Monday, October 20, 2008

ಹಾಗಾದ್ರೆ ಯಾರವರು?

ಇಂಥದೊಂದು ಅನುಮಾನ ಪತ್ರಕರ್ತರ ವಲಯದಲ್ಲಿ ಸುಳಿದಾಡುತ್ತಿದೆ. ಕಳೆದ ಗುರುವಾರ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಮತಾಂತರ ಕುರಿತಂತೆ ಅವರು "ಅಧ್ಯಯನ" ನಡೆಸಿ ಬರೆದ ಲೇಖನವನ್ನು ವಿಜಯ ಕರ್ನಾಟಕ ಪ್ರಕಟಿಸಿತು. ಗಮನಿಸಬೇಕಾದ ಸಂಗತಿ. ಲೇಖನದ ಜತೆ ಕಾದಂಬರಿಕಾರರ ಫೋಟೋ ಕೂಡ ಪ್ರಕಟವಾಯಿತು.
ಶುಕ್ರವಾರ ಜಾನ್ ಸಿಕ್ವೇರಾ ಎಂಬ "ಪ್ರಗತಿ ಪರ ಚಿಂತಕರು" ಸೋನಿಯಾ ಗಾಂಧಿಯನ್ನು ಎಗ್ಗಾ ಮುಗ್ಗಾ ಹೊಗಳಿ, ಭೈರಪ್ಪರನ್ನು ತೆಗಳಿ ಲೇಖನ ಬರೆದರು. ಆ ಲೇಖಕರ ಮೂಲ ಕಾಣಲಿಲ್ಲ.
ಭಾನುವಾರ ರವಿಬೆಳೆಗೆರೆ ಲೇಖನ ಪ್ರಕಟವಾಯ್ತು. Ofcourse, ಅವರ ಭಾವಚಿತ್ರದೊಂದಿಗೆ. ಒಂದೇ ದಿನದ ನಂತರ ರವಿ ಲೇಖನಕ್ಕೆ ಪ್ರತಿಕ್ರಿಯೆ- ರಾಮಚಂದ್ರಶೆಣೈಯವರಿಂದ - ಅವರದೂ ಭಾವಚಿತ್ರ ಇಲ್ಲ!
ಸದ್ಯದ ಪ್ರಶ್ನೆ- ಯಾರು ಈ ಜಾನ್ ಸಿಕ್ವೇರಾ ಹಾಗೂ ರಾಮಚಂದ್ರ ಶೆಣೈ? ಶೆಣೈ ಬರಹ ಓದಿದವರಿಗೆ ಅದನ್ನು ಬರೆದವರು ಪ್ರತಾಪಸಿಂಹ ಇರಬಹುದೇ ಎನ್ನುವ ಅನುಮಾನ ಬರದಿರಲಾಗದು. ಜಾನ್ ಸಿಕ್ವೇರಾ ಕೂಡ ವಿ.ಕ.ಸೃಷ್ಟಿ ಯಾಕಿರಬಾರದು! ಪ್ರತಾಪ ಸಿಂಹ ಬೇರೆಯವರ ಹೆಸರಲ್ಲಿ ಓದುಗರ ಪತ್ರ ಬರೆದು ತಾನೇ ಪ್ರಕಟಿಸುವುದು ವಿ.ಕ. ಬಳಗಕ್ಕೆ ಗೊತ್ತಿರುವ ಸಂಗತಿಯೇ. ಸಿಂಹ ತನ್ನ ಆಪ್ತ ಗೆಳೆಯರ ಬಳಿ ಈ ಬಗ್ಗೆ ಒಪ್ಪಿಕೊಂಡ ಉದಾಹರಣೆಗಳೂ ಇವೆ. ಸಂವಾದವನ್ನೂ ವಿಶ್ವೇಶ್ವರಭಟ್ಟರು ಪಕ್ಕಾ ಲೆಕ್ಕಾಚಾರದಿಂದಲೇ ಮುನ್ನಡೆಸುತ್ತಿದ್ದಾರೆ. ವ್ಹಾ ಭಟ್ಟರೆ! ಬಹುಪರಾರಕು ನಿಮಗೆ!

