Saturday, October 25, 2008

ಪ್ರೆಸ್ ಕ್ಲಬ್‌ನಲ್ಲಿ ಹನ್ನೆರಡು ದಿನಗಳ ಸೂತಕ

ಬೆಂಗಳೂರು ಪ್ರೆಸ್ ಕ್ಲಬ್ ನೌಕರ ವೀರೇಶ್ ಆತ್ಮಹತ್ಯೆ ಮಾಡಿಕೊಂಡರು. ವಿಶೇಷವೆಂದರೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದೂ ಪ್ರೆಸ್‌ಕ್ಲಬ್‌ನ ಕೊಠಡಿಯೊಂದರಲ್ಲಿ. ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದ ಚಕ್ರವ್ಯೂಹದಲ್ಲಿ ವೀರೇಶ್ ಸಿಕ್ಕಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಂಡರೆ ಮನೆಯವರಿಗೆ ಆಸ್ತಿಯಾದರೂ ಉಳಿಯುತ್ತದೆ ಎಂದು ಭಾವಿಸಿ ಆತ್ಮಹತ್ಯೆಗೆ ಶರಣಾದರು. ಇದಾದ ಎರಡೇ ದಿನಕ್ಕೆ ಪ್ರೆಸ್‌ಕ್ಲಬ್‌ನ ಮತ್ತೊಬ್ಬ ನೌಕರ ಹೃದಯಾಘಾತದಿಂದ ಮರಣ ಹೊಂದಿದರು. ತೀರಿಕೊಂಡ ಇಬ್ಬರೂ ಸಂಭಾವಿತರು. ಕ್ಲಬ್ ಒಡನಾಟವಿರುವ ಎಲ್ಲರಿಗೂ ಇದು ಗೊತ್ತಿರುವ ವಿಷಯ. ಇಬ್ಬರ ಸಾವಿಗೂ ಸುದ್ದಿಮಾತು ಸಂತಾಪ ವ್ಯಕ್ತಪಡಿಸುತ್ತದೆ.
ಇಲ್ಲಿ ಹೇಳಲು ಹೊರಟ ವಿಷಯ ಅದಲ್ಲ. ವೀರೇಶ್ ಸತ್ತ ನಂತರ ಕ್ಲಬ್ ಕ್ಯಾಂಟೀನ್ ಆದಾಯವೇ ಕಡಿಮೆಯಾಗಿದೆಯಂತೆ. ಯಾಕೆಂದರೆ ಕ್ಲಬ್ ಸದಸ್ಯರಲ್ಲಿ ಅನೇಕರು ಅಲ್ಲಿ ತಿಂಡಿ-ಊಟ ಮಾಡುತ್ತಿಲ್ಲ. ಕಾರಣವೇನು ಗೊತ್ತೆ? ಸೂತಕ!
ಹನ್ನೆರಡು ದಿನ ನಾವೇನೂ ತಿನ್ನೋದಿಲ್ಲ ಅಂತ ಕೆಲ ಸದಸ್ಯರು ನೇರವಾಗಿಯೇ ಹೇಳಿದ್ದಾರಂತೆ. ಮತ್ತೆ ಕೆಲವರು ಬಿಜಿ ಕಣ್ರೀ ಅಂತ ಕ್ಲಬ್ ಕಡೆ ತಲೆ ಹಾಕಿಯೂ ನೋಡುತ್ತಿಲ್ಲವಂತೆ. ಕೆಲವರು ಬಂದರೂ ಜಾಣತನದಿಂದ ಕ್ಲಬ್‌ನಲ್ಲಿ ಅಡುಗೆ ಸರಿಯಿಲ್ಲಾರೀ ಎಂದು ಪಕ್ಕದ ಕ್ಯಾಂಟೀನ್‌ನಲ್ಲಿ ಹೊಟ್ಟೆ ತಣಿಸಿಕೊಳ್ಳುತ್ತಿದ್ದಾರಂತೆ.
ಪ್ರೆಸ್ ಕ್ಲಬ್ ಸದಸ್ಯರೆಂದರೆ ಬೇರೆ ಹೇಳಬೇಕಿಲ್ಲ ತಾನೆ? ಎಲ್ಲರೂ ಪತ್ರಕರ್ತರೇ. ಜಗತ್ತಿನ ಆಗುಹೋಗುಗಳನ್ನೆಲ್ಲ ಭಿತ್ತರಿಸುವ ಪತ್ರಕರ್ತರಿಗೆ ಸೂತಕ ಬಡಿದರೆ ಕಥೆ ಏನು?
ಸೋ ಕಾಲ್ಡ್ ಜ್ಞಾನವಂತರು, ಸಕಲ ವಿದ್ಯಾ ಪರಿಣತರು, ಆಧುನಿಕ ಮನಸ್ಥಿತಿಯವರೂ ಆದ ಪತ್ರಕರ್ತರು ಹೀಗೆ ಸೂತಕ, ಜಾತಕ, ಶಕುನ, ಮಾಟ, ಮಂತ್ರ ಅಂತೆಲ್ಲ ಮೌಢ್ಯಕ್ಕೆ ಬಲಿಯಾದರೆ ಅವರು ಪ್ರತಿನಿಧಿಸುವ ಪತ್ರಿಕೆಗಳಲ್ಲಿ ಸಾವಿನ ವಾಸನೆ ಹೊಡೆಯದೆ ಇನ್ನೇನಾಗುತ್ತದೆ?
ರಾಜಕಾರಣಿಗಳ ಮೌಢ್ಯವನ್ನು ಟೀಕಿಸುವ ಪತ್ರಕರ್ತರು ತಾವೇ ಮೌಢ್ಯಕ್ಕೆ ಶರಣಾದರೆ ಅದಕ್ಕೇನು ಅರ್ಥ?
ವೀರೇಶ್ ತೀರಿಕೊಂಡ ೧೧ನೇ ದಿನಕ್ಕೆ ಪ್ರೆಸ್‌ಕ್ಲಬ್‌ನಲ್ಲ ಪೂಜೆ ಮಾಡಿಸಿ ಸೂತಕ ತೆಗೆಯಲಾಗುತ್ತದೆಯಂತೆ!
ನಮ್ಮದೊಂದು ಸಲಹೆ, ಮನೆಯಲ್ಲಿ ಯಾರಾದರೂ ಸತ್ತರೆ ಒಂದು ವರ್ಷ ಯಾವುದೇ ಶುಭಕಾರ್ಯ ಮಾಡಬಾರದು ಎಂದು ಪುರೋಹಿತರು ಹೇಳುತ್ತಾರೆ. ಪ್ರೆಸ್ ಕ್ಲಬ್ ದಯಮಾಡಿ ಇನ್ನೊಂದು ವರ್ಷ ಯಾವುದೇ ಕಾರ್ಯಕ್ರಮ ನಡೆಸದಿರಲಿ!

