Thursday, October 9, 2008

ನಾಡಹಬ್ಬ: ಇದು ಯಾರ ಹಬ್ಬ?


ಮೈಸೂರಿನಲ್ಲಿ ಅದ್ದೂರಿ ದಸರಾ ಮುಗಿದಿದೆ. ಆನೆ ಮೇಲೆ ಕ್ವಿಂಟಾಲ್ ತೂಕದ ಮರಿರಾಜ ಕೂತಿದ್ದರೆ ಅದು ರಾಜ ದಸರಾ. ಅದೇ ಮರಿರಾಜನ ಸ್ಥಾನದಲ್ಲಿ ಚಾಮುಂಡಿ ಪ್ರತಿಮೆ ಇದ್ದರೆ ಅದು ಪ್ರಜಾ ದಸರಾ. ಮರಿರಾಜನ ಮೆರವಣಿಗೆ ಅರಸೊತ್ತಿಗೆ ಪ್ರತಿನಿಧಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ, ಚಾಮುಂಡಿ ಮೆರವಣಿಗೆ ಪ್ರಜಾಪ್ರಭುತ್ವ ಪ್ರತಿನಿಧಿಸುತ್ತದೆಯೇ?
ಖಂಡಿತ ಇಲ್ಲ.
ಚಾಮುಂಡಿ ಒಂದು ವರ್ಗದ ದೇವತೆ. ಆಕೆಯನ್ನು ಅಂಬಾರಿ ಮೇಲೆ ಊರತುಂಬ ಮೆರವಣಿಗೆ ಮಾಡಿದರೆ ಅದು 'ನಾಡಹಬ್ಬ' ಹೇಗಾದೀತು? ಕೇವಲ ಹಿಂದೂಗಳು ಈ ನಾಡಿನಲ್ಲಿದ್ದಾರ? ಬಹುಸಂಖ್ಯೆಯಲ್ಲಿರುವ 'ಅಹಿಂದು'ಗಳಿಗೆ ಈ ನಾಡಹಬ್ಬದಲ್ಲಿ ಪ್ರಾತಿನಿಧ್ಯ ಇಲ್ಲವೇ?
ಕೆಲ ವರ್ಷಗಳ ಹಿಂದೆ ಚಾಮುಂಡಿ ದೇವಿ ವಿಗ್ರಹವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವುದರ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ಆದರೆ ಆ ದನಿಗೆ ಸೂಕ್ತ ಮನ್ನಣೆ, ಬೆಂಬಲ ಸಿಗಲಿಲ್ಲ. ಇದೇ ಕಾರಣಕ್ಕೆ ಕೆಲ ಪ್ರಾಜ್ಞರು, ಪ್ರಗತಿಪರರು ಈ ಸೋಕಾಲ್ಡ್ ನಾಡಹಬ್ಬ ಸಂಭ್ರಮದಿಂದ ದೂರ ಉಳಿದಿದ್ದಾರೆ.
ನಾಡಹಬ್ಬ ಮಾತ್ರವಲ್ಲ, ಕನ್ನಡ ರಾಜ್ಯೋತ್ಸವವೂ ಹೀಗೆ. ಭುವನೇಶ್ವರಿ ಎಂಬ ದೇವತೆಗೆ ಕನ್ನಡ ಮಾತೆ ಎಂಬ ಬಿರುದು ಪ್ರದಾನವಾಗಿದೆ. ರಾಜ್ಯೋತ್ಸವ ಸಂದರ್ಭಗಳಲ್ಲಿ. ಆಕೆಯದೇ ಮೆರವಣಿಗೆ. ಒಂದು ನಾಡು ತನ್ನ ಗುರುತನ್ನು ಒಂದು ಹಿಂದೂ ದೇವಿ ವಿಗ್ರಹದಲ್ಲಿ ಕಂಡುಕೊಳ್ಳುವುದು ಸಂಕುಚಿತ ಮನೋಭಾವವಲ್ಲದೆ ಮತ್ತೇನು?
ಇಷ್ಟೆಲ್ಲಕ್ಕೂ ಕಾರಣ, ಈ ಸಮುದಾಯದಲ್ಲಿ ಆಳವಾಗಿ ಬೇರೂರಿವ ಒಂದು ನಂಬಿಕೆ - 'ಭಾರತ ಒಂದು ಹಿಂದೂ ರಾಷ್ಟ್ರ'. ಇಲ್ಲಿಯ ಮುಸಲ್ಮಾನರು, ಕ್ರಿಶ್ಚಿಯನ್ನರು ಹಿಂದೂ ನೆಲದ ಅನ್ನತಿನ್ನಲೆಂದೇ ಬಂದವರು ಎಂಬ ಧೋರಣೆ ಗಟ್ಟಿಯಾಗಿದೆ. ಚಿದಾನಂದಮೂರ್ತಿ, ಯಡಿಯೂರಪ್ಪ, ಮಹೇಂದ್ರಕುಮಾರ್, ಆರ್ಎಸ್ಎಸ್ ನವರು..ಇವರೆಲ್ಲಾ ಹೀಗೇ ಎಂದುಕೊಂಡವರು.
ಮೊಟ್ಟಮೊದಲನೆಯದಾಗಿ ಇವರೆಲ್ಲ ಒಪ್ಪಿಕೊಳ್ಳಬೇಕಾಗಿರುವುದು - ಭಾರತ ಹಿಂದೂ ರಾಷ್ಟ್ರವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶ ಚುಕ್ಕಾಣಿ ಹಿಡಿಯುವವರು ಆಯ್ಕೆಯಾಗುತ್ತಾರೆ. ಅವರು ಯಾವ ಒಂದು ಧರ್ಮದ ನೇತಾರರಂತೆ ವರ್ತಿಸುವಂತಿಲ್ಲ. ಮತ್ತು ಈ ಹೊತ್ತಿನ ಧರ್ಮ ಗ್ರಂಥ - ಭಾರತ ಸಂವಿಧಾನ. ಭಗವದ್ಗೀತೆ, ಬೈಬಲ್, ಕುರಾನ್, ಗ್ರಂಥಸಾಹೇಬ..ಎಲ್ಲವೂ ಅದೇ. ಮುಂದಿನ ದಿನಗಳಲ್ಲಾದರೂ, ನಾಡಹಬ್ಬ ಎಂಬ ಕಲ್ಪನೆ ಬದಲಾಗಲಿ. ಈ ನಾಡು ನಮ್ಮದು ಕೂಡಾ ಎಂಬ ಭಾವನೆ ಎಲ್ಲರಲ್ಲೂ ಮೂಡುವಂತಾಗಲಿ.
(ಚಿತ್ರಕೃಪೆ: ಕನ್ನಡಪ್ರಭ)

