ನಮ್ಮ ಬೆಳಗಾವಿ ಪ್ರತಿನಿಧಿಯಿಂದ
ಕಿತ್ತೂರು ಉತ್ಸವದಲ್ಲಿ ನಮ್ಮ ಜನಪ್ರತಿನಿಧಿಗಳು ಕಿತ್ತಾಡಿದ್ದು ನಿಮಗೆ ಗೊತ್ತೇ ಇದೆ. ವಿಧಾನ ಪರಿಷತ್ತು ವಿರೋಧ ಪಕ್ಷ ನಾಯಕ ಉಗ್ರಪ್ಪ ಮಾತಿಗೆ ಗಣಿ ರಾಜಕಾರಣಿ ಜನಾರ್ಧನ ರೆಡ್ಡಿ ಹಾಗೂ ಅವರ ಭಂಟ ಯುವ ಶಾಸಕ ಸುರೇಶ್ ಬಾಬು ತಿರುಗಿ ಬಿದ್ದಿದ್ದಾರೆ. ನಾಡಿನ ಜನತೆ ದೂರದರ್ಶನದಲ್ಲಿ ವೀಕ್ಷಿಸಿದಂತೆ, ಉಗ್ರಪ್ಪ ಮುಖ್ಯಮಂತ್ರಿ ವಿರುದ್ಧ ಮಾತನಾಡಿದರು. ಕಿತ್ತೂರು ಉತ್ಸವಕ್ಕೆ ತೋರಿದ ನಿರ್ಲಕ್ಷ್ಯ ಕುರಿತು ಮಾತನಾಡಿದರು. ಅಷ್ಟಕ್ಕೆ ರೆಡ್ಡಿ ಎದ್ದು ನಿಂತುಬಿಟ್ಟರು. ಇದು ರಾಜಕೀಯ ಸಮಾರಂಭವಲ್ಲ. ಹೀಗೆಲ್ಲಾ ಮಾತನಾಡುವುದು ತರವಲ್ಲ ಎಂದು ಕೂಗಾಡಿದರು. ತಕ್ಷಣವೇ ಸುರೇಶ್ ಬಾಬು ಕೂಡಾ ಎದ್ದುನಿಂತು ಅವರಿಗೆ ದನಿ ಸೇರಿಸಿದ. ಗಣಿ ಹಣದ ದೌಲತ್ತು ಆ ಹುಡುಗನನ್ನು ಹಾಗೆ ಮಾಡಿಸಿತ್ತು.
ಇಂಥದೇ ಇನ್ನೊಂದು ಘಟನೆ ಕಳೆದ ವಾರ ಬೆಂಗಳೂರಿನಲ್ಲಿ ನಡೆಯಿತು. ಮಂಡ್ಯ ನಗರಸಭಾ ಸದಸ್ಯರ ದಂಡು ಬೆಂಗಳೂರಿನಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿದರು. ದುಡ್ಡು ಕೊಟ್ಟು ಕೊಂಡ ಸದಸ್ಯರು ಪಕ್ಷ ಸೇರುವ ಸಮಾರಂಭಕ್ಕೆ ಪತ್ರಿಕಾ ಮಾಧ್ಯಮದವರನ್ನು ನಿರ್ಲಕ್ಷಿಸಲಾಯಿತು. ಕೇವಲ ವಿದ್ಯುನ್ಮಾನ ಮಾಧ್ಯಮ ಮಿತ್ರರನ್ನು ಆಹ್ವಾನಿಸಿದ್ದರು. ಪರಿಣಾಮ ಪತ್ರಿಕೆಗಳ ಸಿಬ್ಬಂದಿ ಬಿಜೆಪಿ ನಾಯಕರಿಗೆ ಫೋನಾಯಿಸಿ ತರಾಟೆಗೆ ತೆಗೆದುಕೊಂಡರು. ಆಪರೇಷನ್ ಕಮಲ ರೂವಾರಿ ಕರುಣಾಕರರೆಡ್ಡಿ ಆಣತಿ ಮೇರೆಗೆ ಕೇವಲ ಟಿವಿಯವರನ್ನು ಕರೆಸಲಾಗಿತ್ತು.
