ಜೀ ಕನ್ನಡ ವಾಹಿನಿ ಆರಂಭವಾದಾಗಿನಿಂದಲೂ ಅದು ಮನರಂಜನೆಗೆ ಆದ್ಯತೆ ನೀಡುತ್ತ ಸುದ್ದಿ ವಿಭಾಗವನ್ನು ನಿರ್ಲಕ್ಷಿಸುತ್ತಲೇ ಬಂದಿದೆ. ಮೊದಮೊದಲು ಸುದ್ದಿಯನ್ನು ವಿಚಿತ್ರವಾಗಿ, ಜಾಹೀರಾತಿನಂತೆ ಸೆಕೆಂಡುಗಳ ಲೆಕ್ಕದಲ್ಲಿ ತೋರಿಸಿ ಆಭಾಸ ಮಾಡಲಾಗುತ್ತಿತ್ತು. ಇದರಿಂದಾಗಿ ವೀಕ್ಷಕರ ಕಥೆ ಹಾಗಿರಲಿ, ವರದಿಗಾರರೇ ತಲೆತಲೆ ಚೆಚ್ಚಿಕೊಳ್ಳುವಂತಾಗಿತ್ತು.ಈಗ ಸಂಜೆ ಏಳುಗಂಟೆಗೆ ಅದರ ಪ್ರೈಮ್ ಸುದ್ದಿ ಪ್ರಸಾರವಾಗುತ್ತದೆ. ಈ ಟಿವಿ, ಕಸ್ತೂರಿ, ಉದಯ ಟಿವಿಗಳಲ್ಲಿ ೮ ಗಂಟೆಗೆ ಸುದ್ದಿ ಪ್ರಸಾರವಾದರೆ ಅದಕ್ಕೂ ಮುನ್ನ ಪ್ರಸಾರವಾಗುವ ಜೀ ಟಿವಿಯ ಸುದ್ದಿ ಹೆಚ್ಚು ಜನಪ್ರಿಯವಾಗಬೇಕಿತ್ತು. ಆದರೆ ಹಾಗಾಗುತ್ತಿಲ್ಲ.ಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಜೀ ಟಿವಿಯಲ್ಲಿ ಇದ್ದಕ್ಕಿದ್ದಂತೆ ತಾರಾಮಣಿಗಳು ಸುದ್ದಿ ಓದಲು ಆರಂಭಿಸಿದರು. ಇದೊಂದು ಹೊಸ ಪ್ರಯೋಗ ನೋಡೋಣ ಎಂದರೆ ಈ ತಾರಾಮಣಿಗಳು ಸುದ್ದಿ ಓದಲು ಬಾರದೆ ಒದ್ದಾಡಿ ಸಾರ್ವಜನಿಕ ಮನರಂಜನೆ ನೀಡಿದರು. ಮನರಂಜನೆಗೇ ಆದ್ಯತೆ ನೀಡುವ ಜೀ ಟಿವಿ ಸುದ್ದಿ ನೀಡುವಲ್ಲೂ ಮನರಂಜನೆ ನೀಡುವ ಮೂಲಕ ಹಾಸ್ಯಾಸ್ಪದವಾಯಿತು.ತಾರಾಮಣಿಯರ ಸುದ್ದಿವಾಚನವೇನೋ ನಿಂತು ಹೋಯಿತು. ಆದರೆ ಸುದ್ದಿಯಲ್ಲಿನ ಗೊಂದಲಗಳು ಹಾಗೇ ಮುಂದುವರೆದಿವೆ.ತೀರಾ ತಕರಾರು ಮಾಡಲೇಬೇಕಾಗಿರುವುದು ಕ್ರೈಂ ಸುದ್ದಿಗಳ ವಾಚನದ ವಿಷಯ. ಥೇಟು ಕ್ರೈಂ ಧಾರಾವಾಹಿಗಳಲ್ಲಿ ಹಿನ್ನೆಲೆ ಧ್ವನಿ ನೀಡುವಂತೇ ಸುದ್ದಿಯಲ್ಲೂ ನೀಡಿದರೆ ಹೇಗೆ? ಕ್ರೈಂ ಧಾರಾವಾಹಿಗಳಿಗೆ ಆ ನಾಟಕೀಯ, ಲೌಡ್ ಆದ ಹಿನ್ನೆಲೆ ಧ್ವನಿ ಬೇಕೇನೋ? (ಟಿಆರ್‌ಪಿಗಾಗಿ) ಆದರೆ ಸುದ್ದಿ ಓದುವವರಿಗೂ ಈ ಕರ್ಕಷ, ಒರಟು ಧ್ವನಿಗಳನ್ನು ಕೇಳಿಸುವ ಅಗತ್ಯವೇನು? ರಾತ್ರಿ ಹತ್ತರ ನಂತರದ ಕ್ರೈಂ ಕಥಾನಕಗಳ ಯಶಸ್ಸನ್ನು ಸುದ್ದಿವಿಭಾಗಕ್ಕೂ ತರುವ ಐಡಿಯಾ ಕೊಟ್ಟವರಾದರೂ ಯಾರು?ಜೀ ಟಿವಿಯವರಿಗೆ ಗೊತ್ತಿಲ್ಲದೇ ಇರಬಹುದಾದ ವಿಷಯವೆಂದರೆ ಕ್ರೈಂ ಧಾರಾವಾಹಿಗಳನ್ನು ಅದರಲ್ಲಿ ಆಸಕ್ತಿ ಉಳ್ಳವರು ಮಾತ್ರ ನೋಡುತ್ತಾರೆ. ಆದರೆ ಸುದ್ದಿಯನ್ನು ಎಲ್ಲರೂ ನೋಡುತ್ತಾರೆ. ಎರಡನ್ನೂ ಮಿಕ್ಸ್ ಮಾಡುವ ಮೂಲಕ ಜೀ ಟಿವಿ ಸುದ್ದಿ ವಿಭಾಗದ ಗೆಳೆಯರು ಗೊಂದಲಕ್ಕೆ ಸಿಕ್ಕಿಬೀಳುವುದು ಬೇಡ.
(ಈ ಬರಹ ನಮ್ಮ ಆಹ್ವಾನಕ್ಕೆ ಬಂದ ಮೊದಲ ಈಮೇಲ್ ಪ್ರತಿಕ್ರಿಯೆ. ಯಥಾವತ್ ಇಲ್ಲಿ ಪ್ರಕಟಿಸಿದ್ದೇವೆ).
(ಈ ಬರಹ ನಮ್ಮ ಆಹ್ವಾನಕ್ಕೆ ಬಂದ ಮೊದಲ ಈಮೇಲ್ ಪ್ರತಿಕ್ರಿಯೆ. ಯಥಾವತ್ ಇಲ್ಲಿ ಪ್ರಕಟಿಸಿದ್ದೇವೆ).
5 comments:
s your rite
hi, you are writing very well. keep writing.
ಹೌದು zee ಟಿ ವಿ ಮುಖ್ಯಸ್ಥರು ಇತ್ತ ಗಮನ ಹರಿಸಿದರೆ ಒಳ್ಳೆಯದು........
ಎಲ್ಲಿ ವರೆಗೂ ಕನ್ನಡ ಭಾಷೆ ಬರೆದೆ ಇರೋವರು ಚಾನೆಲ್ನಲ್ಲಿ ಇರ್ತಾರೋ ಅಲ್ಲಿವರೆಗೂ ಚಾನೆಲ್ ಉದ್ಹಾರ ಆಗೋಲ್ಲ
hi , this blog has become one of my favorite blog. u people are doing a great job.. good going .. please give us more information about the media which people do not know.
Post a Comment