Saturday, November 1, 2008

ನಮ್ಮದು ಯಾವ ಪಕ್ಷ?

ನೀವು ಕಾಂಗ್ರೆಸ್ ನವರು. ಇಲ್ಲಾ ಜೆಡಿಎಸ್ ಇರಬೇಕು - ಹೀಗೆ ಕೆಲವರು ಲೆಕ್ಕ ಹಾಕಿದ್ದಾರೆ. ಮತ್ತೆ ಕೆಲವರು - ನಿಮ್ಮದು ಯಾವ ಪಕ್ಷ ಎಂದು ನೇರಾ ನೇರಾ ರಾಜಕೀಯದ ಮಾತಿಗಿಳಿದಿದ್ದಾರೆ. ಸಾಮಾಜಿಕ, ರಾಜಕೀಯ ವಿಚಾರಗಳಿಗೆ ಪ್ರತಿಕ್ರಿಯಿಸುವವರನ್ನು ಹೀಗೆ ಒಂದು ಪಕ್ಷದ ಚೌಕಟ್ಟಿಗೆ ಹಾಕಿ ಆ ಫ್ರೇಮ್ ನಡಿಯಲ್ಲೇ ನೋಡುವ ಗುಣ ಈ ನೆಲದ ಮಣ್ಣಿನಲ್ಲೇ ಇದೆ. ಯಾರನ್ನೂ ಹಾಗೇ ಸುಮ್ಮನೆ ಬಿಡುವುದಿಲ್ಲ. ಸುದ್ದಿಮಾತು ಬಳಗಕ್ಕೆ ಆದದ್ದೂ ಅದೇ.
ಇತ್ತೀಚೆಗೆ ಇಲ್ಲಿನ ಕೆಲ ಬರಹಗಳಿಗೆ ಪ್ರತಿಕ್ರಿಯಿಸಿದವರು - ಬ್ಲಾಗ್ ಅನ್ನು ಕಾಂಗ್ರೆಸ್ ಮುಖವಾಣಿ ಎಂದು ಟೀಕಿಸಿದ್ದಾರೆ. ಬಿಜೆಪಿ ನೇತೃತ್ವ ಸರಕಾರದ ಕೆಲವು ನಡೆಗಳನ್ನು ಟೀಕಿಸಿದಾಗ ನಮ್ಮನ್ನು 'ಬಿಜೆಪಿ ವಿರೋಧಿಗಳು' ಎಂದು ಹೇಳುವ ಉದ್ದೇಶ ಇಟ್ಟುಕೊಂಡು - 'ಕಾಂಗ್ರೆಸ್ ನವರು' ಎಂದು ದೂರಿದ್ದಾರೆ. ನಮ್ಮದೊಂದು ಪ್ರಶ್ನೆ - ಯಾವ ಪಕ್ಷಕ್ಕೆ ಸೇರದೆಯೂ, ಆಡಳಿತದಲ್ಲಿರುವವರ ಕೃತ್ಯಗಳನ್ನು ಟೀಕಿಸುವುದು ಸಾಧ್ಯವಿಲ್ಲವೇ? ಟೀಕಿಸುವ ಎಲ್ಲರಿಗೂ ಒಂದು ರಾಜಕೀಯ ನೆಲೆ ಇರಲೆಬೇಕೆ? ಒಂದು ಕ್ಷಣ ನಮ್ಮ ಓದುಗರು - ಸಾಮಾನ್ಯ ಪ್ರಜೆಗಳಾಗಿ ಇವರು ಟೀಕಿಸುತ್ತಿರಬಹುದಲ್ಲ - ಎಂದು ಯಾಕೆ ಯೋಚಿಸುವುದಿಲ್ಲ. ಯಾವ ರಾಜಕೀಯ ಪಕ್ಷಗಳೆಡೆಗೂ ಒಲವಿಲ್ಲದೆ, ಯಾವ ಪಕ್ಷಗಳ ಬಲವಿಲ್ಲದೆ ಕೋಟ್ಯಂತರ ಜನ ಈ ನಾಡಿನಲ್ಲಿದ್ದಾರೆ ಎಂಬುದನ್ನು ನಾವೆಲ್ಲರೂ ಅರಿತುಕೊಳ್ಳಬೇಕಿದೆ.
ಪತ್ರಿಕೆಗಳು ಖಾಯಂ ವಿರೋಧ ಪಕ್ಷ ಎಂಬ ಮಾತಿದೆ. ಹಾಗೆ ಸುದ್ದಿಮಾತಿಗೆ ಒಂದು ಪಕ್ಷದ ಹಣೆ ಪಟ್ಟಿ ಕಟ್ಟಲೇಬೇಕು ಎಂಬ ಉಮ್ಮೇದಿ ಇರುವವರಿಗೆ ಒಂದು ಮಾತು - ನಮ್ಮದು ಖಾಯಂ ವಿರೋಧ ಪಕ್ಷ. ಆಡಳಿತಕ್ಕೆ ಯಾರೇ ಬರಲಿ, ವಿರೋಧ ಪಕ್ಷಗಳ ಸಾಲಿನಲ್ಲಿ ನಾವೂ ಇರುತ್ತೇವೆ. ಅಂದಹಾಗೆ ವಿರೋಧ ಪಕ್ಷದ ಕೆಲಸ ಕೇವಲ ವಿರೋಧ ಮಾಡುವುದಲ್ಲ ಎಂಬ ಪ್ರಜ್ಞೆಗೆ ನಾವೂ ಬದ್ಧರು.
ಮತ್ತೆ ಕೆಲವರು ತಮ್ಮ ಅಸಹಾಯಕತೆಯನ್ನು ಅಸಂಬದ್ಧ ಪದಗಳಿಂದ ಟೀಕಿಸುವ ಪ್ರಯತ್ನ ಮಾಡಿದ್ದಾರೆ. ಅವರ 'ಅಕ್ಷರ ಜ್ಞಾನ'ಕ್ಕೆ ನಮ್ಮ ಬಹುಪರಾಕು ಎಂದಷ್ಟೇ ಹೇಳಲು ಬಯಸುತ್ತೇವೆ.
ಇತ್ತೀಚೆಗೆ ಕೆಲವರ ಪ್ರತಿಕ್ರಿಯೆಗಳು ಆರೋಗ್ಯಕರ ಚರ್ಚೆಗೆ ನಾಂದಿ ಹಾಡಿದ್ದವು. ನಮ್ಮ ಉದ್ದೇಶವೂ ಅದೇ. ಹೆಚ್ಚು ಚರ್ಚೆ ಆದರೆ, ನಮ್ಮೊಳಗಿನ ಗೊಂದಲಗಳು ಸ್ಷಷ್ಟವಾಗುತ್ತವೆ, ಯೋಚನಾ ಲಹರಿಗೆ ಒಂದು ದಿಕ್ಕು ದಕ್ಕುತ್ತದೆ. ಹೀಗೆ ಚರ್ಚೆ ನಡೆಸಿದವರಿಗೆಲ್ಲ ಸುದ್ದಿಮಾತು ಬಳಗದ ಅಭಿನಂದನೆಗಳು.