ಇತ್ತೀಚೆಗೆ ತಾನೆ ಬಿಜೆಪಿ ಕಾರ್ಯಕರ್ತರಿಗೆ ಮಾಧ್ಯಮ ಕಾರ್ಯಗಾರ ಏರ್ಪಡಿಸಿತ್ತು. ಪ್ರತಿಷ್ಠಿತ ಪತ್ರಿಕೆಗಳಲ್ಲಿ ಉನ್ನತ ಸ್ಥಾನದಲ್ಲಿರುವವರು ಕಾರ್ಯಕರ್ತರಿಗೆ ಪಾಠ ಮಾಡಿದರು. ಇವರು ಪಾಠ ಮಾಡಿದ್ದು ಪತ್ರಿಕಾ ಮಾಧ್ಯಮ ನಿರ್ಲಕ್ಷಿಸಲೆಂದೆ?
ಕನ್ನಡಪ್ರಭ ಬಿಜೆಪಿ ನಾಯಕರ ವರ್ತನೆ ಖಂಡಿಸಿ ವರದಿ ಮಾಡಿದೆ. ಪತ್ರಿಕೆ ತೀರಾ ಖಾರವಾಗಿಯೇ ಬಿಜೆಪಿಯನ್ನು ಟೀಕಿಸಿದೆ. ಅಧಿಕಾರ ಇಲ್ಲದಾಗ ಮಾಧ್ಯಮದವರ ಬೆನ್ನು ಬಿದ್ದಿದ್ದ ಬಿಜೆಪಿಯವರು ಅಧಿಕಾರಕ್ಕೆ ಬಂದಮೇಲೆ ಟಿವಿ ಮಾಧ್ಯಮದವರು ಮಾತ್ರ ಬಂದರೆ ಸಾಕು ಎಂಬ ಧೋರಣೆ ತಳೆದಿದ್ದಾರೆ. ಟೀವೀಲಿ ಬಂದರೆ ಪತ್ರಿಕೆಯವರೂ ನೋಡಿ ಬರ್ಕೋತಾರೆ ಎಂಬ ಉಡಾಫೆ ಇವರದು.
ಒಂದು ಓಟಿಗೆ ಇಂತಿಷ್ಟು ನೋಟುಗಳೆಂದು ಹಂಚಿ ಅಧಿಕಾರ ಕೊಂಡು ಈ ಜನರಿಗೆ, ಅಧಿಕಾರದೊಂದಿಗೆ ಅಹಂಕಾರ ಫ್ರೀ ದೊರಕಿದೆ!
(pic courtesy: The hindu)
Monday, October 27, 2008
Subscribe to:
Post Comments (Atom)
9 comments:
ಕಿತ್ತೂರು ಉತ್ಸವದಲ್ಲಿ ರೆಡ್ಡಿ ಕೂಗಾಡಿದಕ್ಕೂ, ಅವರಿಗೆ ಸುರೇಶ್ ಬಾಬು ದನಿ ಸೇರಿಸಿದ್ದಕ್ಕೂ, ಬಿಜೆಪಿ ಮುದ್ರಣ ಮಾಧ್ಯಮವನ್ನು ಕಡೆಗಣಿಸಿದ್ದಕ್ಕೂ ಎತ್ತಣಿಂದೆತ್ತಣ ಸಂಬಂಧವಯ್ಯಾ? ರೆಡ್ಡಿ ಭಾರಿ ಗಲಾಟೆ ಮಾಡ್ತಾರೆ, ಉಳಿದವ್ರನ್ನೂ ತಮ್ ದಾರಿಯಲ್ಲೆ ಸಾಗಿಸ್ತಾರೆ ಅಂತ್ಲಾ? ಅಥ್ವಾ ಬಿಜೆಪಿಯವ್ರು ಪತ್ರಿಕೆಗಳನ್ನು ಕಡೆಗಣಿಸ್ತಾರೆ ಅಂತ್ಲಾ? ತಾವು ಏನೋ ಹೇಳಲು ಹೊರಟು ಏನೋ ಹೇಳಿದ ಹಾಗಿದೆ! :)
shree avrige e storine arth aagilla. ahankar innobbarnnu kedisodilla nija. munde avrige avre halagtare. kanist mantri anno prajne illa andre yenu helbeku? bjpge adhikarad pittha nettigeride annodu spast.
Suddimaathu blog congress pakshada mukhavaniaya...
Suddimatu blognalli banda Jana Reddy itemge Shree bareda commentge nannadondu pratikriye. Mahatmare dayavittu modalu oduvudannu kalitu amele confuse agi. Neevu odirivudakkintha confuse agirode jasthi antha gottagutte.
