ದೃಶ್ಯ 1
ನಿಮಗೆ ನೆನಪಿರಬಹುದು. ಕೆಲವು ವರ್ಷಗಳ ಹಿಂದೆ ಮೈಸೂರು ಹತ್ತಿರ ಹಂಗರಹಳ್ಳಿಯಲ್ಲಿ ಕೆಲವರು ಜೀತಕ್ಕಿದ್ದರು. ರೈತ ಸಂಘ ಹಾಗೂ ಇನ್ನಿತರೆ ಪ್ರಗತಿಪರರು ಒಮ್ಮಲೆ ದಾಳಿ ಮಾಡಿ ಸುದ್ದಿ ಬಹಿರಂಗ ಮಾಡಿದರು. ಅಂದು ಎಲ್ಲಾ ಪತ್ರಿಕೆಗಳಲ್ಲಿ ಇದ್ದ ಚಿತ್ರ - ಕಾಲಿಗೆ ಸರಪಳಿ ಸುತ್ತಿಕೊಂಡು ಕೆಲಸ ಮಾಡುತ್ತಿದ್ದ ಬಡವರದು. ಅಮಾನುಷ ಕೃತ್ಯಕ್ಕೆ ಅಂದು ಜನಸಮುದಾಯ ನೊಂದಿತ್ತು. ಆಗಿನ್ನು 24x7 ಚಾನೆಲ್ ಗಳ ಭರಾಟೆ ಇರಲಿಲ್ಲ. ಇದ್ದಿದ್ದರೆ ನಮ್ಮ ಟಿವಿ 9 ರಂಗನಾಥ್ ಭಾರದ್ವಾಜ್ ರ ಸಂಜೆ ವಿಶೇಷಕ್ಕೆ ಫುಲ್ ಮೀಲ್ಸ್.
ದೃಶ್ಯ 2
ಮೈಸೂರಿನ ಸ್ಥಳೀಯ ಪತ್ರಿಕೆಯೊಂದು ಎಲ್ಲಾ ಪತ್ರಿಕೆಗಳಂತೆ ಆ ಸುದ್ದಿಯನ್ನೂ ಪ್ರಮುಖವಾಗಿ ಪ್ರಕಟಿಸಿತ್ತು. ಕೆಲ ದಿನಗಳು ಉರುಳಿದವು. ಅದೇ ಪತ್ರಿಕೆ ಕಚೇರಿಯ ಗೋಡೆಗಳ ಮೇಲೆ ಅಲ್ಲಲ್ಲಿ ಕೆಮರಾಗಳು ಕಣ್ತೆರೆದವು. ಆ ಎಲ್ಲಾ ಕೆಮರಾಗಳು ಸೆರೆಹಿಡಿವ ದೃಶ್ಯವನ್ನು ಸನ್ಮಾನ್ಯ ಮಾಲೀಕ-ಸಂಪಾದಕರು ತಮ್ಮ ಮನೆಯಲ್ಲೇ ಕೂತು ವೀಕ್ಷಿಸುವ ವ್ಯವಸ್ಥೆ ಕೂಡ ಜಾರಿಯಾಯಿತು. ಕಚೇರಿ ವೇಳೆ ಉದ್ಯೋಗಿಗಳು ಕೆಲಸ ಮಾಡ್ತಾರೋ ಇಲ್ಲವೋ ಎಂಬುದರ ಮೇಲೆ ಕಣ್ಣಿಡಲು ಸಂಪಾದಕರು ಇಂತಹ ಯೋಜನೆ ಕಾರ್ಯರೂಪಕ್ಕೆ ತಂದಿದ್ದರು.
ಬಡವರನ್ನು ಜೀತಕ್ಕಿಟ್ಟುಕೊಂಡಿದ್ದ ಜಮೀನ್ದಾರ, ಜೀತದಾಳುಗಳು ಕಣ್ತಪ್ಪಿಸಿ ಪರಾರಿಯಾಗಬಾರದೆಂದು ಸರಪಳಿ ಬಳಸಿದರೆ, ಉದ್ಯೋಗಿಗಳು ಕೆಲಸದ ವೇಳೆ ಕಳ್ಳಾಟ ಆಡಬಾರದೆಂದು ಸಂಪಾದಕ ಕೆಮರಾ ಬಳಸಿದ್ದ. ಜಮೀನ್ದಾರನಿಗೂ, ಸಂಪಾದಕನಿಗೂ ಏನು ವ್ಯತ್ಯಾಸ?
Of course - ಇದು ಯಾವ ಪತ್ರಿಕೆಯಲ್ಲೂ ವರದಿಯಾಗಲಿಲ್ಲ. ನಂತರದ ದಿನಗಳಲ್ಲಿ ಇಂತಹದೇ ವ್ಯವಸ್ಥೆ ಜಾರಿಗೆ ಬಂದದ್ದು ವಿಆರ್ಎಲ್ ಒಡೆತನದ ವಿಜಯ ಕರ್ನಾಟಕ, ವಿಜಯ ಟೈಮ್ಸ್ ದಿನಪತ್ರಿಕೆಗಳ ಬೆಂಗಳೂರು ಕಚೇರಿಗಳಲ್ಲಿ.