3 comments:

Anonymous said...

write up is foolishness.....modalu hindu bahulya desh ittu idu heegagi sahajvagi chamundi devateya meravanige...idannu muslmanaru kuda christians kooda opkoltare.....neevu unnecessary problems create mado write up baritira.....secualr doesnt mean shun the hindu identity....atirekigalri neevu.chamundi devte na puje gu nimma virodha huchutan ashte.nimmanthavr intha unpractical rhetoric bajrangdal and vijaykarnatakadanthvarige aharvagatte avarige shakti tumbute

Anonymous said...

ತೀರಾ ಇಷ್ಟು ಸಂಕುಚಿತವಾಗಬಾರದಿತ್ತು.

ಅದೆಷ್ಟೋ ವಷಱಗಳಿಂದ ನಡೆದು ಬಂದಿರುವ ಾಚರಣೆಯ ಹಿಂದಿರುವ ಲಕ್ಷಾಂತರ ಜನರ ನಂಬಿಕೆ,ಸಂಭ್ರಮ,ಸಡಗರದ ಕಿಂಚಿತ್ತು ಅರಿವು ನಿಮಗಿಲ್ಲ.

ಒಂದು ಕಾಲದಲ್ಲಿ ಿಡೀ ನಾಡು, ಯಾವುದೇ ಭೇಧವಿಲ್ಲದೆ ಆರಾಧಿಸಿಕೊಂಡು ಬಂದತಹ ದೈವ ನಿಮಗೆ ಒಂದು ವಗಱದ ದೇವರಾಗಿ ಕಾಣುತ್ತದೆ.ಪ್ರತಿ ವಷಱವೂ ಮೈಸೂರಿನಲ್ಲಿ ದಸರಾಗೆ ಸೇರುವ ಜನ ನಿಮ್ಮ ಕಣ್ಣಿಗೆ ಜನಿವಾರ ಹಾಕಿ ಅಗ್ನಿ ಕುಂಡದ ಸುತ್ತ ಕುಳಿತವರಂತೆಯೋ, ಮಂಡಿಯೂರಿ ಕುಳಿತು ಪ್ರಾಥಱಿಸುವವರಂತೆಯೋ ಕಾಣುತ್ತಾರೆ.