Ustaad
The write-up on Reddy's attiitude in the Kittur is condemnable. But, for me it seems that the Congress men also lost temper while dealing with the saffrons. The next day they went on to conduct a survey on the mining border in Bellar that seems game of political vengence...Good. keep writing such stories....
ಅನಾನಿಮಸ್ಸರೇ, ನಾನು ನನಗೆ ಅರ್ಥವಾಗಿದೆಯಾ ಇಲ್ಲವಾ ಅಂತ ನಾನು ಹೇಳಿಲ್ಲ ನನ್ನ ಕಮೆಂಟಲ್ಲಿ. ಬರೆದವರ ಉದ್ದೇಶ ಸ್ಪಷ್ಚವಿಲ್ಲ ಅಂದೆ, ಅಷ್ಟೆ. ಬಿಜೆಪಿ ಅಧಿಕಾರದ ರುಚಿ ಉಂಡ ಮೇಲೆ ಅದರ ಋಣ ತೀರಿಸಲಿಕ್ಕೆ ಒಳ್ಳೆಯವರೂ ಕೂಡ ತೆಪ್ಪಗಿದ್ದು ಕೆಟ್ಟ ಹೆಸರು ತೆಗೆದುಕೊಳ್ಳಬೇಕಾಗಿ ಬಂದಿದೆ. ಒಂದು ವಸ್ತು-ವಿಚಾರ-ವ್ಯಕ್ತಿ-ಪಕ್ಷ-ಸರಕಾರ-ದೇಶ ಅಂದರೆ ಒಳ್ಳೆಯದೂ ಇರುತ್ತದೆ , ಕೆಟ್ಟದೂ ಇರುತ್ತದೆ. ಸಂಪೂರ್ಣ ಕಪ್ಪು-ಬಿಳುಪಲ್ಲಿ ಯಾವುದೂ ಇರುವುದಿಲ್ಲ, ಇವುಗಳ ನಡುವಿನ ಬಣ್ಣಗಳೂ ಇದ್ದೇ ಇರುತ್ತವೆ. ಒಳ್ಳೆಯ ಮಂತ್ರಿಗಳು, ಒಳ್ಳೆಯ ಯೋಜನೆಗಳು ಇತರ ಸರಕಾರಗಳಂತೆ ಬಿಜೆಪಿ ಸರಕಾರದಲ್ಲಿ ಕೂಡ ಬಂದಿವೆ. ಅವಕ್ಕೆ ಸರಿಯಾದ ಪಬ್ಲಿಸಿಟಿಯಾಗಲೀ ಬೆಂಬಲವಾಗಲೀ ಸಿಕ್ಕಿಲ್ಲ, ಒಳ್ಳೆದು-ಕೆಟ್ಟದು ವಿವೇಚಿಸುವ ನಿಷ್ಪಕ್ಷಪಾತಿ ಗುಣ ಇಂದಿನ ಪತ್ರಕರ್ತರಿಗೆ ಇಲ್ಲವೇ ಇಲ್ಲ. ಹಾಗಾಗಿ ಅವೆಲ್ಲ ಜನರನ್ನು ಇನ್ನೂ ಮುಟ್ಟಿಲ್ಲ. ಬ್ಯೂರೋಕ್ರಸಿಯನ್ನು ಆಳಬಲ್ಲವ ಮಾತ್ರ ಉತ್ತಮ ರಾಜಕಾರಣಿಯಾಗಲು ಸಾಧ್ಯ, ಹಾಗೆ ನೋಡಿದರೆ ನಮ್ಮಲ್ಲಿ ಉತ್ತಮ ರಾಜಕಾರಣಿಗಳ ಸಂಖ್ಯೆ ಬಲುಕಡಿಮೆ, ಇದಕ್ಕೆ ಯಾವ ಪಕ್ಷವೂ ಹೊರತಲ್ಲ. ರೆಡ್ಡಿಯಂಥವರು ಕಿಂಗ್ ಮೇಕರ್-ಗಳೂ ಮಂತ್ರಿಗಳೂ ಆಗಿರುವುದು ಪ್ರಜಾಪ್ರಭುತ್ವದ ದುರ್ದೈವ.