8 comments:

Anonymous said...

tikisuvvru hege iddru tikisutfttare. nivu adkke ede gudadae munndeyiri.bharaha cennagide. arogyakara charche brli anda hage ella suddi vahinigala bgge brediddira kasthuri tv bgge nimma vishleshane ge kayutteve..

cmariejoseph.blogspot.com said...

ಇಂದಿನ ಸಂದರ್ಭದಲ್ಲಿ ಪತ್ರಿಕೆಗಳು ಆಡಳಿತ ಪಕ್ಷಗಳ ಕಾಲುನೆಕ್ಕುತ್ತಾ ಬಾಲ ಅಲ್ಲಾಡಿಸಿಕೊಂಡಿರುವುದನ್ನು ನೋಡುತ್ತಲೇ ಇದ್ದೇವೆ. ನಾಚಿಕೆ ತರುವ ಇಂಥ ಸನ್ನಿವೇಶದಲ್ಲಿ ಸುದ್ದಿಮಾತು ಸರ್ಕಾರದ ನಡೆಗೊಂದು ಚಾಟಿಯಾಗಿ ಹೊರಹೊಮ್ಮಿದೆ ಮಾತ್ರವಲ್ಲ ನಮ್ಮಂಥವರ ಧ್ವನಿಯಾಗಿದೆ.
ಸಿ ಮರಿಜೋಸೆಫ್

Anonymous said...

ಶಾಶ್ವತ ವಿರೋಧ ಪಕ್ಷ ಎನ್ನುವ ನಿಲುವೂ ಅಷ್ಟೊಂದು ಸರಿಯಲ್ಲ;ಜನಪರ ಆರೋಗ್ಯ್ರಕರ ನಿಲುವಿರಬೇಕು.ಹೊಗಳಿದರೂ ಟೀಕಾರಹಿತವಾಗಿರುತ್ತದೆ ಎಂದೇನಿಲ್ಲ.ಹೇಳುವುದರಲ್ಲಿ ಖಚಿತದೆ ಇದ್ದರೆ ಸಾಕು

Anonymous said...

