ಇದು ಇವರದಲ್ಲವೇನೋ ಎಂಬ ಭಾವ ಅವರನ್ನು ಕಂಡವರಿಗೆ ತಕ್ಷಣಕ್ಕೆ ಅನಿಸುವಂತೆಯೇ, ಯಡಿಯೂರಪ್ಪನವರ ಕುರಿತ ಲೇಖನವೂ ಕೊಂಚ ಹೊತ್ತು ಯೋಚನೆಗೆ ಪ್ರೇರೆಪಿಸುತ್ತಿದೆ.
ಏನೇ ಇದ್ದರೂ, ಭಟ್ಟರ ಬರಹ ಹಾಗೂ
ಅಂತಹ ವಿಚಾರಗಳನ್ನು ಗಮನಿಸುವ ನಿಮ್ಮ ಉತ್ಸಾಹ ನಿಜಕ್ಕೂ ಖುಶಿ ತರುತ್ತದೆ.
...ಬ್ಲಾಗೋದುಗ
ಸುವರ್ಣ ವಾಹಿನಿಯಲ್ಲಿ ಬಿಜೆಪಿ ಪರ ವಿಶ್ಲೇಷಣೆ ಬಂದು, ಅದಕ್ಕೆ ವಿರುದ್ಧ ಫಲಿತಾಂಶ ಬಂದಿದ್ದರೆ ಬ್ಲಾಗೋದಯರ ಮಾತನ್ನು ಒಪ್ಪಬಹುದಿತ್ತು. ಆದರೆ ಅದು ರಾಜ್ಯದ ಜನತೆಯ ತೀರ್ಮಾನ ಹೀಗಾಗಗಬಹುದು ಅನ್ನುವ ಸಮೀಕ್ಷೆ. ಅದು ನಿಜವೇ ಆಗಿದೆಯಲ್ವಾ? ಇನ್ನು ಶಶಿಧರ ಭಟ್ಟರನ್ನು ಕಳೆದ ಒಂದೂವರೆ ವರ್ಷದಿಂದ ನೋಡುತ್ತಾ ಬಂದಿರುವ ನನಗಂತೂ ಅವರು ನೀವು ಹೇಳಿದ ಈ ಹಂತಗಳನ್ನೆಲ್ಲ ದಾಟಿ ಬಂದಿರುವ ಹಾಗನಿಸುತ್ತದೆ. ಆದರೆ ಕಂಪೆನಿ ವಿಷಯದ ಬಗ್ಗೆ ನಾನೇನೂ ಹೇಳುವುದಿಲ್ಲ.
.... ಮುಗುಳು
ಮುಗುಳು!! ರವರೇ,
ನಿಮ್ಮ ಮಾತು ಒಪ್ಪುತ್ತೇನೆ.
ಬಹುಶಃ ಸಮೀಕ್ಷೆಯಲ್ಲಿ ನಿಮ್ಮದೂ ಸಕ್ರಿಯ ಪಾತ್ರ ಇತ್ತೆನಿಸುತ್ತದೆ.
ಅದಿರಲಿ, ನಾವಿಕನ ನಿಧಾಱರವಿಲ್ಲದೆ ಯಾವ ನಾವೆಯೂ ಕದಲುವ, ದಿಕ್ಕು ಬದಲಿಸುವ,ಅಥವಾ ನಿಂತಲ್ಲೇ ನಿಂತು ಗಿರಕಿ ಹೊಡೆಯುತ್ತಾ ಅಲೆ ಬಂದಂತೆ ದಾರಿಕಾಣುವ ಪ್ರಮೇಯವೇ ಬರುವುದಿಲ್ಲ.
ನಾವಿಕನನ್ನು ಹೊರತುಪಡಿಸಿ ನಾವೆಯ ಬಗ್ಗೆ ನಾನು ಹೇಳುವುದಿಲ್ಲ ಅನ್ನುತಿದ್ದೀರಾ. ಅದು ಹೇಗೆ ಸಾಧ್ಯ?
ನಾವೆಯ ಮೇಲೆ ಹಾರುತ್ತಿರುವ ಬಾವುಟದ ಬಣ್ಣ ದಡದಲ್ಲಿ ನಿಂತಿರುವವರಿಗೂ, ಎದ್ದು ಕಾಣುತ್ತಿದೆ.