12 comments:

ಕರಣಂ ರಮೇಶ್ said...

ವಿಶ್ವೇಶ್ವ್ರರ ಭಟ್ಟರ ವಿಜಯ ಕರ್ನಾಟಕ ಎಂಬ ಗರಡಿ ಮನೆಯಲ್ಲಿ ಇದೆಲ್ಲಾ ಇದ್ದದ್ದೇ ಬಿಡಿ. ಈ ರೀತಿಯ ವರಸೆಗಳು ಆಗಾಗ್ಗೆ ಇಣುಕುತ್ತಲೇ ಇರುತ್ತವೆ. ಹೆಸರು ಮಾದಿದ್ದೇವೆಂಬ ಕಲ್ಪನೆಯಲ್ಲಿ ಬೇನಾಮಿ ಹೆಸರಿನಲ್ಲಿ ಬರೆಯುತ್ತಲೇ ಇರುತ್ತಾರೆ ಎಂಬುದು ವಿಜಯ ಕರ್ನಾಟಕದ ಹಾದಿ ಬಲ್ಲವರಿಗೆ ಹೊಸತಲ್ಲ.
- ಕೆ.ರಮೇಶ್, ಬೆಂಗಳೂರು.

Anonymous said...

NIMMA ELLA KELSGALU MECCHUVANTAHAVE ADRE KELVONDU KAMAN SENSE GLANNA SUVARNA NEWS REPORTERSGE HELABEKU.OBBA REPORTER ANDARE YAVA DESS CODE IRBEKU ANTHA SUVRNA NEWS NLLIRUV YAVOBBA REPOTRES GE GOTTILLA, YAVYAVUDOO DRESS GLANNA HAKIKONDU LIVE CHAT,
P2C GLANNA NEEDUTTTARE. OMME AVARIGE SARIYAGI DESS CODE, SOMEN SENCE BGFGE ELIDRE OLLEYDU ANSUTTE

Supreeth.K.S said...

ಹೌದು ನನಗೂ ಇದೇ ಸಂಶಯ ಬಂದಿತ್ತು. ರೂಪರ್ಟ್ ಮರ್ಡೋಕ್‌ನಂತಹ ಬಕಾಸುರ ಪತ್ರಿಕೋದ್ಯಮಿಯನ್ನೂ, ಬ್ಲಿಟ್ಜ್ ಸಂಪಾದಕರಾದ ಕರಂಜಿಯಾರ ಗಿಮಿಕ್ಕುಗಳನ್ನು ಪತ್ರಿಕೋದ್ಯಮದ ಪಾಠಗಳೆಂಬಂತೆ ಬರೆಯುತ್ತಾರೆ ವಿಶ್ವೇಶ್ವರ ಭಟ್ಟರು.
ಅವರು ಇಂಥಾ ಗಿಮಿಕ್ ಮಾಡಿದ್ದರೆ ಆಶ್ಚರ್ಯ ಪಡುವಂಥದ್ದೇನಿಲ್ಲ.

Anonymous said...

Dress sense andre yenu. yaava dress akikondu p2c kodbeku... svlpa thiliskodi sir!

Anonymous said...

tappugalu maadodu sahaja.... aadre thaavu annonymous listge seridhira. tamma namodayadondige helidre naavu nimhatra clarify maadkotivi.... got it! Mr/Miss annonymous..... so, nxt time try to mention ur name ....

Unknown said...

ರೀ ಮೇಡಂ ಇಲ್ಲಾ ಸರ,,,,,,,ಸುವರ್ಣದಾಗ ಯಾವ್ಯಾವವೊ ಅಂದ್ರೆ ನೋಡವ್ರು ಕಣ್ಣುಮುಚ್ಕೊತಾರೇನು.........ನೋಡ್ರಿ ಸ್ವಲ್ಪ ಡ್ರೆಸ್‌ ಕೋಡು ಹೇಂಗಿರ್‍ಬೇಕು ಅನ್ನೊದು ನೀವ ಹೇಳ್ರಲ್ಲಾ. ನಿಂತುಕೊಂಡಾಗ ಹೇಗಿರಬೇಕು... ಕೂತುಕೊಂಡಾಗ ಎನ್‌ ಹಾಕ್ಬೇಕು ಹೇಳಿದ್ರ ಚಲೋ ಆಗ್ತಿತ್ತು.ಪಾಪ,,,, ನಿಮಗಂತೂ ಬಹಳ ಕಷ್ಟ ಆಗ್ಯದಾ...