ಕಣ್ಣಿಗೆ ಕಾಣದಂತೆ ಅಡಗಿ ಕಮೆಂಟು ಹೊಡೆಯುತ್ತಿರುವ 'ಉಸ್ತಾದ'ರೇ (ಅಥವಾ ಸುದ್ದಿಮಾತು ಬ್ಲಾಗಿನವರ ವಕ್ತಾರರೇ), ನನ್ನ ಮಾತುಗಳನ್ನು ಸುದ್ದಿಮಾತು ಬ್ಲಾಗಿನವರಿಗೆ ದಯವಿಟ್ಟು ಮುಟ್ಟಿಸಿ. ತಮ್ಮ ಬರಹದ ಉದ್ದೇಶ ಸ್ಪಷ್ಟವಾಗಿದ್ದರೆ, ಓದುವವರು ಕನ್-ಫ್ಯೂಸ್ ಆಗುವುದಿಲ್ಲ. ಬಿಜೆಪಿಯನ್ನು ಬೈಯುವುದೇ ಈ ಬ್ಲಾಗಿನ ಉದ್ದೇಶವಾ ಅಥವಾ ಇನ್ನೂ ಏನಾದರೂ ಒಳ್ಳೆ ಕೆಲಸ ಮಾಡಲಿಕ್ಕೆ ಇದೆಯಾ ಅಂತ ತಮ್ಮ ಮನಸಲ್ಲಿರುವ ಕನ್-ಫ್ಯೂಶನ್ ಕ್ಲಿಯರ್ ಮಾಡ್ಕೊಳಿ ಸ್ವಾಮಿ, ಆಮೇಲೆ ನಮಗೆ ಹೇಳಿ. ಅಷ್ಟಕ್ಕೂ ಉದ್ದೇಶ ಯಾಕೆ ಕೇಳಿದೆನೆಂದರೆ, ಉಗ್ರಪ್ಪನವರೇ ಮೊದಲಿಗೆ ಕಾಲೆಳೆಯುವ ಕೆಲಸ ಮಾಡಿದರೆಂಬುದನ್ನು ತಾವು ಮರೆಯಬಾರದು. ಎರಡು ಕೈ ಸೇರಿಯೇ ಚಪ್ಪಾಳೆ ಹೊಡಿದಿತ್ತು ಎಂಬುದು ಮರೆಯಬಾರದು. ಒಂದು ಪಕ್ಷದ ವಿರೋಧವಾಗಿಯೇ ಮಾತಾಡುವ ತಮ್ಮ ಬರಹಗಳು ನಿಷ್ಪಕ್ಷಪಾತವಾಗಿದ್ದರೆ ಓದಲಿಕ್ಕೆ ಖುಷಿಯಾಗುತ್ತದೆ, ಇಲ್ಲವಾದರೆ ಈ ಬ್ಲಾಗು ಟ್ಯಾಬ್ಲಾಯಿಡ್-ದು ಹೊಸ ರೂಪ ಅಂತ ಅಂದ್ಕೋಬೇಕಾಗುತ್ತದೆ. ಪ್ರತಿಯೊಂದರಲ್ಲೂ ಕಪ್ಪುಚುಕ್ಕೆಯನ್ನೇ ಎತ್ತಿ ಎತ್ತಿ ತೋರಿಸುವ ತಮ್ಮ ಬಾಲಿಶ ಬರಹಗಳು, ಟೀಕೆಗಳನ್ನು ಸ್ವೀಕರಿಸದೆ ನಿಮ್ಮದೇ ದಾರಿಯಲ್ಲಿ ಮುಂದುವರೆಯುವ ಭಂಡತನ, ಮತ್ತು ಅನಾನಿಮಸ್ ಹೆಸರಲ್ಲಿ ಕಮೆಂಟು ಹಾಕುವ ತಮ್ಮ ಹೇಡಿತನಕ್ಕೆ ಧಿಕ್ಕಾರ. ಮೊದಮೊದಲಿಗೆ ನಾನು ಏನೋ ಒಳ್ಳೆದು ಇವತ್ತಲ್ಲ ನಾಳೆ ಈ ಬ್ಲಾಗಲ್ಲಿ ಬರಬಹುದು ಅಂತ ಅಂದುಕೊಳ್ಳುತ್ತಿದ್ದೆ, ಅದು ಸುಳ್ಳಾಗುತ್ತಿದೆ.