ಬಹುಶಃ ಎಲ್ಲಾ ಪತ್ರಕರ್ತನಿಗೂ ಒಂದು ಪ್ರಶ್ನೆ ಕಾಡಿರುತ್ತೆ. "ಊರಿನವರ ಸಂಕಟಾನೆಲ್ಲಾ ಬರೀತೀವಿ. ಆದರೆ ನಮ್ಮ ಕತೆ ಕೇಳೋರು ಯಾರು?"
24x7 ಸುದ್ದಿ ವಾಹಿನಿಗಳು ಬಂದಾಗಿನಿಂದ, ಟಿವಿ ಪತ್ರಕರ್ತರಿಗೆ 24 ಗಂಟೆ ಕೆಲಸ. ರಾತ್ರಿ 12 ಗಂಟೆಗೆ ಪುಟಪರ್ತಿ ದಾರಿ ತಪ್ಪಿದವನಂತೆ ಕೇಂದ್ರ ಗೃಹಮಂತ್ರಿ ಶಿವರಾಜ್ ಪಾಟೀಲ್ ಬೆಂಗಳೂರಿನ ರಾಜಭವನಕ್ಕೆ ಬಂದು ಬಿಡ್ತಾನೆ. ಬಂದವನೋ ಬೇಗ ಹೋಗ್ತಾನೋ. ಇಲ್ಲಿನ ಸಚಿವರನ್ನು ಕರೆಸ್ಕೊಂಡು ಮಾತು, ಮಾತು, ಮಾತು... ನಿದ್ರೆಗೆ ಜಾರಿದ್ದ ಲಕ್ಷ್ನಣ ಹೂಗಾರ್ ಎದ್ದು ಫೋನ್ ರಿಸೀವ್ ಮಾಡಬೇಕು. ಅತ್ತ ಕಡೆ ಪ್ರಶ್ನೆ ಕೇಳೋ ಸುದ್ದಿ ವಾಚಕಿಗೆ ಉತ್ತರ ಹೇಳಬೇಕು. ಅವ ಯಾಕೆ ಬಂದಾನೆ? ರಾಜ್ಯದ ಸಚಿವರನ್ನು ತರಾಟೆಗೆ ತೆಗೆದುಕೊಂಡನೇ? ಏನು ಸಲಹೆ ನೀಡಿರಬಹುದು?
ಅಲ್ಲಾರೀ... ಒಳಗೆ ಹೋದೋರು ಇನ್ನೂ ಹೊರಗೆ ಬಂದೇ ಇಲ್ಲ. ಹೊರಗಿರೋರನ್ನು ಒಳಗೆ ಹೋಗೋಕೆ ಬಿಟ್ಟಿಲ್ಲ. ಅಂದ್ರೂ ಇಷ್ಟೆಲ್ಲಾ ಪ್ರಶ್ನೆಗೆ ಉತ್ತರ ಕೊಡಬೇಕು. ಪಾಪ ಸುದ್ದಿ ವಾಚಕಿ ತಾನೆ ಏನು ಮಾಡಿಯಾಳು, ಆಕೆನೂ ತನ್ನ ಪಾಲಿನ ಅರ್ಧಗಂಟೆ ಮುಗಿಸಬೇಕಲ್ಲ. ಇನ್ನು ಪ್ರಿಂಟ್ ಪತ್ರಿಕೋದ್ಯಮದವರಿಗೂ ಈ ಸಂಕಟ ತಪ್ಪಿದ್ದಲ್ಲ. ಡೆಡ್ ಲೈನ್ ಒಳಗೆ ಏನೋ ಒಂದಿಷ್ಟು ಕೆದಕಿ ಕೊಡಬೇಕು. ಹೀಗೆ ಏನಾದ್ರು ಅವಸರಕ್ಕೆ ವರದಿ ಮಾಡುವಾಗಲೇ ಅವಘಡಗಳಾಗೋದು.
ಸಣ್ಣ ಪುಟ್ಟ ಪತ್ರಿಕಗಳಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಸರಿ ಸಮಯಕ್ಕೆ ಸಂಬಳಾನೂ ಸಿಗೋಲ್ಲ. ಸಿಕ್ಕರೂ ತೀರಾ ಅಗತ್ಯಗಳಿಗೆ ಬೇಕಾದಷ್ಟು ಇರೋಲ್ಲ. ಇದನ್ನೆಲ್ಲಾ ಕೇಳೋರ್ಯಾರು? ಆದರೆ ಪತ್ರಕರ್ತರು ಊರಾಗಿನ ಎಲ್ಲರ ಕತೆ ಕೇಳಬೇಕು. ಬರೀಬೇಕು. ಬರೆದದ್ದರಿಂದ ಒಂದಿಷ್ಟು ಬದಲಾದರೆ ವರದಿಯ impact ಎಂದೇ ಖುಷಿಪಡಬೇಕು. ಅದಕ್ಕೇ ಹೇಳೋದು - ದೀಪದ ಕೆಳಗೇ ಕತ್ತಲು.