4 comments:

Anonymous said...

ಎಲ್ಲರ ಬಗ್ಗೆ ಬರೆಯುವ ನೀವು ಕನ್ನಡಿಗರ ಪ್ರಥಮ ವಾಹಿನಿ ಕಸ್ತೂರಿ ಬಗ್ಗೆ ಬರೆಯುತ್ತಿಲ್ಲ ಯಾಕೆ.....?

ಗೋವಿಂದ್ರಾಜ್ said...

we, as common people believe that the journalists always think rationally which proved false with the report from Suddimaatu regarding how the scribes started behaving after the death of a worker in the Press Club for sometimes now. It is not fair on part of journalists for they always criticize others all the time. Thanks for Suddimaatu that has an insight in to the things happening in and around qith its third eye! But, beware, you people are once, journalists not now. You might feel the heat if and when the journo community comes to know who you are. Any way don't care for those until and unless you feel you are not doing wrong.

Anonymous said...

ಪತ್ರಕರ್ತರಲ್ಲೂ ಮೌಢ್ಯಗಳು ತುಂಬಿ ತುಳುಕಾಡುತ್ತಿದೆ. ಇದಕ್ಕೆ ಸುದ್ದಿಮಾತಿನ ಲೇಖನ ಒಂದು ಉದಾಹರಣೆ. ಬೇರೆಯವರಿಗೆ ಬುದ್ಧಿ ಹೇಳುವ ಮೊದಲು ತಾವೆಷ್ಟು ಯೋಗ್ಯ ಎಂಬುದನ್ನು ಪತ್ರಕರ್ತ ಯೋಚಿಸಿ ನಂತರ ಬರೆದರೆ ಉತ್ತಮ. ಇಲ್ಲದಿದ್ದಲ್ಲಿ ಆ ವಿಚಾರವನ್ನು ಮುಟ್ಟದಿರುವುದೇ ಲೇಸು.

Anonymous said...

ವಿರೋಧ ಪಕ್ಷವನ್ನು ಆಡಳಿದ ಪಕ್ಷದ ಕಾವಲು ನಾಯಿ ಎಂದೆ ಕರೆಯುತ್ತಾರೆ.ಹಾಗೆ ತಾವು ಮಾದ್ಯಮದ ವಿರುದ್ದ ಕಾವಲು ನಾಯಿಗಿಂತ ಹೆಚ್ಚಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿರುವದು ನಿಜಕ್ಕೂ ಎಮ್ಮೆಯೇ.........ಸರಿ ತಮ್ಮ ಬರವಣಿಕೆಯನ್ನು ನೋಡಿದರೆ ಹತ್ತಾರು ವರ್ಷಗಳಿಂದ ಅನಂತಮೊರ್ತಿ,,,, ಗೌರಿ ಲಂಕೇಶರಂಥಹ ಪುಣ್ಯವಂತರ ಸಂಘ ತಮಗೆ ಸಿಕ್ಕಿದಂತಿದೆ,,, ಬ್ರಾಮಣರಲ್ಲದ ಅತವಾ ಅಂಥವರ ಮಾಲಿಕತ್ವದಲ್ಲಿರುವ ನಿಮ್ಮ ಕೋಮಿನ ಕಸ್ತೂರಿ ವಾಹಿನಿಯಲ್ಲಿ ಅಮಾಯಕ ಹೆಣ್ಣುಮಕ್ಕಳನ್ನು ಅಲ್ಲಿನ ಸಿಬ್ಬಂಧಿಯೊಬ್ಬ ತಿಂದು ಹಾಕುತಿದ್ದಾನೆ..... ಅದರ ಬಗ್ಗೆ ದೂರು ನಿಡಿದರು ಅಲ್ಲಿನ ಹಿರಿಯ ಸೋಕಲ್ಡ ಬುದ್ದಿವಂತರು ತಲೆಗೆ ಹಾಕಿಕೊಳ್ಳುತಿಲ್ಲಾ,,, ತಾವು ಜಾತಿಯ ಪ್ರಿತಿ ಇಲ್ಲ