ಕೊನೆಯ ಮಾತು, ಹೀಗೆಲ್ಲ ಕತ್ತಲಲ್ಲಿ ಕೂತು ಬಾಣ ಬಿಡುವ ಬದಲು ಇಲ್ಲಿರುವ ಎಲ್ಲಾ ಅನಾನಿಮಸ್ಸುಗಳೂ ಮತ್ತು ಬ್ಲಾಗು ನಡೆಸುವವರೂ ತಮ್ಮ ಹೆಸರನ್ನು ಹೇಳಿಕೊಂಡರೆ ಉತ್ತಮ ಅಂತ ನನ್ನ ಅನಿಸಿಕೆ. ತಾವು ಯಾರು ಅಂತ ಗೊತ್ತಾದರೆ ತಮ್ಮ ಜತೆ ವಾದ ಮುಂದುವರಿಸಬೇಕೇ ಬೇಡವೇ ಅಂತ ನಿರ್ಧರಿಸಲು ಅನುಕೂಲವಾಗುತ್ತದೆ.
Shree avare...
E jagattinalli yaru kooda kevala SHREE anta hesaru ittukollalla. adaru neevu anonymousgalannu byididdiri.
irali, modalige naanu nimage 'oduvudannu kaliyiri' endu helidde. Ega mattondu salahe 'bareyuvudannu kaliyiri'. udaharanege nimma pratikriyeya modala vakyavannu mattomme odikolli. adaralli 'naanu' ennuva padavannu eradu sala balasiddiri. aduu tappagi...
pleese bareyuvudannu mattu oduvudannu kaliyiri.
Nimma ustad...
ಉಸ್ತಾದರೇ,
ತಮಗೆ ನನ್ನ ಹೆಸರಿನ ಬಗ್ಗೆ ಸಂಶಯವಿದ್ದು ಸಾಕ್ಷಿ ಬಯಸಿದಲ್ಲಿ, ಅದಕ್ಕೆ ಸಂಬಂಧಿತ ಅಫಿದಾವತ್ ತೋರಿಸಲು ನಾನು ಸಿದ್ಧ. ನನ್ನೆದುರಿಗೆ ಬಂದು ಮುಖತಃ ವಾದ ಮಾಡಲು ತಾವು ಸಿದ್ಧರಾಗಿ.
ಕೆಟ್ಟಕೆಟ್ಟದಾಗಿ ಅಲ್ಪಸ್ವಲ್ಪ ಕನ್ನಡದಲ್ಲಿ ಕುಟ್ಟುವುದನ್ನು ತಿಳಿದಿರುವ ನನಗಿಂತ ಇಂಗ್ಲಿಷ್ ಅಕ್ಷರಗಳಲ್ಲಿ ಕನ್ನಡ ಬರೆಯುವ ತಾವೇ ಶ್ರೇಷ್ಠರೆಂದು ತಮ್ಮ ಅನಿಸಿಕೆ, ಅದನ್ನು ನೀವೇ ಇಟ್ಟುಕೊಳ್ಳಿ. ನಾನು ಓದುವುದು, ಬರೆಯುವುದು, ಬದುಕುವುದು ಕಲಿಯುತ್ತಲೇ ಇದ್ದೇನೆ, ಇನ್ನೂ ಕಲಿಯುವುದು ನಿಲ್ಲಿಸಿಲ್ಲ ತಮ್ಮ ಹಾಗೆ. ಆದರೂ ತಮ್ಮ ಸಲಹೆಗೆ ಧನ್ಯವಾದ.
ಸುದ್ದಿಮಾತು ಬ್ಲಾಗಿನ ಕರ್ತೃಗಳೇ, ತಮ್ಮ ದಿವ್ಯಮೌನದ ಮೂಲಕ ಮತ್ತು ಅಡಗಿಯೇ ಬರೆಯುವ ಮೊಂಡುತನದ ಮೂಲಕ ನಿಮ್ಮ ಈ ವೇದಿಕೆಯಲ್ಲಿ ಆರೋಗ್ಯಕರ ಚರ್ಚೆಗಳಿಗೆ ಜಾಗವಿಲ್ಲವೆಂದು ಸಾರಿ ಹೇಳುತ್ತಿದ್ದೀರಿ, ಅದಕ್ಕೂ ಧನ್ಯವಾದ.
- SHREE
ayyayyo yakeenge jagala aadteeri. nimma nera maatugalannu odi santhoshavaayitu. aadare bahala kahiyaagide kelavu vaakyagalu. Nimma abhiprayagalannu - tadwirudhdhavaagiddaroo paravaagilla - olleya maatinalli vyaktapadisidare anaamikavaadaroo paravaagilla, idondu uttama charchaa vedhike aadeetu...
Post a Comment