ನೀವು ಟೀಕಿಸುವ ಭರದಲ್ಲಿ ಎಲ್ಲೋ ಒಂದ್ಕಡೆ ಒಂದು ಪಂಥಕ್ಕೆ ಸೇರ್ತೀರೇನೋ ಎಂಬ ಅನುಮಾನವೇ ಈ ಟೀಕೆಗಳಿಗೆ ಕಾರಣ. ನನ್ನ ಸಲಹೆ ಏನೆಂದರೆ ಯಾರನ್ನೂ ವೈಯಕ್ತಿಕವಾಗಿ ಟೀಕಿಸಲು ಬ್ಲಾಗನ್ನು ಬಳಸಬೇಡಿ. ವಿಮರ್ಶೆ ಏನಿದ್ದರೂ ವಿಷಯಕ್ಕೆ ಮಾತ್ರ ಸೀಮಿತವಾಗಿರಲಿ. ಉದಾ..ನಿಮ್ಮ ಹಿಂದಿನ ಪೋಸ್ಟ್ ಗಳಲ್ಲಿ ಭೈರಪ್ಪ, ವಿ.ಕ, ಪ್ರಜಾವಾಣಿ,ಮೇಲ್ವರ್ಗ,ಬಿ.ಜೆ.ಪಿ ಕುರಿತ ಟೀಕೆಗಳು...ಇದನ್ನು ಬರೆದ ನನ್ನನ್ನು ಈ ಪಂಥಕ್ಕೆ ಸೇರಿಸಿ ವೈಯಕ್ತಿಕ ಟೀಕೆ ಮಾಡುವುದು ಬೇಡ. ಭೈರಪ್ಪ, ವಿ.ಕ, ಪ್ರಜಾವಾಣಿ,ಮೇಲ್ವರ್ಗ,ಬಿ.ಜೆ.ಪಿ ಕುರಿತು ನನಗೂ ಆಕ್ಷೇಪಗಳಿವೆ. ಹಾಗೆಯೇ ದಲಿತ, ಶೋಶಿತ ಎಂದು ಹೇಳಿಕೊಳ್ಳುವವರೂ ಹಣದ, ಅಧಿಕಾರದ ಮದದಿಂದ ವರ್ತಿಸುವವರು ಇದ್ದಾರೆ. ನಿಮ್ಮ ಬರೆಹಗಳು ನೈಜ ಬಡ ಜಾತಿ ಇಲ್ಲದ ಪ್ರಜೆಗಳನ್ನು ತಲುಪಿದರೆ ಸಾಕು..
ನಿಮ್ಮ ಪ್ರಯತ್ನಕ್ಕೆ ನನ್ನ ಸಹಕಾರ ಇದ್ದೇ ಇದೆ.
--ಮಾದೇಶ್.

Anonymous said...

very good, keep it up...

Anonymous said...

I have been reading Suddimaatu for the last many a days for it is voicing the voiceless. You are doing an excellent job through it. But, in a way it seems that you are mostly targetting some media like Prajavani and its sisterly publication magazines. But, my question is:have not you been observing Kannada Prabha, which has been, depsite giving good news stories glorifying the stories of suspected terrorists and stories related to conversion for the last many a days. But, you are only referring the stories that would help you to defend your stand. Do you agree..?

Anonymous said...

ನಿಮಗೆ ವಿಮರ್ಶಾ ಪ್ರಜ್ಞೆ ಇದೆ, ಪ್ರಶ್ನಿಸುವ ದಿಟ್ಟ ಮನಸ್ಸಿದೆ ಎಂದರೆ ನೀವು ಇಂತಹವರೇ ಎಂದು ಹಣೆಪಟ್ಟಿ ಕಟ್ಟಲು ಎಲ್ಲರೂ ಸಿದ್ಧ. ನಿಮ್ಮನ್ನು ಕಾಂಗ್ರೆಸ್ ಪಕ್ಷ ಎಂದು ಹೇಳಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಔಟ್ಲುಕ್ ನ ಪ್ರಧಾನ ಸಂಪಾದಕರಾದ ವಿನೋದ್ ಮೆಹ್ತಾರನ್ನು ಇದೇ ಬಳಗ ಕಾಂಗ್ರೆಸ್ ಎಂದು ಬ್ರಾಂಡ್ ಮಾಡಿ ೧೩ ವರ್ಷ ಕಳೆದಿದೆ. ವಿನೋದ್ ಮೆಹ್ತಾ ನಿಮ್ಮಂತೆಯೇ ಪ್ರಶ್ನಿಸುವ ಮನೋಭಾವ ಇರುವವರು. ಅಲೆಯ ಜೊತೆಗೆ ಸಾಗುವುದು ಕಷ್ಟವೇನಲ್ಲ. ವಿರುದ್ಧ ಈಜುವುದು ಸುಲಭವೂ ಅಲ್ಲ. ಹಾಗಾಗಿಯೇ ನಿಮ್ಮ ಪ್ರಯತ್ನ ಅಲ್ಲಿಲ್ಲಿ ಹಳಿ ತಪ್ಪಿದ್ದರೂ ಸ್ವಾಗತಾರ್ಹ.

Anonymous said...

Vinod Mehta avarannu kooda ugrahinduvaadigalu Congress pakshada stooge anta kareyuttaare nija. Adu avara manovirkruti. Aadare Vinodh Mehtara jate namma suddimaatina balagavannu holike maadi hogali honna shoolakkerisabedi. Ee balagakke vimarsha prajne ide, aadare adu nishpakshapaati ennisuva nittinalli saaguttilla. Ondu extreme ge innondu extreme niluve saro ennuva manobhaavane iddante kaanuttade. Nodona....