.....ತೀರಾ ಹತ್ತಿರದಿಂದ ಅಲ್ಲವಾದರೂ, ಅವರು ಕಂಡಂತೆ ನಾನು ಭಾವಿಸಿದ್ದೇನೆ.ವೈಯಕ್ತಿಕವಾಗಿ ಗೌರವಿಸುತ್ತೇನೆ.
ಸುದ್ದಿಮಾತು ಪ್ರಸ್ತಾಪಿಸುವ ಮುಂಚೆ, ಭಟ್ಟರ ಬ್ಲಾಗ್ ಓದಿದಾಗಲೇ ಖುಶಿಯಾಗಿತ್ತು.
ನೀವು ಮಾತು ಪ್ರಂಭಿಸಿದಿರ, ನಾನು ಮುಂದುವರೆಸಿದ್ದೇನೆ.
ಬ್ಲಾಗೋದುಗ
ಚೆನ್ನಾಗಿ ಬರೆದಿದ್ದೀರಿ ಜಿ.ಎನ್. ಮೋಹನ್! ಆದರೆ, ಇದೇನಿದು ನೀವು ಇದ್ದಕ್ಕಿದ್ದಂತೆ ಶಶಿಧರ ಭಟ್ ಪಲ ವಾಲುತ್ತಿರುವುದು?
ಆತ್ಮೀಯರೇ-
'ಸುದ್ದಿಮಾತು' ಬ್ಲಾಗ್ ಗೂ ನನಗೂ ಯಾವುದೇ ಸಂಬಂಧವಿಲ್ಲ. ಇದು ಈಗಾಗಲೇ ನಾನು 'ಸಮಯ್' ಚಾನಲ್ ಮುಖ್ಯಸ್ಥ ಎಂದು ಹಬ್ಬಿರುವ ಸುದ್ದಿಯಷ್ಟೇ ಸುಳ್ಳು ಸುದ್ದಿ. ನಾನು ಮೇಫ್ಲವರ್ ಮೀಡಿಯಾ ಹೌಸ್ ನಡೆಸುತ್ತಿದ್ದು, ಇದರ ಕಚೇರಿ, ಫೋನ್ ನಂಬರ್, ಕಾರ್ಯಕ್ರಮ ಎಲ್ಲವೂ ಈಗಾಗಲೇ ಪರಿಚಿತ.
ಮಾಧ್ಯಮಕ್ಕೆ ಸಂಬಂಧಿಸಿದಂತೆ Communication clinic ಬ್ಲಾಗ್ ಮಾಡುವ ತಯಾರಿಯಲ್ಲಿದ್ದೇವೆ. ಅದು ವಿಶ್ಲೇಷಣಾತ್ಮಕ, ಅಕಡೆಮಿಕ್ ಆದ ಬ್ಲಾಗ್ ಆಗಿರುತ್ತದೆ.
- ಜಿ ಎನ್ ಮೋಹನ್
ಮೊದಲ ವಾಕ್ಯ ...ಇದು ಸತ್ಯ. ನಾನು ಅಭಿಮಾನಿ.
ಮಹೇಶ್ . ಓದುಗ...
ಯಾವ ’ಇಸಂ’ಗೂ ಒಳಗಾಗದೆ ನಿಸ್ಪಕ್ಷಪಾತವಾಗಿ ಸುದ್ದಿಯನ್ನು ವಿಶ್ಲೇಷಿಸುವ, ಸಮೂಹ ಮಾಧ್ಯಮಗಳಿಗಾಗಿಯೇ ಮೀಸಲಾದ ಬ್ಲಾಗೊಂದರ ಅವಶ್ಯಕತೆ ಇದೆ ಮೋಹನ್.
’ಅವಧಿ’ಯಂತಹ ಕಲ್ಚರಲ್ ಮ್ಯಾಗಝಿನ್ ತರುತ್ತಿರುವ ನಿಮಗದು ಸಾಧ್ಯವಾದೀತು...ಗುಡ್ ಲಕ್.
ಟೀಕಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಟೀಕಿಸುವಾಗ ಘನತೆ ಗೌರವಗಳಿರಬೇಕು.ಟೀಕೆಗೊಳಗಾದವರು ಎದೆ ಮುಟ್ಟಿ ನೋಡಿಕೊಳ್ಳುವಂತಿರಬೇಕು,ಕೆರಳುವಂತಿರಬಾರದು. ’ನಾಲಗೆ ಕುಲವನರುಹಿತು’ ಎಂಬಂತಾಗಬಾರದು ಅಲ್ಲವೇ?
shashidhara bhat avaru olleya patrakarata. aadare avaru patrikaa maadhyamagalige hechchu sookta. avara dhwani, haava bhaava ella tv yalli nodoke swalpa kashta aaguttade. hinde avaru e tv nalli nadesikoduttidda bhootada karyakramadallantoo avara commentary keluvudakke bheebhatsavaagirutittu. tv maadyamakke horatakkintaloo swalpa training na hinnele agatya endu shashidara bhat avarannu tv yalli nodidavarige tiliyuttade. idu vayyaktika abhipraya.
ಇವತ್ತು ಈ ಬ್ಲಾಗ್ ಕಡೆ ಭೇಟಿ ನೀಡಿದೆ. ಮೂಲತಹ ಆಶಯ ಒಳ್ಳೆಯದೇ ಇದ್ದರೂ, ಅನಾನಿಮಸ್ಸುಗಳ ಹಾವಳಿ ಬಹಳವಿದೆ ಇಲ್ಲಿ, ಅದು ಮಾತ್ರ ಚೆನ್ನಾಗಿಲ್ಲ. ಹೆಸರಿಲ್ಲದ ಕಮೆಂಟುಗಳು ಯಾರ್ಯಾರನ್ನೋ ಯಾರ್ಯಾರೋ ತಪ್ಪು ತಿಳಿದುಕೊಳ್ಳುವಂತೆ ಮಾಡುತ್ತವೆ. ಆಗ ಆರೋಗ್ಯಕರ ಚರ್ಚೆಯಾಗಬೇಕಾದಲ್ಲಿ ಕೆಸರು ಎರಚಾಟ ನಡೆಯುತ್ತದೆ.
ಹಾಗೆಯೇ ಬ್ಲಾಗ್ ನಡೆಸುವವರು ತಮ್ಮ ಹೆಸರನ್ನು ಸ್ವಯಂ ಇಚ್ಛೆಯಿಂದ ಅವರು ಹೇಳಿಕೊಂಡಲ್ಲಿ ಎಲ್ಲರಿಗೂ ಉಪಕಾರವಾಗುತ್ತದೆ. ಭಯ ಯಾಕೆ? :P
Suddimaatu blog nalli baruthiruva vishayagallannu Odida mele nanage annissiddu ishtu.
Namma Journalistgalige bere kelasa Illa. Bahuthekaru Innobara bagge (Adu Kaddu Muchi Hesaru Hakade) bareyuvude kelasa antha kanuthe. sadyavaguvastu dina BUCKET hididu nantra aaguvudilla endu thilida koodale avarannu baiyuvude ivara udyoga. Nijavaglu nimage Journalist gala bagge kalagi idre athava journalisum belibeku anthidre anthavarannu neravagi tharatege thegedukolli. Adu bittu Avanu sariyilla, naanobbane sari antha heluvudu estu sari ? Monne Shashidhar Bhat, amele Pravani editor Dandavate, balike Zee news, TV9 heege patti beleyuttha hogthide. neevu Journalist agidre, alli Vidhanasouda dalli, transfer antha kootigattale dudina Corrupiton nadeethide, adara bagge investigative story maadi, adu bittu Ennobbara personal vishayagalu (nimage, nimma kutumbakke, ottare society ge) charchege ee vedike balasabedi. Maddu bekastu story galive, sarakarada ananubhavada bagge story, kelavu sachivara ahankara dhorane, bbmp election, bangalore infracture, rajyada hanakasu stiti heegiruvagale kootigattale anudana ghoshane estu prastuta, uchitha ....
Swamy, Neerinalli adagiruva (net nalli adagiruva )Adhunika dhuryaddanane, Eddu baa, Eddu baa, Eddu baa....
vishwa
Post a Comment