ಬರೀ ಹಳ್ಳಿಗಳೇ ತುಂಬಿರುವ ನಮ್ಮ ದೇಶದಲ್ಲಿ,ಪ್ರತೀ ಹಳ್ಳಿಗೊಂದು ಗ್ರಾಮದೇವತೆ, ಅದಕ್ಕೊಂ್ಉ ಗುಡಿ, ಕಾಲ ಕಾಲಕ್ಕೆ ುತ್ಸವ,ಮೆರವಣಿಗೆ,ಎಂಬ ಮೇಲ್ನೋಟಕ್ಕೆ ಕಾಣುವ ಅಂಶಗಳಷ್ಟೇ ಅಲ್ಲದೆ ಇಡೀ ಸಮುದಾಯವನ್ನು ಒಟ್ಟು ಮಾಡಿಸುವ ಒಂದು ಶಕ್ತಿಯಾಗಿ ನಿಮಗೆ ಕಾಣುವುದೇ ಇಲ್ಲ.ಅದೇ ಹಳ್ಳಿಗಳ ವಿಸ್ತೃತ ರೂಪ ಈಗ ನಾವು ಕಾಣುತ್ತಿರುವ ದಸರಾ.

ಮೇಲ್ನೋಟಕ್ಕೆ ನಾಡಹಬ್ಬ ನಿಮ್ಮ ಬರಹದ ಕೇಂದ್ರಬಿಂದು ಆಗಿದ್ದರೂ,ಚಿದಾನಂದಮೂರ್ತಿ, ಯಡಿಯೂರಪ್ಪ, ಮಹೇಂದ್ರಕುಮಾರ್, ಆರ್ಎಸ್ಎಸ್ ಇವರ ಮೇಲಿನ ನಿಮ್ಮ ಸಿಟ್ಟಿಗೆ, ಅನಾವಷ್ಯಕವಾಗಿ ಹಬ್ಬದ ಪ್ರಸ್ತಾಪ ಮಾಡಿದ್ದೀರಿ ಎಂಬಂತೆ ತೋರುತ್ತದೆ.

ಈ ರೀತಿಯ ಯೋಚಿಸುವ ನಿಮ್ಮ 'ಪ್ರಾಜ್ಞ' ಮನಸ್ಸಿಗೂ ಈ ಮೇಲಿನವರಿಗೂ ಯಾವ ವ್ಯತ್ಯಾಸವೂ ಕಾಣುವುದಿಲ್ಲ.

ನಿಮ್ಮ ಕಲ್ಪನೆಯ ನಾಡಹಬ್ಬಕ್ಕೆ, all the best.
ಆ ಸಂಭ್ರಮಕ್ಕೂ ಇಂದಿನಷ್ಟೇ ಜನ ಸಾಕ್ಷಿಯಾಗಲಿ.

Anonymous said...

ಒಂದು ರೀತಿ ನೀವು ಹೇಳೋದು ಸರಿ..

ಬಾರತ ಒಂದು ಸೆಕ್ಯುಲರ್‍ ದೇಶ...


ಆದರೆ ಒಂದು ವಿಶಯ.. ಚಾಮುಂಡಿ, ಬುವನೇಶ್ವರಿ ಇದೆಲ್ಲ ಹಿಂದು ದೇವತೆಗಳು ಆಗಿರೋದು ೧೯ನೇ ಶತಮಾನದಲ್ಲಿ..

ಮದ್ದೂರಿನ ದೇವರು ಮದ್ದೂರಮ್ಮ, ಹೆಬ್ಬಾಲೆಯ ದೇವರು ಹೆಬ್ಬಾಲಮ್ಮ ಹೀಗೆ ಊರಿಗೊಂದು ಊರದೇವರು/ಗ್ರಾಮದೇವತೆ ಎಂಬ ನಂಬಿಕೆ ಹಿಂದುಗಳದ್ದಲ್ಲ.. ಅದು ಕನ್ನಡಿಗರದ್ದು.. ಹಿಂದು ಸಂಸ್ಕೃತಿಯಲ್ಲ ಅದು ಕನ್ನಡ ಸಂಸ್ಕೃತಿ...

ಸಂಕ್ರಾಂತಿ ಹಿಂದುಗಳ ಹಬ್ಬ ಎಂದು ಕರೆಸಿಕೊಂಡರು ಅದರಲ್ಲಿ ಎಳ್ಳುಬೀರೋದು ಬರೀ ಕನ್ನಡಿಗರು ತಾನೆ....


’ಹಿಂದು ದರ್ಮ’ಎನ್ನುವ ಬಳಕೆ ೧೮-೧೯ನೇ ಶತಮಾನದ್ದು.. ಹೊರತು ಅದರ ಹಿಂದೆ ಎಲ್ಲಿತ್ತು