Monday, October 6, 2008
Subscribe to:
Post Comments (Atom)
5 comments:
ನಿಜ ಮಿತ್ರರೇ, ನೀವು ಬರೆದಿದ್ದು ವಾಸ್ತವ. ಬಹುಶಃ ಪ್ರತಿಯೊಬ್ಬ ಪತ್ರಕರ್ತನಿಗೂ ಇಂಥ ಅನುಭವ ಒಂದಲ್ಲ ಒಂದು ಸಂಸ್ಥೆಯಲ್ಲಿ ಸಿಕ್ಕಿರುತ್ತದೆ. ಆದರೆ, ನಾವು ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಎಷ್ಟೆಂದರೂ ದೀಪದ ಕೆಳಗೆ (ಬಲ್ಬ್ಗಳು ಬಂದ ಮೇಲೆ, ದೀಪದ ಮೇಲೆ) ಕತ್ತಲು ಇದ್ದಿದ್ದೇ.
- ಚಾಮರಾಜ ಸವಡಿ
vastavik styagalannnu breyuttiddiri. blog odoke kushiyagutte.
ಬ್ಲಾಗ್ ಆಸಕ್ತಿಪೂರ್ಣವಾಗಿದೆ.ಥ್ಯಾಂಕ್ಸ್.’ಸುವರ್ಣಫೋಕಸ್’ನಲ್ಲಿ ನಿನ್ನೆ ಒಂದು ಅಪರೂಪದ ಸಂಗತಿ ಚರ್ಚೆಯಾಗಿತ್ತು. ಆಂದ್ರದ ಅದಿಲಾಲ್ ಬಾದಿನ ಈಶ್ವರನಗರದ ಸಾವಿತ್ರಿಬಾಯಿ ತನ್ನ೭೦ನೇ ಹರೆಯದಲ್ಲಿ ೩ನೇಮಗುವಿನ ತಾಯಿಯಾದರು.ಗಂಡನಿಗೆ ೭೫ ವರ್ಷ.೬೦ನೇ ವಯಸ್ಸಿಗೆ ಮೊದಲ ಮಗುವಿನ ಜನನ.ವೈದ್ಯಜಗತ್ತೂ ಸೇರಿದಂತೆ ಎಲ್ಲರಿಗೂ ಅಚ್ಚರಿ, ವಿಸ್ಮಯ ಉಂಟುಮಾಡಿದ ನಿಸರ್ಗದ ಈ ಚಮಾತ್ಕಾರದ ಬಗ್ಗೆ ನಿರೂಪಕ ಅನಿಲ್ ಭಾರದ್ವಾಜ್ ಅಂತಿಮವಾಗಿ ಹೇಳಿದ್ದೇನು ಗೊತ್ತೆ? ’ಅವರು ಈ ಪ್ರಯತ್ನಕ್ಕೆ ಕೈಹಾಕಬಾರದಿತ್ತು.ಒಂದಷ್ಟು ಯೋಚಿಸಬೇಕಾಗಿತ್ತು’ಎಂದು ಸಲಹೆ ನೀಡಿಬಿಟ್ಟರು. ಇಲ್ಲಿ ಪ್ರಯತ್ನ ಎಂದರೇನು? ಬಡಸಾವಿತ್ರಿಬಾಯಿ ಗಿನ್ನಿಸ್ ದಾಖಲೆ ಮಾಡಲು ಹೊರಟ್ಟಿದ್ದಳೆ?
whatever the comments and views written in this blog is real n fine. really i well come. but why you people scare to come out from dark room. may be you may belong or belive in any 'ISM'. it doesn matter which ISM you belongs to. u hav every right to hav ur own opinion. if u think that ur analysis n opinions are genuine please come out wit ur names. so that we too can support n have ur support. cos u only said that v the reporters though write on several problems, but no one is there to here us.
at last....
nobody can convey their boss. it was said by my boss. i accept it. i think here it wount repeat...
I agree for watever "Anil Bharadwaj" has discussed in his "Focus" program.
He has not said any thing wrong, why u people are making it such a big issue, If they have baby at 70's age think of that baby's future who will take care of it? maximum they can survive for another 10 years so after that what will happen for that child? Keeping this point in mind Reporter "Anil" has said like that.
Friends dont take his point in a negative way, should take things in positive always.
"Anil" we always with u? u r doing best in ur program.
All the best.
Post a Comment