Anonymous said...

namaskara Avi & group.
Innu ide rithiya suddi kodta iri.
All the best.

----Sandeha--

ಸಂಭವಾಮಿ ಯುಗೇ ಯುಗೇ said...

ಲೇಖನ ಚೆನ್ನಾಗಿದೆ.ನಾನೂ ಒಂದು ಬ್ಲಾಗ್ ಆರಂಭಿಸಿದ್ದೇನೆ. ಸಂಭವಾಮಿ ಯುಗೇ ಎಂದು ಹೆಸರು. ಬಿಡುವಾದಾಗ ಓದಿ

Anonymous said...

Anyways,thanks for exposing the `(un)known truth' of Vijaya Karnataka which makes such suedo-letter-to-editor colums only to defend its stand on some important issues. Simha and people like Bhatta who are basically from sffron out-fits are making their earnest effort to bring in some changes in some changes (?) in people's mind. However, it is high time for you to bring such truths to the people at least those who can access the Blog and create awareness on those Bhajarangis. It is still surprise how Times people are entertaining Bhatta for making this kind of issues that would bring no revenue for the paper. At least that can be tolerable than this saffronisation of this "green Land". Govindraaj.

Anonymous said...

nivu yarntha modlu publish madi sir, ...adu bittu john , shenoy avru benami antha heltiralla swamy.

Anonymous said...

ಬೇರೆಯವರ ಬಗ್ಗೆ ಬರೆಯುವ ಮೊದಲು ನೀವ್ಯಾರೆಂದು ಹೇಳಿ.ನಂತರ ಇನ್ನೊಬ್ಬನನ್ನ ಟೀಕೆ ಮಾಡಿ.ಇಂದಿನ ಪತ್ರಿಕೊಂದ್ಯಮದ ಬಗ್ಗೆಯೂ ಇದೇ. ಎಲ್ಲಿದೆ MORAL ಹೇಳುವುದಕ್ಕೆ ಮಾತ್ರಾ ಅಲ್ಲ, ಅನುಸರಿಸುವುದನ್ನೂ ಕಲಿಯಿರಿ ಸ್ವಾಮಿ..

ಭಾರ್ಗವ

ಶರತ್ ಚಂದ್ರ said...

ಸಂಪಾದಕರೆ ಈ ರಾಮಚಂದ್ರ shenoy ಯಾರು ಅನ್ನೋದಕ್ಕೆ ಉತ್ತರ ಇಲ್ಲಿ ಸಿಕ್ಕಿದೆ ನೋಡಿ. ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನೋ ಹಾಗೆ ಬರೆದವರಿಗೆ ತಮ್ಮ ಬರಹದ ಮೇಲೂ ಏನು ಪ್ರೀತಿಯೋ...
=================================
ರವಿ ಬೆಳಗೆರೆ ನೀಡಿದ ಉತ್ತರ, ಅವರಿಗೆ ದೊರೆತ ಪ್ರತ್ಯುತ್ತರ
Oct 21st, 2008 by Pratap Simha

http://pratapsimha.com/others/%e0%b2%b0%e0%b2%b5%e0%b2%bf-%e0%b2%ac%e0%b3%86%e0%b2%b3%e0%b2%97%e0%b3%86%e0%b2%b0%e0%b3%86-%e0%b2%a8%e0%b3%80%e0%b2%a1%e0%b2%bf%e0%b2%a6-%e0%b2%89%e0%b2%a4%e0%b3%8d%e0%b2%a4%e0%b2%b0-%e0%b2%85/